Tag: ಆಸ್ತಿ

  • ರಾಮನಗರದಲ್ಲಿ ಕೋಟ್ಯಧಿಪತಿಗಳ ಸ್ಪರ್ಧೆ: ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಆಸ್ತಿ ಎಷ್ಟಿದೆ?

    ರಾಮನಗರದಲ್ಲಿ ಕೋಟ್ಯಧಿಪತಿಗಳ ಸ್ಪರ್ಧೆ: ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಆಸ್ತಿ ಎಷ್ಟಿದೆ?

    ರಾಮನಗರ: ಜಿಲ್ಲೆಯ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಎಲ್.ಚಂದ್ರಶೇಖರ್ ಕೂಡ ಕೋಟ್ಯಧಿಪತಿಯಾಗಿದ್ದಾರೆ. ಚಂದ್ರಶೇಖರ್ ಇಂದು ಬೃಹತ್ ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಿದ್ದಾರೆ.

    ನಾಮಪತ್ರ ಸಲ್ಲಿಕೆ ವೇಳೆ ತಮ್ಮ ಸ್ಥಿರಾಸ್ತಿ ಹಾಗೂ ಚರಾಸ್ತಿಗಳ ವಿವರವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದಾರೆ. ಒಟ್ಟು 10.20 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವ ಚಂದ್ರಶೇಖರ್ 65 ಲಕ್ಷ ರೂ. ಸಾಲ ಮಾಡಿದ್ದಾರೆ. ಬಿಡದಿ ಕೆನರಾ ಬ್ಯಾಂಕಿಗೆ ಬಡ್ಡಿ ಸಹಿತ 65 ಲಕ್ಷ ರೂ. ಮರುಪಾವತಿ ಮಾಡಬೇಕಾಗಿದೆ.

    ಆಸ್ತಿ ಎಷ್ಟಿದೆ?
    ಚಂದ್ರಶೇಖರ್ ರ ಸ್ಥಿರಾಸ್ತಿ ಮೌಲ್ಯ 6.80 ಕೋಟಿ ರೂ. ಇದ್ದು, ಇದರಲ್ಲಿ ಬಿಡದಿ ಹೋಬಳಿ ಅಬ್ಬನಕುಪ್ಪೆ ಗ್ರಾಮದ ಸರ್ವೇ ನಂಬರ್ 137 ರಲ್ಲಿ 5.09 ಎಕರೆ, ಹೆಗ್ಗಡಗೆರೆಯ ಸರ್ವೇ ನಂಬರ್ 256 ರಲ್ಲಿ 1 ಎಕರೆ, 258 ರಲ್ಲಿ 3.35 ಎಕರೆ, ಸರ್ವೇ ನಂಬರ್ 91 ರಲ್ಲಿ 2 ಎಕರೆ, ಕಲ್ಲಗೋಪಹಳ್ಳಿ ಸರ್ವೇ ನಂಬರ್ 1 ರಲ್ಲಿ 1 ಎಕರೆ ಸೇರಿದಂತೆ ಒಟ್ಟು 13.34 ಎಕರೆ ಜಮೀನು ಹೊಂದಿದ್ದಾರೆ. ಚರಾಸ್ತಿ ಮೌಲ್ಯ 13.60 ಲಕ್ಷ ರೂ. ಇದ್ದು, ಇದರಲ್ಲಿ, 10 ಲಕ್ಷ ರೂ. ಮೌಲ್ಯದ ಸ್ಕೋಡಾ ಕಾರು, ನಗದು 2 ಲಕ್ಷ ರೂಪಾಯಿ ಇದೆ. ಇದನ್ನೂ ಓದಿ: ಕೋಟ್ಯಂತರ ರೂ. ಆಸ್ತಿಯ ಒಡತಿ ಅನಿತಾ ಕುಮಾರಸ್ವಾಮಿ: 2013ರಲ್ಲಿ ಎಷ್ಟಿತ್ತು? ಈಗ ಎಷ್ಟಿದೆ?

    ಪತ್ನಿ ಸುಮಿತ್ರಾದೇವಿ ಹೆಸರಲ್ಲಿ ಬೆಂಗಳೂರಿನಲ ಕಾಮಾಕ್ಷಿ ಪಾಳ್ಯದ ವೃಷಭಾವತಿ ನಗರದಲ್ಲಿ 48×45 ಅಡಿ ನಿವೇಶನ, ಕಾಮಾಕ್ಷಿಪಾಳ್ಯದಲ್ಲಿ 70×28.6 ನಿವೇಶನ ಮತ್ತು ಇಂಡಸ್ಟ್ರಿಯಲ್ ಶೆಡ್ ಸೇರಿದಂತೆ ಒಟ್ಟು 3 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಇದಲ್ಲದೇ 23.70 ಲಕ್ಷ ರೂ. ಚರಾಸ್ಥಿ ಹೊಂದಿದ್ದು, ಇದರಲ್ಲಿ 20 ಲಕ್ಷ ರೂ. ಮೌಲ್ಯದ 700 ಗ್ರಾಂ ಚಿನ್ನಾಭರಣ, 70 ಸಾವಿರ ಮೌಲ್ಯದ 2 ಕೆಜಿ ಬೆಳ್ಳಿ ವಸ್ತುಗಳು ಹಾಗೂ ಬ್ಯಾಂಕ್ ಖಾತೆಯಲ್ಲಿ 3 ಲಕ್ಷ ರೂ. ಹಣ ಇದೆ. ಪುತ್ರ ಮನೀಷ್ ಹೆಸರಲ್ಲಿ 3 ಲಕ್ಷ ರೂ ಮೌಲ್ಯದ ಒಂದು ಕೆಟಿಎಂ ಬೈಕ್ ಇದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೋಟ್ಯಂತರ ರೂ. ಆಸ್ತಿಯ ಒಡತಿ ಅನಿತಾ ಕುಮಾರಸ್ವಾಮಿ: 2013ರಲ್ಲಿ ಎಷ್ಟಿತ್ತು? ಈಗ ಎಷ್ಟಿದೆ?

    ಕೋಟ್ಯಂತರ ರೂ. ಆಸ್ತಿಯ ಒಡತಿ ಅನಿತಾ ಕುಮಾರಸ್ವಾಮಿ: 2013ರಲ್ಲಿ ಎಷ್ಟಿತ್ತು? ಈಗ ಎಷ್ಟಿದೆ?

    ರಾಮನಗರ: ಜಿಲ್ಲೆಯ ಉಪಚುನಾವಣೆಗೆ ಜೆಡಿಎಸ್ ನಿಂದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪತ್ನಿ ಅನಿತಾ ಕುಮಾರಸ್ವಾಮಿಯವರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಆಸ್ತಿ ಮೌಲ್ಯದ ಪ್ರಕಾರ ಕೋಟಿ ಆಸ್ತಿಗೆ ಒಡತಿಯಾಗಿದ್ದಾರೆ.

    ಕಾರ್ಯಕರ್ತರ ಜೊತೆ ಮೆರವಣಿಗೆಯೊಂದಿಗೆ ಆಗಮಿಸಿದ ಅವರು ಪತಿ ಸಿಎಂ ಕುಮಾರಸ್ವಾಮಿಯವರೊಂದಿಗೆ ನಾಮಪತ್ರ ಸಲ್ಲಿಸಿದರು. ಒಟ್ಟು 64,22,61,822 ರೂಪಾಯಿ ಚರಾಸ್ತಿಯನ್ನು ಹೊಂದಿದ್ದು, ಇದರಲ್ಲಿ 8,14,86,685 ರೂಪಾಯಿ ಸಾಲವನ್ನು ಹೊಂದಿದ್ದಾರೆ. ಅಲ್ಲದೇ ಅನಿತಾ ಕುಮಾರಸ್ವಾಮಿಯವರ ವಾರ್ಷಿಕ ಆದಾಯ 76,35,650 ರೂ. ಆಗಿದೆ.

    ಏನೆಲ್ಲಾ ಇದೆ ಅನಿತಾ ಕುಮಾರಸ್ವಾಮಿಯವರ ಬಳಿ?
    ಸದ್ಯ ಕೈಯಲ್ಲಿ 42,36,638 ರೂಪಾಯಿ ಹಣ ಇದ್ದು, ಬ್ಯಾಂಕುಗಳಲ್ಲಿ 1,90,88,775 ರೂಪಾಯಿ ಇಟ್ಟಿದ್ದಾರೆ. ಇದಲ್ಲದೇ ವಿವಿಧ ಕಂಪೆನಿಗಳು ಹಾಗೂ ಷೇರು ಮಾರುಕಟ್ಟೆ ಮೇಲೆ 68,79,58,000 ರೂ. ಹೂಡಿಕೆ ಮಾಡಿದ್ದಾರೆ. ಇದರ ಜೊತೆ 93,30,000 ರೂ. ಚಿನ್ನಾಭರಣವನ್ನು ಹೊಂದಿದ್ದು, ಇದರಲ್ಲಿ 2.6 ಕೆಜಿ ಚಿನ್ನಾಭರಣ, 17 ಕೆಜಿ ಬೆಳ್ಳಿ ಹಾಗೂ 40 ಗ್ರಾಂ ಕ್ಯಾರೇಟ್ ಡೈಮಂಡ್ ಇದೆ.

    ಇದಲ್ಲದೆ ಬೆಂಗಳೂರಿನ ಜಯನಗರದ 4ನೇ ಬ್ಲಾಕ್‍ನಲ್ಲಿ 14 ಕೋಟಿ ರೂ. ಹಾಗೂ ದೊಡ್ಡನಕುಂಟೆ ಬಳಿ 16 ಕೋಟಿ ರೂ. ಮೌಲ್ಯದ ವಾಣಿಜ್ಯ ಕಟ್ಟಡಗಳನ್ನು ಹೊಂದಿದ್ದಾರೆ. 28,29,557 ರೂ ಮೌಲ್ಯದ ಹಾರ್ಲೇ ಡೆವಿಡ್ಸನ್ ಬೈಕ್ ಹಾಗೂ ಪ್ರಚಾರದ ಬಸ್ ಒಂದನ್ನು ಹೊಂದಿದ್ದಾರೆ. 2013 ರಲ್ಲಿ ಚನ್ನಪಟ್ಟಣ ವಿಧಾನಸಭೆಗೆ ಸ್ಪರ್ಧಿಸಿದಾಗ ಅನಿತಾ ಕುಮಾರಸ್ವಾಮಿ ಆಸ್ತಿ 137,96,87,114 ರೂ. ಆಸ್ತಿ ಹೊಂದಿದ್ದರು. ಇದನ್ನೂ ಓದಿ: ರಾಮನಗರದಲ್ಲಿ ಕೋಟ್ಯಧಿಪತಿಗಳ ಸ್ಪರ್ಧೆ: ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಆಸ್ತಿ ಎಷ್ಟಿದೆ?

    2013ರ ಆಸ್ತಿ ವಿವರ:

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನ್ಯಾಯ ಕೊಡಿಸಿ ಎಂದು ಎಸ್‍ಪಿ ಕಚೇರಿಯಲ್ಲೇ ವಿಷ ಕುಡಿದು ಮಹಿಳೆಯಿಂದ ಆತ್ಮಹತ್ಯೆಗೆ ಯತ್ನ!

    ನ್ಯಾಯ ಕೊಡಿಸಿ ಎಂದು ಎಸ್‍ಪಿ ಕಚೇರಿಯಲ್ಲೇ ವಿಷ ಕುಡಿದು ಮಹಿಳೆಯಿಂದ ಆತ್ಮಹತ್ಯೆಗೆ ಯತ್ನ!

    ಬೆಳಗಾವಿ: ಆಸ್ತಿ ವಿವಾದ ಬಗೆಹರಿಸಿ ತಮಗಿರುವ ಪ್ರಾಣ ಬೆದರಿಕೆಯಿಂದ ರಕ್ಷಣೆ ನೀಡಿ ತಮಗೆ ನ್ಯಾಯ ಕೊಡಿಸಿ ಎಂದು ಮಹಿಳೆಯೊಬ್ಬಳು ಎಸ್.ಪಿ ಕಚೇರಿಯಲ್ಲೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

    ಬೆಳಗಾವಿ ನಗರದ ಅನಂತಶೈನ ಗಲ್ಲಿಯ ನಿವಾಸಿ ಬಸವ್ವ ಕೊಪ್ಪದ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಗೋಕಾಕ್ ತಾಲೂಕಿನ ಅಂಕಲಗಿ ಗ್ರಾಮದಲ್ಲಿ ತಮ್ಮ ತಂದೆಯ ಆಸ್ತಿಯನ್ನ ಬೇರೆಯವರು ಕಬ್ಜಾ ಮಾಡಿಕೊಳ್ಳುತ್ತಿದ್ದಾರೆ ಎಂದು ಕೋರ್ಟ್‌ಗೆ ಹೋಗಿದ್ದಕ್ಕೆ ಅದೇ ಗ್ರಾಮದ ನಿವಾಸಿ ರಾಜು ತಳವಾರ ಎಂಬಾತ ಇವರಿಗೆ ಕೇಸ್ ಮರಳಿ ಪಡೆದುಕೊಳ್ಳುವಂತೆ ಧಮ್ಕಿ ಹಾಕಿದ್ದನಂತೆ. ಹೀಗಾಗಿ ತಂದೆಯ ಆಸ್ತಿಯನ್ನು ಉಳಿಸಿಕೊಡಿ ಎಂದು ಎಸ್‍ಪಿ ಕಚೇರಿಯಲ್ಲಿ ದೂರು ನೀಡಲು ಬಂದಿದ್ದಳು.

    ಎಸ್‍ಪಿ ಕಚೇರಿಯಲ್ಲಿದ್ದ ಪೊಲೀಸ್ ಸಿಬ್ಬಂದಿ ನನ್ನ ದೂರಿಗೆ ಸರಿಯಾಗಿ ಸ್ಪಂದಿಸಿಲ್ಲ ಎಂಬ ಕಾರಣಕ್ಕೆ ಅಲ್ಲೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

    ಈ ಕುರಿತು ಎಸ್.ಪಿ ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟನೆ ನೀಡಿದ್ದು, ಇದು ಅಕ್ಕ ತಂಗಿಯರ ಜಗಳವಾಗಿದ್ದು ಇದನ್ನ ಬಗೆಹರಿಸಿ ಕಳುಹಿಸಿಕೊಟ್ಟಿದ್ದೆವು. ಇದಕ್ಕೆ ಒಪ್ಪದ ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ನಮ್ಮ ಕಚೇರಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಹೀಗಾಗಿ ಆಕೆಯ ಮೇಲೆ ಐಪಿಸಿ ಸೆಕ್ಷನ್ 309(ಆತ್ಮಹತ್ಯೆ ಯತ್ನ) ಅಡಿಯಲ್ಲಿ ದೂರು ದಾಖಲಿಸಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಆಧಾರ್ ಕಾರ್ಡ್ ನೆಪದಲ್ಲಿ ಆಸ್ತಿ ಲಪಟಾಯಿಸಿ ಬೀದಿಗೆ ತಳ್ಳಿದ ಮೊಮ್ಮಗಳು!

    ಆಧಾರ್ ಕಾರ್ಡ್ ನೆಪದಲ್ಲಿ ಆಸ್ತಿ ಲಪಟಾಯಿಸಿ ಬೀದಿಗೆ ತಳ್ಳಿದ ಮೊಮ್ಮಗಳು!

    ದಾವಣಗೆರೆ: ಮೊಮ್ಮಗಳೊಬ್ಬಳು ಆಧಾರ್ ಕಾರ್ಡ್ ಮಾಡಿಸುವ ನೆಪದಲ್ಲಿ ಆಸ್ತಿ ಲಪಟಾಯಿಸಿ ವೃದ್ಧೆಯನ್ನು ಹೊರ ಹಾಕಿರುವ ಅಮಾನವೀಯ ಘಟನೆ ದಾವಣಗೆರೆಯ ಕೊಂಡಜ್ಜಿ ರಸ್ತೆಯ ವಿಜಯನಗರದಲ್ಲಿ ನಡೆದಿದೆ.

    ಮಳಿಯಮ್ಮ(80) ಬೀದಿಗೆ ಬಿದ್ದ ನತದೃಷ್ಟ ವೃದ್ಧೆಯಾಗಿದ್ದು, ಇವರನ್ನು ನೇತ್ರಾವತಿ ಬೀದಿಗೆ ತಳ್ಳಿದ ಪಾಪಿ ಮೊಮ್ಮಗಳು. ಮಳಿಯಮ್ಮಗೆ ನಾಲ್ಕು ಜನ ಮಕ್ಕಳಿದ್ದು ಅವರಲ್ಲಿ ಎರಡು ಗಂಡು, ಎರಡು ಹೆಣ್ಣುಮಕ್ಕಳು ಇದ್ದಾರೆ. ನೇತ್ರಾವತಿ ಕೊನೆಯ ಮಗಳ ಮಗಳಾಗಿದ್ದು, ವೃದ್ಧೆಗೆ ಆಸರೆಯಾಗಿದ್ದ ಆಸ್ತಿಯನ್ನು ವಶಪಡಿಸಿಕೊಂಡು ಹೊರ ಹಾಕಿದ್ದಾಳೆ.

    ಆಧಾರ್ ಕಾರ್ಡ್ ಮಾಡಿಸುವುದಾಗಿ ಹೇಳಿ ರಿಜಿಸ್ಟರ್ ಅಫೀಸ್ ಗೆ ಕರೆದುಕೊಂಡು ಹೋಗಿ, ಆಸ್ತಿ ಲಪಟಾಯಿಸಿ ಮಳಿಯಮ್ಮಳನ್ನು ಬೀದಿಗೆ ಬಿಟ್ಟಿದ್ದಾರೆ. ಸದ್ಯ ದೇವಸ್ಥಾನವೇ ವೃದ್ಧೆಗೆ ಆಸರೆಯಾಗಿದ್ದು, ಅಜ್ಜಿಗೆ ಅಕ್ಕ ಪಕ್ಕ ಮನೆಯವರೇ ಊಟ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೇ ಅಜ್ಜಿ ಪರಿಸ್ಥಿತಿಯನ್ನು ಪ್ರಶ್ನಿಸಿದ್ರೆ ರೌಡಿಗಳನ್ನು ಬಿಟ್ಟು ಅಕ್ಕ-ಪಕ್ಕ ಮನೆಯವರ ಮೇಲೂ ಹಲ್ಲೆ ನಡೆಸುತ್ತಿದ್ದಾಳೆ. ಸದ್ಯಕ್ಕೆ ವೃದ್ಧಾಪ್ಯ ವೇತನದ ಆಸರೆಯಿಂದ ಈ ಹಿರಿಜೀವ ಜೀವನ ಸಾಗಿಸುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಆಸ್ತಿಗಾಗಿ ಮಕ್ಕಳ ಜೊತೆ ಸೇರಿ ಪತ್ನಿಯಿಂದಲೇ ಪತಿಯ ಕೊಲೆಗೆ ಸಂಚು!

    ಆಸ್ತಿಗಾಗಿ ಮಕ್ಕಳ ಜೊತೆ ಸೇರಿ ಪತ್ನಿಯಿಂದಲೇ ಪತಿಯ ಕೊಲೆಗೆ ಸಂಚು!

    ಬೆಂಗಳೂರು: ಆಸ್ತಿಗಾಗಿ ಪತ್ನಿಯೇ ತನ್ನ ಪತಿಯನ್ನು ಕಿಡ್ನಾಪ್ ಮಾಡಿ ಕೊಲೆಗೆ ಸಂಚು ಮಾಡಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ರಾಮಚಂದ್ರ(48) ಕಿಡ್ನಾಪ್ ಆಗಿದ್ದ ಪತಿ. ಪತ್ನಿ ಮುನಿರತ್ನಮ್ಮ ತನ್ನ ಮಕ್ಕಳು ಹಾಗೂ ಸಂಬಂಧಿಕರ ಜೊತೆ ಸೇರಿ ಗಂಡನನ್ನು ಕಿಡ್ನಾಪ್ ಮಾಡಿ ಕೊಲೆಗೆ ಸಂಚು ರೂಪಿಸಿದ್ದು, ಈಗ ಎಚ್‍ಎಎಲ್ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.

    ಇದೇ ತಿಂಗಳ 5ರಂದು ಪತ್ನಿ ಮುನಿರತ್ನಮ್ಮ ತನ್ನ ಮಕ್ಕಳ ಜೊತೆ ಸೇರಿಕೊಂಡು ಪತಿ ರಾಮಚಂದ್ರನ ಕಿಡ್ನಾಪ್ ಮಾಡಿದ್ದಾಳೆ. ಹೆಚ್‍ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ರಮೇಶ್ ನಗರ ಸಮೀಪ ನಿರ್ಜನ ಪ್ರದೇಶದಲ್ಲಿ ಕಿಡ್ನಾಪ್ ಮಾಡಲಾಗಿತ್ತು. ನಂತರ ಬೊಮ್ಮಸಂದ್ರದ ಕಿತ್ತಗಾನ್ ಹಳ್ಳಿಯಲ್ಲಿ ರೂಮ್ ಒಂದರಲ್ಲಿ ಕೂಡಿ ಹಾಕಿ ರಾಡ್ ನಿಂದ ಹಲ್ಲೆ ಮಾಡಿದ್ದಾರೆ. ಆಸ್ತಿ ಪತ್ರಕ್ಕೆ ಸಹಿ ಹಾಕುವಂತೆ ಪತ್ನಿ, ಮಕ್ಕಳು ಹಾಗೂ ಬಾಮೈದ ಟಾರ್ಚರ್ ನೀಡಿದ್ದಾರೆ.

    ರಾಮಚಂದ್ರನನ್ನು ಈ ರೀತಿ ಕಿರುಕುಳ ನೀಡುತ್ತಿರುವುದ್ದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಪೊಲೀಸರು ಕಿಡ್ನಾಪ್ ಆಗಿದ್ದ ರಾಮಚಂದ್ರನನ್ನು ರಕ್ಷಣೆ ಮಾಡಿದ್ದಾರೆ. ಅಲ್ಲದೇ ಸ್ಥಳೀಯ ಆಸ್ಪತ್ರೆಯಲ್ಲಿ ರಾಮಚಂದ್ರಗೆ ಚಿಕಿತ್ಸೆ ನೀಡಲಾಗ್ತಿದೆ.

    ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್‍ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್‍ಎಎಲ್ ಠಾಣಾ ಪೊಲೀಸರು ಪತ್ನಿ ಹಾಗೂ ಮಕ್ಕಳನ್ನು ಬಂಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಆಸ್ತಿಗಾಗಿ ಬಿಜೆಪಿ ಮುಖಂಡನ ಪುಂಡಾಟಿಕೆಗೆ ವ್ಯಕ್ತಿ ಬಲಿ!

    ಆಸ್ತಿಗಾಗಿ ಬಿಜೆಪಿ ಮುಖಂಡನ ಪುಂಡಾಟಿಕೆಗೆ ವ್ಯಕ್ತಿ ಬಲಿ!

    ಹುಬ್ಬಳ್ಳಿ: ಆಸ್ತಿ ವಿಚಾರ ಸಂಬಂಧ ಬಿಜೆಪಿ ಮುಖಂಡನಿಂದ ಹಲ್ಲೆಗೆ ಒಳಗಾಗಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಕುಂದಗೋಳ ಪಟ್ಟಣದಲ್ಲಿ ನಡೆದಿದೆ.

    ಕುಂದಗೋಳದ ನಿವಾಸಿಯಾದ ಬಿಜೆಪಿ ಮುಖಂಡ ದೇವರಾಜ್ ದಾನಪ್ಪ ಪಾಯಕ್ನವರ್ ಹಾಗೂ ಆತನ ಮಕ್ಕಳು ಸೇರಿಕೊಂಡು ಯಮನಪ್ಪ ಪಾಯಕ್ನವರ್ ಮೇಲೆ ನಾಲ್ಕು ದಿನಗಳ ಹಿಂದೆ ಹಲ್ಲೆ ಮಾಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಕೀಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದಾರೆ.

    ಆಸ್ತಿಗಾಗಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ನೊಂದ ಯಮನಪ್ಪ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಘಟನೆಗೆ ಸಂಬಂಧಪಟ್ಟಂತೆ ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


    ಏನಿದು ಪ್ರಕರಣ?
    ಕುಂದಗೋಳ ಪಟ್ಟಣದ ನಿವಾಸಿಯಾದ ಯಮನಪ್ಪ ಪಾಯಕ್ನವರಿಗೆ ಸೇರಿದ 7 ಎಕರೆ 6 ಗುಂಟೆ ಜಮೀನನ್ನು ದೇವರಾಜ್ ತನ್ನ ಪ್ರಭಾವ ಬಳಸಿ ಉಳುಮೆ ಮಾಡಿಕೊಂಡಿದ್ದನು. ಈ ಸಂಬಂಧ ಯಮನಪ್ಪ ಅವರು 2016ರಲ್ಲಿ ಜಮೀನು ತಮ್ಮದು ಎಂದು ನ್ಯಾಯಾಲಯ ಮೊರೆ ಹೋಗಿದ್ದರು.

    ಅರ್ಜಿಯನ್ನು ವಿಚಾರಣೆ ನಡೆಸಿದ ಧಾರವಾಡ ಜಿಲ್ಲಾ ಸಿವಿಲ್ ಕೋರ್ಟ್ ಜಮೀನು ಯಮನಪ್ಪರಿಗೆ ಸೇರಬೇಕೆಂದು ತೀರ್ಪು ನೀಡಿತ್ತು. ತೀರ್ಪು ತನ್ನ ಪರ ಬರದಕ್ಕೆ ಕೋಪಗೊಂಡ ದೇವರಾಜ್ ಮತ್ತು ಮಕ್ಕಳಾದ ಅನಿಲ್, ಆನಂದ್, ಸುನೀಲ್ ಸೇರಿಕೊಂಡು ಹತ್ತಿ, ಮೆಣಸಿನಕಾಯಿ, ಟೊಮೋಟೋ ಬೆಳೆಗೆ ಕಳೆನಾಶಕ ಸಿಂಪಡಿಸಿ ನಾಶ ಮಾಡಿದ್ದರು. ಈ ತಂದೆ ಮಕ್ಕಳ ಕೃತ್ಯ ಇದೇ ಮೊದಲಲ್ಲ. ಕಳೆದ ವರ್ಷವೂ ಇದೇ ಜಮೀನಿನಲ್ಲಿ ಬೆಳೆದ ಹೆಸರು ಬೆಳೆಗೆ ಬೆಂಕಿ ಹಚ್ಚಿದ್ದರು. ನಾಲ್ಕು ದಿನದ ಹಿಂದೆ ದಾನಪ್ಪ ಮತ್ತು ಆತನ ಮಕ್ಕಳು ಯಮನಪ್ಪ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನನಗೆ ಹಣ, ಆಸ್ತಿ ಬೇಡ- ತಂದೆಯನ್ನ ಗಲ್ಲಿಗೇರಿಸಿ: ಅಮೃತಾ ಆಕ್ರೋಶದ ಮಾತು

    ನನಗೆ ಹಣ, ಆಸ್ತಿ ಬೇಡ- ತಂದೆಯನ್ನ ಗಲ್ಲಿಗೇರಿಸಿ: ಅಮೃತಾ ಆಕ್ರೋಶದ ಮಾತು

    ಹೈದರಾಬಾದ್: ದೇಶಾದ್ಯಂತ ಸಂಚಲನ ಹುಟ್ಟಿಸಿದ್ದ ಪ್ರಣಯ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಅಮೃತ ಪೊಲೀಸರಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ. ನನಗೆ ಡಬಲ್ ಬೆಡ್ ರೂಮ್, ಕೃಷಿ ಜಮೀನು, ಹಣ ಯಾವುದೂ ಬೇಡ. ಪ್ರಣಯ್ ನನ್ನು ಕೊಂದ ನನ್ನ ತಂದೆ ಸೇರಿದಂತೆ ಇತರೆ ಅಪರಾಧಿಗಳಿಗೆ ಗಲ್ಲು ಶಿಕ್ಷೆ ನೀಡಿ. ಅಷ್ಟೇ ಸಾಕು ನನಗೆ ಎಂದು ಅಮೃತಾ ಹೇಳಿದ್ದಾರೆ.

    ಕಳೆದ ಕೆಲವು ದಿನಗಳಿಂದ ಫೇಸ್‍ಬುಕ್ ಮತ್ತು ಇನ್ಸ್ ಸ್ಟಾಗ್ರಾಮ್ ಮುಖಾಂತರ ಹಲವು ಮೆಸೇಜ್‍ಗಳು ಬಂದಿದೆ. ಹಲವರು ಪ್ರಣಯ್ ಸಾವಿನ ಬಳಿಕ ಸರ್ಕಾರ ನೀಡುವ ಆಸ್ತಿಯನ್ನು ಪಡೆದುಕೊಳ್ಳುವುದರ ಕುರಿತು ವಿರೋಧ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಸರ್ಕಾರ ನೀಡುವ ಸೌಲಭ್ಯ ನಿಮ್ಮ ಭವಿಷ್ಯಕ್ಕೆ ಸಹಕಾರಿ ಆಗಲಿದ್ದು, ಸ್ವೀಕರಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂಬ ಮೆಸೇಜ್ ಗಳು ಬರುತ್ತಿವೆ ಅಂತ ತಿಳಿಸಿದರು. ಇದನ್ನೂ ಓದಿ:  ಮರ್ಯಾದಾ ಹತ್ಯೆಗೆ ಬಲಿಯಾದ ಪ್ರಣಯ್ ಬದುಕಿರುವುದು ಈ ವಿಡಿಯೋದಲ್ಲಿ ಮಾತ್ರ

    ನನಗೆ ಸರ್ಕಾರ ನೀಡುತ್ತಿರುವ ಪರಿಹಾರ ಬೇಕಾಗಿಲ್ಲ. ನಾವು ಆರ್ಥಿಕವಾಗಿಯೂ ಸಬಲರಾಗಿ ಇದ್ದೇವೆ. ಮನೆ, ಕೃಷಿ ಭೂಮಿ, ಉದ್ಯೋಗ ಮತ್ತು ಹಣ ನೀಡಿ ಎಂದು ಯಾರ ಬಳಿಯೂ ನಾನಾಗಲಿ ಅಥವಾ ಕುಟುಂಬಸ್ಥರು ಕೇಳಿಕೊಂಡಿಲ್ಲ. ಪ್ರಣಯ್ ಕೊಂದ ಅಪರಾಧಿಗಳಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ನನ್ನ ಮನವಿ ಆಗಿದೆ ಎಂದು ಅಮೃತ ಸ್ಪಷ್ಟಪಡಿಸಿದ್ದಾರೆ.

    ಸರ್ಕಾರದಿಂದ ಉದ್ಯೋಗ:
    ತೆಲಂಗಾಣ ಪರಿಶಿಷ್ಟ ಜಾತಿ ಅಭಿವೃದ್ಧಿ ಸಚಿವ ಜಿ. ಜಗದೀಶ್ ರೆಡ್ಡಿ ಅವರು ನಲ್ಗೊಂಡ ಜಿಲ್ಲೆಯ ಮಿರಿಯಾಲಗುಡದಲ್ಲಿ ಮೃತ ಪ್ರಣಯ್ ಕುಟುಂಬದವರನ್ನು ಭೇಟಿ ಮಾಡಿ ಸಂತಾಪ ವ್ಯಕ್ತಪಡಿಸಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಇಂತಹ ಘಟನೆಗಳು ಪ್ರಸ್ತುತ ದಿನಗಳಲ್ಲಿ ಇನ್ನೂ ನಡೆಯುತ್ತಿವೆ ಎಂದು ನಾಚಿಕೆ ಆಗುತ್ತದೆ. ಈ ಪ್ರಕರಣದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಮರ್ಯಾದಾ ಹತ್ಯೆ: 13 ವರ್ಷದ ಹಿಂದೆ ಮದ್ವೆಯಾದ ದಂಪತಿಯನ್ನು ಕೊಂದೇ ಬಿಟ್ಟ!

    ಮೃತ ಪ್ರಣಯ್ ಪತ್ನಿ ಅಮೃತವರ್ಶಿನಿ ಅವರಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದು. ಜೊತೆಗೆ ಕೃಷಿ ಭೂಮಿ ಮತ್ತು ಡಬಲ್ ಬೆಡ್ ರೂಮ್ ಮನೆಯನ್ನು ನೀಡುತ್ತೇವೆ. ಈಗಾಗಲೇ ಪ್ರಣಯ್ ಕುಟುಂಬದವರಿಗೆ ತಕ್ಷಣದ ವೆಚ್ಚಕ್ಕಾಗಿ ಸರ್ಕಾರ 8.25 ಲಕ್ಷ ರೂ. ಅನುಮೋದಿಸಿದೆ. ಇದರ ಜೊತೆ ನಾನು ವೈಯಕ್ತಿಕವಾಗಿ ಅಮೃತಾಗೆ 4.12 ಲಕ್ಷ ರೂ. ಚೆಕ್ ನೀಡಿದ್ದೇನೆ ಎಂದು ತಿಳಿಸಿದ್ದರು. ಸರ್ಕಾರದ ಸೌಲಭ್ಯಗಳನ್ನು ಅಮೃತ ಪಡೆದಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

    ಏನಿದು ಪ್ರಕರಣ..?
    ಪ್ರಣಯ್ ಮತ್ತು ಅಮೃತ ಇಬ್ಬರು ಪ್ರೀತಿಸಿದ್ದು, ಎರಡೂ ಕುಟುಂಬಗಳ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದವು. ಇಬ್ಬರ ಜಾತಿ ಬೇರೆಯಾಗಿದ್ದರಿಂದ ಅಮೃತಾ ಮನೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರೂ ಯುವ ಜೋಡಿ ಮನೆಯವರ ವಿರೋಧದ ನಡುವೆಯೂ ಮದುವೆ ಆಗಿದ್ದರು. ಆದರೆ ಸೆಪ್ಟೆಂಬರ್ 15 ಶನಿವಾರ ಪ್ರಣಯ್ ಮತ್ತು ಅಮೃತಾ ಆಸ್ಪತ್ರೆ ಮುಂದೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ವ್ಯಕ್ತಿಯೊಬ್ಬ ಮಚ್ಚಿನಿಂದ ಪ್ರಣಯ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದನು. ಆದರೆ ಪ್ರಣಯ್ ಕೊಲೆಗೆ ಆತನ ಮಾವ ಮಾರುತಿ ರಾವ್ ಬರೋಬ್ಬರಿ ಒಂದು ಕೋಟಿ ರೂ. ಹಣವನ್ನು ಹಂತಕರಿಗೆ ನೀಡಿದ್ದನು ಎಂದು ತನಿಖೆ ವೇಳೆ ಬೆಳಕಿಗೆ ಬಂದಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಅಮ್ಮನಿಗೆ ಥಳಿಸ್ತಿದ್ದ ಅಣ್ಣನ ಕೊಂದ ತಮ್ಮ!

    ಅಮ್ಮನಿಗೆ ಥಳಿಸ್ತಿದ್ದ ಅಣ್ಣನ ಕೊಂದ ತಮ್ಮ!

    ಬೆಂಗಳೂರು: ಕುಡಿತದ ಜಗಳದಲ್ಲಿ ಅಮ್ಮನಿಗೆ ಥಳಿಸುತ್ತಿದ್ದ ಸಹೋದರನನ್ನೇ ತಮ್ಮ ಕೊಲೆ ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಕೋಣನಕುಂಟೆ ಕ್ರಾಸ್‍ನ ಬೀರೇಶ್ವರ ನಗರದಲ್ಲಿ ಈ ಘಟನೆ ನಡೆದಿದೆ. ವಿನಯ್ ತಮ್ಮ ಸಂಜೀವ್ ನಿಂದ ಕೊಲೆಯಾದ ಸಹೋದರ. ವಿನಯ್ ಪ್ರತಿದಿನ ಕುಡಿದುಕೊಂಡು ಬಂದು ಅಮ್ಮನ ಜೊತೆ ಆಸ್ತಿ ವಿಚಾರಕ್ಕೆ ಗಲಾಟೆ ಮಾಡುತ್ತಿದ್ದನು. ಆದ್ದರಿಂದ ಕೋಪಕೊಂಡು ಸಂಜೀವ್ ಕೊಲೆ ಮಾಡಿದ್ದಾನೆ.

    ವಿನಯ್ ಮತ್ತು ಸಂಜೀವ್ ಸಹೋದರರು. ಕೋಣನಕುಂಟೆ ಕ್ರಾಸ್‍ನ ಬೀರೇಶ್ವರ ನಗರದ ಮನೆಯಲ್ಲಿ ವಾಸವಿದ್ದರು. ತಂದೆ ಅಕಾಲಿಕ ಮರಣ ಹೊಂದಿ ವರ್ಷವಾಗಿರಲಿಲ್ಲ. ಆದರೆ ವಿನಯ್ ಆಸ್ತಿ ವಿಚಾರವಾಗಿ ಅಮ್ಮನ ಬಳಿ ಕ್ಯಾತೆ ತೆಗೆದಿದ್ದಾನೆ. ದಿನ ಕುಡಿದು ಬಂದ ಗಲಾಟೆ ಮಾಡಿ ಥಳಿಸುತ್ತಿದ್ದನು. ಶುಕ್ರವಾರ ರಾತ್ರಿ ಸಹ 10.30ರ ಸುಮಾರಿಗೆ ಕುಡಿದುಕೊಂಡು ಬಂದು ತಾಯಿಯನ್ನು ಥಳಿಸಲು ಶುರು ಮಾಡಿದ್ದನು. ಆಗ ಕೋಪಗೊಂಡ ಸಂಜೀವ್ ಚಾಕುವಿನಿಂದ ಇರಿದು ಕೊಂದಿದ್ದಾನೆ ಎಂದು ದಕ್ಷಿಣ ವಿಭಾಗ ಡಿಸಿಪಿ ಶರಣಪ್ಪ ಅವರು ಹೇಳಿದ್ದಾರೆ.

    ಈ ಘಟನೆ ಸಂಬಂಧ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸದ್ಯಕ್ಕೆ ಆರೋಪಿ ಸಂಜೀವ್‍ನನ್ನ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಆಸ್ತಿಗಾಗಿ ಬೆರಳುಗಳಿಂದ ತಂದೆಯ ಕಣ್ಣುಗುಡ್ಡೆಯನ್ನೇ ಕಿತ್ತ ಪಾಪಿ ಮಗ!

    ಆಸ್ತಿಗಾಗಿ ಬೆರಳುಗಳಿಂದ ತಂದೆಯ ಕಣ್ಣುಗುಡ್ಡೆಯನ್ನೇ ಕಿತ್ತ ಪಾಪಿ ಮಗ!

    ಬೆಂಗಳೂರು: ಆಸ್ತಿ ಬರೆದುಕೊಡಲಿಲ್ಲ ಅಂತಾ ಪಾಪಿ ಮಗನೊಬ್ಬ ತಂದೆಯ ಕಣ್ಣು ಕಿತ್ತು ಹಾಕಿರುವ ಪೈಶಾಚಿಕ ಕೃತ್ಯ ಜೆ.ಪಿ.ನಗರದ ಶಾಕಾಂಬರಿ ಬಡವಾಣೆಯಲ್ಲಿ ನಡೆದಿದೆ. ಇಂದು ಮಧ್ಯಾಹ್ನ ಸುಮಾರು 12.30ಕ್ಕೆ ಈ ಭಯಾನಕ ಘಟನೆ ನಡೆದಿದೆ.

    ಚೇತನ್ ಎಂಬಾತ ತನ್ನ ಬೆರಳುಗಳಿಂದಲೇ 65 ವರ್ಷದ ತಂದೆ ಪರಮೇಶ್ ಅವರ ಕಣ್ಣು ಕಿತ್ತು ಹಾಕಿದ್ದಾನೆ. ವಿಧಾನಸೌಧದ ಮುಖ್ಯ ಕಾರ್ಯದರ್ಶಿಗಳ ಕಚೇರಿಯ ನಿವೃತ್ತ ನೌಕರರಾಗಿರುವ ಪರಮೇಶ್ ಶಾಕಾಂಬರಿ ನಗರದಲ್ಲಿ ಸ್ವಂತ ಮನೆ ಮಾಡಿಕೊಂಡು ನಿವೃತ್ತಿ ಜೀವನ ನಡೆಸುತ್ತಿದ್ದರು. ಎರಡನೇ ಮಗನಾಗಿರುವ ಚೇತನ್ ಆಸ್ತಿಯಲ್ಲಿ ಪಾಲು ಬೇಕೆಂದು ತಂದೆಯೊಂದಿಗೆ ಜಗಳ ಮಾಡಿದ್ದಾನೆ. ಈ ವೇಳೆ ತನ್ನ ಬೆರಳುಗಳ ಉಗುರಿನ ಸಹಾಯದಿಂದ ಕಣ್ಣು ಗುಡ್ಡೆಯನ್ನು ಕಿತ್ತು ಬಿಸಾಕಿದ್ದಾನೆ. ಮತ್ತೊಂದು ಕಣ್ಣು ಸಂಪೂರ್ಣ ರಕ್ತಮಯವಾಗಿದೆ.

    ಘಟನೆ ಬಳಿಕ ಭಯಬೀತನಾದ ಚೇತನ್ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಕೂಡಲೇ ಸ್ಥಳೀಯರು ಚೇತನ್ ನನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ. ಮಗನ ಹಲ್ಲೆಯಿಂದ ಗಾಯಗೊಂಡಿದ್ದ ಪರಮೇಶ್ ಅವರನ್ನು ಜೆ.ಪಿ.ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪರಮೇಶ್ ರನ್ನು ನೋಡಿದ ವೈದ್ಯರು ಎರಡು ಕಣ್ಣುಗಳು ಸಂಪೂರ್ಣ ಹಾನಿಗೊಳಗಾಗಿವೆ ಎಂದು ತಿಳಿಸಿದ್ದಾರೆ.

    ಚೇತನ್ ಓರ್ವ ಡ್ರಗ್ ಅಡಿಕ್ಟ್ ಆಗಿದ್ದು, ಮನೆಯಲ್ಲಿ ಹಣಕ್ಕಾಗಿ ಪೋಷಕರನ್ನು ಪದೇ ಪದೇ ಪೀಡಿಸುತ್ತಿದ್ದನಂತೆ. ಪೋಷಕರು ಹಣ ಕೊಡದೇ ಇದ್ದಾಗ ಆಸ್ತಿಯಲ್ಲಿ ಪಾಲು ಬೇಕೆಂದು ಹಠ ಹಿಡಿದಿದ್ದಾನೆ. ಒಂದು ವೇಳೆ ಆಸ್ತಿಯಲ್ಲಿ ಭಾಗ ನೀಡಿದ್ರೆ ಹಾಳು ಮಾಡ್ತಾನೆ ಅಂತಾ ಪೋಷಕರು ಪಾಲು ನೀಡಿರಲಿಲ್ಲ ಎಂಬ ಮಾಹಿತಿಗಳು ಲಭ್ಯವಾಗಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ಒಂದಲ್ಲ, ಎರಡಲ್ಲ, ಐವರು ಹೆಂಡ್ತೀರು- 58ನೇ ವಯಸ್ಸಿಗೆ 22ರ ಯುವತಿಯ ವರಿಸಿದ ಪಿಎಸ್‍ಐ

    ಒಂದಲ್ಲ, ಎರಡಲ್ಲ, ಐವರು ಹೆಂಡ್ತೀರು- 58ನೇ ವಯಸ್ಸಿಗೆ 22ರ ಯುವತಿಯ ವರಿಸಿದ ಪಿಎಸ್‍ಐ

    – ಸಾವಿನ ನಂತರ ಹೊರಬಿತ್ತು ಪಂಚ ಪತ್ನಿಯರ ಕತೆ

    ತುಮಕೂರು: ನಿವೃತ್ತ ಪಿಎಸ್‍ಐಯೋರ್ವ ನಿಗೂಢವಾಗಿ ಒಂದಲ್ಲ, ಎರಡಲ್ಲ ಬರೋಬ್ಬರಿ ಐದು ಮದುವೆಯಾಗಿ ಪತ್ನಿಯರಿಗೆಲ್ಲಾ ವಂಚಿಸಿದ ಘಟನೆ ತುಮಕೂರಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ತಾಲೂಕಿನ ಸ್ವಾಂದೇನಹಳ್ಳಿ ನಿವಾಸಿ ದಿವಂಗತ ಪಿಎಸೈ ವಿಶ್ವನಾಥ್ ಬರೋಬ್ಬರಿ ಐದು ಮದುವೆಯಾಗಿದ್ದಾರಂತೆ. ಮೊದಲನೆಯವರು ಸರೋಜಮ್ಮ, ಎರಡನೆಯವರು ಶಾರದಾ ಹಾಗೂ ಮೂರನೆಯವರು ಕವನಾ(ಹೆಸರು ಬದಲಾಯಿಸಲಾಗಿದೆ). ಇನ್ನುಳಿದ ಇಬ್ಬರು ಪತ್ನಿಯರು ಈ ಜಂಟಾಟವೇ ಬೇಡ ಎಂದು ದೂರ ಉಳಿದಿದ್ದಾರೆ ಎಂದು ತಿಳಿದು ಬಂದಿದೆ.

    ನಿವೃತ್ತ ಪಿಎಸ್‍ಐ ಸಾವನ್ನಪ್ಪಿದ್ದಾಗ ಆಸ್ತಿಗಾಗಿ ಪತ್ನಿಯರು ಪೊಲೀಸ್ ಠಾಣೆ ಮೆಟ್ಟಿಲೇರಿದಾಗಲೇ ಇವರಿಗೆ ಪಂಚ ಪತ್ನಿಯರು ಇರುವ ವಿಚಾರ ತಿಳಿದು ಬಂದಿದೆ. ವಿಶೇಷ ಅಂದರೆ 58ನೇ ವಯಸ್ಸಿನಲ್ಲೂ 22 ವರ್ಷದ ಯುವತಿ ಕವನಾ(ಹೆಸರು ಬದಲಾಯಿಸಲಾಗಿದೆ) ವಂಚಿಸಿದ್ದಾರಂತೆ. ಇದೇ ಜುಲೈ 18 ರಂದು ವಿಶ್ವನಾಥ್ ಸ್ವಾಂದೇನಹಳ್ಳಿಯ ತನ್ನ ಮನೆಯಲ್ಲಿ ಮೃತಪಟ್ಟಿದ್ದಾರೆ. ಈ ವೇಳೆ ಮೂರನೇ ಪತ್ನಿ ಕವನಾ ಮಾತ್ರ ಇದ್ದರು. ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಮೊದಲ ಪತ್ನಿಯ ಮಕ್ಕಳು, ಎರಡನೇ ಪತ್ನಿ ಮತ್ತು ಮಕ್ಕಳು ಸ್ವಾಂದೇನಹಳ್ಳಿಗೆ ಧಾವಿಸಿ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದಾರೆ. ಆಗಲೇ ವಿಶ್ವನಾಥ್ ಗೆ ಐದು ಮದುವೆಯಾಗಿರುವ ಸಂಗತಿ ಬೆಳಕಿಗೆ ಬಂದಿದೆ.

    ಈಗ ಐವರಲ್ಲಿ ಮೂವರು ಪತ್ನಿಯರ ನಡುವೆ ಮಾತ್ರ ಆಸ್ತಿಗಾಗಿ ಗಲಾಟೆ ಜೋರಾಗಿದೆ. ಮೂವರು ಕೂಡಾ ಆಸ್ತಿಗಾಗಿ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಹೋದಲೆಲ್ಲಾ ಠಾಣೆಗೊಂದರಂತೆ ಮದುವೆಯಾದ ವಿಶ್ವನಾಥ್, ಪತ್ನಿಯರನ್ನು ಸಂಕಷ್ಟದಲ್ಲಿ ಸಿಲುಕಿಸಿ ಇಹಲೋಕ ತ್ಯಜಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews