ರಾಂಚಿ: ಆಸ್ತಿ ವಿವಾದಕ್ಕೆ 70 ವರ್ಷದ ತಂದೆಯ ಕತ್ತು ಸೀಳಿ ಮಗನೇ ಹತ್ಯೆಗೈದಿರುವ ಘಟನೆ ಜಾರ್ಖಂಡ್‍ನ ಗೊಡ್ಡಾದಲ್ಲಿ ನಡೆದಿದೆ.
ಆರೋಪಿ ತನ್ನ ಕಿರಿಯ ಸಹೋದರನಿಗೆ ಆಸ್ತಿಯಲ್ಲಿ ಹೆಚ್ಚಿನ ಪಾಲು ನೀಡಲಾಗಿದೆ ಎಂದು ಭಾವಿಸಿದ್ದಾನೆ. ನಂತರ ತನ್ನ ಬೇಡಿಕೆಯನ್ನು ತಂದೆ ಪೂರೈಸದೇ ಇದ್ದಿದ್ದಕ್ಕೆ ಕೋಪಗೊಂಡು ತನ್ನ ತಂದೆಯ ಕತ್ತನ್ನು ಸೀಳಿ ಕೊಂದಿದ್ದಾನೆ. ಇದನ್ನೂ ಓದಿ: ಕೊರೊನಾ ಸ್ಫೋಟ ಒಟ್ಟು 2,479 ಪ್ರಕರಣ – ಬೆಂಗ್ಳೂರಲ್ಲಿ 2,053 ಕೇಸ್
ಘಟನೆ ಸಂಬಂಧಿಸಿದಂತೆ ತನಿಖೆ ವೇಳೆ ಮೃತರ ಹಿರಿಯ ಮಗನ ಮೇಲೆ ಅನುಮಾನಗೊಂಡು ವಿಚಾರಣೆ ನಡೆಸಿದಾಗ ಸತ್ಯ ಬಹಿರಂಗವಾಗಿದೆ ಮತ್ತು ಸಾಕ್ಷಿಗಳ ಸಮೇತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪಾಟ್ನಾ: ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ 75.36 ಲಕ್ಷ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿ ಹೊಂದಿದ್ದಾರೆ. ಆದರೆ ಅವರ ಪುತ್ರ ನಿಶಾಂತ್, ತಂದೆಗಿಂತಲೂ ಐದು ಪಟ್ಟು ಹೆಚ್ಚು ಶ್ರೀಮಂತರಾಗಿದ್ದಾರೆ.
ಬಿಹಾರ್ ಸರ್ಕಾರದ ವೆಬ್‌ಸೈಟ್‌ನಲ್ಲಿ ಡಿ.31ರಂದು ಮುಖ್ಯಮಂತ್ರಿ ಮತ್ತು ಅವರ ಸಂಪುಟ ಸಹೋದ್ಯೋಗಿಗಳ ಆಸ್ತಿ ವಿವರಗಳನ್ನು ಅಪ್‌ಲೋಡ್ ಮಾಡಲಾಗಿದೆ. ನಿತಿಶ್ ಕುಮಾರ್ ಅವರು 29,385 ರೂ. ನಗದು ಹೊಂದಿದ್ದಾರೆ. 42,763 ರೂ. ಅನ್ನು ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿದ್ದಾರೆ. ಅವರ ಪುತ್ರ 16,549 ರೂ. ನಗದು ಹೊಂದಿದ್ದು, 1.28 ಕೋಟಿ ರೂ. ಅನ್ನು ಬ್ಯಾಂಕ್‌ನಲ್ಲಿ ಎಫ್‌ಡಿ ಮಾಡಿಸಿದ್ದಾರೆ. ಜೊತೆಗೆ ಹಲವು ಬ್ಯಾಂಕ್‌ಗಳಲ್ಲಿ ಹಣವನ್ನು ಠೇವಣಿ ಕೂಡ ಇಟ್ಟಿದ್ದಾರೆ. ಇದನ್ನೂ ಓದಿ: ಕೊರೊನಾ ತಡೆಗಟ್ಟುವಲ್ಲಿ ಕೇಜ್ರಿವಾಲ್ ಸರ್ಕಾರ ವಿಫಲ: ಚರಣ್‌ಜಿತ್ ಸಿಂಗ್
ಸಿಎಂ ನಿತೀಶ್ ಕುಮಾರ್ ಅವರು, 16.51 ಲಕ್ಷ ರೂ. ಚರ ಹಾಗೂ 58.85 ಲಕ್ಷ ರೂ. ಸ್ಥಿರ ಆಸ್ತಿ ಹೊಂದಿದ್ದಾರೆ. ಅವರ ಪುತ್ರ ನಿಶಾಂತ್ 1.63 ಕೋಟಿ ರೂ. ಚರ ಹಾಗೂ 1.98 ಕೋಟಿ ರೂ. ಸ್ಥಿರ ಆಸ್ತಿ ಹೊಂದಿದ್ದಾರೆ.
ಬಿಹಾರ್ ಸಿಎಂ ನವದೆಹಲಿಯ ದ್ವಾರಕಾದಲ್ಲಿ ಸಹಕಾರಿ ಹೌಸಿಂಗ್ ಸೊಸೈಟಿಯಲ್ಲಿ ಒಂದು ಫ್ಲಾಟ್ ಹೊಂದಿದ್ದಾರೆ. ಅವರ ಪುತ್ರ ಕಲ್ಯಾಣ ಬಿಘಾ, ಹಕಿಕತ್‌ಪುರ, ಪಾಟ್ನಾದ ಕಂಕರ್‌ಬಾಗ್‌ನಲ್ಲಿ ಕೃಷಿ ಭೂಮಿ ನಿವಾಸಗಳನ್ನು ಹೊಂದಿದ್ದಾರೆ. ಇದನ್ನೂ ಓದಿ: Whatsapp – ಒಂದೇ ತಿಂಗಳಲ್ಲಿ ಭಾರತೀಯರ 17 ಲಕ್ಷ ಖಾತೆಗಳು ಬ್ಯಾನ್
ನಿಶಾಂತ್ ತಮ್ಮ ಪೂರ್ವಜರ ಗ್ರಾಮ ಕಲ್ಯಾಣ ಬಿಘಾದಲ್ಲಿ ಕೃಷಿ ಭೂಮಿ ಹೊಂದಿದ್ದಾರೆ. ಇವರಿಗೆ ಗ್ರಾಮದಲ್ಲಿ ಕೃಷಿಯೇತರ ಭೂಮಿಯೂ ಇದೆ. 1.45 ಲಕ್ಷ ಮೌಲ್ಯದ 13 ಹಸುಗಳು ಮತ್ತು 9 ಕರುಗಳನ್ನು ಹೊಂದಿದ್ದಾರೆ.
ನಿತೀಶ್ ಕುಮಾರ್ ನೇತೃತ್ವದ ಸರ್ಕಾರವು ವರ್ಷದ ಕೊನೆಯ ತಿಂಗಳು ಸಂಪುಟದ ಎಲ್ಲಾ ಸಚಿವರು ತಮ್ಮ ಆಸ್ತಿ ವಿವರಗಳನ್ನು ಬಹಿರಂಗಪಡಿಸಬೇಕು ಎಂಬ ನಿಯಮವನ್ನು ಕಡ್ಡಾಯಗೊಳಿಸಿತ್ತು.
ಹಾವೇರಿ: 7 ಎಕರೆ ಆಸ್ತಿಗಾಗಿ 98 ವರ್ಷದ ವೃದ್ಧೆಯನ್ನು ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಬಾಳಂಬೀಡ ಗ್ರಾಮದಿಂದ ಕಿಡ್ನಾಪ್ ಮಾಡಲಾಗಿತ್ತು. ಪೊಲೀಸರು ಪ್ರಕರಣ ದಾಖಲಿಸಿದ ಬೆನ್ನಲ್ಲೇ ಗ್ರಾಮದ ಓಣಿಯಲ್ಲಿ ಈಗ ಅಜ್ಜಿ ಪತ್ತೆಯಾಗಿದ್ದಾರೆ.
ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡುತ್ತಿದ್ದಂತೆ ಅಜ್ಜಿಯನ್ನ ಗ್ರಾಮದ ಓಣಿಯಲ್ಲಿ ಬಿಟ್ಟು ಹೋಗಿದ್ದಾರೆ. ದೇವಕ್ಕನ ಸಂಬಂಧಿಕರು ಈಗ ಅಜ್ಜಿಯನ್ನ ಆಡೂರು ಪೊಲೀಸ್ ಠಾಣೆ ಕರೆದುಕೊಂಡು ಬಂದಿದ್ದಾರೆ. ಅಜ್ಜಿಯನ್ನ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ. ಕಿಡ್ನಾಪ್ ಮಾಡಿದ ಆರೋಪಿಗಳನ್ನ ಬಂಧಿಸಿ ತಕ್ಕಶಿಕ್ಷೆ ಕೊಡಿಸಬೇಕು ಎಂದು ಅಜ್ಜಿಯ ಸಂಬಂಧಿಕರು ಆಗ್ರಹಿಸಿದ್ದಾರೆ. ಇದನ್ನೂ ಓದಿ: 7 ಎಕರೆ ಆಸ್ತಿಗಾಗಿ 98 ವರ್ಷದ ವೃದ್ಧೆಯನ್ನೇ ಕಿಡ್ನಾಪ್‍ಗೈದ್ರು
ನಡೆದಿದ್ದೇನು?: ಕಳೆದ ನಾಲ್ಕು ದಿನಗಳ ಹಿಂದೆ 5 ಮಂದಿ ಸೇರಿಕೊಂಡು ವೃದ್ಧೆಯನ್ನ ಕಿಡ್ನಾಪ್ ಮಾಡಿರೋ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ದೇವಕ್ಕ ಅವರಿಗೆ ಸಂತಾನ ಇಲ್ಲದ್ದರಿಂದ ತನ್ನ ಜಮೀನನ್ನ ಮಾಣಿಕಪ್ಪ ದುಂಡಣ್ಣನವರಿಗೆ ಆಸ್ತಿಯನ್ನ ಬರೆದು ಕೊಟ್ಟಿದ್ದರು. ಹಲವು ವರ್ಷಗಳಿಂದ ವೃದ್ಧೆಯನ್ನ ಆರೈಕೆ ಮಾಡಿಕೊಂಡು ಮಾಣಿಕಪ್ಪ ಕುಟುಂಬಸ್ಥರು ಬಂದಿದ್ದರು. ಅದರೆ ವೃದ್ಧೆಯ ಸಂಬಂಧಿಕರಾಗಿರೋ ಸಂತೋಷ, ಈರಪ್ಪ, ಆದಪ್ಪ, ಪ್ರಕಾಶ ಮತ್ತು ಮಂಜಪ್ಪ ಎಂಬುವರ ಅಜ್ಜಿಯನ್ನ ಆಸ್ತಿಯಾಗಿ ಕಿಡ್ನಾಪ್ ಮಾಡಿದ್ದಾರೆ ಎನ್ನಲಾಗಿತ್ತು. ಇದೀಗ ಅಜ್ಜಿ ಪತ್ತೆಯಾಗಿದ್ದು, ಪೊಲೀಸರು ಅಜ್ಜಿಯನ್ನು ವಿಚಾರಣೆ ಮಾಡಿ ಮಾಹಿತಿ ಕಲೆಹಾಕುತ್ತಿದ್ದಾರೆ.
ಭುವನೇಶ್ವರ: 25 ವರ್ಷಗಳಿಂದ ಆಟೋ ಸೇವೆ ನೀಡಿದ ವ್ಯಕ್ತಿಗೆ ಮಹಿಳೆಯೊಬ್ಬರು ತನ್ನ 1 ಕೋಟಿ ರೂ. ಮೌಲ್ಯದ ಆಸ್ತಿಯನ್ನೇ ದಾನ ಮಾಡಿದ ಅಚ್ಚರಿಯ ಘಟನೆಯೊಂದು ಒಡಿಶಾದಲ್ಲಿ ನಡೆದಿದೆ.
ಹೌದು. ಈ ರೀತಿ ಆಸ್ತಿ ದಾನ ಮಾಡಿರುವ ಮಹಿಳೆಯನ್ನು ಮಿನಾತಿ ಪಟ್ನಾಯಕ್ ಎಂದು ಗುರುತಿಸಲಾಗಿದ್ದು, ಇವರು ಕಟಕ್ ನಿವಾಸಿ. ಸದ್ಯ ತಮಗೆ ಸಹಾಯ ಮಾಡಿರುವ ಬುಧ ಸಮಾಲ್ ಎಂಬ ಆಟೋ ಎಳೆಯುವ ವ್ಯಕ್ತಿಗೆ ತಮ್ಮ ಮೂರು ಅಂತಸ್ತಿನ ಮನೆ, ಚಿನ್ನದ ಆಭರಣಗಳನ್ನು ದಾನ ಮಾಡಿದ್ದಾರೆ. ಇವುಗಳ ಒಟ್ಟು ಮೌಲ್ಯ ಒಂದು ಕೋಟಿ ರೂ.ಗಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ.
ಕಳೆದ ವರ್ಷ ಪತಿ ಹಾಗೂ ಈ ವರ್ಷ ಮಗಳನ್ನು ಮಿನಾತಿ ಕಳೆದುಕೊಂಡಿದ್ದಾರೆ. ಆ ಬಳಿಕದಿಂದ ಒಬ್ಬರೇ ವಾಸ ಮಾಡುತ್ತಿರುವ ಮಿನಾತಿಯವರಿಗೆ ಪತಿ ಹಾಗೂ ಮಗಳಲಿಲ್ಲವೆಂದರೆ ಎಷ್ಟು ಆಸ್ತಿ ಇದ್ದರೆ ಏನು ಉಪಯೋಗ. ನಾನು ದುಃಖದಲ್ಲಿ ಬದುಕುತ್ತಿರುವಾಗ ಸಂಬಂಧಿಕರು ಯಾರೂ ನನ್ನ ಬೆಂಬಲಕ್ಕೆ ನಿಲ್ಲಲಿಲ್ಲ. ಹೀಗಾಗಿ ನಾನು ಒಂಟಿಯಾದೆ. ಹೀಗಾಗಿ ಬಡವರಿಗೆ ಈ ಆಸ್ತಿಯನ್ನು ದಾನ ಮಾಡಲು ನಿರ್ಧರಿಸಿದ್ದಾರೆ. ಈ ವೇಳೆ ರಿಕ್ಷಾ ಎಳೆಯುವಾತ ಹಾಗೂ ಆತನ ಕುಟುಂಬದವರು ನನ್ನಿಂದ ಯಾವುದೇ ನಿರೀಕ್ಷೆ ಇಟ್ಟುಕೊಳ್ಳದೆ ನನ್ನ ಆರೋಗ್ಯದ ಬಗ್ಗೆ ತುಂಬಾನೇ ಕಾಳಜಿ ವಹಿಸುತ್ತಿದ್ದರು. ಅಂತೆಯೇ ಆಟೋ ಎಳೆಯುವವನಿಗೆ ನೀಡಲು ತೀರ್ಮಾನಿಸಿ ವಿಲ್ ಸಹ ಮಾಡಿಸಿರುವುದಾಗಿ ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಪರೀಕ್ಷೆಯಲ್ಲಿ 100ಕ್ಕೆ 89 ಅಂಕ ಪಡೆದ 104ರ ವೃದ್ಧೆಯ ಸ್ಫೂರ್ತಿದಾಯಕ ಕಥೆ
ಈ ಸಂ ಬಂಧ ಬುಧ ಸಮಾಲ್ ಪ್ರತಿಕ್ರಿಯಿಸಿ, ಕಳೆದ 25 ವರ್ಷಗಳಿಂದ ಈ ಕುಟುಂಬಕ್ಕೆ ಸೇವೆ ಸಲ್ಲಿಸುತ್ತಿದ್ದು, ಆಸ್ತಿಯ ಕನಸು ಕಂಡಿರಲಿಲ್ಲ ಎಂದು ರಿಕ್ಷಾ ಚಾಲಕ ಹೇಳಿದರು. ಅವನು ತನ್ನ ರಿಕ್ಷಾದಲ್ಲಿ ಬೇರೆ ಯಾವುದೇ ಪ್ರಯಾಣಿಕರನ್ನು ಹೊತ್ತೊಯ್ಯುವುದಿಲ್ಲ. ಮಿನಾತಿಯ ಪತಿ ಹಾಗೂ ಅವರ ಮಗಳು ತೀರಿಕೊಂಡ ನಂತರ ನನ್ನ ಕುಟುಂಬದಂತೆ ಅವರನ್ನು ನೋಡಿಕೊಳ್ಳುತ್ತೇನೆ, ಮುಂದೆಯೂ ನೋಡಿಕೊಳ್ಳುವುದಾಗಿ ತಿಳಿಸಿದ್ದಾರೆ.
ಭುವನೇಶ್ವರ: ಮಹಿಳೆಯೊಬ್ಬರಯ ಬರೋಬ್ಬರಿ 25 ವರ್ಷ ಸೇವೆ ಮಾಡಿದ ಆಟೋ ಡ್ರೈವರ್ ಸೇವೆ ಮತ್ತು ಪ್ರಾಮಾಣಿಕತೆಯನ್ನು ಮೆಚ್ಚಿ ಬರೋಬ್ಬರಿ 1ಕೋಟಿ ರೂಪಾಯಿ ಮೌಲ್ಯದ ಮೂರು ಅಂತಸ್ತಿನ ಕಟ್ಟಡ ಹಾಗೂ ಚಿನ್ನಾಭರಣವನ್ನು ದಾನ ಮಾಡಿದ್ದಾರೆ.
ಒಡಿಶಾದ ಕಟಕ್‍ನಲ್ಲಿ ಈ ಘಟನೆ ನಡೆದಿದ್ದು, 63 ವರ್ಷದ ಮಿನಾತಿ ಪಟ್ನಾಯಿಕ್ ಕಳೆದ 25 ವರ್ಷಗಳಿಂದ 50 ವರ್ಷದ ಬುದ್ಧಾ ಸಮಾಲ್ ಅನ್ನೋ ರಿಕ್ಷಾ ಚಾಲಕನಿಗೆ 1ಕೋಟಿ ಮೌಲ್ಯದ ಮೂರು ಅಂತಸ್ತಿನ ಕಟ್ಟಡ ಹಾಗೂ ಚಿನ್ನಾಭರಣ ನೀಡಿದ್ದಾರೆ. ಕಳೆದ 25 ವರ್ಷಗಳಿಂದ ಬುದ್ಧಾ ಸಮಾಲ್, ಮಿನಾತಿ ಅವರನ್ನ ತಮ್ಮ ರಿಕ್ಷಾದಲ್ಲಿ ಕರೆದುಕೊಂಡು ಹೋಗುತ್ತಿದ್ದರಂತೆ. ಮಿನಾತಿ ಎಲ್ಲಿಗೆ ಹೋಗಬೇಕೆಂದರೂ ಬುದ್ಧಾ ಅವರು ಒಂದು ಮಿನಾತಿಯವರನ್ನು ತಮ್ಮ ರೀಕ್ಷಾದಲ್ಲಿ ಕರೆದುಕೊಂಡು ಹೋಗುತ್ತಿದ್ದರಂತೆ. ಸತತ ಇಷ್ಟ ವರ್ಷಗಳ ಕಾಲ ಅವರಸೇವೆ ಪಡೆದುಕೊಂಡಿದ್ದ ಮಿನಾತಿ, ಯಾರೂ ಊಹಿಸಲಾಗದಂಥ ಸಹಾಯವನ್ನು ಈಗ ಮಾಡಿದ್ದಾರೆ.
ನನ್ನ ಪತಿ ಕಳೆದ ವರ್ಷ ತಮ್ಮ 68ನೇ ವಯಸ್ಸಿನಲ್ಲಿ ಕ್ಯಾನ್ಸರ್‍ಗೆ ಬಲಿಯಾಗಿದ್ದರು. ಆಗ ನನ್ನ ಮಗಳು ಜನವರಿಯಲ್ಲಿ ಹಾರ್ಟ್ ಅಟ್ಯಾಕ್‍ನಿಂದ ಸಾವನ್ನಪ್ಪಿದಳು. ಹಾರ್ಟ್ ಪೇಷಂಟ್, ಹೈ ಬಿಪಿ ಕೂಡಾ ನನಗೆ ಇದೆ. ಹೀಗಿದ್ದೂ ಬುದ್ಧಾ ನನ್ನ ತಾಯಿ ಅಂತ ಕರೆಯುತ್ತಾರೆ. ಅವರ ಮಕ್ಕಳು ಅಜ್ಜಿ ಎನ್ನುತ್ತಾರೆ. ಬುದ್ಧಾ ಅವರ ಕುಟುಂಬ ನನ್ನ ಸೇವೆಯನ್ನು ತುಂಬಾ ಮುತುವರ್ಜಿಯಿಂದ ಮಾಡುತ್ತಾರೆ. ಅವರ ಕುಟಂಬ ನನ್ನ ಒತ್ತಾಯದ ಮೆರೆಗೆ ನನ್ನ ಸೇವೆ ಮಾಡಲು ನಮ್ಮ ಮನೆಯಲ್ಲಿಯೇ ಕೆಲ ತಿಂಗಳಿಂದ ಇದ್ದಾರೆ ಎಂದು ಮಿನಾತಿ ಹೇಳಿದ್ದಾರೆ. ಇದನ್ನೂ ಓದಿ: ಅಪ್ಪು ಮರಕೋತಿ ಆಟವಾಡುತ್ತಿದ್ದನ್ನು ಸದಾ ನೆನಪಿಸಿಕೊಳ್ಳುವ ಬಾಲ್ಯದ ಗೆಳೆಯ
ಪೋಸ್ಟ್ ಗ್ರಾಜ್ಯುಯೇಟ್ ಆಗಿರುವ ಮಿನಾತಿ ಅವರಿಗೆ ಮೂವರು ಸಹೋದರಿಯರು ಹಾಗೂ ಒಬ್ಬ ಸಹೋದರ ಇದ್ದಾರೆ. ಪ್ರಾರಂಭದಲ್ಲಿ ಅವರು ಕೊಂಚ ಬೇಸರ ವ್ಯಕ್ತಪಡಿಸಿದ್ದರೂ, ಮಿನಾತಿ ಅವರ ನಿರ್ಧಾರ ಗಟ್ಟಿಯಾಗಿದ್ದರಿಂದ ಈ ನಿರ್ಧಾರಕ್ಕೆ ಯಾವುದೇ ವಿರೋಧ ವ್ಯಕ್ತಪಡಿಸಲಿಲ್ಲವಂತೆ. ಇದನ್ನೂ ಓದಿ: 6 ದಿನಗಳ ಕಾಲ ನಡೆಯಲಿದೆ ಕತ್ರಿನಾ, ವಿಕ್ಕಿ ಮದುವೆ – ಯಾರಿಗೆಲ್ಲ ಇದೆ ಆಮಂತ್ರಣ?
ಬುದ್ಧಾ ಅವರೂ ಈ ರೀತಿ ಆಸ್ತಿ ದಾನ ಬೇಡ ಎಂದು ವಿರೋಧ ವ್ಯಕ್ತಪಡಿಸುತ್ತಿದ್ದರಂತೆ. ಆದರೆ ಅಮ್ಮ(ಮಿನಾತಿ) ಅವರ ನಿರ್ಧಾರ ಗಟ್ಟಿಯಾಗಿತ್ತು. ಅವರ ಒತ್ತಾಯಕ್ಕೆ ಮಣಿದು ಕೆನೆಗೂ ಈ ಆಸ್ತಿ ಮತ್ತು ಆಭರಣ ಸ್ವೀಕರಿಸಿದೆ ಎಂದು ಬಿದ್ಧಾ ಸಮಾಲ್ ಹೇಳಿದ್ದಾರೆ. ಇದನ್ನೂ ಓದಿ: ಅಪ್ಪು ಮರಕೋತಿ ಆಟವಾಡುತ್ತಿದ್ದನ್ನು ಸದಾ ನೆನಪಿಸಿಕೊಳ್ಳುವ ಬಾಲ್ಯದ ಗೆಳೆಯ
ಬೆಂಗಳೂರು: ಭೂಕಬಳಿಕೆದಾರರ ವಿರುದ್ಧದ ಕಾರ್ಯಾಚರಣೆಯನ್ನು ಮುಂದುವರಿಸಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಇಂದು ಜೆಪಿ ನಗರದ ಆಲಹಳ್ಳಿಯಲ್ಲಿ ಸುಮಾರು 100 ಕೋಟಿ ರೂಪಾಯಿ ಮೌಲ್ಯದ ತನ್ನ ಆಸ್ತಿಯನ್ನು ಮರುವಶಕ್ಕೆ ಪಡೆದುಕೊಂಡಿದೆ.
ಜೆಪಿ ನಗರ ಬಡಾವಣೆಯ ಆಲಹಳ್ಳಿಯಲ್ಲಿ ಬಿಡಿಎ ಸ್ವಾಧೀನಪಡಿಸಿಕೊಂಡಿದ್ದ ಸರ್ವೆ ಸಂಖ್ಯೆ 5/7, 6/1, 6/4, 6/5, 7/2, 3, 4 ಮತ್ತು 8 ರ 4 ಎಕರೆ 20 ಗುಂಟೆ ಜಾಗದಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿದ್ದ 40 ಶೆಡ್ ಗಳನ್ನು ಬಿಡಿಎ ದಕ್ಷಿಣ ವಲಯದ ಕಾರ್ಯಪಾಲಕ ಅಭಿಯಂತರ ಎಚ್.ಎಸ್.ಚುಂಚೇಗೌಡ ನೇತೃತ್ವದಲ್ಲಿ ತೆರವುಗೊಳಿಸಲಾಯಿತು. ಇದನ್ನೂ ಓದಿ: ನೂರು ದಿನಗಳ ಆಡಳಿತಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ: ಬಸವರಾಜ ಬೊಮ್ಮಾಯಿ
ಜೆಪಿ ನಗರ ಬಡಾವಣೆಯ 9 ನೇ ಹಂತದ ನಿರ್ಮಾಣಕ್ಕೆಂದು 1988 ರಲ್ಲಿ ಈ ಜಾಗವನ್ನು ಸ್ವಾಧೀನಪಡಿಸಿಕೊಳ್ಳುವ ಬಗ್ಗೆ ಪ್ರಾಥಮಿಕ ಅಧಿಸೂಚನೆಯನ್ನು ಬಿಡಿಎ ಹೊರಡಿಸಿತ್ತು. ಇದಾದ ಬಳಿಕ 1997 ರಲ್ಲಿ ಅಂತಿಮ ಅಧಿಸೂಚನೆಯನ್ನು ಹೊರಡಿಸಿ ಜಾಗವನ್ನು ಸ್ವಾಧೀನಕ್ಕೆ ತೆಗೆದುಕೊಂಡಿತ್ತು. ಆದರೆ, ಪಟ್ಟಭದ್ರ ಹಿತಾಸಕ್ತಿಗಳು ಮತ್ತು ಕೆಲವರು ತಾತ್ಕಾಲಿಕವಾಗಿ 40 ಶೆಡ್‍ಗಳನ್ನು ನಿರ್ಮಾಣ ಮಾಡಿ ಜಾಗ ತಮ್ಮದೆಂದು ಪ್ರತಿಪಾದಿಸಿದ್ದರು. ಇದರ ವಿರುದ್ಧ ಬಿಡಿಎ ನ್ಯಾಯಾಲಯದ ಮೆಟ್ಟಿಲೇರಿದ ಪರಿಣಾಮ ನ್ಯಾಯಾಲಯ ಬಿಡಿಎ ಪರವಾಗಿ ತೀರ್ಪು ನೀಡಿ, ಸದರಿ ಜಾಗವನ್ನು ವಶಪಡಿಸಿಕೊಳ್ಳುವಂತೆ ಇತ್ತೀಚೆಗೆ ಆದೇಶ ನೀಡಿತ್ತು. ಇದನ್ನೂ ಓದಿ: ಇದು ಹುಚ್ಚುತನವೋ ಅಥವಾ ದೇಶದ್ರೋಹವೋ – ಕಂಗನಾ ವಿರುದ್ಧ ವರುಣ್ ಗಾಂಧಿ ಕಿಡಿ
ನ್ಯಾಯಾಲಯದ ಆದೇಶದ ಮೇರೆಗೆ ಕಾರ್ಯಪಾಲಕ ಅಭಿಯಂತರ ಚುಂಚೇಗೌಡ, ಪೊಲೀಸ್ ವರಿಷ್ಠಾಧಿಕಾರಿ ಭಾಸ್ಕರ್, ಡಿವೈಎಸ್ ಪಿ ರವಿಕುಮಾರ್ ಸೇರಿದಂತೆ 75 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಭದ್ರತೆಯಲ್ಲಿ ಶೆಡ್ ಗಳನ್ನು 5 ಕ್ಕೂ ಅಧಿಕ ಜೆಸಿಬಿಗಳನ್ನು ಬಳಸಿ ತೆರವುಗೊಳಿಸಲಾಯಿತು. ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಮತ್ತೆ ಭಾರೀ ಸ್ಫೋಟದ ಸದ್ದು- ಭೂಕಂಪ ಭಯಕ್ಕೆ ಊರು ಬಿಡ್ತಿರೋ ಜನ!
ಅತಿಕ್ರಮಣ ತೆರವು ನಿರಂತರ ಪ್ರಕ್ರಿಯೆ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರು, ಬಿಡಿಎಗೆ ಸೇರಿದ ಹಲವಾರು ಆಸ್ತಿಗಳನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಇಂತಹ ಆಸ್ತಿಗಳನ್ನು ಮರು ವಶಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಕಳೆದ ಒಂದು ತಿಂಗಳಿಂದ ಆರಂಭಿಸಲಾಗಿದೆ. ಈ ಪ್ರಕ್ರಿಯೆ ಮುಂದುವರಿಯಲಿದೆ. ಹಲವಾರು ಬಡಾವಣೆಗಳಲ್ಲಿ ಬಿಡಿಎಗೆ ಸೇರಿದ ಸಾವಿರಾರು ಕೋಟಿ ರೂಪಾಯಿಗಳ ಮೌಲ್ಯದ ಆಸ್ತಿಗಳನ್ನು ಒತ್ತುವರಿ ಅಥವಾ ಭೂಕಬಳಿಕೆದಾರರು ಕಬಳಿಕೆ ಮಾಡಿದ್ದಾರೆ. ಅವರು ಎಷ್ಟೇ ಪ್ರಭಾವಿಗಳಾಗಿದ್ದರೂ ಕಾನೂನು ಪ್ರಕಾರ ಆಸ್ತಿಯನ್ನು ಮರು ಸ್ವಾಧೀನಕ್ಕೆ ತೆಗೆದುಕೊಳ್ಳಲಾಗುತ್ತದೆ ಎಂದು ಅವರು ಹೇಳಿದರು.
ನಿವೇಶನಗಳ ಹರಾಜು
ಬಿಡಿಎಗೆ ಸೇರಿದ ಸ್ವತ್ತುಗಳನ್ನು ವಶಪಡಿಸಿಕೊಂಡು ನಿವೇಶನಗಳನ್ನಾಗಿ ಅಭಿವೃದ್ಧಿಪಡಿಸಿ ಅವುಗಳನ್ನು ಸಾರ್ವಜನಿಕರಿಗೆ ಹರಾಜಿನ ಮೂಲಕ ಹಂಚಿಕೆ ಮಾಡಬೇಕೆಂದು ಇತ್ತೀಚೆಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ಈ ನಿರ್ದೇಶನದಂತೆ ಬಿಡಿಎ ಆಸ್ತಿಗಳನ್ನು ವಶಪಡಿಸಿಕೊಂಡು ಹಂತಹಂತವಾಗಿ ನಿವೇಶನಗಳನ್ನಾಗಿ ಅಭಿವೃದ್ಧಿಪಡಿಸಿ ಹರಾಜು ಪ್ರಕ್ರಿಯೆಯನ್ನು ನಡೆಸಲಾಗುತ್ತದೆ ಎಂದು ಹೇಳಿದರು.
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಪ್ತ, ಎ1 ಗುತ್ತಿಗೆದಾರ ಯುಬಿ ಶೆಟ್ಟಿ ನಿವಾಸದಲ್ಲಿ 70 ಕೋಟಿಗೂ ಹೆಚ್ಚು ಅಘೋಷಿತ ಆದಾಯ ಪತ್ತೆಯಾಗಿದೆ.
ಉಪಚುನಾವಣೆಯ ಹೊತ್ತಲ್ಲಿ ಅಕ್ಟೋಬರ್ 28ರಂದು ಧಾರವಾಡ ಮತ್ತು ಉಡುಪಿಯ ನಿವಾಸಗಳ ಮೇಲೆ ಐಟಿ ದಾಳಿ ಮಾಡಿತ್ತು. ಪ್ರಾಜೆಕ್ಟ್ ನಿರ್ಮಾಣದ ವೇಳೆ ನಕಲಿ ಬಿಲ್ ತೋರಿಸಿ ಕಬ್ಬಿಣ ಸೇರಿ ಹಲವು ಸಾಮಗ್ರಿ ಖರೀದಿ ಮಾಡಿದ್ದಾರೆ. 40ಕ್ಕೂ ಹೆಚ್ಚು ಬೋಗಸ್ ಉಪ ಗುತ್ತಿಗೆ ಕ್ಲೈಮ್ ಮಾಡಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಡಿಕೆ ಶಿವಕುಮಾರ್ ಆಪ್ತನ ಮನೆ ಮೇಲೆ ಐಟಿ ಅಧಿಕಾರಿಗಳ ದಾಳಿ
ಇತ್ತ ಅಕ್ಟೋಬರ್ 27ರಂದು ಹಸು, ಕುರಿ, ಕೋಳಿ ಸೇರಿ ಇತರೆ ಪ್ರಾಣಿಗಳ ಆಹಾರ ಉತ್ಪಾದನಾ ಘಟಕಗಳ ಮೇಲೂ ಐಟಿ ದಾಳಿ ನಡೆಸಿತ್ತು. ತಮಿಳುನಾಡು, ಕರ್ನಾಟಕ, ಕೇರಳದಲ್ಲಿ ಏಕಕಾಲಕ್ಕೆ 40 ಕಡೆ ರೇಡ್ ಮಾಡಲಾಗಿತ್ತು. ದಾಳಿ ವೇಳೆ 3.3 ಕೋಟಿ ರೂಪಾಯಿ ನಗದು, 300 ಕೋಟಿಗೂ ಅಧಿಕ ಅಕ್ರಮ ಆಸ್ತಿ ಪತ್ತೆಯಾಗಿದೆ.
ಮಂಡ್ಯ: ಹೆತ್ತವರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಡೆತ್ ನೋಟ್ ಬರೆದಿಟ್ಟು ಮಗ ಆತ್ಮಹತ್ಯೆ ಶರಣಾಗಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ನಾಗತೀಹಳ್ಳಿ ಗ್ರಾಮದಲ್ಲಿ ಜರುಗಿದೆ.
ಮೃತ ದುರ್ದೈವಿ ಗಿರೀಶ್(32) ಆಗಿದ್ದು, ತನ್ನ ಆತ್ಮಹತ್ಯೆಗೆ ಅಪ್ಪ ರಾಜು, ಅಮ್ಮ ದೇವಮಣಿ ಕಾರಣ ಎಂದು ಡೆತ್ ನೋಟ್ ಬರೆದಿಟ್ಟಿದ್ದಾರೆ. ಗಿರೀಶ್ ತಂದೆ ರಾಜು ನಿವೃತ್ತ ಸರ್ಕಾರಿ ಶಾಲೆ ಶಿಕ್ಷಕರಾಗಿದ್ದರೆ, ತಾಯಿ ದೇವಮಣಿ ಈಗಲೂ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. 11 ವರ್ಷದ ಹಿಂದೆ ತ್ರಿವೇಣಿ ಎಂಬಾಕೆಯನ್ನು ಗಿರೀಶ್ ಮದುವೆಯಾಗಿದ್ದ. ಇಷ್ಟು ವರ್ಷವಾದರೂ ಸಹ ಇವರಿಗೆ ಮಕ್ಕಳಾಗಿರಲಿಲ್ಲ. ಇದನ್ನೂ ಓದಿ: ಲಂಕೆಯಲ್ಲಿ ‘ಪಿಪಿಪಿ’ ಸಾಂಗ್ ಗುಂಗು – ಭರ್ಜರಿ ಸ್ಟೆಪ್ಸ್ ಹಾಕಿದ ಯೋಗಿ, ಕೃಷಿ ತಾಪಂಡ
ಹೀಗಾಗಿ ಅಪ್ಪ-ಅಮ್ಮ ಮಗ ಗಿರೀಶ್‍ಗೆ ಮಾನಸಿಕ ಹಿಂಸೆ ನೀಡಿದ್ದಾರೆ. ಅಲ್ಲದೇ ಆಸ್ತಿ ಕೊಟ್ಟಿರಲಿಲ್ಲ. ಜೊತೆಗೆ ವಾಸ ಮಾಡಲು ಮನೆ ಕೂಡ ನೀಡಿರಲಿಲ್ಲ ಎಂದು ಆರೋಪ ಮಾಡಿದ್ದಾರೆ. ತಾವು ಚೆಂದದ ಮನೆಯಲ್ಲಿ ವಾಸವಿದ್ದು, ಗಿರೀಶ್ ಮತ್ತು ಅವರ ಪತ್ನಿಗೆ ತಮ್ಮ ಮನೆಯ ಕೊಟ್ಟಿಯಲ್ಲಿ ವಾಸ ಮಾಡಲು ಬಿಟ್ಟಿದ್ದರು. ಮಕ್ಕಳಾಗಲಿಲ್ಲ ಎಂದು ದಿನೇ, ದಿನೇ ತಂದೆ-ತಾಯಿಗಳು ಗಿರೀಶ್ ಹಾಗೂ ಆತನ ಪತ್ನಿಯನ್ನು ಹಂಗಿಸುತ್ತಿದ್ದರು. ಇದರಿಂದ ಮನನೊಂದು ಗಿರೀಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದನ್ನೂ ಓದಿ: ಸಾಲಬಾಧೆ ತಾಳದೆ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ
ತನ್ನ ಸಾವಿಗೆ ಅಪ್ಪ, ಅಮ್ಮನ ಕಿರುಕುಳವೇ ಕಾರಣ ಎಂದು ಡೆತ್ ಬರೆದಿಟ್ಟು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗನ ಸಾವಿನ ನಂತರ ತಂದೆ-ತಾಯಿಗಳು ತಲೆ ಮರೆಸಿಕೊಂಡಿದ್ದು, ಸದ್ಯ ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಲ್ಕತ್ತಾ: ರಾಷ್ಟ್ರೀಯ ನಗದೀಕರಣ ಯೋಜನೆಯ ಮೂಲಕ ದೇಶದ ಆಸ್ತಿ ಮಾರಾಟಕ್ಕೆ ಇಳಿದಿರುವ ನರೇಂದ್ರ ಮೋದಿ ಇದು ಅವರ ಸ್ವಂತ ಆಸ್ತಿಯಲ್ಲ ಎಂಬ ವಿಷಯ ಅರಿವಿರಬೇಕು ಎಂದು ಕೇಂದ್ರ ಸರ್ಕಾರದ ವಿರುದ್ಧ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ.
ಎನ್‍ಎಂಪಿ ಯೋಜನೆಯ ಮೂಲಕ ದೇಶದ ಆಸ್ತಿಯನ್ನು ಮಾರಾಟಮಾಡಲು ಹೊರಟಿರುವ ಕೇಂದ್ರ ಸರ್ಕಾರದ ನಡೆ ಆಘಾತಕಾರಿಯಾಗಿದೆ. ಬಿಜೆಪಿ ಸರ್ಕಾರ ಆಸ್ತಿ ಮಾರಾಟದಿಂದ ಬರುವ ಹಣವನ್ನು ಚುನಾವಣೆಗಳಲ್ಲಿ ಬಳಸುತ್ತದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: 6 ಲಕ್ಷ ಕೋಟಿ ಸಂಗ್ರಹ ಗುರಿ – ಖಾಸಗಿಯವರಿಗೆ ಸಿಗಲಿದೆ ರೈಲು, ರಸ್ತೆ, ಗಣಿ
The Asset Monetisation programme is necessary for creating employment opportunities, thereby enabling high #economic growth and seamlessly integrating the rural and semi-urban areas for overall public welfare: FM @nsitharaman
ದೇಶಕ್ಕೆ ಸೇರಿದ ಆಸ್ತಿಯನ್ನು ಮಾರಾಟ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಎಲ್ಲರೂ ಒಟ್ಟಾಗಿ ಸೇರಿ ವಿರೋಧಿಸಲಿದ್ದಾರೆ. ಕೇಂದ್ರ ಸರ್ಕಾರಕ್ಕೆ ಅಥವಾ ಮೋದಿಗೆ ಬೇಕಾದಹಾಗೆ ಆಸ್ತಿ ಮಾರಾಟ ಮಾಡಲು ಇದು ಇವರ ಮನೆಯ ಸ್ವತ್ತಲ್ಲ. ಇವರಿಗೆ ನಾಚಿಕೆ ಆಗಬೇಕು ದೇಶದ ಆಸ್ತಿಯನ್ನು ಈ ರೀತಿಯಾಗಿ ಬಳಸಿಕೊಳ್ಳುತ್ತಿರುವುದಕ್ಕೆ. ಇವರಿಗೆ ಮನಸ್ಸು ಬಂದಂತೆ ಮಾರಾಟಮಾಡಲು ಯಾರು ಕೂಡ ಅಧಿಕಾರ ನೀಡಿಲ್ಲ. ಜನ ಈ ನಿರ್ಧಾರದ ವಿರುದ್ಧ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಗುಡುಗಿದರು. ಇದನ್ನೂ ಓದಿ: ಹುಬ್ಬಳ್ಳಿ ಏರ್‌ಪೋರ್ಟ್ ಖಾಸಗಿ ತೆಕ್ಕೆಗೆ – 130 ಕೋಟಿ ರೂ. ನಿರೀಕ್ಷೆ
ಬೀದರ್ : ನಗರದ ಸುಪ್ರಸಿದ್ಧ ಬಸವಗಿರಿಯ ಬಸವಸೇವಾ ಪ್ರತಿಷ್ಠಾನದ ಶರಣೆಯರ ಕಿತ್ತಾಟ ತಾರಕ್ಕೇರಿದೆ. ಅಕ್ಕ ಅನ್ನಪೂರ್ಣಾ ಹಾಗೂ ಡಾ. ಗಂಗಾಂಬಿಕೆ ನಡುವೆ ನಡೆದ ಜಗಳದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೆಲವು ದಿನಗಳಿಂದ ಬೂದಿಮುಚ್ಚಿದ ಕೆಂಡದಂತಿದ್ದ ಬಸವಗಿರಿಯ ಶರಣು ಉದ್ಯಾಣದಲ್ಲಿ ಆಂತರಿಕ ಕಚ್ಚಾಟವೀಗ ಬೀದಿಗೆ ಬಿದ್ದಿದೆ. ಪೂಜ್ಯ ಅಕ್ಕ ಅನ್ನಪೂರ್ಣಾ ಹಾಗೂ ಅಕ್ಕ ಡಾ. ಗಂಗಾಂಬಿಕೆ ಪಾಟೀಲ್ ಅವರ ನಡುವೆ ಆಗಾಗ ನಡೆಯುತ್ತಿದ್ದ ಸಮರವೀಗ ತಾರಕ್ಕೇರಿದ್ದು ಅಕ್ಕದ್ವಯರ ಭಕ್ತರಲ್ಲಿ ತಳಮಳ ಸೃಷ್ಟಿಸುವಂತೆ ಮಾಡಿದೆ.
ಕಳೆದ ಎರಡು ದಿನಗಳ ಹಿಂದೆ ಬಸವಗಿಯಲ್ಲಿ ಇಬ್ಬರ ನಡುವೆ ಜಗಳ ನಡೆಯುತ್ತಿದ್ದು, ಇವರು ಜಗಳ ಮಾಡುವ ದೃಶ್ಯವನ್ನು ಅಲ್ಲಿಯೇ ಇದ್ದ ಅವರ ಭಕ್ತರು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದು ಸಹಜವಾಗಿ ಅಕ್ಕ ಅನ್ನಪೂರ್ಣಾ ಹಾಗೂ ಡಾ. ಗಂಗಾಂಭಿಕಾಗೆ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಭಕ್ತರಲ್ಲಿ ಆತಂಕ ಹೆಚ್ಚಿಸುವಂತೆ ಮಾಡಿದೆ.
ಅಕ್ಕ ಅನ್ನಪೂರ್ಣಾ ದೀರ್ಘಕಾಲದ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಈ ಸಮಯವನ್ನು ನೋಡಿಕೊಂಡ ಕೆಲವು ಭಕ್ತರು ಅಕ್ಕ ಅನ್ನಪೂರ್ಣಾ ಅವರನ್ನು ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ, ಆ ಜಾಗದಲ್ಲಿ ಡಾ. ಗಂಗಾಂಬಿಕಾರನ್ನು ತಂದು ಅಧ್ಯಕ್ಷರನ್ನಾಗಿ ಮಾಡಿದ್ದರು. ಈ ವಿಚಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಕ್ಕ ಅನ್ನಪೂರ್ಣಾಗೆ ಗೊತ್ತಿರಲಿಲ್ಲ. ಅವರು ಗುಣಮುಖರಾಗಿ ಬಸವಗಿರಿಗೆ ಬರುತ್ತಿದ್ದಂತೆ ಈ ವಿಚಾರ ಗೊತ್ತಾಗಿದೆ. ಹೀಗಾಗಿ ನೀನು ಅಧ್ಯಕ್ಷ ಸ್ಥಾನವನ್ನು ನನಗೆ ಬಿಟ್ಟುಕೊಡಬೇಕು ಎಂದು ಅಕ್ಕ ಅನ್ನಪೂರ್ಣಾ ಪಟ್ಟುಹಿಡಿದ್ದಾರೆ. ಇದನ್ನೂ ಓದಿ:ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದ್ದ ಚಿರತೆ ಸೆರೆ