Tag: ಆಹ್ವಾನ ಪತ್ರಿಕೆ

  • Ayodhya Ram Mandir: ಆಧಾರ್ ಕಡ್ಡಾಯ – ಒಂದು ಆಹ್ವಾನ ಪತ್ರಿಕೆಗೆ ಒಬ್ಬರಿಗೆ ಮಾತ್ರ ಪ್ರವೇಶ

    Ayodhya Ram Mandir: ಆಧಾರ್ ಕಡ್ಡಾಯ – ಒಂದು ಆಹ್ವಾನ ಪತ್ರಿಕೆಗೆ ಒಬ್ಬರಿಗೆ ಮಾತ್ರ ಪ್ರವೇಶ

    – ಅಯೋಧ್ಯೆ ಮಂದಿರ ಉದ್ಘಾಟನೆಗೆ ನಿಯಮ ಪಾಲಿಸಲು ಮನವಿ

    ಅಯೋಧ್ಯೆ: ಜನವರಿ 22ರಂದು ನಡೆಯುವ ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಆಹ್ವಾನ ಪತ್ರಿಕೆ (Inivitation Card) ಹಂಚಿಕೆ ಕಾರ್ಯ ಮುಂದುವರಿದಿದ್ದು, ಬಿಗಿ ಬಂದೋಬಸ್ತ್‌ನಲ್ಲಿ ಕಾರ್ಯಕ್ರಮ ನಡೆಯಲಿದೆ. ಹೀಗಾಗಿ ಕಾರ್ಯಕ್ರಮಕ್ಕೆ ಆಹ್ವಾನ ನೀಡಿರುವ ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಕಾರ್ಯಕ್ರಮಕ್ಕೆ ಆಗಮಿಸುವ ಸಾಧು ಸಂತರಿಗೆ, ಗಣ್ಯರಿಗೆ ವಿಶೇಷ ಮನವಿ ಮಾಡಿದ್ದಾರೆ. ಇದರಲ್ಲಿ ಅಯೋಧ್ಯೆಯಲ್ಲಿ (Ayodhya) ಕಾರ್ಯಕ್ರಮಕ್ಕೆ ಬರುವುದಾದರೆ, ಸೂಚನೆಗಳನ್ನು ಪಾಲಿಸುವಂತೆ ಟ್ರಸ್ಟ್ ಕೋರಿಕೊಂಡಿದೆ.

    Ram Mandir Invitation

    ಸಾಧು ಸಂತರ ಬಳಿ ವಿನಮ್ರ ನಿವೇದನೆ:

    • ನಿಮ್ಮ ಆಧಾರ್ ಕಾರ್ಡ್ (Aadhar Card) ನಿಮ್ಮ ಜೊತೆ ಇರಲಿ.
    • ಭದ್ರತಾ ಕಾರಣಗಳಿಗಾಗಿ ಮೊಬೈಲ್, ಪರ್ಸ್, ಬ್ಯಾಗ್, ಛತ್ರಿ, ಸಿಂಹಾಸನ, ವೈಯಕ್ತಿಕ ಪೂಜೆ ಸಾಮಗ್ರಿ ಅಥವಾ ಗುರಪಾದುಕೆಯನ್ನು ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಕೊಂಡೊಯ್ಯುವುದು ಸಾಧ್ಯವಿಲ್ಲ.
    • ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಬೆಳಗ್ಗೆ 11.00 ಗಂಟೆ ಮೊದಲು ಪ್ರವೇಶಿಸಿ.
    • ಕಾರ್ಯಕ್ರಮ 3 ಗಂಟೆಗೂ ಅಧಿಕ ಕಾಲ ನಡೆಯಬಹುದು. ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಹೋಗಲು ಮತ್ತು ವಾಪಸ್ ಬರಲು ಸುಮಾರು 1 ಕಿಲೋಮೀಟರ್ ನಡೆಯಬೇಕು.
    • ಇದು ವೈಯಕ್ತಿಕ ಆಮಂತ್ರಣ. ಒಂದು ಆಮಂತ್ರಣ ಪತ್ರಿಕೆ ಮೂಲಕ ಒಬ್ಬರಿಗೆ ಮಾತ್ರ ಪ್ರವೇಶ.
    • ನಿಮ್ಮ ಸಹಾಯಿಗಳು, ಶಿಷ್ಯಂದಿರು ನಿಮ್ಮ ಜೊತೆ ಬಂದರೂ ಅವರು ಕಾರ್ಯಕ್ರಮ ನಡೆಯುವ ಸ್ಥಳದಿಂದ ಹೊರಗೆ ಉಳಿಯಬೇಕು. ಶಿಷ್ಯಂದಿರು ಅಥವಾ ಸೇವಕರಿಗೆ ಪ್ರತ್ಯೇಕ ಆಮಂತ್ರಣ ಪತ್ರ ನೀಡುವುದಿಲ್ಲ.
    • ಯಾವುದೇ ಸಂತರು, ಸ್ವಾಮಿಗಳ ಜೊತೆ ಭದ್ರತಾ ಸಿಬ್ಬಂದಿ ಇದ್ದರೂ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಅವರಿಗೆ ಪ್ರವೇಶವಿಲ್ಲ. ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಪಾಲ್ಗೊಳ್ಳುವುದರಿಂದ ಈ ಸ್ಥಳ ಮೊದಲೇ ಸುರಕ್ಷಿತವಾಗಿರುತ್ತದೆ.
    • ಪ್ರಧಾನ ಮಂತ್ರಿ ಮಂದಿರದಿಂದ ವಾಪಸ್ ಹೋದ ಬಳಿಕವಷ್ಟೇ, ಮಂದಿರದಲ್ಲಿ ವಿರಾಜಮಾನವಾಗಿರುವ ಸಂತ ಮಹಾಪುರುಷ ರಾಮಲಲ್ಲಾನ ದರ್ಶನ ಪಡೆಯಬಹುದು.

  • ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯ ವೈಯಕ್ತಿಕ ಆಹ್ವಾನ ಪತ್ರದಲ್ಲೇನಿದೆ..?

    ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯ ವೈಯಕ್ತಿಕ ಆಹ್ವಾನ ಪತ್ರದಲ್ಲೇನಿದೆ..?

    ಅಯೋಧ್ಯೆ: ಕೋಟ್ಯಂತರ ರಾಮಭಕ್ತರ ಕನಸು ನನಸಾಗಲು ಇನ್ನು ಒಂದು ತಿಂಗಳಷ್ಟೇ ಬಾಕಿ. ಅಯೋಧ್ಯೆ ಶ್ರೀರಾಮ ಮಂದಿರ (Sri Ram Mandir) ಉದ್ಘಾಟನೆಯ ಆಮಂತ್ರಣ ಪತ್ರಿಕೆ (Personal Invitation) ಹಂಚಿಕೆ ಈಗಾಗಲೇ ಶುರುವಾಗಿದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ರಿಜಿಸ್ಟರ್ ಪೋಸ್ಟ್ ಮೂಲಕ ಸಾಧು ಸಂತರಿಗೆ ಹಾಗೂ ಗಣ್ಯರಿಗೆ ಆಮಂತ್ರಣ ಪತ್ರಿಕೆ ಕಳಿಸುತ್ತಿದೆ.

    ಇದರಲ್ಲಿ ಕೆಲವು ಆಮಂತ್ರಣ ಪತ್ರಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಲೆಟರ್ ಹೆಡ್‍ನಲ್ಲಿ ವೈಯಕ್ತಿಕವಾಗಿ ಆಹ್ವಾನಿತರ ಹೆಸರು ಉಲ್ಲೇಖಿಸಿ ಆಮಂತ್ರಣ ಪತ್ರಿಕೆ ಕಳಿಸಲಾಗುತ್ತಿದೆ. ಇದನ್ನೂ ಓದಿ: ಆಗಸ್ಟ್‌ 15 ರಷ್ಟೇ ಜನವರಿ 22 ಮಹತ್ವದ ದಿನ: ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ ಕಾರ್ಯದರ್ಶಿ

    ಆಮಂತ್ರಣ ಪತ್ರದಲ್ಲೇನಿದೆ..?

    ಶ್ರೀಚರಣಗಳಿಗೆ ವಂದನೆ.
    ಪ್ರಭು ಶ್ರೀರಾಮನ (Lord Rama) ಕೃಪೆಯಿಂದ ದೇವರ ಆರಾಧನೆ ಚೆನ್ನಾಗಿ ನಡೆದು, ಎಲ್ಲ ಆಶ್ರಮವಾಸಿಗಳು ಸಂತೋಷದಿಂದಿರಬಹುದು.

    ಸುದೀರ್ಘ ಹೋರಾಟದ ನಂತರ ಶ್ರೀರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿರುವುದು ನಿಮಗೆ ತಿಳಿದಿರಬಹುದು. ಇದನ್ನೂ ಓದಿ: Ayodhya Shri Ram Airport: ಜ.6 ರಿಂದ ಬೆಂಗ್ಳೂರು ಸೇರಿದಂತೆ ಪ್ರಮುಖ ನಗರಗಳಿಗೆ ವಿಮಾನ ಹಾರಾಟ ಶುರು

    ಪೌಷ, ಶುಕ್ಲ ದ್ವಾದಶಿ ವಿಕ್ರಮ ಸಂವತ್ಸರ 2080, ಸೋಮವಾರ, 22 ಜನವರಿ 2024, ಗರ್ಭಗುಡಿಯಲ್ಲಿ ರಾಮ ಲಲ್ಲಾನ ನೂತನ ವಿಗ್ರಹದ ಪ್ರಾಣ ಪ್ರತಿಷ್ಠೆ ನಡೆಯಲಿದೆ. ಈ ಪುಣ್ಯ ಸಂದರ್ಭದಲ್ಲಿ ನೀವು ಅಯೋಧ್ಯೆಯಲ್ಲಿ ಉಪಸ್ಥಿತರಿದ್ದು ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಸಾಕ್ಷಿಯಾಗಬೇಕು ಹಾಗೂ ಈ ದಿನದ ಘನತೆಯನ್ನು ಹೆಚ್ಚಿಸಬೇಕು ಎನ್ನುವುದು ನಮ್ಮ ಅಪೇಕ್ಷೆ.

    ನೀವು ಜನವರಿ 21ರೊಳಗೆ ಅಯೋಧ್ಯೆ ತಲುಪಲು ವ್ಯವಸ್ಥೆ ಮಾಡಿಕೊಳ್ಳಿ. ಎಷ್ಟು ಬೇಗ ನೀವು ಅಯೋಧ್ಯೆ ತಲುಪುತ್ತೀರೋ, ಅದರಿಂದ ನಿಮಗೆ ಅನುಕೂಲವಾಗಲಿದೆ. ಬರುವುದು ತಡವಾದರೆ ಸಮಸ್ಯೆಗಳನ್ನು ಎದುರಿಸಬೇಕಾದೀತು. 23 ಜನವರಿ 2024ರ ನಂತರವೇ ಅಯೋಧ್ಯೆಯಿಂದ ವಾಪಸ್ ಹೊರಡಲು ಪ್ಲ್ಯಾನ್ ಮಾಡಿ.

    ಈ ಶುಭ ಸಂದರ್ಭದಲ್ಲಿ ಅಯೋಧ್ಯಾ ಧಾಮದಲ್ಲಿ ನೀವು ಉಪಸ್ಥಿತರಿರಬೇಕು ಎಂದು ಮತ್ತೊಮ್ಮೆ ನಿಮ್ಮಲ್ಲಿ ವಿನಂತಿ.

    ನಿಮ್ಮ ಶ್ರೀಚರಣಗಳಿಗೆ ಪ್ರಣಾಮ.
    ಚಂಪತ್ ರಾಯ್,
    ಮುಖ್ಯ ಕಾರ್ಯದರ್ಶಿ, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ

  • ರಾಮ ಮಂದಿರ ಲೋಕಾರ್ಪಣೆ – ಗಣ್ಯರ ಜೊತೆ ಸಾಮಾನ್ಯ ಜನರಿಗೆ ಆಹ್ವಾನ – ಆಹ್ವಾನ ಪತ್ರಿಕೆಯಲ್ಲಿ ಏನಿದೆ?

    ರಾಮ ಮಂದಿರ ಲೋಕಾರ್ಪಣೆ – ಗಣ್ಯರ ಜೊತೆ ಸಾಮಾನ್ಯ ಜನರಿಗೆ ಆಹ್ವಾನ – ಆಹ್ವಾನ ಪತ್ರಿಕೆಯಲ್ಲಿ ಏನಿದೆ?

    ನವದೆಹಲಿ: ಜನವರಿ 22 ರಂದು ಆಯೋಧ್ಯೆ ರಾಮಮಂದಿರ (Ram Mandir) ಲೋಕಾರ್ಪಣೆ, ಶ್ರೀರಾಮ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಹಿನ್ನಲೆ ಗಣ್ಯರಿಗೆ ಆಹ್ವಾನ ಪತ್ರಿಕೆ ನೀಡಲಾಗುತ್ತಿದ್ದು ಇದರ ಬೆನ್ನಲ್ಲೇ ಸಾಮಾನ್ಯ ಜನರಿಗೂ ಆಹ್ವಾನ ಪತ್ರಿಕೆಯನ್ನು (Invitations) ಟ್ರಸ್ಟ್‌ ವತಿಯಿಂದ ಕಳುಹಿಸಿಕೊಡಲು ಆರಂಭಿಸಿದೆ.

    ಆಹ್ವಾನ ಪತ್ರಿಕೆಯಲ್ಲಿ ಏನಿದೆ?
    ಆಹ್ವಾನಪತ್ರಿಕೆಯ ಫೋಟೊ ಈಗ ಲಭ್ಯವಾಗಿದ್ದು ಇದರಲ್ಲಿ ಸುದೀರ್ಘ ಹೋರಾಟದ ನಂತರ ಶ್ರೀರಾಮನ ಜನ್ಮಸ್ಥಳದಲ್ಲಿ ಮಂದಿರ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂಬುದು ನಿಮಗೆ ತಿಳಿದಿದೆ. 22 ಜನವರಿ 2024, ರಾಮಲಲ್ಲನ ಹೊಸ ವಿಗ್ರಹವನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗುವುದು. ಮಹತ್ವದ ಘಟ್ಟಕ್ಕೆ ಸಾಕ್ಷಿಯಾಗಲು ಮತ್ತು ಮಹಾನ್ ಐತಿಹಾಸಿಕ ದಿನದ ಘನತೆಯನ್ನು ಹೆಚ್ಚಿಸಲು ನೀವು ಈ ಶುಭ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ (Ayodhya) ಉಪಸ್ಥಿತರಾಗಿರಬೇಕು ಎಂಬುದು ನಮ್ಮ ಬಲವಾದ ಬಯಕೆಯಾಗಿದೆ. ಇದಕ್ಕಾಗಿ ಜನವರಿ 21ರ ಮೊದಲು ಅಯೋಧ್ಯೆಗೆ ಭೇಟಿ ನೀಡಲು ನಿಮ್ಮನ್ನು ವಿನಂತಿಸುತ್ತಿದ್ದೇವೆ. ನೀವು ಅಯೋಧ್ಯೆಗೆ ಎಷ್ಟು ಬೇಗ ಬರುತ್ತೀರೋ ಅಷ್ಟು ಅನುಕೂಲವಾಗುತ್ತದೆ. ನೀವು ತಡವಾಗಿ ಬಂದರೆ ನೀವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಹೀಗಾಗಿ ಸಾಧ್ಯವಾದಷ್ಟು ಮುನ್ನ ಅಯೋಧ್ಯೆಗೆ ಬರಬೇಕು ಎಂದು ಮನವಿ ಮಾಡಲಾಗಿದೆ.   ಇದನ್ನೂ ಓದಿ: 2000 ರೂ. ಮುಖಬೆಲೆಯ 9760 ಕೋಟಿ ರೂ. ವಿನಿಮಯವಾಗಿಲ್ಲ: ಆರ್‌ಬಿಐ

    ಆಮಂತ್ರಣ ಪತ್ರದ ಬಗ್ಗೆ ಮಾಹಿತಿ ನೀಡಿದ ಟ್ರಸ್ಟ್‌ನ ಅಧಿಕಾರಿಯೊಬ್ಬರು, ಈ ಅದ್ಧೂರಿ ಕಾರ್ಯಕ್ರಮಕ್ಕೆ ಸುಮಾರು 6 ಸಾವಿರ ಜನರಿಗೆ ಆಹ್ವಾನ ಕಳುಹಿಸಲಾಗುವುದು ಎಂದು ಹೇಳಿದರು. ಆರಂಭದ ಹಂತದಲ್ಲಿ ಆಮಂತ್ರಣ ಪತ್ರಿಕೆಯನ್ನು ಅರ್ಚಕರು, ದಾನಿಗಳು ಮತ್ತು ಹಲವಾರು ರಾಜಕಾರಣಿಗಳು ಸೇರಿದಂತೆ 6,000 ಅತಿಥಿಗಳಿಗೆ ಕಳುಹಿಸಲಾಗುತ್ತಿದೆ.

    4 ಹಂತದಲ್ಲಿ ಕಾರ್ಯಕ್ರಮ
    ನಾಲ್ಕು ಹಂತದಲ್ಲಿ ಕಾರ್ಯಕ್ರಮ ನಡೆಯಲಿದೆ ಎನ್ನುವ ಮಾಹಿತಿ ಲಭ್ಯವಾಗಿದ್ದು ಮೊದಲ ಹಂತವು ನವೆಂಬರ್ 19 ರಿಂದ ಈಗಾಗಲೇ ಪ್ರಾರಂಭವಾಗಿದ್ದು ಇದು ಡಿಸೆಂಬರ್ 20 ರವರೆಗೆ ಮುಂದುವರಿಯುತ್ತದೆ. ಇದರಲ್ಲಿ ಸಂಪೂರ್ಣ ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸಲಾಗುವುದು ಜತೆಗೆ ಜಿಲ್ಲಾ ಮತ್ತು ಬ್ಲಾಕ್ ಮಟ್ಟದಲ್ಲಿ 10-10 ಜನರ ತಂಡ ರಚಿಸಿ, ಜನರ ಸಂಪರ್ಕಕ್ಕೆ ಕೆಲಸ ಮಾಡಲಿದೆ.

    ಎರಡನೇ ಹಂತವು ಜನವರಿ 1 ರಿಂದ ಪ್ರಾರಂಭವಾಗಲಿದ್ದು, ಇದರಲ್ಲಿ 10 ಕೋಟಿ ಕುಟುಂಬಗಳಿಗೆ ಪೂಜಿಸಿದ ಅಕ್ಷತೆ ಮತ್ತು ರಾಮ ವಿಗ್ರಹಗಳ ಕರಪತ್ರಗಳು ಮತ್ತು ಚಿತ್ರಗಳನ್ನು ವಿತರಿಸಲಾಗುತ್ತದೆ. ಅಲ್ಲದೆ ರಾಮನ ಜೀವನದ ಅದ್ಧೂರಿ ಆಚರಣೆಯನ್ನು ಆಚರಿಸಲು ಮನೆ-ಮನೆಗೆ ತೆರಳಿ ಜನರಲ್ಲಿ ಮನವಿ ಮಾಡಲಾಗುತ್ತದೆ.

    ಮೂರನೇ ಹಂತವು ಜನವರಿ 22 ರಿಂದ ಪ್ರಾರಂಭವಾಗಲಿದ್ದು, ಇದರಲ್ಲಿ ಪ್ರಧಾನಿ ಮೋದಿ‌ (PM Narendra Modi) ಅವರು ಭವ್ಯವಾದ ರಾಮ ಮಂದಿರವನ್ನು ಉದ್ಘಾಟಿಸಲಿದ್ದಾರೆ. ಈ ಅವಧಿಯಲ್ಲಿ ದೇಶಾದ್ಯಂತ ಕಾರ್ಯಕ್ರಮಗಳು ನಡೆಯಲಿವೆ.

    ನಾಲ್ಕನೇ ಮತ್ತು ಕೊನೆಯ ಹಂತದಲ್ಲಿ ಭಗವಾನ್ ರಾಮನ ದರ್ಶನಕ್ಕಾಗಿ ದೇಶಾದ್ಯಂತ ಅಭಿಯಾನವನ್ನು ಪ್ರಾರಂಭಿಸಲಾಗುವುದು. ಇದರಿಂದಾಗಿ ಹೆಚ್ಚು ಹೆಚ್ಚು ಜನರು ರಾಮನ ದರ್ಶನವನ್ನು ಪಡೆಯಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.

  • ಆಹ್ವಾನ ಪತ್ರಿಕೆಯಲ್ಲಿ ಸಿದ್ದರಾಮಯ್ಯ ಹೆಸರು ಮಾಯ – ಸಚಿವರಿದ್ದ ವೇದಿಕೆ ಏರಿ ಅಭಿಮಾನಿಗಳಿಂದ ಗಲಾಟೆ

    ಆಹ್ವಾನ ಪತ್ರಿಕೆಯಲ್ಲಿ ಸಿದ್ದರಾಮಯ್ಯ ಹೆಸರು ಮಾಯ – ಸಚಿವರಿದ್ದ ವೇದಿಕೆ ಏರಿ ಅಭಿಮಾನಿಗಳಿಂದ ಗಲಾಟೆ

    ರಾಯಚೂರು: ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ (Invitation) ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರ ಹೆಸರು ಕೈಬಿಟ್ಟಿದ್ದಾರೆಂದು ಕಾರ್ಯಕ್ರಮದ ವೇದಿಕೆ ಏರಿ ಬಿಜೆಪಿ (BJP) ಸಚಿವರ ಮುಂದೆಯೇ ಸಿದ್ದು ಅಭಿಮಾನಿಗಳು ಗಲಾಟೆ ನಡೆಸಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

    ಜಿಲ್ಲಾಡಳಿತದ ವತಿಯಿಂದ ನಗರದ ಗಂಜ್ ವೃತ್ತದ ಬಳಿ ಕನಕದಾಸ ಪುತ್ಥಳಿ ಅನಾವರಣ ವೇದಿಕೆ ಕಾರ್ಯಕ್ರಮದಲ್ಲಿ ಸಚಿವರಾದ ಎಂಟಿಬಿ ನಾಗರಾಜ್ (MTB Nagaraj), ಬೈರತಿ ಬಸವರಾಜ್ (BA Basavaraj) ಸೇರಿ ಹಲವು ಗಣ್ಯರ ಮುಂದೆ ಗಲಾಟೆ ನಡೆದಿದೆ. ಪುತ್ಥಳಿ ಅನಾವರಣಕ್ಕೆ ಸಿದ್ದರಾಮಯ್ಯ ಅವರ ಕೊಡುಗೆಯಿದೆ. ಅದನ್ನ ಸ್ಮರಿಸದೇ ಕೇವಲ ಬಿಜೆಪಿ ಸರ್ಕಾರದ (BJP Government) ಅನುದಾನ ಎನ್ನಲಾಗುತ್ತಿದೆ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬಿಡುಗಡೆಯ ದಿನವೇ 2000 ಪ್ರದರ್ಶನ ಕಂಡ ಗಂಧದ ಗುಡಿ

    ಸಿದ್ದರಾಮಯ್ಯ ಅಭಿಮಾನಿಗಳು ಹಾಗೂ ಹಾಲುಮತ ಸಮಾಜದವರಿಂದ ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ (Shivaraj Patil) ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಕೂಡಲೇ ಎಚ್ಚೆತ್ತ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಇದನ್ನೂ ಓದಿ: ನಾನು ಹುಷಾರಾಗಿದ್ದೀನಿ, ಅಪ್ಪು ಹಳೆಯ ಪೋಸ್ಟ್ ವೈರಲ್

    ಸಿದ್ದರಾಮಯ್ಯ ಹೆಸರು ಕೈಬಿಟ್ಟಿದ್ದಕ್ಕೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಹ ಭಾಷಣದ ವೇಳೆ ಅಸಮಾಧಾನ ಹೊರಹಾಕಿದ್ದಾರೆ. ವಿರೋಧ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಹೆಸರನ್ನ ಹಾಕಬೇಕಿತ್ತು. ಅದ್ಯಾವ ಪ್ರೋಟೋಕಾಲ್ ಪಾಲಿಸಿದ್ದಾರೋ ಗೊತ್ತಿಲ್ಲ. ವಿಶೇಷ ಆಹ್ವಾನಿತರಾಗಿ ಹೆಸರು ಹಾಕಬಹುದಿತ್ತು. ಏಕೆಂದರೆ ಅವರು ಸಮಾಜಕ್ಕೆ ಅಪಾರ ಕೊಡುಗೆ ಕೊಟ್ಟಿದ್ದಾರೆ ಎಂದು ಶ್ಲಾಘಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮದುವೆಗೆ ಬರಬೇಡಿ, ಆಶೀರ್ವಾದ ಮರಿಬೇಡಿ – ಕರೆಯೋಲೆ ಹಂಚಿದ ವಧು-ವರ

    ಮದುವೆಗೆ ಬರಬೇಡಿ, ಆಶೀರ್ವಾದ ಮರಿಬೇಡಿ – ಕರೆಯೋಲೆ ಹಂಚಿದ ವಧು-ವರ

    ಚಾಮರಾಜನಗರ: ಮದುವೆಗೆ ಆಗಮಿಸದೇ ತಾವು ಇರುವ ಸ್ಥಳದಿಂದಲೇ ಆಶೀರ್ವದಿಸಿ ಹೀಗೊಂದು ವಿಶಿಷ್ಟವಾದ ಕರೆಯೋಲೆಯನ್ನು ವಧು ವರನ ಕುಟುಂಬದವರು ತಮ್ಮ ಬಂಧು ಬಳಗದವರಿಗೆ, ನೆಂಟರಿಷ್ಟರಿಗೆ, ಗ್ರಾಮಸ್ಥರಿಗೆ ಕಳುಹಿಸಿದ್ದಾರೆ.

    ಹೌದು ಕೊರೊನಾ ಹರಡುವ ಹಾಗೂ ಸರ್ಕಾರದ ಮಾರ್ಗ ಸೂಚಿಗಳನ್ನು ಪಾಲಿಸುವ ಹಿನ್ನಲೆಯಲ್ಲಿ ಈಗಾಗಲೇ ಮದುವೆಗೆ ಆಮಂತ್ರಿತರಾದವರು ಬರುವುದು ಬೇಡ, ನೀವು ಇರುವ ಸ್ಥಳದಿಂದಲೇ ನೂತನ ವಧುವರರನ್ನು ಹಾರೈಸಿ ಎಂದು ಹೊಸ ಆಮಂತ್ರಣ ಪತ್ರ ಕಳುಹಿದ್ದಾರೆ. ಚಾಮರಾಜನಗರ ತಾಲೂಕಿನ ವಿ.ಸಿ.ಹೊಸೂರು ಗ್ರಾಮದ ಸುಷ್ಮಾ ಹಾಗೂ ಇದೇ ತಾಲೂಕಿನ ಚನ್ನಪ್ಪನಪುರದ ಶ್ರೇಯಸ್ ಅವರ ಮದುವೆ ಜನವರಿ 22 ಹಾಗೂ 23 ರಂದು ನಿಗದಿಯಾಗಿದೆ. ಇದನ್ನೂ ಓದಿ: ಬ್ಯಾಟ್ ಔಟ್ ಆಫ್ ಹೆಲ್ ಆಲ್ಬಂ’ನ ಯುಎಸ್ ರಾಕ್ ಸ್ಟಾರ್ ಮೀಟ್ ಲೋಫ್ ಇನ್ನಿಲ್ಲ

    invitation

    ಈ ಮದುವೆಗೆ ಆಗಮಿಸುವಂತೆ ನೆಂಟರಿಷ್ಟರಿಗೆ, ಬಂಧು, ಬಳಗಕ್ಕೆ, ಗ್ರಾಮಸ್ಥರಿಗೆ ಎರಡು ಕಡೆಯವರು ಮೂರು ಸಾವಿರಕ್ಕೂ ಹೆಚ್ಚು ಲಗ್ನಪತ್ರಿಕೆ ಹಂಚಿದ್ದರು. ಆದರೆ ಇತ್ತೀಚೆಗೆ ಕೊರೊನಾ ವ್ಯಾಪಕವಾಗಿ ಹರಡುತ್ತಿರುವುದರಿಂದ ಎರಡೂ ಕುಟುಂಬಗಳು ಫೇಸ್ ಬುಕ್, ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಈಗ ಮತ್ತೊಂದು ಆಮಂತ್ರಣ ಪತ್ರ ಕಳುಹಿಸಿ ಮದುವೆಗೆ ಆಗಮಿಸದೆ ತಾವು ಇರುವ ಸ್ಥಳದಿಂದಲೇ ವಧುವರರನ್ನು ಆಶೀರ್ವದಿಸಿ ಎಂದು ಮನವಿ ಮಾಡಿವೆ. ಫೇಸ್ ಬುಕ್, ವಾಟ್ಸ್‌ಪ್‌ ಬಳಸದ ನೆಂಟರಿಷ್ಟರು ಹಾಗೂ ಬಂಧು, ಬಳಗದವರಿಗೆ ನೇರವಾಗಿ ಫೋನ್‍ನಲ್ಲಿ ಕರೆ ಮಾಡಿ ಮನವಿ ಮಾಡುತ್ತಿದ್ದಾರೆ. ಇದನ್ನೂ ಓದಿ: ಸುಪ್ರೀಂ ಕೋರ್ಟ್ ಎದುರೇ ಬೆಂಕಿ ಹಚ್ಚಿಕೊಂಡು ವ್ಯಕ್ತಿ ಆತ್ಮಹತ್ಯೆಗೆ ಯತ್ನ

  • ಮದುವೆ ಆಹ್ವಾನ ಪತ್ರ ನೀಡಲು ಬಂದ ಮದುಮಗ ಸೇರಿದ್ದು ಮಸಣಕ್ಕೆ

    ಮದುವೆ ಆಹ್ವಾನ ಪತ್ರ ನೀಡಲು ಬಂದ ಮದುಮಗ ಸೇರಿದ್ದು ಮಸಣಕ್ಕೆ

    ಮಡಿಕೇರಿ: ಮೈಸೂರಿನಿಂದ ತನ್ನ ಸಂಬಂಧಿಕರ ಮನೆಗೆ ಮದುವೆ ಆಹ್ವಾನ ಪತ್ರ ನೀಡಲು ಬಂದ ಮದುಮಗ ಹಸೆಮಣೆ ಏರುವ ಮುನ್ನವೇ ಮಸಣ ಸೇರಿದ ಘಟನೆ ಮಡಿಕೇರಿಯ ಹೊರವಲಯದಲ್ಲಿ ನಡೆದಿದೆ.

    Madikeri accident

    ಸೋಮವಾರ ರಾತ್ರಿ ಬೈಕ್ ಮತ್ತು ಟಿಪ್ಪರ್ ನಡುವೆ ಅಪಘಾತ ಸಂಭವಿಸಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಮೃತರನ್ನು ಮೈಸೂರಿನ ವಿಶ್ವನಾಥ್ (32), ಅತ್ತಿಗೋಡಿನ ದಿನೇಶ್(23) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಪರೀಕ್ಷೆಗೆ ತೆರಳೋ ಮುನ್ನ ಮೊಟ್ಟೆ ಬೇಯಿಸಲು ಹೋಗಿ ಅಗ್ನಿ ಅವಘಡ- ವಿದ್ಯಾರ್ಥಿನಿ ಸಾವು

    Madikeri accident

    ಇದೇ ಸೆಪ್ಟೆಂಬರ್ 19 ರಂದು ವಿವಾಹ ಇದ್ದಿದ್ದರಿಂದ ಆಹ್ವಾನ ಪತ್ರಿಕೆ ನೀಡಲು ಮಡಿಕೇರಿಗೆ ವಿಶ್ವನಾಥ್ ಹಾಗೂ ದಿನೇಶ್ ಇಬ್ಬರು ಬೈಕ್ ನಲ್ಲಿ ಬಂದಿದ್ದಾರೆ. ಇತ್ತೀಚೆಗೆ ಎಲ್‍ಎಲ್‍ಬಿ ಮುಗಿಸಿ ಪ್ರಾಕ್ಟೀಸ್ ಆರಂಭಿಸಿದ್ದ ವಿಶ್ವನಾಥ್, ಪದವಿ ಓದುತ್ತಿದ್ದ ದಿನೇಶ್ ಇಬ್ಬರು ಅಪಘಾತದಲ್ಲಿ ಮೃತಪಟ್ಟಿದ್ದು, ಪೋಷಕರ ಹಾಗೂ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ. ಇದೀಗ ಮಡಿಕೇರಿ ನಗರ ಠಾಣೆಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಕೋವಿಡ್ ನಿಯಮ ಮೀರಿ ವೈರಸ್ ಹರಡಿದ ವ್ಯಕ್ತಿ – 5 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

  • ಮಗಳ ಮದುವೆಗೆ ಮೋದಿಗೆ ಆಹ್ವಾನ ನೀಡಿದ ಶ್ರೀರಾಮುಲು

    ಮಗಳ ಮದುವೆಗೆ ಮೋದಿಗೆ ಆಹ್ವಾನ ನೀಡಿದ ಶ್ರೀರಾಮುಲು

    ಬಳ್ಳಾರಿ: ಆರೋಗ್ಯ ಸಚಿವ ಶ್ರೀರಾಮುಲು ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ತಮ್ಮ ಹಿರಿಯ ಮಗಳ ಮದುವೆಗೆ ಆಹ್ವಾನ ನೀಡಿದ್ದಾರೆ.

    ಕಳೆದ ಎರಡು ದಿನಗಳಿಂದ ದೆಹಲಿಯ ಪ್ರವಾಸದಲ್ಲಿ ಇರುವ ಶ್ರೀರಾಮುಲು ಅವರು ಭಾನುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಪುತ್ರಿಯ ಲಗ್ನ ಪತ್ರಿಕೆ ನೀಡಿದ್ದರು. ಇಂದು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ಅವರು, ಪುತ್ರಿಯ ಮದುವೆಗೆ ಬಂದು ನವ ದಂಪತಿಯನ್ನು ಆಶೀರ್ವದಿಸುವಂತೆ ಕೇಳಿಕೊಂಡರು. ನಂತರ ಬಿಜೆಪಿಯ ನಾಯಕರು, ಕೇಂದ್ರ ಸಚಿವರಿಗೂ ಮದುವೆಯ ಕರೆಯೋಲೆಯನ್ನು ನೀಡಿ, ಮದುವೆಗೆ ಬರುವಂತೆ ಕೋರಿಕೊಂಡರು.

    ಶ್ರೀರಾಮಲು ಅವರ ಪುತ್ರಿ ರಕ್ಷಿತಾ ಹಾಗೂ ಹೈದರಾಬಾದ್ ಮೂಲದ ಉದ್ಯಮಿ ಪುತ್ರ ಲಲಿತ್ ಕುಮಾರ್ ಅವರ ವಿವಾಹ ಕಾರ್ಯಕ್ರಮವು ಮುಂದಿನ ತಿಂಗಳು ಮಾರ್ಚ್ 4 ಮತ್ತು 5ರಂದು ಬೆಂಗಳೂರಿನ ಪ್ಯಾಲೇಸ್ ಮೈದಾನದಲ್ಲಿ ನಡೆಯಲಿದೆ. ಹೀಗಾಗಿ ಶ್ರೀರಾಮುಲು ಅವರು ಮಗಳ ಮದುವೆ ತಯಾರಿಯಲ್ಲಿ ತೊಡಗಿದ್ದಾರೆ.

  • ಧ್ರುವ ಸರ್ಜಾ ಆಹ್ವಾನ ಪತ್ರಿಕೆಯಲ್ಲಿ ಬಾಸ್ ಇದ್ದಾರೆ, ಕೆಳಗಡೆ ಇಡುವಂತಿಲ್ಲ – ಪ್ರಥಮ್

    ಧ್ರುವ ಸರ್ಜಾ ಆಹ್ವಾನ ಪತ್ರಿಕೆಯಲ್ಲಿ ಬಾಸ್ ಇದ್ದಾರೆ, ಕೆಳಗಡೆ ಇಡುವಂತಿಲ್ಲ – ಪ್ರಥಮ್

    ಬೆಂಗಳೂರು: ಧ್ರುವ ಸರ್ಜಾ, ಪ್ರೇರಣ ಅವರ ಮದುವೆಯ ಆಹ್ವಾನ ಪತ್ರಿಕೆ ಪಠ್ಯ ಪುಸ್ತಕದಂತೆ ಇದೆ ಎಂದು ಪ್ರಥಮ್ ಬಣ್ಣಿಸಿದ್ದಾರೆ.

    ನಟ ಧ್ರುವ ಸರ್ಜಾ ಮದುವೆ ಇದೇ ತಿಂಗಳು ನಡೆಯಲಿದೆ. ಹೀಗಾಗಿ ಸದ್ಯಕ್ಕೆ ಕುಟುಂಬದವರು ಮದುವೆ ತಯಾರಿಯಲ್ಲಿ ಬ್ಯುಸಿಯಿದ್ದಾರೆ. ಇನ್ನೂ ಮದುವೆ ಹುಡುಗ ಧ್ರುವ ತಮ್ಮ ಆತ್ಮೀಯರಿಗೆ ಆಮಂತ್ರಣ ಪತ್ರಿಕೆಯನ್ನು ಕೊಡುತ್ತಿದ್ದಾರೆ. ಬುಧವಾರಷ್ಟೇ ಧ್ರುವ ನಟ ಪ್ರಥಮ್ ಮನೆಗೆ ಹೋಗಿ ವಿವಾಹಕ್ಕೆ ಆಹ್ವಾನಿಸಿದ್ದಾರೆ. ಆದರೆ ಪ್ರಥಮ್ ಆಮಂತ್ರಣ ಪತ್ರಿಕೆ ನೋಡಿ ಟೆಕ್ಸ್ಟ್ ಬುಕ್ ರೀತಿ ಇದೆ ಎಂದು ಕಮೆಂಟ್ ಮಾಡಿದ್ದಾರೆ.

    ಪ್ರಥಮ್ ಧ್ರುವ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ. ಜೊತೆಗೆ ಧ್ರುವ ಆಮಂತ್ರಣ ಪತ್ರಿಕೆ ಕೊಡುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಆ ಪೋಸ್ಟ್ ಗೆ  “ಪ್ರೀತಿಯ ಧೃವ ಸರ್ಜಾರವರು ಇರೋದೇ ಹೀಗೇ. ಆಪ್ತರಿಗೆ ಹೆಗಲು ಕೊಡುತ್ತಾರೆ. ಸ್ನೇಹಿತರು ಅಂತ ಬಂದಾಗ ಇನ್ನು ಒಂದು ಹೆಜ್ಜೆ ಬಗ್ಗಿ ಜೊತೆ ನಿಲ್ಲುತ್ತಾರೆ. ಮದುವೆ ಆಮಂತ್ರಣ ಪತ್ರಿಕೆ ಕೊಡುವುದಕ್ಕೆ ಸಂಜೆ ನನ್ನ ಮನೆಗೆ ಬಂದಿದ್ದರು” ಎಂದು ಬರೆದಿದ್ದಾರೆ.

    ಪ್ರಥಮ್ ಪೋಸ್ಟ್ ಲ್ಲಿ ಏನಿದೆ?
    ಅಯ್ಯೋ ಬಿಡಿ.. ಅವರ ಗಡ್ಡಕ್ಕಿಂತ ದೊಡ್ಡದಾಗಿದೆ ಈಯಪ್ಪ ಮಾಡಿಸಿರುವ ಆನಂತ್ರಣ ಪತ್ರಿಕೆ. ಸೆಕೆಂಡ್ ಪಿಯುಸಿ ಕೆಮಿಸ್ಟ್ರಿ  ಟೆಕ್ಸ್ಟ್ ಬುಕ್‌ಗಿಂತ ದೊಡ್ಡದು. ಎಂಜಿನಿಯರಿಂಗ್ ಟೆಕ್ಸ್ಟ್ ಬುಕ್‌ಗಿಂತ ವಿಶಾಲವಾದದ್ದು, ಇವರ ಆಮಂತ್ರಣ ಅಕ್ಷತೆ, ಅರಿಶಿಣ, ಕುಂಕುಮ, ಬಳೆಗಳು ಇನ್ನು ಏನೇನಿಲ್ಲ ಕೇಳಿ ಅದ್ರಲ್ಲಿ. ಇವರು ಮಾಡಿಸಿರುವ ಆಮಂತ್ರಣ ಪತ್ರಿಕೆ ಮದುವೆ ಆದಮೇಲೂ ಸಹಿತ ನಮ್ಮ ಮನೆ ದೇವರ ಕೋಣೆಯಿಂದ ತೆಗೆಯುವ ಹಾಗಿಲ್ಲ. ನೆಲಕ್ಕಂತೂ ಸೋಗಿಸುವ ಹಾಗೇ ಇಲ್ಲ. ಯಾಕೆಂದರೆ ಮದುವೆ ಪತ್ರಿಕೆ ಸುತ್ತಲು ಇವರ ಬಾಸ್ ಆಂಜನೇಯ ಇದ್ದಾರೆ.

     

    View this post on Instagram

     

    ಪ್ರೀತಿಯ ಧೃವಸರ್ಜಾರವರು ಇರೋದೇ ಹೀಗೇ! ಆಪ್ತರಿಗೆ ಹೆಗಲು ಕೊಡ್ತಾರೆ.ಸ್ನೇಹಿತರು ಅಂತ ಬಂದಾಗ ಇನ್ನು ಒಂದು ಹೆಜ್ಜೆ ಬಗ್ಗಿ ಜೊತೆ ನಿಲ್ತಾರೆ!!!❤ ಸಂಜೆ ನನ್ ಮನೆಗೆ ಬಂದಿದ್ರು…! ಮದುವೆ invitation card ಕೊಡೋಕೆ… ( ಅಯ್ಯೋ ಬಿಡಿ…. ಅವ್ರ ಗಡ್ಡಕ್ಕಿಂತ ದೊಡ್ಡದಾಗಿದೆ ಈಯಪ್ಪ ಮಾಡ್ಸಿರೋ invitation card ????) 2nd PUC chemistry text book ಗಿಂತ ದೊಡ್ಡದು… Engineering Text book ಗಿಂತ ವಿಶಾಲವಾದದ್ದು ಇವ್ರ invitation card… ಅಕ್ಷತೆ, ಅರಿಶಿನ, ಕುಂಕುಮ,ಬಳೆಗಳು …ಇನ್ನು ಏನೇನಿಲ್ಲ ಕೇಳಿ ಅದ್ರಲ್ಲಿ ❤) ಇವ್ರ ಮಾಡ್ಸಿರೋ invitation card ನ ಮದುವೆ ಆದ್ಮೇಲೂ ಸಹಿತ ನಮ್ ಮನೆ ದೇವರ ಕೋಣೆಯಿಂದ ತಗೆಯೋ ಹಾಗಿಲ್ಲ…! ನೆಲಕ್ಕಂತೂ ಸೋಗಿಸುವ ಹಾಗೇ ಇಲ್ಲ….bcoz invitation card fully surrounded by ಇವ್ರ ಬಾಸ್ ಆಂಜನೇಯ! ಖುಷಿ ವಿಷಯ ಏನಂದ್ರೆ ಇವ್ರ ಲಕ್ಕಿ ಕಾರ್ ಲೇ ಬಂದಿದ್ರು…!ತುಂಬಾ ಹೊತ್ತು ಇದ್ರು…! ಈಗ್ಲೇ ಈ ಪುಣ್ಯಾತ್ಮರು ಕೈಗೆ ಸಿಗಲ್ಲ…! ಮದುವೆ ಆದ್ಮೇಲಂತೂ phone ಗೂ ಸಿಗಲ್ಲ…! ಪೊಗರು super hit ಆದ್ಮೇಲಂತೂ ಇಲ್ವೇಇಲ್ಲ…(ನಾವ್ ಬಿಡಬೇಕಲ್ಲಾ ????????) ಆದಷ್ಟು ಬೇಗ ಅಂಜನೇಯ ಸ್ವಾಮಿಗೆ ಇನ್ನೊಬ್ಬ ಭಕ್ತರನ್ನ ಇವ್ರ ಮನೆಯಿಂದನೇ ಕೊಡ್ಲಿ…. I mean junior @dhruva_sarjaa ರವರು ಬರ್ಲಿ… ಅಂತ ಆಶಿಸಿ ಮದುವೆ ಆದ್ಮೇಲೆ ವರ್ಷಕ್ಕೆ ಎರಡು ಸಿನಿಮಾ bro….ಗೊತ್ತಲ್ವಾ ಅಂದ್ರು…! ಅಣ್ಣಾ ಮದುವೆ ಆದ್ಮೇಲೆ ವರ್ಷಕ್ಕೆ ಒಂದು ಮಕ್ಕಳು ಮಿಸ್ ಮಾಡದೇ ಆಗ್ಲಿ…ಅದರ ಬಗ್ಗೆ ಗಮನಿಸಿ ಅಂತ ಹಾರೈಸಿ ಅದ್ಭುತವಾದ ಆಂಜನೇಯನ ಮೂರ್ತಿ ಕೊಟ್ಟು ನಮ್ ಪ್ರೇರಾಣಾ ಅವ್ರಿಗೂ ಒಳ್ಳೇದಾಗ್ಲಿ ಅಂತ ಹಾರೈಸಿ ಒಂದು ಅರ್ಧ ಗಂಟೆ ಗೋಳಿಕೊಂಡು ಆಮೇಲೆ ಹೀರೋ ನ ಕಳಿಸಿಕೊಟ್ಟೆ!!! ಹಾರೈಸೋ ಜವಾಬ್ದಾರಿ ನಿಮ್ಮದು…!

    A post shared by Olle Hudga Pratham (@olle_hudga_prathama) on

    ಖುಷಿ ವಿಷಯ ಏನಂದರೆ ಇವರ ಲಕ್ಕಿ ಕಾರಿನಲ್ಲೇ ಬಂದಿದ್ದರು. ಜೊತೆಗೆ ತುಂಬಾ ಹೊತ್ತು ಇದ್ದರು. ಈಗಲೇ ಈ ಪುಣ್ಯಾತ್ಮರು ಕೈಗೆ ಸಿಗಲ್ಲ. ಮದುವೆ ಆದ್ಮೇಲಂತೂ ಫೋನಿಗೂ ಸಿಗಲ್ಲ. ಪೊಗರು ಸೂಪರ್ ಹಿಟ್ ಆದಮೇಲಂತೂ ಇಲ್ವೇಇಲ್ಲ. ನಾವ್ ಬಿಡಬೇಕಲ್ಲಾ. ಆದಷ್ಟು ಬೇಗ ಅಂಜನೇಯ ಸ್ವಾಮಿಗೆ ಇನ್ನೊಬ್ಬ ಭಕ್ತರನ್ನ ಇವರ ಮನೆಯಿಂದನೇ ಕೊಡಲಿ. ಅಂದರೆ ಜೂನಿಯರ್ ಧ್ರುವ ಸರ್ಜಾ ಬರಲಿ ಅಂತ ಆಶಿಸಿ. ಮದುವೆ ಆದ ಮೇಲೆ ವರ್ಷಕ್ಕೆ ಎರಡು ಸಿನಿಮಾ ಬ್ರೋ ಗೊತ್ತಲ್ವಾ ಅಂದ್ರು. ಅಣ್ಣಾ ಮದುವೆ ಆದ ಮೇಲೆ ವರ್ಷಕ್ಕೆ ಒಂದು ಮಕ್ಕಳು ಮಿಸ್ ಮಾಡದೇ ಆಗಲಿ. ಅದರ ಬಗ್ಗೆ ಗಮನಿಸಿ ಅಂತ ಹಾರೈಸಿ ಅದ್ಭುತವಾದ ಆಂಜನೇಯನ ಮೂರ್ತಿ ಕೊಟ್ಟು ನಮ್ ಪ್ರೇರಾಣಾ ಅವರಿಗೂ ಒಳ್ಳೆದಾಗಲಿ ಅಂತ ಹಾರೈಸಿ. ಒಂದು ಅರ್ಧ ಗಂಟೆ ಗೋಳಿಕೊಂಡು ಆಮೇಲೆ ಹೀರೋನ ಕಳಿಸಿಕೊಟ್ಟೆ. ಹಾರೈಸೋ ಜವಾಬ್ದಾರಿ ನಿಮ್ಮದು ಎಂದು ಬರೆದುಕೊಂಡಿದ್ದಾರೆ.

  • ಆಹ್ವಾನ ಪತ್ರಿಕೆಯಲ್ಲಿ ಹೆಸರಿಲ್ಲದ್ದಕ್ಕೆ ಕಾರ್ಯಕ್ರಮದಿಂದಲೇ ಹೊರ ನಡೆದ ಸಾ.ರಾ.ಮಹೇಶ್

    ಆಹ್ವಾನ ಪತ್ರಿಕೆಯಲ್ಲಿ ಹೆಸರಿಲ್ಲದ್ದಕ್ಕೆ ಕಾರ್ಯಕ್ರಮದಿಂದಲೇ ಹೊರ ನಡೆದ ಸಾ.ರಾ.ಮಹೇಶ್

    ಮೈಸೂರು: ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರನ್ನು ನಮೂದಿಸದೇ ಇರುವುದಕ್ಕೆ ಕಾರ್ಯಕ್ರಮದ ಮಧ್ಯೆಯೇ ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಹೊರನಡೆದಿದ್ದಾರೆ.

    ನಗರದ ಮಾನಸ ಗಂಗೋತ್ರಿ ಕ್ಯಾಂಪಸ್‍ನಲ್ಲಿ ಗಾಂಧಿ ಕುರಿತ ಸಿಮೆಂಟ್ ಕಲಾಕೃತಿಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕಾರ್ಯಕ್ರಮಕ್ಕೆ ಬಂದ ಸಚಿವರು ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರನ್ನು ನಮೂದಿಸದೇ ಇರುವುದನ್ನು ಗಮನಿಸಿ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾದರು.

    ಇದಾದ ನಂತರ ಕ್ಯಾಂಪಸ್ ಆವರಣದಲ್ಲಿದ್ದ ಕಲಾಕೃತಿಗಳನ್ನು ಉದ್ಘಾಟನೆ ಮಾಡಿ, ಅಧಿಕಾರಿಗಳನ್ನು ಬೈಯುತ್ತಾ ವೇದಿಕೆ ಕಾರ್ಯಕ್ರಮಕ್ಕೆ ಹಾಜರಾಗದೇ ತೆರಳಿದರು. ಈ ವೇಳೆ ಸ್ಥಳದಲ್ಲೇ ಇದ್ದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರು ಕಾರ್ಯಕ್ರಮಕ್ಕೆ ಬಾರಯ್ಯ ಎಂದು ಕರೆದರು. ಇಲ್ಲ ಇಲ್ಲ ನನಗೆ ಬೇರೆ ಕಾರ್ಯಕ್ರಮವಿದೆ ಎನ್ನುತ್ತಾ ಸಾ.ರಾ.ಮಹೇಶ್ ಹೊರಟು ಹೋದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಗೆ ಬೆದರಿತಾ ರಾಜ್ಯ ಸರ್ಕಾರ?

    ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಗೆ ಬೆದರಿತಾ ರಾಜ್ಯ ಸರ್ಕಾರ?

    ಕಾರವಾರ: ಕೇಂದ್ರ ಕೌಶಲ್ಯಾಭಿವೃದ್ಧಿ ರಾಜ್ಯ ಸಚಿವ ಅನಂತಕುಮಾರ್ ಹೆಗಡೆ ಹೇಳಿಕೆಗೆ ರಾಜ್ಯ ಸರ್ಕಾರ ಬೆದರಿತಾ ಎನ್ನುವ ಪ್ರಶ್ನೆ ಈಗ ಎದ್ದಿದೆ.

    ಹೌದು. ಉತ್ತರ ಕನ್ನಡದ ಜಿಲ್ಲಾಡಳಿತ ಟಿಪ್ಪು ಜಯಂತಿ ಆಹ್ವಾನ ಪತ್ರಿಕೆಯನ್ನು ಈಗ ಮುದ್ರಿಸದೇ ಇರುವ ತೀರ್ಮಾನ ತೆಗೆದುಕೊಂಡ ಹಿನ್ನೆಲೆಯಲ್ಲಿ ಈ ಮೇಲಿನ ಪ್ರಶ್ನೆ ಎದ್ದಿದೆ.

    ನವೆಂಬರ್ 10ರ ಟಿಪ್ಪು ಜಯಂತಿಯ ಆಹ್ವಾನ ಪತ್ರಿಕೆಯಲ್ಲಿ ತನ್ನ ಹೆಸರು ನಮೂದಿಸದಂತೆ ಅನಂತಕುಮಾರ್ ಹೆಗಡೆ ಆಪ್ತ ಸಹಾಯಕರ ಮೂಲಕ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು. ರಾಜ್ಯ ಸರ್ಕಾರ ಕೂಡ ಶಿಷ್ಟಾಚಾರದಲ್ಲಿ ಹೆಸರು ನಮೋದಿಸದಂತೆ ತೀರ್ಮಾನ ತೆಗೆದುಕೊಂಡಿತ್ತು. ಆದರೆ ಉತ್ತರ ಕನ್ನಡದ ಜಿಲ್ಲಾಧಿಕಾರಿಗಳಿಗೆ ಶಿಷ್ಟಾಚಾರ ವಿಭಾಗದಿಂದ ಯಾವುದೇ ಪತ್ರ ಬಾರದ ಹಿನ್ನಲೆಯಲ್ಲಿ ಆಹ್ವಾನ ಪತ್ರಿಕೆ ಮುದ್ರಣಕ್ಕೆ ಬ್ರೇಕ್ ಹಾಕಿದೆ.

    ಇದನ್ನೂ ಓದಿ: ಆಹ್ವಾನಪತ್ರಿಕೆಯಲ್ಲಿ ಹೆಸರು ಹಾಕ್ಸೋದು ಪ್ರೋಟೋಕಾಲ್, ಬರೋದು ಬಿಡೋದು ಸಚಿವರಿಗೆ ಬಿಟ್ಟಿದ್ದು- ಸಿಎಂ

    ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನಲೆಯಲ್ಲಿ ಜಿಲ್ಲಾಡಳಿತ ಪೇಚೆಗೆ ಸಿಲುಕಿದ್ದು, ಒಂದುವೇಳೆ ಯಾವುದೇ ಪ್ರತಿಕ್ರಿಯೆ ಬಾರದೇ ಹೆಸರು ನಮೋದಿಸದೇ ಇದ್ದಲ್ಲಿ ಹಕ್ಕುಚ್ಯುತಿ ಎದುರಿಸಬೇಕಾಗುತ್ತದೆ. ಹೀಗಾಗಿ ಯಾವುದೇ ಗೊಂದಲ ಆಗದೇ ಇರಲು ಈಗ ಆಹ್ವಾನ ಪತ್ರಿಕೆಯನ್ನು ಮುದ್ರಿಸದೇ ಇರಲು ಜಿಲ್ಲಾಡಳಿತ ಮುಂದಾಗಿದೆ.

    ಈ ಹಿಂದೆ ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದ ಅನಂತ್ ಕುಮಾರ್ ಹೆಗಡೆ, ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರು ಹಾಕಬೇಡಿ. ಒಂದು ವೇಳೆ ಹೆಸರು ಪ್ರಕಟಿಸಿದರೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಟಿಪ್ಪುವಿನ ಜನ್ಮ ಜಾಲಾಡುತ್ತೇನೆ ಎಂದು ಹೇಳಿದ್ದರು. ಈ ಹೇಳಿಕೆ ನೀಡಿದ್ದರೂ ಬೆಳಗಾವಿ ಜಿಲ್ಲಾಡಳಿತ ಟಿಪ್ಪು ಜಯಂತಿ ಆಹ್ವಾನ ಪತ್ರಿಕೆಯಲ್ಲಿ ಅನಂತ್ ಕುಮಾರ್ ಹೆಗಡೆ ಅವರ ಹೆಸರನ್ನು ಹಾಕಿ ಮುದ್ರಿಸಿದೆ.

    ಇದನ್ನೂ ಓದಿ:  ಟಿಪ್ಪು ಜಯಂತಿ ಆಮಂತ್ರಣದಲ್ಲಿ ನನ್ನ ಹೆಸರು ಹಾಕ್ಬೇಡಿ: ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಪತ್ರ