Tag: ಆಸ್ಟೇಲಿಯಾ

  • ಆಸ್ಟ್ರೇಲಿಯಾ ಬೀಚ್‌ನಲ್ಲಿ ಭೀಕರ ಹೆಲಿಕಾಪ್ಟರ್ ದುರಂತ – ನಾಲ್ವರು ಸಾವು, ಮೂವರಿಗೆ ಗಾಯ

    ಆಸ್ಟ್ರೇಲಿಯಾ ಬೀಚ್‌ನಲ್ಲಿ ಭೀಕರ ಹೆಲಿಕಾಪ್ಟರ್ ದುರಂತ – ನಾಲ್ವರು ಸಾವು, ಮೂವರಿಗೆ ಗಾಯ

    ಕ್ಯಾನ್ಬೆರಾ: ಪ್ರವಾಸಿಗರ ಹಾಟ್‌ಸ್ಪಾಟ್ ಎಂದೇ ಖ್ಯಾತಿಯಾಗಿರುವ ಆಸ್ಟ್ರೇಲಿಯಾದ (Australia) ಗೋಲ್ಡ್‌ಕೋಸ್ಟ್‌ ಬೀಚ್‌ನ (Gold Coast Beach) ಸೀ ವರ್ಲ್ಡ್ ಥೀಮ್ ಪಾರ್ಕ್ (World Theme Park) ಬಳಿ ನಡೆದ ಹೆಲಿಕಾಪ್ಟರ್ (Helicopters) ದುರಂತದಲ್ಲಿ ನಾಲ್ವರು ಪ್ರಯಾಣಿಕರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

    ಕಡಲತೀರದ ಪ್ರದೇಶದಲ್ಲಿ ಎರಡು ಹೆಲಿಕಾಪ್ಟರ್‌ಗಳ (Helicopters) ನಡುವೆ ಉಂಟಾದ ಘರ್ಷಣೆಯಲ್ಲಿ ಒಂದು ಹೆಲಿಕಾಪ್ಟರ್ ಸುರಕ್ಷಿತವಾಗಿ ಲ್ಯಾಂಡಿಂಗ್ ಆಗಿದ್ದು, ಮತ್ತೊಂದು ಹೆಲಿಕಾಪ್ಟರ್ ಸಂಪೂರ್ಣ ಛಿದ್ರ-ಛಿದ್ರವಾಗಿ, ಅವಶೇಷಗಳು ಮರಳಿನ ದಂಡೆಯ ಮೇಲೆ ಬಿದ್ದಿದೆ. ಇದನ್ನೂ ಓದಿ: ರೂಪೇಶ್ ಗೆ ಬಿಗ್ ಬಾಸ್ ಕೊಟ್ಟಿದ್ದು 60 ಲಕ್ಷ: ನಿಜವಾಗಿಯೂ ಅವರ ಕೈಗೆ ಬರೋದೆಷ್ಟು?

    ಹೆಲಿಕಾಪ್ಟರ್ (Helicopters) ಡಿಕ್ಕಿಯಾಗಿ 4 ಜನರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವುದಾಗಿ ಕ್ವೀನ್ಸ್‌ಲ್ಯಾಂಡ್‌ ರಾಜ್ಯ ಪೊಲೀಸ್ ಕಾರ್ಯನಿರ್ವಾಹಕ ಇನ್ಸ್ಪೆಕ್ಟರ್ ಗ್ಯಾರಿ ವೊರೆಲ್ ವಿವರಿಸಿದ್ದಾರೆ. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಗುಟ್ಕಾ ತಿಂದು ಉಗುಳಿದಕ್ಕೆ ಗಲಾಟೆ – ಕೊಲೆಯಲ್ಲಿ ಅಂತ್ಯ

    ಕ್ವೀನ್ಸ್‌ಲ್ಯಾಂಡ್‌ ರಾಜ್ಯದ ಬ್ರಿಸ್ಬೇನ್‌ನಿಂದ ದಕ್ಷಿಣಕ್ಕೆ 45 ಮೈಲುಗಳಷ್ಟು ದೂರದಲ್ಲಿ ಗೋಲ್ಡ್ ಕೋಸ್ಟ್ ಬೀಚ್ ಇದೆ. ಈ ಪ್ರದೇಶವು ಆಸ್ಟ್ರೇಲಿಯಾದ ಅತ್ಯಂತ ಜನಪ್ರಿಯ ಪ್ರವಾಸೋದ್ಯಮ ತಾಣಗಳಲ್ಲಿ ಒಂದಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಟೀಂ ಇಂಡಿಯಾ ಆಟಗಾರರ ಬಿಲ್ ಪಾವತಿಸಿದ ಫ್ಯಾನ್- ವಿಡಿಯೋ ಫುಲ್ ವೈರಲ್

    ಟೀಂ ಇಂಡಿಯಾ ಆಟಗಾರರ ಬಿಲ್ ಪಾವತಿಸಿದ ಫ್ಯಾನ್- ವಿಡಿಯೋ ಫುಲ್ ವೈರಲ್

    ಮೆಲ್ಬರ್ನ್: ಆಸ್ಟ್ರೇಲಿಯಾದ ವಿರುದ್ಧದ ಟೆಸ್ಟ್ ಸರಣಿಗೆಂದು ಹೋಗಿರುವ ಭಾರತೀಯ ಆಟಗಾರರ ಊಟದ ಬಿಲ್ ಪಾವತಿಸುವ ಮೂಲಕ ಅಭಿಮಾನಿಯೊಬ್ಬ ತನ್ನ ಅಭಿಮಾನವನ್ನು ಮೆರೆದಿದ್ದಾನೆ.

    ತಮ್ಮ ನೆಚ್ಚಿನ ಆಟಗಾರರ ಹತ್ತಿರ ಒಂದು ಆಟೋಗ್ರಾಫ್ ತೆಗೆದುಕೊಳ್ಳುವುದು ಇತ್ತೀಚೆಗೆ ಕಷ್ಟವಾಗಿದೆ. ಆದ್ರೆ ಅಭಿಮಾನಿ ನವಲ್‌ದೀಪ್‌ ಸಿಂಗ್‌  ಆಟಗಾರರ ಹೋಟೆಲ್ ಬಿಲ್ ಪಾವತಿಸುವುದರ ಜೊತೆಗೆ ಸುಲಭವಾಗಿ ಫೋಟೊವನ್ನು ಕ್ಲಿಕ್ಕಿಸಿಕೊಂಡಿದ್ದಾನೆ. ಜೊತೆಗೆ ಅವರು ಕುಳಿತು ವಿಶ್ರಾಂತಿ ಪಡೆಯುತ್ತಿರುವ ಪುಟ್ಟ ವಿಡಿಯೋ ತುಣುಕನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾನೆ.

    ಟೆಸ್ಟ್ ಪಂದ್ಯಕ್ಕಾಗಿ ಆಸ್ಟ್ರೇಲಿಯಾದ ಮೆಲ್ಬರ್ನ್‍ಗೆ ಹೋಗಿರುವ ಭಾರತೀಯ ಆಟಗಾರರು ಅಲ್ಲಿನ ರೆಸ್ಟೋರೆಂಟ್ ಒಂದಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿಗೆ ಪತ್ನಿ ಜೊತೆ ಅಭಿಮಾನಿ ನವ್‍ದೀಪ್ ಸಿಂಗ್ ಬಂದಿದ್ದಾರೆ.

    ತಮ್ಮ ಮುಂದಿನ ಟೇಬಲ್‍ನಲ್ಲಿ ಕುಳಿತ್ತಿದ್ದ ರೋಹಿತ್ ಶರ್ಮಾ, ನವ್‍ದೀಪ್ ಸೈನಿ, ರಿಷಬ್ ಪಂತ್ ಮತ್ತು ಶುಭ್‍ಮನ್ ಗಿಲ್‍ನನ್ನು ಗುರುತಿಸಿ ಸಂತಸಗೊಂಡಿದ್ದಾರೆ. ಅವರ ಮುಂದಿನ ಟೇಬಲ್‍ನಲ್ಲಿಯೇ ಕ್ರಿಕೆಟ್ ತಾರೆಯರು ಕುಳಿತಿರುವುದನ್ನು ನೋಡಿ ಹೊಟ್ಟೆ ಹಸಿವಿಲ್ಲದಿದ್ದರೂ ಏನಾದರೂ ಆರ್ಡರ್ ಮಾಡಿ ಕುಳಿತುಕೊಂಡು ಕ್ರಿಕೆಟ್ ತಾರೆಯನ್ನು ನೋಡಿ ಕಣ್ತುಂಬಿಕೊಂಡಿದ್ದಾರೆ.

    ಆಟಗಾರರು ಆರ್ಡರ್ ಮಾಡಿದ್ದ ಫುಡ್ ಬಿಲ್‍ನನ್ನು ಕೂಡ ನವಲ್‌ದೀಪ್‌  ಪಾವತಿಸಿದ್ದಾನೆ. ನಂತರ ರೋಹಿತ್ ಶರ್ಮಾ ರೆಸ್ಟೋರೆಂಟ್‍ನವರ ಬಳಿ ಬಿಲ್ ಕೇಳಿದಾಗ ಅಭಿಮಾನಿಯೊಬ್ಬರು ಈಗಾಗಲೇ ಬಿಲ್ ಪಾವತಿಸಿರುವುದಾಗಿ ತಿಳಿಸಿದ್ದಾರೆ.

    ಯಾರು ಎಂದು ತಿಳಿದ ರೋಹಿತ್ ಮತ್ತು ಕ್ರಿಕೆಟಿಗರು ಸಂಕೋಚದಿಂದ ಹಣವನ್ನು ಅಭಿಮಾನಿ ನವಲ್‌ದೀಪ್‌ ಹಿಂತಿರುಗಿಸಲು ಹೋದಾಗ ನವಲ್‌ದೀಪ್‌,  ಬೇಡ ಸರ್ ಇದು ಅಭಿಮಾನಿಯ ಅಭಿಮಾನದ ಪ್ರೀತಿ ನಿರಾಕರಿಸಬೇಡಿ ಎಂದು ಮನವಿ ಮಾಡಿದ್ದಾರೆ.

    ಲಂಚ್ ಕೊಡಿಸಿದ್ದಕ್ಕೆ ಥ್ಯಾಂಕ್ಸ್ ಬಾಬಿ ಎಂದು ಪಂತ್ ಹೇಳಿದ್ದಾರೆ. ಜೊತೆಗೆ ಕ್ರಿಕೆಟಿಗರ ಜೊತೆ ನಿಂತು ನವಲ್‌ದೀಪ್‌ ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಪಾವತಿಸಿದ ಬಿಲ್, ಫುಡ್, ಫೋಟೋ ಮತ್ತು ಸಣ್ಣ ವಿಡಿಯೋವನ್ನು ಸೋಷಿಯಲ್ ಮೀಡಿಯಾನಲ್ಲಿ ಶೇರ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.

  • ವಿದೇಶಕ್ಕೆ ಹೋಗಲು ಅಣ್ಣನನ್ನೇ ಮದ್ವೆಯಾದ ಸೋದರಿ..!

    ವಿದೇಶಕ್ಕೆ ಹೋಗಲು ಅಣ್ಣನನ್ನೇ ಮದ್ವೆಯಾದ ಸೋದರಿ..!

    ಚಂಡೀಗಢ: ಸಂಬಂಧದಲ್ಲಿ ಅಣ್ಣನಾಗಬೇಕಿದ್ದವನ ಜೊತೆ ಮದ್ವೆಯಾಗಿದೆ ಎಂದು ನಕಲಿ ದಾಖಲೆ ಸೃಷ್ಠಿಸಿ ತನ್ನ ಆಸೆ ಪೂರೈಸಿಕೊಂಡಿದ್ದು, ಈಗ ಯುವತಿ ಸಿಕ್ಕಿಬಿದ್ದ ಘಟನೆ ಪಂಜಾಬ್ ನಲ್ಲಿ ನಡೆದಿದೆ.

    ಯುವತಿಯ ಸೋದರ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದನು. ಹೀಗಾಗಿ ತಾನೂ ಆಸ್ಟ್ರೇಲಿಯಾಗೆ ತೆರಳಬೇಕೆಂಬ ಬಯಕೆ ಹೊಂದಿದ್ದ ಯುವತಿ, ಸಹೋದರನೊಂದಿಗೆ ಮದುವೆಯಾಗಿದೆ ಎಂದು ನಕಲಿ ದಾಖಲೆ ಸೃಷ್ಟಿಸಿದ್ದಾಳೆ.

    ಅದರಂತೆಯೇ ಆಕೆ ತಮ್ಮ ಮದುವೆಯನ್ನು ನೋಂದಾಯಿಸಲು ಪಂಜಾಬ್ ನ ನ್ಯಾಯಾಲಯಕ್ಕೆ ಆಸ್ಟ್ರೇಲಿಯಾದ ವೀಸಾವನ್ನು ಹೊಂದಿದ್ದ ಅಣ್ಣನ ದಾಖಲೆಗಳನ್ನು ಉಪಯೋಗಿಸಿಕೊಂಡಿದ್ದಾಳೆ. ಬಳಿಕ ಪಾಸ್‍ಪೋರ್ಟ್ ಮಾಡಿಸಿಕೊಂಡು ಆಸ್ಟ್ರೇಲಿಯಾಕ್ಕೆ ತೆರಳಿದ್ದಾಳೆ.

    ಯುವತಿಯ ಮೋಸದ ಬಗ್ಗೆ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಯುವತಿ ಸಾಮಾಜಿಕ, ಕಾನೂನು ಮತ್ತು ಧಾರ್ಮಿಕ ವ್ಯವಸ್ಥೆಗಳನ್ನು ದುರುಪಯೋಗ ಮಾಡಿಕೊಂಡಿದ್ದಾಳೆ. ವಿದೇಶಕ್ಕೆ ಹೋಗಬೇಕೆಂಬ ಹುಚ್ಚು ಹಠದಿಂದ ಈ ರೀತಿ ಮಾಡಿದ್ದಾಳೆ. ಸದ್ಯಕ್ಕೆ ನಾವು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.

    ಜೋಡಿಯು ನೀಡಿದ್ದ ಎಲ್ಲ ದಾಖಲೆಗಳನ್ನು ಅಧಿಕಾರಿಗಳು ಸಂಪೂರ್ಣವಾಗಿ ಪರಿಶೀಲಿಸಿದ್ದಾರೆ. ಕಳೆದ 4 ವರ್ಷಗಳಲ್ಲಿ ಆಸ್ಟ್ರೇಲಿಯಾಕ್ಕೆ ಭೇಟಿ ನೀಡುತ್ತಿರುವ 1500 ಕ್ಕಿಂತ ಹೆಚ್ಚು ವಿದೇಶಿಯರು ತಮ್ಮ ವಿದೇಶಿ ವೀಸಾಗಳನ್ನು ತಿರಸ್ಕರಿಸುತ್ತಿದ್ದಾರೆ ಎಂದು ಆಸ್ಟ್ರೇಲಿಯಾದ ಗೃಹ ವ್ಯವಹಾರಗಳ ಇಲಾಖೆ ತಿಳಿಸಿದೆ.

    ಈ ಕುರಿತು ಆರು ಮಂದಿಯ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಆದರೆ ಈವರೆಗೂ ಯಾರೊಬ್ಬರನ್ನು ಬಂಧಿಸಲು ಸಾಧ್ಯವಾಗಲಿಲ್ಲ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಆಸೀಸ್ ಮೊದಲ ಟೆಸ್ಟ್ ಮುನ್ನವೇ ಟೀಂ ಇಂಡಿಯಾಗೆ ಆಘಾತ

    ಆಸೀಸ್ ಮೊದಲ ಟೆಸ್ಟ್ ಮುನ್ನವೇ ಟೀಂ ಇಂಡಿಯಾಗೆ ಆಘಾತ

    ಸಿಡ್ನಿ: ಆಸ್ಟೇಲಿಯಾ ವಿರುದ್ಧದ ಮೊದಲ ಟೆಸ್ಟ್ ಆರಂಭಕ್ಕೆ 6 ದಿನಗಳು ಬಾಕಿ ಇರುವ ಸಮಯದಲ್ಲೇ ಟೀಂ ಇಂಡಿಯಾಗೆ ಮೊದಲ ಅಘಾತ ಎದುರಾಗಿದ್ದು, ತಂಡ ಯುವ ಬ್ಯಾಟ್ಸ್‍ಮನ್ ಪೃಥ್ವಿ ಶಾ ಮೊದಲ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ.

    ಟೀಂ ಇಂಡಿಯಾ ಆಸೀಸ್ ವಿರುದ್ಧ ಅಭ್ಯಾಸ ಪಂದ್ಯ ಆಡುತ್ತಿದ್ದು, ಈ ವೇಳೆ ಫೀಲ್ಡಿಂಗ್ ಮಾಡುತ್ತಿದ್ದ ಪೃಥ್ವಿ ಶಾ ಕ್ಯಾಚ್ ಪಡೆಯುವ ಸಂರ್ಭದಲ್ಲಿ ಗಾಯಗೊಂಡಿದ್ದು, ಅಭ್ಯಾಸ ಪಂದ್ಯದ ಮೂರನೇ ದಿನದಾಟದ ವೇಳೆ ಆಸೀಸ್ ಆರಂಭಿಕ ಬ್ಯಾಟ್ಸ್‍ಮನ್ ಮ್ಯಾಕ್ಸ್ ಬ್ರಯಾಂಟ್ ಸಿಡಿಸಿದ ಚೆಂಡನ್ನು ಕ್ಯಾಚ್ ಪಡೆಯಲು ಪೃಥ್ವಿ ಶಾ ಪ್ರಯತ್ನಿಸಿದರು. ಆದರೆ ಈ ವೇಳೆ ಪೃಥ್ವಿ ಅವರ ಬಲಗಾಲಿನ ಪಾದ 90 ಡಿಗ್ರಿ ಸ್ಥಿತಿಯಲ್ಲಿ ತಿರುಗಿ ನೆಲಕ್ಕೆ ಬಿದ್ದಿದ್ದಾರೆ. ಇದರಿಂದ ಹೆಚ್ಚು ನೋವು ಅನುಭವಿಸಿದ ಪೃಥ್ವಿ ಶಾ ರನ್ನು ಟೀಂ ಇಂಡಿಯಾ ವೈದ್ಯಕೀಯ ಸಿಬ್ಬಂದಿ ಹೊತ್ತು ಮೈದಾನದಿಂದ ಹೊತ್ತು ಸಾಗಿಸಿದರು.

    ಈ ಕುರಿತು ಟ್ವೀಟ್ ಮಾಡಿರುವ ಬಿಸಿಸಿಐ, ಆಡಿಲೇಡ್‍ನಲ್ಲಿ ಡಿಸೆಂಬರ್ 6 ರಿಂದ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯದಿಂದ ಟೀಂ ಇಂಡಿಯಾ ಯುವ ಆಟಗಾರ ಪೃಥ್ವಿ ಶಾ ಅಲಭ್ಯರಾಗಿದ್ದಾರೆ ಎಂದು ಬರೆದುಕೊಂಡಿದೆ. ಅಲ್ಲದೇ ಪೃಥ್ವಿ ಶಾ ಅವರ ಕಾಲಿಗೆ ಇಂದು ಬೆಳಗ್ಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಅವರಿಗೆ ಚಿಕಿತ್ಸೆ ಹಾಗೂ ವಿಶ್ರಾಂತಿಯ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ.

    ವೆಸ್ಟ್ ಇಂಡೀಸ್ ವಿರುದ್ಧ ಪಾದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿದ ಪೃಥ್ವಿ ಶಾ, ಆಸೀಸ್ ವಿರುದ್ಧ ನಡೆಯುತ್ತಿರುವ ಅಭ್ಯಾಸ ಪಂದ್ಯದ ಇನ್ನಿಂಗ್ಸ್‍ನಲ್ಲಿ ಅರ್ಧ ಶತಕ ಸಿಡಿಸಿ ಮಿಂಚಿದ್ದರು. ಸದ್ಯ ಪೃಥ್ವಿ ಶಾರ ಗೈರು ಹಾಜರಿಯಿಂದ ಟೀಂ ಇಂಡಿಯಾ ಆಯ್ಕೆ ಸಮಿತಿಗೆ ತಲೆನೋವು ಉಂಟಾಗಿದ್ದು, ಮೊದಲ ಟೆಸ್ಟ್ ಆರಂಭಿಕ ಜೋಡಿಯಾಗಿ ಮುರಳಿ ವಿಜಯ್ ಅಥವಾ ಕೆಎಲ್ ರಾಹುಲ್ ಕಣಕ್ಕೆ ಇಳಿಯುವ ಸಾಧ್ಯತೆಯಿದೆ.

    2 ಟೆಸ್ಟ್ ಪಂದ್ಯದ ಮೂರು ಇನ್ನಿಂಗ್ಸ್ ಆಡಿ 237 ರನ್ ಹೊಡೆದಿದರುವ ಪೃಥ್ವಿ ಶಾ ಒಂದು ಶತಕ, ಒಂದು ಅರ್ಧಶತಕ ಹೊಡೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಅತಿ ಆತ್ಮವಿಶ್ವಾಸದಿಂದ ಎಡವಟ್ಟು ಮಾಡಿಕೊಂಡ ಪಾಕ್ ಬ್ಯಾಟ್ಸ್‌ಮನ್ – ವಿಡಿಯೋ ನೋಡಿ

    ಅತಿ ಆತ್ಮವಿಶ್ವಾಸದಿಂದ ಎಡವಟ್ಟು ಮಾಡಿಕೊಂಡ ಪಾಕ್ ಬ್ಯಾಟ್ಸ್‌ಮನ್ – ವಿಡಿಯೋ ನೋಡಿ

    ದುಬೈ: ಇಲ್ಲಿನ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಾಕ್ ಹಾಗೂ ಆಸೀಸ್ ನಡುವಿನ 2ನೇ ಟೆಸ್ಟ್ ಪಂದ್ಯದಲ್ಲಿ ಪಾಕ್ ಬ್ಯಾಟ್ಸ್‌ಮನ್ ಅಝರ್ ಅಲಿ ಹಾಸ್ಯಾಸ್ಪದ ರೀತಿಯಲ್ಲಿ ಔಟಾಗುವ ಮೂಲಕ ಸುದ್ದಿಯಾಗಿದ್ದಾರೆ.

    ಟೆಸ್ಟ್ 3ನೇ ದಿನದಾಟದ 53ನೇ ಓವರ್ ಬೌಲ್ ಮಾಡುತ್ತಿದ್ದ ಪೀಟರ್ ಸಿಡ್ಲ್ ಎಸೆತವನ್ನ ಅಲಿ ಬೌಂಡರಿಯತ್ತ ಬಾರಿಸಿದ್ದರು. ವೇಗವಾಗಿ ಸಾಗುತ್ತಿದ್ದ ಚೆಂಡನ್ನು ಕಂಡ ಅಲಿ ಬೌಂಡರಿ ತಲುಪುತ್ತದೆ ಎಂಬ ಅತಿ ಆತ್ಮವಿಶ್ವಾದಿಂದ ರನ್ ಗಳಿಸದೇ ಮತ್ತೊಂದು ತುದಿಯಲ್ಲಿದ್ದ ಬ್ಯಾಟ್ಸ್‌ಮನ್ ಅಸಾದ್ ಶಫಿಕ್ ರೊಂದಿಗೆ ಮಾತುಕತೆಗಿಳಿದಿದ್ದರು.

    https://twitter.com/floz_11/status/1052815846907596801

    ಈ ವೇಳೆ ಬೌಂಡರಿಯಲ್ಲಿದ್ದ ಮಿಚಲ್ ಸ್ಟರ್ಕ್ ಬಾಲ್ ಪಡೆದು ಕೀಪರ್ ನತ್ತ ಎಸೆದರು. ಬಾಲ್ ಪಡೆದ ಕೀಪರ್ ಟಿಮ್ ಪೈನೆ ರನೌಟ್ ಮಾಡಿ ಸಂಭ್ರಮಿಸಲು ಆರಂಭಿಸಿದರು. ಯಾವುದರ ಅರಿವು ಇಲ್ಲದ 64 ರನ್ ಗಳಿಸಿದ್ದ ಅಲಿ ಅಂಪೈರ್ ಔಟ್ ನೀಡುತ್ತಿದಂತೆ ಪೆವಿಲಿಯನ್ ಕಡೆ ಮುಖ ಮಾಡಿದರು. ಇದರೊಂದಿಗೆ ಪಾಕ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ 4ನೇ ವಿಕೆಟ್ ಕಳೆದುಕೊಂಡಿತ್ತು.

    ಪಂದ್ಯದ ಮೇಲೆ ಎರಡು ತಂಡಗಳು ಬಿಗಿ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದ್ದು, ಪಾಕ್ 538 ರನ್ ಮುನ್ನಡೆ ಪಡೆದು 2ನೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ. ಇತ್ತ ಮೊದಲ ಇನ್ನಿಂಗ್ಸ್ ನಲ್ಲಿ 145 ರನ್ ಗಳಿಗೆ ಅಲೌಟ್ ಆಗಿದ್ದ ಆಸೀಸ್ 2ನೇ ಇನ್ನಿಂಗ್ಸ್ ನಲ್ಲಿ ಉತ್ತಮ ಪ್ರದರ್ಶನ ನೀಡಿ ತಿರುಗೇಟು ನೀಡುವ ವಿಶ್ವಾಸದಲ್ಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://twitter.com/floz_11/status/1052812986325204992

  • ಡೈವ್ ಮಾಡಿ ಸೂಪರ್ ಕ್ಯಾಚ್ – ಆಫ್ರಿಕಾದ ಡೀನ್ ಎಲ್ಗನ್ ವಿಡಿಯೋ ವೈರಲ್

    ಡೈವ್ ಮಾಡಿ ಸೂಪರ್ ಕ್ಯಾಚ್ – ಆಫ್ರಿಕಾದ ಡೀನ್ ಎಲ್ಗನ್ ವಿಡಿಯೋ ವೈರಲ್

    ಜೋಹನ್ಸ್ ಬರ್ಗ್: ಕ್ರಿಕೆಟ್ ನಲ್ಲಿ ಹಲವರು ಕ್ಯಾಚ್‍ಗಳನ್ನು ನೀವು ನೋಡಿರುತ್ತೀರಿ. ಕೆಲವು ಸಾಮಾನ್ಯ ಕ್ಯಾಚ್ ಗಳಾದರೆ ಕೆಲವು ಮರೆಯಲಾಗದಂತಹವು. ಇಂತಹದ್ದೇ ಸರ್ವಶ್ರೇಷ್ಠ ಎನ್ನಬಹುದಾದ ಕ್ಯಾಚ್ ಆಸೀಸ್ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಪಂದ್ಯದಲ್ಲಿ ದಾಖಲಾಗಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಜೋಹನ್ಸ್ ಬರ್ಗ್ ನಡೆಯುತ್ತಿರುವ ನಾಲ್ಕು ಮತ್ತು ಕೊನೆಯ ಟೆಸ್ಟ್ ನಲ್ಲಿ ಆಸ್ಟ್ರೇಲಿಯಾ – ದಕ್ಷಿಣ ಆಫ್ರಿಕಾದ ನಡುವಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಡೀನ್ ಎಲ್ಗರ್ ಪಡೆದ ಕ್ಯಾಚ್ ಇದೀಗ ಕ್ರಿಕೆಟ್ ಪ್ರೇಮಿಗಳನ್ನು ನಿಬ್ಬೆರಗಾಗುವಂತೆ ಮಾಡಿದೆ.

    ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್ ನಲ್ಲಿ 488 ರನ್ ಗಳಿದ ವೇಳೆ ಅಲೌಟ್ ಆಗಿತ್ತು, ಬಳಿಕ ಆಸ್ಟ್ರೇಲಿಯಾ 288 ರನ್ ಗಳಿಗೆ 9 ವಿಕೆಟ್ ಕಳೆದು ಕೊಂಡಿತ್ತು. ಈ ವೇಳೆ ಅಸೀಸ್ ನಾಯಕ ಟೀಮ್ ಪೈನೆ (62), ರಬಡ ಬೌಲಿಂಗ್ ವೇಳೆ ಸಿಡಿಸಿದ ಚೆಂಡನ್ನು ಎಲ್ಗರ್ ಚಿರತೆಯಂತೆ ಜಂಪ್ ಮಾಡಿ ಕ್ಯಾಚ್ ಪಡೆದರು.

    ಇದೇ ವೇಳೆ ವಿಕ್ಷಕ ವಿವರಣೆ ನೀಡುತ್ತಿದ್ದ ಆಫ್ರಿಕಾ ತಂಡದ ಮಾಜಿ ಸ್ಮಿತ್ ಸಹ ಅಚ್ಚರಿಗೊಂಡರು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ.

    https://www.youtube.com/watch?v=iM_dQb-q_9U&utm_source=inshorts&utm_medium=referral&utm_campaign=fullarticle

  • ಮಾಂಸದ ಮೂಲ ತೋರಿಸಲು ಮೃತ ಹಸುವನ್ನೇ ನೇತುಹಾಕಿದ್ರು!

    ಮಾಂಸದ ಮೂಲ ತೋರಿಸಲು ಮೃತ ಹಸುವನ್ನೇ ನೇತುಹಾಕಿದ್ರು!

    ಅಡಿಲೆಡ್: ಆಸ್ಟ್ರೇಲಿಯಾದ ಪಿಜ್ಜಾ ರೆಸ್ಟೋರೆಂಟ್ ಆವರಣದಲ್ಲಿ ಭಾರೀ ಗಾತ್ರದ ಮೃತ ಹಸುವಿನ ದೇಹವನ್ನು ನೇತು ಹಾಕಲಾಗಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ.

    ಇಟಿಕಾ ಹೆಸರಿನ ರೆಸ್ಟೋರೆಂಟ್ ತನ್ನ ಗ್ರಾಹಕರಿಗೆ ಹಸುವಿನ ಮಾಂಸ ಹಾಗೂ ಇತರೆ ಉತ್ಪನ್ನಗಳನ್ನು ಪೂರೈಸುತ್ತಿದೆ. ಈ ರೆಸ್ಟೋರೆಂಟ್ ಮಾಲೀಕರಾದ ಫೆಡೆರಿಕೊ ಮತ್ತು ಮೆಲಿಸಾ ಪಿಸಾನೆಲ್ಲಿ ನಾವು ಗ್ರಾಹಕರಲ್ಲಿ ಜಾಗೃತಿಯನ್ನು ಮೂಡಿಸುವ ಸಲುವಾಗಿ ಬಹಳ ಪ್ರಯತ್ನ ಪಟ್ಟಿದ್ದು, ಎಲ್ಲರಿಗೂ ತಾವು ಸೇವಿಸುವ ಮಾಂಸ ಎಲ್ಲಿಂದ ಬರುತ್ತದೆ ಎಂಬುದನ್ನು ತಿಳಿದುಕೊಳ್ಳಲಿ ಎಂದು ಈ ರೀತಿ ಮಾಡಿರುವುದಾಗಿ ತಮ್ಮನ್ನು ಸಮರ್ಥಿಸಿ ಕೊಂಡಿದ್ದಾರೆ.

     

    ರೆಸ್ಟೋರೆಂಟ್ ಮಾಲೀಕರ ಕ್ರಮವನ್ನು ಹಲವರು ಟೀಕಿಸಿ ಇದೊಂದು ಅಮಾನವೀಯ ಘಟನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಹೈನುಗಾರಿಕೆಯ ಕೈಗಾರೀಕರಣದತ್ತ ಹೆಚ್ಚಿನ ಜನರನ್ನು ಸೆಳೆಯುವುದು, ಒಂದು ಉತ್ತಮ ಆರೋಗ್ಯಕರ ಉದ್ಯಮವನ್ನು ಬೆಳೆಸುವುದು ನಮ್ಮ ಉದ್ದೇಶವಾಗಿದೆ ಎಂದು ಮೆಲಿಸಾ ಪಿಸಾನೆಲ್ಲಿ ತಿಳಿಸಿದ್ದಾರೆ. ಆದರೆ ರೆಸ್ಟೋರೆಂಟ್‍ನ ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಚರ್ಚೆಯಾಗುತ್ತಿದ್ದು, ಹಲವಾರು ತಮ್ಮ ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

    ರೆಸ್ಟೋರೆಂಟ್‍ನ ಈ ಕ್ರಮವು ಅತ್ಯಂತ ಕ್ರೂರ ಹಾಗೂ ಅಜ್ಞಾನದಿಂದ ಕೂಡಿದೆ ಎಂದು ಒಬ್ಬರು ಆರೋಪಿಸಿದರೆ, ಮತ್ತೊಬ್ಬರು ನಾವು ತಿನ್ನುವ ಆಹಾರ ಎಲ್ಲಿಂದ ಬರುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಅಷ್ಟೇ ಮುಖ್ಯ ಎಂದು ಪ್ರತಿಕ್ರಿಯಿಸಿದ್ದಾರೆ.

    ಕೇವಲ ಕೆಲವು ರೆಸ್ಟೋರೆಂಟ್‍ಗಳು ಮಾತ್ರ ತಾವು ಎಲ್ಲಿಂದ ಆಹಾರವನ್ನು ಪಡೆಯುತ್ತಿದ್ದೇವೆ ಎಂಬುದನ್ನು ತಿಳಿಸುತ್ತವೆ. ಮಾಂಸವು ಸೂಪರ್ ಮಾರ್ಕೆಟ್‍ನಿಂದ ಬರುತ್ತದೆ ಎಂಬ ಭಾವನೆಯನ್ನು ತೊರೆದು, ಅದರ ಹಿಂದಿನ ಪ್ರಾಣಿಗಳ ನೋವು ಹಾಗೂ ಸಂಕಟಗಳನ್ನು ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ. ನಿಮ್ಮ ರೆಸ್ಟೋರೆಂಟ್ ಸಸ್ಯಹಾರಿಯಾಗಿದ್ದಾರೆ ಇದು ಉತ್ತಮ ಅರ್ಥವನ್ನು ನೀಡುತ್ತದೆ, ಆದರೆ ನಿಮ್ಮದೇ ಕಾರಣಗಳಿಗಾಗಿ ಹಸುವನ್ನು ಇಂದು ಅಲಂಕಾರಿಕ ವಸ್ತುವಾಗಿ ಒಳಸುತ್ತಿದ್ದೀರ ಎಂಬ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ನಮ್ಮ ಈ ಪ್ರಯತ್ನಕ್ಕೆ ಹಲವರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಇದರಲ್ಲಿ ಕೆಲವರು ನಮಗೆ ಮೆಚ್ಚುಗೆಯನ್ನು ಸೂಚಿಸಿದರೆ, ಮತ್ತೆ ಕೆಲವರು ಬೇಸರವನ್ನು ವ್ಯಕ್ತ ಪಡಿಸಿದ್ದಾರೆ ಎಂದು ಪಿಸಾನೆಲ್ಲಿ ಹೇಳಿದ್ದಾರೆ.