Tag: ಆಸ್ಕರ್ ಅವಾರ್ಡ್

  • Oscars Award 2025: 97ನೇ ಸಾಲಿನ ಆಸ್ಕರ್‌ ಪ್ರಶಸ್ತಿ ಗೆದ್ದವರ ಲಿಸ್ಟ್‌ ಇಲ್ಲಿದೆ

    Oscars Award 2025: 97ನೇ ಸಾಲಿನ ಆಸ್ಕರ್‌ ಪ್ರಶಸ್ತಿ ಗೆದ್ದವರ ಲಿಸ್ಟ್‌ ಇಲ್ಲಿದೆ

    ಪ್ರತಿಷ್ಠಿತ 2025ರ ಆಸ್ಕರ್ ಪ್ರಶಸ್ತಿ (Oscars 2025) ಪ್ರಕಟವಾಗಿದ್ದು, ಅಮೆರಿಕದ ಲಾಸ್ ಏಜಂಲಿಸ್‌ನಲ್ಲಿರುವ ಡಾಲ್ಬಿ ಥಿಯೇಟರ್‌ನಲ್ಲಿ 97ನೇ ವರ್ಷದ ಅವಾರ್ಡ್ ಫಂಕ್ಷನ್ ಜರುಗಿದೆ. ‘ಅನೋರಾ’ (Anora) ಹಾಗೂ ‘ದಿ ಬ್ರೂಟಲಿಸ್ಟ್’ (The Brutalist) ಚಿತ್ರಗಳು ಹೆಚ್ಚಿನ ಅವಾರ್ಡ್ ಪಡೆದವು. ಈ ಪೈಕಿ ಪ್ರಶಸ್ತಿ ಗೆದ್ದವರ ಸಂಪೂರ್ಣ ಪಟ್ಟಿ ಇಲ್ಲಿದೆ.

    ಅಮೆರಿಕದಲ್ಲಿ ಉಂಟಾದ ಕಾಡ್ಗಿಚ್ಚಿನ ಕಾರಣಕ್ಕೆ ಈ ಬಾರಿ ಆಸ್ಕರ್ ಅವಾರ್ಡ್ ನಡೆಯುವುದಿಲ್ಲ ಎಂಬ ಮಾತು ಕೇಳಿ ಬಂದಿತ್ತು. ಆದರೆ ಅದ್ಧೂರಿಯಾಗಿ ಕಾರ್ಯಕ್ರಮ ಜರುಗಿದೆ. ಕಾಡ್ಗಿಚ್ಚಿನ ವಿರುದ್ಧ ಹೋರಾಡಿದ ಅಗ್ನಿಶಾಮಕ ದಳದವರಿಗೆ ವೇದಿಕೆ ಮೇಲೆ ಗೌರವ ಸೂಚಿಸಲಾಯ್ತು. ಹಲವು ಸಿನಿಮಾಗಳಿಗೆ ಪ್ರಶಸ್ತಿ ಅನೌನ್ಸ್ ಮಾಡಲಾಗಿದೆ.

    97ನೇ ಸಾಲಿನ 2025ರ ಆಸ್ಕರ್ ಅವಾರ್ಡ್ ಗೆದ್ದವರ ಸಂಪೂರ್ಣ ವಿವರ ಇಲ್ಲಿದೆ.

    ಅತ್ಯುತ್ತಮ ನಟ : ಆಡ್ರಿಯನ್ ಬ್ರಾಡಿ (ದಿ ಬ್ರೂಟಲಿಸ್ಟ್)

    ಅತ್ಯುತ್ತಮ ನಟಿ : ಮೈಕಿ ಮ್ಯಾಡಿಸನ್ (ಅನೋರಾ)

    ಅತ್ಯುತ್ತಮ ಚಿತ್ರ : ಅನೋರಾ

    ಅತ್ಯುತ್ತಮ ನಿರ್ದೇಶಕ : ಸೀನ್ ಬೇಕರ್ (ಅನೋರಾ)

    ಅತ್ಯುತ್ತಮ ಅನಿಮೇಟೆಡ್ ಚಲನಚಿತ್ರ – ಫ್ಲೋ

    ಅತ್ಯುತ್ತಮ ವಸ್ತ್ರವಿನ್ಯಾಸ – ಪಾಲ್ ತಾಜ್‌ವೆಲ್ (ವಿಕೆಡ್)

    ಅತ್ಯುತ್ತಮ ಮೂಲ ಚಿತ್ರಕಥೆ – ಸೀನ್ ಬೇಕರ್ (ಅನೋರಾ)

    ಅತ್ಯುತ್ತಮ ಮೇಕಪ್, ಕೇಶವಿನ್ಯಾಸ – ದಿ ಸಬ್‌ಸ್ಟೆನ್ಸ್

    ಅತ್ಯುತ್ತಮ ಮೂಲ ಗೀತೆ – ಎಲ್ ಮಾಲ್

    ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರ – ದಿ ಓನ್ಲಿ ಗರ್ಲ್ ಇನ್ ದಿ ಆರ್ಕೆಸ್ಟಾç

    ಅತ್ಯುತ್ತಮ ಸಾಕ್ಷ್ಯಚಿತ್ರ – ನೋ ಅದರ್ ಲ್ಯಾಂಡ್

    ಅತ್ಯುತ್ತಮ ಎಡಿಟಿಂಗ್ – ಸೀನ್ ಬೇಕರ್ (ಅನೋರಾ)

    ಅತ್ಯುತ್ತಮ ಅನಿಮೇಟೆಡ್ ಕಿರುಚಿತ್ರ – ಇನ್ ದಿ ಶ್ಯಾಡೋ ಆಫ್ ದಿ ಸೈಪ್ರೆಸ್

    ಅತ್ಯುತ್ತಮ ಧ್ವನಿ ವಿಭಾಗ – ಡ್ಯೂನ್ – ಭಾಗ 2 ಚಲನಚಿತ್ರ

    ಅತ್ಯುತ್ತಮ ದೃಶ್ಯ ಪರಿಣಾಮಗಳು – ಡ್ಯೂನ್ ಭಾಗ 2

    ಅತ್ಯುತ್ತಮ ಲೈವ್ ಆಕ್ಷನ್ ಕಿರುಚಿತ್ರ – ಐ ಆಮ್ ನಾಟ್ ಎ ರೋಬೋಟ್

    ಅತ್ಯುತ್ತಮ ಛಾಯಾಗ್ರಹಣ – ದಿ ಬ್ರೂಟಲಿಸ್ಟ್

    ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ – ಐ ಆಮ್ ಸ್ಟಿಲ್ ಹಿಯರ್ (ಬ್ರೆಜಿಲ್)

  • Oscars 2023: ಪ್ರತಿಷ್ಠಿತ ಆಸ್ಕರ್ ವೇದಿಕೆಯಲ್ಲಿ ಪ್ರದರ್ಶನಗೊಳ್ಳಲಿದೆ `ನಾಟು ನಾಟು’ ಸಾಂಗ್

    Oscars 2023: ಪ್ರತಿಷ್ಠಿತ ಆಸ್ಕರ್ ವೇದಿಕೆಯಲ್ಲಿ ಪ್ರದರ್ಶನಗೊಳ್ಳಲಿದೆ `ನಾಟು ನಾಟು’ ಸಾಂಗ್

    ಖ್ಯಾತ ನಿರ್ದೇಶಕ ರಾಜಮೌಳಿ (Director Rajamouli) ನಿರ್ದೇಶನದ `RRR’ ಸಿನಿಮಾದ ಕೀರ್ತಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ಚಿತ್ರದ `ನಾಟು ನಾಟು’ ಸಾಂಗ್‌ಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಬಾಚಿಕೊಂಡ ಬೆನ್ನಲ್ಲೇ ಇದೀಗ ಪ್ರತಿಷ್ಠಿತ ಆಸ್ಕರ್ ವೇದಿಕೆಯಲ್ಲಿ `ನಾಟು ನಾಟು’ (Naatu Naatu Song) ಹಾಡು ಪ್ರದರ್ಶನಗೊಳ್ಳುವುದರ ಬಗ್ಗೆ ಸಿಹಿಸುದ್ದಿ ಸಿಕ್ಕಿದೆ.

    ಆಸ್ಕರ್ (Oscars 2023) ಅಂಗಳಕ್ಕೆ ಹೋಗೋದು ಪ್ರತೀ ಫಿಲಂ ಮೇಕರ್‌ನ ಬಹುದೊಡ್ಡ ಕನಸು. ಆಸ್ಕರ್ ವೇದಿಕೆಯಲ್ಲಿ ಜಗತ್ತಿನ ವಿವಿಧ ಭಾಷೆಗಳ ವಿವಿಧ ದೇಶಗಳ ನಾನಾ ಮೈ ಬಣ್ಣದ ನಟ- ನಟಿಯರ ಮೇಳವೇ ನಡೆಯುತ್ತೆ. ಆದರೆ ಈ ಬಾರಿ ಆಸ್ಕರ್‌ನಲ್ಲಿ ಪ್ರಸಿದ್ಧ `ಆರ್‌ಆರ್‌ಆರ್’ ಸಿನಿಮಾದ್ದೇ ಸಮಾಚಾರ. ಈ ಚಿತ್ರ ಬಂದು ವರ್ಷ ಕಳೆದರೂ `ಆರ್‌ಆರ್‌ಆರ್’ ಚಿತ್ರದ `ನಾಟು ನಾಟು’ ಹಾಡು ಇಡೀ ಜಗತ್ತನ್ನೇ ಕುಣಿಸುತ್ತಿದೆ. ಹಾಗಾಗಿ ಮಾ.12ಕ್ಕೆ ಲಾಸ್ ಎಂಜಲೀಸ್‌ನಲ್ಲಿ 95ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಆ ವೇದಿಕೆ ಮೇಲೆ `ನಾಟು ನಾಟು’ ಲೈವ್ ಪರ್ಫಾರ್ಮೆನ್ಸ್‌ಗೆ ಅವಕಾಶ ಸಿಕ್ಕಿದೆ. ಈ ಹಿಂದೆಯೇ ಈ ಬಗ್ಗೆ ಸುಳಿವು ಸಿಕ್ಕಿತ್ತು. ಇದೀಗ ಅಧಿಕೃತವಾಗಿ ಈ ವಿಚಾರವನ್ನು ಅಕಾಡೆಮಿ ಸ್ಪಷ್ಟಪಡಿಸಿದೆ.

    ಚಂದ್ರಬೋಸ್ ಸಾಹಿತ್ಯ ಬರೆದಿರುವ `ನಾಟು ನಾಟು’ ಹಾಡನ್ನು ಗಾಯಕರಾದ ರಾಹುಲ್ ಸಿಪ್ಲಿಗಿಂಜ್ ಹಾಗೂ ಕಾಲ ಭೈರವ ಹಾಡಿದ್ದರು. ಇದೀಗ ಇವರಿಬ್ಬರಿಗೆ ಆಸ್ಕರ್ ವೇದಿಕೆಯ ಮೂಲಕ ಮತ್ತೊಮ್ಮೆ ಹಾಡಿನ ಲೈವ್ ಪರ್ಫಾರ್ಮೆನ್ಸ್ ನೀಡುವ ಅವಕಾಶ ದಕ್ಕಿದೆ. ಇದನ್ನು ಟ್ವೀಟ್ ಮಾಡಿ ಅಕಾಡೆಮಿ ಖಚಿತ ಪಡಿಸಿದೆ. ಜೇಮ್ಸ್ ಕ್ಯಾಮರೂನ್‌ನಂತ ಹಾಲಿವುಡ್ ಫಿಲ್ಮ್ ಮೇಕರ್ಸ್ ‘RRR’ ಸಿನಿಮಾ ನೋಡಿ ಮೆಚ್ಚಿ ಹೊಗಳಿದ್ದಾರೆ. ಈ ವಾರ ಸಿನಿಮಾ ಅಮೆರಿಕಾದಲ್ಲಿ ಮತ್ತೆ ರಿಲೀಸ್ ಆಗುತ್ತಿದೆ. ವಿಶೇಷ ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ. ಖ್ಯಾತ ಸಂಗೀತ ನಿರ್ದೇಶಕ ಎಂ.ಎಂ ಕೀರವಾಣಿ (M.M Keeravani) ಈ ಹಾಡಿಗೆ ಸಂಗೀತ ನಿರ್ದೇಶನ ಮಾಡಿದವರು. ಅವರು ಆಸ್ಕರ್ ವೇದಿಕೆಯಲ್ಲಿ ಭಾಗಿ ಆಗುವುದು ಅನುಮಾನ ಎನ್ನಲಾಗ್ತಿದೆ. ಇತ್ತೀಚೆಗೆ ಆರೋಗ್ಯ ಕಾರಣಗಳಿಂದ ವೇದಿಕೆಯಲ್ಲಿ ಪರ್ಫಾರ್ಮೆನ್ಸ್ ಕಷ್ಟ ಎಂದು ಕೀರವಾಣಿ ಹೇಳಿದ್ದರು. ಅವರ ಬರುವಿಕೆಯ ಬಗ್ಗೆ ನಿರೀಕ್ಷೆಯಿದೆ. ಇದನ್ನೂ ಓದಿ ಸ್ವೀಟ್‌ ಹಾರ್ಟ್‌ಗೆ ವಿಶ್‌ ಮಾಡಿದ ರಿಷಬ್ ಶೆಟ್ಟಿ

    ಚಿತ್ರದ ನಾಟು ನಾಟು ಸಾಂಗ್ ಅನ್ನ ಉಕ್ರೇನ್‌ನಲ್ಲಿ ಶೂಟ್ ಮಾಡಲಾಗಿತ್ತು. ಪ್ರೇಮ್ ರಕ್ಷಿತ್ ಕೊರಿಯೋಗ್ರಾಫಿಯಲ್ಲಿ ತಾರಕ್- ಚರಣ್ ಜಬರ್‌ದಸ್ತ್ ಆಗಿ ಹೆಜ್ಜೆ ಹಾಕಿದ್ದರು. ಈ ಸಿನಿಮಾ ಗೆಲುವಿಗೆ ರಾಜಮೌಳಿ ಅವರ ನಿರ್ದೇಶನವಷ್ಟೇ ಸಾಥ್ ನೀಡಿರುವುದಲ್ಲ. ಚಿತ್ರಕಥೆಯ ಜೊತೆ ತಾರಕ್ ಮತ್ತು ರಾಮ್ ಚರಣ್ ಅಭಿನಯ ಕೂಡ ಗೆಲುವಿಗೆ ಕಾರಣವಾಗಿದೆ.

  • ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ವೇದಿಕೆಯಲ್ಲೇ ಕಪಾಳಮೋಕ್ಷ: ಅತ್ಯುತ್ತಮ ನಟ ಆಸ್ಕರ್ ವಿಜೇತ ವಿಲ್ ಸ್ಮಿತ್ ಉಗ್ರತಾಪ

    ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ವೇದಿಕೆಯಲ್ಲೇ ಕಪಾಳಮೋಕ್ಷ: ಅತ್ಯುತ್ತಮ ನಟ ಆಸ್ಕರ್ ವಿಜೇತ ವಿಲ್ ಸ್ಮಿತ್ ಉಗ್ರತಾಪ

    ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಅಹಿತಕರ ಘಟನೆಯೊಂದು ನಡೆದು ಹೋಗಿದೆ. ಆಸ್ಕರ್ ಪ್ರಶಸ್ತಿ ಇತಿಹಾಸದಲ್ಲೇ ಇಂಥದ್ದೊಂದು ಘಟನೆ ಕಪ್ಪು ಚುಕ್ಕೆ ಎಂದು ಬಣ್ಣಿಸಲಾಗುತ್ತಿದೆ. ಇದನ್ನೂ ಓದಿ: ಹೊಸ ದಾಖಲೆ ಬರೆದ ಕೆಜಿಎಫ್ 2 ಟ್ರೈಲರ್ – ರಿಲೀಸ್ ಆದ ಕೆಲವೇ ನಿಮಿಷದಲ್ಲಿ ಲಕ್ಷಾಂತರ ವ್ಯೂ

    ಅಮೆರಿಕಾದ ಲಾಸ್ ಎಂಜಲ್ಸ್ ನಲ್ಲಿ 2022ರ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತಿದ್ದು, ಜಗತ್ತಿನ ದಿಗ್ಗಜ ನಟರೆಲ್ಲ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಇಂತಹ ಸಮಾರಂಭದಲ್ಲಿ ತರ್ಲೆ ತಮಾಷೆಗಳು ನಡೆಯುವುದು ಸಹಜ. ಸೆನ್ಸಾರ್ ಮಾಡಬೇಕಾದ ಪದಗಳು ಕೂಡ ಆಗಾಗ್ಗೆ ಈ ವೇದಿಕೆಯ ಮೇಲೆ ಕೇಳುತ್ತವೆ. ಆದರೆ, ಕಪಾಳಕ್ಕೆ ಹೊಡೆಸಿಕೊಳ್ಳುವಂತಹ ಸನ್ನಿವೇಶ ಇದೇ ಮೊದಲಾಗಿದೆ. ಇದನ್ನೂ ಓದಿ: ಕೆಜಿಎಫ್-2 ಟ್ರೈಲರ್ ರಿಲೀಸ್ ಮಾಡಿದ ಶಿವಣ್ಣ- ರಾಕಿಬಾಯ್ ಅಬ್ಬರ ಶುರು

    ಈ ಬಾರಿಯ ಅತ್ಯುತ್ತಮ ಡಾಕ್ಯುಮೆಂಟರಿ ಪ್ರಶಸ್ತಿಯನ್ನು ಘೋಷಿಸಲು ಅತೀ ಉತ್ಸುಕರಾಗಿ ನಟ ಕ್ರಿಸ್ ರಾಕ್ ವೇದಿಕೆಗೆ ಬಂದರು. ತಮ್ಮ ಕೈಗೆ ಮೈಕ್ ಸಿಕ್ಕ ತಕ್ಷಣವೇ ಮಾತು ಆರಂಭಿಸಿದರು. ಆ ಮಾತು ಎಲ್ಲಿಗೆ ಹೋಯಿತು ಅಂದರೆ, ವೇದಿಕೆಯ ಮುಂದಿದ್ದ ಹೆಸರಾಂತ ನಟರನ್ನು ತಮಾಷೆಯಾಗಿಯೇ ಕಾಲೆಳೆಯುತ್ತಾ ಹೋದರು. ಇವರ ತಮಾಷೆಗೆ ಹೆಸರಾಂತ ನಟ ವಿಲ್ ಸ್ಮಿತ್ ಪತ್ನಿ ಪಿಂಕೆಟ್ ಸ್ಮಿತ್  ಆಹಾರವಾದರು. ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ವಿಲ್ ಸ್ಮಿತ್ ತಮ್ಮ ಪತ್ನಿಯನ್ನೂ ಕರೆತಂದಿದ್ದರು. ಸಂಭ್ರಮದಲ್ಲಿದ್ದ ಈ ಜೋಡಿಗೆ ಕ್ರಿಸ್ ರಾಕ್ ಮಾತು ಸರಿ ಅನಿಸಲಿಲ್ಲ. ಕೂಡಲೇ ವೇದಿಕೆ ಏರಿದ ವಿಲ್ ಸ್ಮಿತ್ ಕೋಪದಿಂದಲೇ ಕ್ರಿಸ್ ರಾಕ್ ಕಪಾಳಕ್ಕೆ ಬಾರಿಸಿಯೇ ಬಿಟ್ಟರು.

    ಮೊದ ಮೊದಲು ಅದನ್ನು ತಮಾಷೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಅದು ತಮಾಷೆ ಆಗಿರಲಿಲ್ಲ. ತಮ್ಮ ಪತ್ನಿಯು ತಲೆಬೋಳಿಸಿಕೊಂಡಿರುವ ವಿಚಾರವನ್ನು ಕ್ರಿಸ್ ರಾಕ್ ತಮಾಷೆ ಮಾಡಿದ್ದಕ್ಕೆ ಅತೀವ ಕೋಪಕೊಂಡಿದ್ದರು ವಿಲ್ ಸ್ಮಿತ್. ‘ನನ್ನ ಪತ್ನಿಯ ಬಗ್ಗೆ ಮಾತಾಡಬೇಡ, ನಿನ್ನ ಕೆಟ್ಟ ಬಾಯಿಂದ ಅವಳ ಹೆಸರು ಹೇಳೂ ಬೇಡ’ ಎಂದು ಕಿರುಚಿದರು. ಸಂಭ್ರಮದಲ್ಲಿದ್ದ ಸಮಾರಂಭ ಕೆಲ ಹೊತ್ತು ಗೊಂದಲಮಯವಾಯಿತು. ಆನಂತರ ವಾತಾವರಣವನ್ನು ತಿಳಿಗೊಳಿಸುವಂತಹ ಎಲ್ಲ ಪ್ರಯತ್ನಗಳೂ ನಡೆದವು.

    ಕ್ರಿಸ್ ರಾಕ್ ಮತ್ತು ವಿಲ್ ಸ್ಮಿತ್ ಜತೆ ಆಯೋಜಕರು ಪ್ರತ್ಯೇಕವಾಗಿ ಮಾತನಾಡಿದರು. ಹಲವರು ಹಲವು ರೀತಿಯಲ್ಲಿ ಸಮಾಧಾನ ಪಡಿಸುವಂತಹ ಪ್ರಯತ್ನಗಳು ನಡೆದವು. ನಂತರ ಮತ್ತೆ ಸಮಾರಂಭ ಶುರುವಾಯಿತು. ಇದನ್ನೂ ಓದಿ: ಪುನೀತ್ ರಾಜ್‌ಕುಮಾರ್ ಮನೆಗೆ ಭೇಟಿ ನೀಡಿದ ಸಂಜಯ್ ದತ್

    ಅಂದಹಾಗೆ ‘ಕಿಂಗ್ ರಿಚರ್ಡ್ಸ್’ ಸಿನಿಮಾದ ಅಭಿನಯಕ್ಕಾಗಿ ವಿಲ್ ಸ್ಮಿತ್ ಅತ್ಯುತ್ತಮ ನಟ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದರು. ಕೊನೆಗೆ ಈ ಪ್ರಶಸ್ತಿ ವಿಲ್ ಸ್ಮಿತ್ ಪಾಲಾಯಿತು. ಕಪಾಳಮೋಕ್ಷದ ಘಟನೆ ಇದೀಗ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿದೆ.

  • ಆಸ್ಕರ್ ಪ್ರಶಸ್ತಿ ಪಡೆದ ಮೊದಲ ಮುಸ್ಲಿಂ ನಟ ಮಹೇರ್ಶಲಾ ಆಲಿ

    ಆಸ್ಕರ್ ಪ್ರಶಸ್ತಿ ಪಡೆದ ಮೊದಲ ಮುಸ್ಲಿಂ ನಟ ಮಹೇರ್ಶಲಾ ಆಲಿ

    ಲಾಸ್ ಏಂಜಲೀಸ್: ಸಿನಿಮಾ ರಂಗದ ಬಹುದೊಡ್ಡ ಪ್ರಶಸ್ತಿ ಅಂದ್ರೆ ಆಸ್ಕರ್ ಅವಾರ್ಡ್. ಈ ಅವಾರ್ಡ್‍ನ 89ನೇ ಕಾರ್ಯಕ್ರಮ ಅಮೆರಿಕದ ಲಾಸ್ ಏಂಜಲೀಸ್‍ನಲ್ಲಿ ನಡೆದಿದ್ದು, ಇದೇ ಮೊದಲ ಬಾರಿಗೆ ಮುಸ್ಲಿಂ ನಟರೊಬ್ಬರಿಗೆ ಆಸ್ಕರ್ ಪ್ರಶಸ್ತಿ ಪಡೆದಿದ್ದಾರೆ.

    ಮಹೇರ್ಶಲಾ ಆಲಿ ಅತ್ಯತ್ತಮ ಪೋಷಕ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮೂನ್ ಲೈಟ್ ಚಿತ್ರದಲ್ಲಿನ ನಟನೆಗಾಗಿ ಆಲಿ ಈ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಆಸ್ಕರ್ ಪ್ರಶಸ್ತಿ ಪಡೆದ ಮೊದಲ ಮುಸ್ಲಿಂ ನಟ ಎಂಬ ಹೆಗ್ಗಳಿಕೆಗೆ ಅಲಿ ಪಾತ್ರರಾಗಿದ್ದಾರೆ.

    ಮಿಯಾಮಿ ಸಮುದಾಯದ ಕುರಿತು ಬೆಳಕು ಚೆಲ್ಲುವ `ಮೂನ್ ಲೈಟ್’ ಅತ್ಯತ್ತಮ ಚಿತ್ರ ಪ್ರಶಸ್ತಿ ಪಡೆದಿದೆ. ಅಂತೆಯೇ `ಮ್ಯಾಂಚೆಸ್ಟರ್ ಬೈ ದಿ ಸೀ’ ಚಿತ್ರದ ಅಮೋಘ ಅಭಿನಯಕ್ಕಾಗಿ ನಟ ಕ್ಯಾಸಿ ಅಫ್ಲೆಕ್ ಅತ್ಯುತ್ತಮ ನಟ ಪ್ರಶಸ್ತಿ ಸ್ವೀಕರಿಸಿದ್ದಾರೆ. ಲಾಲಾ ಲ್ಯಾಂಡ್ ಚಿತ್ರದಲ್ಲಿನ ಅಭಿನಯಕ್ಕಾಗಿ ನಟಿ ಎಮಾ ಸ್ಟೋನ್ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಲಾಲಾ ಲ್ಯಾಂಡ್ ಚಿತ್ರಕ್ಕಾಗಿ ಯುವ ನಿರ್ದೇಶಕ ಡ್ಯಾಮಿಯೆನ್ ಚಾಝೆಲ್ಲೆ ಅತ್ಯತ್ತಮ ನಿರ್ದೇಶಕ ಪ್ರಶಸ್ತಿ ಪಡೆದಿದ್ದಾರೆ.

    ಇನ್ನು ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅಲಿಯಾಸ್ ಪಿಗ್ಗಿ ಚಾಪ್ಸ್ ಕೂಡ ತನ್ನ ವಿಭಿನ್ನ ಗೆಟಪ್‍ನಿಂದ ಕಾರ್ಯಕ್ರಮದಲ್ಲಿ ಗಮನಸೆಳೆದಿದ್ದಾರೆ. ರೆಡ್ ಕಾರ್ಪೆಟ್ ಮೇಲೆ ವೇದಿಕೆಗೆ ನಮಸ್ತೆ ಎಂದು ಹೇಳಿದ ಪ್ರಿಯಾಂಕಾ ಎಲ್ಲರ ಗಮನ ಸೆಳೆದರು. ಕಾರ್ಯಕ್ರಮದ ಫೋಟೋಗಳನ್ನ ಪ್ರಿಯಾಂಕಾ ಚೋಪ್ರಾ ತನ್ನ ಇನ್‍ಸ್ಟ್ರಾಗ್ರಾಮ್ ಅಕೌಂಟ್‍ನಲ್ಲಿ ಅಪ್‍ಲೋಡ್ ಮಾಡಿದ್ದಾರೆ.