Tag: ಆಶಾ ಭಟ್

  • Bigg Boss Kannada 10: ಹೊರ ಬಿತ್ತು ಸ್ಪರ್ಧಿಗಳ ಮತ್ತೊಂದು ಲಿಸ್ಟ್

    Bigg Boss Kannada 10: ಹೊರ ಬಿತ್ತು ಸ್ಪರ್ಧಿಗಳ ಮತ್ತೊಂದು ಲಿಸ್ಟ್

    ಬಿಗ್ ಬಾಸ್ ಕನ್ನಡ (Bigg Boss Kannada) ಆವೃತ್ತಿ ಸೀಸನ್ 10 ಶುರುವಾಗಲು ಇನ್ನೂ ಐದೇ ದಿನಗಳು ಬಾಕಿ. ಈ ಬಾರಿ ಸ್ಪರ್ಧಾ ಕಣದಲ್ಲಿ ಯಾರಿರಲಿದ್ದಾರೆ ಎನ್ನುವುದು ಅಕ್ಟೋಬರ್ 8ಕ್ಕೆ ಗೊತ್ತಾಗಲಿದೆ. ಆದರೂ, ಕೆಲವು ಹೆಸರುಗಳು ಓಡಾಡುತ್ತಿವೆ. ಕೆಲವು ದಿನಗಳ ಹಿಂದೆ ಒಂದಷ್ಟು ಹೆಸರು ಕೇಳಿ ಬಂದಿದ್ದರೂ, ಈ ಬಾರಿ ಆ ಹೆಸರಗಳು ಹೊರತಾಗಿ ಬೇರೆ ಕಲಾವಿದರು ಹೆಸರು ಯಾದಿಯಲ್ಲಿ ಕಾಣಿಸಿಕೊಂಡು ಕುತೂಹಲ ಮೂಡಿಸಿವೆ.

    ಸಾಮಾನ್ಯ ಜನರ ಪ್ರವೇಶಕ್ಕಿಂತ ಕಿರುತೆರೆ ಮತ್ತು ಹಿರಿತೆರೆಯ ಕಲಾವಿದರ ಹೆಸರು ಮುಂಚೂಣೆಯಲ್ಲಿವೆ. ಕನ್ನಡತಿ ಖ್ಯಾತಿ ರಂಜನಿ ರಾಘವನ್ (Ranjani Raghavan), ಬುಲೆಟ್ ಪ್ರಕಾಶ್ ಪುತ್ರ ರಕ್ಷಿಕ್, ನಮ್ರತಾ ಗೌಡ (Namrata Gowda), ಸುಕೃತಾ ನಾಗ್, ಭವ್ಯ ಗೌಡ, ಅದ್ವಿತಿ ಶೆಟ್ಟಿ, ಆಶಾ ಭಟ್ (Asha Bhatt) ಮುಂತಾದವರು ಹೆಸರು ಕೇಳಿ ಬಂದಿವೆ. ಜೊತೆಗೆ ನ್ಯೂಸ್ ಆಂಕರ್ ಒಬ್ಬರ ಹೆಸರು ಕೇಳಿ ಬಂದಿದೆ.

    ಬಿಗ್ ಬಾಸ್ ಕನ್ನಡ ಸೀಸನ್ 10ಕ್ಕೆ ದಿನಗಣನೆ ಶುರುವಾಗಿದೆ. ಈಗಾಗಲೇ ಹಲವು ಪ್ರೋಮೋಗಳನ್ನು ರಿಲೀಸ್ ಮಾಡುವ ಮೂಲಕ ವಾಹಿನಿಯು ಪ್ರೇಕ್ಷಕರಲ್ಲಿ ಕುತೂಹಲವನ್ನುಂಟು ಮಾಡುತ್ತಿದೆ. ಈಗಾಗಲೇ ಬಿಗ್ ಬಾಸ್ ಯಾವಾಗಿಂದ ಶುರುವಾಗುತ್ತದೆ ಎನ್ನುವ ಮಾಹಿತಿಯನ್ನು ಹಂಚಿಕೊಂಡಿದೆ. ಈಗ ಪ್ರಸಾರದ ವೇಳೆಯನ್ನೂ ಅದು ಹೇಳಿಕೊಂಡಿದೆ.

    ಅಕ್ಟೋಬರ್ 8 ರಿಂದ ಪ್ರಾರಂಭವಾಗುವ ಬಿಗ್ ಬಾಸ್ ಶೋ, ಮೊದಲ ದಿನ ಸಂಜೆ ಆರು ಗಂಟೆಗೆ ಪ್ರಸಾರವಾಗಲಿದೆ. ಮರುದಿನದಿಂದ ಪ್ರತಿ ರಾತ್ರಿ  9.30ಕ್ಕೆ ಕಾರ್ಯಕ್ರಮ ಪ್ರಸಾರವಾಗಲಿದೆ ಎಂದು ವಾಹಿನಿಯು ರಿಲೀಸ್ ಮಾಡಿದ ಪ್ರೋಮೋದಲ್ಲಿ ತಿಳಿಸಲಾಗಿದೆ. ಇದಕ್ಕಾಗಿಯೇ ವಿಶೇಷ ಪ್ರೋಮೋ ಕೂಡ ಮಾಡಿದೆ.

    ಬಿಗ್ ಬಾಸ್ ಶೋನಲ್ಲಿ ಹೊಸ ಸ್ಪರ್ಧಿ

    ಕಿರುತೆರೆ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ (Bigg Boss Kannada 10) ಯಾವಾಗ ಎಂಬುದಕ್ಕೆ ಈಗಾಗಲೇ ಉತ್ತರ ಸಿಕ್ಕಿದೆ. ಅಕ್ಟೋಬರ್ 8ರಿಂದ ‘ಬಿಗ್ ಬಾಸ್ ಕನ್ನಡ ಸೀಸನ್ 10’ ಶೋ ಶುರುವಾಗಲಿದೆ. ವಾಹಿನಿಯ ‘ಅನುಬಂಧ 2023’ ಅವಾರ್ಡ್ಸ್ ಸಮಾರಂಭದಲ್ಲಿ ಬಿಗ್ ಬಾಸ್ ಯಾವಾಗ ಶುರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಯಾರೆಲ್ಲಾ ಬಿಗ್ ಬಾಸ್ ಮನೆಯೊಳಗಡೆ ಹೋಗಲಿದ್ದಾರೆ ಎಂಬ ಪ್ರಶ್ನೆ ಏಳೋದು ಸಹಜ. ಮೊದಲ ಬಾರಿಗೆ ಬಿಗ್ ಬಾಸ್ ಮನೆ ಪ್ರವೇಶ ಮಾಡುವ ಮೊದಲ ಸ್ಪರ್ಧಿಯನ್ನು ಕಲರ್ಸ್ ವಾಹಿನಿ ರಿವೀಲ್ ಮಾಡಿದೆ.

    ಬಿಗ್ ಬಾಸ್ ಮನೆಗೆ ಹೋಗುವ ಮುನ್ನವೇ ವಾಹಿನಿಯಾಗಲಿ, ಬಿಗ್ ಬಾಸ್ ಮನೆ ಪ್ರವೇಶ (Bigg Boss House) ಮಾಡುವ ಸ್ಪರ್ಧಿಗಳಾಗಲೀ ಯಾವುದೇ ಕಾರಣಕ್ಕೂ ಸ್ಪರ್ಧೆ ಮಾಡುವ ವಿಚಾರವನ್ನು ರಿವೀಲ್ ಮಾಡೋದಿಲ್ಲ. ಸ್ಪರ್ಧಿಗಳು ಯಾರು ಅನ್ನೋದು ಬಿಗ್ ಬಾಸ್ ಶೋ ಲಾಂಚ್ ಆಗುವ ದಿನವೇ ಗೊತ್ತಾಗುತ್ತದೆ. ಆದರೆ ಈ ಬಾರಿ ಮೊದಲ ಬಾರಿಗೆ ಸೋಶಿಯಲ್ ಮೀಡಿಯಾದಲ್ಲಿ ಸ್ಪರ್ಧಿ ಯಾರು ಅನ್ನೋದನ್ನು ಇದೀಗ ವಾಹಿನಿ ಹೇಳಿದೆ.

     

    ಬೆಸ್ಟ್ ರೇಟೆಡ್ ಚಲನಚಿತ್ರ – 777 ಚಾರ್ಲಿ. ಬಿಗ್ ಬಾಸ್ ಕನ್ನಡ ಸೀಸನ್ 10 ಮೊದಲ ಕಂಟೆಸ್ಟೆಂಟ್ ಆಗಿ ಎಂಟ್ರಿ ಕೊಡ್ತಿರೋ ಚಾರ್ಲಿ!! ಅಭಿನಂದನೆಗಳು ಚಾರ್ಲಿ ಎಂದು ವಾಹಿನಿಯ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಈ ಮೂಲಕ ಚಾರ್ಲಿ ಮೊದಲ ಸ್ಪರ್ಧಿಯಾಗಿ ದೊಡ್ಮನೆಗೆ ಕಾಲಿಡುತ್ತಿದೆ. ಅಂದಹಾಗೆ, 777 ಚಾರ್ಲಿ (777 charlie) ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ (Rakshit Shetty) ಜೊತೆ ಚಾರ್ಲಿ ಕೂಡ ಮನೋಜ್ಞವಾಗಿ ಅಭಿನಯಿಸುವ ಪ್ರೇಕ್ಷಕರ ಮನಗೆದ್ದಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಾಜಮನೆತನದ ರಾಣಿಯಂತೆ ಕಂಗೊಳಿಸಿದ `ರಾಬರ್ಟ್’ ಬೆಡಗಿ ಆಶಾ ಭಟ್

    ರಾಜಮನೆತನದ ರಾಣಿಯಂತೆ ಕಂಗೊಳಿಸಿದ `ರಾಬರ್ಟ್’ ಬೆಡಗಿ ಆಶಾ ಭಟ್

    `ರಾಬರ್ಟ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತರಾದ ನಟಿ ಆಶಾ ಭಟ್ ಇದೀಗ ಹೊಸ ಫೋಟೋಶೂಟ್ ಮೂಲಕ ಸುದ್ದಿಯಲ್ಲಿದ್ದಾರೆ. ರಾಜಮನೆತನದ ರಾಣಿಯಂತೆ ಮಿರ ಮಿರ ಅಂತಾ ಮಿಂಚಿದ್ದಾರೆ. ಈಗ ಈ ಹೊಸ ಫೋಟೋಶೂಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಬಾಲಿವುಡ್‌ನ `ಜಂಗ್ಲಿ’ ಚಿತ್ರದ ಮೂಲಕ ಮೊದಲ ಬಾರಿ ಕ್ಯಾಮೆರಾ ಮುಂದೆ ನಾಯಕಿಯಾಗಿ ಮಿಂಚಿದ ಆಶಾ ಭಟ್ ಕನ್ನಡದ ʻರಾಬರ್ಟ್ʼ ಚಿತ್ರದಿಂದ ಭರ್ಜರಿ ಯಶಸ್ಸು ಗಿಟ್ಟಿಸಿಕೊಂಡರು. ತಮ್ಮ ಹೊಸ ಚಿತ್ರಕ್ಕಾಗಿ ತೆರೆಮರೆಯಲ್ಲಿ ವರ್ಕೌಟ್‌ ಮಾಡುತ್ತಿರುವ ನಟಿ ಆಶಾ, ಸದ್ಯ ತಮ್ಮ ಅಭಿಮಾನಿಗಳಿಗೆ ಎಲ್ಲೂ ನಿರಾಸೆ ಮಾಡದೇ ತಮ್ಮ ಗಾಯನ, ಡ್ಯಾನ್ಸ್, ನಯಾ ಫೋಟೋಶೂಟ್ ಮೂಲಕ ಆಗಾಗ ಅಭಿಮಾನಿಗಳಿಗೆ ಅಪ್‌ಡೇಟ್ ಕೊಡುತ್ತಾರೆ. ಇದನ್ನೂ ಓದಿ:`ಮಣಿರತ್ನಂ’ ನಿರ್ದೇಶನದ ಚಿತ್ರದ ಮೂಲಕ ಕನ್ನಡಕ್ಕೆ ಬಂದ ಐಶ್ವರ್ಯ ರೈ

     

    View this post on Instagram

     

    A post shared by Asha Bhat (@asha.bhat)

    ಇದೀಗ `ರಾಬರ್ಟ್’ ಬ್ಯೂಟಿ ಆಶಾ ಭಟ್ ಚೆಂದದೊಂದು ಫೋಟೋಶೂಟ್ ಮಾಡಿಸಿದ್ದಾರೆ. ರಾಜಮನೆತನದ ಮಹಾರಾಣಿಯಂತೆ ಕ್ಯಾಮೆರಾ ಕಣ್ಣಿಗೆ ಪೋಸ್ ಕೊಟ್ಟಿದ್ದಾರೆ.ಈ ವಿಶೇಷ ಫೋಟೋಶೂಟ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ದೀಪಕ್‌ ವಿಜಯ್‌ ಛಾಯಾಗ್ರಹಣದಲ್ಲಿ ಅದ್ಭುತವಾಗಿ ಫೋಟೋಶೂಟ್‌ ಮೂಡಿ ಬಂದಿದೆ. ಯುವರಾಣಿ ಲುಕ್ಕಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇನ್ನು ನೆಚ್ಚಿನ ನಟಿಯ ಹೊಸ ಚಿತ್ರದ ಅಪ್‌ಡೇಟ್‌ಗಾಗಿ ಫ್ಯಾನ್ಸ್ ಕಾಯ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಜೈಪುರ ಪ್ರವಾಸದಲ್ಲಿ `ರಾಬರ್ಟ್’ ನಟಿ ಆಶಾ ಭಟ್

    ಜೈಪುರ ಪ್ರವಾಸದಲ್ಲಿ `ರಾಬರ್ಟ್’ ನಟಿ ಆಶಾ ಭಟ್

    ಸ್ಯಾಂಡಲ್‌ವುಡ್‌ನ `ರಾಬರ್ಟ್’ ನಟಿ ಆಶಾ ಭಟ್ ಮತ್ತೆ ಸುದ್ದಿಯಲ್ಲಿದ್ದಾರೆ. ಸಿನಿಮಾ, ಫೋಟೋಶೂಟ್ ಅಂತಾ ಒಂದಲ್ಲಾ ಒಂದು ವಿಚಾರದಿಂದ ಸುದ್ದಿಯಾಗೋ ನಟಿ ಆಶಾ ಭಟ್ ಈಗ ಬ್ಯುಸಿ ಲೈಫ್‌ಗೆ ಸ್ವಲ್ಪ ಬ್ರೇಕ್ ಕೊಟ್ಟು, ಜೈಪುರ ಸುಂದರ ತಾಣಗಳಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಈ ಫೋಟೋ ಸಖತ್ ವೈರಲ್ ಆಗುತ್ತಿದೆ.

     

    View this post on Instagram

     

    A post shared by Asha Bhat (@asha.bhat)

    ಬಾಲಿವುಡ್‌ನ `ಜಂಗ್ಲಿ’ ಚಿತ್ರದ ನಂತರ ಕನ್ನಡದ `ರಾಬರ್ಟ್’ ಚಿತ್ರದಲ್ಲಿ ಮಿರ ಮಿರ ಅಂತಾ ಮಿಂಚಿದ ಮೇಲೆ ತಮ್ಮ ಗಾಯನದ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದರು. ಈಗ ಒಂದಿಷ್ಟು ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿರೋ ಬೆನ್ನಲ್ಲೇ ಜೈಪುರ ಪ್ರವಾಸಕ್ಕೆ ತೆರಳಿದ್ದಾರೆ. ಜೈಪುರದ ಸುಂದರ ಪ್ರದೇಶಗಳಿಗೆ ನಟಿ ಆಶಾ ಭೇಟಿ ನೀಡಿದ್ದಾರೆ. ಇದನ್ನೂ ಓದಿ: ನಯನತಾರಾ- ವಿಘ್ನೇಶ್ ಶಿವನ್ ಮದುವೆಗೆ ಸಮಂತಾ ಮಿಸ್ಸಿಂಗ್?

     

    View this post on Instagram

     

    A post shared by Asha Bhat (@asha.bhat)

    ಇನ್ನು `ರಾಬರ್ಟ್’ ಚಿತ್ರ ಬಾಕ್ಸಾಫೀಸ್‌ನಲ್ಲಿ ಸೂಪರ್ ಸಕ್ಸಸ್ ಕಂಡಿದ್ರು. ಆಶಾ ಭಟ್ ಅವರ ಮುಂದಿನ ಚಿತ್ರದ ಬಗ್ಗೆ ಯಾವ ಅಪ್‌ಡೇಟ್ ಕೂಡ ಅಭಿಮಾನಿಗಳಿಗೆ ಸಿಕ್ಕಿಲ್ಲ. ಇನ್ನು ಪ್ರತಿಷ್ಠಿತ ಬ್ಯಾನರ್ ಜತೆಗೆ ಒಂದೊಳ್ಳೆ ಸಿನಿಮಾಗೆ ಆಶಾ ಭಟ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಚಿತ್ರತಂಡದ ಅಧಿಕೃತ ಘೋಷಣೆಗೆ ಕಾಯ್ತಿದ್ದಾರೆ. ರಾಬರ್ಟ್ ಬ್ಯೂಟಿ ಆಶಾ ಲಿಸ್ಟ್‌ನಲ್ಲಿ ಕೈತುಂಬಾ ಸಿನಿಮಾಗಳಿವೆ. ಕೆಲವೇ ದಿನಗಳಲ್ಲಿ ಹೊಸ ಚಿತ್ರದ ಕುರಿತು ಗುಡ್ ನ್ಯೂಸ್ ನೀಡಲಿದ್ದಾರೆ.

  • ಸಕಲ ಕಲಾವಲ್ಲಭೆ ರಾಬರ್ಟ್ ನಟಿ ಆಶಾ ಭಟ್

    ಸಕಲ ಕಲಾವಲ್ಲಭೆ ರಾಬರ್ಟ್ ನಟಿ ಆಶಾ ಭಟ್

    ಸ್ಯಾಂಡಲ್‌ವುಡ್‌ಗೆ `ರಾಬರ್ಟ್’ ಚಿತ್ರದ ಮೂಲಕ ನಾಯಕಿಯಾಗಿ ಪರಿಚಿತರಾದ ಆಶಾ ಭಟ್ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿದ್ದಾರೆ. ಬಹುಮುಖ ಪ್ರತಿಭೆ ಆಶಾ ತಮ್ಮ ಇಂಪಾದ ಗಾಯನ, ಡ್ಯಾನ್ಸ್ ಮೂಲಕ ಆಗಾಗ ಮೋಡಿ ಮಾಡುತ್ತಲೇ ಇರುತ್ತಾರೆ. ಇದೀಗ ರಾಬರ್ಟ್ ನಟಿಯ ಹೊಸ ವಿಡಿಯೋ ವೈರಲ್ ಆಗುತ್ತಿದೆ.

    `ರಾಬರ್ಟ್’ ಚಿತ್ರದ ಮೂಲಕ ಗಮನ ಸೆಳೆದ ನಾಯಕಿ ಆಶಾ ಭಟ್, ಮಿಸ್ ಸುಪ್ರಾನ್ಯಾಷನಲ್ ಆಗಿ ಆಯ್ಕೆಯಾಗಿದ್ದ ನಟಿ ಮೂಲತಃ ಶಿವಮೊಗ್ಗದ ಭದ್ರವತಿಯವರು, ಕೆರಿಯರ್ ಶುರುವಿನಲ್ಲೇ ಬಾಲಿವುಡ್ ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡವರು. ಕನ್ನಡದ ಮೊದಲ ಚಿತ್ರ `ರಾಬರ್ಟ್’ನಲ್ಲಿ ತನ್ನ ಅಮೋಘ ನಟನೆಯಿಂದ ಕನ್ನಡಿಗರ ಮನಗೆದ್ದರು. ಸಕಲ ಕಲಾವಲ್ಲಭೆ ಆಗಿರುವ ಆಶಾ, ಮಾರ್ಷಲ್ ಆರ್ಟ್ಸ್ ವಿಡಿಯೋವೊಂದನ್ನ ಶೇರ್ ಮಾಡಿದ್ದಾರೆ. ಅಭಿಮಾನಿಗಳು ನೋಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ.

     

    View this post on Instagram

     

    A post shared by Asha Bhat (@asha.bhat)

    ಬ್ಯೂಟಿ ಜತೆ ಪ್ರತಿಭೆಯಿರೋ ಪ್ರವೀಣೆ ಆಶಾ, ಹಾಡು, ಡ್ಯಾನ್ಸ್, ಕರಾಟೆ, ಮಾರ್ಷಲ್ ಆರ್ಟ್ಸ್ ಅಂತಾ ನಾನಾ ತರಹದ ವಿದ್ಯೆ ತಿಳಿದುಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ತಮ್ಮ ಇಂಪಾದ ದನಿಯ ಮೂಲಕ ಕನ್ನಡಿಗರಿಗೆ ಮೋಡಿ ಮಾಡಿದ್ರು. ಮಾರ್ಷಲ್ ಆರ್ಟ್ಸ್ ಝಲಕ್ ವಿಡಿಯೋ ಶೇರ್ ಮಾಡಿ, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ: ಜಗ್ಗೇಶ್ ಗೆ ಡಬಲ್ ಖುಷಿ : ವರಮಹಾಲಕ್ಷ್ಮೀ ಹಬ್ಬಕ್ಕೆ ರಾಘವೇಂದ್ರ ಸ್ಟೋರ್ಸ್

     

    View this post on Instagram

     

    A post shared by Asha Bhat (@asha.bhat)

    ಇನ್ನು ಸಿನಿಮಾ ವಿಚಾರಕ್ಕೆ ಬರೋದಾದ್ರೆ, ರಾಬರ್ಟ್ ನಂತರ ಮತ್ತೆ ಯಾವುದೇ ಚಿತ್ರದಲ್ಲೂ ಕಾಣಿಸಿಕೊಂಡಿಲ್ಲ ನಟಿ ಆಶಾ ಭಟ್, ಈಗಾಗಲೇ ಸಾಕಷ್ಟು ಕಥೆಗಳನ್ನು ಕೇಳಿರೋ ಆಶಾ, ಒಂದಿಷ್ಟು ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಸದ್ಯದಲ್ಲೇ ಈ ಚಿತ್ರದ ಕುರಿತು ರಿವೀಲ್ ಮಾಡಲಿದ್ದಾರೆ.

  • ತಮ್ಮ ಜೀವನದ ಸ್ಫೂರ್ತಿ ಸುಧಾಮೂರ್ತಿ ಅವರನ್ನು ಭೇಟಿಯಾದ ಆಶಾ ಭಟ್

    ತಮ್ಮ ಜೀವನದ ಸ್ಫೂರ್ತಿ ಸುಧಾಮೂರ್ತಿ ಅವರನ್ನು ಭೇಟಿಯಾದ ಆಶಾ ಭಟ್

    `ರಾಬರ್ಟ್’ ಚಿತ್ರದ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟ ನಟಿ ಆಶಾ ಭಟ್. ಕನ್ನಡದ ಮೊದಲ ಚಿತ್ರದಲ್ಲೇ ಭರವಸೆಯ ನಟಿಯಾಗಿ ಗುರುತಿಸಿಕೊಂಡ್ರು. ನಟಿಯಾಗಿ ಮತ್ತು ಗಾಯಕಿಯಾಗಿ ಸೌಂಡ್ ಮಾಡ್ತಿರೋ `ರಾಬರ್ಟ್’ ಬ್ಯೂಟಿ ಆಶಾ, ತಮ್ಮ ಜೀವನದಲ್ಲಿ ಇವರು ನನ್ನ ಸ್ಫೂರ್ತಿ ಎಂದು ಸುಧಾಮೂರ್ತಿ ಅವರ ಜತೆಗಿನ ಫೋಟೋವೊಂದನ್ನ ಸೋಷಿಯಲ್ ಮೀಡಿಯಾದಲ್ಲಿ ನಟಿ ಆಶಾ ಶೇರ್ ಮಾಡಿದ್ದಾರೆ. ಸದ್ಯ ಈ ಫೋಟೋ ಭಾರೀ ವೈರಲ್ ಆಗ್ತಿದೆ.

    `ಕಣ್ಣು ಹೊಡೆಯಾಕ’ ಅಂತಾ ಹೇಳ್ತಾ ಅದೆಷ್ಟೋ ಪಡ್ಡೆ ಹುಡುಗರ ನಿದ್ದೆಗೆಡಿಸಿದ ನಟಿ ಆಶಾ, ಬಾಲಿವುಡ್ ಜಂಗ್ಲಿ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ರು. ಬಳಿಕ ಕನ್ನಡ ಚಿತ್ರದ ಮೂಲಕ ಹವಾ ಕ್ರಿಯೇಟ್ ಮಾಡಿದ್ರು. ಆಕ್ಟಿಂಗ್ ಮತ್ತು ಡ್ಯಾನ್ಸ್ಗಷ್ಟೇ ತಾನು ಸೀಮಿತವಲ್ಲ ಗಾಯಕಿಯಾಗಿಯೂ ಸೈ ಅಂತಾ ಪ್ರೂವ್ ಮಾಡಿದ್ರು. ನಟಿ ಆಶಾ ಇಂದು ದೆಹಲಿಯ ಈವೆಂಟ್‌ವೊಂದರಲ್ಲಿ ಸುಧಾಮೂರ್ತಿ ಅವರನ್ನು ಭೇಟಿಯಾಗಿದ್ದಾರೆ. ತಮ್ಮ ಬದುಕಿನಲ್ಲಿ ಸುಧಾಮೂರ್ತಿ ಅದೆಷ್ಟರ ಮಟ್ಟಿಗೆ ಸ್ಫೂರ್ತಿ ಎಂಬುದರ ಕುರಿತು ಇನ್ಸಾ÷್ಟಗ್ರಾಂನಲ್ಲಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಕೇರಳದಲ್ಲೂ ಯಶ್ ಹವಾ: ಟಾಪ್ 3ನೇ ಸ್ಥಾನದಲ್ಲಿ ಕೆಜಿಎಫ್ 2

     

    View this post on Instagram

     

    A post shared by Asha Bhat (@asha.bhat)

    ಇದೀಗ ಇನ್ಫೋಸಿಸ್ ಸಂಸ್ಥೆಯ ಮುಖ್ಯಸ್ಥೆ ಸುಧಾಮೂರ್ತಿ ಅವರ ಜತೆಗಿನ ಫೋಟೋ ಶೇರ್ ಮಾಡಿ, ಸುಧಾಮೂರ್ತಿ ಒಬ್ಬರು ಶ್ರೇಷ್ಠ ಮಹಿಳೆ, ನನಗೆ ಸ್ಫೂರ್ತಿ ನೀಡಲು ಎಂದಿಗೂ ವಿಫಲವಾಗದ ವ್ಯಕ್ತಿ. ಅವರ ಗುಣ ಮತ್ತು ನಡತೆ ನನಗೆ ಬೆರಗುಗೊಳಿಸುತ್ತದೆ ಎಂದು ತಮ್ಮ ನೆಚ್ಚಿನ ವ್ಯಕ್ತಿಯ ಬಗ್ಗೆ ಆಶಾ ಭಟ್ ಮೆಚ್ಚಗೆಯ ಮಾತುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಸದ್ಯ ಈ ಪೋಸ್ಟ್ ಭಾರೀ ವೈರಲ್ ಆಗುತ್ತಿದೆ.

  • ಕನ್ನಡದ ಎವರ್‌ಗ್ರೀನ್ ಸಾಂಗ್‍ಗೆ ದನಿಯಾದ ರಾಬರ್ಟ್ ರಾಣಿ!

    ಕನ್ನಡದ ಎವರ್‌ಗ್ರೀನ್ ಸಾಂಗ್‍ಗೆ ದನಿಯಾದ ರಾಬರ್ಟ್ ರಾಣಿ!

    ಚಂದನವನದ ನಟಿ ಆಶಾ ಭಟ್ ತಮ್ಮ ಫಸ್ಟ್ ಕವರ್ ಸಾಂಗ್ ಬಿಡುಗಡೆ ಮಾಡಿದ್ದಾರೆ. ಈ ಕವರ್ ಸಾಂಗ್‍ಗೆ ಅವರು ಕನ್ನಡದ ಎವರ್‌ಗ್ರೀನ್ ಸಾಂಗ್‍ಗೆ ದನಿಯಾಗಿದ್ದಾರೆ.

    ರಾಬರ್ಟ್ ಖ್ಯಾತಿಯ ಸಿಂಪಲ್ ಹುಡುಗಿ ಆಶಾ ಯಾವಾಗಲೂ ಸಾಂಪ್ರದಾಯಿಕ ಉಡುಗೆ, ಆಟ ಮತ್ತು ಅಡುಗೆ ಮಾಡುವ ಮೂಲಕ ಸುದ್ದಿಯಾಗುತ್ತಿದ್ದರು, ಆದರೆ ಈಗ ಕನ್ನಡ ದಶಕದ ಸೂಪರ್ ಹಿಟ್ ಸಾಂಗ್ ಮತ್ತು ಸೂಪರ್ ಹಿಟ್ ಸಿನಿಮಾವನ್ನು ಕನ್ನಡಿಗರಿಗೆ ನೆನಪಿಸಿದ್ದಾರೆ. ತಮ್ಮ ಕವರ್ ಸಾಂಗ್ ಝಲಕ್ ನನ್ನು ಇನ್‍ಸ್ಟಾದಲ್ಲಿ ಹಂಚಿಕೊಂಡಿರುವ ಅವರು, ಕನ್ನಡದ ಎವರ್‌ಗ್ರೀನ್ ಮೂವೀ ‘ಅಮೃತವರ್ಷಿಣಿ’ ಸಿನಿಮಾದ ‘ತುಂತುರು ಅಲ್ಲಿ ನೀರ ಹಾಡು’ ಸಾಂಗ್‍ನನ್ನು ತಮ್ಮ ಸುಮಧುರ ಕಂಠದಲ್ಲಿ ಹಾಡಿದ್ದಾರೆ. ಇದನ್ನೂ ಓದಿ: ಹೊಟ್ಟೆ ಡುಮ್ಮ ಅಂದಿದ್ದಕ್ಕೆ ಸೂಪರ್ ಸ್ಟಾರ್ ಅಜಿತ್ ಮಾಡಿದ್ದೇನು?

     

    View this post on Instagram

     

    A post shared by Asha Bhat (@asha.bhat)

    ಆಶಾ ಕನ್ನಡದಲ್ಲಿ ಮಾಡಿರುವುದು ಒಂದೇ ಸಿನಿಮಾವಾದರೂ ತಮ್ಮ ಸೃಜನಶಿಲತೆ ಮತ್ತು ಆಚಾರದಿಂದ ಕನ್ನಡಿಗರ ಮನವನ್ನು ಗೆದ್ದಿದ್ದಾರೆ. ತಮ್ಮ ಕವರ್ ಸಾಂಗ್ ಬಗ್ಗೆ ಪೋಸ್ಟ್ ಮಾಡಿರುವ ಅವರು, ಕೊನೆಗೂ ನನ್ನ ಮೊದಲ ಕವರ್ ಸಾಂಗ್ ಬಿಡುಗಡೆಯಾಗಿದೆ. ನೀವು ನನ್ನ ಪೂರ್ತಿ ಸಾಂಗ್ ಕೇಳಿಸಿಕೊಳ್ಳಬೇಕು ಎಂದರೆ ನನ್ನ ಇನ್‍ಸ್ಟಾ ಬಯೋದಲ್ಲಿ ಲಿಂಕ್ ಹಾಕಿದ್ದೇನೆ. ವೀಡಿಯೋವನ್ನು ವೀಕ್ಷಿಸಿ, ಪ್ರತಿಕ್ರಿಯಿಸಿ. ಈ ವೀಡಿಯೋ ಮಾಡಲು ಸಹಾಯ ಮಾಡಿದ ನನ್ನ ತಂಡಕ್ಕೆ ಧನ್ಯವಾದಗಳು ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ಈ ವೀಡಿಯೋದಲ್ಲಿ ಆಶಾ ಕ್ಯೂಟ್ ಆಗಿ ಕಾಣಿಸುತ್ತಿದ್ದು, ಹಾಡನ್ನು ಹಾಡುವುದರ ಜೊತೆಗೆ ಭಾವನೆಯನ್ನು ಸಖತ್ ಆಗಿ ಎಕ್ಸ್‍ಪ್ರೆಸ್ ಮಾಡಿದ್ದಾರೆ. ಈ ವೀಡಿಯೋದಲ್ಲಿ ಪ್ರಕೃತಿ ಜೊತೆ ನಟಿಯನ್ನು ಸುಂದರವಾಗಿ ಕ್ಯಾಪ್ಚರ್ ಮಾಡಲಾಗಿದೆ. ಸುಂದರ ಜಾಗದಲ್ಲಿ ಆಶಾ ಇನ್ನೂ ಸುಂದರವಾಗಿ ಕಾಣಿಸಿಕೊಂಡಿದ್ದಾರೆ.

    ಸೋಶಿಯಲ್ ಮೀಡಿಯಾದದಲ್ಲಿ ಆ್ಯಕ್ಟವ್ ಇರುವ ಈ ನಟಿ ತಮ್ಮ ಎಲ್ಲ ಅಪ್ಡೇಟ್‍ಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಈ ಹಿಂದೆ ಆಶಾ ಹಸಿರು ಕ್ರಾಂತಿಯ ಸೂಪರ್ ಹೀರೋಗಳು ಮತ್ತು ಪದ್ಮಶ್ರೀ ಪುರಸ್ಕೃತರಾದ ಸಾಲುಮರದ ತಿಮ್ಮಕ್ಕ ಮತ್ತು ತುಳಸಿ ಗೌಡ ಅವರ ಜೊತೆಗೆ ಕೆಲವು ಕ್ಷಣ ಕಳೆದಿದ್ದರು. ಈ ಕುರಿತು ಸಹ ಇನ್‍ಸ್ಟಾದಲ್ಲಿ ಹಂಚಿಕೊಂಡಿದ್ದರು. ಇದನ್ನೂ ಓದಿ: ಟ್ರೋಲ್‌ಗೆ ಆಹಾರವಾದ ಬಾಲಿವುಡ್ ನಟಿ ಕರೀನಾ ಆ ಎರಡು ಪೀಸ್ ಬಟ್ಟೆ

    2014ರಲ್ಲಿ ಮಿಸ್ ಸುಪ್ರಾನ್ಯಾಷನಲ್ ಅವಾರ್ಡ್ ಗೆದ್ದ ಈ ನಟಿ ಕನ್ನಡ ಮಾತ್ರವಲ್ಲ ಬೇರೆ ಭಾಷೆಗಳಲ್ಲಿಯು ನಟಿಸಿದ್ದು, ಸದ್ಯಕ್ಕೆ ಯಾವುದೇ ಹೊಸ ಸಿನಿಮಾ ಬಗ್ಗೆ ಫೋಷಣೆಯನ್ನು ಮಾಡಿಲ್ಲ.

  • ಪದ್ಮಶ್ರೀ ಪುರಸ್ಕೃತ ಹಿರಿಯ ಜೀವಗಳ ಆಶೀರ್ವಾದ ಪಡೆದ ಆಶಾ ಭಟ್

    ಪದ್ಮಶ್ರೀ ಪುರಸ್ಕೃತ ಹಿರಿಯ ಜೀವಗಳ ಆಶೀರ್ವಾದ ಪಡೆದ ಆಶಾ ಭಟ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಆಶಾ ಭಟ್ ಪದ್ಮಶ್ರೀ ಪುರಸ್ಕೃತರಾದ ಸಾಲುಮರದ ತಿಮ್ಮಕ್ಕ ಮತ್ತು ತುಳಸಿ ಗೌಡ ಅವರನ್ನು ಭೇಟಿಯಾಗಿದ್ದಾರೆ. ಈ ಸುಂದರ ಕ್ಷಣಗಳ ಕುರಿತಾಗಿ ಆಶಾ ಭಟ್ ಅವರು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

    ಪರಿಸರ ದಂತಕತೆಗಳ ನಡುವೆ ನಾವಿರುವುದು ನಮ್ಮ ಪುಣ್ಯವಾಗಿದ್ದು, ನಾನು ಹಿರಿಯರ ಆಶೀರ್ವಾದ ಪಡೆದಿದ್ದೇನೆ. ಪದ್ಮಶ್ರೀ ಪುರಸ್ಕೃತರಾದ ಸಾಲುಮರದ ತಿಮ್ಮಕ್ಕ ಮತ್ತು ತುಳಸಿ ಗೌಡ ಅವರ ಜೊತೆಗೆ ಕೆಲವು ಕ್ಷಣ ಕಳೆದಿದ್ದೇನೆ. ತಿಮ್ಮಕ್ಕ ಅವರು ಮರಗಳ ತಾಯಿ, ತನ್ನ ಹಸಿರು ಪ್ರಪಂಚದ ದೃಷ್ಟಿಯಲ್ಲಿ ಬದುಕಿದ ಹಸಿರು ಕ್ರಾಂತಿಯ ಸೂಪರ್ ಹೀರೋ ಆಗಿದ್ದಾರೆ. ತುಳಸಿ ಗೌಡ, ಯಾವುದೇ ಜಾತಿಯ ತಾಯಿ ಮರವನ್ನು ಗುರುತಿಸುವ ಸಾಮರ್ಥ್ಯಕ್ಕಾಗಿ ಎನ್‍ಸೈಕ್ಲೋಪೀಡಿಯಾ ಆಫ್ ಫಾರೆಸ್ಟ್ ಎಂದೂ ಕರೆಯುತ್ತಾರೆ. ಅವರ ಜ್ಞಾನದ ಬೆಳಕಿನಲ್ಲಿ ಇರುವುದು ಒಂದು ಆಶೀರ್ವಾದವಾಗಿದೆ ಎಂದು ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: KGF ಚಿತ್ರ ತಂಡದಿಂದ ಯಶ್ ಹುಟ್ಟುಹಬ್ಬಕ್ಕೆ ಸ್ಪೆಷಲ್ ವಿಶ್

     

    View this post on Instagram

     

    A post shared by Asha Bhat (@asha.bhat)

    ಒಬ್ಬ ಮಹಿಳೆಯಾಗಿ ನಾನು ಅವರಿಂದ ಸ್ಫೂರ್ತಿ ಪಡೆದಿದ್ದೇನೆ. ಅನನ್ಯವಾಗಿ ನೀವು, ನಮ್ಮ ಪರಂಪರರೆಯ ಕಿರೀಟವಾಗಿ ಅಳವಡಿಸಿಕೊಳ್ಳುವುದು ಮತ್ತು ಸಾಗುವುದು ಒಳ್ಳೆಯದು ಎಂದು ಬರೆದುಕೊಂಡು ಹಿರಿಯ ಜೀವಗಳಿಂಮ ಆಶಿರ್ವಾದ ಪಡೆದಿರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:  ಅಪ್ಪನ Birthdayಗೆ ಸ್ಪೆಷಲ್ ಗಿಫ್ಟ್ ಕೊಟ್ಟ ಐರಾ, ಯಥರ್ವ್

    ನಟಿ ಹಂಚಿಕೊಂಡಿರುವ ಚಿತ್ರಗಳು ಹಾಗೂ ಅವರ ಮಾತುಗಳಿಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಆಶಾ ಭಟ್ ರಾಬರ್ಟ್ ಚಿತ್ರದಲ್ಲಿನ ಅಭಿನಯದಿಂದ ಎಲ್ಲರ ಮನಗೆದ್ದಿದ್ದಾರೆ. ಹಳ್ಳಿಯ ಸೊಗಡಿನಲ್ಲಿ ಬೆಳೆದಿರುವ ಈ ನಟಿ ಸೋಶಿಯಲ್ ಮೀಡಿಯಾದಲ್ಲಿ ತಮ್ಮೂರಿನ ಸೊಗಡಿನ ಕುರಿತಾಗಿ ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳುತ್ತಿರುತ್ತಾರೆ.

  • ಕುಚ್ಚಲಕ್ಕಿ ರೊಟ್ಟಿ ಮಾಡಿದ ರಾಬರ್ಟ್ ನಟಿ ಆಶಾ ಭಟ್

    ಕುಚ್ಚಲಕ್ಕಿ ರೊಟ್ಟಿ ಮಾಡಿದ ರಾಬರ್ಟ್ ನಟಿ ಆಶಾ ಭಟ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಆಶಾ ಭಟ್ ಕುಚ್ಚಲಕ್ಕಿ ರೊಟ್ಟಿ ಮಾಡುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.

    ಸಣ್ಣ ವಿಷಯಗಳಲ್ಲಿ ಸಂತೋಷವನ್ನು ಕಂಡುಕೊಳ್ಳಬಲ್ಲವನು ಶ್ರೀಮಂತ. ಪ್ರತಿ ಬಾರಿ ನಾನು ಒಳ್ಳೆಯ ಭಾವನೆಯನ್ನು ಅನುಭವಿಸುತ್ತೇನೆ. ನಾನು ನನ್ನ ಜನರ ಹತ್ತಿರ ಬಂದಿದ್ದೇನೆ. ತಾಜಾ ಗಾಳಿಯ ಉಸಿರು, ತಾಜಾ ದೃಷ್ಟಿಕೋನವನ್ನು ನಾನು ಮರಳಿ ಪಡೆಯುತ್ತಿದ್ದೇನೆ. ಒಂದು ಕಪ್ ಫಿಲ್ಟರ್ ಕಾಫಿ ಕುಡಿಯುವುದು, ಕಾಡಿನಲ್ಲಿ ನಡೆಯುವುದು, ಹೊಸದನ್ನು ಕಲಿಯುವುದು, ಪ್ರಕೃತಿಯ ಶಬ್ದಗಳನ್ನು ಕೇಳುವುದು ನನಗೆ ಅಪಾರ ಸಂತೋಷವನ್ನು ತರುತ್ತದೆ ಎಂದು ಬರೆದುಕೊಂಡು ಕುಚ್ಚಲಕ್ಕಿ ರೊಟ್ಟಿಯನ್ನು ತಾವು ಮಾಡುತ್ತಿರುವ ವೀಡಿಯೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Asha Bhat (@asha.bhat)

    ಈ ವೀಡಿಯೋದಲ್ಲಿ ಆಶಾ ಭಟ್ ಅವರು ಒಲೆಯ ಮೇಲೆ ರೊಟ್ಟಿಯನ್ನು ಮಾಡುತ್ತಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ನಮ್ಮ ಹವ್ಯಕ ಕುಸು ತುಂಬಾನೇ ಸಿಂಪಲ್. ಎಲ್ಲೇ ಹೋದರು ಹೀಗೆ ಇರು. ನಮ್ಮ ಸಂಪ್ರದಾಯ ಉಳಿಸಿ ಬೆಳೆಸೋಣ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಾ ನಟಿಯ ಪೋಸ್ಟ್‍ಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇದನ್ನೂ ಓದಿ:  ಸಣ್ಣ ಪ್ರಮಾಣದ ಡ್ರಗ್ಸ್ ಸೇವಿಸಿದವರಿಗೆ ಜೈಲು ಶಿಕ್ಷೆ ಬೇಡ!

    ಕೆಲವು ದಿನಗಳ ಹಿಂದೆ ಆಶಾ ಭಟ್ ಅವರು ತಮ್ಮ ಹಳ್ಳಿಯಲ್ಲಿ ಮಕ್ಕಳು ಮತ್ತು ತಮ್ಮ ಸ್ನೇಹಿತರ ಜೊತೆಗೆ ಚಿನ್ನಿಕೋಲು ಆಟವಾಡಿರುವ ವೀಡಿಯೋವನ್ನು ಹಂಚಿಕೊಂಡಿದ್ದರು. ರಾಬರ್ಟ್ ಚಿತ್ರದ ಮೂಲಕ ಮೊದಲನೆಯದಾಗಿ ಸ್ಯಾಂಡಲ್‍ವುಡ್‍ಗೆ ಪಾದಾರ್ಪಣೆ ಮಾಡಿದರು. ಇವರು ಕೇವಲ ಒಂದು ಕನ್ನಡ ಸಿನಿಮಾದಿಂದಲೇ ಸಾಕಷ್ಟು ಜನಪ್ರಿಯ ಆದರು ಮತ್ತು ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿಕೊಂಡರು. ನಟಿ ಆಶಾ ಭಟ್ ಅವರು ಸಿನಿಮಾ ರಂಗಕ್ಕೆ ಬರುವ ಮುನ್ನ ಇವರು ಮಾಡೆಲ್ ಆಗಿದ್ದರು.

  • ಬಾಲಿವುಡ್‍ಗಿಂತ ಕನ್ನಡದಲ್ಲೇ ನಟಿಸುವಾಸೆ: ರಾಬರ್ಟ್ ಬೆಡಗಿ

    ಬಾಲಿವುಡ್‍ಗಿಂತ ಕನ್ನಡದಲ್ಲೇ ನಟಿಸುವಾಸೆ: ರಾಬರ್ಟ್ ಬೆಡಗಿ

    ಬೆಂಗಳೂರು: ರಾಬರ್ಟ್ ಸಿನಿಮಾ ಮೂಲಕ ಕನ್ನಡಿಗರ ಮನ ಗೆದ್ದಿರುವ ನಟಿ ಆಶಾ ಭಟ್ ಅವರಿಗೆ ಕನ್ನಡದಲ್ಲೇ ನಟಿಸುವಾಸೆಯಂತೆ. ಬಾಲಿವುಡ್‍ನಲ್ಲಿ ಸಿನಿಮಾ ಮಾಡಿದರೂ ನನಗೆ ಕನ್ನಡದ ಮೇಲೇ ಹೆಚ್ಚು ಪ್ರೀತಿ, ನಮ್ಮ ಜನರನ್ನೇ ರಂಜಿಸಲು ನನಗೆ ಹೆಚ್ಚು ಆಸೆ ಎಂದು ಹೇಳುವ ಮೂಲಕ ಕನ್ನಡಿಗರ ಮನಸು ಗೆದ್ದಿದ್ದಾರೆ.

    ಹೌದು ಈಗಾಗಲೇ ಬಾಲಿವುಡ್ ಸಿನಿಮಾದಲ್ಲಿ ನಟಿಸಿ, ರಾಬರ್ಟ್ ಸಿನಿಮಾ ಮೂಲಕ ಸ್ಯಾಂಡಲ್‍ವುಡ್‍ಗೆ ಪಾದಾರ್ಪಣೆ ಮಾಡಿದ ಹಾಗೂ ಮೂಲತಃ ಕರ್ನಾಟಕದವರೇ ಆದ ಆಶಾ ಭಟ್ ತಮ್ಮ ನಟನೆ ಕರೀಯರ್ ಬಗ್ಗೆ ಮಾತನಾಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಮೂಲಕ ಕನ್ನಡಿಗರ ಮನ ಗೆದ್ದಿರುವ ನಟಿ ಆಶಾ ಭಟ್, ಇದೀಗ ಮತ್ತಷ್ಟು ಸಿನಿಮಾಗಳ ನಿರೀಕ್ಷೆಯಲ್ಲಿದ್ದು, ಈ ಕುರಿತು ಸುದ್ದಿಗಳು ಸಹ ಹರಿದಾಡುತ್ತಿವೆ. ಇದೇ ಸಂದರ್ಭದಲ್ಲಿ ತಮ್ಮ ನಟನೆ ಕರೀಯರ್ ಬಗ್ಗೆ ಮಾತನಾಡಿರುವ ಆಶಾ ಭಟ್, ಬಾಲಿವುಡ್ ಸಿನಿಮಾದಲ್ಲಿ ನಟಿಸಿದರೂ ಕನ್ನಡದಲ್ಲಿ ನಟಿಸಲು ತುಂಬಾ ಆಸೆ ಇದೆ ಎಂದಿದ್ದಾರೆ.

    ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿರುವ ಅವರು, ನಾನು ಸಿನಿಮಾ ಮಾಡಲು ನಿರ್ಧರಿಸಿದ ಬಳಿಕ ಭಾಷೆಯ ಎಲ್ಲೆ ಮೀರಿ ನಟಿಸಬೇಕು ಅಂದುಕೊಂಡೆ. ನನ್ನ ಮೊದಲ ಸಿನಿಮಾ ಬಾಲಿವುಡ್‍ನ ಜಂಗ್ಲಿ ಆದರೂ, ನನಗೆ ದಕ್ಷಿಣ ಭಾರತದ, ಅದರಲ್ಲೂ ಕನ್ನಡ ಸಿನಿಮಾಗಳಲ್ಲಿ ನಟಿಸಲು ತುಂಬಾ ಇಷ್ಟ. ನಾನು ಕರ್ನಾಟಕದವಳು, ಊರು ಭದ್ರಾವತಿ, ನನ್ನ ಮಾತೃ ಭಾಷೆ ಸಹ ಕನ್ನಡ. ಒಬ್ಬ ನಟಿಯಾಗಿ ವಿಭಿನ್ನ ನಟನೆ, ಡ್ಯಾನ್ಸ್ ಮೂಲಕ ನನ್ನ ಜನರನ್ನೇ ರಂಜಿಸಬೇಕು ಎಂಬುದು ನನ್ನ ಆಸೆ ಎಂದು ಮನದಾಳವನ್ನು ಹಂಚಿಕೊಂಡಿದ್ದಾರೆ.

    ರಾಬರ್ಟ್ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಾಗ, ಕನ್ನಡದ ಚೊಚ್ಚಲ ಸಿನಿಮಾ ಈ ರೀತಿ ದೊಡ್ಡ ಮಟ್ಟದಲ್ಲಿ ಇರುತ್ತೆ ಎಂದು ಕನಸಲ್ಲೂ ಊಹಿಸಿರಲಿಲ್ಲ. ರಾಬರ್ಟ್ ಸಿನಿಮಾಗೆ ನಾನು ಆಯ್ಕೆಯಾಗುತ್ತಿದ್ದಂತೆ ಚಿತ್ರ ತಂಡದವರು ಸಹ ಹೆಮ್ಮೆಪಟ್ಟರು, ‘ನಮ್ಮ ಕನ್ನಡತಿ’ ಎಂದು ಸ್ವಾಗತಿಸಿದರು. ಆದರೆ ಈ ಸಿನಿಮಾದಲ್ಲಿ ನಟಿಸಲು ನಾನು ಸಹ ಸಿಕ್ಕಾಪಟ್ಟೆ ಹಾರ್ಡ್ ವರ್ಕ್ ಮಾಡಿದ್ದೆ ಎಂದು ಅವರು ತಿಳಿಸಿದ್ದಾರೆ.

  • ಹುಟ್ಟುಹಬ್ಬದ ಸಂಭ್ರಮದಲ್ಲಿ ರಾಬರ್ಟ್ ಬೆಡಗಿ – ಚಿತ್ರತಂಡದಿಂದ ಫಸ್ಟ್‌ಲುಕ್ ಗಿಫ್ಟ್

    ಹುಟ್ಟುಹಬ್ಬದ ಸಂಭ್ರಮದಲ್ಲಿ ರಾಬರ್ಟ್ ಬೆಡಗಿ – ಚಿತ್ರತಂಡದಿಂದ ಫಸ್ಟ್‌ಲುಕ್ ಗಿಫ್ಟ್

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾ ಈಗಾಗಲೇ ಪೋಸ್ಟರ್ ಮೂಲಕ ಸದ್ದು ಮಾಡುತ್ತಿದೆ. ಇದೀಗ ಚಿತ್ರತಂಡ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ನಟಿ ಆಶಾ ಭಟ್‍ಗೆ ಸರ್ಪ್ರೈಸ್ ಉಡುಗೊರೆ ನೀಡಿದ್ದಾರೆ.

    ಇಂದು ನಟಿ ಆಶಾ ಭಟ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಹೀಗಾಗಿ ರಾಬರ್ಟ್ ಚಿತ್ರತಂಡ ಆಶಾ ಭಟ್ ಅವರ ಫಸ್ಟ್‌ಲುಕ್ ರಿಲೀಸ್ ಮಾಡಿದೆ. ಇದುವರೆಗೂ ದರ್ಶನ್ ಅವರ ಪೋಸ್ಟರ್ ಮತ್ತು ಟೀಸರ್ ಮಾತ್ರ ರಿವೀಲ್ ಮಾಡಿತ್ತು. ಇದೀಗ ಮೊದಲ ಬಾರಿಗೆ ನಾಯಕಿಯ ಪಾತ್ರವನ್ನು ಪರಿಚಯಿಸಿದೆ. ಸಿನಿಮಾದಲ್ಲಿ ಆಶಾ ಭಟ್, ದರ್ಶನ್ ಅವರಿಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

    ಬಿಡುಗಡೆಯಾಗಿರುವ ಫ‌ಸ್ಟ್‌ಲುಕ್‌ನಲ್ಲಿ ನಟಿ ಆಶಾ ಭಟ್ ಡ್ಯಾನ್ಸ್ ಮಾಡುತ್ತಿರುವ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಇದುವರೆಗೂ ಚಿತ್ರತಂಡ ಸಿನಿಮಾದ ಬಗ್ಗೆ ಹೆಚ್ಚಾಗಿ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಆದ್ದರಿಂದ ನಟಿ ಆಶಾ ಭಟ್ ಪಾತ್ರ ಹೇಗಿರಲಿದೆ ಎಂಬುದು ಅಭಿಮಾನಿಗಳಿಗೆ ಕುತೂಹಲ ಮೂಡಿಸಿದೆ. ಸೋಶಿಯಲ್ ಮೀಡಿಯಾದ ಮೂಲಕ ನಟಿಗೆ ದರ್ಶನ್ ಅಭಿಮಾನಿಗಳು ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

    ಫಸ್ಟ್‌ಲುಕ್ ರಿಲೀಸ್ ಮಾಡಿದ್ದಕ್ಕೆ ನಟಿ ಕೂಡ ಟ್ವೀಟ್ ಮಾಡುವ ಮೂಲಕ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ. “ರಾಬರ್ಟ್ ತಂಡ, ನೀವು ನನಗೆ ಕುಟುಂಬದವರಂತೆ ಇದ್ದೀರಿ. ನನ್ನ ಹುಟ್ಟುಹಬ್ಬವನ್ನು ಹೇಗೆ ಅದ್ಭುತವಾಗಿಸಬೇಕೆಂದು ನಿಮಗೆ ಚೆನ್ನಾಗಿ ತಿಳಿದಿದೆ. ಕೊನೆಯ ಹುಟ್ಟುಹಬ್ಬದ ದಿನ ನಾವು ಒಟ್ಟಿಗೆ ಪ್ರಯಾಣವನ್ನು ಪ್ರಾರಂಭಿಸಿದ್ದೇವೆ. ಈ ಬರ್ತ್ ಡೇಯಲ್ಲಿ ನಮ್ಮ ಪ್ರಯತ್ನವನ್ನು ಆಚರಿಸುತ್ತಿದ್ದೇವೆ” ಎಂದು ಧನ್ಯವಾದಗಳನ್ನು ತಿಳಿಸಿದ್ದಾರೆ.