Tag: ಆಷಾಢ

  • ಚಾಮುಂಡಿ ಬೆಟ್ಟದಲ್ಲಿ ಮೊದಲ ಆಷಾಢ ಶುಕ್ರವಾರ ಸಂಭ್ರಮಕ್ಕೆ ಕ್ಷಣಗಣನೆ

    ಚಾಮುಂಡಿ ಬೆಟ್ಟದಲ್ಲಿ ಮೊದಲ ಆಷಾಢ ಶುಕ್ರವಾರ ಸಂಭ್ರಮಕ್ಕೆ ಕ್ಷಣಗಣನೆ

    – ಬೆಟ್ಟಕ್ಕೆ ಖಾಸಗಿ ವಾಹನಗಳಿಗೆ ನೋ ಎಂಟ್ರಿ
    – ಭಕ್ತರಿಗೆ ಉಚಿತ ಪ್ರಯಾಣಕ್ಕೆ 50 ಕೆಎಸ್‌ಆರ್‌ಟಿಸಿ ಬಸ್‌ ವ್ಯವಸ್ಥೆ

    ಮೈಸೂರು: ಚಾಮುಂಡಿ ಬೆಟ್ಟದಲ್ಲಿ (Chamundi Hills) ಮೊದಲ ಆಷಾಢ ಶುಕ್ರವಾರದ (Ashada Friday) ಸಂಭ್ರಮಕ್ಕೆ ಕೌಂಟ್‌ಡೌನ್‌ ಶುರುವಾಗಿದೆ. ಬೆಟ್ಟಕ್ಕೆ ಪ್ರತಿ ಆಷಾಢ ಶುಕ್ರವಾರದಂದು ಖಾಸಗಿ ವಾಹನಗಳಿಗೆ ನಿರ್ಬಂಧ ವಿಧಿಸಲಾಗುತ್ತದೆ. ಅಂತೆಯೇ ಈ ಬಾರಿಯೂ ಖಾಸಗಿ ಬಸ್‌ಗಳಿಗೆ ನಿರ್ಬಂಧ ವಿಧಿಸಿದ್ದು, ಸರ್ಕಾರಿ ಬಸ್‌ ಉಚಿತ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗಿದೆ. ಆಷಾಢ ಪೂಜಾ ಕೈಂಕರ್ಯಗಳಿಗೆ ಸಿದ್ಧತೆ ಜೋರಾಗಿದೆ.

    ಆಷಾಢ ಶುಕ್ರವಾರ ಬಂದ್ರೆ ಸಾಕು ಅರಮನೆ ನಗರಿ ಮೈಸೂರು (Mysuru) ಹಾಗೂ ಚಾಮುಂಡಿ ಭಕ್ತರಿಗೆ ಸಂಭ್ರಮವೋ ಸಂಭ್ರಮ. ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಮೊದಲ ಆಷಾಢ ಶುಕ್ರವಾರ ಹಿನ್ನೆಲೆ ನಾಳೆ ನಾಡದೇವತೆ, ಶಕ್ತಿ ದೇವತೆ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ನಾಳೆ ಮುಂಜಾನೆ 3 ಗಂಟೆ 30 ನಿಮಿಷಕ್ಕೆ ಅಭಿಷೇಕದೊಂದಿಗೆ ಆರಂಭವಾಗುವ ವಿವಿಧ ರೀತಿಯ ಪೂಜಾ ಕೈಂಕರ್ಯ ಎರಡು ಗಂಟೆಗಳ ಕಾಲ ನಿರಂತರವಾಗಿ ನಡೆಯಲಿವೆ. ನಾಳೆ ದೇವಿಗೆ ಲಕ್ಷ್ಮೀ ಅಲಂಕಾರ ಮಾಡಿ ಬಳಿಕ‌ 5 ಗಂಟೆ 30 ನಿಮಿಷಕ್ಕೆ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ. ಇದನ್ನೂ ಓದಿ: ಮೈಸೂರಿನ ಶ್ರೀಗಂಧದ ಪೆಟ್ಟಿಗೆಯಲ್ಲಿ ಬೈಡನ್‌ಗೆ ಉಡುಗೊರೆ – ಮೋದಿ ಕೊಟ್ಟ ಗಿಫ್ಟ್ ಬಾಕ್ಸ್‌ನಲ್ಲಿ ಏನಿದೆ?

    ಆಷಾಢ ಶುಕ್ರವಾರದ ಪೂಜೆಗೆ ಚಾಮುಂಡಿಬೆಟ್ಟದಲ್ಲಿ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿದ್ದು, ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಕಿರಿದಾದ ಬೆಟ್ಟದ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಬಾರದೆಂದು ಖಾಸಗಿ ವಾಹನಗಳ ಪ್ರವೇಶ ನಿರ್ಬಂಧಿಸಲಾಗಿದೆ. ಬೆಟ್ಟಕ್ಕೆ ಹೋಗಲು ಭಕ್ತರಿಗೆ ಜಿಲ್ಲಾಡಳಿತ 50 ಕೆಎಸ್ಆರ್‌ಟಿಸಿ ಬಸ್ಸಿನ ಉಚಿತ ಪ್ರಯಾಣದ ವ್ಯವಸ್ಥೆ ಮಾಡಲಾಗಿದೆ. ನಗರದ ಲಲಿತಮಹಲ್ ಹೆಲಿಪ್ಯಾಡ್‌ ಸಮೀಪದಿಂದ ಸಾರ್ವಜನಿಕರಿಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ. ಲಲಿತಾ ಮಹಲ್ ಪ್ಯಾಲೆಸ್‌ ಹೆಲಿಪ್ಯಾಡ್‌ನಲ್ಲಿ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ 300 ಮತ್ತು 50 ರೂಪಾಯಿ ಟಿಕೆಟ್ ಇರಲಿದೆ.

    ಪ್ರಸಾದ ಕೌಂಟರ್‌ಗಳಲ್ಲಿ ಫುಡ್ ಸೇಫ್ಟಿ ಆಫೀಸರ್‌ಗಳ ತಂಡ ಇರಲಿದೆ. ದೊಡ್ಡ ಮಟ್ಟದಲ್ಲಿ ಪ್ರಸಾದ ವಿತರಣೆ ಮಾಡುವವರು ಫುಡ್ ಸೇಫ್ಟಿ ಆಫೀಸರ್ ಬಳಿ ಸರ್ಟಿಫಿಕೇಟ್ ಪಡೆಯುವುದು ಕಡ್ಡಾಯವಾಗಿದೆ. ಇದನ್ನೂ ಓದಿ: 13 ಬಾರಿ ಬಜೆಟ್ ಕೊಟ್ಟ ಕೂಡಲೇ ಗದ್ದೆಯಲ್ಲಿ ಭತ್ತ ಬೆಳೆದು ಅಕ್ಕಿ ಕೊಡೋಕೆ ಆಗಲ್ಲ: ಸಿದ್ದುಗೆ ಡಿವಿಎಸ್ ಟಾಂಗ್

    ಆಷಾಢ ಶುಕ್ರವಾರದಂದು ಶಕ್ತಿ ದೇವತೆಯನ್ನು ಪೂಜಿಸಿದವರಿಗೆ ವಿಘ್ನಗಳು ನಿರವಾರಣೆಯಾಗಿ, ಇಷ್ಠಾರ್ಥ ಸಿದ್ಧಿಸುತ್ತದೆ ಅನ್ನೋ ನಂಬಿಕೆಯಿದೆ. ಈ ನಿಟ್ಟಿನಲ್ಲಿ ಮೈಸೂರು ಮಾತ್ರವಲ್ಲದೆ ಬೇರೆ ಜಿಲ್ಲೆ ಹಾಗೂ ಹೊರ ರಾಜ್ಯದ ಲಕ್ಷಾಂತರ ಭಕ್ತರು ಸಹ ಆಗಮಿಸುತ್ತಿದ್ದಾರೆ. ಒಟ್ಟಾರೆ ಸಾಂಸ್ಕತಿಕ ನಗರಿ ಮೈಸೂರಿನಲ್ಲಿ ಆಷಾಢ ಮಾಸದ‌ ಪೂಜೆಗೆ ಸಿದ್ಧತೆ ಜೋರಾಗಿ ನಡೆದಿದೆ.

  • 16 ಗೇಟ್‍ಗಳನ್ನು ರಿಪ್ಲೇಸ್ ಮಾಡಲಾಗಿದ್ದು, ಇವತ್ತಿಗೂ 61 ಗೇಟ್ ಬದಲಿಸಬೇಕಾಗಿದೆ: ಸಿಎಂ

    16 ಗೇಟ್‍ಗಳನ್ನು ರಿಪ್ಲೇಸ್ ಮಾಡಲಾಗಿದ್ದು, ಇವತ್ತಿಗೂ 61 ಗೇಟ್ ಬದಲಿಸಬೇಕಾಗಿದೆ: ಸಿಎಂ

    ಮೈಸೂರು:  ಮೊದಲು 16 ಗೇಟ್‍ಗಳನ್ನು ರಿಪ್ಲೇಸ್ ಮಾಡಲಾಗಿದೆ. ಇವತ್ತಿಗೂ 61 ಗೇಟ್ ಬದಲಿಸಬೇಕಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಕೆಆರ್‌ಎಸ್ ಬಾಗಿನ ಕಾರ್ಯಕ್ರಮದ ವೇದಿಕೆಯಲ್ಲಿ ಬೊಮ್ಮಾಯಿ ಅವರು ಮಾತನಾಡಿದ್ದು, ಆಷಾಢದಲ್ಲಿ ಕಾವೇರಿ ಜಲಾನಯನದ 4 ಡ್ಯಾಂಗಳು ತುಂಬಿರುವುದು ಸಂತಸದ ವಿಷಯವಾಗಿದೆ. ಕಾವೇರಿ ಹಳೇ ಮೈಸೂರು ಭಾಗದ ಜೀವನದಿ. ಪವಿತ್ರವಾದ ನದಿಯ ಸದುಪಯೋಗ ಮಾಡಿಕೊಳ್ಳುವುದು ನಮ್ಮ ಕರ್ತವ್ಯ ಎಂದು ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಶ್ರೀಲಂಕಾ ಅಧ್ಯಕ್ಷರಾಗಿ ರನಿಲ್‌ ವಿಕ್ರಮಸಿಂಘೆ ಆಯ್ಕೆ

    ಮೊದಲು 16 ಗೇಟ್‍ಗಳನ್ನು ರಿಪ್ಲೇಸ್ ಮಾಡಲಾಗಿದೆ. ಇವತ್ತಿಗೂ 61 ಗೇಟ್ ಬದಲಿಸಬೇಕಾಗಿದೆ. ಒಂದೂವರೆ ವರ್ಷದಲ್ಲಿ ಈ ಕಾಮಗಾರಿ ಮುಗಿಯಬೇಕು. ಗೇಟ್ ಕಾಮಗಾರಿಗೆ 160 ಕೋಟಿ ರೂ. ನೀಡಲಾಗಿದೆ. ಎಲ್ಲ ಗೇಟ್ ಬದಲಿಸಿದ ಬಳಿಕ ಕೆಆರ್‌ಎಸ್‍ನಲ್ಲಿ ದೊಡ್ಡ ಹಬ್ಬ ಮಾಡೋಣ ಎಂದು ವಿವರಿಸಿದರು. ಇದನ್ನೂ ಓದಿ: ಮೇಕೆದಾಟು ಆಣೆಕಟ್ಟು ನಿರ್ಮಾಣ ಯೋಜನೆ- ಜು. 26ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್

    ಮೈಸೂರು ಮಹಾರಾಜರು ಡ್ಯಾಂ ಕಟ್ಟಲು ಮಾಡಿದ ತ್ಯಾಗ ಮರೆಯಲು ಸಾಧ್ಯವಿಲ್ಲ. 2008 ರಲ್ಲಿ ನಾನು ನೀರಾವರಿ ಸಚಿವನಾಗಿದ್ದಾಗ ಕೆಆರ್‌ಎಸ್ ಗೇಟ್ ರಂಧ್ರಗಳಾಗಿ ನೀರು ಸೋರುತ್ತಿತ್ತು. ಆ ಪರಿಸ್ಥಿತಿಯಲ್ಲಿ 300 ಕ್ಯೂಸೆಕ್ ನೀರು ಹರಿದು ಹೋಗುತ್ತಿತ್ತು. ಪ್ರತಿ ಹನಿಯನ್ನು ಉಳಿಸಿಕೊಳ್ಳಲು ಸಂಕಲ್ಪ ಮಾಡಿದ್ದೆವು. ಆ ಸಂದರ್ಭದಲ್ಲಿ ಗೇಟ್ ರಿಪೇರ್ ಮಾಡದಂತೆ ಒತ್ತಡಗಳು ಬಂತು. ಅವತ್ತು ರಾತ್ರಿ ನನಗೆ ನಿದ್ದೆ ಬರಲಿಲ್ಲ. ಮಾರನೇ ದಿನ ಬೆಳಗ್ಗೆ ಅಧಿಕಾರಿಗಳನ್ನ ಕರೆದು ಗೇಟ್ ಬದಲಿಸಲು ಹೇಳಿದೆ ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

    Live Tv
    [brid partner=56869869 player=32851 video=960834 autoplay=true]

  • ಫಾರ್ಮ್ ಹೌಸ್‍ನಲ್ಲೇ ಚಾಮುಂಡಿ ತಾಯಿಗೆ ದರ್ಶನ್ ವಿಶೇಷ ಪೂಜೆ

    ಫಾರ್ಮ್ ಹೌಸ್‍ನಲ್ಲೇ ಚಾಮುಂಡಿ ತಾಯಿಗೆ ದರ್ಶನ್ ವಿಶೇಷ ಪೂಜೆ

    ಮೈಸೂರು: ಇಂದು ಕೊನೆಯ ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಭಕ್ತರೆಲ್ಲರೂ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಹೋಗಿ ತಾಯಿಗೆ ಪೂಜೆ ಸಲ್ಲಿಸುತ್ತಿದ್ದಾರೆ. ಆದರೆ ನಟ ದರ್ಶನ್ ಅವರು ತಮ್ಮ ಫಾರ್ಮ್ ಹೌಸ್‍ನಲ್ಲಿಯೇ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ನಟ ದರ್ಶನ್ ಅವರು ಪ್ರತಿವರ್ಷ ಆಷಾಢದ ಮೊದಲ ಶುಕ್ರವಾರದಂದು ಚಾಮುಂಡಿ ಬೆಟ್ಟಕ್ಕೆ ಹೋಗಿ ತಾಯಿ ದರ್ಶನ ಮಾಡಿಕೊಂಡು ವಿಶೇಷ ಪೂಜೆ ಸಲ್ಲಿಸುತ್ತಾರೆ. ಇಂದು ಆಷಾಢದ ಕೊನೆಗೆ ಶುಕ್ರವಾರವಾಗಿದ್ದು, ಮೈಸೂರಿನಲ್ಲಿರುವ ಫಾರ್ಮ್ ಹೌಸ್‍ನಲ್ಲಿದ್ದ ಚಾಮುಂಡಿ ವಿಗ್ರಹಕ್ಕೆ ಪೂಜೆ ಸಲ್ಲಿಸಿದ್ದಾರೆ.

    ತಾಯಿ ಚಾಮುಂಡಿ ತಾಯಿಯ ವಿಗ್ರಹಕ್ಕೆ ಹೊಸ ಸೀರೆ ತೊಡಿಸಿ, ವಿವಿಧ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ದರ್ಶನ್ ಅವರು ತಾಯಿಗೆ ಆರತಿ ಬೆಳಗಿ ಪೂಜೆ ಸಲ್ಲಿಸಿದ್ದಾರೆ. ನಟ ದರ್ಶನ್ ಜೊತೆ ಅವರ ಸ್ನೇಹಿತರು ಮತ್ತು ಫಾರ್ಮ್ ಹೌಸ್‍ನ ಸಿಬ್ಬಂದಿ ಪೂಜೆಯಲ್ಲಿ ಭಾಗಿಯಾಗಿದ್ದರು. ದರ್ಶನ್ ತಾಯಿಗೆ ಪೂಜೆ ಸಲ್ಲಿಸುತ್ತಿರುವ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಅವರ ಅಭಿಮಾನಿಗಳ ಬಳಗ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ.

    ಮೈಸೂರಿನಲ್ಲಿ ಇಂದು ಮುಂಜಾನೆ 5.15 ರಿಂದಲೇ ಭಕ್ತರಿಗೆ ಚಾಮುಂಡಿ ತಾಯಿ ದೇವಿಯ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಹೀಗಾಗಿ ಸಾವಿರಾರು ಸಂಖ್ಯೆಯಲ್ಲಿ ಚಾಮುಂಡಿ ಬೆಟ್ಟಕ್ಕೆ ಬಂದು ತಾಯಿಯ ದರ್ಶನ ಮಾಡುತ್ತಿದ್ದಾರೆ. ರಾತ್ರಿ 10.30ರ ವರೆಗೂ ದೇವಿಯ ದರ್ಶನಕ್ಕೆ ಆಗಮಿಸಬಹುದು ಎಂದು ದೇವಾಲಯದ ಅರ್ಚಕರು ಮಾಹಿತಿ ನೀಡಿದ್ದಾರೆ.

  • ಆಷಾಢದ ಕೊನೆಯ ಶುಕ್ರವಾರ – ಚಾಮುಂಡಿ ಬೆಟ್ಟದಲ್ಲಿ ಭಕ್ತ ಸಾಗರ

    ಆಷಾಢದ ಕೊನೆಯ ಶುಕ್ರವಾರ – ಚಾಮುಂಡಿ ಬೆಟ್ಟದಲ್ಲಿ ಭಕ್ತ ಸಾಗರ

    ಮೈಸೂರು: ಆಷಾಢ ಮಾಸದ ಇಂದು ಕೊನೆಯ ಶುಕ್ರವಾರವಾಗಿರುವ ಹಿನ್ನೆಲೆಯಲ್ಲಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಸಹಸ್ರಾರು ಭಕ್ತರು ಆಗಮಿಸಿ ನಾಡದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಮಾಡಲಾಗಿತ್ತು. ಬೆಳಗ್ಗಿನಿಂದಲೇ ದೇವಿಯ ದರ್ಶನಕ್ಕೆ ಆಗಮಿಸಿದ್ದ ಹಿನ್ನೆಲೆಯಲ್ಲಿ ಭಕ್ತರಿಗೆ ಸುಲಭವಾಗಿ ದರ್ಶನ ಮಾಡಲು ಅನುವು ಮಾಡಿಕೊಡಲಾಗಿತ್ತು. ವಿಶೇಷ ಪೂಜೆ ಹಿನ್ನೆಲೆಯಲ್ಲಿ ಇಂದು ದೇವಿಗೆ ವಿಶೇಷ ಅಲಂಕಾರ ಕೂಡ ಮಾಡಲಾಗಿತ್ತು.

    ಬೆಳಗ್ಗೆ 3.30ರ ವೇಳೆಗೆ ದೇವಿಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ಹಾಗೂ ದುರ್ಗೆಗೆ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆ 5.15 ರಿಂದಲೇ ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, 9.30ಕ್ಕೆ ಮಹಾ ಮಂಗಳಾರತಿ ನಡೆಯಲಿದೆ. ಸಂಜೆಯವರೆಗೂ ದರ್ಶನ ವ್ಯವಸ್ಥೆ ಮುಂದುವರಿಯಲಿದ್ದು, ಸಂಜೆ 6.30ಕ್ಕೆ ಅಭಿಷೇಕ ಹಾಗೂ 10.30ರ ವರೆಗೂ ದೇವಿಯ ದರ್ಶನಕ್ಕೆ ಆಗಮಿಸಬಹುದು ಎಂದು ದೇವಾಲಯದ ಅರ್ಚಕರು ಮಾಹಿತಿ ನೀಡಿದ್ದಾರೆ.

    ಬೆಳ್ಳಂಬೆಳಗ್ಗೆ ತಂಪಾದ ವಾತಾವರಣದಲ್ಲಿ ಭಕ್ತರು ಬೆಟ್ಟದ ಮೆಟ್ಟಿಲು ಹತ್ತಿ ಸರದಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆಯುತ್ತಿದ್ದಿದ್ದು ಸಾಮಾನ್ಯವಾಗಿತ್ತು. ಹೆಚ್ಚಿನ ಭಕ್ತರು ಭೇಟಿ ನೀಡುವ ನಿರೀಕ್ಷೆಯಿದ್ದ ಹಿನ್ನೆಲೆಯಲ್ಲಿ ಭಕ್ತರ ದರ್ಶನಕ್ಕೆ ಬೇಕಾದ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಇಂದು ವಿಶೇಷ ದಿನದ ಹಿನ್ನೆಲೆಯಲ್ಲಿ ಸುಮಾರು 2 ಲಕ್ಷ ಭಕ್ತರು ಭೇಟಿ ನೀಡುವ ನಿರೀಕ್ಷೆ ಇದೆ.

  • ಅದ್ಧೂರಿಯಾಗಿ ನಡೆದ ಆಷಾಢದಲ್ಲಿ ನವದಂಪತಿ ಸೇರುವ ಜಾತ್ರಾ ಮಹೋತ್ಸವ

    ಅದ್ಧೂರಿಯಾಗಿ ನಡೆದ ಆಷಾಢದಲ್ಲಿ ನವದಂಪತಿ ಸೇರುವ ಜಾತ್ರಾ ಮಹೋತ್ಸವ

    ರಾಮನಗರ: ಆಷಾಢ ಮಾಸದಲ್ಲಿ ನೂತನ ದಂಪತಿಗಳನ್ನು ಬೇರೆ ಮಾಡಿ, ಹೆಣ್ಣನ್ನು ತವರು ಮನೆಗೆ ಕಳಿಸುವುದು ವಾಡಿಕೆ. ಯಾಕೆಂದರೆ ಆಷಾಢ ಮಾಸದಲ್ಲಿ ಅತ್ತೆ-ಸೊಸೆ ಒಂದೇ ಬಾಗಿಲಿನಲ್ಲಿ ಓಡಾಡಿದರೆ ಕೇಡಾಗುತ್ತೆ ಎನ್ನಲಾಗುತ್ತದೆ.

    ಆದರೆ ದಂಪತಿಗಳನ್ನು ಆಷಾಢದಲ್ಲಿ ಒಂದೆಡೆ ಸೇರಿಸುವಂತಹ ಜಾತ್ರಾ ಮಹೋತ್ಸವ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ದೇವರ ಹೊಸಹಳ್ಳಿಯಲ್ಲಿ ನಡೆಯುತ್ತದೆ. ನೂತನ ದಂಪತಿಗಳನ್ನು ಒಂದೆಡೆ ಸೇರಿಸುವ ಸಂಜೀವರಾಯಸ್ವಾಮಿಯ ಜಾತ್ರಾ ಮಹೋತ್ಸವ ಇಂದು ಅದ್ಧೂರಿಯಾಗಿ ನಡೆಯಿತು.

    ದೇವರ ಹೊಸಹಳ್ಳಿಯ ಪುರಾತನವಾದ ಸಂಜೀವರಾಯ ಸ್ವಾಮಿ ಬ್ರಹ್ಮರಥೋತ್ಸವದಲ್ಲಿ ಹೊಸ ದಂಪತಿಗಳು ಇಲ್ಲಿಗೆ ಬಂದು ದೇವರಲ್ಲಿ ಇಷ್ಟಾರ್ಥವನ್ನು ನೆನೆದು ಪೂಜೆ ಸಲ್ಲಿಸುತ್ತಾರೆ. ಅಲ್ಲದೇ ನೂತನ ದಂಪತಿಗಳು ಈ ದೇವರ ಸನ್ನಿಧಿಯಲ್ಲಿ ಸಂತಾನ ಬಯಸಿ ಪೂಜೆ ಸಲ್ಲಿಸಿದರೆ ಇಷ್ಟಾರ್ಥ ನೆರವೇರುತ್ತೆ ಎಂಬ ಪ್ರತೀತಿ ಸಹ ಇದೆ. ಬೇರೆಯಾಗಿರುವ ದಂಪತಿಗಳಿಗೆ ಈ ಜಾತ್ರೆ ವೇದಿಕೆಯಾಗಿದ್ದು ರಾಮನಗರ ಜಿಲ್ಲೆ ಅಲ್ಲದೇ ಸುತ್ತಮುತ್ತಲ ಜಿಲ್ಲೆಯ ನೂತನ ದಂಪತಿಗಳು ಸಹ ಇಂದು ನಡೆದ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.

    ಆಷಾಢದ ವಿರುದ್ಧವಾಗಿ ನಡೆಯುವ ಜಾತ್ರೆಗಳಲ್ಲಿ ಸಂಜೀವರಾಯ ಸ್ವಾಮಿಯ ಜಾತ್ರೆಯೂ ಕೂಡಾ ಒಂದಾಗಿದ್ದು, ಬ್ರಹ್ಮರಥೋತ್ಸವದಲ್ಲಿ ನೂತನ ದಂಪತಿಗಳು ಇಷ್ಟಾರ್ಥವನ್ನು ನೆನೆದು ರಥವನ್ನು ಎಳೆದು ಜಾತ್ರೆಯಲ್ಲೆಲ್ಲ ದಂಪತಿಗಳು ಕೈ ಕೈ ಹಿಡಿದು ಓಡಾಡಿದ್ದು ವಿಶೇಷವಾಗಿತ್ತು.

  • ಆಷಾಢ ಬಳಿಕ ಸಂಪುಟ ವಿಸ್ತರಣೆ ಹಿನ್ನೆಲೆ- ಕಾಂಗ್ರೆಸ್‍ನಲ್ಲಿ ತೀವ್ರಗೊಂಡ ಲಾಬಿ

    ಆಷಾಢ ಬಳಿಕ ಸಂಪುಟ ವಿಸ್ತರಣೆ ಹಿನ್ನೆಲೆ- ಕಾಂಗ್ರೆಸ್‍ನಲ್ಲಿ ತೀವ್ರಗೊಂಡ ಲಾಬಿ

    ಬೆಂಗಳೂರು: ಆಷಾಢ ಮುಗಿಯೋದು ಹತ್ತಿರವಾಗುತ್ತಿದ್ದಂತೆಯೇ ಕಾಂಗ್ರೆಸ್ ಶಾಸಕರು ಫುಲ್ ಆಕ್ಟಿವ್ ಆಗಿದ್ದಾರೆ. ಸಚಿವ ಸ್ಥಾನ ಆಕಾಂಕ್ಷಿಗಳು ಹೈಕಮಾಂಡ್ ಭೇಟಿ ಮಾಡಲು ದೆಹಲಿ ಕಡೆ ಪ್ರಯಾಣ ಬೆಳೆಸಿದ್ದಾರೆ.

    ಸಚಿವ ರಮೇಶ್ ಜಾರಕಿಹೋಳಿ ನೇತೃತ್ವದಲ್ಲಿ ಎಂಟು ಜನ ಶಾಸಕರು ಹೈಕಮಾಂಡ್ ಭೇಟಿಗೆ ದೆಹಲಿ ತೆರಳಿದ್ದಾರೆ. ಆಷಾಢ ಬಳಿಕ ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿ ನೇಮಕ ಮಾಡಲಾಗುತ್ತೆ ಅಂಥ ಹೈಕಮಾಂಡ್ ಹೇಳಿತ್ತು. ಹೀಗಾಗಿ ಆಷಾಢ ಮುಗಿಯೊಕೆ ಇನ್ನು ಒಂದು ವಾರ ಬಾಕಿ ಇರುವಾಗಲೇ ಶಾಸಕರು ಕಸರತ್ತು ಆರಂಭಿಸಿದ್ದಾರೆ.

    ಸಚಿವ ರಮೇಶ್ ಜಾರಕೀಹೊಳಿ, ಎಂಬಿ ಪಾಟೀಲ್, ಪ್ರತಾಪ್ ಗೌಡ ಪಾಟೀಲ್, ಬಿ.ನಾಗೇಂದ್ರ, ನಾರಯಣ್ ರಾವ್ ರಹೀಂ ಖಾನ್ ಸೇರಿದಂತೆ ಒಟ್ಟು ಎಂಟು ಜನ ಶಾಸಕರು ಇಂದು ರಾಜ್ಯ ಚುನಾವಣಾ ಉಸ್ತುವಾರಿ ಕೆ.ವೇಣುಗೋಪಾಲ್ ಭೇಟಿಯಾಗಲಿದ್ದಾರೆ. ಜೊತೆಗೆ ಹೈಕಮಾಂಡ್ ಭೇಟಿಗೂ ಪ್ರಯತ್ನಿಸಲಿದ್ದು, ತಮ್ಮ ಬೆಂಬಲಿಗರಿಗೆ ಸಚಿವ ಸ್ಥಾನ ಹಾಗೂ ಪ್ರಮುಖ ನಿಗಮ ಮಂಡಳಿ ನೀಡುವಂತೆ ಒತ್ತಾಯಿಸಲಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಆಷಾಢ ಮಾಸ ನಿಮಗೆ ಮಾತ್ರ, ನಮಗೆ ಏನು ಇಲ್ಲ: ಸಿದ್ದರಾಮಯ್ಯ ಪಟ್ಟಿಗೆ ದೇವೇಗೌಡರು ಗ್ರೀನ್ ಸಿಗ್ನಲ್ ಕೊಡ್ತಾರಾ?

    ಆಷಾಢ ಮಾಸ ನಿಮಗೆ ಮಾತ್ರ, ನಮಗೆ ಏನು ಇಲ್ಲ: ಸಿದ್ದರಾಮಯ್ಯ ಪಟ್ಟಿಗೆ ದೇವೇಗೌಡರು ಗ್ರೀನ್ ಸಿಗ್ನಲ್ ಕೊಡ್ತಾರಾ?

    ಬೆಂಗಳೂರು: ಆಷಾಢ ಮಾಸ ನಿಮಗೆ ಮಾತ್ರ, ನಮಗೆ ಏನು ಇಲ್ಲ. ಈಗಲೇ ನಿಗಮ ಮಂಡಳಿ ನೇಮಕಾತಿ ಆಗಬೇಕು ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಪಟ್ಟು ಹಿಡಿದಿದ್ದಾರೆ.

    ಶಾಸಕರಿಗೆ ಸಬೂಬು ಹೇಳಲು ನಮ್ಮಿಂದ ಆಗುತ್ತಿಲ್ಲ. ಹೀಗಾಗಿ ಈ ಮೊದಲೇ ನಿರ್ಧರಿಸಿದಂತೆ ನಿಗಮ ಮಂಡಳಿಯ ಒಟ್ಟು 30 ಸ್ಥಾನಗಳಲ್ಲಿ ಕಾಂಗ್ರೆಸ್ಸಿಗೆ 20 ಹಾಗೂ ಜೆಡಿಎಸ್‍ಗೆ 10 ಸ್ಥಾನ ಹಂಚಿಕೆಯಾಗಬೇಕು. ನೇಮಕ ಪ್ರಕ್ರಿಯೆ ಈಗಲೇ ಆಗಬೇಕು ಎಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಒತ್ತಾಯಿಸಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

    ನಿಗಮ ಮಂಡಳಿ ನೇಮಕದಿಂದ ಮುನಿಸಿಕೊಂಡಿರುವ ಕಾಂಗ್ರೆಸ್ ಶಾಸಕರನ್ನು ಸಮಾಧಾನ ಪಡಿಸಲು ಸಿದ್ದರಾಮಯ್ಯ ಅವರು ನಿರ್ಧರಿಸಿದ್ದಾರೆ. ಹೀಗಾಗಿ ಆಷಾಢದಲ್ಲಿಯೇ ಕಾಂಗ್ರೆಸ್ ಶಾಸಕರಿಗೆ ಬಂಪರ್ ಗಿಫ್ಟ್ ಸಿಗುವ ಸಾಧ್ಯತೆ ಇದೆ.

    ಆಷಾಢ ಮುಗಿಯುವವರೆಗೆ ಯಾವುದೇ ನೇಮಕಾತಿ ಬೇಡ ಎಂದು ದೇವೇಗೌಡ ಹಾಗೂ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ಹೇಳಿದ್ದರು. ಆದರೆ ಈಗ ಸಿದ್ದರಾಮಯ್ಯ ಅವರು ಪಟ್ಟು ಹಿಡಿದಿದ್ದರಿಂದ ಸಮ್ಮಿಶ್ರ ಸರ್ಕಾರಕ್ಕೆ ಮತ್ತೊಂದು ಸವಾಲು ಎದುರಾಗಿದೆ.