Tag: ಆಶಿರ್ವಾದ

  • ರೋಹಿತ್ ಶೆಟ್ಟಿ, ಕರಣ್, ರಣ್‍ವೀರ್ ಸಿಂಗ್‍ಗೆ ದೀಪಿಕಾ ಆಶೀರ್ವಾದ!

    ರೋಹಿತ್ ಶೆಟ್ಟಿ, ಕರಣ್, ರಣ್‍ವೀರ್ ಸಿಂಗ್‍ಗೆ ದೀಪಿಕಾ ಆಶೀರ್ವಾದ!

    ಮುಂಬೈ: ಬಾಲಿವುಡ್ ಅಂಗಳದಲ್ಲಿ ಧೂಳೆಬ್ಬಿಸುತ್ತಿರುವ ಸಿಂಭಾ ಚಿತ್ರದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದ ನಟಿ ದೀಪಿಕಾ ಪಡುಕೋಣೆ ನಿರ್ದೇಶಕ ರೋಹಿತ್ ಶೆಟ್ಟಿ, ಕರಣ್ ಜೋಹರ್ ಹಾಗೂ ರಣ್‍ವೀರ್ ಸಿಂಗ್‍ಗೆ ಆಶೀರ್ವಾದ ಮಾಡುತ್ತಿರುವ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

    ನಟ ರಣ್‍ವೀರ್ ಸಿಂಗ್ ಹಾಗೂ ಸಾರಾ ಅಲಿಖಾನ್ ಅಭಿನಯದ ಸಿಂಭಾ ಚಿತ್ರ ಸಿನಿ ಪ್ರೀಯರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಪ್ರೇಕ್ಷಕರು ಚಿತ್ರ ನೋಡಿ ಬಹಳ ಒಳ್ಳೆಯ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಈ ಚಿತ್ರವನ್ನು ಸ್ಟಾರ್ ನಿರ್ದೇಶಕ ರೋಹಿತ್ ಶೆಟ್ಟಿ ನಿರ್ದೇಶಿಸಿದ್ದು, ಕರಣ್ ಜೋಹರ್ ನಿರ್ಮಿಸಿದ್ದಾರೆ. ಈ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ಜೋರಾಗಿದ್ದು, ಈವರೆಗೆ ಸರಿಸುಮಾರು 190 ಕೋಟಿ ರೂ. ಕಲೆಕ್ಷನ್ ಮಾಡಿದೆ.

    ಅದ್ಭುತವಾಗಿ ಪ್ರದರ್ಶನ ಕಾಣುತ್ತಿರುವ ಸಿಂಭಾ ಚಿತ್ರದ ಯಶಸ್ಸಿನ ಖುಷಿಯನ್ನು ಸಂಭ್ರಮಿಸಲು, ನಿರ್ಮಾಪಕ ಕರಣ್ ಜೋಹರ್ ತಮ್ಮ ಮುಂಬೈ ನಿವಾಸದಲ್ಲಿ ಚಿತ್ರ ತಂಡಕ್ಕೆ ಪಾರ್ಟಿಯನ್ನು ಆಯೋಜಿಸಿದ್ದರು. ಈ ವೇಳೆ ತೆಗೆದ ಸಂಭ್ರಮಾಚರಣೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿದೆ. ಅದರಲ್ಲಿ ದೀಪಿಕಾ ಪಡುಕೋಣೆ ಅವರು ನಿರ್ದೇಶಕ ರೋಹಿತ್ ಶೆಟ್ಟಿ, ಕರಣ್ ಜೋಹರ್ ಹಾಗೂ ರಣ್‍ವೀರ್ ಸಿಂಗ್‍ಗೆ ಆರ್ಶಿವಾದ ಮಾಡುತ್ತಿರುವ ಕ್ಯೂಟ್ ಫೋಟೋ ಅಭಿಮಾನಿಗಳ ಮನ ಗೆದ್ದಿದೆ.

    ನಿರ್ದೇಶಕ ರೋಹಿತ್ ಶೆಟ್ಟಿ ಅವರು ತಮ್ಮ ಮುಂದಿನ ಚಿತ್ರದ ಬಗ್ಗೆ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಿಂದ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಅಕ್ಷಯ್ ಕುಮಾರ್, ರಣ್‍ವೀರ್ ಸಿಂಗ್, ಅಜಯ್ ದೇವಗನ್, ಕರಣ್ ಜೋಹರ್ ಜೊತೆ ತಾವು ಇರುವ ಫೋಟೋವನ್ನು ಹಾಕಿ, ನಿಮಗೆ ಗೊತ್ತಿರದ ಗುಟ್ಟೊಂದನ್ನು ನಾನು ಹೇಳಲಾ, ಸಿಂಗಂ ಸಿಂಭಾ ಸೂರ್ಯವಂಶಿ ಬರುತ್ತಿದೆ ಅಂತ ಬರೆದು ಪೋಸ್ಟ್ ಮಾಡಿದ್ದಾರೆ.

    ಸಿಂಭಾ ಚಿತ್ರ ತೆರೆಕಂಡ ಎರಡನೇ ವಾರಕ್ಕೆ ಸುಮಾರು 190 ಕೋಟಿ ರೂ. ತನ್ನದಾಗಿಸಿಕೊಂಡಿದೆ. ಅಲ್ಲದೆ 2018ರಲ್ಲಿ ಅತೀ ಹೆಚ್ಚು ಗಳಿಸಿದ ಸಿನಿಮಾಗಳಲ್ಲಿ ಸದ್ಯ ಸಿಂಭಾ ಚಿತ್ರ ಮೂರನೇ ಸ್ಥಾನದಲ್ಲಿದೆ.

    https://www.instagram.com/p/BsV98rqhB3j/?utm_source=ig_embed

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮನೆಗೆ ನಾಗ ಸಾಧುಗಳು ಬಂದು ಹೇಳಿದ್ದೇನು: ಬಿಎಸ್‍ವೈ ತಿಳಿಸಿದ್ರು

    ಮನೆಗೆ ನಾಗ ಸಾಧುಗಳು ಬಂದು ಹೇಳಿದ್ದೇನು: ಬಿಎಸ್‍ವೈ ತಿಳಿಸಿದ್ರು

    ಬೆಂಗಳೂರು: ನಾಗಸಾಧುಗಳು ನಮ್ಮನೆಗೆ ಭೇಟಿ ನೀಡಿ ಅರ್ಧಗಂಟೆಗಳ ಕಾಲ ನನ್ನ ಜೊತೆ ಮಾತುಕತೆ ನಡೆಸಿದರು. ಕೇಂದ್ರದ ಮೋದಿ ಆಡಳಿತದ ಬಗ್ಗೆ ಪ್ರಶಂಶೆ ವ್ಯಕ್ತಪಡಿಸಿ ಆಶಿರ್ವಾದ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಸಾಧುಗಳ ಭೇಟಿ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

    ಬೆಂಗಳೂರಿನಲ್ಲಿ ಸಾಧುಗಳ ಭೇಟಿ ಬಗ್ಗೆ ಮಾಧ್ಯಮದವರಿಗೆ ಸ್ಪಷ್ಟನೆ ನೀಡಿ ಮಾತನಾಡಿದರು. ಸಾಮಾನ್ಯವಾಗಿ ನಾಗ ಸನ್ಯಾಸಿಗಳು ಯಾರ ಮನೆಗೂ ಹೋಗುವುದಿಲ್ಲ ಅದೂ ಅತೀ ಅಪರೂಪ. ಮೊನ್ನೆ ಇದ್ದಕ್ಕಿದ್ದ ಹಾಗೇ ನಮ್ಮ ಮನೆಗೆ ಸುಮಾರು 18 ಜನರ ನಾಗಾ ಸನ್ಯಾಸಿಗಳು ಗುಂಪು ಬಂದು ಅರ್ಧಗಂಟೆ ಕಾಯ್ದಿದ್ದಾರೆ, ನಾನು ದೇವನಹಳ್ಳಿಯಲ್ಲಿ ಬಿಜೆಪಿ ವಿಸ್ತಾರಕರ ಸಭೆಯಲ್ಲಿದ್ದೆ. ನಾಗಸಾಧುಗಳು ಮನೆಗೆ ಭೇಟಿ ನೀಡಿರುವ ವಿಷಯ ತಿಳಿಯುತ್ತಿದ್ದಂತೆ ಅಲ್ಲಿಂದ ನಾನು ಓಡಿ ಬಂದೆ. ಬಳಿಕ ಸಾಧುಗಳ ಜೊತೆ ಅರ್ಧಗಂಟೆಗಳ ಕಾಲ ರಾಜಕೀಯ ಬೆಳವಣಿಗೆ ಕುರಿತು ಮಾತುಕತೆ ನಡೆಸಿದರು ಎಂದು ತಿಳಿಸಿದರು.

    ಕೇಂದ್ರದಲ್ಲಿ ಮೋದಿ ಸರ್ಕಾರದ ಕಾರ್ಯವೈಖರಿ ಬಗ್ಗೆ ಪ್ರಶಂನೀಯ ಮಾತುಗಳನ್ನಾಡಿದರು. ಅಲ್ಲದೇ ಬರೋ ವಿಧಾನಸಭಾ ಚುನಾವಣೆಯಲ್ಲಿ ನೂರಕ್ಕೆ ನೂರು ಬಿಜೆಪಿ ಪಕ್ಷ ಆಡಳಿತಕ್ಕೆ ಬರುತ್ತದೆ ಎಂದು ಹೇಳಿದ್ದಾರೆ. ಅಲ್ಲದೇ ಚುನಾವಣೆ ಆದ ಮೇಲೆ ಮತ್ತೊಮ್ಮೆ ನಾವೆಲ್ಲಾ ನಿಮ್ಮನೆಗೆ ಭೇಟಿ ನೀಡುತ್ತೇವೆ ಎಂದು ಹೇಳಿ ನಾಗಸಾಧುಗಳು ಆಶಿರ್ವಾದ ಮಾಡಿದ್ದಾರೆ ಎಂದರು.

    ಸಾಧುಗಳ ಆಶಿರ್ವಾದ ಅನಿರೀಕ್ಷಿತ, ನಮ್ಮ ಪೂರ್ವ ಜನ್ಮದ ಪುಣ್ಯಫಲ. ಹುಡುಕಿಕೊಂಡು ಹೋದರೂ ಸಿಗದ ಅಪರೂಪದ ವ್ಯಕ್ತಿಗಳು. ಅವರೇ ನೇರವಾಗಿ ನಮ್ಮ ಮನೆಗೆ ಬಂದು ಆಶಿರ್ವಾದ ಮಾಡಿ ಹೋಗಿದ್ದಾರೆ. ಇದು ನನ್ನ ಭಾಗ್ಯ ಎಂದು ಸಾಧುಗಳ ಭೇಟಿಯ ಬಗ್ಗೆ ಸ್ಪಷ್ಟಪಡಿಸಿದರು.