Tag: ಆಸ್ತಿ ವಿಚಾರ

  • ಆಸ್ತಿಗಾಗಿ ತಂದೆ, ತಮ್ಮನಿಂದಲೇ ಅಣ್ಣನ ಕೊಲೆಗೆ ಯತ್ನ

    ಆಸ್ತಿಗಾಗಿ ತಂದೆ, ತಮ್ಮನಿಂದಲೇ ಅಣ್ಣನ ಕೊಲೆಗೆ ಯತ್ನ

    ಕೊಪ್ಪಳ: ಆಸ್ತಿ ವಿಚಾರಕ್ಕೆ ತಂದೆ ಹಾಗೂ ತಮ್ಮನಿಂದಲೇ ಅಣ್ಣನ ಕೊಲೆಗೆ ಯತ್ನ ಮಾಡಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.

    ಅಣ್ಣ ಅನಿಲ್ ಕುಮಾರ್ ಹಲ್ಲೆಗೊಳಗಾದ ವ್ಯಕ್ತಿ. ಚೆನ್ನಪ್ಪಗೌಡ ಹಾಗೂ ವೆಂಕಟೇಶ್ ಆರೋಪಿಗಳು. ಕೊಪ್ಪಳ ಜಿಲ್ಲೆಯ ಕುಕನೂರ ತಾಲೂಕಿನ ನೆಲಜೇರಿ ಗ್ರಾಮದಲ್ಲಿ ಘಟನೆ ನಡೆದಿದೆ. ಪಿತ್ರಾರ್ಜಿತ ಆಸ್ತಿ ವಿಚಾರಕ್ಕೆ ಭಾನುವಾರ ತಡರಾತ್ರಿ ತಂದೆ ಮಕ್ಕಳ ನಡುವೆ ಗಲಾಟೆ ನಡೆದಿತ್ತು.

    POLICE JEEP

    ಗಲಾಟೆ ವಿಕೋಪಕ್ಕೆ ಹೋಗಿತ್ತು. ಆ ವೇಳೆ ಅನಿಲ್ ಮನೆ ಮೇಲೆ ತಂದೆ ಚೆನ್ನಪ್ಪಗೌಡ ಹಾಗೂ ತಮ್ಮ ವೆಂಕಟೇಶ್ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಪ್ರಯತ್ನಿಸಿದ್ದಾರೆ. ಅದೃಷ್ಟವಶಾತ್ ಅನಿಲ್ ಕುಮಾರ್ ಹಾಗೂ ಅವರ ಕುಟುಂಬ ಪ್ರಾಣಾಪಾಯದಿಂದ ಪಾರಾಗಿದೆ. ಇದನ್ನೂ ಓದಿ: ಸೋಂಕು ವೇಗವಾಗಿ ಹರಡುತ್ತಿದೆ, ನಾಳೆ ಸಂಜೆ ತಜ್ಞರ ಜೊತೆ ಸಭೆ ಮಾಡುತ್ತೇವೆ: ಬೊಮ್ಮಾಯಿ

    ಈ ಬಗ್ಗೆ ಬೇವೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ತಂದೆ ಹಾಗೂ ತಮ್ಮನ ವಿರುದ್ಧ ಅನಿಲ್ ಕುಮಾರ್ ದೂರು ದಾಖಲಿಸಿದ್ದಾರೆ. ಚೆನ್ನಪ್ಪಗೌಡ ಹಾಗೂ ವೆಂಕಟೇಶ್ ಅವರ ಪತ್ತೆಗಾಗಿ ಶೋಧ ನಡೆಯುತ್ತಿದೆ. ಇದನ್ನೂ ಓದಿ: ರಾಜಕೀಯ ಬಿಕ್ಕಟ್ಟು – ಸುಡಾನ್‌ ಪ್ರಧಾನಿ ರಾಜೀನಾಮೆ ಘೋಷಣೆ

  • ತಿಮ್ಮಪ್ಪನ ಮೊರೆ ಹೋದ ನಿರ್ಮಾಪಕ ಉಮಾಪತಿ

    ತಿಮ್ಮಪ್ಪನ ಮೊರೆ ಹೋದ ನಿರ್ಮಾಪಕ ಉಮಾಪತಿ

    ಬೆಂಗಳೂರು: ನಟ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ನಡುವೆ 25 ಕೋಟಿ ರೂಪಾಯಿ ವಂಚನೆ ಪ್ರಕರಣ ದಿನ ಕಳೆದಂತೆ ತಾರಕಕ್ಕೇರುತ್ತಿದೆ. ಈ ನಡುವೆ ಉಮಾಪತಿ ತಾನು ನಂಬುವ ದೇವರುಗಳ ಮೊರೆ ಹೋಗುತ್ತಿದ್ದಾರೆ. ಇದೀಗ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿ ಈ ಸಮಸ್ಯೆ ಬಗೆಹರಿಸುವಂತೆ ಬೇಡಿಕೊಂಡಿದ್ದಾರೆ.

    ದರ್ಶನ್ ಹಾಗೂ ಉಮಾಪತಿ ನಡುವೆ 25 ಕೋಟಿ ರೂಪಾಯಿ ವಂಚನೆ ಪ್ರಕರಣ ಆರಂಭವಾದ ದಿನದಿಂದ ಪ್ರಾರಂಭವಾದ ತಿಕ್ಕಾಟ ದಿನ ಕಳೆದಂತೆ ಬೇರೆ ಬೇರೆ ಮಜಲುಗಳನ್ನು ಪಡೆದುಕೊಂಡು ಹೋಗುತ್ತಿದೆ. ಇತ್ತ ನಿರ್ಮಾಪಕ ಉಮಾಪತಿ ಮಾತ್ರ ಒಂದಲ್ಲಾ ಒಂದು ದೇವರಗಳ ಮೊರೆ ಹೋಗುತ್ತಿದ್ದಾರೆ. ಇದನ್ನೂ ಓದಿ: ಬನಶಂಕರಿ ದೇವಿಯ ಮೊರೆಹೋದ ನಿರ್ಮಾಪಕ ಉಮಾಪತಿ

    ಮೊದಲನೇದಾಗಿ ಉಮಾಪತಿ ಬನಶಂಕರಿಯಲ್ಲಿರುವ ಬನಶಂಕರಿ ತಾಯಿಯ ಮೊರೆ ಹೋಗಿ, ಬಶಂಕರಿ ತಾಯಿ ಬಳಿ ನನಗೆ ಬಂದಿರುವ ಕಷ್ಟಗಳನ್ನು ನಿವಾರಣೆ ಮಾಡುವಂತೆ ಬೇಡಿಕೊಂಡು ಬಂದಿದ್ದರು. ನಿನ್ನೆ ದಿಢೀರ್ ಎಂದು ಕುಟುಂಬದೊಂದಿಗೆ ತಿರುಪತಿಗೆ ಹೋಗಿ ಪ್ರಾರ್ಥನೆ ಮಾಡಿದ್ದಾರೆ.

  • ಅತ್ತಿಗೆಗೆ ಚಾಕು ಇರಿದ ಮೈದುನ

    ಅತ್ತಿಗೆಗೆ ಚಾಕು ಇರಿದ ಮೈದುನ

    ಮೈಸೂರು: ಆಸ್ತಿ ವಿಚಾರದಲ್ಲಿ ಮೈದುನ ಅತ್ತಿಗೆಗೆ ಚಾಕು ಇರಿದ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ತ್ರಿವೇಣಿ ಸರ್ಕಲ್ ನಲ್ಲಿ ನಡೆದಿದೆ.

    ಶುಭ ಹಲ್ಲೆಗೊಳಗಾದ ಅತ್ತಿಗೆ. ಮೈದುನ ರವಿಕುಮಾರ್‌ಗೆ ಸಾರ್ವಜನಿಕರಿಂದ ಧರ್ಮದೇಟು ನೀಡಿದ್ದಾರೆ. ಗಾಯಗೊಂಡ ಅತ್ತಿಗೆಯನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಮೈದುನ ರವಿಕುಮಾರ್ ನನ್ನು ಉದಯಗಿರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಇವರು ಮೈಸೂರಿನ ಎನ್.ಆರ್ ಮೊಹಲ್ಲಾದ ಕುರಿಮಂಡಿ ನಿವಾಸಿಗಳು. ಆಸ್ತಿ ವಿಚಾರದಲ್ಲಿ ಇಂದು ಡಾ.ರಾಜ್ ಕುಮಾರ್ ರಸ್ತೆಯಲ್ಲಿರುವ ಉಪನೊಂದಣಾಧಿಕಾರಿಗಳ ಕಚೇರಿಗೆ ಆರೋಪಿ ರವಿಕುಮಾರ್ ಹಾಗೂ ಅವರ ಅಣ್ಣ ಸುರೇಶ್ ಹಾಗೂ ಅತ್ತಿಗೆ ಶುಭ ಬಂದಿದ್ದರು. ಆಸ್ತಿ ನೋಂದಣಿ ವೇಳೆ ಸಹಿ ಹಾಕಲು ರವಿಕುಮಾರ್ ನಿರಾಕರಣೆ ಮಾಡಿದ್ದಾನೆ.

    ಈ ವೇಳೆ ಅತ್ತಿಗೆ ಶುಭ ಹಾಗೂ ಮೈದುನನ ನಡುವೆ ಮಾತಿನ ಚಕಮಕಿ ನಡೆದಿದೆ. ಆಗ ಕೋಪಗೊಂಡ ರವಿಕುಮಾರ್ ಅತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ಕೂಡಲೇ ಮಧ್ಯಪ್ರವೇಶಿಸಿದ ಸ್ಥಳೀಯರು ರವಿಕುಮಾರ್‌ಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ.

    ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಉದಯಗಿರಿ ಠಾಣಾ ಪೊಲೀಸರು ಚಾಕು ಇರಿದ ಮೈದುನ ರವಿಕುಮಾರ್ ನನ್ನು ವಶಕ್ಕೆ ಪಡೆದಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]