Tag: ಆಶಾ ಫರೇಖ್‌

  • ಕೇಸರಿ ಉಡುಪು ಧರಿಸಿದ್ದಕ್ಕೆ ಬ್ಯಾನ್‌ ಮಾಡಿ ಅನ್ನೋದು ಸರಿಯಲ್ಲ – ಪಠಾಣ್‌ ಪರ ನಿಂತ ದಾದಾ ಸಾಹೇಬ್‌ ಫಾಲ್ಕೆ ಪುರಸ್ಕೃತ ನಟಿ

    ಕೇಸರಿ ಉಡುಪು ಧರಿಸಿದ್ದಕ್ಕೆ ಬ್ಯಾನ್‌ ಮಾಡಿ ಅನ್ನೋದು ಸರಿಯಲ್ಲ – ಪಠಾಣ್‌ ಪರ ನಿಂತ ದಾದಾ ಸಾಹೇಬ್‌ ಫಾಲ್ಕೆ ಪುರಸ್ಕೃತ ನಟಿ

    ಬಾದಷಾ ಶಾರುಖ್ ನಟನೆಯ `ಪಠಾಣ್’ (Pathan) ಮುಂದಿನ ಜನವರಿಗೆ ತೆರೆಯ ಮೇಲೆ ಅಬ್ಬರಿಸಲು ಸಜ್ಜಾಗಿದೆ. ರಿಲೀಸ್‌ಗೂ ಮುನ್ನವೇ ಸಾಕಷ್ಟು ವಿವಾದಗಳನ್ನ ಹುಟ್ಟು ಹಾಕಿದೆ. ಇನ್ನೂ ದೀಪಿಕಾ (Deepika Padukone) ಕೇಸರಿ ಬಿಕಿನಿ ವಿವಾದ, ಸಿನಿಮಾ ಬ್ಯಾನ್ (Ban) ವಿಷ್ಯವಾಗಿ ದಾದಾ ಫಾಲ್ಕೆ ಪುರಸ್ಕೃತ ನಟಿ ಆಶಾ ಪರೇಖ್ ಮಾತನಾಡಿದ್ದಾರೆ.

    ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ದೀಪಿಕಾ ಕೇಸರಿ ಬಿಕಿನಿ ವಿವಾದ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. `ಪಠಾಣ್’ (Pathan) ಚಿತ್ರದ ಹಾಡಿನಲ್ಲಿ ನಟಿ ದೀಪಿಕಾ ಸಖತ್ ಹಾಟ್ ಆಗಿ ಮೈಚಳಿ ಬಿಟ್ಟು ಶಾರುಖ್‌ ಜೊತೆ ಸೊಂಟ ಬಳುಕಿಸಿದ್ದಾರೆ. ʻಬೇಷರಂ ರಂಗ್ʼ ಹಾಡಿನಲ್ಲಿ ದೀಪಿಕಾ ಧರಿಸಿರುವ ಕೇಸರಿ ಬಣ್ಣದ ಬಟ್ಟೆ ಕುರಿತಾಗಿ ಈ ಚಿತ್ರವನ್ನೇ ನಿಷೇಧಿಸಬೇಕು ಎಂಬ ಕೆಲ ಮಾತುಗಳು ಸಹ ಕೇಳಿ ಬಂದಿದ್ದವು. ಸದ್ಯ ಇದೇ ವಿಚಾರವಾಗಿ ಹಿರಿಯ ನಟಿ ಆಶಾ ಪರೇಖ್ (Asha Parekh) ಮಾತನಾಡಿದ್ದಾರೆ. ಪಠಾಣ್‌ ಪರ ಹಿರಿಯ ನಟಿ ಆಶಾ ಪರೇಖ್ ಪ್ರತಿಕ್ರಿಯೆ ನೀಡಿದ್ದಾರೆ.

    ನಟಿ ಆಶಾ ಪರೇಖ್ ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರಿಗೆ `ಬೇಷರಂ ರಂಗ್’ ಹಾಡಿನ ಕುರಿತಾಗಿ ಕೇಳಲಾಗಿದೆ. ಈ ಬಗ್ಗೆ ಆಶಾ ಪರೇಖ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಚಿತ್ರದ ಮೂಲ ಉದ್ದೇಶ ಮನರಂಜನೆ ನೀಡುವುದಾಗಿದೆ. ದೀಪಿಕಾ ಕೇಸರಿ ಬಣ್ಣದ ಬಟ್ಟೆ ಧರಿಸಿರುವುದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಕೇಸರಿ ಉಡುಪು ಧರಿಸಿದ್ದಕ್ಕೆ ಬ್ಯಾನ್‌ ಮಾಡಿ ಅನ್ನೋದು ಸರಿಯಲ್ಲ. ದೀಪಿಕಾ ಬಿಕಿನಿ ಧರಿಸಿರೋದು ಅವರ ಸಮಸ್ಯೆಯಲ್ಲ. ಕೇಸರಿ ಬಣ್ಣ ಇರೋದು ಹಲವರ ಸಮಸ್ಯೆ. ನಮ್ಮ ಯೋಚನೆ ಸಂಕುಚಿತ ಸ್ವಭಾವದಿಂದ ಇದೆ. ನಾವು ಯೋಚಿಸುವ ರೀತಿ ಬದಲಾಗಬೇಕಿದೆ. ಈ ಮೂಲಕ ಬಾಲಿವುಡ್‌ನ ಟಾರ್ಗೆಟ್‌ ಮಾಡಲಾಗುತ್ತಿದೆ ಎಂದು ನಟಿ ಆಶಾ ಮಾತನಾಡಿದ್ದಾರೆ. ಕೆಲ ಚಿತ್ರಗಳು ಹೇಳಿಕೊಳ್ಳುವಂತಹ ದಾಖಲೆ ಮಾಡುತ್ತಿಲ್ಲ. ಹಾಗಾಗಿ ಹಿಂದಿ ಚಿತ್ರರಂಗ ಸೋಲುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಕನ್ನಡಿ ವಿಚಾರಕ್ಕೆ ರೂಪೇಶ್ ಶೆಟ್ಟಿ ಕಾಲೆಳೆದ ಕಿಚ್ಚ ಸುದೀಪ್

    ಸದ್ಯ ಚಿತ್ರರಂಗದಲ್ಲಿ ಪರಿಸ್ಥಿತಿ ಈಗಾಗಲೇ ತುಂಬಾ ಕೆಟ್ಟಿದೆ. ಸಿನಿಮಾ ನಿಷೇಧ ಮಾಡಿದ್ದರೆ ಉದ್ಯಮವೇ ಕೊನೆಗೊಳ್ಳುತ್ತದೆ. ಮುಂದೆ ಜನರು ಸಿನಿಮಾ ನೋಡಲು ಥಿಯೇಟರ್‌ಗೆ ಹೋಗುವುದಿಲ್ಲ. ಸಿನಿಮಾಗಳು ವಿಫಲವಾಗುತ್ತಲೇ ಇದ್ದರೆ, ಇನ್ನೊಂದು ಚಿತ್ರ ಹೇಗೆ ನಿರ್ಮಾಣವಾಗುತ್ತದೆ ಎಂದು ಹಿರಿಯ ನಟಿ ಆಶಾ ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]