Tag: ಆಸ್ಟ್ರಿಯಾ

  • BBMP Budget 2024: 350 ಕೋಟಿ ರೂ. ವೆಚ್ಚದಲ್ಲಿ ಸ್ಕೈ-ಡೆಕ್‌ ನಿರ್ಮಾಣ

    BBMP Budget 2024: 350 ಕೋಟಿ ರೂ. ವೆಚ್ಚದಲ್ಲಿ ಸ್ಕೈ-ಡೆಕ್‌ ನಿರ್ಮಾಣ

    ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನ (Bengaluru) ಹೆಸರನ್ನು ಮತ್ತಷ್ಟು ಆಕರ್ಷಣೀಯವಾಗಿಸಲು ಬಿಬಿಎಂಪಿ ಹಲವಾರು ಯೋಜನೆಗಳನ್ನು (BBMP Projects) ಹಮ್ಮಿಕೊಂಡಿದೆ. ಬ್ರ್ಯಾಂಡ್‌ ಬೆಂಗಳೂರು – ವೈಬ್ರೆಂಟ್‌ ಬೆಂಗಳೂರು ಯೋಜನೆಯಡಿ 250 ಮೀಟರ್‌ ಎತ್ತರದ ಸ್ಕೈ-ಡೆಕ್‌ (Skydeck) ನಿರ್ಮಾಣ ಮಾಡುವುದಾಗಿ ಬಿಬಿಎಂಪಿ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಇದರ ಒಟ್ಟು ವೆಚ್ಚ 350 ಕೋಟಿ ಎಂದು ಅಂದಾಜಿಸಲಾಗಿದೆ.

    ಸ್ಕೈ-ಡೆಕ್‌ ಯೋಜನೆಯ ಅನುಷ್ಠಾನಕ್ಕಾಗಿ 2024-25ರ ಬಿಬಿಎಂಪಿ ಬಜೆಟ್‌ನಲ್ಲಿ (BBMP Budget 2024) ಪ್ರಾರಂಭಿಕ ಯೋಜನಾ ವೆಚ್ಚ 50 ಕೋಟಿ ರೂ. ಅನುದಾನ ನೀಡಲಾಗಿದೆ. ಆದರೆ ಈ ಯೋಜನೆ ಎಲ್ಲಿ ಪ್ರಾರಂಭವಾಗಲಿದೆ ಎಂಬ ಯಾವುದೇ ಮಾಹಿತಿ ಬಜೆಟ್‌ನಲ್ಲಿ ಲಭ್ಯವಿಲ್ಲ. ಇದನ್ನೂ ಓದಿ: BBMP Budget 2024: ಬೆಂಗಳೂರು ನಗರದಲ್ಲಿ ನಿರ್ಮಾಣವಾಗಲಿದೆ 2 ಸುರಂಗ ಮಾರ್ಗ

    ದೇಶದ ಅತಿ ಎತ್ತರದ ವೀಕ್ಷಣಾ ಗೋಪುರ
    ಆಸ್ಟ್ರಿಯಾ ಮೂಲದ COOP HIMMELB(L)AU ಸಂಸ್ಥೆಯು ವರ್ಲ್ಡ್‌ ಡಿಸೈನ್‌ ಆರ್ಗನೈಸೇಷನ್‌ ಸಹಕಾರದೊಂದಿಗೆ ಈ ಸ್ಕೈ ಡೆಕ್‌ ನಿರ್ಮಾಣ ಮಾಡಲಿದೆ. ಯೋಜನೆ ಪೂರ್ಣಗೊಂಡ ಬಳಿಕ ದೇಶದಲ್ಲೇ ಅತಿ ಎತ್ತರದ ವೀಕ್ಷಣಾ ಗೋಪುರ ಎನ್ನುವ ಕೀರ್ತಿಗೆ ಸ್ಕೈ-ಡೆಕ್‌ ಪಾತ್ರವಾಗಲಿದೆ. ಇದನ್ನೂ ಓದಿ: ಹಿಮಾಚಲ ಪ್ರದೇಶ: ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದ 6 ಕಾಂಗ್ರೆಸ್‌ ಶಾಸಕರು ಅನರ್ಹ

    ಬೈಯಪ್ಪನಹಳ್ಳಿ ಬಳಿಯ ಎನ್‌ಜಿಇಎಫ್‌ ಅಥವಾ ಸೋಪ್‌ ಫ್ಯಾಕ್ಟರಿಯ ಭೂಮಿಯಲ್ಲಿ ಈ ಸ್ಕೈ-ಡೆಕ್‌ ನಿರ್ಮಾಣ ಮಾಡುವ ಪ್ರಸ್ತಾಪವಿತ್ತು. ಇದರಲ್ಲಿ ಬಹುತೇಕ ಎನ್‌ಜಿಎಫ್‌ ಭೂಮಿಯೇ ಯೋಜನೆಗೆ ಆಯ್ಕೆಯಾಗಿದೆ. ಎನ್‌ಜಿಎಫ್‌ 105 ಎಕರೆ ವಿಸ್ತೀರ್ಣದಲ್ಲಿದ್ದು ಇದರಿಂದ 10 ಎಕರೆ ಪ್ರದೇಶವನ್ನು ಸ್ಕೈಡೆಕ್‌ ಯೋಜನೆಗೆ ನೀಡಲು ಸರ್ಕಾರ ಮುಂದಾಗಿದೆ ಎಂದು ಬಿಬಿಎಂಪಿ ಮೂಲಗಳು ಪಬ್ಲಿಕ್‌ ಟಿವಿಗೆ ಮಾಹಿತಿ ನೀಡಿವೆ.

    ಸ್ಕೈ-ಡೆಕ್‌ ನಿರ್ಮಾಣವಾದ ಬಳಿಕ ಶುಲ್ಕ ಪಾವತಿಸಿ ನೀವು ಪ್ರವೇಶ ಪಡೆಯಬಹುದು. ಇದನ್ನೂ ಓದಿ: ವಿಧಾನಸಭೆಯಲ್ಲಿ ಮತ್ತೆ ‘ಪಾಕಿಸ್ತಾನ್ ಜಿಂದಾಬಾದ್’ ಗದ್ದಲ; ದೋಸ್ತಿಗಳಿಂದ ಸಭಾತ್ಯಾಗ

  • ಪಾಕ್‌ ಭಯೋತ್ಪಾದನೆಯನ್ನು ಯಾಕೆ ಯುರೋಪ್‌ ರಾಷ್ಟ್ರಗಳು ಖಂಡಿಸಿಲ್ಲ – ಜೈಶಂಕರ್‌ ಪ್ರಶ್ನೆ

    ಪಾಕ್‌ ಭಯೋತ್ಪಾದನೆಯನ್ನು ಯಾಕೆ ಯುರೋಪ್‌ ರಾಷ್ಟ್ರಗಳು ಖಂಡಿಸಿಲ್ಲ – ಜೈಶಂಕರ್‌ ಪ್ರಶ್ನೆ

    ವಿಯೆನ್ನಾ: ಗಡಿಯಾಚೆ ದಶಕಗಳಿಂದಲೂ ಪಾಕಿಸ್ತಾನ(Pakistan) ನಡೆಸುತ್ತಿರುವ ಭಯೋತ್ಪಾದನೆಯನ್ನು ಯಾಕೆ ಇಲ್ಲಿಯವರೆಗೆ ಯುರೋಪ್‌ ದೇಶಗಳು ಖಂಡಿಸಿಲ್ಲ ಎಂದು ವಿದೇಶಾಂಗ ಸಚಿವ ಎಸ್‌ ಜೈಶಂಕರ್‌(S Jaishankar) ಪ್ರಶ್ನಿಸಿದ್ದಾರೆ.

    ಉಕ್ರೇನ್‌(Ukraine) ಮೇಲಿನ ಯುದ್ಧದ ವಿಚಾರದಲ್ಲಿ ಭಾರತದ (India)ನಿರ್ಧಾರವನ್ನು ಯುರೋಪ್‌ ರಾಷ್ಟ್ರಗಳು(European Nations) ಪ್ರಶ್ನಿಸುತ್ತಿರುವ ಹಿನ್ನೆಲೆಯಲ್ಲಿ ಜೈಶಂಕರ್‌ ಮೊದಲ ಬಾರಿಗೆ ಪಾಕಿಸ್ತಾನದ ವಿಚಾರವನ್ನು ಪ್ರಸ್ತಾಪಿಸಿ ಯುರೋಪ್‌ ರಾಷ್ಟ್ರಗಳ ಧೋರಣೆಯನ್ನು ಪ್ರಶ್ನಿಸಿ ಖಡಕ್‌ ತಿರುಗೇಟು ನೀಡಿದ್ದಾರೆ.

    ಆಸ್ಟ್ರಿಯಾದ(Austria) ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ಅವರು ಪಾಕಿಸ್ತಾನ ಭಯೋತ್ಪಾದನೆಯ ಕೇಂದ್ರ ಬಿಂದು ಎಂದು ಬಣ್ಣಿಸಿದರು. ಇದನ್ನೂ ಓದಿ: ನಮ್ಮದು ಬೆಸ್ಟ್‌ ಡೀಲ್‌ – ರಷ್ಯಾದಿಂದ ತೈಲ ಖರೀದಿಗೆ ಜೈಶಂಕರ್‌ ಸಮರ್ಥನೆ

    ಕೆಲವು ವರ್ಷಗಳ ಹಿಂದೆ ಭಾರತದ ಸಂಸತ್ತಿನ ಮೇಲೆ ಈ ದೇಶ ದಾಳಿ ಮಾಡಿತ್ತು. ವಿದೇಶಿಯರಿದ್ದ ಮುಂಬೈ ಹೋಟೆಲ್‌ ಮೇಲೆ ದಾಳಿ ನಡೆಸಿತ್ತು. ಪ್ರತಿದಿನ ಗಡಿಯಾಚೆಗೆ ಭಯೋತ್ಪಾದಕರನ್ನು ಕಳುಹಿಸುತ್ತದೆ ಎಂದು ವಿದೇಶಾಂಗ ಸಚಿವರು ಪಾಕಿಸ್ತಾನವನ್ನು ದೂರಿದರು.

    ಚೀನಾ ಭಾರತದ(China India Border Dispute) ನಡುವಿನ ಗಡಿ ಕಿತ್ತಾಟದ ಬಗ್ಗೆ ಪ್ರತಿಕ್ರಿಯಿಸಿ, 1962 ಯುದ್ಧದ ಬಳಿಕ ಚೀನಾದ ಧೋರಣೆಯಿಂದಾಗಿ ಈಗ ಗಡಿಯಲ್ಲಿ ಶಾಂತಿ ಕದಡುತ್ತಿದೆ. ಉಪಗ್ರಹ ಚಿತ್ರದ ಮೂಲಕ ಗಡಿ ಭಾಗಕ್ಕೆ ಯಾರು ಮೊದಲು ಬಂದಿದ್ದಾರೆ ಎನ್ನುವುದು ದೃಢವಾಗುತ್ತದೆ. ಗಡಿಯಲ್ಲಿ ಸೇನೆಯನ್ನು ನಿಯೋಜಿಸಬಾರದು ಎಂದು ನಮ್ಮಿಬ್ಬರ ಮಧ್ಯೆ ಒಪ್ಪಂದ ಇದೆ. ಆದರೆ ಚೀನಾ ಆ ಒಪ್ಪಂದವನ್ನು ಪಾಲನೆ ಮಾಡದ ಕಾರಣ ಈಗ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ಇದನ್ನೂ ಓದಿ: ರಷ್ಯಾದಿಂದ ಡಿಸ್ಕೌಂಟ್‌ ಬೆಲೆಯಲ್ಲಿ ತೈಲ – 35 ಸಾವಿರ ಕೋಟಿ ಗಳಿಸಿದ ಭಾರತ

    ಜೈಶಂಕರ್‌ ಭಾರತದ ನಡೆಯನ್ನು ವಿಶ್ವ ವೇದಿಕೆಯಲ್ಲಿ ಸಮರ್ಥಿಸಿಕೊಳ್ಳುವುದು ಇದು ಮೊದಲನೆಯದ್ದಲ್ಲ. ಈ ಹಿಂದೆಯೂ ಸರಿಯಾಗಿ ಸಮರ್ಥಿಸಿ ತಿರುಗೇಟು ನೀಡಿದ್ದರು. ರಷ್ಯಾದಿಂದ ಭಾರತ ಮಾತ್ರ ತೈಲ ಖರೀದಿ ಮಾಡುತ್ತಿಲ್ಲ. ಯುರೋಪ್‌ ಈಗಲೂ ಗ್ಯಾಸ್‌ ಖರೀದಿ ಮಾಡುತ್ತಿದೆ. ಹೀಗಿದ್ದರೂ ಭಾರತ ಮಾತ್ರ ಟಾರ್ಗೆಟ್‌ ಯಾಕೆ ಎಂದು ಪ್ರಶ್ನಿಸಿದ್ದರು.

    ತೈಲವನ್ನು(Crude Oil) ಆಮದು ಮಾಡಿಕೊಳ್ಳುವ ಮೂಲಕ ರಷ್ಯಾ(Russia) ಯುದ್ಧಕ್ಕೆ ನಿಧಿ ನೀಡಿದಂತಾಗುತ್ತದೆ ಎಂಬ ಪ್ರಶ್ನೆಗೆ, ಭಾರತ ತೈಲ ಖರೀದಿಸಿ ರಷ್ಯಾಗೆ ಸಹಾಯ ಮಾಡುತ್ತದೆ ಎಂದಾದರೆ ರಷ್ಯಾದಿಂದ ಗ್ಯಾಸ್‌ ಖರೀದಿಸುತ್ತಿರುವ ಯುರೋಪ್‌ ದೇಶಗಳು ಯುದ್ಧಕ್ಕೆ ನಿಧಿ ನೀಡಿದಂತೆ ಆಗುವುದಿಲ್ಲವೇ ಎಂದು ಮರು ಪ್ರಶ್ನೆ ಹಾಕಿ ಪ್ರಶ್ನೆ ಕೇಳಿದವರ ಬಾಯಿ ಮುಚ್ಚಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಲಸಿಕೆ ಪಡೆಯದವರ ವಿರುದ್ಧ ವಿಭಿನ್ನ ಕ್ರಮಕ್ಕೆ ಮುಂದಾದ ಆಸ್ಟ್ರಿಯಾ

    ಲಸಿಕೆ ಪಡೆಯದವರ ವಿರುದ್ಧ ವಿಭಿನ್ನ ಕ್ರಮಕ್ಕೆ ಮುಂದಾದ ಆಸ್ಟ್ರಿಯಾ

    ವಿಯೆನ್ನಾ: ಕೊರೊನಾ ಲಸಿಕೆ ಪಡೆಯಲು ಉಪೇಕ್ಷಿಸುವ ಜನರ ಮೇಲೆ ವಿಶ್ವದಲ್ಲೇ ಅತ್ಯಂತ ಕಠಿಣ ಕ್ರಮವೊದನ್ನು ಯುರೋಪ್‍ನ ಆಸ್ಟ್ರೀಯಾ ದೇಶ ಕೈಗೊಳ್ಳುವ ಮೂಲಕವಾಗಿ ಸುದ್ದಿಯಾಗಿದೆ.

    ಕೋವಿಡ್ 5ನೇ ಅಲೆಯ ಭೀತಿಯಲ್ಲಿರುವ ಆಸ್ಟ್ರಿಯಾ ಲಸಿಕೆ ಪಡೆಯದವರಿಗೆ ಲಾಕ್‍ಡೌನ್ ಘೋಷಣೆ ಮಾಡಿದೆ. ಕೋವಿಡ್ ಲಸಿಕೆ ಪಡೆಯದವರು ಸಾರ್ವಜನಿಕವಾಗಿ ಕಾಣಿಸಿಕೊಂಡರೆ ಸಿಕ್ಕಸಿಕ್ಕಲ್ಲಿ ದಂಡ ವಿಧಿಸಲು ಮುಂದಾಗಿದೆ. ಇದನ್ನೂ ಓದಿ: ಕೋವ್ಯಾಕ್ಸಿನ್ ಪರೀಕ್ಷೆಗೆ 20 ಕೋತಿ ಹುಡುಕಿದ್ದು ಹೇಗೆ ಗೊತ್ತಾ?

    ಲಸಿಕೆ ಪಡೆಯದವರು ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಂಡರೆ 1450 ಯೂರೋ (1.23 ಲಕ್ಷ ರು.) ದಂಡ ವಿಧಿಸಲಾಗುತ್ತದೆ ಎಂದು ಸರ್ಕಾರ ಎಚ್ಚರಿಕೆ ನೀಡಿದೆ. ಆಸ್ಟ್ರಿಯಾದಲ್ಲಿ 89 ಲಕ್ಷ ಜನರಿದ್ದು, ಆ ಪೈಕಿ 20 ಲಕ್ಷ ಜನರು ಲಸಿಕೆ ಪಡೆದಿಲ್ಲ. ಅವರೆಲ್ಲರ ಮೇಲೆ ಸರ್ಕಾರದ ಹೊಸ ಆದೇಶ ಪರಿಣಾಮ ಬೀರಲಿದೆ. ಸಾರ್ವಜನಿಕರಿಗೆ ಲಸಿಕೆ ನೀಡಲು ಇಲ್ಲಿನ ಸರ್ಕಾರ ಉತ್ತೆಜನ ಕ್ರಮಗಳನ್ನು ಕೈಗೊಂಡಿದೆ. ಆದರೆ ಲಸಿಕೆ ಕುರಿತಾಗಿ ಸಂದೇಹ ಮತ್ತು ಅನುಮಾನ ಹೊಂದಿರುವ ಆಸ್ಟ್ರಿಯಾ ನಾಗರಿಕರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಯೂರೋಪ್ ರಾಷ್ಟ್ರಗಳು ಕೋವಿಡ್ ಹರಡುವಿಕೆಯ ಮೂಲವಾಗಿದೆ. ಈ ಹಿನ್ನೆಲೆಯಲ್ಲಿ ಲಾಕ್‍ಡೌನ್ ಕ್ರಮ ಕೈಗೊಳ್ಳಲಾಗಿದೆ.  ಇದನ್ನೂ ಓದಿ: ಇಂದಿನಿಂದ ಶಬರಿಮಲೆ ಯಾತ್ರೆ ಆರಂಭ – 2 ಡೋಸ್ ಲಸಿಕೆ ಕಡ್ಡಾಯ

    12 ವರ್ಷ ಮೇಲ್ಪಟ್ಟವರಿಗೆ ನಿಯಮ ಅನ್ವಯ: ಕೋವಿಡ್ ಲಸಿಕೆ ಪಡೆಯದ 12 ವರ್ಷ ಮೇಲ್ಪಟ್ಟದೇಶದ ಯಾವುದೇ ವ್ಯಕ್ತಿಯು ಅನಿವಾರ್ಯವಲ್ಲದ ಕಾರಣಕ್ಕೆ ಯಾವುದೇ ಕಾರಣಕ್ಕೂ ಮನೆಯಿಂದ ಹೊರಹೋಗುವಂತಿಲ್ಲ. ಒಂದು ವೇಳೆ ಹೊರಬಂದರೆ ಪೊಲೀಸರು ನಿಗಾ ವಹಿಸಲಿದ್ದಾರೆ. ಲಸಿಕೆ ಪಡೆಯದಿದ್ದರೆ ದಂಡ ವಿಧಿಸಲಿದ್ದಾರೆ. ವೈದ್ಯರ ಭೇಟಿ, ಲಸಿಕೆ ಪಡೆಯಲು ಹಾಗೂ ಆಹಾರ ಧಾನ್ಯ ಖರೀದಿಗೆ ಮಾತ್ರ ಮನೆಯಿಂದ ಹೊರಬರಬಹುದು ಎಂದು ಸರ್ಕಾರ ಹೇಳಿದೆ. ಎರಡೂ ಡೋಸ್ ಪಡೆಯದವರಿಗೆ ಈಗಾಗಲೇ ಮನರಂಜನಾ ಸ್ಥಳ, ರೆಸ್ಟೊರೆಂಟ್, ಸಲೂನ್ ಸೇರಿದಂತೆ ಸಾರ್ವಜನಿಕ ಪ್ರದೇಶದಲ್ಲಿ ನಿಷೇಧ ಹೇರಲಾಗಿದೆ. ಇದನ್ನೂ ಓದಿ: ಅಪ್ಪು ಮಾಡಿದ ಕೆಲಸಗಳನ್ನು ಮುಂದುವರಿಸಬೇಕು ಅಂದ್ಕೊಂಡಿದ್ದೇನೆ: ರಾಘವೇಂದ್ರ ರಾಜ್‍ಕುಮಾರ್

    ಈ ಬಗ್ಗೆ ವಿಯೆನ್ನಾದಲ್ಲಿ ಮಾತನಾಡಿದ ಚಾನ್ಸಲರ್ ಅಲೆಕ್ಸಾಂಡರ್ ಶಾಲೆನ್‍ಬರ್ಗ್ ಅವರು, ಕಳೆದ ಕೆಲ ದಿನಗಳಿಂದ ಕೋವಿಡ್ ಅಬ್ಬರ ತೀವ್ರವಾಗಿದ್ದು, ಆಸ್ಪತ್ರೆಗಳು ಸೋಂಕಿತರಿಂದ ತುಂಬಿ ತುಳುಕುತ್ತಿವೆ. ರೋಗಿಗಳನ್ನು ಗುಣಪಡಿಸುವ ಕಾಯಕದಲ್ಲಿ ವೈದ್ಯ ಸಿಬ್ಬಂದಿ ಹೈರಾಣಾಗಿದ್ದಾರೆ. ಆದರೆ ಸೋಂಕು ಮತ್ತಷ್ಟು ತೀವ್ರವಾದರೆ ಅದನ್ನು ನಿಭಾಯಿಸಲು ವೈದ್ಯರಿಂದ ಸಾಧ್ಯವಿಲ್ಲ. ದೇಶದ ಸರ್ಕಾರವಾಗಿ ಜನತೆಯನ್ನು ಕೋವಿಡ್‍ನಿಂದ ರಕ್ಷಿಸುವುದು ನಮ್ಮ ಜವಾಬ್ದಾರಿ. ಹೀಗಾಗಿ ಲಸಿಕೆ ಪಡೆಯದವರ ಮೇಲೆ ನಿರ್ಬಂಧ ಹೇರಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: ನಾಳೆ 3 ಗಂಟೆಗೆ ಅರಮನೆ ಮೈದಾನದಲ್ಲಿ ಪುನೀತ ನಮನ- 1,500 ಮಂದಿಗೆ ಮಾತ್ರ ಅವಕಾಶ