Tag: ಆಸ್ಕರ್ 2022

  • ಹೌದು, ನಾನು ತಪ್ಪು ಮಾಡಿದೆ ಕ್ಷಮಿಸಿ : ವಿಲ್ ಸ್ಮಿತ್

    ಹೌದು, ನಾನು ತಪ್ಪು ಮಾಡಿದೆ ಕ್ಷಮಿಸಿ : ವಿಲ್ ಸ್ಮಿತ್

    ಸ್ಕರ್ ಪ್ರಶಸ್ತಿ 2022 ಅತ್ಯುತ್ತಮ ನಟ ಪ್ರಶಸ್ತಿ ವಿಜೇತ ವಿಲ್ ಸ್ಮಿತ್ ಸಮಾರಂಭದಲ್ಲಿ ಹಾಸ್ಯನಟ ಕ್ರಿಸ್ ರಾಕ್‌ಗೆ ವೇದಿಕೆ ಮೇಲೆಯೇ ಕಪಾಳಮೋಕ್ಷ ಮಾಡಿದ್ದರು. ನಂತರ ಪ್ರಶಸ್ತಿ ಸ್ವೀಕರಿಸಿ ಭಾವನಾತ್ಮಕವಾಗಿ ಮಾತನಾಡಿದ ಅವರು, ಕ್ರಿಸ್ ರಾಕ್ಗೆ ಕ್ಷಮೆ ಕೇಳಿರಲಿಲ್ಲ. ಈ ಘಟನೆ ಬಗ್ಗೆ ಮಿಶ್ರ ಪ್ರತಿಕ್ರಿಯೆ ಬರುತ್ತಿತ್ತು. ಕೆಲವರು ಇದು ವೇದಿಕೆಗೆ ತೋರಿಸುವ ಗೌರವವಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಈ ಹಿನ್ನೆಲೆ ಸೋಮವಾರ ರಾತ್ರಿ ವಿಲ್ ಸ್ಮಿತ್ ಸೋಶಿಯಲ್ ಮೀಡಯಾದಲ್ಲಿ ಕ್ರಿಸ್ ಅವರಿಗೆ ಕ್ಷಮೆಯಾಚಿಸಿದ್ದಾರೆ.

    Oscars 2022: Chris Rock declines to file police report after Will Smith slap | Hollywood – Gulf News

    ಕ್ರಿಸ್ ರಾಕ್ ಆಸ್ಕರ್ 2022 ನಿರೂಪಣೆ ಮಾಡುತ್ತಿದ್ದು, ವಿಲ್ ಸ್ಮಿತ್ ಅವರಿಗೆ ಪ್ರಶಸ್ತಿ ಘೋಷಣೆಯಾದ ಮೇಲೆ ಅವರು ವೇದಿಕೆಗೆ ಬಂದಿದ್ದಾರೆ. ಈ ವೇಳೆ ಕ್ರಿಸ್, ವಿಲ್ ಸ್ಮಿತ್ ಪತ್ನಿ ಜಡಾ ಪಿಂಕೆಟ್ ಅವರ ಕೂದಲಿನ ಬಗ್ಗೆ ಹಾಸ್ಯ ಮಾಡಿದ್ದಾರೆ. ಇದರಿಂದ ಕೋಪಕೊಂಡ ವಿಲ್ಸ್ಮಿತ್, ಕ್ರಿಸ್‌ಗೆ ವೇದಿಕೆ ಮೇಲೆಯೇ ಕಪಾಳಮೋಕ್ಷ ಮಾಡಿದ್ದಾರೆ. ನಂತರ ಅವರು ಭಾವನಾತ್ಮಕವಾಗಿ ಆಸ್ಕರ್ ಪ್ರಶಸ್ತಿ ಸ್ವೀಕರಿಸಿ ಭಾಷಣವನ್ನು ಮಾಡಿದ್ದಾರೆ. ಆದರೆ ಈ ವೇಳೆ ಅವರು ಕ್ರಿಸ್ಗೆ ಕ್ಷಮೆಯಾಚಿಸಿಲ್ಲ. ಇದನ್ನೂ ಓದಿ: ‘Lockup’ ಶೋಗೆ ಬರುವಂತೆ ವಿಲ್ ಸ್ಮಿತ್‍ಗೆ ಆಫರ್ ಕೊಟ್ಟ ಕ್ವಿನ್ ಕಂಗನಾ

     

    View this post on Instagram

     

    A post shared by Will Smith (@willsmith)

    ಸೋಮವಾರ ರಾತ್ರಿ ಇನ್ಸ್ಟಾಗ್ರಾಮ್‌ನಲ್ಲಿ ವಿಲ್ ಸ್ಮಿತ್, ಕ್ರಿಸ್, ನಾನು ನಿಮ್ಮಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸಲು ಬಯಸುತ್ತೇನೆ. ನಾನು ವೇದಿಕೆ ಮೇಲೆ ಮೀತಿಮೀರಿ ನಡೆದುಕೊಂಡಿದ್ದೆ. ಈ ಘಟನೆಯಿಂದ ನಾನು ಮುಜುಗರಕ್ಕೊಳಗಾಗಿದ್ದೇನೆ. ಶಾಂತಿ ಮತ್ತು ಕರುಣೆಯಿರುವ ಜಗತ್ತಿನಲ್ಲಿ ವೈಲೆನ್‌ಗೆ ಜಾಗವಿರುವುದಿಲ್ಲ ಎಂದು ಕ್ಷಮೆ ಕೇಳಿದ್ದಾರೆ.

    ಹಿಂಸಾಚಾರದ ಎಲ್ಲ ರೂಪಗಳು ವಿಷಕಾರಿ ಮತ್ತು ವಿನಾಶಕಾರಿಯಾಗಿದೆ. ಕಳೆದ ರಾತ್ರಿಯ ಅಕಾಡೆಮಿ ಪ್ರಶಸ್ತಿಗಳಲ್ಲಿ ನನ್ನ ನಡವಳಿಕೆಯು ಸ್ವೀಕಾರಾರ್ಹವಲ್ಲ ಮತ್ತು ಕ್ಷಮಿಸಲಾಗದು. ಜೋಕ್‌ಗಳು ಅವರ ಕೆಲಸದ ಭಾಗವಾಗಿರುತ್ತೆ. ಆದರೆ ನಾನು ಈ ಬಗ್ಗೆ ಹೆಚ್ಚು ಆಕ್ರೋಶ ವ್ಯಕ್ತಪಡಿಸಿದೆ. ಇದು ನನ್ನ ತಪ್ಪು ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಏಪ್ರಿಲ್ 2ಕ್ಕೆ ಕಿಚ್ಚನ ‘ವಿಕ್ರಾಂತ್ ರೋಣ’ ಟೀಸರ್ ರಿಲೀಸ್

  • ಆಸ್ಕರ್ 2022 ರೆಡ್ ಕಾರ್ಪೆಟ್‍ನಲ್ಲಿ ಮಿಂಚಿದ ತಾರೆಯರು: ಇಲ್ಲಿದೆ ವಿಜೇತರ ಸಂಪೂರ್ಣ ಪಟ್ಟಿ

    ಆಸ್ಕರ್ 2022 ರೆಡ್ ಕಾರ್ಪೆಟ್‍ನಲ್ಲಿ ಮಿಂಚಿದ ತಾರೆಯರು: ಇಲ್ಲಿದೆ ವಿಜೇತರ ಸಂಪೂರ್ಣ ಪಟ್ಟಿ

    ಪ್ರತಿಯೊಬ್ಬ ಕಲಾವಿದನೂ ತನ್ನ ಕೈಲ್ಲೊಂದು ಆಸ್ಕರ್ ಪ್ರಶಸ್ತಿ ಇರಬೇಕು ಎಂದು ಬಯಸುವಷ್ಟು ಪ್ರಾಮುಖ್ಯತೆ ಹೊಂದಿರುವ ಆಸ್ಕರ್ 2022ರ ಪ್ರಶಸ್ತಿ ಪ್ರದಾನ ಸಮಾರಂಭ ಸೋಮವಾರ ಬೆಳಗ್ಗೆ ಲಾಸ್ ಏಂಜಲೀಸ್‌ನಲ್ಲಿ ನಡೆಯಿತು. ಈ ಇವೆಂಟ್ ಅದ್ದೂರಿಯಾಗಿ ನಡೆದಿದ್ದು, ಸಿನಿತಾರೆಯರು ರೆಡ್ ಕಾರ್ಪೆಟ್‌ನಲ್ಲಿ ಮಿಂಚಿದ್ದಾರೆ.

    94ನೇ ಅಕಾಡೆಮಿ 2022ರ ಸಾಲಿನ ಆಸ್ಕರ್ ಪ್ರಶಸ್ತಿಯನ್ನು ಗೆದ್ದು ಹಲವು ಸಿನಿತಾರೆಯರು ಸಂತೋಷ ವ್ಯಕ್ತಪಡಿಸಿದ್ದಾರೆ. ಈ ಪ್ರಶಸ್ತಿಯಲ್ಲಿ ಡ್ಯೂನ್ ಮತ್ತು ಚೈಲ್ಡ್ ಆಫ್ ಡೆಫ್ ಅಡಲ್ಟ್ಸ್’ ಸಿನಿಮಾ ಸ್ಪರ್ಧಿಸಿದ್ದವು. ಈ ಬಾರಿಯ ಪ್ರಶಸ್ತಿಯ ಯಾರಿಗೆಲ್ಲ ಪಾಲಾಗಿದೆ ಎಂಬುದರ ಸಂಪೂರ್ಣ ಲಿಸ್ಟ್ ಇಲ್ಲಿದೆ. ಇದನ್ನೂ ಓದಿ: ಆಸ್ಕರ್ 2022: ಅತ್ಯುತ್ತಮ ಪೋಷಕ ಪಾತ್ರಗಳಿಗೆ ಅರಿಯಾನಾ ಡಿಬೋಸ್, ಟ್ರಾಯ್ಕೋಟ್ಸೂರ್‌ಗೆ ಅವಾರ್ಡ್

    ಉತ್ತಮ ಚಿತ್ರ: ಚೈಲ್ಡ್ ಆಫ್ ಡೆಫ್ ಅಡಲ್ಟ್ಸ್(ಸಿಒಡಿಎ)
    ಉತ್ತಮ ನಟ: ವಿಲ್ ಸ್ಮಿತ್(ಕಿಂಗ್ ರಿಚರ್ಡ್ ಮೂವೀ)
    ಉತ್ತಮ ನಟಿ: ಜೆಸ್ಸಿಕಾ ಚಸ್ಟೈನ್(ದಿ ಐ ಆಫ್ ಟಾಮಿ ಫೆ ಮೂವೀ)
    ಉತ್ತಮ ನಿರ್ದೇಶಕ: ಜೇನ್ ಕ್ಯಾಂಪಿಯನ್(ದಿ ಪವರ್ ಆಫ್ ದಿ ಡಾಗ್)
    ಉತ್ತಮ ಪೋಷಕ ನಟ: ಅರಿಯಾನ ಡಿಬೊಸ್(ವೆಸ್ಟ್ ಸೈಡ್ ಸ್ಟೋರಿ)
    ಉತ್ತಮ ಪೋಷಕ ನಟಿ: ಟ್ರಾಯ್ ಕೋಟ್ಸ್(ಸಿಒಡಿಎ)
    ಉತ್ತಮ ಸಿನಿಮಾಟೋಗ್ರಫಿ: ಗ್ರೇಗ್ ಫ್ರಾಸೆರ್(ಡ್ಯೂನ್)
    ಉತ್ತಮ ಒರಿಜಿನಲ್ ಸಾಂಗ್: ನೋ ಟೈಮ್ ಟು ಡೈ
    ಉತ್ತಮ ಸಾಕ್ಷ್ಯಚಿತ್ರ: ಸಮ್ಮರ್ ಆಫ್ ಸೋಲ್
    ಉತ್ತಮ ಒರಿಜಿನಲ್ ಸ್ಕ್ರೀನ್ಪ್ಲೇ: ಬೆಲ್ಫಾಸ್ಟ್(ಕಿನ್ನೆತ್ ಬ್ರಾನ)
    ಉತ್ತಮ ಕಾಸ್ಟೂಮ್ ಡಿಸೈನ್: ಜೆನ್ನಿ ಬೆವರ್(ಕ್ರುಯೆಲ್ಲ)
    ಉತ್ತಮ ಅಂತಾರಾಷ್ಟ್ರೀಯ ಫೀಚರ್: ಡ್ರೈವ್ ಮೈ ಕಾರ್(ಜಪಾನ್)
    ಉತ್ತಮ ಅನಿಮೇಟೆಡ್ ಫೀಚರ್: ಎನ್ಸಾಂಟೊ ಬೆಸ್ಟ್
    ಉತ್ತಮ ಫಿಲ್ಮ್ ಎಡಿಟಿಂಗ್: ಜೋ ವಾಕರ್(ಡ್ಯೂನ್)
    ಉತ್ತಮ ಸೌಂಡ್: ಡ್ಯೂನ್(ಮ್ಯಾಕ್ರುತ್, ಮಾರ್ಕ್ ಮಾಂಗಿನಿ, ಥಿಯೋ ಗ್ರೀನ್, ಡೌಗ್ ಹೆಂಫಿಲ್, ರಾನ್ ಬಾಟ್ರ್ಲೆಟ್)
    ಉತ್ತಮ ಪ್ರೊಡಕ್ಷನ್ ಡಿಸಥನ್: ಡ್ಯೂನ್(ಪ್ಯಾಟ್ರಿಸ್ ವರ್ಮಾಟ್, ಸೆಟ್ ವಿನ್ಯಾಸ – ಜುಜಾನಾ)
    ಉತ್ತಮ ಲೈವ್ ಆಕ್ಷನ್ ಶಾರ್ಟ್ ಫಿಲ್ಮ್: ದಿ ಲಾಂಗ್ ಗುಡ್ಬೈ
    ಉತ್ತಮ ಅನಿಮೇಟೆಡ್ ಶಾರ್ಟ್ ಫಿಲ್ಮ್: ದಿ ವಿಂಡಶೀಲ್ಡ್ ಪೈಪರ್
    ಉತ್ತಮ ಡಾಕ್ಯುಮೆಂಟರಿ ಶಾರ್ಟ್ ಫಿಲ್ಮ್: ದಿ ಕ್ವೀನ್ ಆಫ್ ಬಾಸ್ಕೆಟ್ಬಾಲ್

    ಅತ್ಯುತ್ತಮ ಸಾಕ್ಷ್ಯ ಚಿತ್ರಕ್ಕೆ ಸ್ಪರ್ಧಿಸಿದ್ದ ಭಾರತೀಯ ಚಿತ್ರ ‘ರೈಟಿಂಗ್ ವಿತ್ ಫೈರ್’ ನಿರಾಸೆ ಮೂಡಿಸಿದೆ. ಈ ಪ್ರಶಸ್ತಿಯು ”ಸಮ್ಮರ್ ಆಫ್ ಸೋಲ್’ ಚಿತ್ರಕ್ಕೆ ಸಿಕ್ಕಿದೆ. ಇದನ್ನೂ ಓದಿ: ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ವೇದಿಕೆಯಲ್ಲೇ ಕಪಾಳಮೋಕ್ಷ: ಅತ್ಯುತ್ತಮ ನಟ ಆಸ್ಕರ್ ವಿಜೇತ ವಿಲ್ ಸ್ಮಿತ್ ಉಗ್ರತಾಪ

  • ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ವೇದಿಕೆಯಲ್ಲೇ ಕಪಾಳಮೋಕ್ಷ: ಅತ್ಯುತ್ತಮ ನಟ ಆಸ್ಕರ್ ವಿಜೇತ ವಿಲ್ ಸ್ಮಿತ್ ಉಗ್ರತಾಪ

    ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ವೇದಿಕೆಯಲ್ಲೇ ಕಪಾಳಮೋಕ್ಷ: ಅತ್ಯುತ್ತಮ ನಟ ಆಸ್ಕರ್ ವಿಜೇತ ವಿಲ್ ಸ್ಮಿತ್ ಉಗ್ರತಾಪ

    ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಅಹಿತಕರ ಘಟನೆಯೊಂದು ನಡೆದು ಹೋಗಿದೆ. ಆಸ್ಕರ್ ಪ್ರಶಸ್ತಿ ಇತಿಹಾಸದಲ್ಲೇ ಇಂಥದ್ದೊಂದು ಘಟನೆ ಕಪ್ಪು ಚುಕ್ಕೆ ಎಂದು ಬಣ್ಣಿಸಲಾಗುತ್ತಿದೆ. ಇದನ್ನೂ ಓದಿ: ಹೊಸ ದಾಖಲೆ ಬರೆದ ಕೆಜಿಎಫ್ 2 ಟ್ರೈಲರ್ – ರಿಲೀಸ್ ಆದ ಕೆಲವೇ ನಿಮಿಷದಲ್ಲಿ ಲಕ್ಷಾಂತರ ವ್ಯೂ

    ಅಮೆರಿಕಾದ ಲಾಸ್ ಎಂಜಲ್ಸ್ ನಲ್ಲಿ 2022ರ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತಿದ್ದು, ಜಗತ್ತಿನ ದಿಗ್ಗಜ ನಟರೆಲ್ಲ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಇಂತಹ ಸಮಾರಂಭದಲ್ಲಿ ತರ್ಲೆ ತಮಾಷೆಗಳು ನಡೆಯುವುದು ಸಹಜ. ಸೆನ್ಸಾರ್ ಮಾಡಬೇಕಾದ ಪದಗಳು ಕೂಡ ಆಗಾಗ್ಗೆ ಈ ವೇದಿಕೆಯ ಮೇಲೆ ಕೇಳುತ್ತವೆ. ಆದರೆ, ಕಪಾಳಕ್ಕೆ ಹೊಡೆಸಿಕೊಳ್ಳುವಂತಹ ಸನ್ನಿವೇಶ ಇದೇ ಮೊದಲಾಗಿದೆ. ಇದನ್ನೂ ಓದಿ: ಕೆಜಿಎಫ್-2 ಟ್ರೈಲರ್ ರಿಲೀಸ್ ಮಾಡಿದ ಶಿವಣ್ಣ- ರಾಕಿಬಾಯ್ ಅಬ್ಬರ ಶುರು

    ಈ ಬಾರಿಯ ಅತ್ಯುತ್ತಮ ಡಾಕ್ಯುಮೆಂಟರಿ ಪ್ರಶಸ್ತಿಯನ್ನು ಘೋಷಿಸಲು ಅತೀ ಉತ್ಸುಕರಾಗಿ ನಟ ಕ್ರಿಸ್ ರಾಕ್ ವೇದಿಕೆಗೆ ಬಂದರು. ತಮ್ಮ ಕೈಗೆ ಮೈಕ್ ಸಿಕ್ಕ ತಕ್ಷಣವೇ ಮಾತು ಆರಂಭಿಸಿದರು. ಆ ಮಾತು ಎಲ್ಲಿಗೆ ಹೋಯಿತು ಅಂದರೆ, ವೇದಿಕೆಯ ಮುಂದಿದ್ದ ಹೆಸರಾಂತ ನಟರನ್ನು ತಮಾಷೆಯಾಗಿಯೇ ಕಾಲೆಳೆಯುತ್ತಾ ಹೋದರು. ಇವರ ತಮಾಷೆಗೆ ಹೆಸರಾಂತ ನಟ ವಿಲ್ ಸ್ಮಿತ್ ಪತ್ನಿ ಪಿಂಕೆಟ್ ಸ್ಮಿತ್  ಆಹಾರವಾದರು. ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ವಿಲ್ ಸ್ಮಿತ್ ತಮ್ಮ ಪತ್ನಿಯನ್ನೂ ಕರೆತಂದಿದ್ದರು. ಸಂಭ್ರಮದಲ್ಲಿದ್ದ ಈ ಜೋಡಿಗೆ ಕ್ರಿಸ್ ರಾಕ್ ಮಾತು ಸರಿ ಅನಿಸಲಿಲ್ಲ. ಕೂಡಲೇ ವೇದಿಕೆ ಏರಿದ ವಿಲ್ ಸ್ಮಿತ್ ಕೋಪದಿಂದಲೇ ಕ್ರಿಸ್ ರಾಕ್ ಕಪಾಳಕ್ಕೆ ಬಾರಿಸಿಯೇ ಬಿಟ್ಟರು.

    ಮೊದ ಮೊದಲು ಅದನ್ನು ತಮಾಷೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಅದು ತಮಾಷೆ ಆಗಿರಲಿಲ್ಲ. ತಮ್ಮ ಪತ್ನಿಯು ತಲೆಬೋಳಿಸಿಕೊಂಡಿರುವ ವಿಚಾರವನ್ನು ಕ್ರಿಸ್ ರಾಕ್ ತಮಾಷೆ ಮಾಡಿದ್ದಕ್ಕೆ ಅತೀವ ಕೋಪಕೊಂಡಿದ್ದರು ವಿಲ್ ಸ್ಮಿತ್. ‘ನನ್ನ ಪತ್ನಿಯ ಬಗ್ಗೆ ಮಾತಾಡಬೇಡ, ನಿನ್ನ ಕೆಟ್ಟ ಬಾಯಿಂದ ಅವಳ ಹೆಸರು ಹೇಳೂ ಬೇಡ’ ಎಂದು ಕಿರುಚಿದರು. ಸಂಭ್ರಮದಲ್ಲಿದ್ದ ಸಮಾರಂಭ ಕೆಲ ಹೊತ್ತು ಗೊಂದಲಮಯವಾಯಿತು. ಆನಂತರ ವಾತಾವರಣವನ್ನು ತಿಳಿಗೊಳಿಸುವಂತಹ ಎಲ್ಲ ಪ್ರಯತ್ನಗಳೂ ನಡೆದವು.

    ಕ್ರಿಸ್ ರಾಕ್ ಮತ್ತು ವಿಲ್ ಸ್ಮಿತ್ ಜತೆ ಆಯೋಜಕರು ಪ್ರತ್ಯೇಕವಾಗಿ ಮಾತನಾಡಿದರು. ಹಲವರು ಹಲವು ರೀತಿಯಲ್ಲಿ ಸಮಾಧಾನ ಪಡಿಸುವಂತಹ ಪ್ರಯತ್ನಗಳು ನಡೆದವು. ನಂತರ ಮತ್ತೆ ಸಮಾರಂಭ ಶುರುವಾಯಿತು. ಇದನ್ನೂ ಓದಿ: ಪುನೀತ್ ರಾಜ್‌ಕುಮಾರ್ ಮನೆಗೆ ಭೇಟಿ ನೀಡಿದ ಸಂಜಯ್ ದತ್

    ಅಂದಹಾಗೆ ‘ಕಿಂಗ್ ರಿಚರ್ಡ್ಸ್’ ಸಿನಿಮಾದ ಅಭಿನಯಕ್ಕಾಗಿ ವಿಲ್ ಸ್ಮಿತ್ ಅತ್ಯುತ್ತಮ ನಟ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದರು. ಕೊನೆಗೆ ಈ ಪ್ರಶಸ್ತಿ ವಿಲ್ ಸ್ಮಿತ್ ಪಾಲಾಯಿತು. ಕಪಾಳಮೋಕ್ಷದ ಘಟನೆ ಇದೀಗ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿದೆ.

  • ಆಸ್ಕರ್ 2022: ಅತ್ಯುತ್ತಮ ಪೋಷಕ ಪಾತ್ರಗಳಿಗೆ ಅರಿಯಾನಾ ಡಿಬೋಸ್, ಟ್ರಾಯ್ಕೋಟ್ಸೂರ್‌ಗೆ ಅವಾರ್ಡ್

    ಆಸ್ಕರ್ 2022: ಅತ್ಯುತ್ತಮ ಪೋಷಕ ಪಾತ್ರಗಳಿಗೆ ಅರಿಯಾನಾ ಡಿಬೋಸ್, ಟ್ರಾಯ್ಕೋಟ್ಸೂರ್‌ಗೆ ಅವಾರ್ಡ್

    ವಿಶ್ವವೇ ಕಾಯುತ್ತಿದ್ದ ಹಾಲಿವುಡ್ ಡಾಲ್ಬಿ ಥಿಯೇಟರ್ 94ನೇ ಆಸ್ಕರ್ ಪ್ರಶಸ್ತಿ ಸಮಾರಂಭ ಭಾನುವಾರ ಲಾಸ್ ಏಂಜಲಿಸ್‍ನಲ್ಲಿ ನಡೆಯಿತು. ಎಲ್ಲರೂ ಕಾತುರದಿಂದ ಕಾಯುತ್ತಿದ್ದ ಈ ಪ್ರಶಸ್ತಿ ಸಮಾರಂಭಕ್ಕೆ ತೆರೆಬಿದಿದ್ದು, ನಿರೀಕ್ಷೆಯಂತೆ ಅರಿಯಾನಾ ಡಿಬಾಸ್ ಅತ್ಯುತ್ತಮ ಪೋಷಕ ನಟಿ ಮತ್ತು ಟ್ರಾಯ್ಕೋಟ್ಸೂರ್‌ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಲಭಿಸಿ ಗೌರವಕ್ಕೆ ಪಾತ್ರರಾಗಿದ್ದಾರೆ.

    ಕಳೆದ ವರ್ಷ ಕೋವಿಡ್‍ನಿಂದ ಸರಳವಾಗಿ ನಡೆದಿದ್ದ, ಆಸ್ಕರ್ ಇವೆಂಟ್ ಈ ಬಾರಿ ಅದ್ದೂರಿಯಾಗಿ ನಡೆಯಿತು. ಇವೆಂಟ್ ಮೊದಲು ರೆಡ್ ಕಾರ್ಪೆಟ್‍ನೊಂದಿಗೆ ಪ್ರಾರಂಭವಾಯ್ತು. ಲಾಸ್ ಏಂಜಲಿಸ್‍ನ ಡಾಲ್ಬಿ ಥಿಯೇಟರ್‌ನಲ್ಲಿ ಈ ಅದ್ದೂರಿ ಕಾರ್ಯಕ್ರಮ ನಡೆದಿದ್ದು, ಹಾಲಿವುಡ್ ತಾರೆಯರ ಅಕರ್ಷಕ ಉಡುಗೆಯನ್ನು ತೊಟ್ಟಿಕೊಂಡು ಫುಲ್ ಮಿಂಚುತ್ತಿದ್ದರು. ಇದನ್ನೂ ಓದಿ: ಹೊಸ ದಾಖಲೆ ಬರೆದ ಕೆಜಿಎಫ್ 2 ಟ್ರೈಲರ್ – ರಿಲೀಸ್ ಆದ ಕೆಲವೇ ನಿಮಿಷದಲ್ಲಿ ಲಕ್ಷಾಂತರ ವ್ಯೂ

    ಅವಾರ್ಡ್ ಇವೆಂಟ್ ರೆಡ್ ಡ್ರೆಸ್, ಬ್ಲೂ ರೆಬ್ಬನ್ಸ್‌ನೊಂದಿಗೆ ಕಂಗೊಳಿಸುತ್ತಿತ್ತು. ಕಳೆದ ವರ್ಷವನ್ನು ಮರೆಸುವಂತೆ ಎಲ್ಲಕಡೆ ಆಕರ್ಷಕವಾಗಿ ಇವೆಂಟ್ ಆಯೋಜಿಸಲಾಗಿತ್ತು. ಎಲ್ಲ ಹಾಲಿವುಡ್ ತಾರೆಯರು ಕ್ಯಾಮೆರಗೆ ಪೋಸ್‌ ಕೊಟ್ಟು ಪ್ರಶಸ್ತಿ ಸಮಾರಂಭದ ಬಗ್ಗೆ ಅವರಿಗಿದ್ದ ಕಾತುರಕ ಬಗ್ಗೆ ವಿವರಿಸಿದ್ದರು.

    ಆಮಿ ಶುಮರ್, ರೆಜಿನಾ ಹಾಲ್ ಮತ್ತು ವಂಡಾ ಸೈಕ್ಸ್ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ಆಸ್ಕರ್‌ನಲ್ಲಿ ʼdune ʼ ಸಿನಿಮಾ 10 ನಾಮಿನೇಷನ್ಸ್ ಪಡೆದಿದ್ದು, ಆರು ಪ್ರಶಸ್ತಿಯನ್ನು ಬಾಚಿಕೊಂಡಿದೆ. ಎಲ್ಲರ ನಿರೀಕ್ಷೆಯಂತೆ ಅರಿಯಾನಾ ಡಿಬಾಸ್ ‘wes side story’ ಸಿನಿಮಾ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಲಭಿಸಿದೆ. ‘coda’ ಸಿನಿಮಾಗಾಗಿ ‘ಟ್ರಾಯ್ಕೋಟ್ಸೂರ್‌’ ಅವರಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಲಭಿಸಿದೆ.

    ಈ ಇವೆಂಟ್ ಆಯೋಜಿಸಿರುವುದನ್ನು ನೋಡಿ ಎಲ್ಲ ತಾರೆಯರು ಸಖತ್ ಖುಷ್ ಆಗಿದ್ದು, ಹಲವು ವರ್ಷಗಳಿಂದ ಈ ಸಂಭ್ರಮವನ್ನು ಮಿಸ್ ಮಾಡಿಕೊಳ್ಳುತ್ತಿದ್ದೆವು ಎಂದು ಹೇಳಿದ್ದರು. ಇದನ್ನೂ ಓದಿ: ಕೆಜಿಎಫ್-2 ಟ್ರೈಲರ್ ರಿಲೀಸ್ ಮಾಡಿದ ಶಿವಣ್ಣ- ರಾಕಿಬಾಯ್ ಅಬ್ಬರ ಶುರು