Tag: ಆಶಿಶ್ ಖೇತನ್

  • ಆಪ್ ಮತ್ತೊಂದು ವಿಕೆಟ್ ಪತನ?

    ಆಪ್ ಮತ್ತೊಂದು ವಿಕೆಟ್ ಪತನ?

    ದೆಹಲಿ: ಆಮ್ ಆದ್ಮಿ ಪಕ್ಷದ ಸಂಸ್ಥಾಪಕ ಸದಸ್ಯ ಹಾಗೂ ವಕ್ತಾರ ಅಶುತೋಷ್ ದಿಢೀರ್ ಬೆನ್ನಲ್ಲೆ ಪತ್ರಕರ್ತ ಹಾಗೂ ರಾಜಕಾರಣಿ ಆಶಿಶ್ ಖೇತನ್ ಈಗ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿಗೆ ರಾಜೀನಾಮೆ ನೀಡುವ ಸುಳಿವನ್ನು ಬಿಚ್ಚಿದ್ದಾರೆ.

    ಬುಧವಾರ ತಮ್ಮ ಟ್ವಿಟ್ಟರ್ ನಲ್ಲಿ ‘ನಾನು ಮತ್ತೇ ಕಾನೂನು ಅಭ್ಯಾಸವನ್ನು ಮುಂದುವರಿಯಲು ಇಚ್ಛಿಸುತ್ತಿರುವೆ. ಹೀಗಾಗಿ ಅಭ್ಯಾಸದ ಉದ್ದೇಶದಿಂದ ಇನ್ನುಮುಂದೆ ಸಕ್ರಿಯ ರಾಜಕೀಯದಿಂದ ದೂರ ಉಳಿಯುತ್ತೇನೆ’ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    2014ರಲ್ಲಿ ಆಶಿಶ್ ಖೇತನ್ ಎಎಪಿಗೆ ಸೇರಿಕೊಂಡಿದ್ದರು. ಅದೇ ವರ್ಷ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ನವದೆಹಲಿಯಿಂದ ಸ್ಪರ್ಧಿಸಿದ್ದರು. ಆದರೆ ಈ ವೇಳೆ ಬಿಜೆಪಿಯ ಮೀನಾಕ್ಷಿ ಲೇಖಿ ಅವರ ವಿರುದ್ಧ ಸೋತಿದ್ದರು.

    ಖೇತನ್ ಕಳೆದ ಮೂರು ವರ್ಷಗಳಿಂದ ದೆಹಲಿ ಸರ್ಕಾರದ ಸಲಹಾ ಮಂಡಳಿಯ ದೆಹಲಿ ಸಂವಾದ ಹಾಗೂ ಅಭಿವೃದ್ಧಿ ಆಯೋಗದ (ಡಿಡಿಸಿ) ಉಪಾಧ್ಯಕ್ಷರಾಗಿದ್ದರು. ಆದರೆ ಇದೇ ವರ್ಷದ ಏಪ್ರಿಲ್ ನಲ್ಲಿ ಡಿಡಿಸಿ ಉಪಾಧ್ಯಕ್ಷ ಸ್ಥಾನ ತೊರೆದು, ಕಾನೂನು ವ್ಯಾಸಂಗ ನಡೆಸಬೇಕೆಂದು ನಿರ್ಧರಿಸಿದ್ದಾಗಿ ಹೇಳಿಕೊಂಡಿದ್ದರು.

    ಇತ್ತ ಎಎಪಿ ಖೇತನ್‍ಗೆ 2019ರ ಲೋಕಸಭಾ ಚುನಾವಣೆಯ ಪಕ್ಷ ಟಿಕೆಟ್ ನೀಡಲು ನಿರ್ಧರಿಸಿತ್ತು ಎಂದು ಪಕ್ಷದ ಮೂಲಗಳು ತಿಳಿಸಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv