Tag: ಆಸ್ತಿ

  • ಬಿಬಿಎಂಪಿ ಅಡವಿಟ್ಟ 11ರಲ್ಲಿ 10 ಆಸ್ತಿಗಳು ಋಣಮುಕ್ತ

    ಬಿಬಿಎಂಪಿ ಅಡವಿಟ್ಟ 11ರಲ್ಲಿ 10 ಆಸ್ತಿಗಳು ಋಣಮುಕ್ತ

    ಬೆಂಗಳೂರು: ಬಿಬಿಎಂಪಿ ತನ್ನ ಆಸ್ತಿಗಳನ್ನು ಅಡವಿಡುತ್ತ ಬರುತ್ತಿದೆ, ಅಲ್ಲದೆ ಆಸ್ತಿ ನಿರ್ವಹಣೆ ಸಾಧ್ಯವಾಗುತ್ತಿಲ್ಲ ಎಂಬ ಮಾತುಗಳು ಕಾಂಗ್ರೆಸ್ ಆಡಳಿತಾವಧಿಯಲ್ಲಿ ಕೇಳಿ ಬರುತ್ತಿದ್ದವು. ಇದೀಗ ಆ ಸ್ಥಿತಿ ಬದಲಾಗಿದ್ದು, ಅಡವಿಟ್ಟ ಆಸ್ತಿಯನ್ನು ಬಿಬಿಎಂಪಿ ಬಿಡಿಸಿಕೊಂಡಿದೆ.

    ಇದೆಲ್ಲದರ ನಡುವೆ ಒಂದೇ ಪಾಲಿಕೆಯಿಂದ ಆಡಳಿತ ನಿರ್ವಹಣೆ ಸಾಧ್ಯವಾಗುತ್ತಿಲ್ಲ, ಸಾಲ ಹೆಚ್ಚುತ್ತಿದೆ. ಹೀಗಾಗಿ ಬಿಬಿಎಂಪಿಯನ್ನು ನಾಲ್ಕು ಪಾಲಿಕೆಗಳನ್ನಾಗಿ ವಿಂಗಡಿಸಬೇಕು. ಅಂದರೆ ಮಾತ್ರ ಆಡಳಿತ ನಿರ್ವಹಣೆ ಸುಗಮವಾಗಲಿದೆ ಎಂಬ ಮಾತುಗಳು ಆಗಾಗ ಕೇಳಿ ಬರುತ್ತವೆ. ಬಿಬಿಎಂಪಿಗೆ ಆಸ್ತಿ ನಿರ್ವಹಣೆ, ತೆರಿಗೆ ಸಂಗ್ರಹ ಸವಾಲಾಗಿ ಪರಿಣಮಿಸಿದೆ ಎಂದು ಹೇಳಲಾಗುತ್ತದೆ. ಇದೆಲ್ಲದರ ಮಧ್ಯೆ ಇದೀಗ ಬಿಬಿಎಂಪಿ ಅಡವಿಟ್ಟ ತನ್ನ ಆಸ್ತಿಯನ್ನು ಮತ್ತೆ ಬಿಡಿಸಿಕೊಳ್ಳುತ್ತಿದ್ದು, ಈ ಮೂಲಕ ಉತ್ತಮ ಸ್ಥಿತಿಗೆ ಮರಳುತ್ತಿದೆ.

    ಅಡವಿಟ್ಟ ಆಸ್ತಿಯನ್ನು ಬಿಡಿಸಿಕೊಳ್ಳಲು ಬಿಬಿಎಂಪಿ ನಿರಂತರ ಪ್ರಯತ್ನ ನಡೆಸಿದ್ದು, ಸ್ಲಾಟರ್ ಹೌಸ್ ಹಾಗೂ ರಾಜಾಜಿನಗರದ ಬಿಬಿಎಂಪಿಯ ಆಸ್ತಿಯನ್ನು ಋಣಮುಕ್ತವನ್ನಾಗಿ ಮಾಡಿಕೊಂಡಿದೆ. ಒಟ್ಟು 211 ಕೋಟಿ ರೂ. ಸಾಲವನ್ನು ಪಾಲಿಕೆ ಮರುಪಾವತಿಸಿ ಆಸ್ತಿಯನ್ನು ಪಡೆದುಕೊಂಡಿದೆ. ಅಲ್ಲದೆ, 9 ತಿಂಗಳ ಹಿಂದೆಯಷ್ಟೇ 871 ಕೋಟಿ ರೂ. ಸಾಲವನ್ನು ಬಿಬಿಎಂಪಿ ತೀರಿಸಿತ್ತು. ಈ ಮೂಲಕ ದಾಸಪ್ಪ ಆಸ್ಪತ್ರೆ ಕಟ್ಟಡ, ಪಬ್ಲಿಕ್ ಯುಟಿಲಿಟಿ ಕಟ್ಟಡ, ಕಲಾಸಿಪಾಳ್ಯ ಮಾರುಕಟ್ಟೆ ಮತ್ತು ಪೂರ್ವ ಬಿಬಿಎಂಪಿ ಕಚೇರಿಯನ್ನು ಋಣ ಮುಕ್ತವಾಗಿದ್ದವು.

    ಒಟ್ಟು ಅಡವಿಟ್ಟ 11 ಆಸ್ತಿಗಳ ಪೈಕಿ ಇದೀಗ 10 ಆಸ್ತಿಗಳನ್ನು ಋಣಮುಕ್ತವನ್ನಾಗಿಸಿದ್ದು, ಪಾಲಿಕೆಯಲ್ಲಿ ಕಾಂಗ್ರೆಸ್ ಮಾಡಿದ್ದ ಸಾಲವನ್ನು ಮೈತ್ರಿ ತೀರಿಸುತ್ತಿದೆ ಎಂದು ಬಿಜೆಪಿ ನಾಯಕ ಪದ್ಮನಾಭ ರೆಡ್ಡಿ ವ್ಯಂಗ್ಯವಾಡಿದ್ದಾರೆ.

  • ಮಗ-ಸೊಸೆ ಮೇಲೆ ಕೋಪ- ಆಸ್ತಿಯನ್ನು ಸರ್ಕಾರಕ್ಕೆ ಬರೆದ ತಂದೆ

    ಮಗ-ಸೊಸೆ ಮೇಲೆ ಕೋಪ- ಆಸ್ತಿಯನ್ನು ಸರ್ಕಾರಕ್ಕೆ ಬರೆದ ತಂದೆ

    -ವೃದ್ಧಾಶ್ರಮ ನಿರ್ಮಿಸುವಂತೆ ಮನವಿ

    ಭುವನೇಶ್ವರ: ಒಡಿಶಾದ ಜಜ್ಪುರ್ ಜಿಲ್ಲೆಯ ಗ್ರಾಮವೊಂದರಲ್ಲಿ ವಾಸಿಸುವ 75 ವರ್ಷದ ಮಾಜಿ ಪತ್ರಕರ್ತ ತಮ್ಮ ಆಸ್ತಿಯನ್ನು ರಾಜ್ಯ ಸರ್ಕಾರಕ್ಕೆ ದಾನ ಮಾಡಿದ್ದಾರೆ. ತಾವೂ ನೀಡಿರುವ ಜಮೀನಿನಲ್ಲಿ ವೃದ್ಧಾಶ್ರಮವನ್ನು ನಿರ್ಮಿಸಬೇಕೆಂದು ಬಯಸಿದ್ದಾರೆ.

    ಮಾಜಿ ಪತ್ರಕರ್ತ ಖೇತ್ರಮೋಹನ್ ಮಿಶ್ರಾ ಅವರು ತಮ್ಮ ಆಸ್ತಿಯನ್ನು ಸರ್ಕಾರಕ್ಕೆ ದಾನ ಮಾಡಿದ್ದಾರೆ. ಮಿಶ್ರಾ ಅವರನ್ನು ಮಗ ಮತ್ತು ಸೊಸೆ ಸರಿಯಾಗಿ ನೋಡಿಕೊಳ್ಳದಿದ್ದಕ್ಕೆ ಈ ರೀತಿ ಮಾಡಿದ್ದಾರೆ. ಅಷ್ಟೇ ಅಲ್ಲದೇ ಇಬ್ಬರು ಮಿಶ್ರಾ ಅವರನ್ನು ಕೊಲೆ ಮಾಡಲೂ ಸಾಕಷ್ಟು ಬಾರಿ ಪ್ರಯತ್ನಿಸಿದ್ದರು ಎಂದು ಆರೋಪಿಸಿದ್ದಾರೆ.

    ನನ್ನ ಮಗ ಮತ್ತು ಸೊಸೆಯ ನಡವಳಿಕೆಯಿಂದ ನಾನು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ನನ್ನ ಇಚ್ಛೆಯಿಂದ ಸಹಿ ಹಾಕಿದ್ದೇನೆ. ನನ್ನ ಜೀವನದ ಉಳಿದ ಭಾಗವನ್ನು ವೃದ್ಧಾಶ್ರಮದಲ್ಲಿ ಕಳೆಯುತ್ತೇನೆ. ಹೀಗಾಗಿ ಸರ್ಕಾರವು ನನ್ನ ಜಮೀನಿನಲ್ಲಿ ವೃದ್ಧಾಶ್ರಮವನ್ನು ನಿರ್ಮಿಸಬೇಕೆಂದು ನಾನು ಮನವಿ ಮಾಡಿಕೊಳ್ಳುತ್ತೇನೆ. ಅಲ್ಲಿ ನನ್ನಂತಹ ವೃದ್ಧರಿಗೆ ಆಶ್ರಯ ನೀಡಲು ಅವಕಾಶ ಮಾಡಿಕೊಡಬೇಕು ಎಂದು ಖೇತ್ರಮೋಹನ್ ಮಿಶ್ರಾ ಹೇಳಿದ್ದಾರೆ.

    ಮಿಶ್ರಾ ಅವರನ್ನು ವೃದ್ಧಾಶ್ರಮಕ್ಕೆ ಸ್ಥಳಾಂತರಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಜಜ್ಪುರ ಜಿಲ್ಲಾಧಿಕಾರಿ ರಂಜನ್ ಕೆ. ದಾಸ್ ತಿಳಿಸಿದ್ದಾರೆ.

    ನಾವು ಮಿಶ್ರಾ ಅವರನ್ನು ಚಂಡಿಖೋಲೆ ಬಳಿಯ ವೃದ್ಧಾಶ್ರಮವೊಂದರಲ್ಲಿ ಇರಿಸಲು ವ್ಯವಸ್ಥೆ ಮಾಡಿದ್ದೇವೆ. ಅವರ ಮರಣದ ನಂತರವೂ ಕುಟುಂಬದವರು ಅವರ ಅಂತ್ಯಕ್ರಿಯೆಗೆ ಬರುವುದಕ್ಕೆ ಅನುಮತಿ ನೀಡಬಾರದೆಂದು ನಮ್ಮ ಬಳಿ ಮನವಿ ಮಾಡಿಕೊಂಡಿದ್ದಾರೆ. ಮಿಶ್ರಾ ಅವರು ತಮ್ಮ ಭೂಮಿಯನ್ನು ಸರ್ಕಾರಕ್ಕೆ ದಾನ ಮಾಡಿದ್ದಾರೆ. ಜೊತೆಗೆ ಅಲ್ಲಿ ವೃದ್ಧಾಶ್ರಮ ಕಟ್ಟಬೇಕೆಂದು ಬಯಸಿದ್ದಾರೆ. ಹೀಗಾಗಿ ನಾವು ಕೂಡ ಅಲ್ಲಿ ವೃದ್ಧಾಶ್ರಮವನ್ನು ನಿರ್ಮಿಸಲು ನಿರ್ಧರಿಸಿದ್ದೇವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

  • 8 ಸಾವಿರ ಕೋಟಿ ಸಾಲ ಮಾಡಿದ್ದ ಸಿದ್ಧಾರ್ಥ್ -ಯಾವ ಬ್ಯಾಂಕಿನಲ್ಲಿ ಎಷ್ಟು?

    8 ಸಾವಿರ ಕೋಟಿ ಸಾಲ ಮಾಡಿದ್ದ ಸಿದ್ಧಾರ್ಥ್ -ಯಾವ ಬ್ಯಾಂಕಿನಲ್ಲಿ ಎಷ್ಟು?

    – ಸಾಲಕ್ಕಿಂತ ಮೂರು ಪಟ್ಟು ಆಸ್ತಿ ಮೌಲ್ಯ

    ಬೆಂಗಳೂರು: ನಾಪತ್ತೆಯಾಗಿರುವ ಎಸ್.ಎಂ.ಕೃಷ್ಣ ಅವರ ಅಳಿಯ, ಕೆಫೆ ಕಾಫಿ ಡೇ ಮಾಲೀಕ ಸಿದ್ದಾರ್ಥ್ ಅವರು ವಿವಿಧ ಬ್ಯಾಂಕ್‍ಗಳಲ್ಲಿ ಬರೋಬ್ಬರಿ ಸುಮಾರು 8 ಸಾವಿರ ಸಾಲ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಸಿದ್ಧಾರ್ಥ್ ಅವರು ಮಾಡಿರುವ 8 ಸಾವಿರ ಸಾಲಕ್ಕಿಂತ ಮೂರು ಪಟ್ಟು ಅವರ ಆಸ್ತಿ ಮೌಲ್ಯವಿದೆ. ಯಾವ ಯಾವ ಬ್ಯಾಂಕಿನಲ್ಲಿ ಎಷ್ಟೆಷ್ಟು ಸಾಲ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    1. ಐಡಿಬಿಐ ಬ್ಯಾಂಕ್ – 4,475 ಕೋಟಿ ರೂ.
    2. ಆಕ್ಸಿಸ್ ಟ್ರಸ್ಟಿ ಸರ್ವೀಸ್ ಲಿಮಿಟೆಡ್ – 915 ಕೋಟಿ ರೂ.
    3. ಆಕ್ಸಿಸ್ ಬ್ಯಾಂಕ್ – 315 ಕೋಟಿ ರೂ.
    4. ಆದಿತ್ಯ ಬಿರ್ಲಾ ಫೈನಾನ್ಸ್ ಲಿಮಿಟೆಡ್ – 278 ಕೋಟಿ ರೂ.
    5. ಎಸ್ ಬ್ಯಾಂಕ್- 273 ಕೋಟಿ ರೂ.
    6. ಪಿರಮಾಲ್ ಟ್ರಸ್ಟ್ ಶಿಪ್ ಸರ್ವೀಸ್ ಲಿಮಿಟೆಡ್ – 175 ಕೋಟಿ ರೂ.
    7. ಆರ್‍ಬಿಎಲ್ ಬ್ಯಾಂಕ್ – 174 ಕೋಟಿ ರೂ.
    8. ಈಸಿಎಲ್ ಫೈನಾನ್ಸ್ – 150 ಕೋಟಿ ರೂ.
    9. ಸ್ಯಾಂಡರ್ಡ್ ಚಾರ್ಟೆಡ್ ಲೋನ್ಸ್ ಮತ್ತು ಇನ್ವೆಸ್ಟ್ ಮೆಂಟ್ – 150 ಕೋಟಿ ರೂ.
    10. ಕ್ಲಿಕ್ಸ್ ಕ್ಯಾಪಿಟಲ್ -150 ಕೋಟಿ ರೂ.
    11. ಆಕ್ಸಿಸ್ ಫೈನಾನ್ಸ್ ಲಿಮಿಟೆಡ್- 125 ಕೋಟಿ
    12. ಕೋಟಕ್ ಮಹಿಂದ್ರ ಇನ್ವೆಸ್ಟ್ ಮೆಂಟ್ ಲಿಮಿಟೆಡ್ – 125 ಕೋಟಿ ರೂ.
    13. ಎಕೆ ಕ್ಯಾಪಿಟಲ್ ಫೈನಾನ್ಸ್ 121 ಕೋಟಿ ರೂ.
    14. ಎಸ್‍ಟಿಸಿಐ ಫೈನಾನ್ಸ್ – 100 ಕೋಟಿ ರೂ.
    15. ರೋಬೋ ಇಂಡಿಯಾ ಫೈನಾನ್ಸ್ ಲಿಮಿಟೆಡ್ – 80 ಕೋಟಿ
    16. ಸಪ್ರೋಜಿ ಪಲ್ಲೋಂಜಿ ಫೈನಾನ್ಸ್ ಲಿಮಿಟೆಡ್ – 80 ಕೋಟಿ ರೂ.
    17. ವಿಸ್ತ್ರ ಐಟಿಸಿಎಲ್ ಲಿಮಿಟೆಡ್ – 75 ಕೋಟಿ
    18. ಶ್ರೀರಾಮ್ ಫೈನಾನ್ಸ್ – 50 ಕೋಟಿ ರೂ.
    19. ಬಜಾಜ್ ಫೈನಾನ್ಸ್ – 45 ಕೋಟಿ

    ಹೀಗೆ ಒಟ್ಟು 24 ಬ್ಯಾಂಕ್‍ಗಳಿಂದ 8 ಸಾವಿರ ಕೋಟಿ ಸಾಲ ಮಾಡಿದ್ದರು. ಈ ಬಗ್ಗೆ ತಮ್ಮ ಆಪ್ತ ಸ್ನೇಹಿತರ ಬಳಿ ಸಿದ್ಧಾರ್ಥ್ ತಮ್ಮ ನೋವು, ಸಾಲ, ಮತ್ತು ಕಿರುಕುಳದ ಬಗ್ಗೆ ಹೇಳಿಕೊಂಡಿದ್ದರು.

    ಒಟ್ಟು 12 ಸಾವಿರ ಎಕ್ರೆ ಜಾಗದಲ್ಲಿ ಕಾಫಿ ಎಸ್ಟೇಟ್ ಹೊಂದಿದ್ದ ಸಿದ್ಧಾರ್ಥ್ ಅವರು ಒಟ್ಟು 8,200 ಕೋಟಿ ರೂ. ಆದಾಯ ಹೊಂದುವ ಮೂಲಕ 2015ರ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು.

  • ಚಿಕ್ಕಮಗ್ಳೂರಲ್ಲೇ 50 ಸಾವಿರಕ್ಕೂ ಅಧಿಕ ಮಂದಿಗೆ ಕೆಲಸ ನೀಡಿದ್ದರು ಸಿದ್ಧಾರ್ಥ್

    ಚಿಕ್ಕಮಗ್ಳೂರಲ್ಲೇ 50 ಸಾವಿರಕ್ಕೂ ಅಧಿಕ ಮಂದಿಗೆ ಕೆಲಸ ನೀಡಿದ್ದರು ಸಿದ್ಧಾರ್ಥ್

    ಚಿಕ್ಕಮಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರ ಅಳಿಯ, ಉದ್ಯಮಿ ಸಿದ್ದಾರ್ಥ್ ನಾಪತ್ತೆಯಾಗಿ ಸುಮಾರು 15-16 ಗಂಟೆಯಾದ್ರೂ ಇನ್ನೂ ಯಾವುದೇ ಸುಳಿಯೂ ಪತ್ತೆಯಾಗಿಲ್ಲ. ಮಂಗಳೂರಿನ ನೇತ್ರಾವತಿ ನದಿಯಲ್ಲಿ ಪೊಲೀಸರು, ಅಗ್ನಿಶಾಮಕ ದಳದವರು ಸತತವಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.

    ಸಿದ್ಧಾರ್ಥ್ ಅವರು ಒಬ್ಬ ಆಗರ್ಭ ಶ್ರಿಮಂತರಾಗಿದ್ದು, ಸಾವಿರಾರು ಜನರಿಗೆ ಕೆಲಸ ಕೊಟ್ಟಿದ್ದರು. ಸಿದ್ಧಾರ್ಥ್ ಅವರು ಚಿಕ್ಕಮಗಳೂರಿನಲ್ಲಿ ಅಂದಾಜು 25 ಸಾವಿರಕ್ಕೂ ಅಧಿಕ ಕಾಫಿ ಎಸ್ಟೇಟ್ ಮಾಲೀಕರಾಗಿದ್ದಾರೆ. ಜೊತೆಗೆ ಐಷಾರಾಮಿ ಸೆರಾಯ್ ಹೊಟೇಲ್ ಮಾಲೀಕರು ಆಗಿದ್ದಾರೆ. ಅಷ್ಟೇ ಅಲ್ಲದೆ ಅಂಬರ್ ವ್ಯಾಲಿ ರೆಸಿಡೆನ್ಸಿಯಲ್ ಸ್ಕೂಲ್ ಮಾಲೀಕರಾಗಿದ್ದಾರೆ.

    ಎಬಿಸಿ ಕಾಫಿ ಕ್ಯೂರಿಂಗ್ ಮಾಲೀಕರಾಗಿದ್ದು, ಚಿಕ್ಕಮಗಳೂರು ಜಿಲ್ಲೆಯೊಂದರಲ್ಲೇ ಅಂದಾಜು 50 ಸಾವಿರಕ್ಕೂ ಅಧಿಕ ಜನರಿಗೆ ಕೆಲಸ ಕೊಟ್ಟಿದ್ದಾರೆ. ನೋಡಲು ತುಂಬಾ ಸರಳವಾಗಿರುತ್ತಿದ್ದ ಸಿದ್ದಾರ್ಥ್ ಅವರ ಸರಳ ಜೀವನ ಶೈಲಿ ಎಲ್ಲರನ್ನೂ ಬೆರಗುಗೊಳಿಸುತ್ತಿತ್ತು. ಕೋಟಿಗಳ ಒಡೆಯರಾಗಿದ್ದರು. ಸಿದ್ಧಾರ್ಥ್ ಅವರು ತುಂಬಾ ಸರಳವಾಗಿರುತ್ತಿದ್ದರು. ಹಣವಿದೆ ಎಂದು ದರ್ಪ ತೋರುತ್ತಿರಲಿಲ್ಲ.

    ತಮ್ಮ ಕೆಫೆ ಕಾಫಿ ಡೇ ಮಾಲೀಕ ಉದ್ಯಮಿ ಸಿದ್ಧಾರ್ಥ್ ಅವರು ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅವರ ಎಬಿಸಿ ಕಾಫಿ ಕ್ಯೂರಿಂಗ್ ಕಂಪನಿಯನ್ನು ಬಂದ್ ಮಾಡಲಾಗಿದೆ. ಪ್ರತಿ ದಿನದಂತೆ ಸಿಬ್ಬಂದಿ ಇಂದು ಕೂಡ ಕೆಲಸಕ್ಕೆ ಹಾಜರಾಗಿದ್ದಾರೆ. ಆದರೆ ಸಿದ್ಧಾರ್ಥ್ ಅವರು ನಾಪತ್ತೆಯಾದ ಹಿನ್ನೆಲೆಯಲ್ಲಿ ಇದೀಗ ಕಂಪನಿಯನ್ನು ಬಂದ್ ಮಾಡಲಾಗಿದೆ.

  • ಆಸ್ತಿಗಾಗಿ ಮಲಗಿದ್ದ ಅಣ್ಣನನ್ನೇ ಕೊಡಲಿಯಿಂದ ಕಡಿದು ಕೊಂದ ತಮ್ಮ

    ಆಸ್ತಿಗಾಗಿ ಮಲಗಿದ್ದ ಅಣ್ಣನನ್ನೇ ಕೊಡಲಿಯಿಂದ ಕಡಿದು ಕೊಂದ ತಮ್ಮ

    ಬಳ್ಳಾರಿ: ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಎರಡೆತ್ತಿನಹಳ್ಳಿ ಗ್ರಾಮದಲ್ಲಿ ಆಸ್ತಿಗಾಗಿ ತಮ್ಮನೋರ್ವ ಅಣ್ಣನನ್ನೇ ಕೊಡಲಿಯಿಂದ ಕಡಿದು ಕೊಲೆ ಮಾಡಿದ್ದಾನೆ.

    33 ವರ್ಷದ ಹಾಲೇಶ್ ತಾಳೇದಹಳ್ಳಿ ಕೊಲೆಯಾದ ಅಣ್ಣ. 31 ವರ್ಷದ ಹೊನ್ನಪ್ಪ ತಾಳೇದಹಳ್ಳಿ ಅಣ್ಣನನ್ನು ಕೊಲೆಗೈದ ಆರೋಪಿ. ಆಸ್ತಿ ವಿಚಾರದಲ್ಲಿ ಸೋದರರಿಬ್ಬರ ನಡುವೆ ಕಲಹವಿತ್ತು. ಶುಕ್ರವಾರ ರಾತ್ರಿ ಸಹ ಆಸ್ತಿಯ ವಿಚಾರವಾಗಿ ಹಾಲೇಶ್ ಮತ್ತು ಹೊನ್ನಪ್ಪನ ನಡುವೆ ಗಲಾಟೆ ನಡೆದಿದೆ. ರಾತ್ರಿ ಸುಮಾರು 2 ಗಂಟೆಗೆ ಮಲಗಿದ್ದ ಹಾಲೇಶ್ ನನ್ನು ಕೊಡಲಿಯಿಂದ ಕಡಿದು ಬರ್ಬರವಾಗಿ ಕೊಲೆಗೈದು ಹೊನ್ನಪ್ಪ ಪರಾರಿಯಾಗಿದ್ದಾನೆ.

    ಘಟನಾ ಸ್ಥಳಕ್ಕೆ ಹರಪನಹಳ್ಳಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕೊಲೆಗೆ ಸಂಬಂಧ ಕುಟುಂಬಸ್ಥರು ಮತ್ತು ಗ್ರಾಮಸ್ಥರಿಂದ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದು, ಆರೋಪಿ ಬಂಧನಕ್ಕಾಗಿ ಬಲೆ ಬೀಸಿದ್ದಾರೆ. ಈ ಸಂಬಂಧ ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಇಳಿ ವಯಸ್ಸಿನ ತಂದೆಗೆ ಹುಚ್ಚನ ಪಟ್ಟ ಕಟ್ಟಲು ಮುಂದಾದ ಮಗ

    ಇಳಿ ವಯಸ್ಸಿನ ತಂದೆಗೆ ಹುಚ್ಚನ ಪಟ್ಟ ಕಟ್ಟಲು ಮುಂದಾದ ಮಗ

    ಬೆಂಗಳೂರು: ಇಳಿ ವಯಸ್ಸಿನಲ್ಲಿ ತಂದೆಗೆ ಆಸರೆ ಆಗಬೇಕಿದ್ದ ಮಗ ವಿಲನ್ ಆಗಿದ್ದಾನೆ. ಆಸ್ತಿಗಾಗಿ ಮಗ ಜನ್ಮ ಕೊಟ್ಟ ತಂದೆಗೆ ಹುಚ್ಚನ ಪಟ್ಟ ಕಟ್ಟಲು ಮುಂದಾಗಿದ್ದಾನೆ

    ಮಾರತ್‍ಹಳ್ಳಿಯ ರಮೇಶ್ ಎಂಬವರು ವಯಸ್ಸಲ್ಲಿ ದುಡಿದು ಕೋಟ್ಯಾಂತರ ರೂ. ಆಸ್ತಿ ಮಾಡಿಟ್ಟಿದ್ದಾರೆ. ನನ್ನ ಕಾಲಾನಂತ್ರವಷ್ಟೇ ಸಂಪಾದನೆಯ ಆಸ್ತಿ ಮಗನಿಗೆ ಕೊಡೋದು ಎಂದು ರಮೇಶ್ ಹೇಳಿದ್ದಾರೆ. ತಂದೆ ಬದುಕಿರೋತನಕ ಆಸ್ತಿ ಸಿಗೋದಿಲ್ಲ ಅಂತ ತಿಳಿದ ಮಗ ಗಿರೀಶ್, ತಂದೆಗೆ ಹುಚ್ಚನ ಪಾತ್ರ ಕಟ್ಟಲು ರೆಡಿಯಾಗಿದ್ದಾನೆ. ತಂದೆ ಮಾಡಿಟ್ಟ ಆಸ್ತಿ ಮೇಲೆ ಕಣ್ಣಿಟ್ಟ ಮಗ ಗಿರೀಶ್, ತಂದೆಗೆ ಕೊಡಬಾರದ ಟಾರ್ಚರ್ ಕೊಡುತ್ತಿದ್ದಾನೆ. ಅಷ್ಟೇ ಅಲ್ಲ ರಾಡ್ ನಿಂದ ಮಾರಾಣಾಂತಿಕವಾಗಿ ಹಲ್ಲೆ ಮಾಡಿ ಆಸ್ಪತ್ರೆಗೆ ಸೇರಿಸಿದ್ದ ಎಂದು ತಂದೆ ರಮೇಶ್ ಆರೋಪಿಸಿದ್ದಾರೆ.

    ಚಿಕಿತ್ಸೆ ಕೊಡಿಸುವ ನೆಪದಲ್ಲಿ ವಾರಗಳ ಕಾಲ ಮಗ ಗಿರೀಶ್, ತಂದೆ ರಮೇಶ್‍ರನ್ನು ಖಾಸಗಿ ಆಸ್ಪತ್ರೆಯಲ್ಲೆ ಬಿಟ್ಟಿದ್ದಾನೆ. ಖಾಸಗಿ ಆಸ್ಪತ್ರೆಯ ವೈದ್ಯರಿಂದ ರಮೇಶ್ ಹುಚ್ಚನ್ನಾಗಿದ್ದಾನೆ ಎಂದು ನಕಲಿ ಸರ್ಟಿಫಿಕೇಟ್ ಪಡೆದುಕೊಂಡಿದ್ದಾನೆ. ಆಸ್ಪತ್ರೆಯಲ್ಲಿ ಕೊಟ್ಟ ನಕಲಿ ಸರ್ಟಿಫಿಕೇಟ್ ತೋರಿಸಿ ನನ್ನ ತಂದೆ ರಮೇಶ್ ಹುಚ್ಚ ಎಂಬಂತೆ ಬಿಂಬಿಸಿ ಆಸ್ತಿ ತನ್ನ ಹೆಸರಿಗೆ ಮಾಡಿಕೊಳ್ಳಲು ಹೊರಟಿದ್ದ ಎಂದು ನೊಂದ ತಂದೆ ರಮೇಶ್ ಕಣ್ಣೀರು ಹಾಕುತ್ತಾರೆ.

    ನಕಲಿ ಸರ್ಟಿಫಿಕೇಟ್‍ನಿಂದ ವಿಚಲಿತರಾದ ತಂದೆ ರಮೇಶ್, ನಿಮಾನ್ಸ್ ಆಸ್ಪತ್ರೆಗೆ ಹೋಗಿ ಚೆಕಪ್ ಮಾಡಿಸಿದ್ದಾರೆ. ನಿಮಾನ್ಸ್ ವೈದ್ಯರು ಫಿಟ್ ಆಗಿದ್ದಿಯಾ ಯಾವುದೇ ಕಾಯಿಲೆಗಳು ಇಲ್ಲ ಎಂದು ಖಚಿತ ಪಡಿಸಿದ್ದಾರೆ. ತಂದೆ ರಮೇಶ್ ಮಗನ ವರ್ತನೆಯಿಂದ ಬೇಸತ್ತು ಹೆಚ್‍ಎಎಲ್ ಪೊಲೀಸ್ ಠಾಣೆಗೆ ದೂರು ಕೊಡಲು ಮುಂದಾಗಿದ್ದಾರೆ. ಪೊಲೀಸರು ನೊಂದ ರಮೇಶ್ ಸಹಾಯಕ್ಕೆ ಬರಲು ನಿರಾಕರಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಹೆಚ್‍ಎಎಲ್ ಪೊಲೀಸರಿಗೆ ದೂರು ದಾಖಲಿಸಿಕೊಳ್ಳದಂತೆ ಸ್ಥಳೀಯ ರಾಜಕೀಯ ನಾಯಕರಿಂದ ಮಗ ಗಿರೀಶ್ ಒತ್ತಡ ಹಾಕಿಸ್ತಿದ್ದಾನೆ ಎಂದು ನೊಂದ ತಂದೆ ರಮೇಶ್ ಅಸಹಾಯಕತೆ ತೋಡಿಕೊಳ್ಳುತ್ತಿದ್ದಾರೆ.

  • ಗುಂಡು ಹಾರಿಸಿ ಮಗನ ಹೊಟ್ಟೆ ಸೀಳಿದ ತಂದೆ

    ಗುಂಡು ಹಾರಿಸಿ ಮಗನ ಹೊಟ್ಟೆ ಸೀಳಿದ ತಂದೆ

    ಕಾರವಾರ: ಕುಡಿದ ಅಮಲಿನಲ್ಲಿ ಮಗನ ಮೇಲೆ ತಂದೆಯೇ ಗುಂಡು ಹಾರಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ನರೇಬೈಲ್ ನಲ್ಲಿ ನಡೆದಿದೆ.

    ರಾವಯ್ಯ ಗುಂಡು ಹಾರಿಸಿದ ತಂದೆ. ರಾವಯ್ಯ ಕುಡಿದ ಅಮಲಿನಲ್ಲಿ ತನ್ನ ಮಗ ನಾಗೇಂದ್ರ ಮೇಲೆ ಗುಂಡು ಹಾರಿಸಿದ್ದಾನೆ. ನಾಗೇಂದ್ರ ಗುಂಡು ತಗುಲಿ ತೀವ್ರ ಅಸ್ವಸ್ಥಗೊಂಡಿದ್ದಾನೆ.

    ರಾವಯ್ಯ ಹಾಗೂ ನಾಗೇಂದ್ರ ನಡುವೆ ಆಸ್ತಿ ಸಂಬಂಧ ಮನಸ್ತಾಪ ಇತ್ತು. ಬುಧವಾರ ಈ ವಿಚಾರದ ಬಗ್ಗೆ ಮಾತುಕತೆ ನಡೆದಿದೆ. ಈ ವೇಳೆ ಜಗಳ ತಾರಕಕ್ಕೇರಿದ್ದು ಕುಡಿದ ಅಮಲಿನಲ್ಲಿ ಇದ್ದ ತಂದೆ ರಾವಯ್ಯ ಬಂದೂಕಿನಿಂದ ಗುಂಡು ಹಾರಿಸಿದ್ದು, ಪರಿಣಾಮ ಮಗನ ಹೊಟ್ಟೆ ಸೀಳಿದೆ.

    ನಾಗೇಂದ್ರನ ಹೊಟ್ಟೆಗೆ ಗುಂಡು ಬೀಳುತ್ತಿದ್ದಂತೆ ರಾವಯ್ಯ ಗಾಬರಿಗೊಂಡು ಮಗನನ್ನು ಶಿರಸಿ ಟಿಎಸ್‍ಎಸ್ ಆಸ್ಪತ್ರೆಗೆ ಕೊರೆದುಕೊಂಡು ಹೋಗಿದ್ದಾನೆ. ಸದ್ಯ ನಾಗೇಂದ್ರಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಸಾವು ಬದುಕಿನ ನಡುವೆ ಹೋರಾಡುದಿದ್ದಾನೆ.

    ಈ ಬಗ್ಗೆ ಶಿರಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ತಂದೆಯನ್ನು ವಶಕ್ಕೆ ಪಡೆಯಲಾಗಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಆಸ್ತಿಗಾಗಿ ಸೋದರನನ್ನೇ ಕೊಂದಿದ್ದ ತಮ್ಮನ ಸೆರೆ

    ಆಸ್ತಿಗಾಗಿ ಸೋದರನನ್ನೇ ಕೊಂದಿದ್ದ ತಮ್ಮನ ಸೆರೆ

    ಬೆಂಗಳೂರು: ಆಸ್ತಿ ಕೊಡದ ಸಹೋದರನ್ನು ಕೊಲೆಗೈದು ತಲೆ ಮರೆಸಿಕೊಂಡಿದ್ದ ತಮ್ಮ ಹಾಗೂ ಆತನ ಸ್ನೇಹಿತನನ್ನು ಬಂಧಿಸುವಲ್ಲಿ ಆನೇಕಲ್ ಪೊಲೀಸರು ಯಶಸ್ವಿಯಾಗಿದ್ದಾರೆ.

    ಬಂಧಿತರನ್ನು ಗೋವರ್ಧನ್ ಹಾಗೂ ವಿನೋದ್ ಎಂದು ಗುರುತಿಸಲಾಗಿದ್ದು, ಕಳೆದ ತಿಂಗಳು ಆನೇಕಲ್ ಬಸ್ ಡಿಪೋ ಹಿಂಬಾಗ ಆನೇಕಲ್ ನಿವಾಸಿ ಪದ್ಮನಾಬ್ ಎಂಬವರ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

    ಈ ಪ್ರಕರಣ ದಾಖಲಿಸಿಕೊಂಡ ಆನೇಕಲ್ ಪೊಲೀಸರು ತನಿಖೆ ಶುರು ಮಾಡಿದ್ದರು. ಈ ವೇಳೆ ಕೊಲೆಯಾದ ಪದ್ಮನಾಬ್  ನನ್ನು ಮಲ ಸಹೋದರನೇ ಆಸ್ತಿಗಾಗಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿತ್ತು. ಪೊಲೀಸರು ತಲೆಮರೆಸಿಕೊಂಡಿದ್ದ ಗೋವರ್ಧನ್ ಹಾಗೂ ವಿನೋದ್ ನನ್ನು ಬಂಧಿಸಿದ್ದಾರೆ.

    ಗೋವರ್ಧನ್ ತಂದೆಗೆ ಇಬ್ಬರು ಹೆಂಡತಿಯರಿದ್ದು, ತಂದೆ ಧರ್ಮರಾಜ್ ಎರಡನೇ ಪತ್ನಿ ಮತ್ತು ಮಗ ಗೋವರ್ಧನನಿಗೆ ಹಿಂಸೆ ನೀಡುತ್ತಿದ್ದನು. ಅಲ್ಲದೆ ಆಸ್ತಿಯನ್ನು ಕೊಡದೆ ಸತಾಯಿಸುತ್ತಿದ್ದನು. ಈ ಹಿನ್ನೆಲೆ ಗೋವರ್ಧನ್ ತನ್ನ ಸ್ನೇಹಿತ ವಿನೋದ್ ಸೇರಿ ಪದ್ಮನಾಬ್‍ನಿಗೆ ಮದ್ಯಪಾನ ಮಾಡಿಸಿ ತಲೆ ಮೇಲೆ ಸಿಮೆಂಟ್ ಬ್ಲಾಕ್ ಹಾಕಿ ಕೊಲೆ ಮಾಡಿದ್ದನು.

    ಈ ಕುರಿತು ಅನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಇಬ್ಬರ ಆರೋಪಿಗಳನ್ನು ಬಂಧಿಸಿ ಪರಪ್ಪನ ಅಗ್ರಹಾರಕ್ಕೆ ಕಳುಹಿಸಲಾಗಿದೆ.

  • ಹೆತ್ತ ತಾಯಿಯನ್ನೇ ಕೊಲ್ಲಲು ಮುಂದಾದ ಪಾಪಿ ಮಗ

    ಹೆತ್ತ ತಾಯಿಯನ್ನೇ ಕೊಲ್ಲಲು ಮುಂದಾದ ಪಾಪಿ ಮಗ

    ಬೆಂಗಳೂರು: ಪಾಪಿ ಮಗನೊಬ್ಬ ಆಸ್ತಿಗಾಗಿ ಹೆತ್ತು ಹೊತ್ತು ಸಾಕಿ ಸಲಹಿದ ತಾಯಿಯ ಕೊರಳಿಗೆ ಮಚ್ಚು ಇಟ್ಟು ಕೊಲೆ ಮಾಡಲು ಮುಂದಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಶಿವಕುಮಾರ್ ತನ್ನ 76 ವರ್ಷದ ತಾಯಿ ಸರಸ್ವತಮ್ಮನನ್ನೇ ಕೊಲೆ ಮಾಡಲು ಮುಂದಾಗಿದ್ದಾನೆ. ಸರಸ್ವತಮ್ಮ ಮಂಡ್ಯ ನಿವಾಸಿಯಾಗಿದ್ದು, ಪತಿಯ ಸಾವಿನ ಬಳಿಕ ಕಿರಿಯ ಮಗನ ಜೊತೆ ವಾಸವಿದ್ದರು. ಮೊದ ಮೊದಲು ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ನಾಟಕ ಮಾಡಿ ಖಾಲಿ ಪೇಪರ್ ಮೇಲೆ ಸಹಿ ಹಾಕಿಸಿ ತಾಯಿಯ ಹೆಸರಿಗಿದ್ದ ಒಂದು ಕೋಟಿ ಆಸ್ತಿಯನ್ನ ತನ್ನ ಹೆಸರಿಗೆ ವರ್ಗಾಯಿಸಿದ್ದಾನೆ.

    ಇಷ್ಟಕ್ಕೆ ತೃಪ್ತಿಯಾಗದ ಪಾಪಿ ಮಗ, ತಾಯಿಯ ಕುತ್ತಿಗೆಯಲ್ಲಿರುವ ಬಂಗಾರವನ್ನು ಕೊಡುವಂತೆ ಹೇಳಿದ್ದಾನೆ. ಇದಕ್ಕೆ ವಿರೋಧಿಸಿದಾಗ ಕುತ್ತಿಗೆಯ ಮೇಲೆ ಮಚ್ಚು ಇಟ್ಟು ಹೆದರಿಸಿ ಕಿತ್ತುಕೊಂಡಿದ್ದಾನೆ. ರಾತ್ರಿ ವೇಳೆ ಕುಡಿದು ಮನೆಗೆ ಬಂದು ಹಿಗ್ಗಾಮುಗ್ಗಾ ಥಳಿಸಿದ್ದಲ್ಲದೆ ಮನೆಯಿಂದ ಹೆತ್ತತಾಯಿಯನ್ನೇ ಹೊರಹಾಕಿದ್ದಾನೆ. ಮಗನಿಂದ ಮಾರಣಾಂತಿಕ ಹಲ್ಲೆಗೆ ಒಳಗಾಗಿ, ಇದೀಗ ವೃದ್ಧೆ ತಾಯಿ ಬೆಂಗಳೂರಿನಲ್ಲಿರುವ ಮಗಳ ಮನೆಗೆ ಬಂದಿದ್ದಾರೆ.

    ಸರಸ್ವತಮ್ಮನಿಗೆ ಚಿತ್ರಹಿಂಸೆ ಕೊಡುವ ವಿಷಯ ಪಕ್ಕದ ಮನೆಯವರ ಮೂಲಕ ಬೆಂಗಳೂರಿನಲ್ಲಿರುವ ಮಗಳು ಶೋಭಾಗೆ ತಿಳಿದಿದೆ. ನೀರು ಇಲ್ಲದೆ ಸಾಯುವ ಸ್ಥಿತಿಯಲ್ಲಿದ್ದ ವೃದ್ಧ ತಾಯಿಯನ್ನು ಮಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ತಾಯಿಗೆ ಹಿಂಸೆ ಕೊಟ್ಟ ತನ್ನ ಸಹೋದರನ ವಿರುದ್ಧ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಗೆ ದೂರು ಕೊಡಲು ಹೋದರೆ ಪೊಲೀಸರು ಕ್ಯಾರೆ ಅಂತಿಲ್ಲ. ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ಈ ಬಗ್ಗೆ ಪತ್ರ ಬರೆದಿದ್ದಾರೆ. ಆದರೆ ಪೊಲೀಸರು ಮಾತ್ರ ನಮಗೂ ಈ ಪ್ರಕರಣಕ್ಕೂ ಸಂಬಂಧವೇ ಇಲ್ಲ ಎನ್ನುವ ಹಾಗೆ ವರ್ತಿಸುತ್ತಿದ್ದಾರೆ.

     

    ಮಗ ಶಿವಕುಮಾರ್, ಹೆತ್ತ ತಾಯಿಯ ಆಸ್ತಿಯನ್ನು ಕಬಳಿಸಿ, ಮನೆಯಿಂದ ಹೊರ ಹಾಕಿ ದುಬಾರಿ ಕಾರಿನಲ್ಲಿ ಗೋವಾ, ಮಹಾರಾಷ್ಟ್ರ ಎಂದು ಸುತ್ತಾಡುತ್ತಿದ್ದಾನೆ.

  • ಕೈ ನಾಯಕಿ ಹತ್ಯೆಗೆ ರೋಚಕ ಟ್ವಿಸ್ಟ್ – ರೇಷ್ಮಾಳ ಮತ್ತೊಂದು ಮುಖವಾಡ ಬಯಲು

    ಕೈ ನಾಯಕಿ ಹತ್ಯೆಗೆ ರೋಚಕ ಟ್ವಿಸ್ಟ್ – ರೇಷ್ಮಾಳ ಮತ್ತೊಂದು ಮುಖವಾಡ ಬಯಲು

    ವಿಜಯಪುರ: ವಿಜಯಪುರ ಕಾಂಗ್ರೆಸ್ ಮುಖಂಡೆ ರೇಷ್ಮಾ ಪಡೇಕನೂರ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಬಂಧಿತರಿಂದ ರೇಷ್ಮಾಳ ಮತ್ತೊಂದು ಮುಖವಾಡ ಹೊರಬಿದ್ದಿದೆ.

    ರೇಷ್ಮಾ ಪಡೇಕನೂರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ಪೊಲೀಸರು ಆರೋಪಿ ಮಹಾರಾಷ್ಟ್ರದ ಎಂಐಎಂ ಮುಖಂಡ, ಸೊಲ್ಲಾಪುರ ಮಹಾನಗರ ಪಾಲಿಕೆ ಕಾರ್ಪೊರೇಟರ್ ತೌಫಿಕ್ ಶೇಖ್ ಹಾಗೂ ಮತ್ತೋರ್ವ ಆರೋಪಿ ಆತನ ಕಾರು ಚಾಲಕ ಇಜಾಜ್ ಬಿರಾದಾರನನ್ನ ಬಂಧಿಸಿದ್ದರು.

    ಮೃತ ರೇಷ್ಮಾ ಪಡೇಕನೂರ ಎಂಐಎಂ ಮುಖಂಡ ತೌಫಿಕ್‍ನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಅಷ್ಟೇ ಅಲ್ಲದೇ ಹಣ ಹಾಗೂ ಆಸ್ತಿಗಾಗಿ ತೌಫಿಕ್‍ನನ್ನು ಬ್ಲಾಕ್‍ಮೇಲ್ ಮಾಡುತ್ತಿದ್ದು, ತೌಫಿಕ್‍ನ ಎಂಟು ಎಕರೆ ಆಸ್ತಿ ತನ್ನ ಹೆಸರಿಗೆ ಬರೆಯುವಂತೆ ಬ್ಲಾಕ್‍ಮೇಲ್ ಮಾಡಿದ್ದಳು ಎಂದು ಬಂಧಿತರು ಬಾಯಿಟ್ಟಿದ್ದಾರೆ.

    ಹಣ ಕೊಡುವಂತೆ ಪೀಡಿಸುತ್ತಿದ್ದಳಂತೆ. ಇದರಿಂದ ಬೇಸತ್ತು ಪ್ಲಾನ್ ಮಾಡಿ ಕೊಲೆ ಮಾಡಿದ್ದಾಗಿ ತೌಫಿಕ್ ಶೇಖ್ ತನಿಖೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆಂದು ವಿಜಯಪುರ ಎಸ್‍ಪಿ ಪ್ರಕಾಶ್ ನಿಕಮ್ ಮಾಧ್ಯಮಗಳಿಗೆ ಸ್ಪಷ್ಟ ಪಡಿಸಿದ್ದಾರೆ.

    ಏನಿದು ಪ್ರಕರಣ?
    ಜೆಡಿಎಸ್‍ನ ಮಾಜಿ ಜಿಲ್ಲಾಧ್ಯಕ್ಷೆ ಹಾಗೂ ಹಾಲಿ ಕಾಂಗ್ರೆಸ್ ಮುಖಂಡೆ ರೇಷ್ಮಾ ಪಡೇಕನೂರ ಶವ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಕೋಲ್ಹಾರ ಬಳಿಯ ಕೃಷ್ಣಾ ನದಿಯಲ್ಲಿ ಮೇ 17 ರಂದು ಪತ್ತೆಯಾಗಿತ್ತು. ಕಳೆದ ವಿಧಾನಸಭೆ ಚುನಾವಣೆ ವೇಳೆ ಜೆಡಿಎಸ್ ನಿಂದ ದೇವರಹಿಪ್ಪರಗಿ ಮತಕ್ಷೇತ್ರದ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಅಲ್ಲದೆ 2013ರಲ್ಲಿ ದೇವರ ಹಿಪ್ಪರಗಿ ಕ್ಷೇತ್ರದಿಂದ ಜೆಡಿಎಸ್ ನಿಂದ ರೇಷ್ಮಾ ಪಡೇಕನೂರ ಸ್ಪರ್ಧಿಸಿ ಸೋಲು ಕಂಡಿದ್ದರು. ಕೋಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು.