Tag: ಆಶಸ್

  • ಬೊಕ್ಕ ತಲೆಗೆ ಆಟೋಗ್ರಾಫ್ ಹಾಕಿದ ಸ್ಪಿನ್ನರ್ ಜ್ಯಾಕ್ ಲೀಚ್ ವೀಡಿಯೋ ವೈರಲ್

    ಬೊಕ್ಕ ತಲೆಗೆ ಆಟೋಗ್ರಾಫ್ ಹಾಕಿದ ಸ್ಪಿನ್ನರ್ ಜ್ಯಾಕ್ ಲೀಚ್ ವೀಡಿಯೋ ವೈರಲ್

    ಸಿಡ್ನಿ: ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ 4ನೇ ಆಶಸ್ ಟೆಸ್ಟ್‌ನ ಮೊದಲ ದಿನ ಇಂಗ್ಲೆಂಡ್ ಸ್ಪಿನ್ನರ್ ಜ್ಯಾಕ್ ಲೀಜ್ ಬೊಕ್ಕ ತಲೆಯ ಪ್ರೇಕ್ಷಕನೊಬ್ಬನಿಗೆ ಆಟೋಗ್ರಾಫ್ ಹಾಕಿದ ವೀಡಿಯೋ ಒಂದು ವೈರಲ್ ಆಗುತ್ತಿದೆ.

    ಈಗಾಗಲೇ ಆಶಸ್ ಸರಣಿಯಲ್ಲಿ ಮೊದಲ ಮೂರು ಪಂದ್ಯಗಳನ್ನು ಗೆದ್ದು ಸರಣಿ ವಶಪಡಿಸಿಕೊಂಡಿರುವ ಆಸ್ಟ್ರೇಲಿಯಾ ತಂಡ ನಾಲ್ಕನೇ ಟೆಸ್ಟ್‌ನಲ್ಲೂ ತನ್ನ ಹಿಡಿತವನ್ನು ಸಾಧಿಸಿದೆ. ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಇಂಗ್ಲೆಂಡ್ ಸ್ಪಿನ್ನರ್ ಸ್ಟೇಡಿಯಂನಲ್ಲಿ ನೆರೆದಿದ್ದ ಅಭಿಮಾನಿಗಳೊಂದಿಗೆ ಚಿಯರ್ ಅಪ್ ಮಾಡಿಕೊಂಡಿದ್ದು ಅಭಿಮಾನಿಯೋರ್ವ ತನ್ನ ಬೊಕ್ಕ ತಲೆಗೆ ಆಟೋಗ್ರಾಫ್ ನೀಡುವಂತೆ ಕೇಳಿಕೊಂಡಿದ್ದಾನೆ. ಲೀಚ್ ಕೂಡ ಆತನ ಆಸೆಯಂತೆ ಆತನ ತಲೆಗೆ ಸೈನ್ ಮಾಡಿ ಮನಗೆದ್ದಿದ್ದಾರೆ. ಇದನ್ನೂ ಓದಿ: ರೋಚಕ ಘಟ್ಟದಲ್ಲಿ ಟೆಸ್ಟ್‌ – ಭಾರತದ ಗೆಲುವಿಗೆ ಬೇಕಿದೆ 8 ವಿಕೆಟ್‌

    ಬೌಂಡರಿ ಲೈನ್‍ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ಅಭಿಮಾನಿಗಳು ಜ್ಯಾಕ್ ಲೀಚ್ ಹೆಸರನ್ನು ಕೂಗಿ ಕರೆಯುತ್ತಿದ್ದರು. ಈ ವೇಳೆ 46.5 ನೇ ಓವರ್ ಆಗುತ್ತಿದ್ದಂತೆ ಅಭಿಮಾನಿ ತನ್ನ ಬೋಳು ತಲೆಗೆ ಆಟೋಗ್ರಾಫ್ ಹಾಕುವಂತೆ ಲೀಚ್ ಜೊತೆ ಮನವಿ ಮಾಡಿದ್ದಾನೆ. ಲೀಚ್ ಒಪ್ಪಿಗೆ ಸೂಚಿಸಿ ಸೈನ್ ಮಾಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಚಪ್ಪಳೆ ತಟ್ಟಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ಪಂತ್ ನೂತನ ಮೈಲಿಗಲ್ಲು – ಧೋನಿ ಜೊತೆ Elite ಪಟ್ಟಿಗೆ ಸೇರ್ಪಡೆ