Tag: ಆಶಿತಾ

  • ಅಪ್ಪು ಜೊತೆಗಿನ ನೆನಪು ಬಿಚ್ಚಿಟ್ಟ `ಬಾ ಬಾರೋ ರಸಿಕಾ’ ಖ್ಯಾತಿಯ ನಟಿ ಆಶಿತಾ

    ಅಪ್ಪು ಜೊತೆಗಿನ ನೆನಪು ಬಿಚ್ಚಿಟ್ಟ `ಬಾ ಬಾರೋ ರಸಿಕಾ’ ಖ್ಯಾತಿಯ ನಟಿ ಆಶಿತಾ

    ನ್ನಡದ ಸಾಕಷ್ಟು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿದ್ದ ನಟಿ ಆಶಿತಾ(Ashitha) ಮತ್ತೆ ಸುದ್ದಿಯಲ್ಲಿದ್ದಾರೆ. `ಆಕಾಶ್’ ಸಿನಿಮಾದಲ್ಲಿ ಪುನೀತ್ (Puneeth) ತಂಗಿಯಾಗಿ ನಟಿಸಿದ್ದ ಆಶಿಕಾ, ಅವರ ಜೊತೆಗಿನ ಒಡನಾಟದ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

    ತವರಿನ ಸಿರಿ ಮತ್ತು ಆಕಾಶ್ ಚಿತ್ರದಲ್ಲಿ ಶಿವಣ್ಣ ಮತ್ತು ಪುನೀತ್ ತಂಗಿಯಾಗಿ ಆಶಿತಾ ನಟಿಸಿದ್ದರು. ಇದೀಗ ಅಪ್ಪು ಜೊತೆಗಿನ ಒಡನಾಟದ ಬಗ್ಗೆ ನಟಿ ಮಾತನಾಡಿದ್ದಾರೆ. ನಾನು ಅದೆಷ್ಟೋ ಜನರೊಂದಿಗೆ ನಟಿಸಿದ್ದೇನೆ, ಅದರಲ್ಲಿ ಅಪ್ಪು ಮಾತ್ರ ನಿಜಕ್ಕೂ ಅದ್ಭುತ ವ್ಯಕ್ತಿ. ಇನ್ನು ಶೂಟಿಂಗ್ ಇಲ್ಲದ ಸಂದರ್ಭದಲ್ಲಿ ನಾನು, ರಮ್ಯಾ(Ramya) ಮತ್ತು ಅಪ್ಪು(Appu) ಸಾಕಷ್ಟು ಬಾರಿ ಲಾಂಗ್ ಡ್ರೈವ್ ಹೋಗಿದ್ದೇವೆ. ಪುನೀತ್ ನನ್ನ ಅಣ್ಣನ ಸಮಾನರು ಎಂದಿದ್ದಾರೆ. ಇದನ್ನೂ ಓದಿ:ವೆಬ್ ಸಿರೀಸ್‌ನತ್ತ ಮುಖ ಮಾಡಿದ ಹರ್ಷಿಕಾ ಪೂಣಚ್ಚ

    ನಾನು ಡ್ಯಾನ್ಸ್ ಮಾಡೋದು ನೋಡಿ, ನನ್ನ ಹೊಗೊಳೋರು. ಅಪ್ಪು ಕೂಡ ಒಬ್ಬ ಒಳ್ಳೆಯ ಡ್ಯಾನ್ಸರ್ ಆಗಿ ನನ್ನ ಹೊಗಳೋದು ನಿಜಕ್ಕೂ ಇದು ದೊಡ್ಡ ವಿಚಾರ. ಅಪ್ಪು ತುಂಬಾ ಸಿಂಪಲ್ ಆಗಿದ್ದರು. ನನ್ನ ಸಹೋದರಿಯ ಮದುವೆಗೆ 3 ದಿನ ಮುನ್ನವೇ ಕರೆದಿದ್ದೆ, ಅಪ್ಪು ಕೂಡ ಬಂದಿದ್ದರು. ಅವರು ಬೇರೆ ಸೆಲೆಬ್ರಿಟಿಗಳ ಹಾಗಲ್ಲ. ಗಂಟೆಗಟ್ಟಲೇ ನಮ್ಮ ಮದುವೆಯಲ್ಲಿ ಇದ್ದರು.

    ಅದರಲ್ಲೂ ಅಪ್ಪು ಅವರಿಗೆ ಮುಸ್ಲಿಮರ ದಮ್ ಬಿರಿಯಾನಿ ಅಂದ್ರೆ ಸಖತ್ ಇಷ್ಟ. ಅದಕ್ಕಾಗಿ ಎಲ್ಲರಂತೆ 15 ನಿಮಿಷ ಕ್ಯೂನಲ್ಲಿ ನಿಂತು ತಿಂದರು. ಎರೆಡೆರಡು ಸಲ ಬಿರಿಯಾನಿ ಹಾಕಿಸಿಕೊಂಡು ಎಂಜಾಯ್ ಮಾಡಿದ್ದರು ಎಂದು ಅಪ್ಪು ಜೊತೆಗಿನ ನೆನಪನ್ನ ಆಶಿತಾ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ಮೀಟು’ ಅನ್ನೋದು ಕಾಮನ್ ಆಗಿದೆ, ಊರು ಅಂದ್ಮೇಲೆ ಸಮಸ್ಯೆ ಇರುತ್ತೆ: ನಿರ್ದೇಶಕ ಶಶಾಂಕ್

    ‘ಮೀಟು’ ಅನ್ನೋದು ಕಾಮನ್ ಆಗಿದೆ, ಊರು ಅಂದ್ಮೇಲೆ ಸಮಸ್ಯೆ ಇರುತ್ತೆ: ನಿರ್ದೇಶಕ ಶಶಾಂಕ್

    ಟಿ ಆಶಿತಾ (Ashita) ಮಾಡಿರುವ ಮೀಟು ಆರೋಪ, ಸ್ಯಾಂಡಲ್ ವುಡ್ (Sandalwood) ನಲ್ಲಿ ಸಂಚಲನ ಸೃಷ್ಟಿ ಮಾಡಿದೆ. ಈ ಕುರಿತು ಆಶಿತಾ ಸಿನಿಮಾದಲ್ಲಿ ಗೀತ ಸಾಹಿತಿಯಾಗಿ ಕೆಲಸ ಮಾಡಿದ್ದ ಮತ್ತು ಮೊಗ್ಗಿನ ಮನಸು ಸಿನಿಮಾದಲ್ಲಿ ನಟಿಸುವಂತೆ ಆಶಿತಾಗೆ ಆಫರ್ ಮಾಡಿದ್ದ ನಿರ್ದೇಶಕ ಶಶಾಂಕ್, ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಮೀಟು (MeToo) ಅನ್ನುವುದು ಬಹಳ ಕಾಮನ್ ಆಗಿದೆ. ಊರು ಅಂದ ಮೇಲೆ ಆ ರೀತಿಯ ಸಮಸ್ಯೆಗಳು ಎದುರಾಗುತ್ತವೆ. ಹೆಣ್ಣು ಮಕ್ಕಳು ಅದನ್ನು ನಿಭಾಯಿಸಲು ಕಲಿತುಕೊಳ್ಳಬೇಕು ಎಂದಿದ್ದಾರೆ. ಇದನ್ನೂ ಓದಿ:ಬಂಧನದ ಭೀತಿಯಿಂದ ಕೇರಳಕ್ಕೆ ಎಸ್ಕೇಪ್ ಆದ್ರಾ ನಟಿ ಶ್ರೀಲೀಲಾ ತಾಯಿ?: ಮನೆಗೆ ಬೀಗ, ಮೊಬೈಲ್ ಆಫ್

    ಪಬ್ಲಿಕ್ ಟಿವಿ ಜೊತೆ ಮಾತನಾಡಿರುವ ಶಶಾಂಕ್, ‘ಆಶಿತಾ ಅವರಿಗೆ ಆಗಿರುವ ಅನುಭವದಿಂದ ಅವರು ಸಿನಿಮಾ ಬಿಟ್ಟು ಹೋಗಿದ್ದಾರೆ. ಯಾರೂ ಇನ್ನೊಬ್ಬರಿಗೆ ತಲೆ ಬಗ್ಗಿಸುವ ಅವಶ್ಯಕತೆ ಇಲ್ಲ. ಯಾವುದೇ ಕ್ಷೇತ್ರದಲ್ಲಿ ಆಗಲಿ ಗಂಡಸರು ಈ ರೀತಿ ಮಾಡಲು ಹೆದರುತ್ತಾರೆ. ಬಾ ಬಾರೋ ರಸಿಕ ಟೈಮ್ ನಲ್ಲಿ ನಾನು ಗೀತ ಸಾಹಿತಿಯಾಗಿ ಅವರ ಸಿನಿಮಾದಲ್ಲಿ ಕೆಲಸ ಮಾಡಿದ್ದೆ. ಮೊಗ್ಗಿನ ಮನಸ್ಸು ಸಿನಿಮಾಗೆ ಆಶಿತಾ ಅವರಿಗೆ ಪಾತ್ರದ ಆಫರ್ ಮಾಡಿದ್ದೆ. ಕೆಲವು ಕಾರಣಗಳಿಂದ ಅವರು ನಟಿಸಲು ಸಾಧ್ಯವಾಗಲಿಲ್ಲ’ ಎಂದಿದ್ದಾರೆ.

    ಮುಂದುವರೆದು ಮಾತನಾಡಿದ ಶಶಾಂಕ್, ‘ಅವರ ಅನುಭವಕ್ಕೆ ಬಂದಿರುವ ವಿಚಾರವನ್ನು ಅವರು ಹೇಳಿ ಕೊಂಡಿದ್ದಾರೆ. ಮೀಟು ಅನ್ನುವುದು ಅನಾದಿಕಾಲದಿಂದಲೂ ಬಂದಿರುವ ಒಂದು ಸಮಸ್ಯೆ. ಕೆಟ್ಟ ಮನಸ್ಸಿರುವ ವ್ಯಕ್ತಿಗಳು ಬದಲಾಗಬೇಕು. ಹೆಣ್ಣುಮಕ್ಕಳು ಅದನ್ನು ನಿಭಾಯಿಸುವ ರೀತಿ ಕಲಿತು ಕೊಳ್ಳಬೇಕು’ ಎಂದು ಮೀಟು ಕುರಿತಾಗಿ ಪ್ರತಿಕ್ರಿಯೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • MeToo-ಮೀಟೂ ಆರೋಪ ಹೊತ್ತ ನಿರ್ದೇಶಕ ಯಾರು? ಆಶಿತಾ ಚಿತ್ರಗಳ ನಿರ್ದೇಶಕರ ಹುಡುಕಾಟ

    MeToo-ಮೀಟೂ ಆರೋಪ ಹೊತ್ತ ನಿರ್ದೇಶಕ ಯಾರು? ಆಶಿತಾ ಚಿತ್ರಗಳ ನಿರ್ದೇಶಕರ ಹುಡುಕಾಟ

    ಸ್ಯಾಂಡಲ್ ವುಡ್ (Sandalwood) ನಲ್ಲಿ ಮತ್ತೆ ಮೀಟು (MeToo) ಬಿರುಗಾಳಿ ಎಬ್ಬಿಸಿದ ನಟಿ ಆಶಿತಾ ಕ್ರಾಸ್ತಾ (Ashita) ನಟನೆಯ ಚಿತ್ರಗಳು ಇದೀಗ ಮುನ್ನೆಲೆಗೆ ಬಂದಿವೆ. ಅದಕ್ಕಾಗಿ ಕಾರಣ, ಆಯಾ ಚಿತ್ರಗಳ ನಿರ್ದೇಶಕರು (Director) ಮತ್ತು ನಿರ್ಮಾಪಕರು ಯಾರು ಎಂದು ನೆಟ್ಟಿಗರು ಸರ್ಚ್ ಮಾಡುತ್ತಿದ್ದಾರೆ. ತನಗಾದ ಕೆಟ್ಟ ಅನುಭವಗಳ ಕಾರಣಕ್ಕಾಗಿ ನಾನು ಸಿನಿಮಾ ರಂಗ ತೊರೆಯಬೇಕಾಯಿತು ಎಂದು ಆಶಿತಾ ಹೇಳಿದ್ದಾರೆ. ಅವಕಾಶ ಬೇಕು ಅಂದರೆ, ಸಲುಗೆಯಿಂದ ಇರಬೇಕು, ನಾವು ಹೇಳಿದಂತೆ ಕೇಳಬೇಕು ಎಂದು ಕೆಲವರು ಆಶಿತಾ ಅವರನ್ನು ಕೇಳಿದ್ದರಂತೆ. ಕೋ ಆಪ್ ರೇಟ್ ಮಾಡದೇ ಇರುವ ಕಾರಣಕ್ಕಾಗಿ ಶೂಟಿಂಗ್ ಸ್ಪಾಟ್ ನಲ್ಲಿ ಅವಮಾನಿಸುತ್ತಿದ್ದರು ಎಂದು ಅವರು ಆರೋಪ ಮಾಡಿದ್ದಾರೆ. ಹಾಗಾಗಿ ಅವರು ಯಾರಿರಬಹುದು ಎಂಬ ಕುತೂಹಲ ನೆಟ್ಟಿಗರದ್ದು.

    ಬಾ ಬಾರೋ ರಸಿಕ, ಆಕಾಶ್, ತವರಿನ ಸಿರಿ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿರುವ ಆಶಿತಾ, ತಮಗಾದ ಕಹಿ ಅನುಭವಗಳ ಕಾರಣದಿಂದಾಗಿಯೇ ಚಿತ್ರರಂಗದಿಂದ ದೂರವಾಗಿದ್ದಾರಂತೆ. ಸಿನಿಮಾದಲ್ಲಿ ಅವಕಾಶ ಸಿಗಲು, ಸಲುಗೆ ಇಂದ ಇರು, ನಾವು ಹೇಳಿದಂತೆ ಕೇಳು ಎನ್ನುವ ಪದಗಳು ಅವರಿಗೆ ಹೇಸಿಗೆ ತರಿಸಿದ ಕಾರಣದಿಂದಾಗಿ ಚಿತ್ರರಂಗವನ್ನೇ ತೊರೆಯಬೇಕಾಯಿತು ಎಂದು ಅವರು ಸಂದರ್ಶನದಲ್ಲಿ ಹೇಳಿದ್ದಾರೆ. ನಾಚಿಕೆ ಇಲ್ಲದೇ ನೇರವಾಗಿಯೇ ಕೇಳಿದ ನಿರ್ದೇಶಕನ ಅಸಹ್ಯ ಪ್ರವೃತ್ತಿಯನ್ನು ಅವರು ತೆರೆದಿಟ್ಟಿದ್ದಾರೆ. ಇದನ್ನೂ ಓದಿ:ಕೊಟ್ಟ ಮಾತಿನಂತೆ ಕಿರುತೆರೆ ನಟಿ ಸ್ವಪ್ನಾ ಪತಿಗೆ ಕೆಲಸ ಕೊಡಿಸಿದ ಗೋಲ್ಡನ್ ಸ್ಟಾರ್ ಗಣೇಶ್

    ಸಿನಿಮಾ ರಂಗದಿಂದ ದೂರವಾಗಿದ್ದಕ್ಕೆ ನನಗೇನೂ ಬೇಸರವಿಲ್ಲ. ಆದರೆ, ಸಿನಿಮಾ ರಂಗದಲ್ಲಿ ಗುರುತಿಸಿಕೊಂಡ ಮೇಲೂ ನನಗೆ ಕೆಟ್ಟ ಅನುಭವಗಳು ಆದವು. ಆದರೆ, ನಾನು ಅದಕ್ಕೆ ಆಸ್ಪದ ಕೊಡಲಿಲ್ಲ. ನನಗೆ ಅಂತಹ ಅವಕಾಶವೂ ಬೇಕಾಗಿರಲಿಲ್ಲ. ಆ ನಿರ್ದೇಶಕರ ಹೆಸರು ಹೇಳುವುದು ಬೇಡ, ಅವರು ತಮ್ಮೊಂದಿಗೆ ನನ್ನನ್ನು ಸಲುಗೆಯಿಂದ ಇರಲು ಹೇಳಿದರು. ಅದಕ್ಕೆ ಒಪ್ಪದಾಗ ಏನಲ್ಲ ಅವಮಾನಗಳನ್ನು ಮಾಡಿದ್ದರು. ಟೇಕ್ ಚೆನ್ನಾಗಿ ಬಂದರೂ, ಮತ್ತೆ ರಿಟೇಕ್ ಮಾಡಿಸುತ್ತಿದ್ದರು. ಇದೆಲ್ಲದರಿಂದ ನಾನು ಬೇಸತ್ತಿದ್ದೆ ಎಂದು ಅವರು ಮಾತನಾಡಿದ್ದಾರೆ.

    ಸಿನಿಮಾ ರಂಗದಲ್ಲಿ ಗುರುತಿಸಿಕೊಂಡ ನನ್ನಂತವಳಿಗೆ ಹೀಗಾದರೂ, ಹೊಸ ಹುಡುಗಿಯರು ಇನ್ನೆಷ್ಟು ಸಂಕಟ ಪಟ್ಟಿದ್ದಾರೋ ಗೊತ್ತಿಲ್ಲ. ಈಗಲೂ ನನಗೆ ನಟಿಸುವುದಕ್ಕೆ ಆಸಕ್ತಿ ಇದೆ. ಆದರೆ, ನನಗೆ ಟೀಮ್ ಇಷ್ಟವಾಗಬೇಕು ಮತ್ತು ನನಗೊಪ್ಪುವ ಪಾತ್ರ ಸಿಗಬೇಕು ಎಂದು ಹೇಳುವ ಮೂಲಕ ಮತ್ತೆ ಸಿನಿಮಾ ರಂಗಕ್ಕೆ ವಾಪಸ್ಸಾಗುವ ಕುರಿತು ಅವರು ಮಾತನಾಡಿದ್ದಾರೆ. ಇಷ್ಟೆಲ್ಲ ಮಾತನಾಡಿದರೂ, ತಮಗೆ ಕಿರುಕುಳ ಕೊಟ್ಟವರ ಹೆಸರನ್ನು ಮಾತ್ರ ಆಶಿತಾ ಬಹಿರಂಗ ಪಡಿಸಿಲ್ಲ.

    Live Tv
    [brid partner=56869869 player=32851 video=960834 autoplay=true]

  • MeToo-ಸ್ಯಾಂಡಲ್ ವುಡ್ ಮೇಲೆ ಮತ್ತೆ ಸಿಡಿದ ‘ಮೀಟು’ ಬಾಂಬ್: ಬಾ ಬಾರೋ ರಸಿಕ ನಟಿ ಹೇಳಿದ ಕಹಿ ಸತ್ಯ

    MeToo-ಸ್ಯಾಂಡಲ್ ವುಡ್ ಮೇಲೆ ಮತ್ತೆ ಸಿಡಿದ ‘ಮೀಟು’ ಬಾಂಬ್: ಬಾ ಬಾರೋ ರಸಿಕ ನಟಿ ಹೇಳಿದ ಕಹಿ ಸತ್ಯ

    ಖ್ಯಾತ ನಟಿ ಶ್ರುತಿ ಹರಿಹರನ್ (Shruti Hariharan) ಸೇರಿದಂತೆ ಹಲವು ನಟಿಯರು ಈಗಾಗಲೇ ಸ್ಯಾಂಡಲ್ ವುಡ್ (Sandalwood) ಮೇಲೆ ಮೀಟು (Metto) ಬಾಂಬ್ ಸಿಡಿಸಿದ್ದಾರೆ. ಕೆಲ ವರ್ಷಗಳ ಹಿಂದೆ ಈ ಪ್ರಕರಣಗಳು ಕೋರ್ಟ್ ಮೆಟ್ಟಿಲು ಕೂಡ ಹತ್ತಿದ್ದವು. ಸ್ಯಾಂಡಲ್ ವುಡ್ ಕರಾಳ ಮುಖಗಳನ್ನೂ ಬಿಚ್ಚಿಟ್ಟಿದ್ದವು. ಇದೀಗ ಮತ್ತೆ ಚಂದವನದಲ್ಲಿ ಮೀಟು ಸದ್ದು ಕೇಳಿ ಬರುತ್ತಿದೆ. ರೋಡ್ ರೋಮಿಯೋ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿ, ಇದೀಗ ಸಿನಿಮಾ ರಂಗದಿಂದಲೇ ದೂರವಾಗಿರುವ ಆಶಿತಾ (Ashita) ತಮಗಾದ ಕಹಿ ಅನುಭವಗಳನ್ನು ನಿರ್ದೇಶಕ ರಘುರಾಮ್ ನಡೆಸಿದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

    ಬಾ ಬಾರೋ ರಸಿಕ, ಆಕಾಶ್ (Akash), ತವರಿನ ಸಿರಿ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿರುವ ಆಶಿತಾ, ತಮಗಾದ ಕಹಿ ಅನುಭವಗಳ ಕಾರಣದಿಂದಾಗಿಯೇ ಚಿತ್ರರಂಗದಿಂದ ದೂರವಾಗಿದ್ದಾರಂತೆ. ಸಿನಿಮಾದಲ್ಲಿ ಅವಕಾಶ ಸಿಗಲು, ಸಲುಗೆ ಇಂದ ಇರು, ನಾವು ಹೇಳಿದಂತೆ ಕೇಳು ಎನ್ನುವ ಪದಗಳು ಅವರಿಗೆ ಹೇಸಿಗೆ ತರಿಸಿದ ಕಾರಣದಿಂದಾಗಿ ಚಿತ್ರರಂಗವನ್ನೇ ತೊರೆಯಬೇಕಾಯಿತು ಎಂದು ಅವರು ಸಂದರ್ಶನದಲ್ಲಿ ಹೇಳಿದ್ದಾರೆ. ನಾಚಿಕೆ ಇಲ್ಲದೇ ನೇರವಾಗಿಯೇ ಕೇಳಿದ ನಿರ್ದೇಶಕನ ಅಸಹ್ಯ ಪ್ರವೃತ್ತಿಯನ್ನು ಅವರು ತೆರೆದಿಟ್ಟಿದ್ದಾರೆ. ಇದನ್ನೂ ಓದಿ:ನಾಗಚೈತನ್ಯ- ಸಮಂತಾ ಬ್ರೇಕಪ್ ಬಗ್ಗೆ ಕೊನೆಗೂ ಮೌನ ಮುರಿದ ನಟ ನಾಗಾರ್ಜುನ್

    ಸಿನಿಮಾ ರಂಗದಿಂದ ದೂರವಾಗಿದ್ದಕ್ಕೆ ನನಗೇನೂ ಬೇಸರವಿಲ್ಲ. ಆದರೆ, ಸಿನಿಮಾ ರಂಗದಲ್ಲಿ ಗುರುತಿಸಿಕೊಂಡ ಮೇಲೂ ನನಗೆ ಕೆಟ್ಟ ಅನುಭವಗಳು ಆದವು. ಆದರೆ, ನಾನು ಅದಕ್ಕೆ ಆಸ್ಪದ ಕೊಡಲಿಲ್ಲ. ನನಗೆ ಅಂತಹ ಅವಕಾಶವೂ ಬೇಕಾಗಿರಲಿಲ್ಲ. ಆ ನಿರ್ದೇಶಕರ (Director) ಹೆಸರು ಹೇಳುವುದು ಬೇಡ, ಅವರು ತಮ್ಮೊಂದಿಗೆ ನನ್ನನ್ನು ಸಲುಗೆಯಿಂದ ಇರಲು ಹೇಳಿದರು. ಅದಕ್ಕೆ ಒಪ್ಪದಾಗ ಏನಲ್ಲ ಅವಮಾನಗಳನ್ನು ಮಾಡಿದ್ದರು. ಟೇಕ್ ಚೆನ್ನಾಗಿ ಬಂದರೂ, ಮತ್ತೆ ರಿಟೇಕ್ ಮಾಡಿಸುತ್ತಿದ್ದರು. ಇದೆಲ್ಲದರಿಂದ ನಾನು ಬೇಸತ್ತಿದ್ದೆ ಎಂದು ಅವರು ಮಾತನಾಡಿದ್ದಾರೆ.

    ಸಿನಿಮಾ ರಂಗದಲ್ಲಿ ಗುರುತಿಸಿಕೊಂಡ ನನ್ನಂತವಳಿಗೆ ಹೀಗಾದರೂ, ಹೊಸ ಹುಡುಗಿಯರು ಇನ್ನೆಷ್ಟು ಸಂಕಟ ಪಟ್ಟಿದ್ದಾರೋ ಗೊತ್ತಿಲ್ಲ. ಈಗಲೂ ನನಗೆ ನಟಿಸುವುದಕ್ಕೆ ಆಸಕ್ತಿ ಇದೆ. ಆದರೆ, ನನಗೆ ಟೀಮ್ ಇಷ್ಟವಾಗಬೇಕು ಮತ್ತು ನನಗೊಪ್ಪುವ ಪಾತ್ರ ಸಿಗಬೇಕು ಎಂದು ಹೇಳುವ ಮೂಲಕ ಮತ್ತೆ ಸಿನಿಮಾ ರಂಗಕ್ಕೆ ವಾಪಸ್ಸಾಗುವ ಕುರಿತು ಅವರು ಮಾತನಾಡಿದ್ದಾರೆ. ಇಷ್ಟೆಲ್ಲ ಮಾತನಾಡಿದರೂ, ತಮಗೆ ಕಿರುಕುಳ ಕೊಟ್ಟವರ ಹೆಸರನ್ನು ಮಾತ್ರ ಆಶಿತಾ ಬಹಿರಂಗ ಪಡಿಸಿಲ್ಲ.

    Live Tv
    [brid partner=56869869 player=32851 video=960834 autoplay=true]

  • ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಿಗ್‍ಬಾಸ್ ಸ್ಪರ್ಧಿ ಆಶಿತಾ ಚಂದ್ರಪ್ಪ

    ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಿಗ್‍ಬಾಸ್ ಸ್ಪರ್ಧಿ ಆಶಿತಾ ಚಂದ್ರಪ್ಪ

    ಬೆಂಗಳೂರು: ಬಿಗ್‍ಬಾಸ್ ಸೀಸನ್-5ರ ಸ್ಪರ್ಧಿ, ನಟಿ ಆಶಿತಾ ಚಂದ್ರಪ್ಪ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರೋಹನ್ ಗೌಡ ಜೊತೆ ಹೊಸ ಜೀವನ ಆರಂಭಿಸುತ್ತಿರುವ ಆಶಿತಾ ಚಂದ್ರಪ್ಪಗೆ ಸ್ನೇಹಿತರು, ಸೆಲೆಬ್ರೆಟಿಗಳು ಹಾಗೂ ಅಭಿಮಾನಿಗಳು ವಿಶ್ ಮಾಡಿದ್ದಾರೆ.

    ಪ್ರಸ್ತುತ ಕೋವಿಡ್-19 ಭೀತಿಯಿರುವುದರಿಂದ ಈ ಜೋಡಿ ಕೇವಲ ಕುಟುಂಬಸ್ಥರು, ಆಪ್ತರನಷ್ಟೇ ವಿವಾಹ ಸಮಾರಂಭಕ್ಕೆ ಆಹ್ವಾನಿಸಿದ್ದು, ಮಾರ್ಚ್ 31ರಂದು ಬೆಂಗಳೂರಿನಲ್ಲಿ ಸರಳವಾಗಿ ವಿವಾಹವಾಗಿದ್ದಾರೆ.

    ಮದುವೆ ದಿನ ಆಶಿತಾ ರೇಷ್ಮೆ ಸೀರೆ ಉಟ್ಟಿದ್ದರೆ, ರೋಹನ್ ಸಂಪ್ರದಾಯಿಕ ಉಡುಗೆ ತೊಟ್ಟು ಮಿಂಚಿದ್ದಾರೆ. ಈ ವಿವಾಹ ಮಹೋತ್ಸವಕ್ಕೆ ಕಿರುತರೆ ನಟ ಹಾಗೂ ಬಿಗ್‍ಬಾಸ್ ಸೀಸನ್-5ರ ಸ್ಪರ್ಧಿ ಜಯಂ ರಾಮ್ ಕಾರ್ತಿಕ್, ನಟಿ ತೇಜಸ್ವಿನಿ ಪ್ರಕಾಶ್, ಜಗನ್ನಾಥ್ ಚಂದ್ರಶೇಖರ್ ಸೇರಿದಂತೆ ಕೆಲವರು ಭಾಗವಹಿಸಿದ್ದರು.

    ಈ ವೇಳೆ ಆಶಿತಾ ಜೊತೆಗಿರುವ ಫೋಟೋವನ್ನು ಕ್ಲಿಕ್ಕಿಸಿಕೊಂಡಿರುವ ಜೆಕೆ, ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ‘ನಿನ್ನ ದಾಂಪತ್ಯ ಜೀವನ ಸಂತಸದಿಂದ ಕೂಡಿರಲಿ’ ಎಂದು ಕ್ಯಾಪ್ಷನ್ ಹಾಕಿ ವಿಶ್ ಮಾಡುವ ಮೂಲಕ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.

     

    View this post on Instagram

     

    A post shared by Karthik Jayaram (@karthik.jayaram)

    ಖಾಸಗಿ ವಾಹಿನಿಯ ನೀಲಿ, ಜೊತೆ ಜೊತೆಯಲಿ, ರಾಧಾ ರಮಣ ಸೀರಿಯಲ್‍ನಲ್ಲಿ ಆಶಿತಾ ನಟಿಸಿದ್ದರು. ಅಲ್ಲದೆ ಇತ್ತೀಚೆಗೆ ರಾಧಾ ರಮಣ ಸಿರಿಯಲ್‍ನಲ್ಲಿ ಅವನಿ ಎಂಬ ಪಾತ್ರದಲ್ಲಿ ಪಾತ್ರದಲ್ಲಿ ಅಭಿನಯಿಸುವ ಮೂಲಕ ಖ್ಯಾತಿ ಪಡೆದು ಮನೆಮಾತಾಗಿದ್ದರು.