Tag: ಆಸ್ಪತ್ರೆ. ನಿರ್ದೇಶಕ

  • ಜ.31ಕ್ಕೆ ಜಯದೇವ ಆಸ್ಪತ್ರೆ ನಿರ್ದೇಶಕರಾಗಿ ಡಾ. ಮಂಜುನಾಥ್ ಅವಧಿ ಅಂತ್ಯ

    ಜ.31ಕ್ಕೆ ಜಯದೇವ ಆಸ್ಪತ್ರೆ ನಿರ್ದೇಶಕರಾಗಿ ಡಾ. ಮಂಜುನಾಥ್ ಅವಧಿ ಅಂತ್ಯ

    ಬೆಂಗಳೂರು: ಜಯದೇವ ಆಸ್ಪತ್ರೆ ನಿರ್ದೇಶಕರನ್ನಾಗಿ ಡಾ. ಮಂಜುನಾಥ್‍ರನ್ನು (Dr Manjunath) ಮುಂದುವರಿಸುವ ನಿರ್ಧಾರವನ್ನು ಸರ್ಕಾರ ಕೈ ಬಿಟ್ಟಿದೆ. ಜನವರಿ 31ಕ್ಕೆ ಜಯದೇವ ಆಸ್ಪತ್ರೆ ನಿರ್ದೇಶಕರಾಗಿ (Jayadeva Hospital Director) ಡಾ. ಮಂಜುನಾಥ್ ಅವಧಿ ಮುಕ್ತಾಯವಾಗಲಿದೆ.

    ಕಳೆದ ಬಾರಿ ಅವಧಿ ಮುಕ್ತಾಯ ಬಳಿಕ ಜನರ ಒತ್ತಾಯ ಕೇಳಿ ಬಂದ ಹಿನ್ನೆಲೆ 6 ತಿಂಗಳ ಕಾಲ ಹುದ್ದೆಯಲ್ಲಿ ಸರ್ಕಾರ ಮುಂದುವರಿಸಿತ್ತು. ಎನ್‍ಎಂಸಿ ಆಕ್ಟ್ ಪ್ರಕಾರ 70 ವರ್ಷದವರೆಗೂ ಸೇವೆ ಸಲ್ಲಿಸಬಹುದಾಗಿದೆ. ಡಾ. ಮಂಜುನಾಥ್ ಅವರಿಗೆ 67 ವರ್ಷವಾಗಿದ್ದು, ಇನ್ನು 3 ವರ್ಷಗಳ ಕಾಲ ಸೇವೆ ಸಲ್ಲಿಸಬಹುದಾಗಿದೆ. ಆದರೆ ಸರ್ಕಾರ ಮುಂದುವರಿಸುವ ನಿರ್ಧಾರ ಕೈಗೊಳ್ಳದ ಹಿನ್ನೆಲೆಯಲ್ಲಿ ಜನವರಿ 31ಕ್ಕೆ ಡಾ. ಮಂಜುನಾಥ್ ನಿವೃತ್ತಿ ಘೋಷಣೆ ಮಾಡಲಿದ್ದಾರೆ.

    ಜಯದೇವ ಆಸ್ಪತ್ರೆ ನಿರ್ದೇಶಕರ ಹುದ್ದೆಗೆ ಪೈಪೋಟಿ ಆರಂಭವಾಗಿದ್ದು, 15ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಈ ನಡುವೆ ಮೈಸೂರು ಮೂಲದ ಸಿಎಂ ಆಪ್ತರಿಗೆ ನಿರ್ದೇಶಕರ ಹುದ್ದೆ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ ಅನ್ನೋ ಚರ್ಚೆ ಜೋರಾಗಿದೆ.

    ಚುನಾವಣೆಗೆ ಸ್ಪರ್ಧಿಸ್ತಾರೆ ಎಂಬ ಚರ್ಚೆ ಜೋರಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಡಾ.ಮಂಜುನಾಥ್ ಅವರು, ಆ ರೀತಿ ಏನಿಲ್ಲ ಚುನಾವಣೆಗೆ ನಿಲ್ಲೊಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: 3 ದಿನ ಲಾಡ್ಜ್‌ನಲ್ಲಿಟ್ಟು ಚಿತ್ರಹಿಂಸೆ ಕೊಟ್ಟ ಆರೋಪ- ಕಾಟನ್‍ಪೇಟೆ ಪೊಲೀಸರ ವಿರುದ್ಧ ವ್ಯಕ್ತಿ ದೂರು

  • ಸರ್ಜರಿಗೆ 5 ಸಾವಿರವಾಗುತ್ತೆ ಎಂದು ನಂತರ 15 ಸಾವಿರ ಕೊಡಿ ಅಂದ್ರು- ಕಿಮ್ಸ್ ನಿರ್ದೇಶಕ ದುಡ್ಡು ಪೀಕುತ್ತಿರುವ ವಿಡಿಯೋ ವೈರಲ್

    ಸರ್ಜರಿಗೆ 5 ಸಾವಿರವಾಗುತ್ತೆ ಎಂದು ನಂತರ 15 ಸಾವಿರ ಕೊಡಿ ಅಂದ್ರು- ಕಿಮ್ಸ್ ನಿರ್ದೇಶಕ ದುಡ್ಡು ಪೀಕುತ್ತಿರುವ ವಿಡಿಯೋ ವೈರಲ್

    ಕೊಪ್ಪಳ: ರಾಜ್ಯ ಸರ್ಕಾರ ಖಾಸಗಿ ಆಸ್ಪತ್ರೆಯಲ್ಲಿನ ಅಕ್ರಮಗಳಿಗೆ ಕಡಿವಾಣ ಹಾಕೋ ವಿಧೇಯಕ ಜಾರಿ ಮಾಡುತ್ತಿರೋ ಬೆನ್ನಲ್ಲೇ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯೊಂದರ ಅಕ್ರಮ ಬಟಾಬಯಲಾಗಿದೆ. ಬಡವರ ಪಾಲಿಗೆ ಸರ್ಕಾರಿ ಆಸ್ಪತ್ರೆ ಸಂಜೀವಿನಿ ಆಗಬೇಕಿತ್ತು. ಆದರೆ ಚಿಕಿತ್ಸೆಯ ನೆಪದಲ್ಲಿ ಕಿಮ್ಸ್ ನಿರ್ದೇಶಕ ದುಡ್ಡು ಪೀಕತ್ತಿರೋ ವಿಡಿಯೋ ಕೊಪ್ಪಳದಲ್ಲಿ ವೈರಲ್ ಆಗಿದೆ.

    ಒಂದು ವಾರದ ಹಿಂದೆ ಕೊಪ್ಪಳ ನಿವಾಸಿಯಾಗಿರುವ ದೊಡ್ಡ ಬಸಪ್ಪ ಎಂಬವರು ತಮ್ಮ ಪತ್ನಿಯ ಕಾಲು ಮೂಳೆ ಮುರಿದಿದ್ದರಿಂದ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿನ ಎಲುಬು-ಕೀಲು ವೈದ್ಯರಾದ ಡಾ. ಗುರುರಾಜ ಎಂಬವರು ಶಸ್ತ್ರಚಿಕಿತ್ಸೆ ಮಾಡಬೇಕು. ಅದಕ್ಕೆ 5 ಸಾವಿರ ಆಗುತ್ತದೆ ಎಂದು ಹೇಳಿದ್ದರು. ದೊಡ್ಡಬಸಪ್ಪ ಅವರು ಚಿಕಿತ್ಸೆಗೆ ಒಪ್ಪಿಕೊಂಡಿದ್ದರು.

    ಚಿಕಿತ್ಸೆ ಎಲ್ಲಾ ಮುಗಿದ ಮೇಲೆ ಕೇಳಿದಾಗ 15 ಸಾವಿರ ಕೊಡಬೇಕು ಎಂದು ಹೇಳಿದ್ದಾರೆ. ಇದರಿಂದ ಹೌಹಾರಿದ ದೊಡ್ಡಬಸಪ್ಪ ನೇರವಾಗಿ ಕೊಪ್ಪಳ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕರಾದ ಡಾ. ಎಸ್.ಎಂ ಮಲ್ಕಾಪುರೆ ಬಳಿ ಹೋಗಿ ಕೇಳಿದ್ದಾರೆ. ಆಗ ಮಲ್ಕಾಪುರೆ ಅವರು, ನಾವು ಶಸ್ತ್ರಚಿಕಿತ್ಸೆಗಾಗಿ ಸಾಮಾಗ್ರಿಗಳನ್ನು ಬೇರೆ ಕಡೆಯಿಂದ ತರೆಸಿದ್ದೇವೆ. ಅದಕ್ಕಾಗಿ 15 ಸಾವಿರವಾಗಿದೆ. ಇದೇ ಶಸ್ತ್ರಚಿಕಿತ್ಸೆಗೆ ಖಾಸಗಿ ಆಸ್ಪತ್ರೆಯಲ್ಲಿ ಆಗಿದ್ದರೆ ನಿಮಗೆ ಒಂದು ಲಕ್ಷಕ್ಕಿಂತ ಹೆಚ್ಚಾಗುತ್ತಿತ್ತು ಎಂದು ಹೇಳುತ್ತಾ, ನಿಮಗಾಗಿ 15 ಸಾವಿರದಲ್ಲಿ ಮೂರು ಸಾವಿರ ಬಿಡುತ್ತೇವೆ 12 ಸಾವಿರ ಕೊಡಿ ಎಂದು ಹೇಳಿದ್ದಾರೆ.

    ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಇಷ್ಟೊಂದು ಹಣ ಕೊಡಬೇಕಾ ಎಂದು ಕೇಳಿದಕ್ಕೆ “ಕೊಡಬೇಕು ಸರ್, ಇಲ್ಲ ಅಂದರೆ ರೋಗಿ ಸಾಯುತ್ತಿದ್ದರು” ಅಂತಾ ಬಾಯಿಗೆ ಬಂದಂಗೆ ಮಾತಾನಾಡಿದ್ದಾರೆ. ಹೀಗೆ ಬಂದ ರೋಗಿಗಳ ಬಳಿ ನಿರ್ದೇಶಕರೇ ಹಣ ಪೀಕುತ್ತಿರುವುದು ಬಟಾಬಯಲಾಗಿದೆ. ಇಂತಹ ನಿರ್ದೇಶಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜನರು ಆಗ್ರಹಿಸುತ್ತಿದ್ದಾರೆ.