Tag: ಆಸ್ತಿ

  • ಆಸ್ತಿಗಾಗಿ ಸುಪಾರಿ ಕೊಟ್ಟು ತಂದೆಯನ್ನೇ ಕೊಲ್ಲಿಸಿದ ಪಾಪಿ ಮಕ್ಕಳು

    ಆಸ್ತಿಗಾಗಿ ಸುಪಾರಿ ಕೊಟ್ಟು ತಂದೆಯನ್ನೇ ಕೊಲ್ಲಿಸಿದ ಪಾಪಿ ಮಕ್ಕಳು

    ಶಿವಮೊಗ್ಗ: ಆಸ್ತಿಗಾಗಿ ಸುಪಾರಿ ಕೊಟ್ಟು ತಂದೆಯನ್ನೇ (Father) ಮಕ್ಕಳು (Sons) ಕೊಲೆ ಮಾಡಿಸಿದ ಘಟನೆ ಶಿವಮೊಗ್ಗ (Shivamogga) ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ನಡೆದಿದೆ.

    ಕೆಎಸ್‍ಆರ್‌ಪಿಯ ನಿವೃತ್ತ ಎಆರ್‌ಎಸ್‍ಐ ನಾಗೇಂದ್ರಪ್ಪ ಕೊಲೆಯಾದ ವ್ಯಕ್ತಿ. ನಾಗೇಂದ್ರಪ್ಪ ಶಿರಾಳಕೊಪ್ಪದ ಬೋವಿ ಗ್ರಾಮದ ನಿವಾಸಿ ಆಗಿದ್ದ. ಈತನ ಶವ ಶಿರಾಳಕೊಪ್ಪದಲ್ಲಿ ನ. 29 ರಂದು ಚರಂಡಿಯಲ್ಲಿ ಪತ್ತೆ ಆಗಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಶಿರಾಳಕೊಪ್ಪ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಈ ವೇಳೆ ಕೆಲವು ರಹಸ್ಯಗಳು ಬಯಲಾಗಿದೆ.

    ನಾಗೇಂದ್ರಪ್ಪಗೆ ಐದೂವರೆ ಎಕರೆ ಭೂಮಿಯಲ್ಲಿ ಐದು ಎಕರೆ ತೋಟವಿದೆ. ಉತ್ತಮ ಫಸಲು ಬರುತ್ತಿದ್ದರಿಂದ ಆದಾಯವೂ ಹೆಚ್ಚಿತ್ತು. ಅಷ್ಟೇ ಅಲ್ಲದೇ ನಾಗೇಂದ್ರಪ್ಪನ ಮೊದಲ ಪತ್ನಿಗೆ ಐವರು ಮಕ್ಕಳಿದ್ದರು. ಮೊದಲ ಪತ್ನಿ ನಿಧನದ ಹಿನ್ನೆಲೆಯಲ್ಲಿ ಎರಡು ವರ್ಷಗಳ ಹಿಂದೆ ವಿಧವೆಯನ್ನು ನಾಗೇಂದ್ರಪ್ಪ ಮದುವೆಯಾಗಿದ್ದ. ಈ ಮದುವೆಯನ್ನು ಮಕ್ಕಳೇ ನಿಂತು ಮಾಡಿಸಿದ್ದರು.

    ಆದರೆ ನಾಗೇಂದ್ರಪ್ಪನ ಮೊದಲ ಪತ್ನಿಯ ಮಕ್ಕಳು ಆಸ್ತಿ ಪಾಲು ಮಾಡುವಂತೆ ಹಿಂದಿನಿಂದಲೂ ಒತ್ತಾಯವಿತ್ತು. ಆದರೆ ನಾಗೇಂದ್ರಪ್ಪ ಆಸ್ತಿ ಪಾಲಿಗೆ ನಿರಾಕರಿಸಿದ್ದ. ಈ ಮಧ್ಯೆ ಎರಡನೇ ಪತ್ನಿಗೂ ಗಂಡು ಮಗು ಜನಿಸಿತ್ತು. ಇದರಿಂದಾಗಿ ನಾಗೇಂದ್ರಪ್ಪನ ಮೊದಲ ಪತ್ನಿಯ ಮಕ್ಕಳಾದ ಮಂಜುನಾಥ್, ಉಮೇಶ್ ಸಿಟ್ಟಾಗಿದ್ದರು. ಆಸ್ತಿ ಕೈ ತಪ್ಪಿ ಹೋಗುತ್ತದೆ ಎಂದು ಅಪ್ಪನನ್ನೇ ಮುಗಿಸಲು ಈ ಇಬ್ಬರು ಮಕ್ಕಳು ಯೋಜನೆ ಹಾಕಿದ್ದಾರೆ. ಯೋಜನೆಯ ಪ್ರಕಾರವಾಗಿಯೇ ಬೋಗಿ ಗ್ರಾಮದ ಮೂವರಿಗೆ ತಂದೆಯ ಕೊಲೆಗೆ ಸುಪಾರಿ ಕೊಟ್ಟು, ಅಪ್ಪನನ್ನು ಕೊಲೆ ಮಾಡಿದರೆ ಐದು ಲಕ್ಷ ಕೊಡುವುದಾಗಿ ವಾಗ್ದಾನ ಮಾಡಿದ್ದಾರೆ.

    ಈ ಹಿನ್ನೆಲೆಯಲ್ಲಿ ಸುಪಾರಿ ತೆಗೆದುಕೊಂಡ ಬೋವಿ ಗ್ರಾಮದ ರಿಜ್ವಾನ್, ಹಬೀಬುಲ್ಲಾ, ಸುಹೇಲ್ ಮೂವರು ನಾಗೇಂದ್ರಪ್ಪ ಭದ್ರಾವತಿ ಕೋರ್ಟ್‍ಗೆ ಹೋಗಿ ಶಿಕಾರಿಪುರಕ್ಕೆ ಬರುವುದನ್ನು ನೋಡಿದ್ದಾರೆ. ಇದೇ ಸರಿಯಾದ ಸಮಯವೆಂದು ಆರೋಪಿಗಳಾದ ಬೋವಿ ಗ್ರಾಮದ ರಿಜ್ವಾನ್, ಹಬೀಬುಲ್ಲಾ, ಸುಹೇಲ್ ಮೂವರು ನಾಗೇಂದ್ರಪ್ಪನನ್ನು ತಮ್ಮ ಆಟೋದಲ್ಲಿ ಹತ್ತಿಸಿಕೊಂಡಿದ್ದರು. ಇದನ್ನೂ ಓದಿ: ದಲಿತರ ಹೆಸರಲ್ಲಿ ಅಧಿಕಾರ ಅನುಭವಿಸಿದ್ದು ಮರೆತು ಹೋಯ್ತಾ? – ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕಿಡಿ

    ಅದಾದ ಬಳಿಕ ನಾಗೇಂದ್ರಪ್ಪನನ್ನು ಪುಣೇದಹಳ್ಳಿ ಗ್ರಾಮದ ಬಳಿ ಕರೆದೊಯ್ದಿದ್ದಾರೆ. ಅಲ್ಲಿ ನಾಗೇಂದ್ರಪ್ಪನಿಗೆ ಬಲವಂತದಿಂದ ನಶೆ ಬರುವ ಔಷಧಿ ಕುಡಿಸಿದ್ದಾರೆ. ಅದಾದ ಬಳಿಕ ಉಸಿರುಗಟ್ಟಿಸಿ ಸಾಯಿಸಿ ಅದೇ ಆಟೋದಲ್ಲಿ ಶವ ಸಾಗಿಸಿದ್ದಾರೆ. ಅದಾದ ಬಳಿಕ ಉಡುಗಣಿ ಗ್ರಾಮದಿಂದ ಕುಸೂರು ಗ್ರಾಮಕ್ಕೆ ಹೋಗುವ ಮಣ್ಣಿನ ರಸ್ತೆಯ ಪಕ್ಕದಲ್ಲಿನ ಚರಂಡಿಗೆ ಶವ ಎಸೆದಿದ್ದಾರೆ.

    ಘಟನೆಗೆ ಸಂಬಂಧಿಸಿ ಮಕ್ಕಳಾದ ಮಂಜುನಾಥ್, ಉಮೇಶ್‌ನನ್ನು ಹಾಗೂ ಸುಪಾರಿ ತೆಗೆದುಕೊಂಡಿದ್ದ ರಿಜ್ವಾನ್, ಹಬೀಬುಲ್ಲಾ, ಸುಹೇಲ್‌ನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: 200 ಸಂತರ ಸಮ್ಮುಖದಲ್ಲಿ ಇಂದು ಗುಜರಾತ್‍ನ 18ನೇ ಸಿಎಂ ಆಗಿ ಭೂಪೇಂದ್ರ ಪಟೇಲ್ ಪ್ರಮಾಣ ವಚನ ಸ್ವೀಕಾರ

    Live Tv
    [brid partner=56869869 player=32851 video=960834 autoplay=true]

  • ತಿರುಪತಿ ತಿಮ್ಮಪ್ಪ ಈಗ 10 ಟನ್ ಚಿನ್ನ, 15 ಸಾವಿರ ಕೋಟಿಯ ಒಡೆಯ

    ಅಮರಾವತಿ: ಪ್ರತಿನಿತ್ಯ ಲಕ್ಷಾಂತರ ಭಕ್ತರು ಆಗಮಿಸಿ, ಭಕ್ತಿಪೂರ್ವಕವಾಗಿ ನೀಡುವ ಕಾಣಿಕೆಗಳಿಂದ ಕಲಿಯುಗದ ವೈಕುಂಠದ ಖಜಾನೆ ತುಂಬಿ ಹೋಗಿದೆ. ಇದೀಗ ತಿರುಮಲ ತಿರುಪತಿ ದೇವಸ್ಥಾನಂ (TTD) ಶ್ವೇತಪತ್ರ ಬಿಡುಗಡೆ ಮಾಡಿದ್ದು, ತಿಮ್ಮಪ್ಪನ ಆಸ್ತಿ (Property) ಎಷ್ಟಿದೆ ಎಂಬುದನ್ನು ತಿಳಿಸಿದೆ.

    ತಿರುಪತಿ ದೇವಾಲಯಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ (Bank) ಸುಮಾರು 5,300 ಕೋಟಿ ರೂ.ಗೂ ಹೆಚ್ಚು ಮೌಲ್ಯದ 10.3 ಟನ್ ತೂಗುವ ಚಿನ್ನ (Gold) ಹಾಗೂ 15,938 ಕೋಟಿ ರೂ. ನಗದು (Money) ಠೇವಣಿ ಇದೆ ಎಂದು ದೇವಾಲಯದ ಟ್ರಸ್ಟ್ ತಿಳಿಸಿದೆ.

    ಟಿಟಿಡಿ ಆಸ್ತಿಯ ಒಟ್ಟು ಮೌಲ್ಯ 2.26 ಲಕ್ಷ ಕೋಟಿ ರೂ. ಇದೆ ಎಂದು ವರದಿಯಾಗಿದೆ. ದೇವಾಲಯದ ಟ್ರಸ್ಟ್‌ನ ನಿವ್ವಳ ಮೌಲ್ಯ 2.26 ಲಕ್ಷ ಕೋಟಿಗೆ ಏರಿಕೆಯಾಗಿದೆ ಎಂದು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ ಧರ್ಮ ರೆಡ್ಡಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ದೇವಾಲಯಕ್ಕೆ ಸಂಬಂಧಿಸಿದಂತೆ 2019ರಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ ಸ್ಥಿರ ಠೇವಣಿಗಳ ರೂಪದಲ್ಲಿ 13,025 ಕೋಟಿ ರೂ. ಹೂಡಿಕೆಯಾಗಿದ್ದು, ಅದು ಈಗ 15,938 ಕೋಟಿ ರೂ.ಗೆ ಏರಿಕೆಯಾಗಿದೆ. ಕಳೆದ 3 ವರ್ಷಗಳಲ್ಲಿ, ಹೂಡಿಕೆ 2,900 ಕೋಟಿ ರೂ. ಯಷ್ಟು ಹೆಚ್ಚಾಗಿದೆ ಎಂದು ರೆಡ್ಡಿ ಹೇಳಿದ್ದಾರೆ. ಇದನ್ನೂ ಓದಿ: ಉತ್ತರಾಖಂಡದಲ್ಲಿ 4.5 ತೀವ್ರತೆಯ ಭೂಕಂಪ – ದೆಹಲಿ-ಎನ್‌ಸಿಆರ್‌ನಲ್ಲಿ ಲಘು ಕಂಪನದ ಅನುಭವ

    ಇತ್ತೀಚೆಗೆ ಟಿಟಿಡಿ ಅಧ್ಯಕ್ಷರು ಮತ್ತು ಮಂಡಳಿ ಹೆಚ್ಚುವರಿ ಹಣವನ್ನು ಆಂಧ್ರಪ್ರದೇಶ ಸರ್ಕಾರದ ಸೆಕ್ಯುರಿಟೀಸ್‌ಗಳಲ್ಲಿ ಹೂಡಿಕೆ ಮಾಡಲು ನಿರ್ಧರಿಸಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ವರದಿಯನ್ನು ಟ್ರಸ್ಟ್ ನಿರಾಕರಿಸಿದೆ. ಹೆಚ್ಚುವರಿ ಮೊತ್ತವನ್ನು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಹೂಡಿಕೆ ಮಾಡಲಾಗಿದೆ ಎಂದು ಟ್ರಸ್ಟ್ ಹೇಳಿದೆ.

    ದೇವಾಲಕ್ಕೆ ಭಾರೀ ಮಟ್ಟದ ಆದಾಯ ಭಕ್ತರು, ವ್ಯಾಪಾರಿಗಳು ಹಾಗೂ ಸಂಸ್ಥೆಗಳ ದೇಣಿಗೆಯಿಂದ ಬರುತ್ತದೆ. ಇದನ್ನೂ ಓದಿ: ಅಕ್ರಮ ಮೀನುಗಾರಿಕೆ – 15 ಭಾರತೀಯ ಮೀನುಗಾರರ ಬಂಧಿಸಿದ ಶ್ರೀಲಂಕಾ ನೌಕಾಪಡೆ

    Live Tv
    [brid partner=56869869 player=32851 video=960834 autoplay=true]

  • ಆಸ್ತಿ ಕೊಡಲ್ಲ ಎಂದಿದ್ದಕ್ಕೆ ಮಗ, ಸೊಸೆ ಸೇರಿ ತಾಯಿಗೆ ಬೆಂಕಿ ಹಚ್ಚಿದ್ರು

    ಆಸ್ತಿ ಕೊಡಲ್ಲ ಎಂದಿದ್ದಕ್ಕೆ ಮಗ, ಸೊಸೆ ಸೇರಿ ತಾಯಿಗೆ ಬೆಂಕಿ ಹಚ್ಚಿದ್ರು

    ಚೆನ್ನೈ: ಆಸ್ತಿ ವಿವಾದಕ್ಕೆ ಸಂಬಂಧಿಸಿ ಮಹಿಳೆಯೊಬ್ಬಳನ್ನು ಆಕೆಯ ಮಗ (Son) ಹಾಗೂ ಸೊಸೆ (Daughter In Law) ಸೇರಿ ಹತ್ಯೆಗೈದ ಘಟನೆ ತಮಿಳುನಾಡಿನ (Tamil Nadu) ತಿರುನೆಲ್ವೇಲಿಯಲ್ಲಿ ನಡೆದಿದೆ.

    ಎಸ್. ಅಣ್ಣಾಮಲೈ (47) ಮತ್ತು ಪತ್ನಿ ಎ. ಅನಿತಾ (42) ಸೇರಿ ಎಸ್. ಅರಸಮ್ಮಲ್ (70) ಅನ್ನು ಹತ್ಯೆ ಮಾಡಿದ್ದಾರೆ.  ಅರಸಮ್ಮಲ್ ತನ್ನ ಪತಿ ತೀರಿಕೊಂಡ ನಂತರ ತಿರುನಲ್ವೇಲಿಯ ಕೆಟಿಸಿ ನಗರದಲ್ಲಿನ ಮನೆಯಲ್ಲಿ ತನ್ನ ಮಗ ಹಾಗೂ ಸೊಸೆಯೊಂದಿಗೆ ವಾಸವಿದ್ದಳು. ಆದರೆ ಅರಸಮ್ಮಲ್ ಹಾಗೂ ಆಕೆಯ ಸೊಸೆ ಅನಿತಾ ನಡುವಿನ ಸಂಬಂಧ ಚೆನ್ನಾಗಿರಲಿಲ್ಲ. ಆಗಾಗ ಇವರಿಬ್ಬರ ಮಧ್ಯೆ ಜಗಳವಾಗುತ್ತಿತ್ತು.

    crime

    ಅಷ್ಟೇ ಅಲ್ಲದೇ ಅರಸಮ್ಮಲ್‌ನ ಜೊತೆ ಆಕೆಯ ಮಗ ಅಣ್ಣಾಮಲೈ ಕೂಡ ಆಸ್ತಿಯನ್ನು (Property) ತನ್ನ ಹೆಸರಿಗೆ ನೋಂದಣಿ ಮಾಡಬೇಕೆಂದು ಜಗಳವಾಡುತ್ತಿದ್ದನು. ಆದರೆ ಅರಸಮ್ಮಲ್‌ಳಿಗೆ ಹಾಗೆ ಮಾಡಲು ಮನಸಿರಲಿಲ್ಲ. ಇದೇ ವಿಷಯಕ್ಕೆ ಅನಿತಾ ಹಾಗೂ ಅರಸಮ್ಮಲ್ ನಡುವೆ ಜಗಳವಾಗಿತ್ತು. ಈ ವೇಳೆ ಅರಸಮ್ಮಲ್‌ ಅನ್ನು ಅನಿತಾ ತಳ್ಳಿದ್ದಾಳೆ. ಈ ವೇಳೆ ಅರಸಮ್ಮಲ್‌ ಪ್ರಜ್ಞೆ ತಪ್ಪಿದ್ದಾಳೆ. ಇದನ್ನೂ ಓದಿ: ಚಿಕ್ಕಮಗಳೂರು, ಉಡುಪಿಯಲ್ಲಿ ಡೇಂಜರ್ ಸೇತುವೆ – ನಿರ್ವಹಣೆ ಇಲ್ಲದೇ ಬೀಳುವ ಸ್ಥಿತಿ

    POLICE JEEP

    ಇದಾದ ನಂತರ ಅನಿತಾ ಹಾಗೂ ಅಣ್ಣಾಮಲೈ ಸೇರಿ ಅರಸಮ್ಮಳಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಅದಾದ ಬಳಿಕ ಯಾರಿಗೂ ಅನುಮಾನ ಬಾರದಿರಲಿ ಎಂದು ಅಗ್ನಿಶಾಮಕ ಇಲಾಖೆಗೆ ಕರೆ ಮಾಡಿದ್ದಾರೆ. ಆದರೆ ಅನುಮಾನಗೊಂಡ ಪೊಲೀಸರು ಹೆಚ್ಚಿನ ವಿಚಾರ ನಡೆಸಿದಾಗ ಘಟನೆಗೆ ನಿಜವಾದ ಕಾರಣ ತಿಳಿದುಬಂದಿದೆ. ಇದನ್ನೂ ಓದಿ: ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಸಾವು – ಬಸ್ ಚಾಲಕನಿಗೆ ಸಾರ್ವಜನಿಕರಿಂದ ಥಳಿತ

    Live Tv
    [brid partner=56869869 player=32851 video=960834 autoplay=true]

  • ಫೇಕ್ ಮ್ಯಾರೇಜ್ ಸರ್ಟಿಫಿಕೇಟ್ ಸೃಷ್ಟಿ – ಸತ್ತವನ 19 ಕೋಟಿ ಆಸ್ತಿ ಹೊಡೆದ್ಲು ಖತರ್ನಾಕ್ ಸುಂದ್ರಿ

    ಫೇಕ್ ಮ್ಯಾರೇಜ್ ಸರ್ಟಿಫಿಕೇಟ್ ಸೃಷ್ಟಿ – ಸತ್ತವನ 19 ಕೋಟಿ ಆಸ್ತಿ ಹೊಡೆದ್ಲು ಖತರ್ನಾಕ್ ಸುಂದ್ರಿ

    ಮುಂಬೈ: ನಕಲಿ ಮ್ಯಾರೇಜ್ ಸರ್ಟಿಫಿಕೇಟ್ ಸೃಷ್ಟಿಸಿ ಮೃತ ವ್ಯಕ್ತಿಯೊಬ್ಬರ 19.70 ಕೋಟಿ ಮೌಲ್ಯದ ಆಸ್ತಿಯನ್ನು ಕಬಳಿಸಿದ ಆರೋಪದಡಿ ಕ್ರೈಸ್ತ ಪ್ರಾದಿ, ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮತ್ತು ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

    ಆರೋಪಿಗಳನ್ನು ಅಂಜಲಿ ಅಗರ್ವಾಲ್ (30), ಥಾಮಸ್ ರಾಮುಲ್ ಗೋಡ್ಪವಾರ್ (50) ಮತ್ತು ಮಹೇಶ್ ಕಾಟ್ಕರ್ (37) ಎಂದು ಗುರುತಿಸಲಾಗಿದೆ. ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದ ಅಂಜಲಿ ಅಗರ್ವಾಲ್, ಅಲ್ಲಿಗೆ ಬರುತ್ತಿದ್ದ 35 ವರ್ಷದ ಗ್ರಾಹಕರೊಬ್ಬರನ್ನು ಪ್ರೀತಿಸುತ್ತಿದ್ದಳು. ನಂತರ ಇಬ್ಬರೂ ಆಗಾಗ ಭೇಟಿಯಾಗುತ್ತಿದ್ದರು. ಆದರೆ 2021ರ ನವೆಂಬರ್‌ನಲ್ಲಿ ವ್ಯಕ್ತಿ ಸಾವನ್ನಪ್ಪಿದರು. ಈ ವಿಚಾರ ತಿಳಿದ ಅಂಜಲಿ, ಇಬ್ಬರು ಆರೋಪಿಗಳ ಸಹಾಯದಿಂದ ನಕಲಿ ಮ್ಯಾರೇಜ್ ಸರ್ಟಿಫಿಕೇಟ್ ಸೃಷ್ಟಿಸಿ ಥಾಣೆ (Thane) ನಗರದ ಕವೇಸರ್‌ನಲ್ಲಿ 19.70 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ದೋಚಿದ್ದಾಳೆ ಎಂದು ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಮಾಲೋಜಿ ಶಿಂಧೆ ಹೇಳಿದ್ದಾರೆ.

    ಈ ವಿಚಾರ ತಿಳಿದ ಬಳಿಕ ಮೃತ ವ್ಯಕ್ತಿಯ ತಾಯಿ, ನೌಪಾದ ಪೊಲೀಸ್ ಠಾಣೆಯಲ್ಲಿ (Naupada police station) ದೂರು ದಾಖಲಿಸಿದ್ದು, ಆರೋಪಿಗಳು ನಕಲಿ ಮ್ಯಾರೇಜ್ ಸರ್ಟಿಫಿಕೇಟ್ ತೋರಿಸಿ ಆಸ್ತಿ ಕಬಳಿಕೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಕೆಎಸ್‍ಆರ್‌ಟಿಸಿಗೆ ಶಾಲಾ ಮಕ್ಕಳನ್ನು ಹೊತ್ತೊಯ್ಯುತ್ತಿದ್ದ ಟೂರಿಸ್ಟ್ ಬಸ್ ಡಿಕ್ಕಿ – 9 ಮಂದಿ ಸಾವು, 40 ಜನರಿಗೆ ಗಾಯ

    ಈ ದೂರಿನ್ವಯ ಮೂವರು ಆರೋಪಿಗಳ ವಿರುದ್ಧ ಪೊಲೀಸರು ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಮತ್ತು ಆರೋಪಿಗಳನ್ನು ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಅಕ್ಟೋಬರ್ 7 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಇದನ್ನೂ ಓದಿ: ದುರ್ಗಾದೇವಿ ಮೂರ್ತಿ ವಿಸರ್ಜನೆ ವೇಳೆ ದಿಢೀರ್ ಪ್ರವಾಹ – 8 ಮಂದಿ ಸಾವು, ಮೋದಿ ಸಂತಾಪ

    Live Tv
    [brid partner=56869869 player=32851 video=960834 autoplay=true]

  • ಬ್ಯಾನ್ ಅಯ್ತು ಮುಂದೆ  PFI  ಆಸ್ತಿ ಮುಟ್ಟುಗೋಲು – ರಾಜ್ಯ ಸರ್ಕಾರದ ತೀರ್ಮಾನ: ಆರಗ ಜ್ಞಾನೇಂದ್ರ

    ಬ್ಯಾನ್ ಅಯ್ತು ಮುಂದೆ PFI ಆಸ್ತಿ ಮುಟ್ಟುಗೋಲು – ರಾಜ್ಯ ಸರ್ಕಾರದ ತೀರ್ಮಾನ: ಆರಗ ಜ್ಞಾನೇಂದ್ರ

    ಬೆಂಗಳೂರು: ಪಿಎಫ್‍ಐ (PFI) ಸಂಘಟನೆ ಬ್ಯಾನ್ ಆದ ಬಳಿಕ ಅ ಸಂಘಟನೆಯನ್ನು ಸಂಪೂರ್ಣ ನಿರ್ಣಾಮ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದಾಗಿವೆ.

    ಪಿಎಫ್‍ಐ ಬ್ಯಾನ್ ಬಳಿಕ ಮುಂದಿನ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರ ಅಧಿಕಾರ ನೀಡಿದ ಬೆನ್ನಲ್ಲೇ ರಾಜ್ಯ ಸರ್ಕಾರ ಅಲರ್ಟ್ ಆಗಿದೆ. ಪಿಎಫ್‍ಐ ಬ್ಯಾನ್ ಬಳಿಕ ಆ ಸಂಘಟನೆಯ ಆಸ್ತಿ (Property)  ಮೇಲೂ ರಾಜ್ಯ ಸರ್ಕಾರ ಕಣ್ಣು ಹಾಕಿದೆ. ಪಿಎಫ್‍ಐ ಸಂಘಟನೆಯ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ರಾಜ್ಯ ಸರ್ಕಾರ (Government)  ಪ್ರಕ್ರಿಯೆ ಶುರು ಮಾಡಿದೆ. ಇದನ್ನೂ ಓದಿ: CBI ರೇಡ್ ಹಿನ್ನೆಲೆ- ಗೇಟ್‍ಗೆ ಬೀಗ ಹಾಕಿ ಮನೆಯಲ್ಲಿ ಕುಳಿತ ಡಿಕೆಶಿ ತಾಯಿ ಗೌರಮ್ಮ

    ಈ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ (Araga Jnanendra), ಪಿಎಫ್‍ಐ ಸಂಘಟನೆಗಳ ಆಸ್ತಿ ಬಗ್ಗೆ ಸರ್ವೆ ಕಾರ್ಯ ನಡೆಯುತ್ತಿದೆ. ರಾಜ್ಯಾದ್ಯಂತ ಎಷ್ಟು ಆಸ್ತಿ ಇದೆ ಎಂದು ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ. ಸರ್ವೆ ಕಾರ್ಯದ ಬಳಿಕ ಆಸ್ತಿಯ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ. ಸರ್ವೆಯ ಬಳಿಕ ಪಿಎಫ್‍ಐನ ಸಂಪೂರ್ಣ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ನಡೆಯುತ್ತೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಕೇರಳ, ತಮಿಳುನಾಡಿನಲ್ಲೂ PFI ಬ್ಯಾನ್

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್ ಸ್ಪರ್ಧಿ, ನಟಿ ಸೊನಾಲಿ ಪೋಗಟ್ ಕೊಲೆಗೆ ನೂರು ಕೋಟಿ ಆಸ್ತಿ ಕಾರಣವಾ?

    ಬಿಗ್ ಬಾಸ್ ಸ್ಪರ್ಧಿ, ನಟಿ ಸೊನಾಲಿ ಪೋಗಟ್ ಕೊಲೆಗೆ ನೂರು ಕೋಟಿ ಆಸ್ತಿ ಕಾರಣವಾ?

    ಗೋವಾದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ನಟಿ ಸೊನಾಲಿ ಪೋಗಟ್ ಕುರಿತಾಗಿ ದಿನಕ್ಕೊಂದು ಮಾಹಿತಿ ಹೊರ ಬರುತ್ತಿವೆ. ನೂರಾರು ಕೋಟಿ ಆಸ್ತಿಗಾಗಿ ಸ್ವತಃ ಸೊನಾಲಿ ಅವರ ಪಿಎ ಸುಧೀರ್ ಅನ್ನುವವರೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಸೊನಾಲಿ ಅವರದ್ದು ನೂರು ಕೋಟಿಗೂ ಅಧಿಕ ಆಸ್ತಿಯಿದ್ದು, ಅದನ್ನು ತನ್ನ ಹೆಸರಿಗೆ ನೋಂದಾಯಿಸಲು ಸುಧೀರ್ ಪ್ಲ್ಯಾನ್ ಮಾಡಿದ್ದ ಎಂದು ಹೇಳಲಾಗುತ್ತಿದ್ದು, ಈ ಕುರಿತಾದ ದಾಖಲೆಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರಂತೆ.

    ಸುಧೀರ್, ಸೊನಾಲಿ ಸೇರಿದಂತೆ ಹಲವರು ಗೋವಾಗೆ ಶೂಟಿಂಗ್ ನೆಪದಲ್ಲಿ ಬಂದಿದ್ದರು. ಆದರೆ, ರಾತ್ರಿ ಸೊನಾಲಿ ಅವರಿಗೆ ಕುಡಿಸಿ, ಅದರಲ್ಲಿ ಡ್ರಗ್ಸ್ ಕೂಡ ಬೆರೆಸಿದ್ದರು ಎಂದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ. ಸೊನಾಲಿ ಅತಿಯಾಗಿ ಡ್ರಗ್ಸ್ ಸೇವನೆ ಮಾಡಿದ್ದರಿಂದ, ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೂ, ಸೊನಾಲಿ ಉಳಿಯಲಿಲ್ಲ ಎಂದು ಹೇಳಲಾಗುತ್ತಿದೆ. ಸೊನಾಲಿಯನ್ನು ಕೊಲೆ ಮಾಡಲೆಂದೇ ಈ ರೀತಿ ಮಾಡಿದ್ದಾರೆ ಎನ್ನುವ ಆರೋಪ ಆಕೆಯ ಕುಟುಂಬದ್ದು. ಇದನ್ನೂ ಓದಿ:200 ಕೋಟಿ ರೂ. ಸುಲಿಗೆ ಪ್ರಕರಣದಲ್ಲಿ ನಟಿ ನೋರಾ ಫತೇಹಿ ವಿಚಾರಣೆ

    ಗೋವಾ ಪೊಲೀಸರು ಈಗಾಗಲೇ ಸೊನಾಲಿ ಅವರ ಗುರುಗಾಂವ್‌ಗೆ ಬಂದಿದ್ದು, ಮಹತ್ವದ ದಾಖಲೆಗಳನ್ನು ವಶ ಪಡಿಸಿಕೊಂಡಿದ್ದಾರಂತೆ. ಅಲ್ಲದೇ, ಸೊನಾಲಿ ಅವರಿಗೆ ಸೇರಿದ್ದು ಎನ್ನಲಾದ ಮೂರು ಡೈರಿಗಳು ಕೂಡ ಪತ್ತೆ ಆಗಿವೆಯಂತೆ. ಅವುಗಳು ಕೊಲೆಯ ರಹಸ್ಯ ಬೇಧಿಸಲು ಸಹಾಯಕ್ಕೆ ಬರುತ್ತಿವೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಆಸ್ತಿ ಕಬಳಿಸಲು ತನ್ನ ಸಿಬ್ಬಂದಿಯಿಂದಲೇ ಸೊನಾಲಿ ಕೊಲೆಯಾಗಿದ್ದಾರೆ ಎನ್ನುವುದು ಆಘಾತಕಾರಿ ವಿಷಯ.

    Live Tv
    [brid partner=56869869 player=32851 video=960834 autoplay=true]

  • ಆಸ್ತಿಗಾಗಿ ನಟಿ, ಬಿಜೆಪಿ ನಾಯಕಿ ಸೊನಾಲಿ ಪೋಗಟ್ ಕೊಲೆ? ಪೋಲಿಸರಿಗೆ ಮಹತ್ವದ ಸುಳಿವು

    ಆಸ್ತಿಗಾಗಿ ನಟಿ, ಬಿಜೆಪಿ ನಾಯಕಿ ಸೊನಾಲಿ ಪೋಗಟ್ ಕೊಲೆ? ಪೋಲಿಸರಿಗೆ ಮಹತ್ವದ ಸುಳಿವು

    ಗುರುಗ್ರಾಮ ಮೂಲದ ನಟಿ, ಬಿಜೆಪಿ ನಾಯಕಿ ಸೊನಾಲಿ ಪೋಗಟ್ ವಾರದ ಹಿಂದೆ ಗೋವಾದಲ್ಲಿ ನಿಧನರಾಗಿದ್ದರು. ಈ ಸಾವು ಹೃದಯಾಘಾತದಿಂದ ಸಂಭವಿಸಿದ್ದು ಎಂದು ಹೇಳಲಾಗಿತ್ತು. ಆನಂತರ ನಟಿಯ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ತನಿಖೆಗೆ ಕೈಗೊಳ್ಳಲಾಗಿದ್ದು, ಸೊನಾಲಿ ಸಾವಿನ ಕುರಿತು ದಿನಕ್ಕೊಂದು ತಿರುವು ಸಿಗುತ್ತಿದೆ.

    ಸೋನಾಲಿ ಸಾವಿಗೆ ಆಕೆಯ ಆಪ್ತರಾದ ಸುಧೀರ್ ಸಾಂಗ್ವಾನ್ ಮತ್ತು ಸಖ್ಖೀಂದರ್ ಕಾರಣ ಎಂದು ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಆ ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಿದ್ದರು. ಆಕೆಗೆ ಡ್ರಗ್ಸ್ ನೀಡಿದ ಹಿನ್ನೆಲೆಯಲ್ಲಿ ಸಾವು ಆಗಿರಬಹುದು ಎಂದು ಆಪ್ತರು ಹೇಳಿಕೊಂಡಿದ್ದರು ಎನ್ನಲಾಗುತ್ತಿದೆ. ಈ ಸಾವು ಸೊನಾಲಿ ಆಸ್ತಿಗಾಗಿ ನಡೆದಿದೆ ಎನ್ನುವ ಮಾಹಿತಿಯನ್ನೂ ಇದೇ ಆಪ್ತರು ನೀಡಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:ತಮ್ಮ ಸಂಭಾವನೆಯಲ್ಲಿ ʼಜವಾನ್‌ʼ ಚಿತ್ರಕ್ಕಾಗಿ 5 ಕೋಟಿ ಹೆಚ್ಚಿಸಿಕೊಂಡ ವಿಜಯ್ ಸೇತುಪತಿ!

    ಗುರುಗ್ರಾಮದಲ್ಲಿ ಸೊನಾಲಿ ಹೆಸರಿನಲ್ಲಿ ಫ್ಲ್ಯಾಟ್ ಇದ್ದು, ಇದು ಸೊನಾಲಿ ಮತ್ತು ಸುಧೀರ್ ಸಾಂಗ್ವಾನ್ ಹೆಸರಿನಲ್ಲಿ ನೋಂದಣಿ ಆಗಿದೆ ಎಂದು ಹೇಳಲಾಗುತ್ತಿದೆ. ಈ ನೋಂದಣಿ ಪತ್ರದಲ್ಲಿ ಸೊನಾಲಿ ಅವರು ಸುಧೀರ್ ಪತ್ನಿ ಎಂದು ನಮೂದಿಸಲಾಗಿದೆಯಂತೆ. ಅಲ್ಲದೇ, ಸೊನಾಲಿ ಅವರ ಆಸ್ತಿಯನ್ನು ಸುಧೀರ್ ನೋಡಿಕೊಳ್ಳುತ್ತಿದ್ದರು ಎಂದೂ ಹೇಳಲಾಗಿದ್ದು, ಈ ಆಸ್ತಿಗಾಗಿ ಅವರನ್ನು ಕೊಲೆ ಮಾಡಲಾಗಿದೆ ಎನ್ನುವುದು ಸದ್ಯಕ್ಕಿರುವ ಮಾಹಿತಿ.

    Live Tv
    [brid partner=56869869 player=32851 video=960834 autoplay=true]

  • ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಗಳ ಆಸ್ತಿ ಸೀಜ್: ಅಲೋಕ್ ಕುಮಾರ್

    ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಗಳ ಆಸ್ತಿ ಸೀಜ್: ಅಲೋಕ್ ಕುಮಾರ್

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಇದೀಗ ಆರೋಪಿಗಳ ಆಸ್ತಿ ಸೀಜ್ ಮಾಡಲಾಗುತ್ತಿದ ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದರು.

    ಬೆಳ್ಳಾರೆಯಲ್ಲಿ ಆರು ಜಿಲ್ಲೆಯ ಎಸ್‍ಪಿ ಹಾಗೂ ಎನ್‍ಐಎ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಬೆಳ್ಳಾರೆ ಪ್ರವೀಣ್ ಕೊಲೆ ಕೇಸ್ ನಲ್ಲಿ ಮುಖ್ಯ ಆರೋಪಿಗಳ ಬಂಧನ ಆಗಬೇಕಿದೆ. ಆರೋಪಿಗಳ ದಸ್ತಗಿರಿಗೆ ಬೇರೆ ಬೇರೆ ಜಿಲ್ಲೆಯ ಅಧಿಕಾರಿಗಳ ಸಭೆ ಮಾಡುತ್ತೇವೆ. ಪ್ರಮುಖ ಆರೋಪಿಗಳ ಬಂಧನಕ್ಕೆ ಸಂಬಂಧಿಸಿದಂತೆ ಸಭೆ ಮಾಡಲಿದ್ದೇವೆ. ಮಂಗಳೂರಿನ ಕಾನೂನು ಸುವ್ಯವಸ್ಥೆ ಬಗ್ಗೆಯೂ ಸಭೆ ಮಾಡುತ್ತೇವೆ. ಮುಖ್ಯ ಆರೋಪಿಗಳಿಗೆ ಪ್ರತ್ಯಕ್ಷ- ಪರೋಕ್ಷವಾಗಿ ಸಹಕಾರ ಮಾಡಿದವರಿಗೂ ಕ್ರಮ ಆಗಲಿದೆ ಎಂದರು.

    ಎನ್‍ಐಎ ಅಧಿಕಾರಿಗಳ ಜೊತೆ ಸೇರಿ ಕ್ರಮ ಜರುಗಿಸುತ್ತೇವೆ. ಕೋರ್ಟ್ ಮೂಲಕ ವಾರೆಂಟ್ ನೀಡುವ ಪ್ರಕ್ರಿಯೆ ಜಾರಿಯಲ್ಲಿದೆ. ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕುವ ಪ್ರಕ್ರಿಯೆ ನಡೆಯುತ್ತಿದೆ. ಎನ್ ಐಎ ಅಧಿಕಾರಿಗಳ ಜೊತೆ ಕರ್ನಾಟಕ ತಂಡ ಈ ಕೆಲಸ ಮಾಡಲಿದೆ ಎಂದು ಹೇಳಿದರು.

    ಪ್ರವೀಣ್ ಹತ್ಯೆಯ ಪ್ರಮುಖ ಆರೋಪಿಗಳ ಸಂಪೂರ್ಣ ಮಾಹಿತಿ ಇದೆ. ಅವರ ಫೋಟೋ, ಮನೆ ವಿಳಾಸ, ತಂದೆ-ತಾಯಿ, ಹೆಂಡತಿ ಮಾಹಿತಿ ಎಲ್ಲವೂ ಲಭ್ಯವಿದೆ. ಪ್ರಮುಖ ಆರೋಪಿಗಳನ್ನು ಬಚ್ಚಿಡುವ ಕೆಲಸ ನಡೆಯುತ್ತಿದೆ. ಆವಾಗವಾಗ ಅವರ ಸ್ಥಳ ಬದಲಾವಣೆ ಮಾಡಲಾಗುತ್ತಿದೆ. ಪೊಲೀಸರ ದಾಳಿ ವೇಳೆ ಪ್ರಮುಖ ಆರೋಪಿಗಳು ಪರಾರಿಯಾಗುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಬಿಕಿನಿ ಧರಿಸಿದ ಫೋಟೋ ಹಾಕಿದ್ದಕ್ಕೆ ಕೆಲಸ ಕಳೆದುಕೊಂಡ ಪ್ರಾಧ್ಯಾಪಕಿ

    ಆರೋಪಿಗಳಿಗೆ ಪಿಎಫ್‍ಐ ಲಿಂಕ್ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾವು ಯಾವುದೇ ದಾಖಲೆ ಇಲ್ಲದೇ ಮಾತನಾಡೋದಿಲ್ಲ. ದಾಖಲೆ ಜೊತೆಗೆ ಮಾತನಾಡುತ್ತೇವೆ,ಸುಮ್ಮನೆ ಏನನ್ನೂ ಹೇಳೋದಿಲ್ಲ. ಕೆಲವು ಆರೋಪಿಗಳಿಗೆ ಪಿಎಫ್ ಐ ಲಿಂಕ್ ಇದೆ. ಈ ಬಗ್ಗೆ ತನಿಖೆಯನ್ನು ಮಾಡುತ್ತಿದ್ದೇವೆ. ತನಿಖೆಯ ಬಳಿಕ ಯಾರಿಗೆಲ್ಲಾ ಪಿಎಫ್‍ಐ ಲಿಂಕ್ ಇದೆ ಎಂಬುವುದರ ಬಗ್ಗೆ ಹೇಳುತ್ತೇವೆ ಎಂದು ಹೇಳಿದರು.

    ಈಗಾಗಲೇ ಪ್ರಕರಣ ತನಿಖೆಯ ಹಂತದಲ್ಲಿದೆ. ಈ ಸಂಧರ್ಭದಲ್ಲಿ ಪ್ರಕರಣಕ್ಕೆ ಕೇರಳ ಲಿಂಕ್ ಇರುವ ಬಗ್ಗೆ ಹೇಳಲು ಸಾಧ್ಯವಿಲ್ಲ. ಈಗ ಬಂಧನವಾಗಿರುವ ಏಳು ಮಂದಿಯೂ ಸ್ಥಳೀಯರೇ ಆಗಿದ್ದಾರೆ. ಅವರಿಗೆ ನಿರ್ದೇಶನ ಕೊಟ್ಟಿರೋದು ಯಾರು ಎಂಬುವುದರ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ಮಾಡುತ್ತೇವೆ. ಬೆಳ್ಳಾರೆಯಲ್ಲಿ ಈ ಎಲ್ಲಾ ವಿಚಾರದ ಬಗ್ಗೆ ಸಭೆಯನ್ನು ಮಾಡುತ್ತೇವೆ. ಎನ್ ಐ ಎ ಅಧಿಕಾರಿಗಳು, ಚಾಮರಾಜನಗರ ಹಾಸನ, ಚಿಕ್ಕಮಗಳೂರು, ಉಡುಪಿ,ದಕ್ಷಿಣ ಕನ್ನಡ ಎಸ್‍ಪಿಗಳ ಜೊತೆ ಸಭೆ ಮಾಡುತ್ತೇವೆ ಎಂದು ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

  • ಆಸ್ತಿ ವಿವರ ಘೋಷಿಸಿಕೊಂಡ ಪ್ರಧಾನಿ ಮೋದಿ – ಎಷ್ಟಿದೆ ಗೊತ್ತಾ?

    ಆಸ್ತಿ ವಿವರ ಘೋಷಿಸಿಕೊಂಡ ಪ್ರಧಾನಿ ಮೋದಿ – ಎಷ್ಟಿದೆ ಗೊತ್ತಾ?

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಆಸ್ತಿ ವಿವರ ಘೋಷಿಸಿದ್ದಾರೆ. ಮೋದಿ ಅವರ ಚರಾಸ್ತಿಯು ಒಂದು ವರ್ಷದಲ್ಲಿ 26.13 ಲಕ್ಷದಷ್ಟು ಏರಿಕೆಯಾಗಿದ್ದು, ಅವರ ಬಳಿ ಒಟ್ಟು 2.23 ಕೋಟಿ ಮೌಲ್ಯದ ಆಸ್ತಿ ಇದೆ.

    ಗುಜರಾತ್‌ನ ಗಾಂಧಿನಗರದಲ್ಲಿರುವ ಭೂಮಿಯನ್ನು ದಾನ ಮಾಡಿರುವುದರಿಂದ ಅವರ ಬಳಿ ಯಾವುದೇ ಸ್ಥಿರಾಸ್ತಿ ಇಲ್ಲ. 2022ರ ಮಾರ್ಚ್‌ 31ರ ವೇಳೆಗೆ ಮೋದಿ ಅವರ ಒಟ್ಟು ಆಸ್ತಿ ಮೌಲ್ಯ 2,23,82,504 ರೂ. ಆಗಿದೆ.  ಇದನ್ನೂ ಓದಿ: ಶ್ರೀಲಂಕಾದಲ್ಲಿ 50 ಪೆಟ್ರೋಲ್‌ ಬಂಕ್‌ ತೆರೆಯಲಿದೆ ಐಒಸಿ

    ಕಳೆದ ವರ್ಷ ಪ್ರಧಾನಿ ಮೋದಿ ಬಳಿಯಿದ್ದ ನಗದು ಮೊತ್ತ 36,900 ರೂ.ನಿಂದ 35,250 ರೂ.ಗೆ ಇಳಿದಿತ್ತು. 2021ರ ಮಾರ್ಚ್ 31, 2021 ರವರೆಗೆ ಅವರ ಬ್ಯಾಂಕ್‌ ಖಾತೆಯಲ್ಲಿ 1,52,480 ರೂ. ಇದ್ದ ಹಣ 46,555 ರೂ.ಗೆ ಕಡಿಮೆಯಾಗಿದೆ ರಿಂದ ಕಡಿಮೆಯಾಗಿದೆ.

    ಮೋದಿ ಅವರು ಯಾವುದೇ ಬಾಂಡ್, ಷೇರು ಅಥವಾ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿಲ್ಲ. ವಾಹನ ಕೂಡ ಹೊಂದಿಲ್ಲ. 1.73 ಲಕ್ಷ ರೂ. ಮೌಲ್ಯದ ನಾಲ್ಕು ಚಿನ್ನದ ಉಂಗುರಗಳನ್ನು ಹೊಂದಿದ್ದಾರೆ ಎಂದು ಆಸ್ತಿ ವಿವರದಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಬಿಜೆಪಿ- ಜೆಡಿಯು ಮೈತ್ರಿಗೆ ಗುಡ್‌ಬೈ – ನಿತೀಶ್‌ ರಾಜೀನಾಮೆಗೆ ಕಾರಣ ಏನು?

    ಅಟಲ್ ಬಿಹಾರಿ ವಾಜಪೇಯಿ ಅವರ ಅವಧಿಯಲ್ಲಿ, ಸಾರ್ವಜನಿಕ ಜೀವನದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಲು ಪ್ರತಿ ಹಣಕಾಸು ವರ್ಷದ ಅಂತ್ಯದೊಳಗೆ ಎಲ್ಲಾ ಕೇಂದ್ರ ಸಚಿವರು ತಮ್ಮ ಆಸ್ತಿಯನ್ನು ಘೋಷಿಸಲು ನಿರ್ಧರಿಸಲಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ಯುಪಿ ಸರ್ಕಾರಕ್ಕೆ 600 ಕೋಟಿ ಆಸ್ತಿ ದಾನ ಮಾಡಿದ ವೈದ್ಯ

    ಯುಪಿ ಸರ್ಕಾರಕ್ಕೆ 600 ಕೋಟಿ ಆಸ್ತಿ ದಾನ ಮಾಡಿದ ವೈದ್ಯ

    ಲಕ್ನೋ: ಮೊರಾದಾಬಾದ್‍ನ ವೈದ್ಯ ಅರವಿಂದ್ ಗೋಯಲ್ ಅವರು ಬಡವರಿಗೆ ಸಹಾಯ ಮಾಡಲು ಉತ್ತರ ಪ್ರದೇಶ ಸರ್ಕಾರಕ್ಕೆ ತಮ್ಮ ಸಂಪೂರ್ಣ 600 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ದಾನ ಮಾಡಿದ್ದಾರೆ.

    ಕಳೆದ 50 ವರ್ಷಗಳಿಂದ ಅರವಿಂದ್ ಗೋಯಲ್ ಅವರು ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ. ಸುಮಾರು 25 ವರ್ಷಗಳ ಹಿಂದೆಯೇ ಆಸ್ತಿಯನ್ನು ದಾನ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಬ್ಯಾಂಕ್ ಮುಂದೆ ಪ್ರತಿಭಟನೆ – ಜನರನ್ನು ಚದುರಿಸಲು ಯುದ್ಧ ಟ್ಯಾಂಕರ್ ನಿಲ್ಲಿಸಿದ ಚೀನಾ

    ಲಾಕ್‍ಡೌನ್ ವೇಳೆ ಮೊರಾದಾಬಾದ್‍ನ 50 ಹಳ್ಳಿಗಳನ್ನು ದತ್ತು ತೆಗೆದುಕೊಂಡು ಅರವಿಂದ್ ಕುಮಾರ್ ಗೋಯಲ್ ಅವರು, ಜನರಿಗೆ ಉಚಿತವಾಗಿ ಚಿಕಿತ್ಸೆ ನೀಡಿದ್ದರು. ಅಲ್ಲದೇ ರಾಜ್ಯದಲ್ಲಿ ಬಡವರಿಗೆ ಉಚಿತ ಶಿಕ್ಷಣ ಮತ್ತು ಉತ್ತಮ ಚಿಕಿತ್ಸೆಯನ್ನು ಸಹ ಆಯೋಜಿಸಿದ್ದರು. ಇದನ್ನೂ ಓದಿ: ಡಿಕೆಶಿಗೆ ಜಮೀರ್ ಡಿಚ್ಚಿ – ಸಿದ್ದರಾಮಯ್ಯಗೆ ಜಮೀರ್ ಜಿಂದಾಬಾದ್

    ರಾಷ್ಟ್ರಪತಿ ರಾಮನಾಥ್ ಕೋವಿಂದ್, ಮಾಜಿ ರಾಷ್ಟ್ರಪತಿಗಳಾದ ಪ್ರಣಬ್ ಮುಖರ್ಜಿ, ಪ್ರತಿಭಾ ದೇವಿ ಪಾಟೀಲ್, ಡಾ. ಎಪಿಜೆ ಅಬ್ದುಲ್ ಕಲಾಂ ಅವರು, ಡಾ. ಅರವಿಂದ್ ಗೋಯಲ್ ಅವರಿಗೆ ನಾಲ್ಕು ಬಾರಿ ಗೌರವ ಪ್ರಶಸ್ತಿಯನ್ನು ನೀಡಿದ್ದಾರೆ. ಅರವಿಂದ್ ಗೋಯಲ್ ಅವರಿಗೆ ರೇಣು ಗೋಯಲ್ ಎಂಬ ಪತ್ನಿ ಇದ್ದು, ಇಬ್ಬರು ಪುತ್ರರು ಮತ್ತು ಪುತ್ರಿ ಇದ್ದಾರೆ.

    Live Tv
    [brid partner=56869869 player=32851 video=960834 autoplay=true]