Tag: ಆಸ್ಟ್ರೇಲಿಯಾ ಆಟಗಾರ

  • ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಆಸೀಸ್ ಕ್ರಿಕೆಟಿಗ

    ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಆಸೀಸ್ ಕ್ರಿಕೆಟಿಗ

    ಬೆಂಗಳೂರು: ಆಸ್ಟ್ರೇಲಿಯನ್ ಮಾಜಿ ಕ್ರಿಕೆಟರ್ ಬ್ರಾಡ್ ಹಾಗ್ ಅವರು ಸಿಲಿಕಾನ್ ಸಿಟಿಗೆ ಭೇಟಿ ನೀಡಿದ್ದು, ಈ ವೇಳೆ ನಗರದ ಪ್ರಸಿದ್ಧ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದಿದ್ದಾರೆ.

    ಗಾಂಧಿ ಬಜಾರಿನಲ್ಲಿರುವ ವಿದ್ಯಾರ್ಥಿ ಭವನದ ಹೋಟೆಲಿಗೆ ಭೇಟಿ ನೀಡಿದ ಆಸೀಸ್ ಆಟಗಾರನಿಗೆ ಕರ್ನಾಟಕದ ಮಾಜಿ ಆಟಗಾರ ವಿಜಯ್ ಭಾರಧ್ವಾಜ್ ಸಾಥ್ ನೀಡಿದ್ದರು. ಈ ವೇಳೆ ಅವರು, ಮಸಾಲೆ ದೋಸೆ, ಇಡ್ಲಿ ವಡೆ ಸಾಂಬಾರ್, ಚೌಚೌ ಬಾತ್ ಹಾಗೂ ಪೂರಿ ಸಾಗುಗಳ ರುಚಿ ನೋಡಿದ್ದಾರೆ.

    ಇಷ್ಟು ಮಾತ್ರವಲ್ಲದೆ ಬ್ರಾಡ್ ಹಾಗ್ ಅವರು, ದೋಸೆ ಮಾಡುವ ರೀತಿ, ಅವುಗಳನ್ನು ಪ್ಲೇಟ್ ನಲ್ಲಿ ಹಾಕಿ ಒಂದರ ಮೇಲೊಂದರಂತೆ ಇಟ್ಟು ಸರ್ವ್ ಮಾಡುವುದನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಂತರ ವಿದ್ಯಾರ್ಥಿ ಭವನದ ಸಿಬ್ಬಂದಿ ಜೊತೆ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ.

    ಬ್ರಾಡ್ ಹಾಗ್ ಅವರು ಪ್ರಸ್ತುತ ನಡೆಯುತ್ತಿರುವ ಕೆಪಿಎಲ್ ಟೂರ್ನಿಯ ಶೂಟಿಂಗ್ ಆಗಮಿಸಿದ್ದಾರೆ. ಮೊನ್ನೆ ಬೆಂಗಳೂರಿನ ಯಕ್ಷಗಾನ ತರಬೇತಿ ಕೇಂದ್ರಕ್ಕೆ ಆಗಮಿಸಿ ಚೆಂಡೆಯನ್ನು ಬಾರಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.