Tag: ಆಸ್ತಿ

  • ಆಸ್ತಿಗಾಗಿ ತಾಯಿಯ ಮೇಲೆ ಹಲ್ಲೆ ಮಾಡಿದ ಮಗ

    ಆಸ್ತಿಗಾಗಿ ತಾಯಿಯ ಮೇಲೆ ಹಲ್ಲೆ ಮಾಡಿದ ಮಗ

    ಅಮರಾವತಿ: ವ್ಯಕ್ತಿಯೊಬ್ಬ ತನ್ನ ತಾಯಿಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದ್ದು, ಈ ಘಟನೆ ಸದ್ಯ ಭಾರೀ ವೈರಲ್ ಆಗುತ್ತಿದೆ.

    ನಾಗಮಣಿ ಹಲ್ಲೆಗೊಳಗಾದ ಮಹಿಳೆ ಹಾಗೂ ಶೇಷು ಆರೋಪಿ. ಆಂಧ್ರಪ್ರದೇಶದ ಗುಂಟುರು ಜಿಲ್ಲೆಯ ತಾಡಪಲ್ಲಿಯ ಬ್ರಹ್ಮಾನಂದಪುರಂನಲ್ಲಿ ಈ ಘಟನೆ ನಡೆದಿದೆ. ವರ್ಷಗಳ ಹಿಂದೆ ಅಂದಿನ ಆಂಧ್ರ ಸರ್ಕಾರ ನಾಗಮಣಿ ಅವರ ಪತಿ ವೆಂಕಟೇಶ್ವರರಾವ್ ಅವರಿಗೆ ಭೂಮಿ ಮಂಜೂರು ಮಾಡಿತ್ತು. ಕಷ್ಟಪಟ್ಟು ಅವರು ಮನೆ ಕಟ್ಟಿದ್ದರು. ಆದರೆ ನಾಗಮಣಿ ಅವರ ಪತಿ ಮೂರು ವರ್ಷಗಳ ಹಿಂದೆ ನಿಧನರಾದರು. ಈ ದಂಪತಿಗೆ ಮಗ ಹಾಗೂ ಮಗಳು ಇದ್ದಾರೆ.

    ತಂದೆಯ ನಿಧನದ ನಂತರ ಬೇರೆ ಊರಿನಲ್ಲಿ ಕೆಲಸ ಮಾಡುತ್ತಿದ್ದ ಶೇಷು ಪತ್ನಿಯೊಂದಿಗೆ ತನ್ನ ಗ್ರಾಮಕ್ಕೆ ಬಂದು ವಾಸಿಸತೊಡಗಿನು. ಈ ಖುಷಿ ನಾಗಮಣಿಗೆ ಹೆಚ್ಚು ದಿನಗಳ ಕಾಲ ಉಳಿಯಲಿಲ್ಲ. ಅವಳಿಗೆ ಶೇಷು ದಿನನಿತ್ಯ ಆಸ್ತಿಗಾಗಿ ಕಿರುಕುಳ ನೀಡುತ್ತಿದ್ದ. ಜೊತೆ ತಾಯಿಯ ಮೇಲೆ ಅಮಾನುಷವಾಗಿ ವರ್ತಿಸುತ್ತಿದ್ದ.  ಇದನ್ನೂ ಓದಿ: ಭದ್ರಾವತಿಯಲ್ಲಿ ಕಮಲ ಅರಳಿಸೋಕೆ ಎಲ್ಲರೂ ದುಡಿಯೋಣ : ನಾರಾಯಣಗೌಡ

    POLICE JEEP

    ಇದನ್ನು ಗಮನಿಸಿದ ಸ್ಥಳೀಯರು ಈ ಹಿಂದೆ ಶೇಷುಗೆ ಛೀಮಾರಿ ಹಾಕಿದರೂ ವರ್ತನೆ ಬದಲಿಸಿಕೊಳ್ಳಲಿಲ್ಲ. ಇರಿಂದಾಗಿ ಸ್ಥಳೀಯರು ಪೊಲೀಸರಿಗೆ ಆತನ ವಿರುದ್ಧ ತಾಯಿಗೆ ಹಲ್ಲೆ ಮಾಡುತ್ತಿರುವ ಮಾಹಿತಿ ನೀಡಿದ್ದಾರೆ. ಇದರ ಆಧಾರದ ಮೇಲೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಶೇಷುವನ್ನು ವಶಕ್ಕೆ ಪಡೆದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ಸ್ಟಾರ್ ಕಪಲ್

  • ಆಸ್ತಿ ವಿಚಾರಕ್ಕೆ ನಡು ಬೀದಿಯಲ್ಲಿ ಸಂಬಂಧಿಕರ ಮಾರಾಮಾರಿ

    ಆಸ್ತಿ ವಿಚಾರಕ್ಕೆ ನಡು ಬೀದಿಯಲ್ಲಿ ಸಂಬಂಧಿಕರ ಮಾರಾಮಾರಿ

    ನವದೆಹಲಿ: ಆಸ್ತಿ ವಿಚಾರಕ್ಕೆ ಸಂಬಂಧಿಕರು ನಡು ಬೀದಿಯಲ್ಲಿ ಮಾರಾಮಾರಿ ನಡೆಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಪೊಲೀಸರು ಆರೋಪಿಗಳನ್ನು ಗುರುತಿಸಿ, ಅವರಲ್ಲಿ ಒಬ್ಬನನ್ನು ಬಂಧಿಸಿದ್ದಾರೆ.

    ನಡು ಬೀದಿಯಲ್ಲಿ ಹಗಲು ಹೊತ್ತಿನಲ್ಲಿಯೇ ದೆಹಲಿಯ ಉಸ್ಮಾನ್‍ಪುರ ಪ್ರದೇಶದಲ್ಲಿ ಜಗಳ ಆಡುತ್ತಿದ್ದವರನ್ನು ಪೊಲೀಸರು ಬಿಡಿಸಿ ಇದೀಗ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ಪಬ್ಲಿಕ್‌ ಟಿವಿ ಜ್ಞಾನದೀವಿಗೆ 2ನೇ ಆವೃತ್ತಿಗೆ ಬೊಮ್ಮಾಯಿ, ಸಿದ್ದರಾಮಯ್ಯ ಚಾಲನೆ

    ವೀಡಿಯೋದಲ್ಲಿ ನೆಲದ ಮೇಲೆ ಇರುವ ವ್ಯಕ್ತಿಯನ್ನು ತುಂಡಾಗಿರುವ ಮರದ ಕೋಲಿನಿಂದ ಹಿಗ್ಗಾಮುಗ್ಗ ಥಳಿಸಿದ್ದಾರೆ. ಈ ವೇಳೆ ವಯಸ್ಸಾದ ಮಹಿಳೆಯೊಬ್ಬಳು ವ್ಯಕ್ತಿಯನ್ನು ಹೊಡೆಯದಂತೆ ಮನವಿ ಮಾಡುತ್ತಿರುವುದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ.

    ವ್ಯಕ್ತಿ ಗಾಯಗೊಂಡಿದ್ದರೂ, ಎರಡು ಕಡೆಯ ಸಂಬಂಧಿಕರು ಪರಸ್ಪರ ಕಿತ್ತಾಡಿಕೊಳ್ಳುತ್ತಿದ್ದರೆ, ಜನ ಬಾಲ್ಕನಿಯಿಂದ ನೋಡುತ್ತಿರುತ್ತಾರೆ. ಈ ಜಗಳ ಶ್ಯಾಮವೀರ್ ಮತ್ತು ಜಗತ್ ಅವರ ಮಕ್ಕಳ ನಡುವೆ ನಡೆದಿದೆ ಎಂದು ಪೊಲೀಸರಿಗೆ ತನಿಖೆ ವೇಳೆ ತಿಳಿಸಿದ್ದಾರೆ. ಇದನ್ನೂ ಓದಿ: ಸಾವಿನಲ್ಲೂ ಸಾರ್ಥಕತೆ ಮೆರೆದ ವಧು-ಕಣ್ಣು, ಹೃದಯ, ಕಿಡ್ನಿ ದಾನ

    ಆಸ್ತಿ ವಿವಾದಕ್ಕೆ ಎರಡು ಮನೆಯವರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಈ ಹಿಂದೆ ಇಬ್ಬರು ಪರಸ್ಪರ ಆಸ್ತಿಗಾಗಿ ಪ್ರಕರಣ ದಾಖಲಿಸಿದ್ದಾರೆ. ಆದರೆ ಇಂದು ಜಗತ್ ಮತ್ತು ಇತರರು ಶ್ಯಾಮವೀರ್ ಮತ್ತು ಆತನ ಸಂಬಂಧಿಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸ್ ಹೇಳಿಕೆ ಹೇಳಿದ್ದಾರೆ.

  • ಮದುವೆ ಮಾಡಿಸಿಲ್ಲವೆಂದು ತಂದೆಯನ್ನೇ ಕೊಂದ ಪಾಪಿ ಮಗ

    ಮದುವೆ ಮಾಡಿಸಿಲ್ಲವೆಂದು ತಂದೆಯನ್ನೇ ಕೊಂದ ಪಾಪಿ ಮಗ

    ರಾಯಚೂರು: ಮದುವೆ ಮಾಡಿಸಿಲ್ಲ ಎನ್ನುವ ಕಾರಣಕ್ಕೆ ಮಗನೇ ತಂದೆಯನ್ನು ಕೊಲೆ ಮಾಡಿದ್ದಾನೆ. ಈ ಘಟನೆ ನಗರದ ಗೋಶಾಲಾ ರಸ್ತೆ ಬಳಿ ನಡೆದಿದೆ.

    ಬಸವರಾಜಪ್ಪ (75) ಮೃತನಾಗಿದ್ದಾನೆ. ಜಗದೀಶ್ ತಂದೆಯನ್ನು ಕೊಂದ ಆರೋಪಿಯಾಗಿದ್ದಾನೆ. ಇವರ ನಿವೃತ್ತ ಎಎಸ್‍ಐ ಆಗಿದ್ದಾರೆ. ತನ್ನ ಮದುವೆ ಮಾಡಿಸಿಲ್ಲ ಎನ್ನುವ ಕಾರಣಕ್ಕೆ ಮಗನೇ ತಂದೆಯನ್ನು ಕೊಲೆ ಮಾಡಿದ್ದಾನೆ.

    ಹಣಕಾಸು ಹಾಗೂ ಆಸ್ತಿ ವಿಚಾರಕ್ಕೆ ಆಗಾಗ ತಂದೆಯೊಂದಿಗೆ ಜಗಳವಾಡುತ್ತಿದ್ದ. ಹಣಕ್ಕಾಗಿ ಕಿರಿಕಿರಿ ಮಾಡುತ್ತಿದ್ದರಿಂದ ಮಗನಿಂದ ತಂದೆ, ತಾಯಿ ದೂರವಿದ್ದರು. ದೇವದುರ್ಗ ತಾಲೂಕಿನ ಗಬ್ಬೂರಿನಲ್ಲಿ ದೊಡ್ಡಮಗನ ಜೊತೆ ವಾಸವಾಗಿದ್ದರು. ಕಳೆದ ಕೆಲದಿನಗಳಿಂದ ರಾಯಚೂರು ನಗರದಲ್ಲಿರುವ ಮಗಳ ಮನೆಗೆ ಬಂದಿದ್ದ ಬಸವರಾಜಪ್ಪ ತಮ್ಮ ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ಹೋಗುವುದಾಗಿ ಹಾಗೂ ಮಗ ಜಗದೀಶ್‍ನನ್ನ ಮಾತನಾಡಿಸಿಕೊಂಡು ಬರುವುದಾಗಿ ಹೇಳಿ ಹೋಗಿದ್ದವರು ಶವವಾಗಿ ಪತ್ತೆಯಾಗಿದ್ದಾರೆ. ಇದನ್ನೂ ಓದಿ: ಮಂಡ್ಯ ವಿದ್ಯಾರ್ಥಿನಿಗೆ ಐ ಫೋನ್, ಸ್ಮಾರ್ಟ್‍ವಾಚ್ ಗಿಫ್ಟ್ ಕೊಟ್ಟ ಕಾಂಗ್ರೆಸ್ ಶಾಸಕ

    POLICE JEEP

    ಹಮಾಲಿ ಕೆಲಸ ಮಾಡಿಕೊಂಡಿದ್ದ ಜಗದೀಶ್ 35 ವರ್ಷ ವಯಸ್ಸಾದರೂ ನನಗೆ ಮದುವೆ ಮಾಡಿಲ್ಲ, ಆಸ್ತಿಯಲ್ಲಿ ಪಾಲುಕೊಡುವಂತೆ ಜಗಳ ಮಾಡುತ್ತಿದ್ದ. ಜಗದೀಶ್ ಮದ್ಯದ ಅಮಲಿನಲ್ಲಿ ತಲೆ ಮೇಲೆ ಕಲ್ಲು ಎತ್ತಿಹಾಕಿ ತಂದೆಯನ್ನೇ ಕೊಲೆಮಾಡಿದ್ದಾನೆ. ಮಗ ಕುಡಿತದ ಚಟಕ್ಕೆ ದಾಸನಾಗಿ ದುಂದುವೆಚ್ಚ ಮಾಡುತ್ತಿದ್ದರಿಂದ ಬಸವರಾಜಪ್ಪ ಮಗನಿಂದ ದೂರವಿದ್ದರು. ತಂದೆಯನ್ನೇ ಕೊಂದ ಪಾಪಿಮಗ ಆರೋಪಿ ಜಗದೀಶ್‍ನನ್ನ ಮಾರ್ಕೆಟ್ ಯಾರ್ಡ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: Hijab Row – ಮಂಡ್ಯ ವಿದ್ಯಾರ್ಥಿನಿಗೆ 5 ಲಕ್ಷ ರೂ. ಬಹುಮಾನ ಘೋಷಿಸಿದ ಜಮಾತೆ ಉಲೆಮಾ ಹಿಂದ್‌

  • ಆಸ್ತಿಗಾಗಿ ಬದುಕಿದ್ದ ಅಜ್ಜಿಯನ್ನು ದಾಖಲೆಗಳಲ್ಲಿ ಸಾಯಿಸಿದ ಸಂಬಂಧಿಕರು – ಡೆತ್ ಸರ್ಟಿಫಿಕೇಟ್ ಕೊಟ್ಟ ಅಧಿಕಾರಿ!

    ಆಸ್ತಿಗಾಗಿ ಬದುಕಿದ್ದ ಅಜ್ಜಿಯನ್ನು ದಾಖಲೆಗಳಲ್ಲಿ ಸಾಯಿಸಿದ ಸಂಬಂಧಿಕರು – ಡೆತ್ ಸರ್ಟಿಫಿಕೇಟ್ ಕೊಟ್ಟ ಅಧಿಕಾರಿ!

    ಚಿಕ್ಕಮಗಳೂರು: ಒಂದು ಎಕರೆ ಹದಿನಾರು ಗುಂಟೆ ಜಮೀನಿಗಾಗಿ ಬದುಕಿರುವ ಅಜ್ಜಿಯನ್ನು ಸಂಬಂಧಿಕರೇ ದಾಖಲೆಗಳಲ್ಲಿ ಸಾಯಿಸಿದ್ದು, ಇದಕ್ಕೆ ಅಧಿಕಾರಿಗಳು ಕೈಜೋಡಿಸಿರುವ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಕೊಪ್ಪ ಗ್ರಾಮದಲ್ಲಿ ನಡೆದಿದೆ.

    76 ವರ್ಷದ ಸಾರಮ್ಮ ದೈಹಿಕವಾಗಿ ಜೀವಂತವಾಗಿದ್ದರೂ ಸಂಬಂಧಿಕರು ಹಾಗೂ ಅಧಿಕಾರಿಗಳ ಎಡವಟ್ಟಿನಿಂದ ದಾಖಲೆಗಳಲ್ಲಿ ಸತ್ತ ನತದೃಷ್ಟ ಅಜ್ಜಿ. ಸಾರಮ್ಮರಿಗೆ ಬಾಳೆಕೊಪ್ಪ ಗ್ರಾಮದ ಸರ್ವೇ ನಂಬರ್ 26ರಲ್ಲಿ ಒಂದು ಎಕರೆ 16 ಗುಂಟೆ ಜಮೀನಿದೆ. ಅದರಲ್ಲಿ ರಬ್ಬರ್ ಹಾಗೂ ಬಾಳೆಗಿಡಗಳನ್ನು ಬೆಳೆದಿದ್ದರು. ಕೊರೊನಾ ಪಾಸಿಟಿವ್ ಬಂದಿದ್ದರಿಂದ ಜಮೀನನ್ನು ಸಂಬಂಧಿಕರಿಗೆ ಉಳುಮೆ ಮಾಡಲು ಹೇಳಿ ಮಗಳ ಮನೆಗೆ ಹೋಗಿದ್ದರು. ಅಜ್ಜಿ ಅತ್ತ ಹೋಗುತ್ತಿದ್ದಂತೆ ಸಂಬಂಧಿಕರು ನಕಲಿ ದಾಖಲೆ ಸೃಷ್ಟಿಸಿ ಅಜ್ಜಿಯ ಜಮೀನನ್ನು ಕಬಳಿಸಲು ಯತ್ನಿಸಿದ್ದಾರೆ. ಇದನ್ನೂ ಓದಿ: ಉಡುಪಿ, ಮಂಗಳೂರನ್ನು ತಾಲಿಬಾನ್ ಮಾಡಲು ಬಿಡಲ್ಲ – ಮೋದಿ ವರ್ಚಸ್ಸಿಗೆ ಕಳಂಕ ತರಲು ಕಾಂಗ್ರೆಸ್ ಯತ್ನ

    ಅಧಿಕಾರಿಗಳು ಕೂಡ ಮರಣ ಪ್ರಮಾಣ ಪತ್ರ ನೀಡಿದ್ದಾರೆ. ವಂಶವೃಕ್ಷ ಕೂಡ ಕೊಟ್ಟಿದ್ದಾರೆ. ಮಗಳ ಮನೆಯಿಂದ ಬಂದ ಸಾರಮ್ಮ ನ್ಯಾಯಬೆಲೆ ಅಂಗಡಿಗೆ ಪಡಿತರ ತರಲು ಹೋದಾಗ ನೀವು ಸತ್ತಿದ್ದೀರಾ, ನಿಮ್ಮ ರೇಷನ್ ಕಾರ್ಡ್ ಸ್ಥಗಿತಗೊಂಡಿದೆ ಎಂದು ಹೇಳಿದ್ದಾರೆ. ಸಾರಮ್ಮ ತಾಲೂಕು ಕಚೇರಿಗೆ ಬಂದು ವಿಚಾರಿಸಿದಾಗ ಪ್ರಕರಣ ಬಯಲಿಗೆ ಬಂದಿದೆ. ವೃದ್ಧೆ ಸಂಬಂಧಿ ಬಾಬು ಹಾಗೂ ಶ್ರೀಜಾ ನಕಲಿ ದಾಖಲೆ ಸೃಷ್ಟಿಸಿ ಪೌತಿ ಖಾತೆಗೂ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದಾರೆ. ನಕಲಿ ದಾಖಲೆ ಸೃಷ್ಟಿಸುವಾಗ ಪ್ರಕರಣ ಗ್ರಾಮ ಲೆಕ್ಕಾಧಿಕಾರಿ ಬಳಿಯೂ ಹೋಗಿತ್ತು. ಗ್ರಾಮ ಲೆಕ್ಕಾಧಿಕಾರಿ, ಅಜ್ಜಿ ಬದುಕಿರುವಾಗಲೇ ಯಾಕೆ ಈ ರೀತಿ ದಾಖಲೆ ತಂದಿದ್ದೀರಾ? ಎಂದು ಎಚ್ಚರಿಕೆ ನೀಡಿ, ಸಹಿ ಮಾಡದೆ ಕಳುಹಿಸಿದ್ದರು. ಸಾರಮ್ಮ ನಾನು ಕೂಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದೇನೆ. ದಯಮಾಡಿ ಅಧಿಕಾರಿಗಳು ನನಗೆ ನ್ಯಾಯ ಕೊಡಿಸಬೇಕು, ತಪ್ಪಿಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಹಿಜಬ್ ಪರ ಸಿದ್ದರಾಮಯ್ಯ ಬಣದ ಬ್ಯಾಟಿಂಗ್ – ಹೆಣ್ಮಕ್ಕಳ ವಿದ್ಯಾಭ್ಯಾಸ ತಡೆಗೆ ಹುನ್ನಾರದ ಆರೋಪ

    ಎನ್.ಆರ್.ಪುರ ತಹಶೀಲ್ದಾರ್ ಗೀತಾ, ಈ ಕೇಸ್ ನನ್ನ ಗಮನಕ್ಕೆ ಬಂದಿದೆ. ನೊಂದ ವೃದ್ಧೆಗೆ ನ್ಯಾಯ ಕೊಡಿಸುವ ಭರವಸೆ ನೀಡಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.

  • ಅಳಿಯನ ಆಸ್ತಿ ಮೇಲೆ ಅತ್ತೆಯ ಕಣ್ಣು – ಮನನೊಂದು ಅಳಿಯ ಆತ್ಮಹತ್ಯೆ

    ಅಳಿಯನ ಆಸ್ತಿ ಮೇಲೆ ಅತ್ತೆಯ ಕಣ್ಣು – ಮನನೊಂದು ಅಳಿಯ ಆತ್ಮಹತ್ಯೆ

    ಬೆಂಗಳೂರು/ನೆಲಮಂಗಲ: ಅಳಿಯನ ಆಸ್ತಿಯನ್ನು ಕಬಳಿಸುವ ದುರುದ್ದೇಶದಿಂದ ಸಂಚು ಹಾಕಿದ ಅತ್ತೆ ಪ್ರತಿನಿತ್ಯ ತನ್ನ ಮಗಳ ಪತಿಯನ್ನು ಮನೆಯಲ್ಲಿ ಕೂಡಿ ಹಾಕಿ ಟಾರ್ಚರ್ ಕೊಟ್ಟ ಹಿನ್ನೆಲೆ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಪೊಲೀಸ್ ಠಾಣಾ ವ್ಯಾಪ್ತಿಯ ತೋಟನಹಳ್ಳಿಯಲ್ಲಿ ನಡೆದಿದೆ.

    Nela mangala

    ಮೃತ ದುರ್ದೈವಿಯನ್ನು ಆನಂದ್ ಕುಮಾರ್ ಎಂದು ಗುರುತಿಸಲಾಗಿದ್ದು, ಇನ್ನೂ ಅತ್ತೆಯ ಜೊತೆಗೆ ತನ್ನ ಪತ್ನಿ ನೀಲಮ್ಮ ಕೂಡ ಕೈ ಜೋಡಿಸಿ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಅತ್ತೆ ಗಂಗಮ್ಮ, ಬಾಮೈದ ಗಂಗರಾಜು ಹೆಸರು ಪ್ರಸ್ತಾಪಿಸಿ ಮನನೊಂದು ಆನಂದ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದನ್ನೂ ಓದಿ: ಹಿಜಬ್ ನೆಪವೊಡ್ಡಿ ಮುಸ್ಲಿಂ ಹೆಣ್ಮಕ್ಕಳ ಶಿಕ್ಷಣಕ್ಕೆ ತಡೆ ಒಡ್ಡಲಾಗ್ತಿದೆ: ಮುಫ್ತಿ

    Nela mangala

    ಆತ್ಮಹತ್ಯೆಗೂ ಮೊದಲು ತನ್ನ ಮೊಬೈಲ್‍ನ ವೀಡಿಯೋದಲ್ಲಿ ತನಗೆ ನೀಡಿದ್ದ ಹಿಂಸೆ ಬಗ್ಗೆ ಮಾತನಾಡಿರುವ ಮೃತ ವ್ಯಕ್ತಿ ಜೊತೆಗೆ ತನ್ನ ಆಸ್ತಿಯನ್ನು ತಮ್ಮನ ಮಕ್ಕಳಿಗೆ ನೀಡಬೇಕು ಎಂದು ಡೆತ್ ನೋಟ್‍ನಲ್ಲಿ ಉಲ್ಲೇಖ ಮಾಡಿದ್ದಾರೆ ಮತ್ತು ಯಾವುದೇ ಕಾರಣಕ್ಕೂ ಆಸ್ತಿ ಹೆಂಡತಿ ಹಾಗೂ ಅತ್ತೆಗೆ ಸಿಗದಂತೆ ಕಾನೂನು ರೀತಿಯಲ್ಲಿ ಅವರ ಮೇಲೆ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ. ಈ ಸಂಬಂಧ ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

  • 38 ಕೋಟಿ ಮೌಲ್ಯದ ಆಸ್ತಿಯನ್ನು ಶಿಲ್ಪಾ ಶೆಟ್ಟಿಗೆ ವರ್ಗಾಯಿಸಿದ ರಾಜ್ ಕುಂದ್ರಾ

    38 ಕೋಟಿ ಮೌಲ್ಯದ ಆಸ್ತಿಯನ್ನು ಶಿಲ್ಪಾ ಶೆಟ್ಟಿಗೆ ವರ್ಗಾಯಿಸಿದ ರಾಜ್ ಕುಂದ್ರಾ

    ಮುಂಬೈ: ಉದ್ಯಮಿ ರಾಜ್ ಕುಂದ್ರಾ 38.5 ಕೋಟಿ ಮೌಲ್ಯದ 5 ಫ್ಲಾಟ್‌ಗಳನ್ನು ತಮ್ಮ ಪತ್ನಿ ಶಿಲ್ಪಾ ಶೆಟ್ಟಿ ಹೆಸರಿಗೆ ವರ್ಗಾಯಿಸಿದ್ದಾರೆ.

    ಕಳೆದ ವರ್ಷ ಉದ್ಯಮಿ ರಾಜ್ ಕುಂದ್ರಾ ಅಶ್ಲೀಲ ಚಿತ್ರ ನಿರ್ಮಾಣ ಮಾಡಿದ ಆರೋಪದ ಮೇಲೆ ಬಂಧಿಯಾಗಿದ್ದರು. ಈ ಸಂದರ್ಭದಲ್ಲಿ ನಟಿ ಶಿಲ್ಪಾ ಶೆಟ್ಟಿ ತನ್ನ ಕಷ್ಟ ಕಾಲದಲ್ಲಿ ಗೌಪ್ಯತೆಯನ್ನು ಗೌರವಿಸುವಂತೆ ಜನರಲ್ಲಿ ಕೇಳಿಕೊಂಡಿದ್ದರು. ಇದೀಗ 6 ತಿಂಗಳುಗಳ ಬಳಿಕ ರಾಜ್ ಕುಂದ್ರಾ ತಮ್ಮ 38.5 ಕೋಟಿ ಮೌಲ್ಯದ ಆಸ್ತಿಯನ್ನು ಪತ್ನಿ ಹೆಸರಿಗೆ ವರ್ಗಾಯಿಸಿದ್ದಾರೆ. ಇದನ್ನೂ ಓದಿ: ನಾನು ರಾಖಿಯನ್ನು ಈ ಕಾರಣಕ್ಕೆ ಇಷ್ಟಪಡುತ್ತೇನೆ- ಹಾಡಿ ಹೊಗಳಿದ ರಾಜ್ ಕುಂದ್ರಾ

    Squarefeatindia.com (ಸ್ಕ್ವಾರ್‌ಫೀಟ್ ಡಾಟ್ ಕಾಂ)ನ ನೋಂದಣಿ ದಾಖಲೆಗಳ ಪ್ರಕಾರ ಉದ್ಯಮಿ ರಾಜ್ ಕುಂದ್ರಾ ತಮ್ಮ ಪತ್ನಿಯ ಹೆಸರಿಗೆ 38.5 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಬರೆದಿರುವುದಾಗಿ ಉಲ್ಲೇಖವಾಗಿದೆ. ಜುಹುನಲ್ಲಿರುವ ಓಷನ್ ವ್ಯೂ ಹೆಸರಿನ ಕಟ್ಟಡದಲ್ಲಿನ ಒಟ್ಟು 5 ಫ್ಲಾಟ್‌ಗಳನ್ನು ಪತ್ನಿಯ ಹೆಸರಿಗೆ ವರ್ಗಾಯಿಸಿದ್ದಾರೆ ಎಂದು Squarefeatindia.com ನ ಸಂಸ್ಥಾಪಕ ವರುಣ್ ಸಿಂಗ್ ತಿಳಿಸಿದ್ದಾರೆ. ಇದನ್ನೂ ಓದಿ:  ‘ನಿಮ್ಮ ಶಾಯರಿ ಏಕೆ ಕೆಟ್ಟದಾಗಿದೆ’ – ಟ್ರೋಲಿಗರ ಪ್ರಶ್ನೆಗೆ ಸಾರಾ ಖಡಕ್ ಉತ್ತರ

    ಸದ್ಯ ಹಲವು ಸಿನಿಮಾ ಹಾಗೂ ರಿಯಾಲಿಟಿ ಶೋ ಗಳಲ್ಲಿ ಬ್ಯೂಸಿಯಾಗಿರುವ ಶಿಲ್ಪಾ ಹೊಸದಾಗಿ 38.5 ಕೋಟಿ ಮೌಲ್ಯದ ಆಸ್ತಿಗೆ ಒಡತಿಯಾಗಿದ್ದಾರೆ.

  • ಮಗನ ಜೊತೆ ಸೇರಿ ಪತಿಯನ್ನೇ ಅಪಹರಿಸಿ 22 ಬಾರಿ ಇರಿದು ಕೊಂದ್ಳು..!

    ಮಗನ ಜೊತೆ ಸೇರಿ ಪತಿಯನ್ನೇ ಅಪಹರಿಸಿ 22 ಬಾರಿ ಇರಿದು ಕೊಂದ್ಳು..!

    ಬೆಂಗಳೂರು: ಪತ್ನಿಯೊಬ್ಬಳು 20 ಗುಂಟೆ ಜಮೀನಿಗಾಗಿ ಮಗನ ಜೊತೆಗೆ ಸೇರಿ ಪತಿಯನ್ನೇ ಕಿಡ್ನಾಪ್ ಮಾಡಿ ಚಾಕುವಿನಿಂದ ಇರಿದು ಕೊಂದ ಘಟನೆ ನಗರದ ಹೊರವಲಯದ ಬನ್ನೇರುಘಟ್ಟದಲ್ಲಿ ನಡೆದಿದೆ.

    ಚನ್ನಿಗರಾಯಪ್ಪ ಕೊಲೆಯಾದ ವ್ಯಕ್ತಿ. ಮೃತನು ಎರಡು ಮದುವೆ ಆಗಿದ್ದು, ಇಬ್ಬರು ಪತ್ನಿಯರಿಗೆ ಆಸ್ತಿ ಹಂಚಿಕೆ ಮಾಡುವ ವೇಳೆ ಇಪ್ಪತ್ತು ಗುಂಟೆ ಜಮೀನು ವಿಚಾರವಾಗಿ ವಿವಾದವಾಗಿತ್ತು. ಇದೇ ವಿಚಾರಕ್ಕೆ ಆರೋಪಿಗಳು ಮತ್ತು ಚನ್ನಿಗರಾಯಪ್ಪನ ಮಧ್ಯೆ ಗಲಾಟೆ ನಡೆದು ಪತಿಯನ್ನು ಕಿಡ್ನಾಪ್ ಮಾಡಿದ್ದರು. ಇದನ್ನೂ ಓದಿ: ಅಪ್ರಾಪ್ತ ಬಾಲಕಿಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ದಂಧೆ – ಇಬ್ಬರು ಮಹಿಳೆಯರ ಜೊತೆ ಓರ್ವ ಅರೆಸ್ಟ್

    ಕಿಡ್ನಾಪ್ ಮಾಡಿ ಕಾರಿನಲ್ಲಿ 22 ಬಾರಿ ಚಾಕುವಿನಿಂದ ಕೊಲೆ ಮಾಡಿ ಬೆಂಕಿ ಹಾಕಿ ಸುಟ್ಟಿದ್ದಾರೆ. ಈ ಸಂಬಂಧ ಬನ್ನೇರುಘಟ್ಟ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಚನ್ನಿಗರಾಯಪ್ಪ ಪತ್ನಿ ಯಶೋಧ, ಮಗ ನಿಖಿಲ್, ಮಂಜುನಾಥ್ ಹಾಗೂ ವಿಶ್ವಾಸ್ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಅನೈತಿಕ ಸಂಬಂಧ ಶಂಕೆ- ನೀರು ಅಂತ ಎಣ್ಣೆ ಕಾಯಿಸಿ ಪತ್ನಿ ಮೇಲೆ ಎರಚಿದ್ದವ ಅರೆಸ್ಟ್

  • 2019-20ರ ಆರ್ಥಿಕ ವರ್ಷದಲ್ಲಿ ಶೇ.67 ಆಸ್ತಿ ಹೆಚ್ಚಳ – ಬಿಜೆಪಿ ದೇಶದ ಶ್ರೀಮಂತ ಪಕ್ಷ

    2019-20ರ ಆರ್ಥಿಕ ವರ್ಷದಲ್ಲಿ ಶೇ.67 ಆಸ್ತಿ ಹೆಚ್ಚಳ – ಬಿಜೆಪಿ ದೇಶದ ಶ್ರೀಮಂತ ಪಕ್ಷ

    ನವದೆಹಲಿ: ದೇಶದಲ್ಲೇ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಅತ್ಯಂತ ಶ್ರೀಮಂತ ಪಕ್ಷವಾಗಿ ಹೊರಹೊಮ್ಮಿದೆ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR)  ಪ್ರಕಾರ, 2019-20ರಲ್ಲಿ ಬಿಜೆಪಿ 4,847.78 ಕೋಟಿ ಆಸ್ತಿಯನ್ನು ಘೋಷಿಸಿ ದೇಶದ ಶ್ರೀಮಂತ ಪಕ್ಷ ಎನಿಸಿಕೊಂಡಿದೆ.

    2018-19ರಲ್ಲಿ ಬಿಜೆಪಿ 2,904.18 ಕೋಟಿ ಆಸ್ತಿ ಘೋಷಿಸಿತ್ತು. 2019-2020ರಲ್ಲಿ 4,847.78 ಕೋಟಿ ಆಸ್ತಿಯನ್ನು ಘೋಷಿಸಿ ಶೇ.67ರಷ್ಟು ಆಸ್ತಿಯನ್ನು ಹೆಚ್ಚಳ ಮಾಡಿಕೊಂಡಿದೆ. ಎಡಿಆರ್ ಪ್ರಕಾರ, 7 ರಾಷ್ಟ್ರೀಯ ಪಕ್ಷಗಳ ಒಟ್ಟು ಆಸ್ತಿ 6,988.57 ಕೋಟಿ ಮತ್ತು 44 ಪ್ರಾದೇಶಿಕ ರಾಜಕೀಯ ಪಕ್ಷಗಳ ಒಟ್ಟು ಆಸ್ತಿ 2,129.38 ಕೋಟಿ ರೂಪಾಯಿ ಆಗಿದೆ. ಬಿಜೆಪಿ ಆಸ್ತಿ ಗಳಿಕೆಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಬಹುಜನ ಸಮಾಜ ಪಕ್ಷ (ಬಿಎಸ್‍ಪಿ) ಎರಡನೇಯ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿದೆ. ಬಿಎಸ್‍ಪಿ ಬಳಿ 698.33 ಕೋಟಿ (9.99%) ಆಸ್ತಿ ಇರುವುದಾಗಿ ತಿಳಿಸಿದೆ. ಮೂರನೇ ಸ್ಥಾನದಲ್ಲಿ ಕಾಂಗ್ರೆಸ್  ಪಕ್ಷವಿದ್ದು, 588.16 ಕೋಟಿ (8.42%) ಮೌಲ್ಯದ ಆಸ್ತಿಯನ್ನು ದಾಖಲಿಸಿಕೊಂಡಿದೆ. ಇದನ್ನೂ ಓದಿ: ಬಿಜೆಪಿಯವರು ಎಂಜಲು ಹಚ್ಚಿ ಮಾಡಿದ ಪ್ರಚಾರದಿಂದ ಕೊರೊನಾ ಹೆಚ್ಚಳ: ಅಖಿಲೇಶ್

    ಪ್ರಾದೇಶಿಕ ಪಕ್ಷಗಳ ಆಸ್ತಿ ವಿವರ:
    ಪ್ರಾದೇಶಿಕ ಪಕ್ಷಗಳ ಪೈಕಿ ಸಮಾಜವಾದಿ ಪಕ್ಷ (SP) 563.47 ಕೋಟಿ (26.46%) ಆಸ್ತಿ ದಾಖಲಿಸಿಕೊಂಡು ಮೊದಲ ಸ್ಥಾನ ಪಡೆದುಕೊಂಡಿದೆ. ನಂತರ ತೆಲಂಗಾಣ ರಾಷ್ಟ್ರ ಸಮಿತಿ (TRS) 301.47 ಕೋಟಿ ಆಸ್ತಿ ಘೋಷಿಸಿ ಎರಡನೇ ಸ್ಥಾನ, ಮೂರನೇ ಸ್ಥಾನದಲ್ಲಿ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (AIADMK) 267.61 ಕೋಟಿ ಎಂದು ಎಡಿಆರ್ ವರದಿ ಮಾಡಿದೆ. ಈ ವರದಿಯ ಪ್ರಕಾರ ಏಳು ಪಕ್ಷಗಳಾದ ಬಿಜೆಪಿ, ಬಿಎಸ್‍ಪಿ, ಕಾಂಗ್ರೆಸ್, ಸಿಪಿಎಂ, ಎಐಟಿಸಿ, ಸಿಪಿಐ ಮತ್ತು ಎನ್‍ಸಿಪಿ ಪಕ್ಷಗಳ ಆಸ್ತಿಯಲ್ಲಿ ಹೆಚ್ಚಳ ವಾಗಿದೆ. ಇದನ್ನೂ ಓದಿ: ಸ್ಯಾಂಡಲ್‍ವುಡ್ ನಟ ಕಂ ನಿರ್ದೇಶಕನ ವಿರುದ್ಧ ಅತ್ಯಾಚಾರ ಪ್ರಕರಣ

    ರಾಷ್ಟ್ರೀಯ ಪಕ್ಷಗಳ ವಾರ್ಷಿಕವಾಗಿ ಹೆಚ್ಚಳ ಪಟ್ಟಿ:
    2018-19 ರಲ್ಲಿ ಬಿಜೆಪಿ 2,904.19 ಕೋಟಿ ಆಸ್ತಿಯನ್ನು ಘೋಷಿಸಿತ್ತು. ಇದು 2019-20ರ ಅವದಿಯಲ್ಲಿ ಶೇ.67ರಷ್ಟು ಏರಿಕೆ ಕಂಡು 4,847.78 ತಲುಪಿದೆ. ಇದೇ ಅವದಿಯಲ್ಲಿ ಕಾಂಗ್ರೆಸ್ ತನ್ನ ಆಸ್ತಿ 928.84 ಕೋಟಿಯಿಂದ 588.16ಕ್ಕೆ ಕುಸಿತ ಕಂಡಿದೆ. ಬಿಎಸ್‍ಪಿ 738 ಕೋಟಿಯಿಂದ 698.33 ಕೋಟಿಗೆ ಇಳಿಕೆ ಕಂಡಿದೆ. ಇದನ್ನೂ ಓದಿ: IPS ರವಿ ಚೆನ್ನಣ್ಣವರ್ ವರ್ಗ ಆದೇಶಕ್ಕೆ ಬ್ರೇಕ್

    ಆಸ್ತಿ ಲೆಕ್ಕಾಚಾರ ಮೂಲ:
    ರಾಜಕೀಯ ಪಕ್ಷಗಳು ಪ್ರಮುಖ 6 ಅಂಶಗಳಿಂದ ತಮ್ಮ ಆಸ್ತಿಯ ಲೆಕ್ಕಾಚಾರ ಕೊಡುತ್ತದೆ. ಸ್ಥಿರ ಆಸ್ತಿ, ಸಾಲ, ಮುಂಗಡ ಸಾಲ, ಠೇವಣಿ, ಎಫ್‍ಡಿಆರ್, ಟಿಡಿಎಸ್ ಮತ್ತು ಇತರ ಮೂಲಗಳ ಪ್ರಕಾರ ಆಸ್ತಿ ಘೋಷಿಸುತ್ತದೆ. ರಾಷ್ಟ್ರೀಯ ಪಕ್ಷಗಳು ಘೋಷಿಸಿರುವ ಆಸ್ತಿಯಲ್ಲಿ ಠೇವಣಿ ಮೂಲಕ 5,970.59 ಕೋಟಿ ಆಸ್ತಿಯನ್ನು ಇಟ್ಟುಕೊಂಡಿವೆ ಎಂದು ವರದಿಯಲ್ಲಿ ಸ್ಪಷ್ಟವಾಗಿದೆ.

  • ಪಾರಿವಾಳಗಳ ಹೆಸರಿನಲ್ಲಿ ಕೋಟ್ಯಂತರ ರೂ.ಮೌಲ್ಯದ ಆಸ್ತಿ!- ಕಾರಣವೇನು ಗೊತ್ತಾ?

    ಪಾರಿವಾಳಗಳ ಹೆಸರಿನಲ್ಲಿ ಕೋಟ್ಯಂತರ ರೂ.ಮೌಲ್ಯದ ಆಸ್ತಿ!- ಕಾರಣವೇನು ಗೊತ್ತಾ?

    ರಾಜಸ್ಥಾನ: ಮಾನವರು ಆಸ್ತಿ ಮಾಡುವುದನ್ನು ನಾವು ಕೇಳಿದ್ದೇವೆ, ಆದರೆ ಪ್ರಾಣಿ ಪಕ್ಷಿಗಳ ಹೆಸರಿನಲ್ಲೂ ಆಸ್ತಿ ಮಾಡಿರುವುದನ್ನು ಕೇಳಿದ್ದೀರ. ರಾಜಸ್ಥಾನದ ನಾಗ್ಪುರ ಜಿಲ್ಲೆಯ ಜಸನಗರ್ ಊರಿನಲ್ಲಿರುವ ಪಾರಿವಾಳಗಳ ಹೆಸರಿನಲ್ಲಿ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಇದೆ.

    ಪಾರಿವಾಳಗಳ ಹೆಸರಿನಲ್ಲಿ 27 ಅಂಗಡಿಗಳು, 126 ದೊಡ್ಡ ಭೂಮಿ, ಬ್ಯಾಂಕ್‍ನಲ್ಲಿ 30 ಲಕ್ಷ ರೂ ಹಣ ಸೇರಿದಂತೆ ಪಾರಿವಾಳಗಳ ಹೆಸರಿನಲ್ಲಿ 470 ಹಸುಗಳಿರುವ ಒಂದು ಗೋಶಾಲೆಯನ್ನೂ ನಡೆಸಲಾಗುತ್ತಿದೆ. ಇದನ್ನೂ ಓದಿ: ಉತ್ತರಾಖಂಡದಲ್ಲಿ ಡಿಜಿಟಲ್ ರ‍್ಯಾಲಿಗಳಿಗೆ ಬಿಜೆಪಿ ಸಂಪೂರ್ಣ ತಯಾರಿ ನಡೆಸಿದೆ: ಅಜಯ್ ಭಟ್

    40 ವರ್ಷಗಳ ಹಿಂದೆ ಗುರು ಮುರುಧರ್ ಕೇಸರಿ ಎನ್ನುವ ಗುರುವಿನಿಂದ ಪ್ರೇರಣೆ ಪಡೆದ ಮಾಜಿ ಸರಪಂಚ್ ರಾಮದಿನ್ ಚೋಟಿಯಾ ಕಬುವಾನ್ ಎನ್ನುವ ಟ್ರಸ್ಟ್ ಪಾರಿವಾಳಗಳ ರಕ್ಷಣೆಗಾಗಿ ಸ್ಥಾಪಿಸಿದರು. ಈ ಮೂಲಕ ಪಾರಿವಾಗಳಿಗೆ ಪ್ರತಿದಿನ ನೀರು ಮತ್ತು ಆಹಾರ ಧಾನ್ಯಗಳ ಪೂರೈಕೆ ಮಾಡಲಾಗಿತ್ತದೆ. ಟ್ರಸ್ಟ್ ಮೂಲಕ 27 ಅಂಗಡಿಗಳನ್ನು ನಿರ್ಮಿಸಿ ಅದರಿಂದ ಬಂದ ಆದಾಯದ ಮೂಲಕ ಪಾರಿವಾಳಗಳಿಗೆ 3 ಚೀಲ ಆಹಾರ ಧಾನ್ಯಗಳನ್ನು ನೀಡಲಾಗುತ್ತದೆ. ಇದನ್ನೂ ಓದಿ: ಹಿಮದಿಂದ ಆವೃತವಾದ ಫೋಟೋ ಶೇರ್ ಮಾಡಿ ‘ಭೂಮಿಯ ಮೇಲಿನ ಸ್ವರ್ಗ’ ಎಂದ ರೈಲ್ವೇ ಸಚಿವ

    ಪಾರಿವಾಳಗಳ ಬಳಿ ಇದೆ ಲಕ್ಷಾಂತರ ರೂಪಾಯಿ: 3 ಚೀಲ ಭತ್ತವನ್ನು 4 ಸಾವಿರ ರೂ ಖರ್ಚಿನಲ್ಲಿ ಪಾರಿವಾಳಗಳಿಗೆ ನೀಡಲಾಗುತ್ತದೆ ಇನ್ನು 470 ಹಸುಗಳಿರುವ ಗೋಶಾಲೆಗೂ ಆಹಾರ ಪೂರೈಸಲಾಗುತ್ತದೆ.  ಟ್ರಸ್ಟ್‌ಗೆ ಅಂಗಡಿಗಳ ಬಾಡಿಗೆಯಿಂದ ತಿಂಗಳಿಗೆ 80 ಸಾವಿರ ರೂ. ಆದಾಯ ಬರುತ್ತದೆ. ಅಲ್ಲದೆ 126 ಬಿಘಾ ಭೂಮಿ ಸ್ಥಿರಾಸ್ತಿಯಾಗಿದೆ. ಎಲ್ಲ ಖರ್ಚಿನ ಬಳಿಕ ಪಾರಿವಾಳಗಳ ರಕ್ಷಣೆಗೆ ಉಳಿಸಿರುವ ಹಣ ಈಗ ಒಟ್ಟು 30 ಲಕ್ಷ ರೂ ಆಗಿದೆ ಎಂದು ಟ್ರಸ್ಟ್ ಮಾಹಿತಿ ನೀಡಿದೆ. ಇದನ್ನೂ ಓದಿ: ಬಿಹಾರ ಸಿಎಂ ನಿತೀಶ್ ಕುಮಾರ್‌ಗೆ ಕೊರೊನಾ ಪಾಸಿಟಿವ್

    ಉದ್ದೇಶವೇನು?: ಊರಿನ ಜನ ಪಾರಿವಾಳಗಳ ರಕ್ಷಣೆಗೆ ಬಹಿರಂಗವಾಗಿಯೇ ದಾನ ಮಾಡುತ್ತಿದ್ದಾರೆ. ಅದೆಲ್ಲ ಹಣವನ್ನು ಪಾರಿವಾಳಗಳಿಗೆ ನೀರಿನ ಕೊರತೆಯಾಗದಂತೆ ಮಾಡಲು ನಿರ್ಮಿಸಿದ ಅಂಗಡಿಗಳಿಗೆ ವಿನಿಯೋಗಿಸಲಾಗಿದೆ. ಇಂದು ಈ ಅಂಗಡಿಗಳಿಂದ ತಿಂಗಳಿಗೆ 9 ಲಕ್ಷ ರೂ ಆದಾಯ ಬರುತ್ತದೆ. ಈ ಹಣದಿಂದ ಪಾರಿವಾಳಗಳ ರಕ್ಷಣೆ ಮಾಡಲಾಗುತ್ತಿದೆ.

  • ಕಿರುಕುಳದಿಂದ ಬೇಸತ್ತು ಮಕ್ಕಳಿಂದ ಮರಳಿ ಆಸ್ತಿ ಪಡೆದುಕೊಳ್ಳುವಲ್ಲಿ ವೃದ್ಧ ತಾಯಿ ಯಶಸ್ವಿ!

    ಕಿರುಕುಳದಿಂದ ಬೇಸತ್ತು ಮಕ್ಕಳಿಂದ ಮರಳಿ ಆಸ್ತಿ ಪಡೆದುಕೊಳ್ಳುವಲ್ಲಿ ವೃದ್ಧ ತಾಯಿ ಯಶಸ್ವಿ!

    ಹಾವೇರಿ: ಆಸ್ತಿ ತಮ್ಮ ಹೆಸರಿಗೆ ಮಾಡಿಕೊಂಡು ಹೆತ್ತ ತಾಯಿಯನ್ನೇ ಮನೆಯಿಂದ ಹೊರಹಾಕಿದ್ದ ಮಕ್ಕಳ ವಿರುದ್ಧ ಹೋರಾಟ ಮಾಡಿ ಮರಳಿ ಆಸ್ತಿ ಪಡೆದುಕೊಂಡಿದ್ದಾರೆ. ಈ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ವೀರಾಪುರ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ 76 ವರ್ಷದ ವೃದ್ಧ ತಾಯಿ ಪ್ರೇಮವ್ವ ಹವಳಣ್ಣನವರ ಹೋರಾಟಕ್ಕೆ ಜಯಸಿಕ್ಕಿದೆ. ಇಬ್ಬರು ಗಂಡು, ಇಬ್ಬರು ಹೆಣ್ಣು ಮಕ್ಕಳನ್ನ ಹೊಂದಿದ್ದಾರೆ. ಪತಿ ಶ್ರೀಕಾಂತ ನಿಧನರಾದ ನಂತರ ಪತಿ ಹೆಸರಿನಲ್ಲಿದ್ದ 3 ಎಕರೆ 32 ಗುಂಟೆ ಜಮೀನನ್ನ ಇಬ್ಬರು ಗಂಡು ಮಕ್ಕಳಾದ ಧನಿಕುಮಾರ ಮತ್ತು ಸಂತೋಷ ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ಅಲ್ಲದೆ ಗ್ರಾಮದಲ್ಲಿದ್ದ ಎರಡೂ ಮನೆಗಳನ್ನ ತಮ್ಮ ಹೆಸರಿಗೆ ಮಾಡಿಕೊಂಡು ಹೆತ್ತ ತಾಯಿಗೆ ಕಿರುಕುಳ ನೀಡಿ ತಾಯಿಯನ್ನ ಮನೆಯಿಂದ ಹೊರಹಾಕಿದ್ದರು. ಇದನ್ನೂ ಓದಿ: ತಲೆಗೆ ನೀರಿನ ಬದಲು ಎಂಜಲು ಉಗಿದ ಕೇಶವಿನ್ಯಾಸಕಾರ!

    ಒಂದೂವರೆ ವರ್ಷದಿಂದ ಹಾವೇರಿಯ ಈಡಾರಿ ಸಂಸ್ಥೆಯ ಮಹಿಳಾ ಸಾಂತ್ವನ ಕೇಂದ್ರದಲ್ಲಿ ವಾಸವಾಗಿದ್ದರು. ಸಾಂತ್ವನ ಕೇಂದ್ರದ ನೆರವಿನಿಂದ ಸವಣೂರು ಉಪವಿಭಾಗಾಧಿಕಾರಿಗೆ ಆಸ್ತಿ ಬಿಡಿಸಿಕೊಡುವಂತೆ ಪ್ರೇಮವ್ವ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಉಪವಿಭಾಗಧಿಕಾರಿ ಮಕ್ಕಳಿಂದ ತಾಯಿಯ ಹೆಸರಿಗೆ ಜಮೀನು ಮತ್ತು ಮನೆಯನ್ನ ಬಿಡಿಸಿಕೊಟ್ಟಿದ್ದಾರೆ.

    ತಹಶೀಲ್ದಾರ್ ಎರ್ರಿಸ್ವಾಮಿ.ಪಿ.ಎಸ್ ರಿಂದ ಮಹಿಳಾ ಸಾಂತ್ವನ ಕೇಂದ್ರದ ಮುಖ್ಯಸ್ಥೆ ಸಮ್ಮುಖದಲ್ಲಿ ಪ್ರೇಮವ್ವಳಿಗೆ ಮನೆ ಹಾಗೂ ಜಮೀನಿನ ದಾಖಲೆಗಳನ್ನ ನೀಡಲಾಯಿತು. ಮಕ್ಕಳ ಕಿರುಕುಳ ನೆನೆದು ತಾಯಿ ಕಣ್ಣೀರು ಹಾಕಿ, ಆಸ್ತಿಮರಳಿಸಿದ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದರು.