Tag: ಆಲ್ ಓಕೆ

  • ಚಿತ್ರರಂಗದ ‘ಮರ್ಯಾದೆ ಪ್ರಶ್ನೆ’ ಅಂತಿದ್ದಾರೆ ಆಲ್ ಓಕೆ- ಸಕ್ಕತ್ ಸ್ಟುಡಿಯೋದ ಮತ್ತೊಂದು ಪ್ರಯತ್ನ

    ಚಿತ್ರರಂಗದ ‘ಮರ್ಯಾದೆ ಪ್ರಶ್ನೆ’ ಅಂತಿದ್ದಾರೆ ಆಲ್ ಓಕೆ- ಸಕ್ಕತ್ ಸ್ಟುಡಿಯೋದ ಮತ್ತೊಂದು ಪ್ರಯತ್ನ

    ಸ್ಯಾಂಡಲ್‌ವುಡ್‌ನಲ್ಲಿ (Sandalwood) ಇತ್ತೀಚೆಗೆ ಸಖತ್ ಸುದ್ದಿ ಆಗ್ತಿರೋದು ‘ಮರ್ಯಾದೆ ಪ್ರಶ್ನೆ’. ಹೌದು ‘ಸಕ್ಕತ್ ಸ್ಟುಡಿಯೋ’ ಮೂಲಕ ಆರ್ ಜೆ ಪ್ರದೀಪ್ ಅವರು ನಿರ್ಮಾಣ ಮಾಡುತ್ತಿರುವ ಮೊದಲ ಸಿನಿಮಾದ ಹೆಸರೇ ಮರ್ಯಾದೆ ಪ್ರಶ್ನೆ. ಸಕ್ಕತ್ ಕಂಟೆಂಟ್ ಗಳ ಮೂಲಕವೇ ಪ್ರೇಕ್ಷಕರ ಗಮನಸೆಳೆಯುತ್ತಿರುವ ಸಕ್ಕತ್ ಸ್ಟುಡಿಯೋ ನಮ್ಮ ಚಿತ್ರರಂಗದ ಸೆಲಿಬ್ರಿಟಿಸ್ ಅವರವರ ಜೀವನದ ‘ಮರ್ಯಾದೆ ಪ್ರಶ್ನೆ’ (Maryade Prashane) ಬಗ್ಗೆ ಪೋಸ್ಟ್ ಮಾಡುವ ಮೂಲಕ ಶೀರ್ಷಿಕೆ ಬಿಡುಗಡೆ ಮಾಡಿದ್ದರು.

    ಆರ್ ಜೆ ಪ್ರದೀಪ್ ಪ್ರದೀಪ್ ಒಡೆತನದ ಸಕ್ಕತ್ ಸ್ಟುಡಿಯೋ ಬಹಳ ಕ್ರಿಯೇಟಿವ್ ಆಗಿ ‘ಮರ್ಯಾದೆ ಪ್ರಶ್ನೆ’ ಸಿನಿಮಾವನ್ನು ಪ್ರಮೋಷನ್ ಮಾಡ್ತಿದೆ. ಆರ್‌ಸಿಬಿ ಕಪ್ ಗೆಲ್ಬೇಕು ಅಂತಾ ಕೊಹ್ಲಿ ತಂಡಕ್ಕೆ ಚಿಯರ್ ಹೇಳುವ ಹಾಡು ನಿರ್ಮಿಸಿದ್ದ ಸಕ್ಕತ್ ಸ್ಟುಡಿಯೋ ಈಗ ಆಲ್ ಓಕೆ ಕಡೆಯಿಂದಲೂ ಮರ್ಯಾದೆ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದೆ. ಕನ್ನಡದ ಖ್ಯಾತ ರ್ಯಾಪರ್ ಆಲ್ ಓಕೆ (All Ok) ಮಿಡಲ್ ಕ್ಲಾಸ್ ಮಂದಿಯ ಸಡಗರಗಳ ಬಗ್ಗೆ ಬಹಳ ಅರ್ಥಪೂರ್ಣವಾದ ಗೀತೆಯೊಂದನ್ನು ತಯಾರಿಸಿದ್ದು, ಸಕ್ಕತ್ ಸ್ಟುಡಿಯೋ ಈ ಹಾಡನ್ನು ನಿರ್ಮಿಸಿ ಇದೀಗ ರಿಲೀಸ್ ಮಾಡಿದೆ. ಇದನ್ನೂ ಓದಿ:‘ಮ್ಯಾಕ್ಸ್’ ಸಿನಿಮಾ ರಿಲೀಸ್ ಬಗ್ಗೆ ಗುಡ್ ನ್ಯೂಸ್ ಕೊಟ್ಟ ಸುದೀಪ್

    ಈ ಹಾಡಿನ ಮೂಲಕ ಕನ್ನಡ ಚಿತ್ರರಂಗದ ಎಲ್ಲರಿಗೂ ‘ಒಗ್ಗಟ್ಟಾಗಿ ದುಡಿಯುವ ಬೆಳೆಯುವ ಹಾಗೂ ಸ್ಟಾರ್ ಸಿನಿಮಾಗಳ ಜೊತೆಗೆ ಹೊಸ ಪ್ರಯತ್ನಗಳಿಗೂ ಜನ ಜೈ ಎನ್ನಬೇಕು. ಇದು ಬರೀ ಮರ್ಯಾದೆ ಪ್ರಶ್ನೆ ಅಲ್ಲಾ ನಮ್ಮೆಲ್ಲರ ಉಳಿವಿನ ಪ್ರಶ್ನೆ’ ಎಂಬ ಗಟ್ಟಿ ಕೂಗೊಂದನ್ನು ನೀಡಿದ್ದಾರೆ.

    ‘ಮರ್ಯಾದೆ ಪ್ರಶ್ನೆ’ ಸಿನಿಮಾದ ನಿರ್ಮಾಣದ ಜೊತೆಗೆ ಪ್ರದೀಪ್ ಕತೆ ಬರೆದಿದ್ದಾರೆ. ಕ್ರಿಯೆಟಿವ್ ಹೆಡ್ ಕೂಡ ಆಗಿದ್ದಾರೆ. ಈ ಮೂಲಕ ಕನ್ನಡಕ್ಕೆ ಹೊಸದೊಂದು ಕಥೆ ಕೊಡೊಕೆ ರೆಡಿ ಆಗಿದ್ದಾರೆ. ಮರ್ಯಾದೆ ಪ್ರಶ್ನೆ ಚಿತ್ರವನ್ನ ನಾಗರಾಜ್ ಸೋಮಯಾಜಿ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಇವರು ದಿ ಬೆಸ್ಟ್ ಆ್ಯಕ್ಟರ್, ಮೈಕ್ರೋ ಮೂವಿ ಮಾಡಿದ್ದರು. ‘ಮರ್ಯಾದೆ ಪ್ರಶ್ನೆ’ ಚಿತ್ರಕ್ಕೆ ಸಂದೀಪ್ ವೆಲ್ಲುರಿ ಕ್ಯಾಮರಾವರ್ಕ್ ಮಾಡಿದ್ದಾರೆ.

    ಅರ್ಜುನ್ ರಾಮು ಸಂಗೀತ ಕೊಟ್ಟಿದ್ದಾರೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ಯಾರೆಲ್ಲ ಇದ್ದಾರೆ ಅನ್ನೋ ಕುತೂಹಲ ಇದೆ. ಕನ್ನಡದ ಅದ್ಭುತ ಕಲಾವಿದರ ದಂಡೇ ಇದರಲ್ಲಿದೆ ಎಂಬ ಮಾಹಿತಿಯಿದೆ. ಅತಿ ಶೀಘ್ರದಲ್ಲೇ ಆ ವಿವರಗಳನ್ನು ಜನರಿಗೆ ನೀಡುವ ತಯಾರಿಯಲ್ಲಿದ್ದಾರೆ.

  • ಪೊಲೀಸ್‌ ಲಾಠಿ ಏಟಿನಿಂದ ತಪ್ಪಿಸಿಕೊಳ್ಳಲು ರ‍್ಯಾಪರ್‌ನನ್ನು ತಳ್ಳಿ ಬೀಳಿಸಿದ ಫ್ಯಾನ್‌

    ಪೊಲೀಸ್‌ ಲಾಠಿ ಏಟಿನಿಂದ ತಪ್ಪಿಸಿಕೊಳ್ಳಲು ರ‍್ಯಾಪರ್‌ನನ್ನು ತಳ್ಳಿ ಬೀಳಿಸಿದ ಫ್ಯಾನ್‌

    ಕಾರವಾರ: ಪೊಲೀಸರ ಲಾಠಿಗೆ ಹೆದರಿದ ಅಭಿಮಾನಿಯೊಬ್ಬ ತಪ್ಪಿಸಿಕೊಳ್ಳಲು ಆಲ್ ಓಕೆ ಗಾಯಕ ಅಲೋಕ್ ಬಾಬುರನ್ನು ವೇದಿಕೆಯಲ್ಲೇ ತಳ್ಳಿ ಓಡಿದ್ದು, ಇದರಿಂದಾಗಿ ವೇದಿಕೆಯಲ್ಲಿ ಹಾಡು ಹೇಳುತ್ತಿದ್ದ ಕನ್ನಡ ರ‍್ಯಾಪರ್ ಆಲ್ ಓಕೆ ಖ್ಯಾತಿಯ ಅಲೋಕ್ ಬಾಬು ವೇದಿಕೆಯಲ್ಲೇ ಬಿದ್ದು ಪಲ್ಟಿಯಾಗಿದ್ದಾರೆ.

    ಕಾರವಾರ (Karwar) ನಗರದ ಮಯೂರವರ್ಮ ವೇದಿಕೆಯಲ್ಲಿ ನಡೆಯುತ್ತಿದ್ದ ಕರುನಾಡು ಕರಾವಳಿ ಉತ್ಸವದಲ್ಲಿ ಈ ಘಟನೆ ನಡೆದಿದೆ. ಆಲ್‌ ಓಕೆ ರ‍್ಯಾಪರ್ ಆಗಮಿಸಿದ್ದ ಹಿನ್ನೆಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾವಣೆಗೊಂಡಿದ್ದರು. ವೇದಿಕೆ ಬಳಿಯೇ ಗುಂಪುಗೂಡಿ ಅಲೋಕ್ ಹಾಡಿಗೆ ಹೆಜ್ಜೆ ಹಾಕುತ್ತಿದ್ದರು.

    ಈ ವೇಳೆ ವೇದಿಕೆ ಹತ್ತಿ ಕುಣಿದಿದ್ದ ಓರ್ವ ಅಭಿಮಾನಿ ಗಾಯಕನೊಂದಿಗೆ ಕುಣಿದು ತಬ್ಬಿಕೊಳ್ಳಲು ಮುಂದಾಗಿದ್ದ ವೇಳೆ ಪೊಲೀಸ್ ಸಿಬ್ಬಂದಿ ಲಾಠಿ ಹಿಡಿದು ಹೊಡೆಯಲು ಬಂದಿದ್ದಾರೆ. ಈ ವೇಳೆ ಲಾಠಿ ಹೊಡೆತಕ್ಕೆ ಹೆದರಿದ ಅಭಿಮಾನಿ ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಗಾಯಕ ಅಲೋಕ್‌ನನ್ನು ತಳ್ಳಿ ಓಡಿದ್ದಾನೆ. ಈ ವೇಳೆ ಆಯತಪ್ಪಿ ವೇದಿಕೆಯಲ್ಲಿ ರ‍್ಯಾಪರ್ ಅಲೋಕ್ ಬಿದ್ದಿದ್ದಾರೆ. ಇದನ್ನೂ ಓದಿ: ಬಿನ್‌ ಲಾಡೆನ್‌ನ ಹೊಗಳಿದ್ದ ವ್ಯಕ್ತಿ, ರಾಹುಲ್‌ ಗಾಂಧಿ ಪಿಎಂ ಆಗಬೇಕೆಂದು ಬಯಸಿದ್ದರು – ಕಾಂಗ್ರೆಸ್‌ಗೆ ಬಿಜೆಪಿ ಟಾಂಗ್‌

    ವೇದಿಕೆಯಲ್ಲಿ ಬಿದ್ದರೂ ನೋ ಪ್ರಾಬ್ಲಮ್ ಎನ್ನುತ್ತಾ ಹಾಡು ಮುಂದುವರೆಸಿದ್ದು, ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಸಾಲಗಾರರ ಕಿರುಕುಳ – ಸೆಲ್ಫಿ ವೀಡಿಯೋ ಮಾಡಿ ವ್ಯಕ್ತಿ ಆತ್ಮಹತ್ಯೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬುಸುಗುಡುತ್ತಿದ್ದ ಚಂದನ್ ಶೆಟ್ಟಿ ಮತ್ತು ಆಲ್ ಓಕೆ ಈ ಹಾಡಿಗೆ ಒಂದಾದರು

    ಬುಸುಗುಡುತ್ತಿದ್ದ ಚಂದನ್ ಶೆಟ್ಟಿ ಮತ್ತು ಆಲ್ ಓಕೆ ಈ ಹಾಡಿಗೆ ಒಂದಾದರು

    ಸ್ಯಾಂಡಲ್ ವುಡ್ ಸಂಗೀತ ಲೋಕದಲ್ಲಿ  ರಾಪ್ ಹಾಡುಗಳ ಬಗ್ಗೆ ಹುಚ್ಚು ಹಚ್ಚಿಸಿದವರಲ್ಲಿ ಪ್ರಮುಖರು ಚಂದನ್ ಶೆಟ್ಟಿ ಮತ್ತು ಆಲ್ ಓಕೆ ಖ್ಯಾತಿಯ ಅಲೋಕ್ ಕುಮಾರ್. ಈ ಇಬ್ಬರು ಒಂದು ಕಾಲದಲ್ಲಿ ಒಟ್ಟಿಗೆ ಕನ್ನಡ ರಾಪ್ ಸಾಂಗ್ ಗಳನ್ನ ಸೃಷ್ಟಿಸಲು ಮುಂತಾದವರು. ಆದ್ರೆ ಕ್ರಮೆಣ ಅವರೊಂದು ದಾರಿ ಇವ್ರೊಂದು ದಾರಿಯಲ್ಲಿ ತಮ್ಮದೆ ಶೈಲಿಯಲ್ಲಿ ರಾಪ್ ಸಾಂಗ್ಸ್  ಕನ್ನಡಿಗರಿಗೆ ಕೊಟ್ಟವರು, ಕನ್ನಡದ ಜೊತೆಗೆ ಸಕಲ ಸಂಗೀತ ಪ್ರಿಯರಿಗೆ ಇಷ್ಟವಾದವರು. ಇದನ್ನೂ ಓದಿ : Exclusive- ಅಮೆಜಾನ್ ಪ್ರೈಮ್ನಲ್ಲಿ ‘ಕೆಜಿಎಫ್ 2’ : ಫಸ್ಟ್ ಟೈಮ್ ಮೆಂಬರ್ ಅಲ್ಲದವರೂ ಸಿನಿಮಾ ನೋಡಬಹುದು

    ಈಗ ಇದೇ ಆಲ್ ಓಕೆ ಮತ್ತು ಚಂದನ್ ಶೆಟ್ಟಿ ಒಟ್ಟಿಗೆ ಸೇರಿ ಒಂದು ಹೊಸ ರಾಪ್ ಸಾಂಗ್ ಅನ್ನು ಬಿಡುಗಡೆ ಮಾಡಲು ಮುಂದಾಗಿದ್ದಾರೆ.  ಕಾಣೆಯಾದವರ ಬಗ್ಗೆ ಪ್ರಕಟಣೆಗಳು ಚಿತ್ರಕ್ಕಾಗಿ ಇಬ್ಬರೂ ಈ ಗೀತೆಯನ್ನು ಹಾಡಿದ್ದಾರೆ. ನಿನ್ನೆಯಷ್ಟೇ ಈ ಹಾಡಿನ ರೆಕಾರ್ಡಿಂಗ್‌ ಕಾರ್ಯ ಮುಗಿದಿದೆ. ಇದನ್ನೂ ಓದಿ : ಪತಿ ಉಪ್ಪಿಗಿಂತಲೂ ಪತ್ನಿ ಪ್ರಿಯಾಂಕಾ ಉಪೇಂದ್ರ ಫಾಸ್ಟ್ : ಡಿಟೆಕ್ಟೀವ್ ತೀಕ್ಷ್ಣ @ 50

    ಕಾಣೆಯಾದವರ ಬಗ್ಗೆ ಪ್ರಕಟಣೆ ವಿಶಿಷ್ಠ ಟೈಟಲ್ ನಿಂದ ಗಮನ ಸೆಳೆದಿರೋ ಸಿನಿಮಾ ಇದು. ರಾಂಬೋ 2 , ಕೃಷ್ಣ ರುಕ್ಕು ಸಿನಿಮಾ ಖ್ಯಾತಿಯ ಅನಿಲ್ ಕುಮಾರ್ ನಿರ್ದೇಶನದ ಜೊತೆಗೆ ಫಸ್ಟ್ ಟೈಮ್ ಆ್ಯಕ್ಟಿಂಗ್ ಮಾಡಿರೋ ಸಿನಿಮಾ.  ಸ್ಯಾಂಡಲ್ ವುಡ್  ನ ಬಹು ಬೇಡಿಕೆಯ ಪೋಷಕ ಕಲಾವಿದರಾದ ರಂಗಾಯಣ ರಘು ,ಆರ್ಮುಗಂ ರವಿಶಂಕರ್, ತಬಲ ನಾಣಿ ಹಾಗೂ ಚಿಕ್ಕಣ್ಣ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ‘‘ಕಾಣೆಯಾದವರ ಬಗ್ಗೆ ಪ್ರಕಟಣೆ’’ ಸಿನಿಮಾದಲ್ಲಿ ವೆನಿಲಾ ಐಸ್  ಕ್ರೀಮ್ ಮೇಲೆ ಕಾಣೋ ಚರಿಯಂತೆ ಈ ಸಿನಿಮಾದಲ್ಲಿ ಚುಟು ಚುಟು ಬೆಡಗಿ , ಪಠಾಕಿ ಪೋರಿ ಆಶಿಕಾ ರಂಗನಾಥ್ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಒಂದು ಇಂಟರಸ್ಟಿಂಗ್ ಟ್ರೈಲರ್ ಬಿಟ್ಟು ಗಮ ಗಮನ ಸೇಳಿದ್ದಿದ್ದ ಕಾಣೆಯಾದವರ ಬಗ್ಗೆ ಪ್ರಕಟಣೆ ಟೀಮ್ ಈ ಬಾರಿ ಇಬ್ಬರು ಸ್ಟಾರ್ ರಾಪ್ ಸ್ಟಾರ್ಸ್ ಗಳನ್ನ ಒಟ್ಟು ಸೇರಿಸಿ ಹಾಡಿಸಿದ್ದಾರೆ.ಇದನ್ನೂ ಓದಿ : ಕಾಲೇಜು ದಿನಗಳಲ್ಲೇ ರಮ್ಯಾ ಮೇಲೆ ಕ್ರಶ್ ಆಗಿದೆ : ರಕ್ಷಿತ್ ಶೆಟ್ಟಿ

    ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ಸಂಯೋಜನೆಯಲ್ಲಿ ಕ್ರಾಂತಿ ಕುಮಾರ್ ಸಾಹಿತ್ಯದ ಸಿರಿಯಲ್ಲಿ ಒಂದು ಪಾರ್ಟಿ ಸಾಂಗ್ ಅನ್ನ ಆಲ್ ಓಕೆ ಮತ್ತು ಚಂದನ್ ಶೆಟ್ಟಿ ಅವರಿಂದ ಹಾಡಿಸಿದೆ ಚಿತ್ರತಂಡ. ಈ ಹಾಡಿನಲ್ಲಿ ರಂಗಯಾಣ ರಘು , ತಬಲ ನಾಣಿ , ರವಿಶಂಕರ್ ಹಾಗೂ ಚಿಕ್ಕಣ ರಾಪ್ ಸ್ಟಾರ್ ಗಳಂತೆ ಕುಣಿದಿರೋದು ವಿಶೇಷ.. ಈ ಕಾಣೆಯಾದವರ ಬಗ್ಗೆ ಪ್ರಕಟಣೆ ಸಿನಿಮಾ ರಿಲೀಸ್ ಸಿದ್ಧವಾಗುತ್ತಿದ್ದು ಮುಂದಿನ ದಿನಗಳಲ್ಲಿ ಒಂದೊಳ್ಳೆ ಡೇಟ್ ನೋಡ್ಕೊಂಡು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದೆ.