Tag: ಆಸ್ತಿ

  • ಸರಸ, ವಿರಸ, ಸಾಮರಸ್ಯ ಇದ್ದರೆ ಸಂಸಾರ – ಘಟನೆಯ ಬಗ್ಗೆ ಕಲ್ಯಾಣ್ ಸ್ಪಷ್ಟನೆ

    ಸರಸ, ವಿರಸ, ಸಾಮರಸ್ಯ ಇದ್ದರೆ ಸಂಸಾರ – ಘಟನೆಯ ಬಗ್ಗೆ ಕಲ್ಯಾಣ್ ಸ್ಪಷ್ಟನೆ

    – ನಾನು, ನನ್ನ ಹೆಂಡ್ತಿ ಚೆನ್ನಾಗಿದ್ದೀವಿ

    ಬೆಳಗಾವಿ: ಪ್ರತಿಯೊಂದು ಸಂಸಾರದಲ್ಲೂ ಜಗಳ ನಡೆಯುತ್ತದೆ. ಸರಸ, ವಿರಸ, ಸಾಮರಸ್ಯ ಇದ್ದರೆ ಅದು ಸಂಸಾರ. ನಮ್ಮ ಸಂಸಾರ ಚೆನ್ನಾಗಿದೆ ಎಂದು ಪ್ರೇಮಕವಿ ಕೆ.ಕಲ್ಯಾಣ್ ತಮ್ಮ ದಾಂಪತ್ಯ ಜೀವನದ ಬಗ್ಗೆ ಸ್ಪಷ್ಟಪಡಿಸಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಕಲ್ಯಾಣ್, ನಮ್ಮ ತಂದೆ ತೀರಿಕೊಂಡು 14 ವರ್ಷ ಆಗಿದೆ. ನಮ್ಮ ತಾಯಿ ಎರಡೂವರೆ ವರ್ಷದ ಹಿಂದೆ ಸಾವನ್ನಪ್ಪಿದ್ದಾರೆ. ಅಲ್ಲಿಯತನಕ ನಾವೆಲ್ಲರೂ ಒಟ್ಟಿಗೆ ಇದ್ವಿ, ಆಮೇಲೆ ನಾನು, ನನ್ನ ಹೆಂಡತಿ ಒಟ್ಟಿಗೆ ಬೇರೆ ಮನೆಯಲ್ಲಿ ವಾಸಮಾಡುತ್ತಿದ್ವಿ. ನಮ್ಮ ಮನೆಯಿಂದ ಸ್ವಲ್ಪ ದೂರದಲ್ಲಿ ಪತ್ನಿಯ ಪೋಷಕರು ವಾಸಮಾಡುತ್ತಿದ್ದರು. ವಯಸ್ಸಾದರೂ ಯಾಕೆ ಬೇರೆ ಇರಬೇಕು ಎಂದು ನಮ್ಮ ಮನೆಗೆ ಕರೆದುಕೊಂಡು ಬಂದು ಒಟ್ಟಿಗೆ ವಾಸ ಮಾಡುತ್ತಿದ್ದೆವು ಎಂದರು.

    ಮೊದಲಿಗೆ ನಾನು ನನ್ನ ಹೆಂಡತಿ ಚೆನ್ನಾಗಿದ್ದೀವಿ. ನಮ್ಮಿಬ್ಬರಲ್ಲಿ ಯಾವುದೇ ಪರಸ್ಪರ ಗೊಂದಲಗಳಿಲ್ಲ. ನನ್ನ ಪತ್ನಿ ಬೆಳಗಾವಿಯವರು ನಾವಿಬ್ಬರು ಮದುವೆಯಾಗಿ 15 ವರ್ಷ ಆಗಿದೆ. ಪ್ರತಿಯೊಬ್ಬರ ಸಂಸಾರದಲ್ಲೂ ಸಣ್ಣಪುಟ್ಟ ಏಳು ಬೀಳುಗಳು ಆರೋಪಗಳಿರುತ್ತವೆ. ಸರಸ, ವಿರಸ, ಸಾಮರಸ್ಯ ಇದ್ದರೇನೆ ಅದು ಸಂಸಾರ. ನಮ್ಮ ಸಂಸಾರನೂ ಚೆನ್ನಾಗಿದೆ ಎಂದು ಸ್ಪಷ್ಟಪಡಿಸಿದರು.

    ಅತ್ತ, ಮಾವ ಬಂದ ಒಂದು ವಾರಕ್ಕೆ ಗಂಗಾ ಕುಲಕರ್ಣಿಯನ್ನು ಅಡಿಗೆ ಕೆಲಸಕ್ಕಾಗಿ ನೇಮಿಸಿಕೊಳ್ಳಲಾಗಿತ್ತು. ಆದರೆ ಆಕೆಯ ನಡವಳಿಕೆ ನನಗೂ ನನ್ನ ಪತ್ನಿಗೂ ಇಷ್ಟವಾಗಿರಲಿಲ್ಲ. ಅಲ್ಲದೇ ಆಕೆಯ ಬಂದ 4-5 ದಿನಗಳಲ್ಲಿ ಪತ್ನಿ, ಅತ್ತೆ, ಮಾವ ಯಾಕೋ ಸೈಲೆಂಟ್ ಆದರು. ನನಗೆ ಏನೋ ನಿಗೂಢತೆ ರೀತಿ ಕಾಣಿಸುತ್ತಿತ್ತು. ಒಂದು ದಿನ ಮಧ್ಯರಾತ್ರಿ ಅತ್ತೆ ದೇವರ ಮನೆಯಲ್ಲಿ ನಿಂಬೆ ಹಣ್ಣು ಇಟ್ಟುಕೊಂಡು ದೀಪ ಹಚ್ಚಿಕೊಂಡು ಬೆಳಗ್ಗೆ ಸುಮಾರು 3 ಗಂಟೆಯವರೆಗೂ ಪೂಜೆ ಮಾಡಲು ಶುರು ಮಾಡಿದರು. ಆಗ ಗಂಗಾ ಕುಲಕರ್ಣಿಯ ಸಲಹೆಯಂತೆ ಪೂಜೆ ಮಾಡುತ್ತಿದ್ದಾರೆ ಎಂಬುದು ನನಗೆ ಗೊತ್ತಾಯಿತು.

    ಪದೇ ಪದೇ ನನಗೆ ಗೊತ್ತಿರುವ ಗುರೂಜಿ ಇದ್ದಾರೆ. ಅವರ ಆಶೀರ್ವಾದ ಪಡೆದುಕೊಂಡರೆ ಒಳ್ಳೆದಾಗುತ್ತದೆ ಎಂದು ಗಂಗಾ ಕುಲಕರ್ಣಿ ಹೇಳುತ್ತಿದ್ದರು. ಒಮ್ಮೆ ಆ ವ್ಯಕ್ತಿಗೆ ಫೋನ್ ಮಾಡಿ ಕೊಟ್ಟಿದ್ದರು. ಆತನ ಹೆಸರು ಶಿವನಂದ ವಾಲಿ. ಪೂಜೆ ಮಾಡಿಸಲು ಹೇಳಿದ್ರು, ನಾನು ಒಪ್ಪಲಿಲ್ಲ. ಆದರೆ ನಮ್ಮ ಅತ್ತೆಯವರು ಗುರೂಜಿ ಜೊತೆ ಗಂಟೆಗಟ್ಟಲೇ ಫೋನಿನಲ್ಲಿ ಮಾತನಾಡುತ್ತಿದ್ದರು. ಜನವರಿ 9 ರಂದು ರಾತ್ರಿ ಬೆಳಗಾವಿಗೆ ಹೋಗಿ ಬರುತ್ತೇವೆ ಎಂದು ಪತ್ನಿ, ಅತ್ತೆ, ಮಾವ ಮೂವರು ಹೋದರು. ಆದರೆ ಜನವರಿ 10ರಂದು ಪತ್ನಿಯ ಫೋನ್ ಸ್ವಿಚ್ ಆಫ್ ಆಗಿತ್ತು. ಕೊನೆಗೆ ಜನವರಿ 17 ರಂದು ಬೆಳಗಾವಿಗೆ ಬಂದು ನೋಡಿದೆ. ಆಗ ಅತ್ತೆ ನನ್ನ ಪತ್ನಿಯನ್ನು ಭೇಟಿ ಮಾಡಲು ಬಿಡಲಿಲ್ಲ. ಅಲ್ಲಿಯೂ ಗಂಗಾ ಕುಲಕರ್ಣಿ ಹೇಳಿದಂತೆ ಪೂಜೆ ಮಾಡುತ್ತಿದ್ದರು ಎಂದು ಕಲ್ಯಾಣ್ ತಿಳಿಸಿದರು.

    ಒಂದು ದಿನ ಮೂವರು ಮನೆ ಖಾಲಿ ಮಾಡಿಕೊಂಡು ಬೇರೆ ಕಡೆ ಹೋಗಿದ್ದರು. ಆ ಮನೆಯಲ್ಲಿ ಗಂಗಾ ಕುಲಕರ್ಣಿ, ಶಿವನಂದ ವಾಲಿ ಪೂಜೆ ಮಾಡಲು ಶುರು ಮಾಡಿದ್ದರು. ಈ ವಿಚಾರ ಗೊತ್ತಾಗಿ ಬರುವಷ್ಟರಲ್ಲಿ ಆ ಮನೆಯನ್ನು ಖಾಲಿ ಮಾಡಿ ಬೇರೆ ಕಡೆ ಹೋಗಿದ್ದಾರೆ ಎಂದು ನನಗೆ ಗೊತ್ತಾಯಿತು. ಬೆಂಗಳೂರಿನ ಬಂದು ಎಲ್ಲ ಕಡೆ ಹುಡುಕಿದೆ. ಆಗ ಮೂವರು ಪತ್ತೆಯಾದರು. ಆದರೆ ಈ ವೇಳೆ ನನ್ನ ಪತ್ನಿಯನ್ನು ಮಾತನಾಡಲು ಬಿಡದೆ ರೂಮಿಗೆ ಕರೆದುಕೊಂಡು ಹೋದರು. ಆಕೆಯ ಕತ್ತಲ್ಲಿ ನಾನು ಕಟ್ಟಿದ್ದ ತಾಳಿಯೂ ಇರಲಿಲ್ಲ. ನನ್ನ ಪತ್ನಿ ಬೇರೆ ಅಪರಿಚಿತರ ಜೊತೆ ಮಾತನಾಡುವ ರೀತಿ ಮಾತಾಡಿದರು.

    ಅಲ್ಲದೇ ನನ್ನ ಪತ್ನಿಯ ತಾಯಿ ಸಂಬಂಧಿಕರಿಗೆ ಫೋನ್ ಮಾಡಿ ಲಕ್ಷಾಂತರ ಹಣಬೇಕು ಎಂದು ಕೇಳಿದ್ದಾರೆ. ಪೂಜೆ ಮಾಡಿಸಬೇಕು, ಇಲ್ಲವಾದರೆ ನಮ್ಮ ಪ್ರಾಣಕ್ಕೆ ಅಪಾಯ ಇದೆ. ಹಣವನ್ನು ಗುರೂಜಿಗೆ ಕೊಡಬೇಕು ಎಂದು ಹಣ ಕೇಳಿದ್ದಾರೆ. ಒಂದು ದಿನ ನನ್ನ ಪತ್ನಿಯ ಅಕೌಂಟ್‍ನಿಂದ ಏಕಾಏಕಿ 1.20 ಲಕ್ಷ ಹಣ ಶಿವಾನಂದ ವಾಲಿಗೆ ಅಕೌಂಟ್‍ಗೆ ವರ್ಗಾವಣೆಯಾಗಿದೆ. ಸಂಬಂಧಿಕರ ಬಳಿ ಪಡೆದಿದ್ದ ಹಣವನ್ನ ಶಿವಾನಂದ ವಾಲಿಗೆ ಕೊಟ್ಟಿದ್ದಾರೆ. ಅಲ್ಲದೇ ಬೆಳಗಾವಿಯಲ್ಲಿ ಅತ್ತೆ, ಮಾವ ಹೆಸರಿನಲ್ಲಿದ್ದ ಆಸ್ತಿಯೂ ಕೂಡ ಶಿವಾನಂದ ವಾಲಿಗೆ ವರ್ಗಾವಣೆ ಆಗಿದೆ ಎಂದರು.

    ಇದ್ದಕ್ಕಿದ್ದಂತೆ ಎಲ್ಲರ ಫೋನ್ ಸ್ವಿಚ್ ಆಫ್ ಆಗಿತ್ತು. ಮೂರು ತಿಂಗಳಿನಿಂದ ಸಂಬಂಧಿಕರ ಸಂಪರ್ಕದಲ್ಲೂ ಇರಲಿಲ್ಲ. ನನ್ನ ಪತ್ನಿಯ ಕುಟುಂಬಸ್ಥರ ಜೊತೆ, ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ನಾನು ದೂರು ದಾಖಲಿಸಿರುವೆ. ದೂರಿನಲ್ಲಿ ನನ್ನ ಅತ್ತೆ, ಮಾವ ಕಾಣಿಸಿಕೊಳ್ಳುತ್ತಿಲ್ಲ. ನಮ್ಮ ಕುಟುಂಬಕ್ಕೆ ಸಂಬಂಧ ಇಲ್ಲದ ವ್ಯಕ್ತಿಗೆ ಆಸ್ತಿ, ಹಣ ಎಲ್ಲವನ್ನೂ ಬರೆದುಕೊಟ್ಟಿರುವ ಬಗ್ಗೆ ಹೇಳಿದ್ದೇನೆ. ದೂರು ನೀಡಿದ 48 ಗಂಟೆಯ ಒಳಗೆ ಅತ್ತೆ, ಮಾವ, ಪತ್ನಿ ಪತ್ತೆಯಾಗಿದ್ದಾರೆ. ಶಿವಾನಂದ ವಾಲಿ, ಗಂಗಾ ಕುಲಕರ್ಣಿ ಒಂದೇ ದಿನ ಫೋನ್ ಸ್ವಿಚ್ ಆಪ್ ಮಾಡಿದ್ದಾರೆ. ಅತ್ತೆ ಮಾವನಿಗೆ ವಯಸ್ಸಾಗಿದೆ. ಹೀಗಾಗಿ ಅವರು ಕಾಣಿಸಿಕೊಳ್ಳದ ಕಾರಣ ದೂರು ನೀಡಿದ್ದೆ. ಶಿವಾನಂದ ವಾಲಿ ಬಂಧನ ಆಗುತ್ತಿದ್ದಂತೆ ನನ್ಮ ಪತ್ನಿ ನನ್ನ ವಿರುದ್ಧ ಆರೋಪಗಳನ್ನ ಮಾಡಿದ್ದಾರೆ ಎಂದು ನಡೆದ ಘಟನೆಯ ಬಗ್ಗೆ ಕೆ.ಕಲ್ಯಾಣ್ ವಿವರವಾಗಿ ತಿಳಿಸಿದರು.

  • ಊಟ ಮುಗಿಸಿ ಮಲಗಲು ಹೋದವ ನೇಣಿಗೆ ಶರಣು

    ಊಟ ಮುಗಿಸಿ ಮಲಗಲು ಹೋದವ ನೇಣಿಗೆ ಶರಣು

    – ನನ್ನ ಸಾವಿಗೆ ಚಿಕ್ಕಪ್ಪ, ಚಿಕ್ಕಮ್ಮನೇ ಕಾರಣ

    ಕೋಲಾರ: ತನ್ನ ಚಿಕ್ಕಪ್ಪ ಮತ್ತು ಚಿಕ್ಕಮ್ಮನಿಂದ ನನಗೆ ಅನ್ಯಾಯವಾಗಿದೆ. ನನ್ನ ಸಾವಿಗೆ ಇವರೇ ಕಾರಣ ಎಂದು ಆಡಿಯೋ, ಡೆತ್‍ನೋಟ್ ಬರೆದಿಟ್ಟು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ತಾಲೂಕಿನ ಮದನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಮಂಜುನಾಥ್ (35) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ರಾತ್ರಿ ಊಟ ಮುಗಿಸಿಕೊಂಡು ಮಲಗಲೆಂದು ಹೋದವನು ನೇಣಿಗೆ ಶರಣಾಗಿದ್ದಾನೆ. ಅಲ್ಲದೆ ತನ್ನ ಸಾವಿಗೆ ಚಿಕ್ಕಪ್ಪನಾದ ರಮೇಶ್ ಹಾಗೂ ಚಿಕ್ಕಮ್ಮಳಾದ ಅಶ್ವಥಮ್ಮ ಕಾರಣ ಎಂದು ಡೆತ್‍ನೋಟ್ ಬರೆದಿಟ್ಟಿದ್ದಾನೆ. ಜೊತೆಗೆ ವಾಯ್ಸ್ ರೆಕಾರ್ಡ್ ಮಾಡಿ ವಾಟ್ಸಪ್ ಮೂಲಕ ತನ್ನ ಸ್ನೇಹಿತರಿಗೆ ಮೆಸೇಜ್ ಕಳುಹಿಸಿದ್ದಾನೆ. ನಂತರ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

    ಮಂಜುನಾಥ್ ಚಿಕ್ಕಂದಿನಲ್ಲಿಯೇ ತನ್ನ ತಂದೆ ತಾಯಿಯನ್ನ ಕಳೆದುಕೊಂಡು, ತನ್ನ ಚಿಕ್ಕಪ್ಪ ರಮೇಶ್ ಹಾಗೂ ಸಹೋದರಿಯರ ಆಶ್ರಯದಲ್ಲಿ ಬೆಳೆದಿದ್ದ. ಎಸ್‍ಎಸ್‍ಎಲ್‍ಸಿ ನಂತರ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡು ಸಹೋದರಿಯರಿಗೆ ನೆರವಾಗುವುದರೊಂದಿಗೆ ತನ್ನ ಚಿಕ್ಕಪ್ಪ ರಮೇಶ್ ಸಹಾಯದಿಂದ ಜಮೀನನ್ನ ಮಾರಿ ಅಕ್ಕಂದಿರ ಮದುವೆ ಸಹ ಮಾಡಿದ್ದನು. ಸ್ವಂತ ಹೋಟೆಲ್ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದ.

    ಬೆಂಗಳೂರಿನಲ್ಲಿ ಹೋಟೆಲ್ ನಡೆಸುತ್ತಿದ್ದ ಈತ ಕೊರೊನಾ ಲಾಕ್‍ಡೌನ್‍ನಿಂದಾಗಿ ಗ್ರಾಮಕ್ಕೆ ಬಂದಿದ್ದನು. ತಮಗಿರುವ ಜಮೀನಿನಲ್ಲಿ ಕೆಲಸ ಮಾಡಿಕೊಂಡಿದ್ದ. ಈ ವೇಳೆ ತನಗೆ ಆಸ್ತಿ ಎಷ್ಟಿದೆ ಎಂದು ಸರ್ವೇ ಮಾಡಿಸಲು ಮುಂದಾದಾಗ ತನ್ನ ಚಿಕ್ಕಪ್ಪನಿಂದ ತನಗೆ ಬರಬೇಕಿದ್ದ ಆಸ್ತಿಯಲ್ಲಿ ಮೋಸ ಆಗಿದೆ ಎಂದು ಗೊತ್ತಾಗಿದೆ. ಅಲ್ಲದೆ ಜಮೀನು ಹಂಚಿಕೆಯಲ್ಲಿ ತನ್ನ ಚಿಕ್ಕಪ್ಪ ರಮೇಶ್ ಹಾಗೂ ಚಿಕ್ಕಮ್ಮ ಅಶ್ವಥಮ್ಮ ಕಡಿಮೆ ನೀಡಿ ಮೋಸ ಮಾಡಿದ್ದಾರೆಂದು ತಿಳಿದುಕೊಂಡಿದ್ದಾನೆ. ಆಗಾಗ ಇದೇ ವಿಚಾರಕ್ಕೆ ಚಿಕ್ಕಪ್ಪನ ಜೊತೆ ಜಗಳವಾಡುವುದರೊಂದಿಗೆ ಸಾಕಷ್ಟು ಮನನೊಂದಿದ್ದ ಎನ್ನಲಾಗಿದೆ.

    ಮಂಜುನಾಥ್ ಈ ಕುರಿತು ನಮ್ಮ ಜೊತೆ ನೋವನ್ನ ಹಂಚಿಕೊಂಡಿದ್ದನು. ಕಳೆದ ಮೂವತ್ತು ವರ್ಷಗಳಿಂದ ಚಿಕ್ಕಪ್ಪನನ್ನೇ ನಂಬಿದ್ದ. ಇದೀಗ ತಾನು ನಂಬಿಕೆ ಇಟ್ಟಿದ್ದ ಚಿಕ್ಕಪ್ಪನಿಂದಲೇ ಮೋಸವಾಗಿದೆ ಎಂದು ಮನನೊಂದ ಮಂಜುನಾಥ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಂಜುನಾಥನ ಸಾವಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಸ್ನೇಹಿತರು ಒತ್ತಾಯಿಸಿದ್ದಾರೆ.

    ಈ ಘಟನೆ ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಜಮೀರ್ ಆಸ್ತಿಯನ್ನು ಸರ್ಕಾರಕ್ಕೆ ಕೊಡಿಸುತ್ತಿದ್ದೇನೆ: ಪ್ರಶಾಂತ್ ಸಂಬರಗಿ

    ಜಮೀರ್ ಆಸ್ತಿಯನ್ನು ಸರ್ಕಾರಕ್ಕೆ ಕೊಡಿಸುತ್ತಿದ್ದೇನೆ: ಪ್ರಶಾಂತ್ ಸಂಬರಗಿ

    – ಫೈಲ್ ಹಿಡಿದು ಸಿಸಿಬಿ ಕಚೇರಿಗೆ ಸಂಬರಗಿ

    ಬೆಂಗಳೂರು: ಶಾಸಕ ಜಮೀರ್ ಅಹಮ್ಮದ್ ಅವರ ಆಸ್ತಿಯನ್ನು ಸರ್ಕಾರಕ್ಕೆ ಕೊಡಿಸುತ್ತೇನೆ ಎಂದು ಉದ್ಯಮಿ ಮತ್ತು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿಯವರು ಹೇಳಿದ್ದಾರೆ.

    ಸಿಸಿಬಿ ಅಧಿಕಾರಿಗಳು ನೋಟಿಸ್ ನೀಡಿದ ಹಿನ್ನೆಲೆ ಪ್ರಶಾಂತ್ ಸಂಬರಿಗಿ ಇಂದು ವಿಚಾರಣೆಗೆ ಹಾಜಾರಾಗಿದ್ದಾರೆ. ಇದಕ್ಕೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸತ್ಯಕ್ಕೆ ಆಯಸ್ಸು ಜಾಸ್ತಿ ಇದೆ. ಇಂದು ಸತ್ಯದ ದೀಪ ಬೆಳಗುತ್ತಿದ್ದೇನೆ ಎಂದು ಹೇಳಿದ್ದಾರೆ.

    ಸರ್ಕಾರಕ್ಕೆ ತೆರಿಗೆ ಕಟ್ಟುವ ನಾನು ಇವತ್ತು ಸರ್ಕಾರಕ್ಕೆ ಇನ್ನೊಂದು ಆದಾಯವನ್ನು ತಂದು ಕೊಡುತ್ತೇನೆ. ಜಮೀರ್ ಅವರ ಆಸ್ತಿಯನ್ನು ಸರ್ಕಾರಕ್ಕೆ ಕೊಡಿಸುತ್ತಿದ್ದೇನೆ. ಜಮೀರ್ ಅಹಮ್ಮದ್ ಖಂಡಿತ ಅವರ ಆಸ್ತಿಯನ್ನು ಸರ್ಕಾರಕ್ಕೆ ನೀಡಬೇಕಾಗುತ್ತೆ. ಅದಕ್ಕೆ ಸಂಬಂಧಿಸಿದ ದಾಖಲಾತಿಗಳು ನನ್ನ ಬಳಿ ಇದೆ ಎಂದು ಫೈಲ್ ತೋರಿಸಿದ ಪ್ರಶಾಂತ್ ಸಂಬರಗಿ, ಸಿಸಿಬಿ ಕಚೇರಿಗೆ ತೆರಳಿದ್ದಾರೆ. ಇದನ್ನು ಓದಿ: ಹಿಂದೆ ಹೇಳಿದ್ದ 3 ಸ್ಫೋಟಕ ಒಗಟುಗಳಲ್ಲಿ ಮೂರು ಸತ್ಯವಾಗಿದೆ – ಪ್ರಶಾಂತ್‌ ಸಂಬರಗಿ

    ಈ ಹಿಂದೆ ಮಾತನಾಡಿದ್ದ ಸಂಬರಗಿ, ಜಮೀರ್ ಅವರು ಕಳೆದ ವರ್ಷ ಜೂನ್ ತಿಂಗಳಲ್ಲಿ ಶ್ರೀಲಂಕಾದ ರಾಜಧಾನಿ ಕೊಲಂಬೋಗೆ ನಟಿ ಸಂಜನಾ ಜೊತೆ ಹೋಗಿದ್ದಾರೆ ಎಂದು ಆರೋಪ ಮಾಡಿದ್ದರು. ಇದಕ್ಕೆ ಉತ್ತರಿಸಿದ್ದ ಜಮೀರ್ ಅಹಮ್ಮದ್, ನನ್ನ ಮೇಲೆ ಕೇಳಿ ಬಂದಿರುವ ಆರೋಪ ಸಾಬೀತಾದರೆ, ನಾನು ಸಂಜನಾ ಜೊತೆ ಕೊಲಂಬೋಗೆ ಹೋಗಿದ್ದರೆ ನಾನು ನನ್ನ ಆಸ್ತಿಯನ್ನು ಸರ್ಕಾರಕ್ಕೆ ಬರೆದು ಕೊಡುತ್ತೇನೆ ಎಂದು ಹೇಳಿದ್ದರು.

    ಇದಕ್ಕೂ ಮುನ್ನಾ ಮಾತನಾಡಿದ್ದ ಅವರು, ನಾನು ದಾಖಲೆ ಇಟ್ಟುಕೊಂಡೇ ಮಾತನಾಡುತ್ತೇನೆ. ನಾನು ಸಂಜನಾ ಜೊತೆಯಲ್ಲೇ ಜಮೀರ್ ಶ್ರೀಲಂಕಾಗೆ ಹೋಗಿದ್ದಾರೆ ಎಂದು ಹೇಳಿಲ್ಲ. ಆದರೆ 2019ರ ಜೂನ್ 8, 9, 10ರಂದು ಜಮೀರ್ ಅಹ್ಮದ್ ಎಲ್ಲಿದ್ದರು? ಅವರು ಶ್ರೀಲಂಕಾದಲ್ಲಿ ಇದ್ದರೋ ಇಲ್ಲವೋ ಎನ್ನುವುದನ್ನು ಹೇಳಲಿ. ನನಗೆ ಜಮೀರ್ ಉತ್ತರ ನೀಡುವ ಅಗತ್ಯವಿಲ್ಲ. ಜನತೆ ಪಾಸ್‍ಪೋರ್ಟ್ ತೋರಿಸಿದರೆ ಸಾಕು. ನನ್ನ ಒಂದು ಸಣ್ಣ ಪ್ರಶ್ನೆಗೆ ಉತ್ತರ ನೀಡಲಿ ಎಂದು ಸವಾಲು ಎಸೆದಿದ್ದರು.

    ಜೊತೆಗೆ ನನ್ನನ್ನು ಕಾಜಿಪಿಂಜಿ ಎಂದು ಕರೆಯುತ್ತಾರೆ. ಆದರೆ ನಾನು ಕಾಜಿಪಿಂಜಿ ಅಲ್ಲ. ಕಾನೂನು ಗೊತ್ತಿರುವ ನಾನು ಒಬ್ಬ ಜನ ಪ್ರತಿನಿಧಿಯ ವಿರುದ್ಧ ದಾಖಲೆ ಇಲ್ಲದೇ ಸುಳ್ಳು ಆರೋಪ ಮಾಡುವುದಿಲ್ಲ. ನನ್ನ ವಿರುದ್ಧ ಈಗ ಸುಳ್ಳು ಕೇಸ್ ಹಾಕಿದ್ದಾರೆ. ಈ ರೀತಿ ಕೇಸ್ ಬೀಳುತ್ತದೆ ಎಂಬುದು ನನಗೆ ಮೊದಲೇ ಗೊತ್ತಿತ್ತು. ಇದರ ವಿರುದ್ಧ ಹೋರಾಡುತ್ತೇನೆ ಎಂದು ಹೇಳಿದ್ದರು.

  • ನಿರ್ಮಾಪಕ ಆನಂದ್ ಅಪ್ಪುಗೋಳಗೆ ಇಡಿ ಶಾಕ್- 31.35 ಕೋಟಿ ಆಸ್ತಿ ವಶಕ್ಕೆ

    ನಿರ್ಮಾಪಕ ಆನಂದ್ ಅಪ್ಪುಗೋಳಗೆ ಇಡಿ ಶಾಕ್- 31.35 ಕೋಟಿ ಆಸ್ತಿ ವಶಕ್ಕೆ

    ನವದೆಹಲಿ: ಬೆಳಗಾವಿಯ ಸಂಗೊಳ್ಳಿ ರಾಯಣ್ಣ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಹಾಗೂ ನಿರ್ಮಾಪಕ ಆನಂದ್ ಅಪ್ಪುಗೋಳಗೆ ಇಡಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಬ್ಯಾಂಕ್ ಖಾತೆಯಲ್ಲಿದ್ದ ಹಣ ಮತ್ತು ಸ್ಥಿರಾಸ್ತಿ ಸೇರಿ ಒಟ್ಟು 31.35 ಕೋಟಿ ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಬೆಳಗಾವಿಯಲ್ಲಿ ಆನಂದ್ ಅಪ್ಪುಗೋಳ ಒಡೆತನದಲ್ಲಿರುವ ಹನುಮಾನ್ ನಗರದ ಬಂಗಲೆ, ಬಾಕ್ಸೈಟ್ ರಸ್ತೆಯಲ್ಲಿರುವ ಖಾಲಿ ನಿವೇಶನ, ಬಿ.ಕೆ ಬಾಳೆಕುಂದ್ರಿಯಲ್ಲಿನ ಮನೆ ಹಾಗೂ ನೆಹರು ನಗರದಲ್ಲಿರುವ ಕಚೇರಿ, ಬ್ಯಾಂಕ್ ಖಾತೆಯಲ್ಲಿದ್ದ ಹಣ ಸೇರಿ ಒಟ್ಟು 31.35 ಕೋಟಿ ಮೌಲ್ಯದ ಆಸ್ತಿಯನ್ನು ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ವಶಕ್ಕೆ ಪಡೆಯಲಾಗಿದೆ.

    ಬೆಳಗಾವಿಯ ಸಂಗೊಳ್ಳಿ ರಾಯಣ್ಣ ಕೊ ಆಪರೇಟಿವ್ ಸೊಸೈಟಿಯಲ್ಲಿ ಠೇವಣಿಯಿಟ್ಟಿದ್ದ ಸಾವಿರಾರು ಜನರ 250 ಕೋಟಿ ರೂ.ಗೂ ಅಧಿಕ ಮೊತ್ತವನ್ನು ದುರ್ಬಳಕೆ ಮಾಡಿದ ಆರೋಪ ಆನಂದ್ ಅಪ್ಪುಗೋಳ ಮೇಲಿದೆ. ಈತನ ವಿರುದ್ಧ ಹಲವರು ದೂರು ದಾಖಲಿಸಿದ್ದಾರೆ. ಹಲವು ಪ್ರಕರಣಗಳಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ. ಇದೀಗ ಮತ್ತೆ ಇಡಿ ಅಧಿಕಾರಿಗಳು ಆಸ್ತಿಯನ್ನು ವಶಕ್ಕೆ ಪಡೆದಿದ್ದಾರೆ.

    ಠೇವಣಿದಾರರ ಹಣದಲ್ಲಿ ಹಲವು ಆಸ್ತಿ, ಐಷಾರಾಮಿ ಬಂಗಲೆಗಳನ್ನು ಆನಂದ್ ಅಪ್ಪುಗೋಳ ಖರೀದಿಸಿದ್ದಾನೆ. ಇವೆಲ್ಲವನ್ನೂ ಹರಾಜು ಮಾಡಲು ಈ ಹಿಂದೆ ಬೆಳಗಾವಿ ಜಿಲ್ಲಾಡಳಿತ ಮುಂದಾಗಿತ್ತು. ಇದೀಗ ಜಾರಿ ನಿರ್ದೇಶನಾಲಯ ಇವನ್ನು ವಶಕ್ಕೆ ಪಡೆದಿದೆ.

  • ನಡು ರಸ್ತೆಯಲ್ಲಿ ತಾಯಿ, ಮಗಳ ಕೊಚ್ಚಿ ಕೊಲೆಗೆ ಯತ್ನ- ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

    ನಡು ರಸ್ತೆಯಲ್ಲಿ ತಾಯಿ, ಮಗಳ ಕೊಚ್ಚಿ ಕೊಲೆಗೆ ಯತ್ನ- ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

    ಬೆಂಗಳೂರು: ನಡು ರಸ್ತೆಯಲ್ಲಿ ತಾಯಿ, ಮಗಳನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲು ಯತ್ನಿಸಿರುವ ಭಯಾನಕ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಕಾಮಾಕ್ಯ ಬಳಿಯ ಇಂದಿರಾ ಕ್ಯಾಂಟೀನ್ ಬಳಿ ಘಟನೆ ನಡೆದಿದ್ದು, ದೀಪಾ ಶ್ರೀಕುಮಾರ್, ಮಗಳು ಹಿಷಿತಾ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಆಸ್ತಿ ವಿವಾದದ ಹಿನ್ನೆಲೆ ತಾಯಿ, ಮಗಳ ಕೊಲೆಗೆ ಯತ್ನಿಸಲಾಗಿದೆ. ನಡುರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲು ಯತ್ನಿಸಿದ್ದಾಋಎ. ಕೊಲೆ ಯತ್ನದ ಭಯಂಕರ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸೆ.4ರಂದು ಕೊಲೆ ಯತ್ನ ನಡೆದಿದೆ.

    ತಾಯಿ, ಮಗಳು ಬೈಕ್ ನಲ್ಲಿ ಹೋಗುತ್ತಿದ್ದಾಗ ಮತೊಂದು ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಮಚ್ಚಿನಿಂದ ಮನಸೋ ಇಚ್ಛೆ ಕೊಚ್ಚಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಸಾರ್ವಜನಿಕರು ರಕ್ಷಣೆಗೆ ಬರುತ್ತಿದ್ದಂತೆ ಬೈಕ್ ಹತ್ತಿ ಪರಾರಿಯಾಗಿದ್ದಾರೆ.

    ದೀಪಾ ಶ್ರೀಕುಮಾರ್, ಆಸ್ಟಿನ್ ಸ್ಕೂಲ್ ಸಂಸ್ಥಾಪಕ ಶ್ರೀಕುಮಾರ್ ಅವರ ಎರಡನೇ ಪತ್ನಿ. ಪತಿ, ಪತ್ನಿಯ ನಡುವಿನ ಆಸ್ತಿ ವ್ಯಾಜ್ಯ ಕೋರ್ಟ್ ನಲ್ಲಿದೆ. ತಾಯಿ, ಮಗಳು ಬದುಕಿದ್ರೆ ತಾನೆ ವ್ಯಾಜ್ಯ, ಅವರನ್ನೇ ಮುಗಿಸಿದರೆ ಪೂರ್ತಿ ಆಸ್ತಿ ನಮ್ಮದಾಗಲಿದೆ. ಈ ಉದ್ದೇಶದಿಂದಲೇ ದೀಪಾ, ಮಗಳು ಹಿಷಿತಾ ಮುಗಿಸಲು ಯತ್ನಿಸಲಾಗಿದೆ. ಶ್ರಿಕುಮಾರ್, ಮಗ, ಮಗಳು ಹಾಗೂ ಅಳಿಯ ಸುಪಾರಿ ಕೊಟ್ಟಿದ್ದು, ಈ ಹಿನ್ನೆಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ ಎಂದು ತಾಯಿ ಮಗಳು ಆರೋಪಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಕುಮಾರ್, ಮಗ ಜಯಂತ್, ಮಗಳು ಮೊನಿಷಾ, ಅಳಿಯ ನವೀನ್ ವಿರುದ್ಧ ಸಿ.ಕೆ.ಅಚ್ಚುಕಟ್ಟು ಠಾಣೆ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

  • ಅಕ್ರಮ ಆಸ್ತಿ ಗಳಿಕೆ- ಕರಾವಳಿ ಕಾವಲು ಪಡೆಯ ವೃತ್ತ ನಿರೀಕ್ಷಕನಿಗೆ ಜೈಲು ಶಿಕ್ಷೆ

    ಅಕ್ರಮ ಆಸ್ತಿ ಗಳಿಕೆ- ಕರಾವಳಿ ಕಾವಲು ಪಡೆಯ ವೃತ್ತ ನಿರೀಕ್ಷಕನಿಗೆ ಜೈಲು ಶಿಕ್ಷೆ

    ಮಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣಗಕ್ಕೆ ಸಂಬಂಧಿಸಿದಂತೆ ಪೊಲೀಸ್ ವೃತ್ತ ನಿರೀಕ್ಷಕ ಗಂಗಿ ರೆಡ್ಡಿಗೆ 4 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು ನೀಡಿದೆ.

    ಆಗಸ್ಟ್ 27, 2009ರಂದು ಅಕ್ರಮ ಆಸ್ತಿ ಗಳಿಕೆ ಹಿನ್ನೆಲೆ ಗಂಗಿ ರೆಡ್ಡಿ ಅವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಇಂದು ಆದೇಶ ಹೊರಡಿಸಿದ್ದು, 4 ವರ್ಷ ಜೈಲು ಶಿಕ್ಷೆ ವಿಧಿಸಿದೆ. ನ್ಯಾಯಾಧೀಶರಾದ ಬಿ.ಬಿ.ಜಕಾತಿ ಅವರು ಅಪರಾಧಿಗೆ 4 ವರ್ಷ ಸಾದಾ ಸಜೆ ಮತ್ತು ಐದು ಲಕ್ಷ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ ಒಂದು ವರ್ಷ ಸಾದಾ ಸಜೆ ವಿಧಿಸಿದೆ. ಅಪರಾಧಿ ಗಂಗಿ ರೆಡ್ಡಿಯನ್ನು ನ್ಯಾಯಾಂಗ ಬಂಧನಕ್ಕೆ ವಿಧಿಸಲಾಗಿದೆ.

    ನ್ಯಾಯಾಧೀಶರು 111 ಪುಟಗಳ ಸುದೀರ್ಘ ಆದೇಶ ಹೊರಡಿಸಿದ್ದು, ಭ್ರಷ್ಟಾಚಾರ ನಿಗ್ರಹ ಕಾಯ್ದೆ ಕಲಂ 13(1)(ಇ) ಅಡಿ ಆರೋಪಿ ಗಂಗಿ ರೆಡ್ಡಿ ಅಪರಾಧ ಎಸಗಿದ್ದಾರೆಂದು ಸಾಬೀತಾಗಿದೆ. ಈ ಹಿನ್ನೆಲೆ ಶಿಕ್ಷೆ ಪ್ರಕಟಿಸಲಾಗಿದೆ ಎಂದು ತಿಳಿಸಿದ್ದಾರೆ.

    2009ರ ಆಗಸ್ಟ್ 27 ರಂದು ಬೆಳ್ತಂಗಡಿಯಲ್ಲಿ ಪೋಲಿಸ್ ವೃತ್ತ ನಿರೀಕ್ಷಕರಾಗಿದ್ದ ಗಂಗೀರೆಡ್ಡಿ ಅಕ್ರಮ ಆಸ್ತಿಗಳಿಕೆಯ ಹಿನ್ನಲೆಯಲ್ಲಿ ಲೋಕಾಯುಕ್ತ ಪೊಲೀಸರಿಂದ ಬಂಧನವಾಗಿದ್ದು, ಅದೇ ದಿನವಾದ ಇಂದು ನ್ಯಾಯಾಲಯ ತೀರ್ಪು ನೀಡಿದ್ದು, ಆರೋಪಿಗೆ 4 ವರ್ಷದ ಜೈಲು ಶಿಕ್ಷೆ ವಿಧಿಸಿದೆ.

    ಆರೋಪಿ ಗಂಗೀರೆಡ್ಡಿ ತಮ್ಮ ಸೇವಾ ಅವಧಿಯಲ್ಲಿ ಆದಾಯ ಮೀರಿ ಹೆಚ್ಚಿನ ಆಸ್ತಿ ಹೊಂದಿದ್ದಾರೆಂದು ಆಗಿನ ಲೋಕಾಯುಕ್ತ ಡಿ.ವೈ.ಎಸ್.ಪಿ.ಸದಾನಂದ ವರ್ಣೇಕರ್ ಮತ್ತು ಅವರ ತಂಡ ಪ್ರಕರಣ ದಾಖಲಿಸಿ, ದಾಳಿ ನಡೆಸಿ ಹಲವು ದಾಖಲೆಗಳನ್ನು ವಶ ಪಡಿಸಿಕೊಂಡಿತ್ತು. ಸುಮಾರು 19 ಲಕ್ಷ ರೂ.ಗಳಷ್ಟು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಪತ್ತೆಯಾದ ಬಗ್ಗೆ ವರದಿಯಾಗಿತ್ತು. ತನಿಖೆಯನ್ನು ಪೂರ್ಣಗೊಳಿಸಿ ಡಿವೈಎಸ್‍ಪಿ ಆಗಿದ್ದ ಎಮ್.ವಿಠ್ಠಲ್ ದಾಸ್ ಪೈ ಆರೋಪಿ ಗಂಗಿ ರೆಡ್ಡಿ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

    ಅಭಿಯೋಜನೆಯ ಪರವಾಗಿ 22 ಸಾಕ್ಷಿದಾರರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ವಿಚಾರಣೆ ನಡೆಸಿದ ಮಂಗಳೂರು ಲೋಕಾಯುಕ್ತ ವಿಶೇಷ ನ್ಯಾಯಾಲಯವು ವಿಶೇಷ ಸರ್ಕಾರಿ ಅಭಿಯೋಜಕ ಕೆ. ಎಸ್. ಎನ್. ರಾಜೇಶ್ ರವರ ವಾದವನ್ನು ಪುರಸ್ಕರಿಸಿ, ಆರೋಪಿಯ ಮೇಲಿನ ಆರೋಪ ಸಾಭೀತಾಗಿದೆ ಎಂದು ತೀರ್ಮಾನಕ್ಕೆ ಬಂದ ಹಿನ್ನಲೆಯಲ್ಲಿ ಆರೋಪಿಗೆ ಶಿಕ್ಷೆ ಪ್ರಕಟಿಸಲಾಗಿದೆ. ಮೂರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ.ಬಿ.ಜಕಾತಿ ಅವರು ಶಿಕ್ಷೆ ಪ್ರಕಟಿಸಿದ್ದಾರೆ.

  • ಪತ್ರಕರ್ತನನ್ನ ಬೆನ್ನಟ್ಟಿ ಗುಂಡು ಹಾರಿಸಿ ಕೊಂದ ದುಷ್ಕರ್ಮಿಗಳು

    ಪತ್ರಕರ್ತನನ್ನ ಬೆನ್ನಟ್ಟಿ ಗುಂಡು ಹಾರಿಸಿ ಕೊಂದ ದುಷ್ಕರ್ಮಿಗಳು

    –  ಹಳ್ಳಿಗೆ ಹೋದಾಗಲೇ ಮರ್ಡರ್
    – ಮೂವರು ಆರೋಪಿಗಳು ಅರೆಸ್ಟ್

    ಲಕ್ನೋ: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಮೂವರು ದುಷ್ಕರ್ಮಿಗಳು ಪತ್ರಕರ್ತರೊಬ್ಬರನ್ನು ಬೆನ್ನಟ್ಟಿ ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯಲ್ಲಿ ನಡೆದಿದೆ.

    ರತನ್ ಸಿಂಗ್ (42) ಮೃತ ಪತ್ರಕರ್ತ. ಖಾಸಗಿ ಸುದ್ದಿ ವಾಹಿನಿಯಲ್ಲಿ ಸ್ಥಳೀಯ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದರು. ಸೋಮವಾರ ರಾತ್ರಿ ಸುಮಾರು 9 ಗಂಟೆಗೆ ಲಕ್ನೋದಿಂದ 260 ಕಿ.ಮೀ ದೂರದಲ್ಲಿರುವ ಪೂರ್ವ ಉತ್ತರ ಪ್ರದೇಶದ ಬಲಿಯಾದಲ್ಲಿರುವ ಅವರ ಮನೆಯ ಬಳಿ ಗುಂಡು ಹಾರಿಸಿದ್ದಾರೆ. ಮೂವರು ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸಿಂಗ್ ಜಿಲ್ಲೆಯ ನಗರ ಭಾಗದಲ್ಲಿ ವಾಸಿಸುತ್ತಿದ್ದರು. ಅವರ ಕುಟುಂಬವು ಹಳ್ಳಿಯಲ್ಲಿ ವಾಸಿಸುತ್ತಿದ್ದು, ಕಳೆದ ಕೆಲವು ವರ್ಷಗಳಿಂದ ಆರೋಪಿಗಳೊಂದಿಗೆ ಆಸ್ತಿ ವಿವಾದ ನಡೆಯುತ್ತಿತ್ತು. ಸೋಮವಾರ ರಾತ್ರಿ ಸಿಂಗ್ ತನ್ನ ಹಳ್ಳಿಗೆ ಹೋಗಿದ್ದಾಗ ಅವರನ್ನ ಬೆನ್ನಟ್ಟಿ ಮೂವರು ಆರೋಪಿಗಳು ಗುಂಡಿಕ್ಕಿ ಕೊಂದಿದ್ದಾರೆ. ಗುಂಡಿನ ದಾಳಿ ಮಾಡುವಾಗ ಸಿಂಗ್ ದಾಳಿಕೋರರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೂ ಏನು ಪ್ರಯೋಜವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    “ಆರೋಪಿಗಳು ಜಮೀನನ ಸುತ್ತಲೂ ಗೋಡೆ ನಿರ್ಮಿಸಿದ್ದರು. ಇದನ್ನು ತಿಳಿದ ಪತ್ರಕರ್ತ ಗೋಡೆಯನ್ನು ತೆರವು ಗೊಳಿಸಿದ್ದನು. ಈ ವೇಳೆ ಆರೋಪಿಗಳು ಮತ್ತು ಸಿಂಗ್ ನಡುವೆ ಮಾತಿನ ಚಕಮಕಿ ನಡೆದಿದೆ. ಇದೇ ದ್ವೇಷದ ಹಿನ್ನೆಲೆಯಲ್ಲಿ ಗುಂಡು ಹಾರಿಸಿ ಕೊಲೆ ಮಾಡಲಾಗಿದೆ. ಸ್ಥಳದಲ್ಲೇ ಪತ್ರಕರ್ತ ಮೃತಪಟ್ಟಿದ್ದು, ಪೊಲೀಸರು ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಆಸ್ತಿ ವಿವಾದ ಮತ್ತು ಹಳೆಯ ದ್ವೇಷವೇ ದಾಳಿಯ ಹಿಂದಿನ ಕಾರಣ” ಎಂದು ಇನ್ಸ್‌ಪೆಕ್ಟರ್ ಸುಭಾಷ್ ದುಬೆ ತಿಳಿಸಿದರು.

    ಮಾಹಿತಿ ತಿಳಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪತ್ರಕರ್ತನ ಕುಟುಂಬಕ್ಕೆ 10 ಲಕ್ಷ ಪರಿಹಾರವನ್ನು ಘೋಷಿಸಿದ್ದಾರೆ. ಅಲ್ಲದೇ ಆರೋಪಿಗಳ ವಿರುದ್ಧ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.

  • ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲರೂ ಒಟ್ಟಾಗಿದ್ದೀವಿ-3 ಕೋಟಿ ನಷ್ಟ ಆಗಿದೆ: ಶ್ರೀನಿವಾಸ ಮೂರ್ತಿ

    ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲರೂ ಒಟ್ಟಾಗಿದ್ದೀವಿ-3 ಕೋಟಿ ನಷ್ಟ ಆಗಿದೆ: ಶ್ರೀನಿವಾಸ ಮೂರ್ತಿ

    – ಯಾರ ಮೇಲೂ ದ್ವೇಷಕ್ಕೆ ಹೋಗಿಲ್ಲ
    – ಎಲ್ಲರೂ ಅಣ್ಣ-ತಮ್ಮಂದಿರ ರೀತಿ ಇದ್ದೇವೆ

    ಬೆಂಗಳೂರು: ನಾವು ಯಾರ ಮೇಲೂ ದ್ವೇಷಕ್ಕೆ ಹೋಗಿಲ್ಲ. ಎಲ್ಲರೂ ಅಣ್ಣ-ತಮ್ಮಂದಿರ ರೀತಿ ಇದ್ದೇವೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲರೂ ಒಟ್ಟಾಗಿ ಇದ್ದೇವೆ ಎಂದು ಅಖಂಡ ಶ್ರೀನಿವಾಸ ಮೂರ್ತಿ ಹೇಳಿದರು. ಇದನ್ನೂ ಓದಿ: ಸರ್ಕಾರಿ ಸಂಬಳ ತಗೊಂಡು ಬೆಂಕಿ ಇಟ್ಟ ಕಿರಾತಕ- ಗಲಭೆಯ ಮಾಸ್ಟರ್ ಮೈಂಡ್ ಫೈರೋಜ್ ಖಾನ್

    ಮಾಧ್ಯಮಗಳ ಜೊತೆ ಮಾತನಾಡಿದ ಅಖಂಡ ಶ್ರೀನಿವಾಸ ಮೂರ್ತಿ, ಯಾರು ಈ ಕೃತ್ಯಗಳನ್ನು ಮಾಡಿದ್ದಾರೆ ಎಂಬುದನ್ನು ಪೊಲೀಸ್ ಇಲಾಖೆ ತನಿಖೆ ಮಾಡಿ, ನ್ಯಾಯ ಒದಗಿಸಿಕೊಡಬೇಕು ಎಂದು ದೂರನ್ನು ಕೊಟ್ಟಿದ್ದೇವೆ. ಈ ಗಲಭೆಯಿಂದ ಏನೇನು ನಷ್ಟ ಆಗಿದೆ ಎಂದು ಒಂದು ಪಟ್ಟಿ ಮಾಡಿ ಮಾಡಿಕೊಡುತ್ತೇನೆ. ನಾನು ಯಾರ ಹೆಸರು ಹೇಳಿಲ್ಲ, ತನಿಖೆಯ ವೇಳೆ ಪೊಲೀಸರು ಘಟನೆಯ ಬಗ್ಗೆ ಬಹಿರಂಗ ಪಡಿಸುತ್ತಾರೆ ಎಂದರು.

    ನಾನು ಎಲ್ಲರ ಜೊತೆಯೂ ಸಮಾನವಾಗಿ ಇದ್ದೇನೆ. ಅವರು ನನ್ನ ಮೇಲೆ ದ್ವೇಷ ಸಾಧಿಸುವ ಅವಶ್ಯಕತೆ ಇಲ್ಲ. ಆದರೂ ನನ್ನ ಮನೆಯನ್ನು ಹಾಳು ಮಾಡಿದ್ದಾರೆ. ಒಂದು ವೇಳೆ ಮನೆಯಲ್ಲಿ ಮಕ್ಕಳಿದಿದ್ದರೆ ಯಾರು ಕಾಪಾಡುತ್ತಿದ್ದರು. ಅದಕ್ಕೆ ನಾನು ಪೊಲೀಸರ ಭದ್ರತೆಗೆ ಕೇಳಿಕೊಂಡಿದ್ದೇನೆ. ಜೊತೆಗೆ ರಾಜ್ಯ ಸರ್ಕಾರದ ಬಳಿಯೂ ರಕ್ಷಣೆಗಾಗಿ ಮನವಿ ಮಾಡಿಕೊಂಡಿದ್ದೇನೆ ಎಂದು ತಿಳಿಸಿದರು.

    ಮನೆ ಸಂಪೂರ್ಣವಾಗಿ ನಾಶವಾಗಿದೆ. ನಮ್ಮ ಮನೆ ಹಾಳು ಮಾಡಿದರಲ್ಲ ಎಂಬ ದುಃಖ ಇದೆ. ಯಾಕೆಂದರೆ ನಾನು ಹುಟ್ಟಿ ಬೆಳೆದಂತಹ ಮನೆ ಅದು. ನಾನು ಆ ಪಕ್ಷ, ಈ ಪಕ್ಷ ಎಂದು ಭೇದ ಭಾವ ಮಾಡಿಲ್ಲ. ಎಲ್ಲರ ಜೊತೆಗೆ ಒಟ್ಟಾಗಿ ಕೆಲಸ ಮಾಡಿದ್ದೇನೆ. ಪ್ರತಿದಿನ ನನ್ನ ಕ್ಷೇತ್ರ ಬಿಟ್ಟು ಹೊರಗೆ ಹೋಗಿಲ್ಲ. ಅಲ್ಲದೇ ನಾವು ಯಾರ ಮೇಲೂ ದ್ವೇಷಕ್ಕೆ ಹೋಗಿಲ್ಲ. ಎಲ್ಲರೂ ಅಣ್ಣ-ತಮ್ಮಂದಿರ ರೀತಿ ಇದ್ದೇವೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲರೂ ಒಟ್ಟಾಗಿ ಇದ್ದೀವಿ. ನಮ್ಮ ಕ್ಷೇತ್ರದಲ್ಲಿ 24 ವರ್ಷದಿಂದ ಯಾವ ಘಟನೆಗಳು ಆಗಿಲ್ಲ. ಮುಂದಕ್ಕೂ ಆಗಬಾರದು ಎಂದು ಶ್ರೀವಿನಾಸ ಮೂರ್ತಿ ಹೇಳಿದರು.

    ನವೀನ್ ನನ್ನ ಅಕ್ಕನ ಮಗ. ಆದರೆ ನನಗೂ ಅವನಿಗೂ ಸಂಬಂಧ ಇಲ್ಲ. ಮನೆಯಲ್ಲಿರೋ ಆಸ್ತಿ-ಪಾಸ್ತಿ ಬಗ್ಗೆ ಪಟ್ಟಿ ಮಾಡಿ ನಂತರ ದೂರು ಕೊಡಲಾಗುತ್ತೆ. ಯಾರಿಗೆಲ್ಲಾ ಸಮಸ್ಯೆ ಆಗಿದೆ ಅವರೆಲ್ಲರಿಗೂ ಪ್ರತ್ಯೇಕ ದೂರು ಕೊಡಲು ತಿಳಿಸಲಾಗಿದೆ. ನಾನು ಪ್ರತ್ಯೇಕವಾಗಿ ದೂರು ಕೊಡುತ್ತೇನೆ. ಮನೆ, ಮನೆಯಲ್ಲಿದ್ದ ವಸ್ತು, ದಾಖಲಾತಿ ಎಲ್ಲವೂ ಹಾಳಾಗಿದೆ. ಒಟ್ಟು ಸುಮಾರು ಮೂರು ಕೋಟಿಯಷ್ಟು ನಷ್ಟವಾಗಿದೆ. ಪೊಲೀಸರು ಈ ಕುರಿತು ತನಿಖೆ ಮಾಡಿ ನ್ಯಾಯ ಒದಗಿಸಿಕೊಡಬೇಕು ಎಂದು ಮನವಿ ಮಾಡಿಕೊಂಡರು.

  • ಸರ್ಕಾರ ಹೇಳಿದ್ರೂ ಸಂಪತ್ತಿನ ಆಸೆಯಿಂದ ಮನೆ ತೊರೆಯಲಿಲ್ವಾ ನಾರಾಯಣಾಚಾರ್?

    ಸರ್ಕಾರ ಹೇಳಿದ್ರೂ ಸಂಪತ್ತಿನ ಆಸೆಯಿಂದ ಮನೆ ತೊರೆಯಲಿಲ್ವಾ ನಾರಾಯಣಾಚಾರ್?

    – ಬೆಂಗಳೂರಲ್ಲಿ 2 ಸೈಟ್, ಮಡಿಕೇರಿಯಲ್ಲಿ 100 ಎಕರೆ ಕಾಫಿ ತೋಟ
    – ಮನೆಯಲ್ಲಿ 30 ಕ್ವಿಂಟಾಲ್ ಕಾಳು ಮೆಣಸು, 10 ಕ್ವಿಂಟಾಲ್ ಏಲಕ್ಕಿ
    – ಮನೆ ತೊರೆಯದ ಬಗ್ಗೆ ಸ್ಥಳೀಯ ನಿವಾಸಿಗಳ ಮಾತು

    ಮಡಿಕೇರಿ: ಬ್ರಹ್ಮಗಿರಿ ಬೆಟ್ಟ ಕುಸಿದು ಪ್ರಾಣ ಕಳೆದುಕೊಂಡಿರುವ ನಾರಾಯಣಾಚಾರ್ ಅಪಾರ ಸಂಪತ್ತು ಹೊಂದಿದ್ದಾರೆ. ಹೀಗಾಗಿ ಸಂಪತ್ತನ್ನು ಉಳಿಸಲು ಹೋಗಿ ಮನೆ ಖಾಲಿ ಮಾಡದೇ ಅರ್ಚಕರು ಜೀವ ಕಳೆದುಕೊಂಡಿರಬಹುದು ಎಂಬ ಮಾತು ಕೇಳಿ ಬರುತ್ತಿದೆ. ಇದನ್ನೂ ಓದಿ: ಮನೆಯಿಂದ ಅರ್ಧ ಕಿ.ಮೀ ದೂರದಲ್ಲಿ ನಾರಾಯಣಾಚಾರ್ ಮೃತದೇಹ ಪತ್ತೆ

    ಮನೆ ಖಾಲಿ ಮಾಡುವಂತೆ ಮಡಿಕೇರಿ ತಹಶೀಲ್ದಾರ್ ಎಚ್ಚರಿಕೆ ಕೊಟ್ಟಿದ್ದರು. ಆದರೆ ಅಪಾರ ಆಸ್ತಿ ಹೊಂದಿದ್ದ ನಾರಾಯಣಚಾರ್ ಅವರು ಮನೆ ತೊರೆದರೆ ಸಂಗ್ರಹಿಸಿದ ಸಂಪತ್ತು ಮತ್ತು ಕೃಷಿ ಉತ್ಪನ್ನಗಳು ಏನಾಗಬಹುದು ಎಂಬ ಚಿಂತೆ ಕಾಡಿರಬಹುದು. ಈ ಕಾರಣಕ್ಕೆ ಅವರು ಮನೆಯನ್ನು ತೊರೆಯಲು ಹಿಂದೇಟು ಹಾಕಿರಬಹುದು ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.

    ಸಂಪತ್ತು ಎಷ್ಟಿತ್ತು?
    ನಾರಾಯಣಾಚಾರ್ ಮನೆಯಲ್ಲಿ 30 ಕ್ವಿಂಟಾಲ್ ಕಾಳು ಮೆಣಸು, 10 ಕ್ವಿಂಟಾಲ್ ಏಲಕ್ಕಿ ಇತ್ತು. ಇವೆರಡೂ ಪದಾರ್ಥಗಳ ಬೆಲೆಯೇ ಬರೋಬ್ಬರಿ 35 ಲಕ್ಷಕ್ಕೂ ಅಧಿಕ ಇತ್ತು. 50 ಬಾಟಲಿ ಜೇನು ಇತ್ತು. ಹೀಗಾಗಿ ಪದಾರ್ಥಗಳನ್ನು ಬಿಟ್ಟು ಮನೆ ಖಾಲಿ ಮಾಡಲು ಅರ್ಚಕರು ಹಿಂದೇಟು ಹಾಕುತ್ತಿದ್ದರು.

    ಒಂದು ಡಸ್ಟರ್, ಅಂಬಾಸಿಡರ್ ಕಾರು, 30ಕ್ಕೂ ಹಸುಗಳನ್ನ ಹೊಂದಿದ್ದರು. ಅಲ್ಲದೇ ಕೊಡಗಿನ ಸುತ್ತ ಮುತ್ತ 100 ಎಕರೆ ಕಾಫಿ ತೋಟ ಹೊಂದಿದ್ದರು. ಜೊತೆಗೆ ಬೆಂಗಳೂರಿನಲ್ಲಿ 2 ಸೈಟ್ ಹೊಂದಿದ್ದಾರೆ. ಈ ಮೂಲಕ ನಾರಾಯಣಾಚಾರ್ ಕೋಟ್ಯಂತರ ರೂಪಾಯಿ ಆಸ್ತಿಯ ಒಡೆಯರಾಗಿದ್ದರು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಆಸ್ತಿ ಇದೆ ಎಂಬುದರ ಬಗ್ಗೆ ಅಧಿಕೃತವಾಗಿ ದೃಢಪಟ್ಟಿಲ್ಲ.

    ಆಚಾರ್ ಮನೆಯಲ್ಲಿ ಅಪಾರ ಪ್ರಮಾಣದ ನಾಣ್ಯಗಳು ಇರಬಹುದು. ಬ್ರಹ್ಮಕುಂಡಿಕೆಯಲ್ಲಿ ಹಾಕಲಾಗುತ್ತಿದ್ದ ನಾಣ್ಯಗಳನ್ನು ಆಚಾರ್ ಕೊಂಡ್ಯೊಯುತ್ತಿದ್ದರು. ಈ ಹಿನ್ನೆಲೆಯಲ್ಲಿ ಒಂದು ಕೋಣೆಯಲ್ಲಿ ನಾಣ್ಯಗಳನ್ನು ಸಂಗ್ರಹಿಸಿ ಇಟ್ಟಿರಬಹುದು ಎಂಬ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

    ತಲಕಾವೇರಿ ದೇವಸ್ಥಾನದ ಮುಖ್ಯಸ್ಥ ಕೋಡಿ ಮೋಟಯ್ಯ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ನಾರಾಯಣಾಚಾರ್ ಮೂಲತಃ ಅರ್ಚಕ ಹಾಗೂ ಕೃಷಿಕ ಕುಟುಂಬದಿಂದ ಬಂದಿದ್ದಾರೆ. ಹೀಗಾಗಿ ಸಂಪತ್ತು ಹೊಂದಿರುವುದು ಸಹಜ. ಅವರಿಗೆ ಕಾಫಿ, ಏಲಕ್ಕಿ ತೋಟವಿದೆ. ಹಾಗೆಯೇ ಅವರ ಕುಟುಂಬ ತಲೆ, ತಲಾಂತರಗಳಿಂದ ಅರ್ಚಕ ವೃತ್ತಿಯನ್ನು ಮಾಡುತ್ತಿದೆ. ಅಲ್ಲದೆ ಮಕ್ಕಳಿಬ್ಬರು ವಿದೇಶದಲ್ಲಿ ಇರುವುದರಿಂದ ಸಹಜವಾಗಿಯೇ ಹಣವನ್ನು ಸಂಗ್ರಹಿಸಿರಬಹುದು ಎಂದಿದ್ದಾರೆ.

    ನಾರಾಯಣಾಚಾರ್ ಅವರಿಗೆ ಬೆಂಗಳೂರಿನಲ್ಲೂ ಸ್ವಂತ ಮನೆ ಆಸ್ತಿ ಇದೆ. ಅದನ್ನು ಅವರೇ ನನ್ನ ಬಳಿ ಹೇಳಿದ್ದರು. ಅತೀವ ಪ್ರಮಾಣದಲ್ಲಿ ಏಲಕ್ಕಿ, ಮೆಣಸು ಬೆಳೆಯುತ್ತಿದ್ದರು. ದೇವಸ್ಥಾನದಿಂದಲೂ ಅವರಿಗೆ ಹೆಚ್ಚು ಆದಾಯವಿತ್ತು. ಅಷ್ಟು ಪ್ರಮಾಣದ ಆಸ್ತಿ ಇಲ್ಲದಿದ್ದರೂ ಮನೆಯಲ್ಲಿ ಹೆಣ್ಣುಮಕ್ಕಳು ಇದ್ದ ಕಾರಣ ಒಡವೆಗಳನ್ನು ಇಟ್ಟಿರಬಹುದು ಎಂದು ನಾರಾಯಣಾಚಾರ್ ಅಪಾರ ಸಂಪತ್ತನ್ನು ಹೊಂದಿದ್ದಾರೆ ಎನ್ನುವ ಊಹಾಪೋಹಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ.

  • ಹೆಣ್ಣುಮಕ್ಕಳಿಗೆ ಪೋಷಕರ ಆಸ್ತಿಯಲ್ಲಿ ಸಮಾನ ಪಾಲು ಪಡೆಯುವ ಹಕ್ಕಿದೆ: ಸುಪ್ರೀಂಕೋರ್ಟ್

    ಹೆಣ್ಣುಮಕ್ಕಳಿಗೆ ಪೋಷಕರ ಆಸ್ತಿಯಲ್ಲಿ ಸಮಾನ ಪಾಲು ಪಡೆಯುವ ಹಕ್ಕಿದೆ: ಸುಪ್ರೀಂಕೋರ್ಟ್

    ನವದೆಹಲಿ : ಹಿಂದೂ ಉತ್ತರಾಧಿಕಾರ 2005ರ ತಿದ್ದುಪಡಿ ಕಾಯ್ದೆಯಡಿ ಹೆಣ್ಣುಮಕ್ಕಳಿಗೆ ಪೋಷಕರ ಆಸ್ತಿಯಲ್ಲಿ ಸಮಾನ ಪಾಲು ಪಡೆಯುವ ಹಕ್ಕಿದೆ ಎಂದು ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ.

    ನ್ಯಾ.ಅರುಣ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಈ ಮಹತ್ವದ ಆದೇಶ ನೀಡಿದ್ದು, ಹಿಂದೂ ಅವಿಭಜಿತ ಕುಟುಂಬ (ಎಚ್‍ಯುಎಫ್) ಆಸ್ತಿಯಲ್ಲಿ ಪಾಲು ಹೊಂದಲು ಹೆಣ್ಣುಮಕ್ಕಳ ಹಕ್ಕಿದೆ ಎಂದು ಅಭಿಪ್ರಾಯ ಪಟ್ಟಿದೆ.

    2005ರ ಸೆಪ್ಟೆಂಬರ್ 9 ರಂದು ತಿದ್ದುಪಡಿ ಪ್ರಕಾರ ತಂದೆ ಮತ್ತು ಮಗಳು ಇಬ್ಬರೂ ಜೀವಂತವಾಗಿದ್ದರೆ ಮಾತ್ರ ಆಕೆಗೆ ಸಮಾನ ಹಕ್ಕು ಇರುತ್ತದೆ ಎಂದು ತೀರ್ಪು ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ಹಲವು ಪುನರ್ ಪರಿಶೀಲನೆ ಅರ್ಜಿ ಸಲ್ಲಿಸಲಾಗಿತ್ತು. ಈ ಎಲ್ಲ ಅರ್ಜಿಗಳನ್ನು ಒಗ್ಗೂಡಿಸಿ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿತ್ತು.

    ಹೊಸ ಆದೇಶ ಅನ್ವಯ ಪೋಷಕರ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೂ ಸಮಾನವಾದ ಹಕ್ಕಿದೆ. ತಂದೆ ಜೀವಂತವಾಗಿದ್ದರೋ ಇಲ್ಲವೋ ಎಂಬುದನ್ನು ಲೆಕ್ಕಿಸದೆ ಆಕೆಗೆ ಆನುವಂಶಿಕ ಹಕ್ಕು ನೀಡಲಾಗುವುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.