Tag: ಆಸಿಡ್

  • ನಟಿ ರಶ್ಮಿಗೆ ನಾನಾ ರೀತಿಯಲ್ಲಿ ಕೊಲೆ ಬೆದರಿಕೆ : ದೂರು ನೀಡಲು ಚಿಂತನೆ

    ನಟಿ ರಶ್ಮಿಗೆ ನಾನಾ ರೀತಿಯಲ್ಲಿ ಕೊಲೆ ಬೆದರಿಕೆ : ದೂರು ನೀಡಲು ಚಿಂತನೆ

    ತೆಲುಗು ಸಿನಿಮಾ ರಂಗದ ಹೆಸರಾಂತ ನಿರೂಪಕಿ ಹಾಗೂ ನಟಿ ರಶ್ಮಿ ಗೌತಮ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದಿಲ್ಲೊಂದು ಫೋಟೋ ಹಾಗೂ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದವರು, ಇದ್ದಕ್ಕಿದ್ದಂತೆ ಆಘಾತ ಮೂಡಿಸುವಂತಹ ಪೋಸ್ಟ್ ವೊಂದನ್ನು ಹಾಕಿದ್ದಾರೆ. ಇಂತಹ ಘಟನೆಗಳು ಇತ್ತೀಚಿಗೆ ಹೆಚ್ಚಾಗುತ್ತಿರುವ ಕುರಿತು ಅವರು ಕಳವಳ ವ್ಯಕ್ತ ಪಡಿಸಿದ್ದಾರೆ.

    ತೆಲುಗು ಚಿತ್ರರಂಗದಲ್ಲಿ ರಶ್ಮಿಗೆ ಸಾಕಷ್ಟು ಬೇಡಿಕೆಯಿದೆ. ಹೆಚ್ಚು ಸಂಭಾವನೆ ಪಡೆಯುವ ನಿರೂಪಕಿ ಎನ್ನುವ ಕೀರ್ತಿಗೂ ಅವರು ಪಾತ್ರರಾಗಿದ್ದಾರೆ. ಅಲ್ಲದೇ, ಸೋಷಿಯಲ್ ಮೀಡಿಯಾದಲ್ಲಿ ಅನೇಕರು ಈ ನಟಿಯನ್ನು ಫಾಲೋ ಮಾಡುತ್ತಾರೆ. ಅದೇ ಸೋಷಿಯಲ್ ಮೀಡಿಯಾದಲ್ಲಿ ಅವರಿಗೆ ಆಸಿಡ್ ಹಾಕುವ ಹಾಗೂ ಕಾರಿನಿಂದ ಗುದ್ದಿಸಿ ಸಾಯಿಸುವ ಕುರಿತು ವ್ಯಕ್ತಿಯೊಬ್ಬ ಪೋಸ್ಟ್ ಮಾಡಿದ್ದಾರೆ. ಆ ಪೋಸ್ಟ್ ಅನ್ನು ಅವರು ಶೇರ್ ಮಾಡಿದ್ದಾರೆ. ಇದನ್ನೂ ಓದಿ: KCC 2023: ನಿನ್ನೆ ಪಂದ್ಯದಲ್ಲಿ ಸೋತವರು ಯಾರು? ಗೆದ್ದವರು ಯಾರು?

    ಈ ಹಿಂದೆ ಕೆಲವರು ನನ್ನ ಮದುವೆ ಬಗ್ಗೆ ಕಾಳಜಿ ತೋರುತ್ತಿದ್ದರು. ಬೇಗ ಮದುವೆ ಆಗು ಎನ್ನುತ್ತಿದ್ದರು. ಇದೀಗ ಆಸಿಡ್ ಹಾಕುವುದಾಗಿ, ಆಕ್ಸಿಡೆಂಟ್ ಮಾಡಿಸಿ ಸಾಯಿಸುವುದಾಗಿ ಹೇಳುತ್ತಿದ್ದಾರೆ. ಇಂಥವರಿಗೆ ಏನು ಮಾಡೋದು? ದೂರು ಕೊಡಲೆ? ಎಂದು ಅದೇ ಸೋಷಿಯಲ್ ಮೀಡಿಯಾದಲ್ಲಿ ಕೇಳಿದ್ದಾರೆ. ಈ ರೀತಿಯ ಬೆದರಿಕೆಗಳನ್ನು ಗಂಭೀರವಾಗಿ ತಗೆದುಕೊಳ್ಳಬೇಕೋ? ಅಥವಾ ಸುಮ್ಮನೆ ಇದ್ದುಬಿಡಬೇಕು ಎನ್ನುವ ಗೊಂದಲವನ್ನೂ ಅವರು ವ್ಯಕ್ತ ಪಡಿಸಿದ್ದಾರೆ.

    ಈ ರೀತಿಯಲ್ಲಿ ವ್ಯಕ್ತಿಗಳು ಕಾಮೆಂಟ್ ಮಾಡುವುದಕ್ಕೆ ಕಾರಣ ಏನು ಎನ್ನುವುದನ್ನು ಅವರೇ ಹೇಳಿಕೊಂಡಿದ್ದಾರೆ. ಕಾಮೆಂಟ್ ಮಾಡಿದವರು ಸ್ಕ್ರೀನ್ ಶಾಟ್ ತಗೆದು ಅದನ್ನು ಅವರು ಪೋಸ್ಟ್ ಮಾಡಿದ್ದಾರೆ. ಒಂದು ಪೋಸ್ಟ್ ನಲ್ಲಿ ನಿನಗೆ ವಯಸ್ಸಾಗುತ್ತಿದೆ, ಬೇಗ ಮದುವೆಯಾಗು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ನಿನ್ನ ಪಾಡಿಗೆ ನೀನು ಇರು. ಇಷ್ಟಬಂದಂತೆ ವರ್ತಿಸಬೇಡ ಎಂದಿದೆ.

  • ಸಾಯಂಕಾಲದೊಳಗೆ ಆ್ಯಸಿಡ್ ಸಂತ್ರಸ್ತೆಯ ಜೊತೆ ಮಾತನಾಡಲಿದ್ದಾರೆ ಕಿಚ್ಚ ಸುದೀಪ್

    ಸಾಯಂಕಾಲದೊಳಗೆ ಆ್ಯಸಿಡ್ ಸಂತ್ರಸ್ತೆಯ ಜೊತೆ ಮಾತನಾಡಲಿದ್ದಾರೆ ಕಿಚ್ಚ ಸುದೀಪ್

    ರಡು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಆ್ಯಸಿಡ್ ದಾಳಿಗೆ ಒಳಗಾಗಿದ್ದ ಸಂತ್ರಸ್ತೆಯು ಇದೀಗ ಚೇತರಿಕೆ ಕಾಣುತ್ತಿದ್ದು, ಈ ನಡುವೆ ಅವರು ನಟ ಕಿಚ್ಚ ಸುದೀಪ್ ಅವರನ್ನು ಭೇಟಿ ಮಾಡಲು ಹಾತೊರೆಯುತ್ತಿದ್ದಾರೆ. ಈ ಕುರಿತು ಪಬ್ಲಿಕ್ ಟವಿ ಜೊತೆ ಮಾತನಾಡಿದ್ದ ಆ ಹುಡುಗಿಯ ಕುಟುಂಬ ತಮ್ಮ ಮಗಳು ಸುದೀಪ್ ಅವರ ದೊಡ್ಡ ಅಭಿಮಾನಿಯಾಗಿದ್ದು, ಅವರನ್ನು ಭೇಟಿ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದ್ದರು.

    ಸಂತ್ರಸ್ತೆಯ ಬೇಡಿಕೆ ಕುರಿತು ಪಬ್ಲಿಕ್ ಟಿವಿ ಮತ್ತು ಪಬ್ಲಿಕ್ ಟಿವಿ ಡಿಜಿಟಿಲ್ ವರದಿ ಪ್ರಕಟಿಸುವುದರ ಜೊತೆಗೆ ಸುದೀಪ್ ಅವರ ಆಪ್ತರಾದ ಜಾಕ್ ಮಂಜು ಅವರನ್ನು ಸಂಪರ್ಕಿಸಲಾಯಿತು. ಈ ಕುರಿತು ಪ್ರತಿಕ್ರಿಯೆ ನೀಡಿದ ಜಾಕ್ ಮಂಜು, ‘ಆ ಯುವತಿಯು ಐಸಿಯುನಲ್ಲಿ ಇರುವುದರಿಂದ ಅವರನ್ನು ಭೇಟಿ ಮಾಡುವುದು ಕಷ್ಟವಾಗುತ್ತದೆ. ಹೀಗೆ ಭೇಟಿ ಮಾಡಿದರೆ ಅವರಿಗೆ ತೊಂದರೆ. ಹಾಗಾಗಿ ಇಂದು ಫೋನ್‌ನಲ್ಲಿ ಸಂತ್ರಸ್ತೆಯ ಜೊತೆ ಸುದೀಪ್ ಮಾತನಾಡುತ್ತಾರೆ. ಈ ವಾರದಲ್ಲಿ ವಿಡಿಯೋ ಕಾಲ್ ಮಾಡಿಸುವ ವ್ಯವಸ್ಥೆ ಮಾಡುತ್ತೇನೆ. ಯುವತಿಯು ಹುಷಾರಾಗಿ ಬಂದ ನಂತರ ಮನೆಯಲ್ಲಿ ಭೇಟಿ ಮಾಡಿಸುವುದಾಗಿ’ ಹೇಳಿದ್ದಾರೆ. ಇದನ್ನೂ ಓದಿ:ಆ್ಯಸಿಡ್ ಸಂತ್ರಸ್ತೆಗೆ ನಟ ಕಿಚ್ಚ ಸುದೀಪ್ ನೋಡುವಾಸೆ : ನೋವಿನ ನಡುವೆಯೂ ನಾಲ್ಕು ಬಾರಿ ಸುದೀಪ್ ಹೆಸರು ಹೇಳಿದ ಯುವತಿ

    ಸದ್ಯ ಸುದೀಪ್ ಅವರ ವಿಕ್ರಾಂತ್ ರೋಣ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ನಿಗದಿಯಂತೆ ಹಲವು ಕಾರ್ಯಕ್ರಮಗಳಲ್ಲಿ ಇಂದು ತೊಡಗಿದ್ದಾರೆ. ಈ ನಡುವೆಯೂ ಆ ಹುಡುಗಿಯ ಜೊತೆ ದೂರವಾಣಿಯ ಮೂಲಕ ಮಾತನಾಡುವುದಾಗಿ ಜಾಕ್ ಮಂಜು ತಿಳಿಸಿದ್ದಾರೆ.

    Live Tv

  • ಆ್ಯಸಿಡ್ ಸಂತ್ರಸ್ತೆಗೆ ನಟ ಕಿಚ್ಚ ಸುದೀಪ್ ನೋಡುವಾಸೆ : ನೋವಿನ ನಡುವೆಯೂ ನಾಲ್ಕು ಬಾರಿ ಸುದೀಪ್ ಹೆಸರು ಹೇಳಿದ ಯುವತಿ

    ಆ್ಯಸಿಡ್ ಸಂತ್ರಸ್ತೆಗೆ ನಟ ಕಿಚ್ಚ ಸುದೀಪ್ ನೋಡುವಾಸೆ : ನೋವಿನ ನಡುವೆಯೂ ನಾಲ್ಕು ಬಾರಿ ಸುದೀಪ್ ಹೆಸರು ಹೇಳಿದ ಯುವತಿ

    ನ್ನಡದ ಹೆಸರಾಂತ ನಟ ಕಿಚ್ಚ ಸುದೀಪ್ ಅವರನ್ನು ನೋಡುವ ಆಸೆ ವ್ಯಕ್ತ ಪಡಿಸಿದ್ದಾರೆ ಆ್ಯಸಿಡ್ ದಾಳಿಗೊಳಗಾದ ಯುವತಿ. ತಾವು ಸುದೀಪ್ ಅವರ ಅಪ್ಪಟ ಅಭಿಮಾನಿಯಾಗಿದ್ದು, ಅವರ ಅಭಿನಯದ ಸಾಕಷ್ಟು ಚಿತ್ರಗಳನ್ನ ನೋಡಿದ್ದೇನೆ. ನನಗೆ ಅವರ ಎಲ್ಲಾ ಸಿನಿಮಾಗಳೂ ಇಷ್ಟ. ಆ್ಯಸಿಡ್ ದಾಳಿಗೆ ಒಳಗಾಗುವ ಮುನ್ನವೂ ನಾನು ಅವರ ಸಿನಿಮಾಗಳನ್ನು ನೋಡಿದ್ದೇನೆ ಎಂದು ಅವರು ಹೇಳಿದ್ದಾರೆ.

    ಆ ಸಂತ್ರಸ್ತೆ ಇನ್ನೂ ಕೂಡ ಸೆಂಟ್ ಜಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ ಅವರಿಗೆ ಎರಡು ಬಾರಿ ಬ್ಲಡ್ ಮತ್ತು ಸ್ಕಿನ್ ಪ್ಲಾಂಟೇಷನ್ ಸರ್ಜರಿ ಮುಗಿದಿದೆ.  ಈ ನಡುವೆ ಕುಟುಂಬಸ್ಥರ ಬಳಿ ಸುದೀಪ್ ನೋಡುವ ಆಸೆ ಹೇಳಿಕೊಂಡಿದ್ದಾರೆ. ಈ ಸಂಕಟದ ನಡುವೆಯೂ ಅವರು ನಾಲ್ಕು ಬಾರಿ ಸುದೀಪ್‌ ನೋಡಬೇಕು ಅಂತಾ ಕೇಳಿದ್ದಾರೆ. ಸದ್ಯಕ್ಕೆ ಆ ಯುವತಿಯನ್ನು ಸಮಾಧಾನಿಸಲು ಕುಟುಂಬದವರು ‘ಸುದೀಪ್ ಅವರು ಬ್ಯುಸಿಯಲ್ಲಿರ್ತಾರೆ. ವ್ಯವಸ್ಥೆ ಮಾಡುತ್ತೇವೆ’ ಅಂತಾ ಸಮಾಧಾನ ಮಾಡಿದ್ದಾರಂತೆ. ಇದನ್ನೂ ಓದಿ:ತಮಿಳು ಸಿನಿಮಾ ಮಾಡ್ತಾರಾ ಅಥವಾ ಕನ್ನಡದ ನಿರ್ದೇಶಕನಿಗೆ ಮಣೆ ಹಾಕ್ತಾರಾ ಯಶ್?

    ಅನಾರೋಗ್ಯಕ್ಕೆ ತುತ್ತಾದ ಅನೇಕ ಅಭಿಮಾನಿಗಳನ್ನು ಈಗಾಗಲೇ ಕಿಚ್ಚ ಸುದೀಪ್ ಭೇಟಿ ಮಾಡಿದ್ದಾರೆ. ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ದಾರೆ. ಆ್ಯಸಿಡ್ ದಾಳಿಗೆ ಒಳಗಾಗಿರುವ ಈ ಅಭಿಮಾನಿಯ ಆಸೆಯನ್ನೂ ಸುದೀಪ್ ಅವರು ಈಡೇರಿಸಲಿ ಎನ್ನುವುದೇ ಅವರ ಕುಟುಂಬದ ಮನವಿ.

    Live Tv

  • ವಧು ಕಿಡ್ನಾಪ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್- ನನ್ನ ಯಾರೂ ಕಿಡ್ನಾಪ್ ಮಾಡಿಲ್ಲ ಅಂದ ಜಲಜಾ

    ವಧು ಕಿಡ್ನಾಪ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್- ನನ್ನ ಯಾರೂ ಕಿಡ್ನಾಪ್ ಮಾಡಿಲ್ಲ ಅಂದ ಜಲಜಾ

    ನೆಲಮಂಗಲ: ನಗರದ ವಧುವಿನ ಕಿಡ್ನಾಪ್ ಪ್ರಕರಣವು ಬೇರೆ ರೀತಿ ತಿರುವು ಪಡೆದುಕೊಂಡಿದ್ದು, ನನ್ನ ಯಾರೂ ಕಿಡ್ನಾಪ್ ಮಾಡಿಲ್ಲ. ನಾನೇ ನನ್ನ ಅಪ್ಪ, ಅಣ್ಣನ ಜೊತೆಗೆ ಬಂದಿದ್ದೇನೆ ಎಂದು ಕಿಡ್ನಾಪ್ ಆದ ನವ ವಧುವೇ ಹೇಳಿಕೊಂಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಜಲಜ, ಗಂಗಾಧರಯ್ಯನ ಜೊತೆ ನಾನು ಮದುವೆಯಾಗಿದ್ದು, ಕೂಡ ಭಯ ಹಾಗೂ ಬಲವಂತದಿಂದಾಗಿದ್ದೇನೆ. ಈ ಹಿಂದೆ ಅವನು ನನ್ನ ಕುಟುಂಬಕ್ಕೆ ಆಸಿಡ್ ಹಾಕಿ ಕೊಲೆ ಮಾಡುವ ಬೆದರಿಕೆ ಹಾಕಿದ್ದನು. ಮದುವೆಯಾಗದಿದ್ದರೆ ನಿಮ್ಮ ಕುಟುಂಬಕ್ಕೆ ಆಸಿಡ್ ಹಾಕುವುದಾಗಿ ಬೆದರಿಕೆ ಒಡ್ಡಿದ್ದನು ಎಂದು ಹೇಳಿದ್ದಾರೆ. ಇದನ್ನೂ ಓದಿ: ದೇಶದ ಒಳಿತಿಗಾಗಿ ಪ್ರಧಾನಿ ಸ್ಥಾನವನ್ನು ತ್ಯಾಗ ಮಾಡಿದವರಿಗೆ ಕೊಡುವ ಬೆಲೆ ಇದೆಯೇ?: ಕೇಂದ್ರ ಸರ್ಕಾರಕ್ಕೆ ಡಿಕೆಶಿ ಪ್ರಶ್ನೆ

    ಆತ ನನ್ನ ಬಲವಂತವಾಗಿ ಕರೆದುಕೊಂಡು ಹೋಗಿದ್ದನು. ನಂತರದಲ್ಲಿ ಪ್ರತಿ ಗಂಟೆ ಗಂಟೆಗೆ ಜಾಗ ಮನೆ ಬದಲಾವಣೆ ಮಾಡುತಿದ್ದನು. ನನ್ನ ಅಪ್ಪ, ಅಮ್ಮ ಚೆನ್ನಾಗಿರಲಿ ಅನ್ನುವ ಒಂದೇ ಒಂದು ಕಾರಣಕ್ಕೆ ನಾನು ಆತನ ಜೊತೆಗಿದ್ದೇ. ಇಂದು ಮದುವೆಯಾಗಿ ಪೊಲೀಸ್ ಠಾಣೆಗೆ ನಾವು ಬಂದ ವೇಳೆ ವರನು ನನಗೆ ಚಿತ್ರಹಿಂಸೆ ಕೊಡುವ ಬಗ್ಗೆ ನಮ್ಮ ತಂದೆ ಸ್ನೇಹಿತರಿಗೆ ತಿಳಿಸಿದ್ದೇನು. ನನ್ನ ತಂದೆ ಬಂದಾಗ ನಾನೇ ಓಡಿಹೋಗಿ ಕಾರಲ್ಲಿ ಕುಳಿತೆ. ನನ್ನ ಯಾರೂ ಕಿಡ್ನಾಪ್ ಮಾಡಿಲ್ಲ. ಅವರ ಕುಟುಂಬ ಸರಿ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಸಚಿವ ಬಿ.ಸಿ ನಾಗೇಶ್ ಮನೆ ಮೇಲೆ NSUI ದಾಳಿ

    ನಾನು ಅವನನ್ನು ನಿಜವಾಗಿಯೂ ಪ್ರೀತಿ ಮಾಡುತ್ತಿದ್ದೆ. ಆದರೆ ಅವನು ಇಂತಹ ಲೋಫರ್ ಅಂತ ನನಗೆ ಗೊತ್ತಿರಲಿಲ್ಲ. ಅವನ ಫೋನ್ ನೋಡಿದ ಮೇಲೆ ಗೊತ್ತಾಯಿತು. ಅವನಿಗೆ ಈ ಮೊದಲು ಇಬ್ಬರು ಮೂವರ ಜೊತೆಗೆ ಸಂಬಂಧ ಇತ್ತು. ಅದನ್ನು ನೋಡಿದ ಮೇಲೆ ಮತ್ತೆ ವರನ ಕುಟುಂಬ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿತ್ತು. ನನ್ನನ್ನು ಕಿಡ್ನಾಪ್ ಮಾಡಲು ಯಾವುದೇ ಗೂಂಡಾಗಳು ಬಂದಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

  • ಅವನನ್ನ ಪ್ಲೀಸ್ ಬಿಡಬೇಡಿ, ಅವನಿಗೆ ಶಿಕ್ಷೆಯಾಗಲೇ ಬೇಕು: ಪೊಲೀಸರನ್ನು ಬೇಡಿಕೊಂಡ ಆಸಿಡ್ ಸಂತ್ರಸ್ತೆ

    ಅವನನ್ನ ಪ್ಲೀಸ್ ಬಿಡಬೇಡಿ, ಅವನಿಗೆ ಶಿಕ್ಷೆಯಾಗಲೇ ಬೇಕು: ಪೊಲೀಸರನ್ನು ಬೇಡಿಕೊಂಡ ಆಸಿಡ್ ಸಂತ್ರಸ್ತೆ

    ಬೆಂಗಳೂರು: ಅವನನ್ನ ಪ್ಲೀಸ್ ಬಿಡಬೇಡಿ, ಅವನಿಗೆ ಶಿಕ್ಷೆಯಾಗಲೇ ಬೇಕು ಎಂದು ಆಸಿಡ್ ದಾಳಿಗೆ ಒಳಗಾದ ಯುವತಿ ಪೊಲೀಸರಲ್ಲಿ ಮನವಿ ಮಾಡಿದ್ದಾಳೆ.

    ಯುವತಿ ಮೇಲೆ ನಾಗೇಶ್ ಆಸಿಡ್ ದಾಳಿ ಮಾಡಿದ್ದು, ಆಕೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈ ವೇಳೆ ಪೊಲೀಸರು ಯುವತಿಯನ್ನು ವಿಚಾರಣೆ ಮಾಡಿದ್ದು, ಅವನನ್ನ ಮಾತ್ರ ಬಿಡಬೇಡಿ ಸರ್, ಅವನಿಗೆ ಸರಿಯಾದ ಶಿಕ್ಷೆಯಾಗಬೇಕು ಎಂದು ಪೊಲೀಸರ ಬಳಿ ಮನವಿ ಮಾಡಿದ್ದಾಳೆ. ಯುವತಿಯ ಸ್ಟೇಟ್ ಮೆಂಟ್ ಪಡೆದ ಪೊಲೀಸರು ನಾಗೇಶ್ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಯುವತಿ ಮೇಲೆ ಪಾಗಲ್ ಪ್ರೇಮಿಯಿಂದ ಆ್ಯಸಿಡ್ ಅಟ್ಯಾಕ್!

    ಆರೋಪಿ ನಾಗೇಶ್ ಯುವತಿ ಮೇಲೆ ಆಸಿಡ್ ಹಾಕಿದ ಬಳಿಕ ಕೋರ್ಟ್ ಬಳಿ ಹೋಗಿದ್ದಾನೆ. ವಕೀಲರನ್ನ ಭೇಟಿ ಮಾಡುವ ಉದ್ದೇಶದಿಂದ ನಾಗೇಶ್ ಸಿಸಿಟ ಸಿವಿಲ್ ಕೋರ್ಟ್ ಬಳಿ ಹೋಗಿದ್ದಾನೆ. ಬಳಿಕ ನಾಗೇಶ್ ತನ್ನ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ. ಪ್ರಸ್ತುತ ಕಾಮಾಕ್ಷಿಪಾಳ್ಯ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

    ದೂರಿನಲ್ಲಿ ಏನಿದೆ?
    ನಾನು ಖಾಸಗಿ ಕಂಪನಿಯೊಂದರಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡಿಕೊಂಡಿದ್ದೇನೆ. ಈ ದಿನ ಬೆಳಗ್ಗೆ 8:30ರ ಸುಮಾರಿಗೆ ಕಂಪನಿಯ ಮೊದಲ ಮಹಡಿಯಲ್ಲಿದ್ದ ಕಚೇರಿಗೆ ನಾನು ಹೋಗಿದ್ದೆ. ಈ ವೇಳೆ ಕಚೇರಿಗೆ ಇನ್ನೂ ಯಾರು ಬಾರದೇ ಇರುವ ಹಿನ್ನೆಲೆಯಲ್ಲಿ ಕಚೇರಿಯ ಬಾಗಿಲ ಬಳಿ ನಿಂತಿದ್ದಾಗ ನಾಗೇಶ್ ಸ್ಥಳಕ್ಕೆ ಬಂದಿದ್ದ. ನಾನು ಆತನ ಕೈಯಲ್ಲಿ ಕವರ್‍ವೊಂದರಲ್ಲಿ ಏನೋ ವಸ್ತು ಇರುವುದನ್ನು ನೋಡಿದೆ.

    ತಕ್ಷಣ ನಾನು ಕೆಳಗೆ ಹೋಗಲು ಪ್ರಯತ್ನಿಸಿದ ವೇಳೆ ಹಿಂಬಾಲಿಸಿ ಬಂದ ಆತ ಕೈಯಲ್ಲಿದ್ದ ಆಸಿಡ್ ನನ್ನ ಎದೆ, ಬೆನ್ನು, ತಲೆ ಮೇಲೆ ಹಾಕಿದ್ದಾನೆ. ನಾನು ನಮ್ಮ ತಂದೆಯನ್ನು ಸ್ಥಳಕ್ಕೆ ಕರೆಸಿಕೊಂಡು ಲಕ್ಷ್ಮಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿರುತ್ತೇನೆ. ನಾಗೇಶ್‍ನು ಏಳು ವರ್ಷಗಳಿಂದ ನನ್ನನ್ನು ಪ್ರೀತಿಸುವಂತೆ ಹಿಂಸೆ ಕೊಡುತ್ತಿದ್ದು, ನಾನು ಒಪ್ಪಿರಲಿಲ್ಲ. ಏಪ್ರಿಲ್ 27 ರಂದು ನನ್ನನ್ನು ಹಿಂಬಾಲಿಸಿಕೊಂಡು ನಮ್ಮ ಆಫೀಸ್ ಬಳಿ ಬಂದು, ನೀನು ನನ್ನನ್ನೇ ಮದುವೆ ಆಗಬೇಕು, ಇಲ್ಲವಾದರೆ ಬೇರೆ ಯಾರು ಮದುವೆ ಆಗದಂತೆ ಮಾಡಿಬಿಡುತ್ತೇವೆ ಅಂತಾ ಬೆದರಿಕೆ ಹಾಕಿದ್ದನು. ಇದನ್ನೂ ಓದಿ: ಹಾಡಹಗಲೇ ಅತ್ಯಾಚಾರ – ‘ಕಾಲಿಗೆ ಬೀಳುತ್ತೇನೆ ನನ್ನನ್ನು ಬಿಟ್ಟು ಬಿಡಿ’ ಎಂದ್ರೂ ಬಿಡದ ಪಾಪಿಗಳು

    ಈ ವಿಚಾರವನ್ನು ನಾನು ನಮ್ಮ ದೊಡ್ಡಮ್ಮನಿಗೆ ತಿಳಿಸಿದ್ದು, ನಾಗೇಶ್ ಅಣ್ಣನ ಬಳಿ ಈ ವಿಚಾರ ತಿಳಿಸಿದ್ದೆ. ಅದಕ್ಕೆ ಅವರು ಬುದ್ದಿ ಹೇಳುವುದಾಗಿ ಹೇಳಿದ್ದರು. ಈ ದಿನ ನನ್ನನ್ನು ಕೊಲೆ ಮಾಡುವ ಉದ್ದೇಶದಿಂದ ಆಸಿಡ್ ಹಾಕಿ ಗಾಯಗೊಳಿಸಿದ್ದಾನೆ. ಆತನ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.

  • ಆಲ್ಕೋಹಾಲ್ ಎಂದು ತಪ್ಪಾಗಿ ಆಸಿಡ್ ಕುಡಿದ!

    ಆಲ್ಕೋಹಾಲ್ ಎಂದು ತಪ್ಪಾಗಿ ಆಸಿಡ್ ಕುಡಿದ!

    ಅಗರ್ತಲಾ: ತ್ರಿಪುರಾದಲ್ಲಿ ವ್ಯಕ್ತಿಯೊರ್ವ ಆಲ್ಕೋಹಾಲ್ ಎಂದು ತಪ್ಪಾಗಿ ಆಸಿಡ್ ಕುಡಿದು ಸಾವನ್ನಪ್ಪಿದ್ದಾನೆ.

    ಶುಕ್ರವಾರ ತ್ರಿಪುರಾದ ಖೋವೈ ಜಿಲ್ಲೆಯ ಲಂಕಾಪುರ ಎಡಿಸಿ ಗ್ರಾಮದಲ್ಲಿ 55 ವರ್ಷದ ವ್ಯಕ್ತಿಯೊಬ್ಬ ಆಸಿಡ್ ಸೇವಿಸಿ ಮೃತಪಟ್ಟಿದ್ದಾನೆ. ಮೃತ ದುರ್ದೈವಿ ಕಾರ್ತಿಕ್ ಮೋಹನ್ ದೆಬ್ಬರ್ಮ ಮದ್ಯದ ಅಮಲಿನಲ್ಲಿ ಆಸಿಡ್ ತುಂಬಿದ ಬಾಟಲಿಯನ್ನು ಕುಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ದೆಬ್ಬರ್ಮ ದಿನನಿತ್ಯ ಕುಡಿಯುವ ಅಭ್ಯಾಸ ಬೆಳೆಸಿಕೊಂಡಿದ್ದ. ಶುಕ್ರವಾರ ರಾತ್ರಿ ಮದ್ಯದ ಅಮಲಿನಲ್ಲಿದ್ದ ಎಂದು ಪೊಲೀಸರು ಹೇಳಿದ್ದಾರೆ.

    ಮೂಲಗಳ ಪ್ರಕಾರ, ದೆಬ್ಬರ್ಮ ಸ್ಥಳೀಯ ಹಳ್ಳಿಗಾಡಿನ ಮದ್ಯದ ಅಂಗಡಿಯಲ್ಲಿ ಅತಿಯಾಗಿ ಕುಡಿದಿದ್ದು, ಮನೆಗೆ ಹೋಗಿ ಮಲಗಿಕೊಂಡಿದ್ದಾನೆ. ನಂತರ ಮಧ್ಯರಾತ್ರಿ ಎದ್ದು, ಮದ್ಯ ಕುಡಿಯಲು ಹುಡುಕಾಡಿದ್ದಾನೆ. ಆದರೆ ಆತನ ಕೈಗೆ ಮನೆಯಲ್ಲಿದ್ದ ಆಸಿಡ್ ಬಾಟಲಿ ಸಿಕ್ಕಿದೆ. ಅದನ್ನೇ ಮದ್ಯ ಎಂದು ತಿಳಿದ ದೆಬ್ಬರ್ಮ ಆಸಿಡ್ ಕುಡಿದಿದ್ದಾನೆ ಎಂದು ತಿಳಿದುಬಂದಿದೆ. ಇದನ್ನೂ ಓದಿ:  ಸರ್ಕಾರಿ ಶಾಲೆಯ ಕಂಪ್ಯೂಟರ್ ಕದ್ದ ಕಳ್ಳರು

    ALCOHOL

    ಆಸಿಡ್ ಕುಡಿದ ತಕ್ಷಣ ದೆಬ್ಬರ್ಮ ಪ್ರಜ್ಞಾಹೀನನಾಗಿದ್ದಾನೆ. ದೆಬ್ಬರ್ಮ ಕುಟುಂಬ ಸದಸ್ಯರು ಆತ ಪ್ರಜ್ಞಾಹೀನನಾಗಿರುವುದನ್ನು ನೋಡಿ ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು. ಆದರೆ ವೈದ್ಯರು ಆತ ಮೃತಪಟ್ಟಿದ್ದಾನೆ ಎಂದು ತಿಳಿಸಿದರು ಎಂದು ಮೂಲಗಳು ಹೇಳಿದೆ.

  • ಹೆಲ್ಮೆಟ್ ತೆಗೆಯುವಂತೆ ಹೇಳಿ ಲವ್ವರ್ ಮೇಲೆ ಆ್ಯಸಿಡ್ ಎರಚಿದ್ಳು

    ಹೆಲ್ಮೆಟ್ ತೆಗೆಯುವಂತೆ ಹೇಳಿ ಲವ್ವರ್ ಮೇಲೆ ಆ್ಯಸಿಡ್ ಎರಚಿದ್ಳು

    ನವದೆಹಲಿ: ಪ್ರಿಯಕರ ಮದುವೆಯಾಗಲು ನಿರಾಕರಿಸಿದ್ದಕ್ಕೆ ಕೋಪಗೊಂಡ ಯುವತಿ ಆತನ ಮೇಲೆಯೇ ಆ್ಯಸಿಡ್ ಎರಚಿರುವ ಘಟನೆ ದೆಹಲಿಯ ವಿಕಾಸ್ಪುರಿ ಪ್ರದೇಶದಲ್ಲಿ ನಡೆದಿದೆ.

    ಈ ಘಟನೆ ಜೂನ್ 11 ರಂದು ನಡೆದಿದ್ದು, ಯುವತಿ ಪ್ರಿಯಕನ ಜೊತೆ ಮೋಟಾರ್ ಬೈಕಿನಲ್ಲಿ ಹಿಂದೆ ಕುಳಿತುಕೊಂಡು ಹೋಗುತ್ತಿದ್ದಳು. ಈ ವೇಳೆ ಆಕೆ ಪ್ರಿಯರಕನ ಹೆಲ್ಮೆಟ್ ತೆಗೆಯುವಂತೆ ಕೇಳಿದ್ದಾಳೆ. ಬಳಿಕ ಏಕಾಏಕಿ ಆ್ಯಸಿಡ್ ಎರಚಿದ್ದಾಳೆ. ಪ್ರೇಮಿಗಳ ಮೇಲೆ ಆ್ಯಸಿಡ್ ದಾಳಿ ಮಾಡಲಾಗಿದೆ ಎಂದು ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.

    ಮಾಹಿತಿ ತಿಳಿದ ತಕ್ಷಣ ಆಸ್ಪತ್ರೆಗೆ ಪೊಲೀಸರು ಹೋಗಿದ್ದು, ಅಲ್ಲಿ ಯುವತಿಯ ಕೈಗೆ ಸಣ್ಣ ಗಾಯಗಳಾಗಿತ್ತು. ಆದರೆ ಯುವಕನ ಮುಖ, ಕುತ್ತಿಗೆ ಮತ್ತು ಎದೆಯ ಮೇಲೆ ತೀವ್ರವಾದ ಗಾಯಗಳಾಗಿದ್ದನ್ನು ಪೊಲೀಸರು ಗಮನಿಸಿದ್ದಾರೆ.

    ಪೊಲೀಸರಿಗೆ ಅನೇಕ ದಿನಗಳವರೆಗೆ ಅವರ ಮೇಲೆ ಆ್ಯಸಿಡ್ ದಾಳಿ ಮಾಡಿದವರು ಯಾರು ಎಂದು ಗೊತ್ತಾಗಲಿಲ್ಲ. ಆದರೆ ಈ ಬಗ್ಗೆ ವಿಚಾರಣೆ ಮಾಡುವಾಗ ಯುವಕ ನಾವು ಬೈಕಿನಲ್ಲಿ ಹೋಗುವಾಗ ಆ್ಯಸಿಡ್ ಎರಚಲಾಗಿದೆ ಎಂದು ಹೇಳಿದ್ದನು. ಜೊತೆಗೆ ಯುವತಿಯು ಹೆಲ್ಮೆಟ್ ತೆಗೆಯುವಂತೆ ನನ್ನ ಬಳಿ ಕೇಳಿಕೊಂಡಿದ್ದಳು. ಹೀಗಾಗಿ ಹೆಲ್ಮೆಟ್ ತೆಗೆದಿದ್ದೆ ಎಂದು ಹೇಳಿದ್ದಾನೆ. ಇದರಿಂದ ಅನುಮಾನಗೊಂಡ ಪೊಲೀಸರು ತಕ್ಷಣ ಯುವತಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ತನಿಖೆಯ ವೇಳೆ ಈ ಕೃತ್ಯವನ್ನು ತಾನೇ  ಎಸಗಿರುವುದಾಗಿ ಒಪ್ಪಿಕೊಂಡಿದ್ದಾಳೆ.

    ಯುವಕ ಮತ್ತು ಯುವತಿ ಇಬ್ಬರೂ ಮೂರು ವರ್ಷಗಳಿಂದ ರಿಲೇಷನ್‍ಶಿಪ್‍ನಲ್ಲಿ ಇದ್ದರು. ಆದರೆ ಇತ್ತೀಚೆಗೆ ಯುವಕ ಈ ರಿಲೇಷನ್‍ಶಿಪ್ ಅನ್ನು ಇಲ್ಲಿಗೆ ಕೊನೆಯಾಗಿಸೋಣ ಎಂದು ಕೇಳಿಕೊಂಡಿದ್ದನು. ಆದರೆ ಯುವತಿಗೆ ಆತನನ್ನು ಮದುವೆಯಾಗಬೇಕೆಂದು ಬಯಸಿದ್ದಳು. ಅದರಂತೆಯೇ ವಿವಾಹವಾಗೋಣ ಎಂದು ಪ್ರಿಯಕರನನ್ನು ಕೇಳಿದ್ದಾಳೆ. ಆದರೆ ಆತ ಮದುವೆಗೆ ನಿರಾಕರಿಸಿದ್ದಾನೆ. ಇದರಿಂದ ಕೋಪಗೊಂಡ ಯುವತಿ ಈ ರೀತಿಯಾಗಿ ಮಾಡಿದ್ದಾಳೆ ಎಂದು ಡಿಸಿಪಿ ಮೋನಿಕಾ ಭಾರಾದ್ವಾಜ್ ತಿಳಿಸಿದ್ದಾರೆ.

    ಯುವತಿಯ ಪರ್ಸ್ ನಲ್ಲಿ ಮನೆ ಸ್ವಚ್ಛ ಮಾಡಲು ಬಳಸುವ ಕೆಮಿಕಲ್ ಬಾಟಲ್ ಪತ್ತೆಯಾಗಿದೆ. ಸದ್ಯಕ್ಕೆ ಆರೋಪಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ನೀರು ಎಂದು ಆಸಿಡ್ ಕುಡಿದು ವೃದ್ಧೆ ಸಾವು

    ನೀರು ಎಂದು ಆಸಿಡ್ ಕುಡಿದು ವೃದ್ಧೆ ಸಾವು

    ಬೆಂಗಳೂರು: ನೀರು ಎಂದು ತಿಳಿದು ವೃದ್ಧೆ ಆಸಿಡ್ ಕುಡಿದು ಮೃತಪಟ್ಟಿರುವ ಘಟನೆ ಅಶೋಕನಗರದ ಸಿ ಸ್ಟ್ರೀಟ್‍ನ ಮನೆಯೊಂದರಲ್ಲಿ ನಡೆದಿದೆ.

    ಅರ್ಯಮಾಲ (68) ಮೃತ ದುರ್ದೈವಿ. ಗುರುವಾರ ರಾತ್ರಿ ಅರ್ಯಮಾಲ ನಿದ್ದೆ ಮಂಪರಿನಲ್ಲಿ ಎದ್ದು ನೀರು ಕುಡಿಯುವ ಬದಲು ಗ್ರಾನೈಟ್ ಕ್ಲೀನ್ ಮಾಡಲು ಬಳಸುವ ಪರ್ಮುಟೇಟೆಡ್ ಆಸಿಡ್ ಕುಡಿದಿದ್ದಾರೆ. ಆಸಿಡ್ ಕುಡಿದ ಬಳಿಕ ಅರ್ಯಮಾಲ ಹೊಟ್ಟೆ ನೋವು ಎಂದು ಒದ್ದಾಡಿದ್ದಾರೆ.

    ಕೂಡಲೇ ಆರ್ಯಮಲಾ ಕುಟುಂಬಸ್ಥರು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ವೃದ್ಧೆ ಅರ್ಯಮಾಲ ಮೃತಪಟ್ಟಿದ್ದಾರೆ. ಈ ಸಂಬಂಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮನೆಯ ನೀರಿನ ಸಂಪ್‍ಗೆ ಕ್ರಿಮಿನಾಶಕ, ಆಸಿಡ್ ಹಾಕಿದ ದುಷ್ಕರ್ಮಿಗಳು

    ಮನೆಯ ನೀರಿನ ಸಂಪ್‍ಗೆ ಕ್ರಿಮಿನಾಶಕ, ಆಸಿಡ್ ಹಾಕಿದ ದುಷ್ಕರ್ಮಿಗಳು

    ರಾಮನಗರ: ಆಸ್ತಿ ವಿಚಾರವಾಗಿ ದಾಯಾದಿಗಳ ನಡುವಿನ ಕಲಹದ ಹಿನ್ನೆಲೆಯಲ್ಲಿ ಮನೆಯ ಮುಂದಿನ ನೀರಿನ ಸಂಪ್ ಗೆ ಕ್ರಿಮಿನಾಶಕ, ಆಸಿಡ್ ಮಿಶ್ರಣ ಮಾಡಿರುವ ಘಟನೆ ರಾಮನಗರ ತಾಲೂಕಿನ ಅಂಕನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ತಡರಾತ್ರಿ ಗ್ರಾಮದ ರಮೇಶ್, ನಾಗರಾಜ್ ಎಂಬವರ ಮನೆಯ ಮುಂದಿನ ನೀರಿನ ಸಂಪ್ ಗೆ ಕಿಡಿಗೇಡಿಗಳು ಮಾವಿನ ಮರಕ್ಕೆ ಸಿಂಪಡಿಸುವ ಕ್ರಿಮಿನಾಶಕ ಹಾಗೂ ಆಸಿಡ್ ಮಿಶ್ರಣ ಮಾಡಿದ್ದಾರೆ. ತಡರಾತ್ರಿ ಮನೆಯ ನೀರಿನ ಸಂಪ್ ಗೆ ಕ್ರಿಮಿನಾಶಕ ಬೆರೆಸಿದ್ದಾರೆ.

    ತಿರುಗಾಡುವ ದಾರಿಯ ವಿಷಯಕ್ಕೆ ಜಗಳವಾಗುತ್ತಿತ್ತು. ಆಗ ಊರಿನ ಪ್ರಮುಖರು ರಾಜಿ ಸಂಧಾನ ಮಾಡಿಸಿದ್ದರು. ಆಗ ಇಬ್ಬರು ಕಾಂಪೌಂಡ್ ನಿರ್ಮಿಸಲು ನಿರ್ಧರಿಸಿದ್ದೇವು. ಶುಕ್ರವಾರ ರಾತ್ರಿ ನನ್ನ ಅಣ್ಣ ನೀರಿನ ಸಂಪ್‍ಗೆ ಕ್ರಿಮಿನಾಶಕ ಹಾಗೂ ಆಸಿಡ್ ಬೆರೆಸಿದ್ದಾನೆ. ಬೆಳಗ್ಗೆ ಎದ್ದು ನೋಡಿದ್ದಾಗ ನೀರು ಬೇರೆ ಬಣ್ಣಕ್ಕೆ ತಿರುಗಿತ್ತು ಎಂದು ರಮೇಶ್ ಆರೋಪಿಸಿದ್ದಾರೆ.

    ಬೆಳ್ಳಗೆ ನೀರು ತೆಗೆದುಕೊಳ್ಳಲು ಹೋದ ವೇಳೆ ನೀರು ಬೇರೆ ಬಣ್ಣಕ್ಕೆ ತಿರುಗಿ ವಾಸನೆ ಬರುತಿತ್ತು. ಅಲ್ಲದೇ ನೀರಿನಲ್ಲಿ ಕ್ರಿಮಿನಾಶಕ ಮಿಶ್ರಣದಿಂದ ನೊರೆ ಬಂದಿತ್ತು. ಇದರಿಂದ ಆತಂಕಗೊಂಡ ಮನೆಯವರು ನೀರು ಬಳಸದೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ಸಂಬಂಧಿಕರೇ ಆಸ್ತಿ ವ್ಯಾಜ್ಯ ಹಿನ್ನೆಲೆಯಲ್ಲಿ ನೀರಿಗೆ ವಿಷ ಬೆರೆಸಿದ್ದಾರೆ ಎಂಬ ಆರೋಪ ಮಾಡುತ್ತಿದ್ದಾರೆ.

    ಈ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಜ್ಞಾನ ಪ್ರಯೋಗದ ವೇಳೆ ಶಿಕ್ಷಕಿಯ ನಿರ್ಲಕ್ಷ್ಯ – ಬಾಲಕಿ ಕಾಲಿನ ಮೇಲೆ ಬಿದ್ದ ಆಸಿಡ್

    ವಿಜ್ಞಾನ ಪ್ರಯೋಗದ ವೇಳೆ ಶಿಕ್ಷಕಿಯ ನಿರ್ಲಕ್ಷ್ಯ – ಬಾಲಕಿ ಕಾಲಿನ ಮೇಲೆ ಬಿದ್ದ ಆಸಿಡ್

    ಶಿವಮೊಗ್ಗ: ವಿಜ್ಞಾನದ ಪ್ರಯೋಗದ ವೇಳೆ ಶಿಕ್ಷಕಿಯ ನಿರ್ಲಕ್ಷ್ಯದಿಂದ ಆರನೇ ತರಗತಿ ಬಾಲಕಿ ಕಾಲಿನ ಮೇಲೆ ಆಸಿಡ್ ಬಿದ್ದ ಘಟನೆ ಶಿವಮೊಗ್ಗದ ಸಾಗರ ರಸ್ತೆಯಲ್ಲಿರುವ ಸೇಂಟ್ ಜೋನ್ಸ್ ಅಕ್ಷರಧಾಮ ಶಾಲೆಯಲ್ಲಿ ನಡೆದಿದೆ. ಘಟನೆಯಲ್ಲಿ ಬಾಲಕಿಯ ತೊಡೆ ಹಾಗೂ ಕಾಲಿನ ಭಾಗದ ಚರ್ಮ ಸುಟ್ಟು ಹೋಗಿದೆ.

    ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಸ್ತು ಪ್ರದರ್ಶನದ ವೇಳೆ ವಿಜ್ಞಾನದ ಪ್ರಯೋಗಕ್ಕೆ ಆಸಿಡ್ ಬಳಸಲಾಗಿದೆ. ಇಂತಹ ಪ್ರಯೋಗದ ವೇಳೆ ಮಕ್ಕಳ ಕೈಗೆ ಆಸಿಡ್ ಕೊಡುವಂತಿಲ್ಲ ಎಂಬ ನಿಯಮವಿದ್ದರೂ, ಶಾಲೆಯ ಶಿಕ್ಷಕರು ಹಾಗೂ ಆಡಳಿತ ಮಂಡಳಿ ಮಕ್ಕಳಿಂದಲೇ ಈ ಪ್ರಯೋಗ ಮಾಡಿಸುವ ವೇಳೆ ಈ ದುರ್ಘಟನೆ ನಡೆದಿದೆ.

    ಕಾಲು ಸುಟ್ಟುಕೊಂಡ ಬಾಲಕಿಯನ್ನು ತಕ್ಷಣ ಆಸ್ಪತ್ರೆ ಸೇರಿಸಿಲ್ಲ. ಅಲ್ಲದೇ ಪೋಷಕರಿಗೂ ಸಂರ್ಪಕಿಸಿ ಈ ಘಟನೆ ಬಗ್ಗೆ ಮಾಹಿತಿ ನೀಡಿಲ್ಲ. ನಂತರ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾದ ಮೇಲೆ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕರು ತಪ್ಪೋಪ್ಪಿಕೊಂಡಿದ್ದಾರೆ.

    ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ನ್ಯಾಯಾಧೀಶರಾದ ಸೋಮಶೇಖರ್ ಬಾದಾಮಿ ಹಾಗೂ ಬಿಇಓ ಲೋಕೇಶ್ ಅವರ ಸಮ್ಮುಖದಲ್ಲಿ ನಡೆದ ಸಂಧಾನ ಸಭೆಯಲ್ಲಿ ಘಟನೆ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯರು, ಮುಂದೆ ಇಂತಹ ಘಟನೆ ನಡೆಯದಂತೆ ಎಚ್ಚರಿಕೆ ವಹಿಸುವುದಾಗಿ ತಪ್ಪೋಪ್ಪಿಕೊಂಡಿದ್ದಾರೆ. ಅಲ್ಲದೇ ಪೊಲೀಸರಿಗೆ ಎಫ್‍ಐಆರ್ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

    ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಮಾಪ್ತಿ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಪ್ರಯೋಗಾಲಯಗಳಲ್ಲಿ ಮಕ್ಕಳ ಕೈಗೆ ಆಸಿಡ್ ನಂತಹ ಮಾರಕ ವಸ್ತುಗಳನ್ನು ಪ್ರಯೋಗಗಳಿಗೆ ಕೊಡುವಂತಿಲ್ಲ. ಈ ನಿಯಮವನ್ನು ಕಡ್ಡಾಯವಾಗಿ ಪಾಲನೆ ಮಾಡುವುದಾಗಿ ಶಾಲಾ ಆಡಳಿತ ಮಂಡಳಿ ತಿಳಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv