Tag: ಆಶಾ ಭೋಂಸ್ಲೆ

  • ಅಮಿತ್ ಶಾ ಎದುರು ಜನಪ್ರಿಯ ಗೀತೆ ಹಾಡಿದ  ಗಾಯಕಿ ಆಶಾ ಭೋಸ್ಲೆ

    ಅಮಿತ್ ಶಾ ಎದುರು ಜನಪ್ರಿಯ ಗೀತೆ ಹಾಡಿದ ಗಾಯಕಿ ಆಶಾ ಭೋಸ್ಲೆ

    ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಮತ್ತು ಬಾಲಿವುಡ್ ನ ಹೆಸರಾಂತ ಹಿರಿಯ  ಗಾಯಕಿ ಆಶಾ ಭೋಸ್ಲೆ (Asha Bhosle) ಭೇಟಿಯಾಗಿದ್ದಾರೆ. ಈ ಸಮಯದಲ್ಲಿ ಆಶಾ ಭೋಸ್ಲೆ ಅವರು ಹಿಂದಿಯ ಅತ್ಯಂತ ಜನಪ್ರಿಯ ಗೀತೆ ಅಭಿ ನಾ ಜಾವೋ ಚೋಡ್ಕರ್ ಗೀತೆ ಹಾಡಿದ್ದಾರೆ. 1961ರಲ್ಲಿ ಈ ಹಾಡು ಬಹುಬೇಡಿಕೆಯಾಗಿತ್ತು ಎನ್ನುವುದು ವಿಶೇಷ.

    ಆಶಾ ಭೋಸ್ಲೆ ಅವರ ಅತ್ಯುತ್ತಮ ಫೋಟೋಗಳ ಸರಮಾಲೆಯನ್ನು ಅಮಿತ್ ಶಾ ಅವರು ಬಿಡುಗಡೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಆಶಾ ಮತ್ತು ಅಮಿತ್ ಶಾ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಸಂಭ್ರಮದ ಕ್ಷಣವನ್ನೂ ಅಮಿತ್ ಶಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

     

    ಸಂಗೀತ, ಪರಂಪರೆ, ಸಂಸ್ಕೃತಿ ಹೀಗೆ ಹಲವಾರು ವಿಚಾರಗಳನ್ನು ಆಶಾ ಭೋಸ್ಲೆ ಅವರ ಜೊತೆ ಚರ್ಚಿಸಿದೆ. ಅದೊಂದು ಅವಿಸ್ಮರಣೀಯ ಕ್ಷಣವಾಗಿತ್ತು. ಆಶಾ ಅವರ ಜೀವನ ಮತ್ತು ಸಂಗೀತ ಪರಂಪರೆ ಎಲ್ಲರಿಗೂ ಸ್ಪೂರ್ತಿ ಆಗುವಂಥದ್ದು ಎಂದು ಅವರು ಬರೆದುಕೊಂಡಿದ್ದಾರೆ.

  • ಲತಾ ಮಂಗೇಶ್ಕರ್ ಚೇತರಿಕೆಗಾಗಿ ವಿಶೇಷ ಪೂಜೆ ಸಲ್ಲಿಸುತ್ತಿರುವ ಆಶಾ ಭೋಂಸ್ಲೆ

    ಲತಾ ಮಂಗೇಶ್ಕರ್ ಚೇತರಿಕೆಗಾಗಿ ವಿಶೇಷ ಪೂಜೆ ಸಲ್ಲಿಸುತ್ತಿರುವ ಆಶಾ ಭೋಂಸ್ಲೆ

    ಮುಂಬೈ: ಜನಪ್ರಿಯ ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಶೀಘ್ರವೇ ಗುಣಮುಖರಾಗಲಿ ಎಂದು ಆಶಾ ಭೋಂಸ್ಲೆ ವಿಶೇಷ ಪೂಜೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.

    ಲತಾ ಮಂಗೇಶ್ಕರ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಅವರಿಗೆ 92 ವರ್ಷವಾಗಿರುವುದರಿಂದ ಅವರ ಆರೋಗ್ಯದ ದೃಷ್ಟಿಯಿಂದ ಕಳೆದ ವಾರ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ದಾಖಲಿಸಲಾಗಿತ್ತು. ಇದೀಗ ಲತಾ ಮಂಗೇಶ್ಕರ್ ಅವರು ಚೇತರಿಸಿಕೊಳ್ಳುತ್ತಿದ್ದಾರೆ.

    ಈ ಮಧ್ಯೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ ಆಶಾ ಭೋಂಸ್ಲೆ ಅವರು ಲತಾ ಮಂಗೇಶ್ಕರ್ ಅವರ ಮುಂಬೈ ನಿವಾಸದಲ್ಲಿ ಶಿವನ ಮೂರ್ತಿಯನ್ನು ಇಟ್ಟು, ಅವರ ಚೇತರಿಕೆಗಾಗಿ ವಿಶೇಷ ಪೂಜೆಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ:  ಜನಪ್ರಿಯ ಗಾಯಕಿ ಲತಾ ಮಂಗೇಶ್ಕರ್‌ಗೆ ಕೊರೊನಾ – ಐಸಿಯುವಿನಲ್ಲಿ ಚಿಕಿತ್ಸೆ

    ಮತ್ತೊಂದೆಡೆ ಭಾನುವಾರ ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಶ್ ಟೋಪೆ ಅವರು, ಲತಾ ಮಂಗೇಶ್ಕರ್ ಅವರ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ. ನಾನು ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಅವರು ಲತಾ ಮಂಗೇಶ್ಕರ್ ಅವರ ಆರೋಗ್ಯದ ಬಗ್ಗೆ ನನಗೆ ಅಪ್‍ಡೇಟ್ ಮಾಡುತ್ತಿದ್ದಾರೆ. ಲತಾ ಮಂಗೇಶ್ಕರ್ ಅವರ ಅಭಿಮಾನಿಗಳಿ ಆತಂಕದಲಿರುವುದರಿಂದ ಲತಾ ಮಂಗೇಶ್ಕರ್ ಅವರ ಆರೋಗ್ಯ ಸ್ಥಿತಿಯ ಅಪ್‍ಡೇಟ್ ನೀಡುತ್ತಿರುವಂತೆ ತಿಳಿಸಿದ್ದಾರೆ.

    ಲತಾ ಮಂಗೇಶ್ಕರ್ ಅವರು ಇಲ್ಲಿಯವರೆಗೂ ಹಲವಾರು ಭಾಷೆಗಳಲ್ಲಿ ಸುಮಾರು 30,000ಕ್ಕಿಂತಲೂ ಹೆಚ್ಚು ಹಾಡುಗಳನ್ನು ಹಾಡಿದ್ದು, ಭಾರತೀಯ ಚಿತ್ರರಂಗ ಕಂಡ ಮಹಾನ್ ಪ್ರತಿಭಾವಂತ ಗಾಯಕಿ ಎನಿಸಿಕೊಂಡಿದ್ದಾರೆ. ಇವರು 2001ರಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ಪಡೆದಿದ್ದಾರೆ. ಅಷ್ಟೇ ಅಲ್ಲದೇ ಪದ್ಮಭೂಷಣ, ಪದ್ಮವಿಭೂಷಣ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಮತ್ತು ಹಲವಾರು ರಾಷ್ಟ್ರ ಪ್ರಶಸ್ತಿಗಳು ಮತ್ತು ಚಲನಚಿತ್ರ ಪ್ರಶಸ್ತಿಗಳನ್ನು ತಮ್ಮ ಮೂಡಿಗೆರಿಸಿಕೊಂಡಿದ್ದಾರೆ. ಇದನ್ನೂ ಓದಿ: ಕಾಫಿನಾಡಿನ ಎರಡು ವಸತಿ ಶಾಲೆಯ 55 ಮಕ್ಕಳಿಗೆ ಕೊರೊನಾ