Tag: ಆಸ್ತಿ ಮಾಲೀಕರು

  • ಬೆಂಗಳೂರು ನಿವಾಸಿಗಳಿಗೆ ದೀಪಾವಳಿಗೂ ಮೊದಲೇ ಗಿಫ್ಟ್‌; ಬಿ-ಖಾತಾ ಪರಿವರ್ತನೆಗೆ ಹೊಸ ಪೋರ್ಟಲ್‌

    ಬೆಂಗಳೂರು ನಿವಾಸಿಗಳಿಗೆ ದೀಪಾವಳಿಗೂ ಮೊದಲೇ ಗಿಫ್ಟ್‌; ಬಿ-ಖಾತಾ ಪರಿವರ್ತನೆಗೆ ಹೊಸ ಪೋರ್ಟಲ್‌

    – 2000 ಚ.ಮೀ.ಗಿಂತ ಹೆಚ್ಚು ಆಸ್ತಿದಾರರು ಎ-ಖಾತಾಗೆ ಅಪ್ಲೈ ಮಾಡೋದು ಹೇಗೆ?

    ಬೆಂಗಳೂರು: ಸಿಲಿಕಾನ್‌ ಸಿಟಿಯ ಲಕ್ಷಾಂತರ ಆಸ್ತಿ ಮಾಲೀಕರಿಗೆ ರಾಜ್ಯ ಸರ್ಕಾರ ದೀಪಾವಳಿ ಗಿಫ್ಟ್‌ ಕೊಡ್ತಾ ಇದೆ. 1,200 ಚದರ ಅಡಿವರೆಗಿನ ನಿವೇಶನದಲ್ಲಿ ನಿರ್ಮಿಸಿದ ಮನೆಗಳಿಗೆ ಸ್ವಾಧೀನಾನುಭವ ಪ್ರಮಾಣಪತ್ರ (OC) ಪಡೆಯುವುದರಿಂದ ವಿನಾಯಿತಿ ನೀಡಿ ಆದೇಶ ಹೊರಡಿಸಿದ್ರೆ, ಮತ್ತೊಂದೆಡೆ ‘ಬಿ-ಖಾತಾ’ (B Khata) ಆಸ್ತಿಗಳನ್ನು ‘ಎ-ಖಾತಾ’ಗೆ (A Khata) ಪರಿವರ್ತಿಸುವ ಆನ್‌ಲೈನ್‌ ಪೋರ್ಟಲ್‌ಗೆ ಇಂದು ಚಾಲನೆ ನೀಡುತ್ತಿದೆ.

    ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಇಂದು ‘ಬಿ – ಖಾತೆ’ಯಿಂದ ‘ಎ – ಖಾತೆ’ಗೆ ಪರಿವರ್ತಿಸುವ ಆನ್‌ಲೈನ್ ಪೋರ್ಟಲ್‌ಗೆ ಚಾಲನೆ ನೀಡಿದ್ದಾರೆ. ಈ ಮಹತ್ವಾಕಾಂಕ್ಷಿ ಯೋಜನೆಯಿಂದಾಗಿ ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿರುವ ಅಂದಾಜು 6 ಲಕ್ಷಕ್ಕೂ ಅಧಿಕ ‘ಬಿ – ಖಾತೆ’ದಾರರು ತಮ್ಮ ಆಸ್ತಿಗಳಿಗೆ ‘ಎ – ಖಾತೆ’ ಪಡೆಯಲು ದಾರಿ ಸುಗಮವಾಗಿದೆ. ಇದರೊಂದಿಗೆ ಹೊಸ ನಿವೇಶನಗಳಿಗೂ ನೇರವಾಗಿ ‘ಎ – ಖಾತೆ’ ಪಡೆಯಲು ಈ ವ್ಯವಸ್ಥೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

    ಎ-ಖಾತಾ ಆನ್‌ಲೈನ್‌ನಲ್ಲಿ ಅಪ್ಲೈ ಮಾಡೋದು ಹೇಗೆ? (2000‌ ಚ.ಮೀಟರ್‌ಗಳ ವರೆಗೆ)
    1. ತಮ್ಮ ಮೊಬೈಲ್ ನಂಬರ್‌ನಿಂದ ಇಂದು ಅನಾವರಣಗೊಳ್ಳುವ https://bbmp.karnataka.gov.in/btoakhata ವೆಬ್‌ ಪೋರ್ಟಲ್‌ಗೆ ಹೋಗಿ ಓಟಿಪಿ ಸಹಿತ ಲಾಗಿನ್ ಆಗಬೇಕು
    2. ಫೈನಲ್ ಬಿ ಖಾತಾದ ಇಪಿಐಡಿ ನಂಬರ್ ಅನ್ನು ನಮೂದಿಸಬೇಕು
    3. ಆಸ್ತಿಯ ಮಾಲೀಕರು ತಮ್ಮ ಆಧಾರ್ ದೃಢೀಕರಿಸಬೇಕು.
    4. ನಿವೇಶನ ಸ್ಥಳವನ್ನು ಮತ್ತು ನಿವೇಶನ ಮುಂಭಾಗದ ರಸ್ತೆಯ ಪ್ರಕಾರವನ್ನು ದೃಢಪಡಿಸಿ
    5. ಭೂಪರಿವರ್ತನೆಯಾದ ಮತ್ತು ಭೂ ಪರಿವರ್ತನೆಯಾಗದ ಎರಡೂ ಸೈಟ್‌ಗಳು ಅಪ್ಲೈ ಮಾಡೋಕೆ ಅರ್ಹರು. ಫ್ಲ್ಯಾಟ್ ಇರುವವರು ಅಪ್ಲೈ ಮಾಡೋ ಆಗಿಲ್ಲ.
    6. ನಗರಪಾಲಿಕೆಯಿಂದ ನಿವೇಶನಕ್ಕೆ ಭೇಟಿ ಮತ್ತು ದೃಢೀಕರಣ
    7. ಮಾರುಕಟ್ಟೆ ಮೌಲ್ಯದ ಶೇ.5 ರಷ್ಟು ಮೊತ್ತವನ್ನು ʻಏಕ ನಿವೇಶನʼ ಅನುಮೋದನೆ ಶುಲ್ಕವಾಗಿ ಹಾಗೂ ಇತರೇ ಶುಲ್ಕಗಳನ್ನು ಪಾವತಿಸುವುದು.
    8. ಇಷ್ಟೆಲ್ಲಾ ಪ್ರೋಸೆಸ್ ಆದ ಮೇಲೆ ಸ್ವಯಂಕೃತವಾಗಿ ಎ-ಖಾತಾ ಸಿಗಲಿದೆ

    2000 ಚದರ ಮೀಟರ್‌ಗೂ ಹೆಚ್ಚಿನ ವಿಸ್ತೀರ್ಣ ಆಸ್ತಿ ಹೊಂದಿದವರು ಅಪ್ಲೈ ಮಾಡೋದು ಹೇಗೆ?
    1. ನೋಂದಾಯಿತ ಇಂಜಿನಿಯರ್ ಅಥವಾ ಆರ್ಕಿಟೆಕ್ಚರ್ ಅನ್ನು ಸಂಪರ್ಕಿಸಬೇಕು.
    2. ಯಾವುದೇ ರೀತಿಯ ನಿವೇಶನಗಳಿಗಾಗಿ https://bpas.bbmp.gov.in ಪೋರ್ಟಲ್‌ ಮೂಲಕ ಅರ್ಜಿ ಸಲ್ಲಿಸಬೇಕು.
    3. ಅಗತ್ಯ ದಾಖಲೆಗಳನ್ನ ಮತ್ತು ಕ್ಯಾಡ್‌ ಡ್ರಾಯಿಂಗ್‌ ಅನ್ನು ಅಪ್‌ಲೋಡ್‌ ಮಾಡಬೇಕು.
    4. ಆರಂಭಿಕ ಪರಿಶೀಲನಾ ಶುಲ್ಕ 500 ರೂ. ಪಾವತಿಸಬೇಕು.
    5. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು (ಫ್ಲಾಟ್‌ಗಳಿಗೆ ಅರ್ಹತೆ ಇಲ್ಲ)
    6. ನಂತರ ನಿವೇಶನಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಿದ್ದಾರೆ.
    7. ಅರ್ಹತೆಗೆ ಅನುಸಾರವಾಗಿ ಅನುಮೋದನೆ ನೀಡಲಿದ್ದಾರೆ.
    8. ನಂತರ ಅನ್ವಯವಾಗುವ ಶುಲ್ಕಗಳನ್ನ ಪಾವತಿಸಬೇಕಾಗುತ್ತದೆ.
    9. ಅರ್ಹತಾನುಸಾರವಾಗಿ ʻಏಕನಿವೇಶನʼ (ಸಿಂಗಲ್‌ ಸೈಟ್‌) ಅನುಮೋದನೆ ಪ್ರಮಾಣ ಪತ್ರ, ಡ್ರಾಯಿಂಗ್‌ ಮತ್ತು ಎ-ಖಾತಾ ವಿತರಣೆ ಆಗಲಿದೆ.

  • ಬೆಂಗಳೂರಿನ ಆಸ್ತಿ ಮಾಲೀಕರಿಗೆ GBA ಗುಡ್‌ನ್ಯೂಸ್‌ – ಬಿ ಖಾತಾಗಳಿಗೂ ಎ-ಖಾತಾ ಮಾನ್ಯತೆಗೆ ತಯಾರಿ

    ಬೆಂಗಳೂರಿನ ಆಸ್ತಿ ಮಾಲೀಕರಿಗೆ GBA ಗುಡ್‌ನ್ಯೂಸ್‌ – ಬಿ ಖಾತಾಗಳಿಗೂ ಎ-ಖಾತಾ ಮಾನ್ಯತೆಗೆ ತಯಾರಿ

    – ಜಿಬಿಎಯಿಂದ ಹೊಸ ಸಾಫ್ಟ್‌ವೇರ್‌ ತಯಾರು

    ಬೆಂಗಳೂರು: ಇಲ್ಲಿನ ನಗರವಾಸಿಗಳಿಗೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (GBA) ಗುಡ್‌ನ್ಯೂಸ್‌ ಕೊಟ್ಟಿದೆ. ಬಿ – ಖಾತಾಗಳಿಗೆ ಎ-ಖಾತಾ ಮಾನ್ಯತೆ ನೀಡಲು ಜಿಬಿಎ ಹೊಸದೊಂದು ಸಾಫ್ಟ್‌ವೇರ್‌ ಸಿದ್ಧಪಡಿಸಿದೆ. ಈಗಾಗಲೇ ಸಾಫ್ಟ್‌ವೇರ್‌ ನಿರ್ಮಿಸುವ ಕಾರ್ಯ ಸಂಪೂರ್ಣ ಮುಕ್ತಾಯ ಆಗಿದೆ. ಇನ್ನು ಹೊಸ ತಂತ್ರಜ್ಞಾನದ ಆಪ್ ಸಿದ್ಧಪಡಿಸಿರುವುದನ್ನು ಲೋಕಾರ್ಪಣೆ ಮಾಡಲು ಡಿಸಿಎಂ ಡಿಕೆ ಶಿವಕುಮಾರ್ ಅಂಗಳಕ್ಕೆ ತಲುಪಿದೆ. ಡಿಸಿಎಂ ಒಪ್ಪಿಗೆ ಕೊಟ್ಟ ಬಳಿಕ ಎ – ಖಾತಾ (A Khata) ವಿತರಣೆ ಆಗಲಿದೆ. ಎ ಖಾತಾ ವಿತರಣೆಗೆ ಸಣ್ಣಪುಟ್ಟ ಕೆಲಸ ಅಷ್ಟೇ ಬಾಕಿ ಶೀಘ್ರದಲ್ಲೇ ಎ ಖಾತಾ ವಿತರಣೆ ಆಗಲಿದೆ.

    ಬೆಂಗಳೂರಿನ (Bengaluru) ಆಸ್ತಿ ಮಾಲೀಕರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿತ್ತು. ಇದರ ಬೆನ್ನಲ್ಲೇ ನಗರದ ಎಲ್ಲಾ ಬಿ ಖಾತಾಗಳಿಗೆ ಎ ಖಾತಾ ಮಾನ್ಯತೆ ನೀಡಲು ಕಳೆದ ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ನಗರದಲ್ಲಿರುವ ಅಕ್ರಮ ಮತ್ತು ಅನಿಯಂತ್ರಿತ ಕಟ್ಟಡ ಮತ್ತು ವಿನ್ಯಾಸಗಳನ್ನು ನಿಯಂತ್ರಿಸಲು ಈ ಕ್ರಮವನ್ನು ರಾಜ್ಯ ಸರ್ಕಾರ ಕೈಗೊಂಡಿತ್ತು. ಆದ್ರೆ ಆದೇಶ ಆಗಿ ಒಂದು ತಿಂಗಳು ಸಮೀಪಿಸುತ್ತಾ ಇದ್ದರೂ ಎ-ಖಾತಾ ವಿತರಣೆ ಆಗಿರಲಿಲ್ಲ. ಹೀಗಾಗಿ ಜಿಬಿಎಯಿಂದ ಹೊಸ ಸಾಫ್ಟ್‌ವೇರ್‌ ಸಿದ್ಧಪಡಿಸುತ್ತಾ ಇದ್ದರು. ಈಗ ಹೊಸ ಸಾಫ್ಟ್‌ವೇರ್‌ ಸಿದ್ಧಪಡಿಸುವ ಕಾರ್ಯಮುಕ್ತಾಯ ಆಗಿದ್ದು. ಗ್ರೀನ್ ಸಿಗ್ನಲ್‌ಗಾಗಿ ಡಿಸಿಎಂ ಡಿಕೆ ಶಿವಕುಮಾರ್ ಅಂಗಳಕ್ಕೆ ರವಾನೆ ಆಗಲಿದೆ. ಇದನ್ನೂ ಓದಿ: ಗಣಪತಿ ಆತ್ಮಹತ್ಯೆ ಕೇಸ್‌ ನ್ಯಾ.ಕೆ.ಎನ್.ಕೇಶವ ನಾರಾಯಣ ಸಲ್ಲಿಸಿದ್ದ ವರದಿ ರಿಜೆಕ್ಟ್‌- ಕ್ಯಾಬಿನೆಟ್‌ನಲ್ಲಿ ಕೈಗೊಂಡ ತೀರ್ಮಾನಗಳು ಏನು?

    ಕ್ರಮಬದ್ಧವಲ್ಲದ ನಿವೇಶನ ಅಥವಾ ಆಸ್ತಿಗಳಿಗೆ ಬಿಬಿಎಂಪಿಯಿಂದ 2009ರಿಂದ ಈಚೆಗೆ ಬಿ ಖಾತಾವನ್ನು ನೀಡಲಾಗಿತ್ತು, ಬಿ-ಖಾತಾ ನೀಡುವ ಪ್ರಕ್ರಿಯೆಯನ್ನು 2024 ರಂದು ಸ್ಥಗಿತಗೊಳಿಸಲಾಗಿತ್ತು, ಹೀಗಾಗಿ ಈ ನಡುವಿನ ಬಿಖಾತಾ ಆಸ್ತಿ ಸಮಸ್ಯೆ ಬಗೆಹರಿಸಲು ಈ ನಿರ್ಧಾರವನ್ನು ಮಾಡಲಾಗಿದೆ, ಇನ್ನು ಜಿಬಿಎಯಿಂದ ಹೊಸ ಸಾಫ್ಟ್‌ವೇರ್‌ ಸಿದ್ಧಪಡಿಸಿದ್ದು ಖಾತಾದಾರರೇ ಅಪ್ಲೈ ಮಾಡಿ ಹಣ ಪಾವತಿ ಮಾಡುವ ವ್ಯವಸ್ಥೆ ಇರಲಿದೆ. ಜೊತೆಗೆ ಸೈಟ್, ಕಟ್ಟಡ ಮಾಹಿತಿಯನ್ನ ಒಳಗೊಂಡ ಅಂಶವನ್ನ ಕೂಡ ಉಲ್ಲೇಖ ಮಾಡಿ ಎ-ಖಾತಾಗೆ ಅಪ್ಲೈ ಮಾಡಬೇಕಾಗುತ್ತೆ. ಒಂದಷ್ಟು ಅಂಶಗಳನ್ನ ಒಳಗೊಂಡಂತಹ ಸಾಫ್ಟ್‌ವೇರ್‌ ಸಿದ್ಧವಾಗಿದ್ದು ಸಾಫ್ಟ್‌ವೇರ್‌ ಸಿದ್ಧವಾದ ಬಳಿಕ ಮುಂದಿನ ತಿಂಗಳು ಎ-ಖಾತಾ ವಿತರಣೆ ಆಗುವ ಸಾಧ್ಯತೆ ಇದೆ. ಇದನ್ನೂ ಓದಿ: ಸಮೀಕ್ಷೆಯಿಂದ ವಿದ್ಯುತ್ ಬಿಲ್ ವ್ಯತ್ಯಯವಾಗದು, ಗೃಹಜ್ಯೋತಿ ಫಲಾನುಭವಿಗಳಿಗೆ ತೊಂದರೆ ಇಲ್ಲ: ಬೆಸ್ಕಾಂ

    ಹೊಸ ಸಾಫ್ಟ್‌ವೇರ್‌ ಜೊತೆಗೆ ಒಂದಷ್ಟು ಮಾರ್ಗಸೂಚಿಗಳು ಎ-ಖಾತಾ ಪಡೆಯಲು ಜಾರಿಯಾಗಲಿವೆ. ಈ ಮೂಲಕ ಬಿ-ಖಾತಾಗಳಿದ್ದ ಬಿಬಿಎಂಪಿ ನಕ್ಷೆ ಅನುಮೋದನೆ ಓಸಿ ಹಾಗೂ ಸಿಸಿ ಸಮಸ್ಯೆಗೆ ಮುಕ್ತಿ ನೀಡಲು ಸರ್ಕಾರ ಮುಂದಾಗಿದೆ. ಇನ್ನು ಎ ಖಾತಾ ನೀಡಲು ಮಾರ್ಗಸೂಚಿ ಹೇಗಿರಲಿದೆ ಅನ್ನೋದನ್ನ ಕಾದು ನೋಡಬೇಕಿದೆ. ಇದನ್ನೂ ಓದಿ: ವಿಪ್ರೋ ಕ್ಯಾಂಪಸ್‌ನಲ್ಲಿ ವಾಹನ ಸಂಚಾರಕ್ಕೆ ಅನುಮತಿ ನೀಡಲ್ಲ- ಸಿಎಂ ಮನವಿಯನ್ನು ತಿರಸ್ಕರಿಸಿದ ಅಜೀಂ ಪ್ರೇಮ್‌ಜಿ