Tag: ಆಹಾರ ವಿತರಣೆ

  • ಝೊಮ್ಯಾಟೊ ತಾಂತ್ರಿಕ ಮುಖ್ಯಸ್ಥ ಹುದ್ದೆಗೆ ಸಹ ಸಂಸ್ಥಾಪಕ ಗುಂಜನ್ ಗುಡ್‌ಬೈ

    ಝೊಮ್ಯಾಟೊ ತಾಂತ್ರಿಕ ಮುಖ್ಯಸ್ಥ ಹುದ್ದೆಗೆ ಸಹ ಸಂಸ್ಥಾಪಕ ಗುಂಜನ್ ಗುಡ್‌ಬೈ

    ನವದೆಹಲಿ: ಆನ್‌ಲೈನ್ ಪ್ರಮುಖ ಆಹಾರ ವಿತರಣಾ ವೇದಿಕೆ ಆಗಿರುವ ಝೊಮ್ಯಾಟೊ (Zomato) ಸಹ ಸಂಸ್ಥಾಪಕ ಹಾಗೂ ಮುಖ್ಯ ತಂತ್ರಜ್ಞಾನ ಅಧಿಕಾರಿ ಗುಂಜನ್ ಪಾಟಿದಾರ್ (Gunjan Patidar) ಇಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

    ಝೊಮ್ಯಾಟೊ ಸ್ಥಾಪನೆಯಾದ ಮೊದಲ ಕೆಲ ಉದ್ಯೋಗಿಗಳಲ್ಲಿ (Employees) ಪಾಟಿದಾರ್ ಸಹ ಒಬ್ಬರು. ಅಲ್ಲದೇ ಪಾಟಿದಾರ್ ಕಂಪನಿಗಾಗಿ ಕೋರ್ ಟೆಕ್ ಸಿಸ್ಟಮ್‌ಗಳನ್ನ ನಿರ್ಮಿಸಿದ್ದಾರೆ. ಕಳೆದ 10 ವರ್ಷಗಳಲ್ಲಿ ತಾಂತ್ರಿಕ ಕಾರ್ಯವನ್ನು ಮುನ್ನಡೆಸಿದ್ದಾರೆ. ಝೊಮ್ಯಾಟೊ ನಿರ್ಮಾಣಕ್ಕೆ ಅವರ ಕೊಡುಗೆ ಅತ್ಯಮೂಲ್ಯವಾಗಿದೆ. ಆದ್ರೆ ಅವರು ರಾಜೀನಾಮೆಗೆ ಕಾರಣವನ್ನ ಬಹಿರಂಗಪಡಿಸಿಲ್ಲ. ಇದನ್ನೂ ಓದಿ: ಆರ್ಡರ್‌ ಮಾಡಿದ 10 ನಿಮಿಷಕ್ಕೆ ನಿಮ್ಮ ಮನೆ ಬಾಗಿಲಿಗೆ ಫುಡ್‌ ಡೆಲಿವರಿ- ಝೊಮ್ಯಾಟೊ ಹೊಸ ಫೀಚರ್‌

    ಕಳೆದ ವರ್ಷ ನವೆಂಬರ್‌ನಲ್ಲಿ ಕಂಪನಿಯ ಮತ್ತೊಬ್ಬ ಸಹ-ಸಂಸ್ಥಾಪಕರಾಗಿದ್ದ ಮೋಹಿತ್ ಗುಪ್ತಾ (Mohit Gupta) ರಾಜೀನಾಮೆ ನೀಡಿದ್ದರು. ನಾಲ್ಕೂವರೆ ವರ್ಷಗಳ ಹಿಂದೆ ಝೊಮ್ಯಾಟೊಗೆ ಸೇರಿದ್ದ ಗುಪ್ತಾ 2020ರಲ್ಲಿ ಸಿಇಒ (CEO) ಸ್ಥಾನದಿಂದ ಸಹ ಸಂಸ್ಥಾಪಕರಾದರು. ಇದನ್ನೂ ಓದಿ: ಝೊಮ್ಯಾಟೊ ಡೆಲಿವರಿ ಬಾಯ್ ಆದ ಶಿಕ್ಷಕ- ಕಥೆಯೇ ರೋಚಕ!

    ಅಲ್ಲದೇ ಕಳೆದ ವರ್ಷ ನೂತನ ಉಪಕ್ರಮಗಳ ಮುಖ್ಯಸ್ಥ ರಾಹುಲ್ ಗಂಜೂ, ಮಾಜಿ ಅಧ್ಯಕ್ಷ ಸಿದ್ಧಾರ್ಥ್ ಝವಾರ್ ಸೇರಿ ಹಲವು ಉನ್ನತ ಮಟ್ಟದ ಅಧಿಕಾರಿಗಳು ಝೊಮ್ಯಾಟೊದಿಂದ ನಿರ್ಗಮಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಆಹಾರ ಇಲಾಖೆಯ ಮಹಾ ಎಡವಟ್ಟು-ಧೂಳು, ಹುಳು ಮಿಶ್ರಿತ ಗೋಧಿ ವಿತರಣೆ

    ಆಹಾರ ಇಲಾಖೆಯ ಮಹಾ ಎಡವಟ್ಟು-ಧೂಳು, ಹುಳು ಮಿಶ್ರಿತ ಗೋಧಿ ವಿತರಣೆ

    ಬೆಂಗಳೂರು: ಲಾಕ್‍ಡೌನ್ ಹಿನ್ನೆಲೆಯಲ್ಲಿ ಸರ್ಕಾರ ಎರಡು ತಿಂಗಳ ಪಡಿತರವನ್ನು ವಿತರಣೆ ಮಾಡುತ್ತಿದೆ. ನೆಲಮಂಗಲದ ತಲಕಾಡು ಸುಬ್ಬರಾಯರ ಬೀದಿಯಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿ ಧೂಳು ಮತ್ತು ಹುಳು ಮಿಶ್ರಿತ ಗೋಧಿಯನ್ನು ವಿತರಿಸಲಾಗಿದೆ.

    ನ್ಯಾಯಬೆಲೆ ಅಂಗಡಿಯಲ್ಲಿ ಪಡೆದ ಗೋಧಿಯನ್ನು ನೋಡಿದಾಗ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ನೀಡುವದಾದ್ರೆ ಒಳ್ಳೆಯ ಗೋಧಿ ನೀಡಿ ಇಲ್ಲವಾದ್ರೆ ಬೇಡ. ಲಾಕ್‍ಡೌನ್‍ನಿಂದಾಗಿ ಕೆಲಸವಿಲ್ಲದೇ ಮನೆಯಲ್ಲಿ ಕೂತಿದ್ದೇವೆ. ಸರ್ಕಾರ ದಿನಸಿ ನೀಡುತ್ತಿದೆ ಎಂದು ರಾತ್ರಿಯೆಲ್ಲ ಸರತಿಯಲ್ಲಿ ನಿಂತಿದ್ದೇವೆ. ಆದ್ರೆ ಹುಳು ಮಿಶ್ರಿತ ಗೋಧಿ ನೀಡಿದ್ದಾರೆ ಎಂದು ಜನ ಆಕ್ರೋಶ ಹೊರಹಾಕಿದ್ದಾರೆ.

    ನ್ಯಾಯಬೆಲೆ ಅಂಗಡಿ ಸಿಬ್ಬಂದಿ ಮಾತ್ರ ಸರ್ಕಾರ ನೀಡಿರುವುದನ್ನು ನಾವು ವಿತರಿಸುತ್ತಿದ್ದೇವೆ. ಇದರಲ್ಲಿ ನಮ್ಮದೇನು ತಪ್ಪಿಲ್ಲ ಎಂದು ಹೇಳಿ ಜಾರಿಕೊಳ್ಳುತ್ತಿದ್ದಾರೆ. ನ್ಯಾಯಾಬೆಲೆ ಅಂಗಡಿಯವರು ಪ್ರತಿಯೊಬ್ಬರಿಂದ 40 ರೂಪಾಯಿ ಪಡೆದುಕೊಳ್ಳುತ್ತಿದ್ದಾರೆ ಎಂದು ಜನರು ಆರೋಪಿಸಿದ್ದಾರೆ.