Tag: ಆಸ್ತಿ

  • ತನ್ನ 15 ಎಕರೆ ಆಸ್ತಿಯನ್ನು ಮೋದಿ ಹೆಸರಿಗೆ ಬರೆದುಕೊಡುವುದಾಗಿ 100ರ ವೃದ್ಧೆ ಘೋಷಣೆ

    ತನ್ನ 15 ಎಕರೆ ಆಸ್ತಿಯನ್ನು ಮೋದಿ ಹೆಸರಿಗೆ ಬರೆದುಕೊಡುವುದಾಗಿ 100ರ ವೃದ್ಧೆ ಘೋಷಣೆ

    ಭೋಪಾಲ್: 100 ವರ್ಷದ ವೃದ್ಧೆಯೊಬ್ಬರು ತನ್ನ ಸುಮಾರು 15 ಎಕರೆ ಭೂಮಿಯನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಹೆಸರಿಗೆ ಬರೆದುಕೊಡುವುದಾಗಿ ಘೋಷಣೆ ಮಾಡಿದ್ದಾರೆ.

    ಅಜ್ಜಿಯನ್ನು ಮಂಗಿ ಬಾಯ್ ತನ್ವಾರ್ (Mangi Bai Tanwar) ಎಂದು ಗುರುತಿಸಲಾಗಿದೆ. ಇವರು ರಾಜ್‍ಘರ್ ಜಿಲ್ಲೆಯಿಂದ 65 ಕಿ.ಮೀ ದೂರದಲ್ಲಿರುವ ಜಾಗಿರ್ ಗ್ರಾಮದ ಹರಿಪುರ ನಿವಾಸಿ. ಸದ್ಯ ಅಜ್ಜಿ ಘೋಷಣೆ ಮಾಡಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ವೀಡಿಯೋದಲ್ಲೇನಿದೆ..?: ನೆರೆಹೊರೆಯವರ ಜೊತೆ ಕುಳಿತಿರುವ ಅಜ್ಜಿಯು ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳಿದ್ದಾರೆ. ದೇಶಕ್ಕೆ ನರೇಂದ್ರ ಮೋದಿಯಿಂದ ಒಳ್ಳೆಯದಾಗಿದ್ದು, ಅವರು ಒಳ್ಳೊಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ಈ ಮೂಲಕ ದೇಶಕ್ಕೆ ಹೆಮ್ಮೆ ತರುತ್ತಿದ್ದಾರೆ. ಅವರು ವಯಸ್ಸಾದವರಿಗೆ ಬೇಕಾದ ಸೌಲಭ್ಯಗಳನ್ನು ಕೂಡ ಕಲ್ಪಿಸಿದ್ದಾರೆ ಎಂದು ಹೇಳಿದ್ದಾರೆ.

    ಮಂಗಿ ಬಾಯ್‍ಗೆ 14 ಮಂದಿ ಮಕ್ಕಳಿದ್ದಾರೆ. ಈ ಮಧ್ಯೆ ಮೋದಿ ಕೂಡ ನನ್ನ ಮಗನಂತೆಯೇ. ಹೀಗಾಗಿ ನನ್ನ ಆಸ್ತಿಯನ್ನು ಮೋದಿ ಹೆಸರಿಗೆ ಬರೆದುಕೊಡುತ್ತೇನೆ ಎಂದು ಹೇಳಿದ್ದಾರೆ. ಇದೇ ವೇಳೆ ಮೋದಿಗೆ ಅಜ್ಜಿ ಶುಭವನ್ನು ಕೂಡ ಹಾರೈಸಿದ್ದಾರೆ.  ಇದನ್ನೂ ಓದಿ: ಮಮತಾ ಬ್ಯಾನರ್ಜಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ

    ನಾನು ತೀರ್ಥಯಾತ್ರೆಗೆ ಹೊರಟಿದ್ದ ಸಂದರ್ಭದಲ್ಲಿ ಮೋದಿಯವರು ನಮಗೆ ಉಳಿದುಕೊಳ್ಳಲು ಮನೆ, ಆಹಾರ ಹಾಗೂ ಹಣವನ್ನು ನೀಡುವ ಮೂಲಕ ತಮ್ಮ ಮನೆಯವರಂತೆಯೇ ಅತ್ಯಂತ ಪ್ರೀತಿಯಿಂದ ಯಾವುದೇ ತೊಂದರೆಯಾಗಂದಂತೆ ನೋಡಿಕೊಂಡಿದ್ದಾರೆ. ಹೀಗಾಗಿ ಅವರನ್ನು ನನ್ನದೇ ಮಗ ಎಂದುಕೊಂಡು ನನ್ನ ಜಮೀನು ಬರೆದುಕೊಡುವುದಾಗಿ ತಿಳಿಸಿದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಅತೀಕ್ ಅಹ್ಮದ್ 1,169 ಕೋಟಿ ರೂ. ಒಡೆಯ- ಹುಡುಕಿದಷ್ಟು ಸಿಗುತ್ತಿದೆ ಗ್ಯಾಂಗಸ್ಟರ್‌ನ ಆಸ್ತಿ

    ಅತೀಕ್ ಅಹ್ಮದ್ 1,169 ಕೋಟಿ ರೂ. ಒಡೆಯ- ಹುಡುಕಿದಷ್ಟು ಸಿಗುತ್ತಿದೆ ಗ್ಯಾಂಗಸ್ಟರ್‌ನ ಆಸ್ತಿ

    ಲಕ್ನೋ: ಇತ್ತೀಚೆಗೆ ಪ್ರಯೋಗರಾಜ್‍ನಲ್ಲಿ (Prayagraj) ದುಷ್ಕರ್ಮಿಗಳಿಂದ ಹತ್ಯೆಯಾದ ರಾಜಕಾರಣಿ, ಗ್ಯಾಂಗ್‍ಸ್ಟರ್ ಅತೀಕ್ ಅಹ್ಮದ್ (Atiq Ahmad) ಅಕ್ರಮವಾಗಿ ಸಾವಿರಾರು ಕೋಟಿ ರೂ. ಆಸ್ತಿಯ ಒಡೆಯನಾಗಿದ್ದ ಎಂಬ ವಿಷಯ ಇದೀಗ ಬಯಲಾಗಿದೆ.

    ಉಮೇಶ್ ಪಾಲ್ ಹತ್ಯೆ ಪ್ರಕರಣದ ಆರೋಪಿಗಳಾದ ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ಅವರನ್ನು ಪತ್ರಕರ್ತರ ಸೋಗಿನಲ್ಲಿ ಬಂದು ಏಪ್ರಿಲ್ 16ರಂದು ಪ್ರಯಾಗ್‍ರಾಜ್‍ನಲ್ಲಿ ಗುಂಡು ಹಾರಿಸಿದ್ದರು. ಅತೀಕ್ ಮತ್ತು ಆತನ ಸಹೋದರನನ್ನು ಸಂದರ್ಶಿಸಲು ಬಂದಿದ್ದ ಹಲವು ಪೊಲೀಸ್ ಅಧಿಕಾರಿಗಳು ಮತ್ತು ಮಾಧ್ಯಮದವರ ಸಮ್ಮುಖದಲ್ಲಿ ಗುಂಡಿನ ದಾಳಿ ನಡೆಸಿದ್ದರು.

    ಅತೀಕ್ ಅಹ್ಮದ್‍ನ ಪಾತಕ ಕೃತ್ಯಗಳ ಜೊತೆಗೆ ಅಕ್ರಮ ಆಸ್ತಿಗಳ ಮೇಲೆ ಕಣ್ಣಿಟ್ಟಿದ್ದ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರವು ಈತನನ್ನು ಹೆಡೆಮುರಿ ಕಟ್ಟುವ ಎಲ್ಲಾ ಯತ್ನಗಳನ್ನು ಮಾಡಿದ್ದರು. ಅಷ್ಟೇ ಅಲ್ಲದೇ ಅತೀಕ್‍ಗೆ ಸೇರಿದ್ದ 1,169 ಕೋಟಿ ರೂ. ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿತ್ತು. ವಶಪಡಿಸಿಕೊಂಡಿದ್ದ ಈ ಆಸ್ತಿಗಳ ಪೈಕಿ 750 ಕೋಟಿ ರೂ. ಮೌಲ್ಯದ ಭೂಮಿ ಹಾಗೂ 417 ಕೋಟಿ ರೂ. ಮೌಲ್ಯದ ಇತರೆ ಆಸ್ತಿ (Property) ಸೇರಿವೆ. ಆದರೂ ಪೊಲೀಸರು ತನಿಖೆ ನಡೆಸಿದಷ್ಟು ಇನ್ನಷ್ಟು ಆಸ್ತಿಗಳು ಪತ್ತೆಯಾಗುತ್ತಲೇ ಇದೆ. ಇದನ್ನೂ ಓದಿ: ಅತೀಕ್ ಅಹ್ಮದ್ ಪ್ರಕರಣ – ಐವರು ಪೊಲೀಸರ ಅಮಾನತು

    ಆದರೆ ಈಗಾಗಲೇ ಅತೀಕ್ ಹಾಗೂ ಆತನ ಸಹೋದರ ಹತ್ಯೆಗೀಡಾಗಿದ್ದಾನೆ. ಅತೀಕ್‍ನ ಮಗ ಕೂಡ ಎನ್‍ಕೌಂಟರ್‌ಗೆ ಬಲಿಯಾಗಿದ್ದಾನೆ. ಇನ್ನಿಬ್ಬರು ಪುತ್ರರು ಜೈಲು ಸೇರಿದ್ದಾರೆ. ಪತ್ನಿ ಪರಾರಿಯಾಗಿದ್ದಾಳೆ. ಹೀಗಾಗಿ ಅತೀಕ್‍ನ ನಿಜವಾದ ಆಸ್ತಿ ಎಂದಾದರೂ ಪೂರ್ಣ ಪ್ರಮಾಣದಲ್ಲಿ ಬಯಲಾಗುವುದೇ ಎಂಬ ಅನುಮಾನವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. 2019ರಲ್ಲಿ ಸ್ವಂತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅತೀಕ್ ಅಹ್ಮದ್ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಅಫಿಡವಿಟ್‍ನಲ್ಲಿ 25 ಕೋಟಿ ರೂ. ಆಸ್ತಿ ಘೋಷಣೆ ಮಾಡಿಕೊಂಡಿದ್ದ. ಇದನ್ನೂ ಓದಿ: ಗ್ಯಾಂಗ್‍ಸ್ಟಾರ್ ಅತೀಕ್ ಅಹ್ಮದ್ ಬೆಂಬಲಿಗ ಕಾಂಗ್ರೆಸ್ ಸ್ಟಾರ್ ಪ್ರಚಾರಕ – ಕರಂದ್ಲಾಂಜೆ ಖಂಡನೆ

  • 1,214 ಕೋಟಿ ಆಸ್ತಿಯ ಒಡೆಯ ಡಿಕೆ ಶಿವಕುಮಾರ್‌- ಪತ್ನಿ, ಮಕ್ಕಳ ಬಳಿ ಎಷ್ಟು ಆಸ್ತಿಯಿದೆ?

    1,214 ಕೋಟಿ ಆಸ್ತಿಯ ಒಡೆಯ ಡಿಕೆ ಶಿವಕುಮಾರ್‌- ಪತ್ನಿ, ಮಕ್ಕಳ ಬಳಿ ಎಷ್ಟು ಆಸ್ತಿಯಿದೆ?

    ರಾಮನಗರ: ಕನಕಪುರ (Kanakapura) ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ (Congress) ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ  ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ (DK Shivakumar) ತನ್ನ ಬಳಿ ಒಟ್ಟು 1,214 ಕೋಟಿ ರೂ. ಮೌಲ್ಯದ ಆಸ್ತಿಯಿದೆ (Assets) ಎಂದು ಘೋಷಿಸಿಕೊಂಡಿದ್ದಾರೆ.

    2018ರಲ್ಲಿ ಡಿಕೆಶಿ 840 ಕೋಟಿ ರೂ. ಮೌಲ್ಯದ ಆಸ್ತಿಯಿದೆ ಎಂದು ಘೋಷಿಸಿಕೊಂಡಿದ್ದರು. ಡಿಕೆಶಿ ಪತ್ನಿಯ ಸ್ಥಿರಾಸ್ತಿ ಹಾಗೂ ಚರಾಸ್ತಿ ಒಟ್ಟು ಮೌಲ್ಯ 153.30ಕೋಟಿ ರೂ. ಇದ್ದು ಇದರಲ್ಲಿ ಅವಿಭಜಿತ ಕುಟುಂಬದ ಬಂದ 61 ಕೋಟಿ ರೂ. ಆಸ್ತಿ ಇದೆ. ಡಿಕೆಶಿ ಬಳಿ ಇರುವ ಚರಾಸ್ತಿ ಮೌಲ್ಯ 244 ಕೋಟಿ ರೂ., ಪತ್ನಿ ಹೆಸರಿನ ಚರಾಸ್ತಿ 20.30 ಕೋಟಿ ರೂ. ಹಾಗೂ ಅವಿಭಜಿತ ಕುಟುಂಬದ ಚರಾಸ್ತಿ 2.74 ಕೋಟಿ ರೂ. ಇದ್ದು ಮಗನ ಹೆಸರಲ್ಲಿ 1.29 ಲಕ್ಷ ರೂ. ಮಗಳ ಹೆಸರಲ್ಲಿ 12 ಲಕ್ಷ ರೂ. ಚರಾಸ್ತಿ ಇದೆ.

    ಡಿಕೆಶಿ ಸ್ಥಿರಾಸ್ತಿ ಒಟ್ಟು ಮೌಲ್ಯ 970 ಕೋಟಿ ರೂ. ಆಗಿದ್ದು ಪತ್ನಿ ಹೆಸರಿನಲ್ಲಿ 113 ಕೋಟಿ ರೂ. ಸ್ಥಿರಾಸ್ತಿ, ಅವಿಭಜಿತ ಕುಟುಂಬದ ಒಟ್ಟು 54.33 ಕೋಟಿ ಸ್ಥಿರಾಸ್ತಿ ಘೋಷಣೆ ಮಾಡಿಕೊಂಡಿದ್ದಾರೆ. ಜೊತೆಗೆ ಕೃಷಿ, ಬಾಡಿಗೆ ಮತ್ತು ವಿವಿಧ ಕಂಪನಿಗಳಲ್ಲಿ ಶೇರು, ಉದ್ದಿಮೆ ಗಳ ಮೂಲಕ ತಮ್ಮ ಆದಾಯದ ಮೂಲ ತೋರಿಸಿದ್ದಾರೆ.

    ತನ್ನ ಬಳಿ 2.184 ಕೆ.ಜಿ ಚಿನ್ನ, 12 ಕೆಜಿ ಬೆಳ್ಳಿ, 2.26 ಕೋಟಿ ರೂ. ಮೌಲ್ಯದ ವಜ್ರ ಮತ್ತು ಮಾಣಿಕ್ಯದ ಆಭರಣ, 9 ಲಕ್ಷ ರೂ. ಮೌಲ್ಯದ ರೊಲೆಕ್ಸ್ ವಾಚ್, 23 ಲಕ್ಷ ರೂ. ಮೌಲ್ಯದ ಹ್ಯೂಬ್ಲೋಟ್‌ ವಾಚ್‌ ಇದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಾಮಪತ್ರ ಸಲ್ಲಿಕೆ ಮಾಡಿದ ಘಟಾನುಘಟಿ ಅಭ್ಯರ್ಥಿಗಳ ಆಸ್ತಿ ಎಷ್ಟು?

     

    ಪತ್ನಿ ಹೆಸರಿನಲ್ಲಿ 2.600 ಕೆ.ಜಿ ಚಿನ್ನ, 20 ಕೆ.ಜಿ ಬೆಳ್ಳಿ, ಕುಟುಂಬದ ಆಸ್ತಿ 1 ಕೆ.ಜಿ ಚಿನ್ನ, 10 ಕೆ.ಜಿ ಬೆಳ್ಳಿ, ಮಗನ ಹೆಸರಿನಲ್ಲಿ 675 ಗ್ರಾಂ ಚಿನ್ನ, ಮಗಳ ಹೆಸರಿನಲ್ಲಿ 675 ಗ್ರಾಂ ಚಿನ್ನ ಹಾಗೂ ಅವಿಭಜಿತ ಕುಟುಂಬದಿಂದ 1.ಕೆಜಿ ಚಿನ್ನ, 10 ಕೆಜಿ ಬೆಳ್ಳಿ ಹೊಂದಿದ್ದಾರೆ.

    ಒಟ್ಟು 226 ಕೋಟಿ ರೂ. ಸಾಲ ಇದ್ದು, ಪತ್ನಿ ಹೆಸರಲ್ಲಿ 34.53 ಕೋಟಿ ರೂ. ಮಗನ ಹೆಸರಲ್ಲಿ 3.81 ಕೋಟಿ ರೂ. ಹಾಗೂ ಮಗಳ ಹೆಸರಿನಲ್ಲಿ 8.25 ಕೋಟಿ ರೂ. ಸಾಲ ಇದೆ ಎಂದು ತೋರಿಸಿದ್ದಾರೆ.

    4 ಆದಾಯ ತೆರಿಗೆ, 1 ಲೋಕಾಯುಕ್ತ, 2 ಜಾರಿ ನಿರ್ದೇಶನಾಲಯ, ಕೋವಿಡ್ ನಿಯಮಾವಳಿ ಸಂಬಂಧ 6 ಪ್ರಕರಣ ಸೇರಿದಂತೆ ಡಿಕೆಶಿ ವಿರುದ್ಧ ಒಟ್ಟು 19 ಪ್ರಕರಣಗಳಿವೆ.  ಡಿಕೆಶಿ ಒಟ್ಟು 14.24 ಕೋಟಿ ರೂ ವಾರ್ಷಿಕ ಆದಾಯ ಹೊಂದಿದ್ದರೆ  ಇವರ ಪತ್ನಿ 1.90 ಕೋಟಿ ರೂ. ವಾರ್ಷಿಕ ಆದಾಯ ಹೊಂದಿದ್ದಾರೆ.

  • ನಾಮಪತ್ರ ಸಲ್ಲಿಕೆ ಮಾಡಿದ ಘಟಾನುಘಟಿ ಅಭ್ಯರ್ಥಿಗಳ ಆಸ್ತಿ ಎಷ್ಟು?

    ನಾಮಪತ್ರ ಸಲ್ಲಿಕೆ ಮಾಡಿದ ಘಟಾನುಘಟಿ ಅಭ್ಯರ್ಥಿಗಳ ಆಸ್ತಿ ಎಷ್ಟು?

    ಬೆಂಗಳೂರು: ವಿಧಾನಸಭೆ ಚುನಾವಣೆಗೆ (Assembly Election) ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿದಂತೆ ಪಕ್ಷೇತರ ಅಭ್ಯರ್ಥಿಗಳು (Candidates) ಈಗಾಗಲೇ ತಮ್ಮ ನಾಮಪತ್ರವನ್ನು ಸಲ್ಲಿಸುತ್ತಿದ್ದಾರೆ. ಸೋಮವಾರ ನಾಮಪತ್ರ ಸಲ್ಲಿಸಿರುವ ಘಟನಾನುಘಟಿ ಅಭ್ಯರ್ಥಿಗಳ ಪ್ರಮುಖ ಆಸ್ತಿ (Property) ವಿವರಗಳು ಇದೀಗ ಬಹಿರಂಗವಾಗಿದೆ.

    ರಾಜಕೀಯ ಕುಬೇರರು:
    ಎಂಟಿಬಿ ನಾಗರಾಜ್, ಹೊಸಕೋಟೆ ಅಭ್ಯರ್ಥಿ:
    * ಒಟ್ಟು ಆಸ್ತಿ ಮೌಲ್ಯ 1,510 ಕೋಟಿ ರೂ.
    * ಚರಾಸ್ತಿ ಮೌಲ್ಯ 372 ಕೋಟಿ ರೂ.
    * ಸ್ಥಿರಾಸ್ತಿ ಮೌಲ್ಯ 792 ಕೋಟಿ ರೂ.
    * ಪತ್ನಿ ಹೆಸರಲ್ಲಿ 437 ಕೋಟಿ ಮೌಲ್ಯದ ಆಸ್ತಿ
    * ಸಾಲ 71 ಕೋಟಿ ರೂ.
    * ಕಾರುಗಳ ಮೌಲ್ಯ 1.72 ಕೋಟಿ ರೂ.

    ಕುಮಾರಸ್ವಾಮಿ, ಚನ್ನಪಟ್ಟಣ ಅಭ್ಯರ್ಥಿ:
    * ಒಟ್ಟು ಆಸ್ತಿ ಮೌಲ್ಯ – 46.57 ಕೋಟಿ ರೂ.
    * 750 ಗ್ರಾಂ ಚಿನ್ನ, ಸಾಲ 17 ಕೋಟಿ
    * ಪತ್ನಿ ಹೆಸರಲ್ಲಿ 124 ಕೋಟಿ ಮೌಲ್ಯದ ಆಸ್ತಿ, 3.8 ಕೆಜಿ ಚಿನ್ನ
    * ಕುಮಾರಸ್ವಾಮಿ ವಿರುದ್ಧ 5 ಕ್ರಿಮಿನಲ್ ಕೇಸ್

    ಹೆಚ್‌ಡಿ ರೇವಣ್ಣ, ಹೊಳೆನರಸೀಪುರ ಅಭ್ಯರ್ಥಿ:
    * ಒಟ್ಟು ಆಸ್ತಿ ಮೌಲ್ಯ – 43.37 ಕೋಟಿ ರೂ.
    * 9 ಕೋಟಿ ರೂ. ಸಾಲ ಮಾಡಿರುವ ರೇವಣ್ಣ
    * ಪತ್ನಿ ಹೆಸರಲ್ಲಿ 38 ಕೋಟಿ ರೂ. ಮೌಲ್ಯದ ಆಸ್ತಿ (5 ಕೋಟಿ ಸಾಲ)
    * 3 ಕೆಜಿ ಚಿನ್ನ, 45 ಕೆಜಿ ಬೆಳ್ಳಿ, 25 ಕ್ಯಾರೆಟ್ ವಜ್ರ

    ವಿಜಯೇಂದ್ರ, ಶಿಕಾರಿಪುರ ಅಭ್ಯರ್ಥಿ:
    * 103 ಕೋಟಿ ರೂ. ಮೌಲ್ಯದ ಆಸ್ತಿ
    * ಒಂದು ಟ್ರ್ಯಾಕ್ಟರ್, ಒಂದು ಟಿಲ್ಲರ್
    * ಪತ್ನಿ ಹೆಸರಲ್ಲಿ 21 ಕೋಟಿ ರೂ. ಮೌಲ್ಯ ಆಸ್ತಿ

    ಎಂಬಿ ಪಾಟೀಲ್, ಕಾಂಗ್ರೆಸ್ ಅಭ್ಯರ್ಥಿ:
    * 105 ಕೋಟಿ ರೂ. ಮೌಲ್ಯದ ಆಸ್ತಿ ಇದೆ
    * 34 ಕೋಟಿ ರೂ. ಸಾಲ ಹೊಂದಿದ್ದಾರೆ
    * 5 ಕ್ರಿಮಿನಲ್ ಕೇಸ್ ಇದೆ

    ಆರ್ ಅಶೋಕ್, ಪದ್ಮನಾಭನಗರ ಅಭ್ಯರ್ಥಿ:
    * ಒಟ್ಟು ಆಸ್ತಿ ಮೌಲ್ಯ 5.28 ಕೋಟಿ ರೂ.
    * ಒಟ್ಟು ಸಾಲ 97.78 ಲಕ್ಷ ರೂ.
    * ಪತ್ನಿಯಿಂದಲೇ 42 ಲಕ್ಷ ರೂ. ಸಾಲ

    ಮುನಿರತ್ನ, ಆರ್‌ಆರ್ ನಗರ ಅಭ್ಯರ್ಥಿ:
    * ಒಟ್ಟು ಆಸ್ತಿ ಮೌಲ್ಯ 270 ಕೋಟಿ ರೂ.
    * ಚರಾಸ್ತಿ ಮೌಲ್ಯ – 31.34 ಕೋಟಿ ರೂ.
    * ಸ್ಥಿರಾಸ್ತಿ ಮೌಲ್ಯ – 239.29 ಕೋಟಿ ರೂ.
    * ಸಾಲದ ಮೊತ್ತ – 93.48 ಕೋಟಿ ರೂ.
    * ಪತ್ನಿ ಹೆಸರಲ್ಲಿ 22 ಕೋಟಿ ರೂ. ಮೌಲ್ಯದ ಆಸ್ತಿ ಇದನ್ನೂ ಓದಿ: ಭಾರೀ ಸಂಖ್ಯೆಯಲ್ಲಿ ಹೊಸಬರಿಗೆ ಮಣೆ – ಕರ್ನಾಟಕ ಬಿಜೆಪಿಯಿಂದ ಗುಜರಾತ್‌ ದಾಖಲೆ ಬ್ರೇಕ್‌

    ಉದಯ್ ಗರುಡಾಚಾರ್, ಚಿಕ್ಕಪೇಟೆ ಅಭ್ಯರ್ಥಿ:
    * ಒಟ್ಟು ಆಸ್ತಿ ಮೌಲ್ಯ 200.44 ಕೋಟಿ ರೂ.
    * 22 ಕೆಜಿ ಚಿನ್ನಾಭರಣ ಹೊಂದಿದ್ದಾರೆ
    * ಸಾಲದ ಪ್ರಮಾಣ – 47.63 ಕೋಟಿ ರೂ.

    ಅರುಣಾಲಕ್ಷ್ಮಿ, ಬಳ್ಳಾರಿ ನಗರ ಅಭ್ಯರ್ಥಿ:
    * 200 ಕೋಟಿ ರೂ. ಮೌಲ್ಯದ ಆಸ್ತಿ
    * ಚರಾಸ್ತಿ ಮೌಲ್ಯ – 96.23 ಕೋಟಿ ರೂ.
    * ಸ್ಥಿರಾಸ್ತಿ ಮೌಲ್ಯ – 104.38 ಕೋಟಿ ರೂ.
    * 16.44 ಕೋಟಿ ರೂ. ಮೌಲ್ಯದ ಚಿನ್ನಾಭರಣ ಇದನ್ನೂ ಓದಿ: ಲಿಂಬಾವಳಿ, ರಾಮದಾಸ್‌ಗೆ ಟಿಕೆಟ್‌ ಮಿಸ್‌- ಬಿಜೆಪಿಯ10 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

  • ಹಾಡಹಗಲೇ ವ್ಯಕ್ತಿಯ ಬರ್ಬರ ಹತ್ಯೆ – ಸಹೋದರಿ ಪ್ರೀತಿಸಿ ಮದುವೆಯಾಗಿದ್ದಕ್ಕೆ ದ್ವೇಷ

    ಹಾಡಹಗಲೇ ವ್ಯಕ್ತಿಯ ಬರ್ಬರ ಹತ್ಯೆ – ಸಹೋದರಿ ಪ್ರೀತಿಸಿ ಮದುವೆಯಾಗಿದ್ದಕ್ಕೆ ದ್ವೇಷ

    ರಾಮನಗರ: ಪ್ರೀತಿಸಿ ಮದುವೆಯಾದರು ಎಂಬ ಒಂದೇ ಕಾರಣಕ್ಕೆ ಬಾವನನ್ನೇ ಬಾಮೈದ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆಗೈದಿರುವ (Murder) ಘಟನೆ ರಾಮನಗರ (Ramanagara) ತಾಲೂಕಿನ ಕೆಜಿ ಹೊಸಹಳ್ಳಿ (K.G.Hosahalli) ಗ್ರಾಮದಲ್ಲಿ ನಡೆದಿದೆ.

    ಕೆಜಿ ಹೊಸಹಳ್ಳಿ ಗ್ರಾಮದ ಅಶ್ವತ್ಥ್ ಗೌಡ(28) ಕೊಲೆಯಾದ ದುರ್ದೈವಿ. ಕೆಜಿ ಹೊಸಳ್ಳಿ ಗ್ರಾಮದ ಅಶ್ವತ್ಥ್ ಗೌಡ ಹಾಗೂ ಚನ್ನಪಟ್ಟಣ (Channapatna) ನಗರದ ಮಹದೇಶ್ವರ ಬಡಾವಣೆಯ ಸಹನಾ, ದೂರದ ಸಂಬಂಧಿಗಳು. ಅಲ್ಲದೇ ಒಂದೇ ಜಾತಿಯವರಾಗಿದ್ದರು. ಹೀಗಾಗಿ ಕಳೆದ ಏಳು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಪ್ರೀತಿಯ (Love) ವಿಚಾರ ಎರಡೂ ಕುಟುಂಬದವರಿಗೂ ಗೊತ್ತಿತ್ತು. ವಿರೋಧದ ನಡುವೆ ಕಳೆದ ಎರಡು ತಿಂಗಳ ಹಿಂದೆ ಅಶ್ವತ್ಥ್ ಹಾಗೂ ಸಹನಾ ಧರ್ಮಸ್ಥಳದಲ್ಲಿ ಮದುವೆಯಾಗಿದ್ದರು. ನಂತರ ಇಬ್ಬರೂ ಕೂಡ ಕೆಜಿ ಹೊಸಹಳ್ಳಿ ಗ್ರಾಮದಲ್ಲಿ ವಾಸವಾಗಿದ್ದರು. ಇದನ್ನೂ ಓದಿ: 4 ವರ್ಷದ ಪ್ರೀತಿಗೆ ಎಳ್ಳುನೀರು- ರೊಚ್ಚಿಗೆದ್ದು ಅಪ್ರಾಪ್ತ ಪ್ರಿಯತಮೆಗೆ ಚಾಕು ಇರಿದ! 

    ಮಂಗಳವಾರ ರಾಮನಗರದಲ್ಲಿ ಬೀಗರ ಔತಣಕೂಟಕ್ಕೆ ಹೋಗಿ ವಾಪಸ್ ಬರುವ ವೇಳೆ ಕೆಜಿ ಹೊಸಹಳ್ಳಿ ಗ್ರಾಮದಲ್ಲಿ ಅಶ್ವತ್ಥ್ ಮನೆಯಿಂದ ಕೂಗಳತೆ ದೂರದಲ್ಲಿ ಹಿಪ್ಪುನೇರಳೆ ಗಿಡಗಳ ಮಧ್ಯದಲ್ಲಿ ಹೊಂಚು ಹಾಕಿ ಕುಳಿತಿದ್ದ ಸಹನಾಳ ಸಹೋದರ ಭರತ್ ಮತ್ತು ಗ್ಯಾಂಗ್ ಏಕಾಏಕಿ ದಾಳಿ (Attack) ನಡೆಸಿದೆ. ರಾಮನಗರದಿಂದ ಬರುವುದನ್ನೇ ಕಾದು ಬೈಕ್‌ನಲ್ಲಿ ಹಿಂದಿನಿಂದ ಬಂದು ಮೊದಲಿಗೆ ಸಹನಾಳನ್ನು ತಳ್ಳಿದ್ದಾರೆ. ಇದರಿಂದಾಗಿ ಆಕೆ ಕೆಳಗೆ ಬಿದ್ದಿದ್ದಾಳೆ. ನಂತರ ಅಶ್ವತ್ಥ್ ಮೇಲೆ ದಾಳಿ ನಡೆಸಲು ಮುಂದಾಗಿದ್ದಾರೆ.

    ಸ್ವಲ್ಪ ದೂರಕ್ಕೆ ಅಶ್ವತ್ಥ್ ಓಡಿ ಹೋಗಿದ್ದಾನೆ. ನೆಲಕ್ಕೆ ಬೀಳುತ್ತಿದ್ದಂತೆ ಮಾರಕಾಸ್ತ್ರಗಳಿಂದ ಕೊಚ್ಚಿದ್ದಾರೆ. ಅನಂತರ ಅಲ್ಲೇ ಇದ್ದ ಸೈಜ್‌ಗಲ್ಲನ್ನು ಆತನ ತಲೆಮೇಲೆ ಎತ್ತಿ ಹಾಕಿದ್ದಾರೆ. ಹೀಗಾಗಿ ಅಶ್ವತ್ಥ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅಲ್ಲದೇ ಬಿಡಿಸಲು ಹೋದ ಸಹನಾ ಮೇಲೂ ಕೂಡ ದಾಳಿ ಮಾಡಿದ್ದಾರೆ. ಗ್ರಾಮಸ್ಥರು ಬರುತ್ತಿದ್ದಂತೆ ಎರಡು ಬೈಕ್‌ಗಳಲ್ಲಿ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಬೀದಿ ನಾಯಿಗಳ ದಾಳಿ – ಅಪ್ರಾಪ್ತ ಬಾಲಕ ಮೃತ್ಯು 

    ಆರೋಪಿ ಭರತ್ ಸಹನಾಳಿಗೆ ಮಲತಾಯಿ ಮಗ. ಭರತ್‌ನ ತಾಯಿ ತೀರಿ ಹೋದ ನಂತರ ಆತನ ತಂದೆ ಸಹನಾಳ ತಾಯಿಯನ್ನು ಮದುವೆಯಾಗಿದ್ದರು. ಇವರು ಸಾಕಷ್ಟು ಸಿರಿವಂತರಾಗಿದ್ದರು. ಚನ್ನಪಟ್ಟಣದಲ್ಲಿ ಕಾರು ವಾಷಿಂಗ್ ಸೆಂಟರ್ ಸಹಾ ಇದೆ. ಆದರೆ ಭರತ್‌ಗೆ ಮೊದಲಿನಿಂದಲೂ ಸಹನಾಳ ಮೇಲೆ ದ್ವೇಷವಿತ್ತು. ಸಹನಾ ಮತ್ತು ಅಶ್ವತ್ಥ್ ಮದುವೆಯಾಗಲು ಕೂಡ ಭರತ್‌ನ ವಿರೋಧವಿತ್ತು. ಹೀಗಾಗಿ ಚನ್ನಪಟ್ಟಣ ಠಾಣೆಯಲ್ಲಿ ದೂರು ಸಹಾ ನೀಡಿದ್ದ. ಪೊಲೀಸರ ಮುಂದೆ ಹೇಳಿಕೆ ಸಹಾ ಕೊಟ್ಟಿದ್ದರು. ರಾಜಿ ಪಂಚಾಯತಿ ಕೂಡ ನಡೆದಿತ್ತು.

    ಸಹನಾ ನನಗೆ ನಿಮ್ಮ ಆಸ್ತಿ ಬೇಡವೆಂದು ಬರೆದುಕೊಟ್ಟಿದ್ದಳು. ಆದರೂ ಸಹಾ ಆಸ್ತಿ (Property) ಎಲ್ಲಿ ಕೈತಪ್ಪುತ್ತದೆಯೋ ಎಂದು ಪ್ಲಾನ್ ಮಾಡಿದ ಭರತ್ ತನ್ನ ಜೊತೆ ಇಬ್ಬರನ್ನು ಕರೆದುಕೊಂಡು ಬಂದು ಅಶ್ವತ್ಥ್ ಮೇಲೆ ದಾಳಿ ಮಾಡಿ ಕೊಲೆಗೈದಿದ್ದಾನೆ. ಅಶ್ವತ್ಥ್‌ನ ಚಲನವಲನಗಳ ಬಗ್ಗೆ ಕಳೆದ ಹಲವು ದಿನಗಳಿಂದ ಮಾಹಿತಿ ಪಡೆದಿದ್ದಾನೆ. ಅಲ್ಲದೇ ಮಂಗಳವಾರ ರಾಮನಗರಕ್ಕೆ ಹೋಗಿರುವುದು ಮತ್ತು ಬರುವ ಸಮಯವನ್ನು ತಿಳಿದುಕೊಂಡು ಅಶ್ವತ್ಥ್‌ನ ಮನೆಯ ಸಮೀಪವೇ ಹತ್ಯೆ ಮಾಡಿದ್ದಾನೆ. ಹತ್ಯೆಗೂ ಕೆಲವೇ ದೂರದಲ್ಲಿ ಅಶ್ವತ್ಥ್‌ನ ತಂದೆ ತಾಯಿ ಸಹಾ ಬರುತ್ತಿದ್ದರು. ಒಟ್ಟಿಗೆ ಬಂದಿದ್ದರೆ ಅಟ್ಯಾಕ್ ಮಾಡುವುದು ಕಷ್ಟವಾಗುತ್ತಿತ್ತು. ಆದರೆ ಇಬ್ಬರು ಎನ್‌ಫೀಲ್ಡ್ ಬೈಕ್‌ನಲ್ಲಿ ಬರುತ್ತಿರುವುದನ್ನು ಮಾಹಿತಿ ಪಡೆದು ಏಕಾಏಕಿ ದಾಳಿ ನಡೆಸಿ ಕೊಲೆಗೈದಿದ್ದಾನೆ. ಇದನ್ನೂ ಓದಿ: ಸ್ಕ್ರೂಡ್ರೈವರ್‌ನಲ್ಲಿ ಪತ್ನಿಯ ಕತ್ತು, ಎದೆಗೆ ಚುಚ್ಚಿ ಕೊಲೆಗೆ ಮುಂದಾದ ಪತಿ! 

    ಕೊಲೆ ವಿಚಾರ ತಿಳಿಯುತ್ತಿದ್ದಂತೆ ಇಡೀ ಗ್ರಾಮದ ಜನರೇ ಸ್ಥಳದಲ್ಲಿ ನೆರೆದಿದ್ದರು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಆರೋಪಿಗಳಿಗೆ ಸಹಾಯ ಮಾಡಿದವರನ್ನು ಸ್ಥಳಕ್ಕೆ ಕರೆಸಿ ಎಂದು ಮೃತದೇಹವನ್ನು ಎತ್ತಲು ಬಿಡದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ಸಮಾಧಾನ ಪಡಿಸಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ದಾಳಿಯಲ್ಲಿ ಗಾಯಗೊಂಡಿರುವ ಸಹನಾ ರಾಮನಗರ ಜಿಲ್ಲಾಸ್ಪತ್ರೆಯಲ್ಲಿ (Distrcit Hospital) ಚಿಕಿತ್ಸೆ ಪಡೆಯುತ್ತಿದ್ದಾರೆ.

    ಘಟನೆ ನಂತರ ಕೊಲೆ ಮಾಡಿದ ಭರತ್ ಸೇರಿ ಮೂವರು ಆರೋಪಿಗಳನ್ನು ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ. ಒಟ್ಟಾರೆಯಾಗಿ ಸಹೋದರಿ ಪ್ರೀತಿಸಿ ಮದುವೆಯಾದಳು. ಆಸ್ತಿ ನನಗೆ ಸಿಗುವುದಿಲ್ಲ ಎಂಬ ಕಾರಣಕ್ಕೆ ತನ್ನ ಬಾವನನ್ನೇ ಭೀಕರವಾಗಿ ಹತ್ಯೆ ಮಾಡಿ ತಂಗಿಯ ಬಾಳನ್ನು ಕತ್ತಲೆಗೆ ನೂಕಿದ್ದಾನೆ. ಇದನ್ನೂ ಓದಿ: ವರದಕ್ಷಿಣೆ ಕಿರುಕುಳ ಆರೋಪ- IAS ಅಧಿಕಾರಿ ವಿರುದ್ಧ ಪತ್ನಿಯಿಂದ ದೂರು

  • ಐವರು ಮಕ್ಕಳಿದ್ದರೂ, ಆಸ್ತಿಯೆಲ್ಲಾ UP ಸರ್ಕಾರದ ಹೆಸರಿಗೆ ಬರೆದ ವೃದ್ಧ

    ಐವರು ಮಕ್ಕಳಿದ್ದರೂ, ಆಸ್ತಿಯೆಲ್ಲಾ UP ಸರ್ಕಾರದ ಹೆಸರಿಗೆ ಬರೆದ ವೃದ್ಧ

    ಲಕ್ನೋ: ವೃದ್ಧನೊಬ್ಬ ತಮ್ಮ ಮಕ್ಕಳು ಕೈಬಿಟ್ಟಿದ್ದಕ್ಕೆ ಮನನೊಂದು 1.5 ಕೋಟಿ ರೂ. ಮೌಲ್ಯದ ಆಸ್ತಿಯನ್ನು (Property) ಉತ್ತರ ಪ್ರದೇಶ (Uttar Pradesh) ಸರ್ಕಾರಕ್ಕೆ (Government) ವಿಲ್ ಮಾಡಿರುವ ವಿಚಿತ್ರ ಘಟನೆ ನಡೆದಿದೆ.

    ಮುಜಾಫರ್‌ನಗರದ ನಿವಾಸಿಯಾದ 85 ವರ್ಷದ ನಾಥು ಸಿಂಗ್ ಉತ್ತರ ಪ್ರದೇಶ ಸರ್ಕಾರಕ್ಕೆ ವಿಲ್ ಬರೆದಿರುವ ವ್ಯಕ್ತಿ. ನಾಥು ಸಿಂಗ್ ಒಟ್ಟು 1.5 ಕೋಟಿ ಮೌಲ್ಯದ ಮನೆ ಹಾಗೂ ಜಮೀನನಲ್ಲಿ ತಮ್ಮ ಪತ್ನಿ ಸಂತೋಷದಿಂದ ಜೀವನ ನಡೆಸುತ್ತಿದ್ದರು. ಜೊತೆಗೆ ಇವರಿಗೆ ಓರ್ವ ಪುತ್ರ ಸೇರಿ ಐವರು ಮಕ್ಕಳಿದ್ದಾರೆ. ನಾಥುಸಿಂಗ್ ಪುತ್ರ ಶಾಲಾ ಶಿಕ್ಷಕನಾಗಿ ಸಹರಾನ್‍ಪುರದಲ್ಲಿ ವಾಸವಾಗಿದ್ದ. ಉಳಿದ ನಾಲ್ವರು ಪುತ್ರಿಯರನ್ನು ಮದುವೆ ಮಾಡಿಕೊಡಲಾಗಿತ್ತು.

    ಇದಾದ ಬಳಿಕ ನಾಥುಸಿಂಗ್ ಅವರ ಪತ್ನಿ ಅನಾರೋಗ್ಯದಿಂದಾಗಿ ಮೃತಪಟ್ಟಿದ್ದಳು. ಅದಾದ ಕೆಲವೇ ದಿನಗಳಲ್ಲಿ ನಾಥುಸಿಂಗ್ ಐವರು ಮಕ್ಕಳಿದ್ದರೂ ಒಂಟಿ ಜೀವನ ನಡೆಸಲು ಪ್ರಾರಂಭಿಸಿದರು. ಈ ಒಂಟಿತನದಿಂದಾಗಿ ಬೇಸತ್ತು ಸುಮಾರು 7 ತಿಂಗಳ ಹಿಂದೆ ತಮ್ಮ ಗ್ರಾಮದಲ್ಲೇ ಇರುವ ವೃದ್ಧಾಶ್ರಮಕ್ಕೆ ಸೇರಿದರು.

    ಈ ವೇಳೆಯೂ ನಾಥುಸಿಂಗ್‍ನನ್ನು ಭೇಟಿ ಮಾಡಲು ಅವರ ಮಕ್ಕಳು ಯಾರು ಬಂದಿರಲಿಲ್ಲ. ಇದರಿಂದಾಗಿ ಬೇಸರಗೊಂಡ ನಾಥುಸಿಂಗ್ ತಮ್ಮ ಎಲ್ಲಾ ಆಸ್ತಿಯನ್ನು ರಾಜ್ಯ ಸರ್ಕಾರದ ಹೆಸರಿಗೆ ವಿಲ್ ಮಾಡಲು ನಿರ್ಧರಿಸಿದರು.

    ತಾವು ಯೋಚಿಸಿದಂತೆ ಇದೀಗ ಉತ್ತರಪ್ರದೇಶ ಸರ್ಕಾರಕ್ಕೆ ತಮ್ಮ ಸಮಸ್ತ ಆಸ್ತಿಯನ್ನು ವಿಲ್ ಮಾಡಿದ್ದು, ಮರಣದ ನಂತರ ಆ ಜಮೀನಿನಲ್ಲಿ ಶಾಲೆ ಹಾಗೂ ಆಸ್ಪತ್ರೆಯನ್ನು ನಿರ್ಮಿಸುವಂತೆ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲದೇ ವಿಲ್‍ನಲ್ಲಿ, ತಮ್ಮ ದೇಹವನ್ನು ವೈದ್ಯಕೀಯ ಕಾಲೇಜಿಗೆ ದಾನ ಮಾಡಬೇಕು. ಜೊತೆಗೆ ಅಂತಿಮ ವಿಧಿವಿಧಾನ ನಡೆಯುವಾಗ ಮಗ ಹಾಗೂ ನಾಲ್ವರು ಪುತ್ರಿಯರಿಗೆ ಪಾಲ್ಗೊಳ್ಳಲು ಬಿಟ್ಟುಕೊಳ್ಳಬಾರದು ಎಂದು ಬರೆದಿದ್ದಾರೆ. ಇದನ್ನೂ ಓದಿ: ಆಪ್ ನಾಯಕ ಮನೀಶ್ ಸಿಸೋಡಿಯಾ ಜೈಲುಪಾಲು

    ಈ ಬಗ್ಗೆ ಮಾತನಾಡಿದ ನಾಥುಸಿಂಗ್, ಈ ವಯಸ್ಸಿನಲ್ಲಿ ನಾನು ನನ್ನ ಮಗ ಮತ್ತು ಸೊಸೆಯೊಂದಿಗೆ ವಾಸಿಸಬೇಕಾಗಿತ್ತು. ಆದರೆ ಅವರು ನನ್ನನ್ನು ಚೆನ್ನಾಗಿ ನಡೆಸಿಕೊಳ್ಳಲಿಲ್ಲ. ಆದ್ದರಿಂದ ನಾನು ಆಸ್ತಿಯನ್ನು ವರ್ಗಾಯಿಸಲು ನನ್ನ ಮನಸ್ಸು ಮಾಡಿದೆ. ಈ ಎಲ್ಲ ಆಸ್ತಿಯೂ ನನ್ನ ಮರಣದ ನಂತರ ಸರ್ಕಾರಕ್ಕೆ ಸೇರಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಜೀವನದಿ ಕಾವೇರಿ ತೀರ್ಥ ಪ್ರಸಾದ ಇನ್ಮುಂದೆ ಭಕ್ತರ ಮನೆ ಬಾಗಿಲಿಗೆ

  • ಆಸ್ತಿ ಮುಟ್ಟುಗೋಲು ಹಾಕಲು ಬಂದಿದ್ದಕ್ಕೆ ಬೆಂಕಿ ಹಚ್ಚಿಕೊಂಡು ವ್ಯಕ್ತಿ ಆತ್ಮಹತ್ಯೆ

    ಆಸ್ತಿ ಮುಟ್ಟುಗೋಲು ಹಾಕಲು ಬಂದಿದ್ದಕ್ಕೆ ಬೆಂಕಿ ಹಚ್ಚಿಕೊಂಡು ವ್ಯಕ್ತಿ ಆತ್ಮಹತ್ಯೆ

    ನವದೆಹಲಿ: ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಕೋರ್ಟ್ (Court) ನೋಟಿಸ್ (Notice) ಕಳುಹಿಸಿದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಬೆಂಕಿ (Fire) ಹಚ್ಚಿಕೊಂಡು ಸಾವನ್ನಪ್ಪಿದ ಘಟನೆ ದೆಹಲಿಯಲ್ಲಿ (Delhi) ನಡೆದಿದೆ.

    ದೆಹಲಿಯ ಗೋಕಲ್‍ಪುರಿ ಗ್ರಾಮದಲ್ಲಿ ನಡೆದಿದೆ. ಮೃತನನ್ನು ವಂಶಿಕಾ ಕಲೆಕ್ಷನ್ಸ್ ಮಾಲೀಕ ಕಪಿಲ್ ಕುಮಾರ್ (33) ಎಂದು ಗುರುತಿಸಲಾಗಿದೆ. ನ್ಯಾಯಾಲಯದ ಆದೇಶದಂತೆ ಕೆಲವು ಅಧಿಕಾರಿಗಳು ಗೋಕಲ್ ಪುರಿ ಪೊಲೀಸ್ ಠಾಣೆಗೆ ಆಗಮಿಸಿ ಆಸ್ತಿ ಸ್ವಾಧೀನಪಡಿಸಿಕೊಳ್ಳಲು ಪೊಲೀಸರ ಸಹಾಯವನ್ನು ಕೋರಿದ್ದರು. ಅದರಂತೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಪೊಲೀಸ್ ಠಾಣೆಯ ಸಿಬ್ಬಂದಿ ಹೋಗಿದ್ದಾರೆ.

    CRIME 2

    ಈ ವಿಷಯ ತಿಳಿಯುತ್ತಿದ್ದಂತೆ ಕಪಿಲ್ ತನ್ನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳದಂತೆ ಒತ್ತಾಯಿಸಿದ್ದಾನೆ. ಅಷ್ಟೇ ಅಲ್ಲದೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಳ್ಳಲು ಪ್ರಯತ್ನಿಸಿದ್ದಾನೆ. ಈ ವೇಳೆ ಅಲ್ಲಿದ್ದ ಜನರು ಆತನನ್ನು ರಕ್ಷಿಸಲು ಹಾಗೂ ಬೆಂಕಿ ನಂದಿಸಲು ಪ್ರಯತ್ನಿಸಿದನು. ಇದನ್ನೂ ಓದಿ: ಸಿಲಿಂಡರ್ ಬ್ಲಾಸ್ಟ್- ಗುಡಿಸಲು ಬೆಂಕಿಗಾಹುತಿ, ಮಗಳ ಚಿಕಿತ್ಸೆಗೆ ತೆಗೆದಿಟ್ಟ ಹಣವೂ ಭಸ್ಮ

    crime

    ತಕ್ಷಣ ಅವರನ್ನು ಪೊಲೀಸ್ ಸಿಬ್ಬಂದಿ ಜಿಟಿಬಿ ಆಸ್ಪತ್ರೆಗೆ ರವಾನಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಗೋಕಲ್ ಪುರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರ ದುರ್ಮರಣ 

  • ಅಜ್ಜಿ ಹೊರಹಾಕಲು ಹೋಗಿ ತಾನೇ ಮನೆಯಿಂದ ಹೊರಬಿದ್ದ ಮೊಮ್ಮಗ!

    ಅಜ್ಜಿ ಹೊರಹಾಕಲು ಹೋಗಿ ತಾನೇ ಮನೆಯಿಂದ ಹೊರಬಿದ್ದ ಮೊಮ್ಮಗ!

    ತುಮಕೂರು: ಅಜ್ಜಿಯ ಆಸ್ತಿ (Grand Mother Property) ಯನ್ನು ಲಪಟಾಯಿಸಲು ಹೊಂಚು ಹಾಕಿದ ಮೊಮ್ಮಗನೋರ್ವ ಸ್ವಂತ ಅಜ್ಜಿಯನ್ನು ಮನೆಯಿಂದ ಹೊರಹಾಕಿದ ಪರಿಣಾಮ ಇದೀಗ ತಾನೇ ಮನೆಯಿಂದ ಹೊರಬಿದ್ದ ಪ್ರಸಂಗವೊಂದು ನಡೆದಿದೆ.

    ತುಮಕೂರು ಕೊರಟಗೆರೆ ಪಟ್ಟಣದ 3 ನೇ ವಾರ್ಡ್ ನಲ್ಲಿ ಘಟನೆ ನಡೆದಿದೆ. 80 ವರ್ಷದ ವೃದ್ಧೆ ಕಾವಲಮ್ಮಳನ್ನು ಮೊಮ್ಮಗ ಮಾರುತಿ ಮನೆಯಿಂದ ಹೊರಹಾಕಿದ್ದಾನೆ. ಮಾರುತಿ ಹಾಗೂ ಆತನ ತಾಯಿ ಲಕ್ಷ್ಮಮ್ಮ ಅಜ್ಜಿ ಕಾವಲಮ್ಮ ಮನೆಯಲ್ಲಿ ವಾಸವಿದ್ದರು. ಇದನ್ನೂ ಓದಿ: ನಿರ್ಮಲಾ ಸೀತಾರಾಮನ್‌ರಿಂದ 5ನೇ ಬಾರಿಯ ಬಜೆಟ್ – ಭಾರೀ ನಿರೀಕ್ಷೆಯಲ್ಲಿ ನಾಗರಿಕರು

    ಕಳೆದ 8 ತಿಂಗಳ ಹಿಂದೆ ಲಕ್ಷ್ಮಮ್ಮ ಕ್ಯಾನ್ಸರ್ (Cancer) ನಿಂದ ಸಾವನಪ್ಪಿದ್ದಳು. ಲಕ್ಷ್ಮಮ್ಮ ಮೃತಪಟ್ಟ ಬಳಿಕ ಮೊಮ್ಮಗ ಮಾರುತಿ, ಅಜ್ಜಿ ಕಾವಲಮ್ಮಳನ್ನು ಹೊರಹಾಕಿದ್ದಾನೆ. ಕಳೆದ 8 ತಿಂಗಳಿಂದ ವೃದ್ಧೆ ಕಾವಲಮ್ಮ ಪರರ ಮನೆಯಲ್ಲಿ ಆಶ್ರಯ ಪಡೆದಿದ್ದಳು. ಇತ್ತ ಸಂಬಂಧಿಕರು ಮಾರುತಿ ವಿರುದ್ಧ ಹಿರಿಯ ನಾಗರಿಕರ ಹಕ್ಕು ಕಾಯ್ದೆ ಅಡಿ ದೂರು ನೀಡಿದ್ದರು. ಪ್ರಕರಣದ ಬಗ್ಗೆ ಕೂಲಂಕುಶವಾಗಿ ವಿಚಾರಣೆ ನಡೆಸಿದ್ದ ಮಧುಗಿರಿ ಎಸಿ ರಿಶಿ ಆನಂದ್ (Madhugiri AC), ಬಳಿಕ ಪಾಪಿ ಮೊಮ್ಮಗನಿಂದ ವೃದ್ಧೆಗೆ ಮನೆ ಬಿಡಿಸಿಕೊಡುವಂತೆ ಎಸಿ ಆದೇಶ ಹೊರಡಿಸಿದ್ದಾರೆ.

    ಎಸಿ ಆದೇಶದಂತೆ ಅಧಿಕಾರಿಗಳು ಮಾರುತಿಯನ್ನ ಮನೆಯಿಂದ ಖಾಲಿ ಮಾಡಿಸಿದ್ದಾರೆ. ಇದೀಗ ತಹಶೀಲ್ದಾರ್ ಹಾಗೂ ಪೊಲೀಸರ ಸಮಕ್ಷಮದಲ್ಲಿ ವೃದ್ಧೆ ಕಾವಲಮ್ಮ ತನ್ನ ಮನೆ ಸೇರಿದ್ದಾರೆ. ಇದೀಗ ಎಸಿ ಆದೇಶಕ್ಕೆ ಸಾರ್ವಜನಿಕರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಜನಾರ್ದನ ರೆಡ್ಡಿ ಆಸ್ತಿ ಜಪ್ತಿಗೆ ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್

    ಜನಾರ್ದನ ರೆಡ್ಡಿ ಆಸ್ತಿ ಜಪ್ತಿಗೆ ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್

    ಬೆಂಗಳೂರು: ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆ ಮಾಡಿ ಹುಮ್ಮಸ್ಸಿನಲ್ಲಿದ್ದ ಜನಾರ್ದನ ರೆಡ್ಡಿಗೆ (Janardhan Reddy) ರಾಜ್ಯ ಸರ್ಕಾರ ಮಾಸ್ಟರ್ ಸ್ಟ್ರೋಕ್ ಕೊಟ್ಟಿದೆ.

    ರೆಡ್ಡಿಯ ಆಸ್ತಿ ಜಪ್ತಿಗೆ ಸರ್ಕಾರ ಕೊನೆಗೂ ಅಸ್ತು ಎಂದಿದೆ. ಅಕ್ರಮ ಗಣಿಗಾರಿಕೆ (Illegal Mining) ಹಣದಿಂದ ರೆಡ್ಡಿ ಹೊಸದಾಗಿ ತೆಲಂಗಾಣ ರಾಜ್ಯಗಳಲ್ಲಿ 219 ಕಡೆ ಆಸ್ತಿಗಳನ್ನು ಖರೀದಿ ಮಾಡಿದ್ದಾರೆ. ಈ ಆಸ್ತಿಗಳನ್ನು ಜಪ್ತಿ ಮಾಡಲು ಅನುಮತಿ ನೀಡಬೇಕೆಂದು ಸರ್ಕಾರಕ್ಕೆ 2022ರ ಆಗಸ್ಟ್‌ 30 ರಂದು ಸಿಬಿಐ (CBI) ಪ್ರಾಸಿಕ್ಯೂಷನ್‌ಗೆ ಮನವಿ ಮಾಡಿತ್ತು.

    ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆ ಸಿಬಿಐ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಸಿಬಿಐ ಅರ್ಜಿಗೆ ಸರ್ಕಾರ ಯಾವುದೇ ಉತ್ತರ ನೀಡಿರಲಿಲ್ಲ. ಇದನ್ನೂ ಓದಿ: ಬಿಯರ್ ಬಾಟ್ಲಿಯಿಂದ ಹಲ್ಲೆ- ಉಬರ್ ಚಾಲಕಿಯ ಕುತ್ತಿಗೆಗೆ 10 ಸ್ಟಿಚ್!

    ಆಸ್ತಿ ಜಪ್ತಿ ಅರ್ಜಿ ವಿಚಾರ ತಿಳಿದ ರೆಡ್ಡಿ ಕರ್ನೂಲ್, ರಂಗಾರೆಡ್ಡಿ ಜಿಲ್ಲೆಗಳಲ್ಲಿ ಆಸ್ತಿ ಮಾರಾಟಕ್ಕೆ ಯತ್ನಿಸಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಜಪ್ತಿಗೆ ಅನುಮತಿ ನೀಡುವಂತೆ ಸರ್ಕಾರಕ್ಕೆ ಆದೇಶ ನೀಡಬೇಕು ಅಂತಾ ಸಿಬಿಐ ಹೈಕೋರ್ಟ್‌ನಲ್ಲಿ  ವಾದ ಮಂಡಿಸಿತ್ತು.

    ನಿಮ್ಮ ಕಾರ್ಯವೈಖರಿ ಇದೇನಾ? ಐದು ತಿಂಗಳಾದರೂ ಯಾಕೆ ಕ್ರಮ ಕೈಗೊಂಡಿಲ್ಲ? ನಿಮ್ಮ ದೃಷ್ಟಿಯಲ್ಲಿ ನಿರ್ಧಾರ ಕೈಗೊಳ್ಳದೇ ಇರುವುದು ಒಂದು ಕ್ರಮವಿರಬಹುದು. ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ರಾಜ್ಯ ಸರ್ಕಾರಕ್ಕೆ ಈ ಹಿಂದಿನ ವಿಚಾರಣೆಯಲ್ಲಿ ಹೈಕೋರ್ಟ್‌ ಚಾಟಿ ಬೀಸಿ ನೋಟಿಸ್ ಜಾರಿ ಮಾಡಿತ್ತು.

    ಗುರುವಾರ ಅರ್ಜಿ ವಿಚಾರಣೆ ವೇಳೆ ಆಸ್ತಿ ಜಪ್ತಿಗೆ ರಾಜ್ಯ ಸರ್ಕಾರ ಅನುಮತಿ ನೀಡಿರುವ ಬಗ್ಗೆ ಹೈಕೋರ್ಟ್‌ಗೆ ಸರ್ಕಾರಿ ವಕೀಲರು ಮಾಹಿತಿ ನೀಡಿದರು. ಸಿಬಿಐ ಸಲ್ಲಿಸಿದ್ದ ಅರ್ಜಿ ಇತ್ಯರ್ಥಗೊಳಿಸಿದ ಹೈಕೋರ್ಟ್ ಆಸ್ತಿ ಜಪ್ತಿಗೆ ಸಿಬಿಐ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಮುಂದುವರೆಯುವಂತೆ ಸೂಚನೆ ನೀಡಿತು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಆಸ್ತಿ ವಿಚಾರಕ್ಕೆ ಯುವಕನ ಮೇಲೆ ಗುಂಡೇಟು – ಕ್ಷಣಮಾತ್ರದಲ್ಲಿ ತಪ್ಪಿದ ಅನಾಹುತ

    ಆಸ್ತಿ ವಿಚಾರಕ್ಕೆ ಯುವಕನ ಮೇಲೆ ಗುಂಡೇಟು – ಕ್ಷಣಮಾತ್ರದಲ್ಲಿ ತಪ್ಪಿದ ಅನಾಹುತ

    ಮಡಿಕೇರಿ: ಆಸ್ತಿ (Property) ವಿಚಾರವಾಗಿ ಎರಡು ಕುಟುಂಬಗಳ ನಡುವೆ ಹೊಡೆದಾಟ ನಡೆದು, ಬಳಿಕ ಯುವಕನ ಮೇಲೆ ಗುಂಡು ಹಾರಿಸಿ ಕೊಲೆ ಯತ್ನಕ್ಕೂ ಮುಂದಾಗಿರುವ ಘಟನೆ ಕೊಡಗು (Kodagu) ಜಿಲ್ಲೆಯ ಮಡಿಕೇರಿ (Madikeri) ತಾಲೂಕಿನ ಬಿಳಿಗೇರಿ ಗ್ರಾಮದಲ್ಲಿ ನಡೆದಿದೆ.

    ಕಳೆದ ಎರಡು-ಮೂರು ತಿಂಗಳಿನಿಂದ ಆಸ್ತಿ ವಿಷಯದಲ್ಲಿ ಎರಡು ಕುಟುಂಬಗಳ ನಡುವೆ ಗಲಾಟೆ ನಡೆಯುತ್ತಿದ್ದು‌, ನಿನ್ನೆ ಇದು ತಾರಕಕ್ಕೆ ಏರಿ ಯುವಕನ ಮೇಲೆ ಗುಂಡು ಹಾರಿಸಿದ್ದ ಆರೋಪ ಕೇಳಿಬಂದಿದೆ. ಅಲ್ಲದೇ ಗುಂಡು ಹಾರಿಸಿದ ಆರೋಪದಲ್ಲಿ ಮತ್ತೊಬ್ಬ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.

    ಹೊಡೆದಾಟದಲ್ಲಿ ನಿಶ್ಚಲ್ ಎಂಬ ವ್ಯಕ್ತಿಗೆ ಗಂಭೀರ ಗಾಯವಾಗಿದ್ದು, ನಿಶ್ಚಲ್‌ ಎಂಬ ವ್ಯಕ್ತಿಯ ಕೈಮುರಿದಿದ್ದು, ತಲೆಗೂ ಗಂಭೀರ ಪೆಟ್ಟುಯಾಗಿದೆ. ಇದಕ್ಕೂ ಮೊದಲು ನಿಶ್ಚಲ್, ತೀರ್ಥ ಎಂಬಾತನ ಮೇಲೆ ಗನ್‌ನಿಂದ ಶೂಟ್ ಮಾಡಿದ ಆರೋಪವು ಕೇಳಿ ಬಂದಿದ್ದು, ಈ ವೇಳೆ ತೀರ್ಥನ ಕೈಗೆ ಸಣ್ಣ ಗಾಯವಾಗಿದೆ. ಆದರೆ ತೀರ್ಥ ಚಲಾಯಿಸುತ್ತಿದ್ದ ಜೀಪಿಗೆ ಗುಂಡೇಟು ಬಿದ್ದಿದೆ. ಜೀಪಿನ ಸೀಟನ್ನು ಸೀಳಿದೆ. ಆದರೆ ತೀಥ ಗುಂಡೇಟಿನಿಂದ ತಪ್ಪಿಸಿಕೊಂಡಿದ್ದಾರೆ.

    ಘಟನೆಯೇನು?: ಬಿಳಿಗೇರಿ ಗ್ರಾಮದಲ್ಲಿ ಇರುವ ಸುಮಾರು 7 ಎಕರೆ ಕಾಫಿ ತೋಟವನ್ನು ನಿಶ್ಚಲ್ ಇತ್ತೀಚಿಗೆ ಖರೀದಿ ಮಾಡಿದ್ದ. ಆದರೆ ಈ ಕಾಫಿ ತೋಟವನ್ನು ಕಳೆದ 30 ವರ್ಷಗಳಿಂದ ತೀರ್ಥ ಅವರ ತಂದೆ ನೋಡಿಕೊಳ್ಳುತ್ತಿದ್ದರು. ಅಲ್ಲದೇ ತೋಟದ ಜಾಗಕ್ಕೆ ದಾಖಲೆಗಳನ್ನು ಮಾಡಲು ಮುಂದಾಗಿದ್ದರು. ಆದರೆ ತೋಟವನ್ನು ಬೇರೆ ಅವರ ಕೈಯಿಂದ ನಿಶ್ಚಲ್ ಖರೀದಿ ಮಾಡಿರುವುದರಿಂದ ಈ ಪ್ರಕರಣ ಕಳೆದ 6 ತಿಂಗಳ ಹಿಂದೆಯೇ ಕೋರ್ಟ್‌ ಮೆಟ್ಟಿಲು ಏರಿತ್ತು. ಆದರೆ ತೀರ್ಥ ಕಾಫಿ ತೋಟವನ್ನು ಬೇರೆ ಅವರಿಗೆ ಕಾಫಿಗೆ ಲೀಜ್ ನೀಡಿದ್ದರು. ಇದನ್ನು ಪ್ರಶ್ನಿಸಲು ನಿಶ್ಚಲ್ ಸ್ಥಳಕ್ಕೆ ಹೋಗಿರುವಾಗ 2 ಕುಟುಂಬಗಳ ನಡುವೆ ‌ಮಾತಿಗೆ ಮಾತು ಬೆಳೆದು ಗುಂಡು ಹೊಡೆಯುವ ಹಂತಕ್ಕೆ ತಲುಪಿದೆ ಎನ್ನಲಾಗಿದೆ. ಇದನ್ನೂ ಓದಿ: ದಲಿತರ ನೀರಿನ ತೊಟ್ಟಿಗೆ ಮಲ ಸುರಿದು ವಿಕೃತಿ – ಹಲವರು ಅಸ್ವಸ್ಥ

    ಘಟನಾ ಸ್ಥಳಕ್ಕೆ ಮಡಿಕೇರಿ ಡಿವೈಎಸ್ಪಿ ಗಜೇಂದ್ರ ಪ್ರಸಾದ್ ಭೇಟಿ ಪರಿಶೀಲನೆ ನಡೆಸಿದರು. ಸದ್ಯ ಇಬ್ಬರು ಯುವಕರಿಗೆ ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಇದನ್ನೂ ಓದಿ: ಗ್ಯಾಂಬಿಯಾ ಬಳಿಕ ಈಗ ಉಜ್ಬೇಕಿಸ್ತಾನದಿಂದ ಆರೋಪ – 18 ಮಕ್ಕಳ ಸಾವಿಗೆ ಭಾರತದ ಸಿರಪ್ ಕಾರಣ

    Live Tv
    [brid partner=56869869 player=32851 video=960834 autoplay=true]