Tag: ಆಶೋಕ್

  • ಖಾಸಗಿ ಕಾರ್ಯಕ್ರಮ – ಬೆಂಗಳೂರಿಗೆ ಆಗಮಿಸಿದ್ದ ನಡ್ಡಾ

    ಖಾಸಗಿ ಕಾರ್ಯಕ್ರಮ – ಬೆಂಗಳೂರಿಗೆ ಆಗಮಿಸಿದ್ದ ನಡ್ಡಾ

    ಬೆಂಗಳೂರು: ಖಾಸಗಿ ಕಾರ್ಯಕ್ರಮದ ನಿಮಿತ್ತ ಭಾನುವಾರ ಬೆಂಗಳೂರಿಗೆ (BJP) ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಸಚಿವ ಜೆಪಿ ನಡ್ಡಾ (JP Nadda) ಆಗಮಿಸಿದರು.

    ಜೆಪಿ ನಡ್ಡಾ ಅವರನ್ನು ಆರ್.ಅಶೋಕ್ (Ashok) ಅವರು ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಂಸದರಾದ ಪಿಸಿ ಮೋಹನ್, ಮತ್ತು ಶಾಸಕರಾದ ಎಸ್.ಆರ್ ವಿಶ್ವನಾಥ್ ಉಪಸ್ಥಿತರಿದ್ದರು. ಇದನ್ನೂ ಓದಿ: ಕನ್ನಂಬಾಡಿ ಶಿಲಾನ್ಯಾಸಲ್ಲಿ ಟಿಪ್ಪು ಹೆಸರು ಬಂದಿದ್ದು ಹೇಗೆ – ಸಂಶೋಧಕರ ಚಿಕ್ಕರಂಗೇಗೌಡ ಹೇಳಿದ್ದು ಏನು?

    ಖಾಸಗಿ ಹೊಟೇಲಿನಲ್ಲಿ ಖಾಸಗಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ಆಗಮಿಸಿದ ನಡ್ಡಾ ರಾತ್ರಿ ದೆಹಲಿಗೆ ನಿರ್ಗಮಿಸಿದರು.

  • ಆನೆ ಜೊತೆ ಸೆಲ್ಫಿ ಕ್ಲಿಕ್ಕಿಸಲು ಹೋಗಿ ಮುಂದೆ ಏನಾಯ್ತು ಈ ಸ್ಟೋರಿ ಓದಿ

    ಆನೆ ಜೊತೆ ಸೆಲ್ಫಿ ಕ್ಲಿಕ್ಕಿಸಲು ಹೋಗಿ ಮುಂದೆ ಏನಾಯ್ತು ಈ ಸ್ಟೋರಿ ಓದಿ

    ಭುವನೇಶ್ವರ: ಸೆಲ್ಫಿ ತೆಗೆಯಲು ಹೋದ ವ್ಯಕ್ತಿಯನ್ನು ಆನೆ ತುಳಿದು ಕೊಂದು ಹಾಕಿರುವ ಘಟನೆ ಶನಿವಾರ ಒಡಿಶಾದ ಸುಂದ್‍ಗರ್ ತಾಲೂಕಿನಲ್ಲಿ ನಡೆದಿದೆ.

    ಅಶೋಕ್ ಭಾರತಿ (54) ಮೃತ ವ್ಯಕ್ತಿ. ಕಟಕ್ ನಿವಾಸಿಯಾಗಿದ್ದ ಅಶೋಕ್ ಸುಂದ್‍ಗರ್‍ನ ಖಾಸಗಿ ಕಂಪೆನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ಅರಣ್ಯ ಅಧಿಕಾರಿ ತಿಳಿಸಿದ್ದಾರೆ.

    ಆಗಿದ್ದೇನು?
    ಜನರ ಸಹಾಯವನ್ನು ಪಡೆದು ಆನೆಯನ್ನು ಕಾಡಿಗೆ ಓಡಿಸುತ್ತಿದ್ದೇವು. ಆಗ ಗುಂಪಿನಲ್ಲಿದ್ದ ಅಶೋಕ್ ಆನೆಯ ಬಳಿ ಬಂದು ಫೋಟೋವನ್ನು ತೆಗೆಯುತ್ತಿದ್ದರು. ನಂತರ ಸೆಲ್ಫಿ ತೆಗೆಯಲು ಆನೆಯತ್ತ ಹೋದಾಗ ಅದು ತಿರುಗಿ ಕಾಲಿನಿಂದ ತುಳಿದು ಹತ್ಯೆ ಮಾಡಿದೆ.

    ಗಂಭೀರವಾಗಿ ಗಾಯಗೊಂಡಿದ್ದ ಆಶೋಕ್ ಅವರನ್ನು ಅರಣ್ಯ ಅಧಿಕಾರಿಗಳು ಮತ್ತು ಜನರು ರಕ್ಷಿಸಿ ರೋರ್‍ಕುಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಅಶೋಕ್ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.