ನಿಂತ ನಿಲುವಿನಲ್ಲೇ ಆವರಿಸಿಕೊಳ್ಳಬಲ್ಲ ಹಾಡೊಂದಕ್ಕಾಗಿ ಅನುಕ್ಷಣವೂ ಹಾತೊರೆಯುವ ದೊಡ್ಡದೊಂದು ಸಂಗೀತ ಪ್ರೇಮಿಗಳ ದಂಡು ನಮ್ಮ ನಡುವಲ್ಲಿದೆ. ಯಾವ ಸುಳಿವೂ ಕೊಡದೆ ಚೆಂದದ್ದೊಂದು ಹಾಡು ಅಚಾನಕ್ಕಾಗಿ ಕಿವಿ ಸೋಕಿದರೆ ಅವರಿಗೆಲ್ಲ ಅಕ್ಷರಶಃ ರೋಮಾಂಚನ. ಬೃಂದಾ ಆಚಾರ್ಯ (Brinda Acharya) ಮತ್ತು ಭರತ್ ಬೋಪಣ್ಣ (Bharat Bopanna) ನಟಿಸಿರುವ ಆಲ್ಬಂ ಸಾಂಗ್ ಇದೀಗ ಅಂಥಾದ್ದೊಂದು ಅನುಭೂತಿಯನ್ನು ಬೇಷರತ್ತಾಗಿ ಕೊಡಮಾಡಿದೆ. ಸಾಹಿತ್ಯ, ಸಂಗೀತ, ಪರಿಕಲ್ಪನೆ, ನಟನೆ ಸೇರಿದಂತೆ ಎಲ್ಲದರಲ್ಲಿಯೂ ವಿಶೇಷವಾಗಿರುವ `ಸಾವಿರ ಗುಂಗಲ್ಲಿ’ ಆಲ್ಬಂ ಸಾಂಗ್ ಈಗ ಟ್ರೆಂಡಿಂಗಿನತ್ತ ದಾಪುಗಾಲಿಡುತ್ತಿದೆ.
ಇತ್ತೀಚಿನ ದಿನಮಾನದಲ್ಲಿ ಸಿನಿಮಾಗಳಾಚೆಗೆ ಹಾಡುಗಳು ರೂಪುಗೊಳ್ಳೋದೇ ಅಪರೂಪ. ಆಲ್ಬಂ ಸಾಂಗ್ ಅನ್ನೋ ರೋಮಾಂಚಕ ಪರಿಕಲ್ಪನೆ ಅದೇಕೋ ಬರಬರುತ್ತಾ ನೇಪಥ್ಯಕ್ಕೆ ಸರಿದುಬಿಟ್ಟಿದೆ. ಇಂಥಾ ಹೊತ್ತಲ್ಲಿ `ಸಾವಿರ ಗುಂಗಲ್ಲಿ’ ಎಂಬ ಆಲ್ಬಂ ಸಾಂಗ್ ತನ್ನ ನವಿರು ಶೈಲಿಯೊಂದಿಗೆ ಕೇಳುಗರನ್ನೆಲ್ಲ ಸೋಕುತ್ತಿದೆ. ಮತ್ತಷ್ಟು ಮನಸುಗಳನ್ನು ಆವರಿಸಿಕೊಳ್ಳುತ್ತಾ ಮುಂದುವರೆಯುತ್ತಿದೆ. ಅಂದಹಾಗೆ, ಕೃಷ್ಣ ನಂಜುಂಡಯ್ಯನವರ ಪರಿಕಲ್ಪನೆ, ನಿರ್ದೇಶನದಲ್ಲಿ ಮೂಡಿ ಬಂದಿದೆ. ಬೃಂದಾ ಆಚಾರ್ಯ, ಭರತ್ ಬೋಪಣ್ಣ, ಮಯೂರ್ ಸಾಗರ್, ಕೃತಿಕಾ ಗೌಡ, ಮಾನಿನಿ ಪಿ ರಾವ್ ಮುಂತಾದವರು ಸದರಿ ಆಲ್ಬಂ ಹಾಡಿನ ಭಾಗವಾಗಿದ್ದಾರೆ.
ಅದೆಲ್ಲದರಲ್ಲಿ ಒಂದಿಡೀ ಹಾಡಿನ ಪ್ರಧಾನ ಆಕರ್ಷಣೆಯಾಗಿ ಬೃಂದಾ ಆಚಾರ್ಯ ಕಾಣಿಸುತ್ತಾರೆ. ಹಾಡಿನ ನೆರಳಲ್ಲಿ ಕಥೆಯೊಂದು ಸರಿಯುವಂತೆ ಭಾಸವಾಗುವ ಈ ಆಲ್ಬಂ ಸಾಂಗ್, ಕೇಳುಗರನ್ನೆಲ್ಲ ಒಂದೇ ಸಲಕ್ಕೆ ಸೆಳೆಯುವಂತಿದೆ. ವಿಶೇಷವೆಂದರೆ, ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡುತ್ತಿರುವ ಪ್ರಮೋದ್ ಮರವಂತೆ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಅದು ಪೃಥ್ವಿ ಭಟ್ ಧ್ವನಿಯಲ್ಲಿ ಮೂಡಿ ಬಂದಿದೆ. ಛಾಯಾಗ್ರಹಣ ಸೇರಿದಂತೆ ಎಲ್ಲದರಲ್ಲಿಯೂ ಈ ಹಾಡು ಅದ್ದೂರಿಯಾಗಿ, ಅರ್ಥವತ್ತಾಗಿ ಮೂಡಿ ಬಂದಿದೆ. ಹೆಚ್ಚಿನ ವೀಕ್ಷಣೆ ಪಡೆಯುತ್ತಾ ಮುಂದುವರೆಯುತ್ತಿರುವ ಸದರಿ ಆಲ್ಬಂ ಸಾಂಗಿನ ಸವಾರಿಯೀಗ ಟ್ರೆಂಡಿಂಗಿನತ್ತ ಮುಖ ಮಾಡಿದೆ. ಆ ಮೂಲಕ ಇದರ ಹಿಂದಿರುವ ಕನಸು, ಶ್ರಮ, ಶ್ರದ್ಧೆಗಳೆಲ್ಲವೂ ಸಾರ್ಥಕವಾದಂತಾಗಿದೆ.
ಬೃಂದಾ ಆಚಾರ್ಯ ಇದೀಗ ಹಲವಾರು ಬಿಗ್ ಬಜೆಟ್ ಸಿನಿಮಾಗಳಲ್ಲಿ ನಾಯಕಿಯಾಗಿ ಬ್ಯುಸಿಯಾಗಿದ್ದಾರೆ. ಅದರ ನಡುವೆಯೂ ಇಂಥಾದ್ದೊಂದು ನವಿರು ಹಾಡಿಗೆ ಜೀವ ತುಂಬುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸೀರಿಯಲ್ ಜಗತ್ತಿನಿಂದ ಬಂದು, ಇದೀಗ ನಾಯಕನಾಗಿ ನೆಲೆಗಾಣುತ್ತಿರುವ ಭರತ್ ಬೋಪಣ್ಣ ಕೂಡಾ ಅಷ್ಟೇ ಚೆಂದಗೆ ನಟಿಸಿದ್ದಾರೆ. ಜೋಯ್ ಕಾಸ್ಟಾ ಸಂಗೀತ ನಿರ್ದೇಶನ, ಎನ್.ಕೆ ರಾಜ್ ಛಾಯಾಗ್ರಹಣ, ತಮಿಳರಸನ್ ಎಂ. ಸಂಕಲನ, ಅನಿಲ್ ಸಹ ನಿರ್ದೇಶನದೊಂದಿಗೆ ಈ ವೀಡಿಯೋ ಸಾಂಗ್ ಕಳೆಗಟ್ಟಿಕೊಂಡಿದೆ. ದಿನದಿಂದ ದಿನಕ್ಕೆ ಈ ಹಾಡು ಹೆಚ್ಚೆಚ್ಚು ಜನರನ್ನು ತಲುಪಿಕೊಳ್ಳುತ್ತಿದೆ. ಪ್ರಚಾರದ ಭರಾಟೆ ಇಲ್ಲದೆಯೂ ಕೇಳುಗರನ್ನು ವಶವಾಗಿಸಿಕೊಳ್ಳುತ್ತಿದೆ. ಸಂಗೀತದ ಧ್ಯಾನದೊಂದಿಗೆ ಇಂಥಾದ್ದೊಂದು ಸಾಹಸ ಮಾಡಿರುವ ಒಂದಿಡೀ ತಂಡದ ಕಣ್ಣಲ್ಲೀಗ ಖುಷಿಯ ಹೊಳಪು ಮಿರುಗಲಾರಂಭಿಸಿದೆ
ವಿಶಿಷ್ಟ ಹಾಡುಗಳ ಮೂಲಕ ಕನ್ನಡಿಗರನ್ನು ಮೋಡಿ ಮಾಡಿರುವ ಗಾಯಕ ಆಲ್ ಓಕೆ ಅಲೋಕ್ (All OK Alok), ಇದೀಗ ಮತ್ತೊಂದು ಆಲ್ಬಂ ಮಾಡಲು ತಯಾರಿ ಮಾಡಿಕೊಂಡಿದ್ದಾರೆ. ಈಗಾಗಲೇ ಸಿಂಗಪೂರ್ ದ ಯೂನಿರ್ವಸಲ್ ಸ್ಟುಡಿಯೋದಲ್ಲಿ ತಮ್ಮ ಹಾಡುಗಳನ್ನು ಶೂಟ್ ಮಾಡಿದ್ದು, ಅದರಲ್ಲಿ ರವಿಚಂದ್ರನ್ ಕೂಡ ಇರಲಿದ್ದಾರೆ. ಈ ಹಾಡಿನಲ್ಲಿ ಕ್ರೇಜಿಸ್ಟಾರ್ (Ravichandran) ವಿಶೇಷ ಸಾಲುಗಳಲ್ಲಿ ಬಂದು ಹೋಗುತ್ತಾರೆ.
ಈ ಆಲ್ಬಂಗೆ ‘ಫ್ರಿ’ (Free) ಎಂದು ಹೆಸರಿಟ್ಟಿದ್ದು ಮೈಂಡ್ ಫ್ರಿ ಮಾಡಿಕೊಳ್ಳಿ ಎನ್ನುವ ಅರ್ಥದಲ್ಲಿ ಈ ಆಲ್ಬಂ ಸಿದ್ದವಾಗುತ್ತಿದೆಯಂತೆ. ನಿತ್ಯದ ಜಂಜಡಗಳನ್ನು ಮರೆತು, ಮೈಂಡ್ ಫ್ರಿಯಾಗಿ ಇಟ್ಟುಕೊಳ್ಳುವಂತಹ ಸಂದೇಶವನ್ನು ಈ ಆಲ್ಬಂ (Album) ಸಾರಲಿದೆ. ಅದಕ್ಕೆ ಹೊಂದುವಂತಹ ಸಾಹಿತ್ಯವನ್ನು ಆ ಹಾಡಿಗಾಗಿ ಬಳಸಿದ್ದಾರಂತೆ ಆಲೋಕ್. ಇದನ್ನೂ ಓದಿ:ಎರಡೇ ಎರಡು ದಿನ ವೇಟ್ ಮಾಡಿ ಪ್ಲೀಸ್: ನಟ ಅನಿರುದ್ಧ ಮನವಿ
ಈ ಹಾಡಿನಲ್ಲಿ ‘ಏಕಾಂಗಿ ಬಾಳೆ ಬೆಸ್ಟು ಹಾಯಾಗಿರು’ ಎನ್ನುವ ಸಾಲುಗಳು ಬರುತ್ತವೆಯಂತೆ. ಈ ಸಾಲುಗಳನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಹೇಳಲಿದ್ದಾರೆ ಎನ್ನುವುದು ಅಲೋಕ್ ಮಾತು. ಈ ಮಾತನ್ನು ಅವರಿಂದ ಹೇಳಿಸಿದರೆ ಹೆಚ್ಚು ಜನರಿಗೆ ತಲುಪಿಸಲು ಸಾಧ್ಯ ಎನ್ನುವ ಕಾರಣಕ್ಕಾಗಿ ರವಿಚಂದ್ರನ್ ಅವರನ್ನು ಕೇಳಿದ್ದರಂತೆ ಅಲೋಕ್. ರವಿಮಾಮ ಕೂಡ ಓಕೆ ಅಂದಿರುವುದು ವಿಶೇಷ.
ಈ ಆಲ್ಬಂನ ಮತ್ತೊಂದು ವಿಶೇಷ ಅಂದರೆ, ಸಿಂಗಪೂರ್ ದ ಯೂನಿರ್ವಸಲ್ ಸ್ಟುಡಿಯೋದಲ್ಲಿ ತಯಾರಾದ ಕನ್ನಡದ ಮೊದಲ ಆಲ್ಬಂ ಇದಾಗಿದೆ. ಈ ಹಾಡಿಗೆ ಅದೇ ಲೋಕೇಷನ್ ಬೇಕಾಗಿದ್ದರಿಂದ ಅಲ್ಲಿಗೆ ಹೋಗಿ ಚಿತ್ರೀಕರಿಸಲಾಗಿದೆ ಎನ್ನುವುದು ತಂಡದ ಅಭಿಪ್ರಾಯ.
ಯಾವುದೇ ಕ್ಷೇತ್ರ ಆದರೂ ಸರಿ ಅಲ್ಲಿ ಹೊಸ ಹೊಸ ಪ್ರಯೋಗಗಳು ನಡೀತಾಯಿರಬೇಕು. ಆಗಾದಾಗ ಮಾತ್ರವೇ ಸಿದ್ದಸೂತ್ರಗಳನ್ನ ಮುರಿಯೋದಕ್ಕೆ ಸಾಧ್ಯವಾಗೋದು, ಹೊಸದೇನನ್ನೋ ಸೃಷ್ಟಿ ಮಾಡೋದಕ್ಕಾಗೋದು. ಸದ್ಯ ಕನ್ನಡ ಚಿತ್ರರಂಗದ ದಿಕ್ಕು ಬದಲಾಗಿದೆ. ದಶದಿಕ್ಕುಗಳಲ್ಲೂ ಚಂದನವನದ ಬಗ್ಗೆ ಮಾತನಾಡುವಂತಾಗಿದೆ. ಸಿನಿಮಾ ಮೇಕಿಂಗ್ ಸ್ಟೈಲು, ಸ್ಟೋರಿ ಟೆಲ್ಲಿಂಗ್ ಕಾನ್ಸೆಪ್ಟು ಯೂನಿಕ್ ಆಗ್ತಿರೋದ್ರಿಂದ ಇಡೀ ಭಾರತೀಯ ಚಿತ್ರರಂಗ ಸ್ಯಾಂಡಲ್‍ವುಡ್‍ನತ್ತ ಕಣ್ಣರಳಿಸಿದೆ. ಇದೇ ಹೊತ್ತಿಗೆ ಆಲ್ಬಂ (Album) ಲೋಕದಲ್ಲೂ ಕನ್ನಡಿಗರು ಸಂಚಲನ ಮೂಡಿಸುವ ಭರವಸೆ ಮೂಡಿದೆ. ಪಾಪ್‍ಗೆ ಸೆಡ್ಡು ಹೊಡೆದಂತೆ ರ‍್ಯಾಪ್‌ಹಾಡುಗಳನ್ನು ಕಟ್ಟಿಕೊಡುವಲ್ಲಿ ಕೆಲ ರ‍್ಯಾಪ್‌ಗಳು ನಿರತರಾಗಿದ್ದರೆ, ಇಲ್ಲೊಂದು ಐಟಿ ಬಳಗ ಆಲ್ಬಂ ಲೋಕದಲ್ಲಿ ಹೊಸ ಪ್ರಯೋಗ ಮಾಡಿ ಸುದ್ದಿಯಲ್ಲಿದೆ. ಅದೇ `ಒಮ್ಮೆ ಹೇಳು ದೇವರೇ’ (Omme Helu Devare). ಹಾಡಿನ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ. ವಿಶೇಷ ಅಂದರೆ ಈ ಹಾಡಿಗೆ ಕನ್ನಡಿಗರನ್ನ ಮಾತ್ರವಲ್ಲ ಎಲ್ಲಾ ಜನರನ್ನೂ ನೆನಪುಗಳ ಲೋಕದಲ್ಲಿ ಮೆರವಣಿಗೆ ಹೊರಡಿಸುವ ಶಕ್ತಿಯಿದೆ.
`ಒಮ್ಮೆ ಹೇಳು ದೇವರೇ’… ತಾತ ಹಾಗೂ ಮೊಮ್ಮಗನ ಸಂಬಂಧ ಮತ್ತು ಬಾಂಧವ್ಯವನ್ನ ಅನಾವರಣ ಮಾಡಿರುವಂತಹ ಆಲ್ಬಂ ಸಾಂಗ್. ಭಾನುಪ್ರಕಾಶ್ ಜೋಯಿಸ್ (Bhanuprakash Jois) ಎಂಬುವವರು ಸಾಹಿತ್ಯ ಹೊಸೆದು, ಸ್ಕ್ರೀನ್ ಪ್ಲೇ ರಚಿಸಿ ಈ ಆಲ್ಬಂ ಗೀತೆಯನ್ನ ಡೈರೆಕ್ಟ್ ಮಾಡಿದ್ದಾರೆ. ಮಯೂರ್ ಅಂಬೆಕಲ್ಲು (Mayur Ambekallu) ಸಂಗೀತ, ಅಭಿಷೇಕ್ ಎಂ ಆರ್ ಕಂಠಸಿರಿಯ ಈ ಹಾಡಿಗೆ ಶಿವಶಂಕರ್ ನೂರಂಬಡ ಕ್ಯಾಮೆರಾ ಕೈಚಳಕ ತೋರಿದ್ದಾರೆ. ವಿಎಫೆಕ್ಟ್, ಪೋಸ್ಟರ್ ಡಿಸೈನ್ ಸೇರಿದಂತೆ ಸಂಕಲನದ ಜವಾಬ್ದಾರಿಯನ್ನೂ ತಮ್ಮ ಹೆಗಲ ಮೇಲೆ ಹಾಕ್ಕೊಂಡಿದ್ದಾರೆ. ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಹಿರಿಯ ಕಲಾವಿದರಾದ ಅನಂತ್ ವೇಲು ಅವರು ಅಜ್ಜನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಮೊಮ್ಮಗನ ಪಾತ್ರದಲ್ಲಿ ಯುವ ನಟ ಕರ್ಣ ಹಾಗೂ ಪತ್ರಕರ್ತ ಹರಿಪರಾಕ್ ಅವರ ಪುತ್ರ ಮಯೂರ್ ಮಿಂಚಿದ್ದಾರೆ. ಆದರ್ಶ್ ಕೂಡ ಆಲ್ಬಂ ಸಾಂಗ್ ನಲ್ಲಿ ಕಾಣಸಿಗ್ತಾರೆ.
ಸಿನಿಮಾ ಹಾಡುಗಳಿರಲಿ, ಆಲ್ಬಂ ಗೀತೆಗಳಾಗಿರಲಿ ತಂದೆ-ಮಗಳು, ತಾಯಿ-ಮಗನಿಗೆ ಟ್ರಿಬ್ಯೂಟ್ ಆಗಿವೆ ಹೊರೆತು ಎಲ್ಲಿಯೂ ಗ್ರ್ಯಾಂಡ್‍ಪಾಗೆ ಮತ್ತು ಗ್ರ್ಯಾಂಡ್‍ಸನ್‍ಗೆ ಡೆಡಿಕೇಟ್ ಮಾಡಲಾಗಿಲ್ಲ. ಆದ್ರೀಗ ಅಪರೂಪಕ್ಕೆ `ಒಮ್ಮೆ ಹೇಳು ದೇವರೇ’ ಹಾಡನ್ನ ತಾತ ಮತ್ತು ಮೊಮ್ಮಗನಿಗೆ ಅರ್ಪಣೆ ಮಾಡಲಾಗಿದೆ. ಬಾಲ್ಯದಲ್ಲಿ ಅಜ್ಜನ ಅಕ್ಕರೆ, ಪ್ರೀತಿ, ವಾತ್ಸಲ್ಯ, ಮಮಕಾರವನ್ನ ಕಂಡ ಮೊಮ್ಮಗ ಬೆಳೆದು ದೊಡ್ಡವನಾದ್ಮೇಲೆ ಅಜ್ಜನನ್ನು ಎಷ್ಟು ಮಿಸ್ ಮಾಡಿಕೊಳ್ತಾನೆ, ಕನಸುಗಳೊಟ್ಟಿಗೆ ಹೇಗೆ ಜೀವಿಸ್ತಾನೆ, ನೆನಪುಗಳೊಟ್ಟಿಗೆ ಅದ್ಹೇಗೆ ಮುಂದೆ ಸಾಗ್ತಾನೆ ಅನ್ನೋದನ್ನ `ಒಮ್ಮೆ ಹೇಳು ದೇವರೇ’ ಹಾಡಿನ ಮೂಲಕ ಅದ್ಭುತವಾಗಿ ಕಟ್ಟಿಕೊಡಲಾಗಿದೆ. ಸೌಲ್ ಕ್ರಾಫ್ಟ್ ಫ್ಯಾಕ್ಟರಿ ಯೂಟ್ಯೂಬ್ ಚಾನಲ್‍ನಲ್ಲಿ ಈ ಸಾಂಗ್ ಲಭ್ಯವಿದೆ. ಇದನ್ನೂ ಓದಿ:ತಂದೆ ವಿರುದ್ಧವೇ ಕೊಲೆ ಬೆದರಿಕೆ ಆರೋಪ ಮಾಡಿದ ನಟಿ ಅರ್ಥನಾ ಬಿನು
ಏಟೈಸ್, ನೈಂಟಿಸ್ ಜನರೇಷನ್‍ನ ಮಕ್ಕಳು ಅಜ್ಜನ ಹೆಗಲೇರಿ ಊರೆಲ್ಲಾ ಮೆರವಣಿಗೆ ಹೋಗಿಬರುತ್ತಿದ್ದರು. ಪೆಟ್ಟಿ ಅಂಗಡಿಯಲ್ಲಿ ಚಾಕಲೇಟ್, ಚಕ್ಲಿ, ನಿಪ್ಪಟ್ಟು ತಿನ್ಕೊಂಡು ಹೊಟ್ಟೆ ತುಂಬಿಸಿಕೊಳ್ತಿದ್ದರು. ಮನೆಯಂಗಳದಲ್ಲಿ ಅಜ್ಜನೊಟ್ಟಿಗೆ ಗೋಲಿ, ಬುಗುರಿ ಆಟ ಆಡುತ್ತಿದ್ದರು. ಲೂನಾ ಸ್ಕೂಟರ್ ಏರಿ ಶಾಲೆಗೆ ಹೋಗಿಬರುತ್ತಿದ್ದರು. ಆದರೆ ಈಗೀನ ಮಕ್ಕಳು ಬೇಬಿ ಸಿಟ್ಟಿಂಗ್, ಡೇ ಕೇರ್ ಅಂತ ಇಡೀ ದಿನ ಅನಾಮಧೇಯರ ಜೊತೆಯಲ್ಲೇ ಕಳೆಯಬೇಕು. ಮನೆಗೆ ಬಂದ್ಮೇಲೆ ಮೊಬೈಲ್, ನಾಯಿ ಮರಿಗಳ ಜೊತೆ ಆಟ ಆಡ್ಬೇಕು ಬಿಟ್ಟರೆ ಬೇರೆ ದಾರಿನೇ ಇಲ್ಲ. ಹೀಗಾಗಿ, ಇವತ್ತಿನ ಜನರೇಷನ್ ಮಕ್ಕಳಿಗೆ ಅಜ್ಜ-ಅಜ್ಜಿಯ ಪ್ರೀತಿಯ ಕೊರತೆಯಿದೆ. ಕೂಸುಮರಿ ಆಡಿಸಲು, ಕುರುಕ್ ತಿಂಡಿ ಕೊಡಿಸಲು `ಒಮ್ಮೆ ಹೇಳು ದೇವರೇ’ ಹಾಡಿನಲ್ಲಿರುವ ಅಜ್ಜಪ್ಪನಂಥ ಅಜ್ಜಪ್ಪನ ಅಗತ್ಯವಿದೆ. ನಾವು ನಮ್ಮ ಮಕ್ಕಳು ಅನ್ನೋದನನ್ ಬಿಟ್ಟು ತಂದೆ-ತಾಯಿಯ ಜೊತೆಗೆ ಬದುಕಿದರೆ ತಮ್ಮ ತಮ್ಮ ಮಕ್ಕಳಿಗೆ ಅಜ್ಜ-ಅಜ್ಜಿಯ ಪ್ರೀತಿ ದಕ್ಕಲಿದೆ.
ಎನಿವೇ ರ‍್ಯಾಪ್, ಪಾಪ್, ಕಲ್ಚರ್ ಹಿಂದೆ ಹೋಗದೇ, ಸಮಾಜಕ್ಕೆ ಮತ್ತು ಜನರಿಗೆ ಒಂದು ಸಂದೇಶಭರಿತ ಆಲ್ಬಂ ಗೀತೆಯೊಂದನ್ನ ಕಟ್ಟಿಕೊಟ್ಟ ಐಟಿಬಿಟಿ ತಂಡಕ್ಕೆ ಹ್ಯಾಟ್ಸಾಫ್ ಹೇಳಬೇಕು. ಅದರಲ್ಲೂ `ಒಮ್ಮೆ ಹೇಳು ದೇವರೇ’ ಗೀತೆಗೆ ಸಾಹಿತ್ಯ ಗೀಚಿದ ಭಾನುಪ್ರಕಾಶ್ ಜೋಯಿಸ್ ಬಗ್ಗೆ ಒಂದೆರಡು ಮಾತು ಹೇಳಲೇಬೇಕು. ಅದು ಕರೊನಾ ಸಮಯ. ಲಾಕ್‍ಡೌನ್, ಸೀಲ್‍ಡೌನ್ ಕಾರಣದಿಂದ ಎಲ್ಲರೂ ಮನೆಯಲ್ಲೇ ಬಂಧಿಯಾಗಿದ್ದರು. ಆಗ ಕೆಲವರು ಕುರುಕಲು ತಿಂಡಿ ತಿನ್ಕೊಂಡು ಟೈಮ್‍ಪಾಸ್ ಮಾಡಿದ್ರು. ಇನ್ನೂ ಕೆಲವರು ಅದೇ ಟೈಮ್‍ನ ಉಪಯೋಗಿಸಿಕೊಂಡು ತಮ್ಮನ್ನ ತಾವು ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಂಡರು. ಅದರಂತೆ, ಭಾನುಪ್ರಕಾಶ್ ಜೋಯಿಸ್ ಲಾಕ್‍ಡೌನ್‍ನಲ್ಲಿ ಬರವಣಿಗೆಯಲ್ಲಿ ಬ್ಯುಸಿಯಾದರು. ಕರ್ನಾಟಕ ಅನ್‍ಲಾಕ್ ಆಗಿದ್ದೇ ತಡ ಗೆಳೆಯರಾದ ಕರ್ಣ ಹಾಗೂ ಆದರ್ಶ್ ಜೊತೆ ಸೇರಿ ತಮ್ಮದೊಂದು ತಂಡ ಕಟ್ಟಿಕೊಂಡು ಅಖಾಡಕ್ಕಿಳಿದರು. ಮ್ಯೂಸಿಕ್ ಆಲ್ಬಂಗಳ ರಚನೆಯಲ್ಲಿ ತೊಡಗಿದರು. ದಿಕ್ಕು ತಪ್ಪಿದ ದಾರಿ, ಎದುರಲಿ ಇರುವಾಗ ನೀನು, ಪರಪಂಚ ಹೆಸರಿನ ಆಲ್ಬಂನ ನಿರ್ಮಾಣ ಮಾಡಿದರು. ಅದ್ರಲ್ಲಿ ಎದುರಲಿ ಇರುವಾಗ ನೀನು ಆಲ್ಬಂ ಗೀತೆನಾ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರಿಲೀಸ್ ಮಾಡಿಕೊಟ್ಟು ಶುಭಹಾರೈಸಿದ್ದರು. ಇದೀಗ `ಒಮ್ಮೆ ಹೇಳು ದೇವರೇ’ ಹಾಡನ್ನು ವಿಕಟಕವಿ ಯೋಗರಾಜ್ ಭಟ್ಟರು ಬಿಡುಗಡೆ ಮಾಡಿ ಹೊಸಬರ ಬೆನ್ನುತಟ್ಟಿದ್ದಾರೆ. ಸಿಂಪಲ್ ಸುನಿ, ವಿ ಮನೋಹರ್, ವಿ ನಾಗೇಂದ್ರ ಪ್ರಸಾದ್, ಜಯಂತ್ ಕಾಯ್ಕಿಣಿ ಸೇರಿದಂತೆ ಇಂಡಸ್ಟ್ರಿಯ ಹಲವರು ಪ್ರೋತ್ಸಾಹಿಸಿದ್ದಾರೆ.
ಇಂಟ್ರೆಸ್ಟಿಂಗ್ ಅಂದರೆ `ಒಮ್ಮೆ ಹೇಳು ದೇವರೇ’ ಸಾಂಗ್ ಸೂಫಿ ಸ್ಟೈಲ್‍ನಲ್ಲಿದೆ. ಬಾಲಿವುಡ್‍ನ ರಾಕ್‍ಸ್ಟಾರ್, ಮೈ ನೇಮ್ ಈಸ್ ಖಾನ್, ಜೋದಾ ಅಕ್ಬರ್, ಸಿನಿಮಾದ ಹಾಡುಗಳನ್ನ ನೋಡಿ ಪ್ರೇರಣೆಗೊಂಡಿದ್ದ ಭಾನುಪ್ರಕಾಶ್ ಜೋಯಿಸ್, ಸೂಫಿ ಮ್ಯೂಸಿಕ್ ಫ್ಲೇವರ್ ನಲ್ಲಿ ಒಂದು ಹಾಡು ಮಾಡಬೇಕು ಎಂದುಕೊಂಡಿದ್ದರು. ಅದ್ರಂತೆ, `ಒಮ್ಮೆ ಹೇಳು ದೇವರೇ’ ಹಾಡನ್ನ ಸೂಫಿ ಜಾನರ್‍ನಲ್ಲಿ ಕಟ್ಟಿಕೊಟ್ಟಿದ್ದಾರೆ. ಬೆಂಗಳೂರು ಹಾಗೂ ಕುಮಟದಲ್ಲಿ ಚಿತ್ರೀಕರಣ ಮಾಡಿದ್ದು, ನಿರ್ವಾಣ ಬೀಚ್, ಅಲ್ಲಿನ ಹಳೆಯ ಮನೆಯೊಂದನ್ನ ಬಳಸಿಕೊಂಡಿದ್ದಾರೆ. ಶಾರ್ಟ್ ಫಿಲ್ಮ್, ಮ್ಯೂಸಿಕ್ ಆಲ್ಬಂ ಡೈರೆಕ್ಷನ್ ಮಾಡಿ ಅನುಭವ ಪಡೆದು ಸಿನಿಮಾ ನಿರ್ದೇಶನ ಮಾಡುವ ಕನಸು ಕಂಡಿರುವ ಭಾನುಪ್ರಕಾಶ್ ಜೋಯಿಸ್‍ಗೆ ಒಳ್ಳೆದಾಗಲಿ. ಅವರ ಕೈ ಚಳಕದಿಂದ ಮತ್ತಷ್ಟು ಮಗದಷ್ಟು ಆಲ್ಬಂ ಗೀತೆಗಳು, ಸಿನಿಮಾಗಳು ಹೊರಬರಲಿ ಅನ್ನೋದೇ ನಮ್ಮ ಆಶಯ.
ತಂತ್ರಜ್ಞಾನ ಮುಂದುವರೆದಂತೆ ಅನೇಕ ಹೊಸ ಪ್ರಯೋಗಗಳಿಗೆ ದಾರಿ ಮಾಡಿಕೊಡುತ್ತಿದೆ. ಅಂತಹ ವಿನೂತನ ಪ್ರಯತ್ನಕ್ಕೆ ‘COZ I LUV U’ ಆಲ್ಬಂ ( Album) ಹಾಡಿನ ಮೂಲಕ ನಾಂದಿ ಹಾಡಿದ್ದಾರೆ ಎಸ್ ಮಹೇಶ್ ಬಾಬು. ಇತ್ತೀಚೆಗೆ ಈ ಹಾಡಿನ ಪ್ರದರ್ಶನ ಹಾಗೂ ಪತ್ರಿಕಾಗೋಷ್ಠಿ ನಡೆಯಿತು. ಮಹೇಶ್ ಬಾಬು (Mahesh Babu) ಹಾಗೂ ತಂಡದವರು ಈ ಹೊಸ ಪ್ರಯತ್ನ ಬಗ್ಗೆ ಮಾತನಾಡಿದರು.
‘ನಾನು ಮೂಲತಃ ಊಟಿಯವನು. ಬೆಂಗಳೂರಿಗೆ ಬಂದು ಮೂರು ವರ್ಷಗಳಾಯಿತು. ನನಗೆ ಆರ್ಟಿಫಿಶಿಯಲ್ ಇಂಟಲಿಜೆನ್ಸ್ (AI) (Artificial Intelligence) ತಂತ್ರಜ್ಞಾನ ಬಳಸಿಕೊಂಡು ಹೊಚ್ಚಹೊಸ ಪ್ರಯತ್ನ ಮಾಡಬೇಕೆಂದೆನಿಸಿತು. ಅದರ ಮೊದಲ ಹೆಜ್ಜೆಯಾಗಿ ಈ ಆಲ್ಬಂ ಸಾಂಗ್ ಮಾಡಿದ್ದೇನೆ. ಇದರ ವಿಶೇಷತೆ ಏನೆಂದರೆ ಈ ಹಾಡನ್ನು ಯಾವ ಗಾಯಕ-ಗಾಯಕಿಯೂ ಹಾಡಿಲ್ಲ. ಸಾಹಿತ್ಯವನ್ನು ಸಾಫ್ಟ್ವೇರ್ಗೆ ಫೀಡ್ ಮಾಡಿ, ಗಂಡು ಮತ್ತು ಹೆಣ್ಣಿನ ಧ್ವನಿಯನ್ನು ಹೊಮ್ಮಿಸಿದ್ದೇನೆ’ ಎಂದರು ಮಹೇಶ್ ಬಾಬು
ಮುಂದುವರೆದು ಮಾತನಾಡಿದ ಅವರು ‘ನನಗೆ ತಿಳಿದ ಹಾಗೆ ವಿಶ್ವದಲ್ಲೇ ಇದು ಮೊದಲ ಪ್ರಯೋಗ ಎನ್ನಬಹುದು. ನನಗೆ ಈ ಕುರಿತು ರಿಸರ್ಚ್ ಮಾಡಲು ಆರು ತಿಂಗಳು ಹಿಡಿಯಿತು. ನಾನೇ ಹಾಡು ಬರೆದು, ಸಂಗೀತ ನೀಡಿ, AI ಟೆಕ್ನಾಲಜಿ, ಸಂಕಲನ, ಡಿ.ಐ, ನಿರ್ಮಾಣ ಹಾಗೂ ನಿರ್ದೇಶನ ಮಾಡಿದ್ದೇನೆ. ಇಂಗ್ಲಿಷ್ ಭಾಷೆಯಲ್ಲಿ ಈ ಹಾಡು (Song) ಮೂಡಿಬಂದಿದೆ. ಇಂಗ್ಲಿಷ್ ನಲ್ಲಿ ಮಾಡಲು ಕಾರಣವೆನೆಂದರೆ ಈ ಹೊಸ ತಂತ್ರಜ್ಞಾನ ವಿಶ್ವವ್ಯಾಪಿಯಾಗಬೇಕು ಎಂಬುದಾಗಿದೆ’ ಎಂದರು. ಇದನ್ನೂ ಓದಿ:ಹೊಸ ತಂಡದ ‘ಅಗ್ರಸೇನಾ’ ಪ್ರಯತ್ನಕ್ಕೆ ಪ್ರೇಕ್ಷಕರ ಉತ್ತಮ ಪ್ರತಿಕ್ರಿಯೆ
ಈ ತಂತ್ರಜ್ಞಾನವನ್ನು ಯಾವ ಭಾಷೆಯಲ್ಲಿ ಬೇಕಾದರೂ ಬಳಸಿಕೊಳ್ಳಬಹುದು. ಮುಂದೆ ಕನ್ನಡ ರಾಜ್ಯೋತ್ಸವದ ಸಮಯಕ್ಕೆ ಇದೇ ತಂತ್ರಜ್ಞಾನದಿಂದ ಕನ್ನಡ ಹಾಡೊಂದನ್ನು ಮಾಡುತ್ತೇನೆ. ಆಲ್ಬಂ ಹಾಡು ಮಾಡುವುದಕ್ಕೂ ಮುನ್ನ ಕೊರೋನ ಕಾಲದಲ್ಲಿ ಪ್ರಾಪ್ತಿ ಎಂಬ ಕನ್ನಡ ಸಿನಿಮಾ ಮಾಡಿದ್ದೇನೆ. ಅದು ತೆರೆಗೆ ಬರಲು ಸಿದ್ದವಿದೆ. ಆದರೆ ಆ ಸಿನಿಮಾದಲ್ಲಿ ನಾನು ಈ ಹೊಸ ತಂತ್ರಜ್ಞಾನ ಬಳಸಿಲ್ಲ. ಈ ನೂತನ ತಂತ್ರಜ್ಞಾನದಿಂದ ಗಾಯಕರಿಗೆ ಏನು ತೊಂದರೆಯಾಗುವುದಿಲ್ಲ. ಆಸಕ್ತಿವುಳ್ಳವರು ತಮ್ಮ ಸಿನಿಮಾದ ಒಂದು ಹಾಡಿಗೆ ಈ ತಂತ್ರಜ್ಞಾನ ಬಳಸಿಕೊಳ್ಳಬಹುದು. ಈಗಾಗಲೇ ನಮ್ಮ ಯೂಟ್ಯೂಬ್ ಚಾನಲ್ ನಲ್ಲಿ ಈ ಹಾಡು ಹಾಗೂ ಹಾಡಿನ ಮೇಕಿಂಗ್ ಬಿಡುಗಡೆ ಮಾಡಿದ್ದೇವೆ. ಆರುವರೆ ನಿಮಿಷಗಳ ಈ ಹಾಡು ಗಿನ್ನಿಸ್ ರೆಕಾರ್ಡ್ ಆಗುವ ಸಾಧ್ಯತೆ ಕೂಡ ಇದೆ. ನಮ್ಮ ಈ ಹೊಸ ಪ್ರಯತ್ನಕ್ಕೆ ನಿಮ್ಮ ಬೆಂಬಲವಿರಲಿ ಎಂದರು ಬಾಬು.
ಈ ಹಾಡಿನಲ್ಲಿ ಇರಾನ್ ಕಲಾವಿದೆ ಐರಾ ಫರಿದ್, ರೇವಂತ್ ರಾಮಕುಮಾರ್, ಯೋಗೇಶ್ ಮಲ್ಲಿಕಾರ್ಜುನ ಹಾಗೂ ಲೀನಾ ಕುಮಾರನ್ ಅಭಿನಯಿಸಿದ್ದಾರೆ. ಕಲಾವಿದರಾದ ಐದಾ ಫರಿದ್, ರೇವಂತ್ ರಾಮಕುಮಾರ್, ಯೋಗೇಶ್ ಮಲ್ಲಿಕಾರ್ಜುನ, ಲೀನಾ ಕುಮಾರನ್ “COZ I LUV U” ಆಲ್ಬಂ ಸಾಂಗ್ ನ ತಮ್ಮ ಪಾತ್ರಗಳ ಕುರಿತು ಮಾತನಾಡಿದರು.
ಕನ್ನಡವೂ ಸೇರಿದಂತೆ ಭಾರತೀಯ ಸಿನಿಮಾ ರಂಗದ ನಾನಾ ಭಾಷೆಗಳಲ್ಲಿ ನಟಿಸಿರುವ ಹಿರಿಯ ನಟ ಆಶಿಶ್ ವಿದ್ಯಾರ್ಥಿಯು ತಮ್ಮ 60ನೇ ವಯಸ್ಸಿಗೆ 2ನೇ ಮದುವೆ ಆಗಿರುವ ವಿಚಾರ ಚಿತ್ರೋದ್ಯಮದಲ್ಲಿ ಸಾಕಷ್ಟು ಕುತೂಹಲ ಮೂಡಿಸಿತ್ತು. ಜೊತೆಗೆ ಅಚ್ಚರಿಯನ್ನು ತಂದಿತ್ತು.
ಆಶಿಶ್ ವಿದ್ಯಾರ್ಥಿ (Ashish Vidyarthi) ತಮ್ಮ 60ನೇ ವಯಸ್ಸಿಗೆ 2ನೇ ಮದುವೆಯಾಗಿರೋದು ಚಿತ್ರೋದ್ಯಮಕ್ಕೆ ಮಾತ್ರವಲ್ಲ ಅವರ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಫ್ಯಾಷನ್ ಇಂಡಸ್ಟ್ರಿಯ ಉದ್ಯಮಿ ರೂಪಾಲಿ (Roopali) ಜೊತೆ ದಾಂಪತ್ಯ (Wedding) ಜೀವನಕ್ಕೆ ನಟ ಕಾಲಿಟ್ಟಿದ್ದಾರೆ.
ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ ಅವರು ಈ ಹಿಂದೆ ರಾಜೋಶಿ ಎಂಬುವವರನ್ನು ಮದುವೆಯಾಗಿದ್ದರು. ಆದರೆ ಈಗ ಆ ದಾಂಪತ್ಯಕ್ಕೆ ಸಾಕಷ್ಟು ವರ್ಷಗಳ ಹಿಂದೆಯೇ ಬ್ರೇಕ್ ಬಿದ್ದಿದೆ. ಹಾಗಾಗಿ ಒಂಟಿಯಾಗಿಯೇ ಆಶಿಶ್ ಜೀವನ ನಡೆಸುತ್ತಿದ್ದರು.
ಮದುವೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅವರು, ‘ಒಂಟಿ ಜೀವನ ಸಾಕೆನಿಸಿತು. ಅದೊಂದು ರೀತಿಯ ಜೀವನವೇ ಅಲ್ಲ ಅನಿಸಿತು. ಹಾಗಾಗಿ 2ನೇ ಮದುವೆ ಬಗ್ಗೆ ಯೋಚನೆ ಮಾಡಿದೆ. ಜೀವನ ಸಣ್ಣದು ಪ್ರೀತಿ ಹಂಚಿಕೊಂಡು ಬದುಕೋನ ಅನಿಸಿದ್ದರಿಂದ ಮತ್ತೊಂದು ಮದುವೆಯಾದೆ ಅಂದಿದ್ದರು.
ಉದ್ಯಮಿ ರೂಪಾಲಿ ಅವರನ್ನ ಆಶಿಶ್ ಕೊಲ್ಕತ್ತಾದ ಕ್ಲಬ್‌ನಲ್ಲಿ ಮೇ 25ರಂದು ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ. ಆಪ್ತರು, ಗುರುಹಿರಿಯರ ಸಮ್ಮುಖದಲ್ಲಿ ಸರಳವಾಗಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೇ 25 ರಂದು ಕ್ಲಬ್ ನಲ್ಲಿ ನಾನಾ ರೀತಿಯ ಮನರಂಜನೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.
ನಮ್ಮ ಮದುವೆ ಸಿಂಪಲ್ ಆಗಿ ನಡೆಯಬೇಕೆಂದು ಆಸೆ ಇತ್ತು ಅದೇ ರೀತಿ ಆಯಿತು. ಖುಷಿಯಿದೆ. ಸದ್ಯದಲ್ಲೇ ನಮ್ಮಿಬ್ಬರ ಭೇಟಿ ಬಗ್ಗೆ ಎಲ್ಲವನ್ನೂ ಹೇಳುವೆ ಎಂದು ಆಶಿಶ್ ಮಾತನಾಡಿದ್ದಾರೆ. ಅಲ್ಲದೇ, ಹೊಸ ಜೀವನಕ್ಕೆ ಕಾಲಿಟ್ಟ ಖುಷಿಯಲ್ಲಿ ಹೆಂಡತಿಯ ಜೊತೆ ಕುಣಿದು ಕುಪ್ಪಳಿಸಿದ್ದಾರೆ.
ಇವರಿಬ್ಬರ ಮೊದಲ ಭೇಟಿ ಕೋಲ್ಕೊತ್ತಾದಲ್ಲಿ ಆಗಿದೆ ಎಂದು ವರದಿಯಾಗಿದೆ. ಪರಿಚಯ ನಂತರದ ದಿನಗಳಲ್ಲಿ ಸ್ನೇಹವಾಗಿ. ಆ ನಂತರ ಪ್ರೇಮಿಗಳಾಗಿ ಇದೀಗ ಸತಿ ಪತಿಗಳಾಗಿದ್ದಾರೆ. ಈ ವಿಷಯವನ್ನು ಸ್ವತಃ ಆಶಿಶ್ ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ.
ಮದುವೆಯಲ್ಲಿ ಈ ದಂಪತಿ ಧರಿಸಿದ್ದ ವಸ್ತ್ರ ಮತ್ತು ಆಭರಣಗಳು ಕೂಡ ಗಮನ ಸೆಳೆದಿವೆ. ರೂಪಾಯಿ ಅಸ್ಸಾಂನ ಬಿಳಿ ಮತ್ತು ಗೋಲ್ಡನ್ ಮೆಖೇಲಾ ಚಾದರ್ ಧರಿಸಿದ್ದರು. ಜೊತೆಗೆ ದಕ್ಷಿಣ ಭಾರತದ ದೇವಾಲಯ ಕಲೆಯಿಂದ ಪ್ರೇರಿತವಾದ ಚಿನ್ನದ ಆಭರಣಗಳನ್ನು ಅಂದು ಧರಿಸಿದ್ದರು.
ಶಿವಮೊಗ್ಗ ಮೂಲದ ಅಮೇರಿಕ ನಿವಾಸಿ ಆದರ್ಶ್ ಅಯ್ಯಂಗಾರ್ ಈ ಹಿಂದೆ ತಮ್ಮ ಶ್ರೀಕೃಷ್ಣ ಪ್ರೊಡಕ್ಷನ್ಸ್ ಮೂಲಕ ಹಲವು ಸಮಾಜಮುಖಿ ವಿಡಿಯೋ ಹಾಡುಗಳನ್ನು ಬಿಡುಗಡೆ ಮಾಡಿದ್ದರು. ಇದೀಗ ಕ್ವಿಟ್ ಎಂಬ ವಿಡಿಯೋ ಹಾಡಿನ ಮೂಲಕ ಸಮಾಜಕ್ಕೆ ಮತ್ತು ಕುಟುಂಬಗಳಿಗೆ ಹೊರೆಯಾಗಿರುವ ಡ್ರಗ್ ನ ನಿರ್ಮೂಲನೆ ಮತ್ತು ಅದರ ನಶೆಯಿಂದಾಗುವ ಪರಿಣಾಮಗಳ ಬಗ್ಗೆ ತಮ್ಮದೆ ಗಾಯನದಲ್ಲಿ ವಿಡಿಯೋ ಹಾಡೊಂದನ್ನು ಹೊರ ತಂದಿದ್ದಾರೆ.
ಈ ಹಾಡಿಗೆ ಹೇಮಂತ್ ಜೋಯಿಸ್ ಸಂಗೀತ ನೀಡಿದ್ದು ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ. ಇನ್ನೂ ರಕ್ಷಿತ್ ತೀರ್ಥಹಳ್ಳಿ ನಿರ್ದೇಶನ ಮಾಡಿರುವ ಈ ಹಾಡು ಒಂದು ಕುಟುಂಬ ಮತ್ತು ಆ ಕುಟುಂಬದ ಹುಡುಗ ಡ್ರಗ್ ವ್ಯಸನಿಯಾಗಿ ಅದರಿಂದ ಹೊರಬರುವ ಒಳ್ಳೆಯ ಸಂದೇಶವನ್ನ ಒಳಗೊಂಡಿದೆ. ಇದನ್ನೂ ಓದಿ: ಭಾರತದಲ್ಲಿ 150 ಕೋಟಿಗೂ ಅಧಿಕ ಗಳಿಕೆ ಮಾಡಿದ ‘ಅವತಾರ್ 2’ ಸಿನಿಮಾ
ಆದರ್ಶ್ ಅಯ್ಯಂಗಾರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು ಅವರ ಜೊತೆಗೆ ತೆಲುಗಿನ ಡಿ(Dhee) ಡ್ಯಾನ್ಸ್ ಸೀಸನ್ 13 ರ ಸ್ಪರ್ಧಿ ಹಾಗೂ ದಮಯಂತಿ ಚಿತ್ರದಲ್ಲಿ ಅಭಿನಯಿಸಿದ್ದ ನಿತ್ಯದಾಸ್ ಗೌಡ ಆದರ್ಶ್ ಅವರಿಗೆ ಜೋಡಿಯಾಗಿದ್ದಾರೆ. ಹಾಡು ಈಗಾಗಲೇ ನೋಡುಗರ ಗಮನ ಸೆಳೆದಿದೆ.
Live Tv
[brid partner=56869869 player=32851 video=960834 autoplay=true]
ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಸಂಗೀತ ನಿರ್ದೇಶಕ ಮತ್ತು ರಾಕ್ಸ್ಟಾರ್ ಎಂದೇ ಜನಪ್ರಿಯರಾಗಿರುವ ದೇವಿ ಶ್ರೀಪ್ರಸಾದ್ (Devi Sriprasad) ಅಲಿಯಾಸ್ ಡಿಎಸ್ಪಿ, ಟಿ-ಸೀರೀಸ್ ಜೊತೆಗೆ ಕೈಜೋಡಿಸಿ ‘ಓ ಪರಿ’ (O Pari) ಎಂಬ ಹಿಂದಿ ಸಿಂಗಲ್ ಹೊರತಂದಿರುವುದು, ಅದನ್ನು ಇತ್ತೀಚೆಗೆ ಮುಂಬೈನಲ್ಲಿ ರಣವೀರ್ ಸಿಂಗ್ ಬಿಡುಗಡೆ ಮಾಡಿದ್ದು ಗೊತ್ತೇ ಇದೆ. ಇದೊಂದು ಪ್ಯಾನ್ ಇಂಡಿಯಾ ಹಾಡಾಗಿದ್ದು, ಹಿಂದಿಯಲ್ಲದೆ, ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲೂ ಮೂಡಿಬಂದಿದೆ. ಈಗ ‘ಓ ಪರಿ’ಯ ತಮಿಳಿನ ಅವತರಣಿಕೆಯಾದ ‘ಓ ಪೆಣ್ಣೆ’ ಮತ್ತು ತೆಲುಗು ಅವತರಣಿಕೆಯಾದ ‘ಓ ಪಿಲ್ಲ’ ಹಾಡುಗಳನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ. ತಮಿಳು ಮತ್ತು ತೆಲುಗು ‘ಬಿಗ್ ಬಾಸ್’ ಕಾರ್ಯಕ್ರಮಗಳ ಲಾಂಚ್ನಲ್ಲಿ ಎರಡೂ ಹಾಡುಗಳು ಬಿಡುಗಡೆಯಾಗಿದ್ದು, ತಮಿಳು ಹಾಡನ್ನು ಕಮಲ್ ಹಾಸನ್ ಬಿಡುಗಡೆ ಮಾಡಿದರೆ, ತೆಲುಗು ಹಾಡನ್ನು ನಾಗಾರ್ಜುನ ಬಿಡುಗಡೆ ಮಾಡಿ ಡಿಎಸ್ಪಿಗೆ ಶುಭ ಕೋರಿದ್ದಾರೆ.
‘ಓ ಪಿಲ್ಲ’ ಹಾಡನ್ನು ಬಿಡುಗಡೆ ಮಾಡಿ ಮಾತನಾಡಿರುವ ನಾಗಾರ್ಜುನ (Nagarjun), ‘’ಓ ಪರಿ’ ಹಾಡು ಸೂಪರ್ ಹಿಟ್ ಆಗಿದೆ, ಈ ಹಾಡು ತೆಲುಗಿನಲ್ಲೂ ಮೂಡಿಬರಬೇಕಿತ್ತು ಅಂದುಕೊಳ್ಳುತ್ತಿರುವಾಗಲೇ, ಡಿಎಸ್ಪಿ ತೆಲುಗು ಹಾಡಿನೊಂದಿಗೆ ಬಂದಿದ್ದಾರೆ. ಈ ಹಾಡು ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ. ನನಗೆ ಮೊದಲಿನಿಂದಲೂ ಡಿಎಸ್ಪಿ ಅವರ ಪ್ರತಿಭೆ ಕುರಿತು ವಿಶೇಷವಾದ ಕುತೂಹಲ, ಆಸಕ್ತಿ ಎರಡೂ ಇದೆ. ಅವರು ಹೇಗೆ ಇಷ್ಟೊಂದು ಅದ್ಭುತವಾಗಿ ಕೆಲಸ ಮಾಡುವುದರ ಜೊತೆಗೆ, ಹೇಗೆ ಈ ರೀತಿ ಹಿಟ್ ಹಾಡುಗಳನ್ನು ಕೊಡುವುದಕ್ಕೆ ಸಾಧ್ಯ ಎಂಬ ಪ್ರಶ್ನೆ ಇದೆ. ಹಾಗಿರುವಾಗಲೇ ಡಿಎಸ್ಪಿ ಇನ್ನೊಂದು ಅದ್ಭುತ ಹಾಡಿನೊಂದಿಗೆ ವಾಪಸ್ಸಾಗಿದ್ದಾರೆ’ ಎಂದಿದ್ದಾರೆ ನಾಗಾರ್ಜುನ. ಇದನ್ನೂ ಓದಿ:ಬಿಗ್ ಬಾಸ್ ಆಟಕ್ಕೆ ಫುಲ್ ಸ್ಟಾಪ್ ಇಡಲು ನಿರ್ಧರಿಸಿದ ಆರ್ಯವರ್ಧನ್ ಗುರೂಜಿ
ಡಿಎಸ್ಪಿ ತಮಗೆ ಬಹಳ ವರ್ಷಗಳಿಂದ ಗೊತ್ತು ಎಂದು ಹೇಳಿಕೊಂಡಿರುವ ಕಮಲ್ ಹಾಸನ್ (Kamal Haasan), ‘ಅವರು ತಮ್ಮ ಹಾಡು ಮತ್ತು ಪ್ರತಿಭೆಯಿಂದ ನನ್ನನ್ನು ಖುಷಿಪಡಿಸುತ್ತಲೇ ಇದ್ದಾರೆ. ತಮ್ಮ ಸಾಧನೆಗಳಿಂದ ಹೊಸಹೊಸ ಮೈಲಿಗಲ್ಲುಗಳನ್ನು ತಲುಪುತ್ತಿದ್ದಾರೆ. ಪ್ರತಿಯೊಬ್ಬ ಸಂಗೀತ ನಿರ್ದೇಶಕರು ಸಹ ಈ ನಿಟ್ಟಿನಲ್ಲಿ ಹೊಸ ಸಾಧನೆಗಳನ್ನು ಮಾಡುವುದರ ಬಗ್ಗೆ ಯೋಚಿಸಬೇಕು. ಅವರ ಸಾಧನೆ ಮತ್ತು ಕೆಲಸಗಳಿಗೆ ಪ್ರತಿಯಾಗಿ ಅವರಿಗೆ ಯಶಸ್ಸು ಸಿಗುತ್ತಲೇ ಇದ್ದು, ಈಗ ಓ ಪರಿ ಮೂಲಕ ಮತ್ತೊಂದು ದೊಡ್ಡ ಯಶಸ್ಸನ್ನು ಕಂಡಿದ್ದಾರೆ ಡಿಎಸ್ಪಿ. ಅವರು ಇನ್ನಷ್ಟು ಎತ್ತರಗಳನ್ನು ಕಾಣಲಿ ಎನ್ನುವುದರ ಜೊತೆಗೆ, ಅವರಿಗೆ ಬೆನ್ನೆಲುಬಾಗಿ ನಿಂತಿರುವ ಭೂಷಣ್ ಕುಮಾರ್‌ರಂತಹವರ ಸಹಕಾರ ಹೀಗೆಯೇ ಮುಂದುವರೆಯಲಿ’ ಎಂದು ಹಾರೈಸಿದ್ದಾರೆ.
ಕಮಲ್ ಹಾಸನ್ ಮತ್ತು ನಾಗಾರ್ಜುನ ಅವರ ಸಹಕಾರ ಮರೆಯುವುದಕ್ಕೆ ಸಾಧ್ಯವೇ ಇಲ್ಲ ಎನ್ನುವ ಡಿಎಸ್ಪಿ, ಅವರಿಬ್ಬರ ಪ್ರೋತ್ಸಾಹವಿಲ್ಲದೆ ಇಷ್ಟು ದೂರ ಬರುವುದಕ್ಕೆ ಸಾಧ್ಯವೇ ಇಲ್ಲ ಎಂದಿದ್ದಾರೆ. ಇಂಥದ್ದೊಂದು ಅಂತಾರಾಷ್ಟ್ರೀಯ ಮಟ್ಟದ ಹಾಡಿನ ಬಗ್ಗೆ ನಾನು ಮೊದಲು ಪ್ರಸ್ತಾಪ ಮಾಡಿದ್ದು ಕಮಲ್ ಹಾಸನ್ ಅವರ ಬಳಿ. ಅವರ ಪ್ರೋತ್ಸಾಹದ ಮಾತುಗಳು ನನ್ನನ್ನು ಈ ಹಾಡು ಸಂಯೋಜಿಸುವಂತೆ ಮಾಡಿತು. ಅವರ ಸಂಗೀತಾಸಕ್ತಿಯೇ ನಮ್ಮಿಬ್ಬರನ್ನೂ ಇಷ್ಟು ಹತ್ತಿರಕ್ಕೆ ಸೇರಿಸಿದ್ದು. ಅದೇ ಕಾರಣಕ್ಕೆ ಈ ಹಾಡನ್ನು ಅವರಿಂದಲೇ ಬಿಡುಗಡೆ ಮಾಡಿಸಲಾಯಿತು ಎಂದು ಹೇಳಿಕೊಂಡಿದ್ದಾರೆ.
Live Tv
[brid partner=56869869 player=32851 video=960834 autoplay=true]
ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಸಂಗೀತ ನಿರ್ದೇಶಕರಾದ ದೇವಿ ಶ್ರೀಪ್ರಸಾದ್ (Devi Sriprasad) ಅಲಿಯಾಸ್ ಡಿಎಸ್ಪಿ ಹಲವು ಚಿತ್ರಗಳಿಗೆ ಸಂಗೀತ ಸಂಯೋಜಿಸುವುದರ ಜೊತೆಗೆ ತಮ್ಮ ಹಿಟ್ ಹಾಡುಗಳ ಮೂಲಕ ಲಕ್ಷಾಂತರ ಜನರನ್ನು ರಂಜಿಸಿದ್ದಾರೆ. ಈಗ ಇದೇ ಮೊದಲ ಬಾರಿಗೆ ಅವರು ಸಿನಿಮಾ ಹೊರತುಪಡಿಸಿ ಆಲ್ಬಂ (Album) ಸಿಂಗಲ್ವೊಂದಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಅದೇ ‘ಓ ಪರಿ’.
ಟಿ-ಸೀರೀಸ್ ಮೂಲಕ ಇದುವರೆಗೂ ಹಲವಾರು ಗಾಯಕರನ್ನು ಮತ್ತು ಸಂಗೀತಗಾರರನ್ನು ಮುನ್ನೆಲೆಗೆ ತಂದಿರುವ ಭೂಷಣ್ ಕುಮಾರ್, ಇದೇ ಮೊದಲ ಬಾರಿಗೆ ‘ರಾಕ್ಸ್ಟಾರ್’ ಎಂದೇ ಜನಪ್ರಿಯವಾಗಿರುವ ಡಿಎಸ್ಪಿ ಜೊತೆಗೆ ಕೈ ಜೋಡಿಸಿದ್ದಾರೆ. ಡಿಎಸ್ಪಿ ಸಂಯೋಜಿಸಿರುವ ‘ಓ ಪರಿ’ (Oh Pari) ಎಂಬ ಸಿಂಗಲ್ ಅನ್ನು ಟಿ-ಸೀರೀಸ್ ಮೂಲಕ ಹೊರತಂದಿದ್ದಾರೆ. ಈ ಹಾಡನ್ನು ಡಿಎಸ್ಪಿ ಅವರೇ ಹಾಡಿದ್ದು, ಇತ್ತೀಚೆಗೆ ಮುಂಬೈನಲ್ಲಿ ನಡೆದ ವಿಶೇಷ ಇವೆಂಟ್ನಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಈ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಈ ಹಾಡು ಈಗಾಗಲೇ ಯೂಟ್ಯೂಬ್ನ ಟಿ-ಸೀರೀಸ್ ಚಾನಲ್ನಲ್ಲಿ ಬಿಡುಗಡೆಯಾಗಿದ್ದು, ಸಾಕಷ್ಟು ಜನಪ್ರಿಯವಾಗಿದೆ. ಅದರಲ್ಲೂ, ಡಿಎಸ್ಪಿ ಅವರ ಹುಕ್ ಸ್ಟೆಪ್ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ. ಇದನ್ನೂ ಓದಿ:‘ಅರ್ಧಂಬರ್ಧ ಪ್ರೇಮಕಥೆ’ಯಲ್ಲಿ ಅರವಿಂದ್-ದಿವ್ಯಾ ಉರುಡುಗ ಜೋಡಿ
ಈ ಹಾಡಿನ ವಿಶೇಷತೆಯೆಂದರೆ, ಇದು ಡಿಎಸ್ಪಿ ಅವರ ಮೊದಲ ಹಿಂದಿ ಸಿಂಗಲ್ ಆದರೂ, ಇದು ಹಿಂದಿಗೆ ಮಾತ್ರ ಸೀಮಿತವಲ್ಲ. ಇದೊಂದು ಪ್ಯಾನ್ ಇಂಡಿಯಾ ಹಾಡಾಗಿದ್ದು, ಹಿಂದಿಯಲ್ಲದೆ, ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲೂ ಮೂಡಿಬಂದಿದೆ. ವಿಶೇಷವೆಂದರೆ, ಐದೂ ಭಾಷೆಗಳಲ್ಲಿ ಡಿಎಸ್ಪಿ ಅವರೇ ಈ ಹಾಡನ್ನು ಹಾಡಿದ್ದಾರೆ.
ಈ ಹಾಡಿನ ಕುರಿತು ಮಾತನಾಡಿರುವ ಡಿಎಸ್ಪಿ, ‘ಹಿಂದಿ ಆಲ್ಬಂ ಕ್ಷೇತ್ರಕ್ಕೆ ಕಾಲಿಡುವುದಕ್ಕೆ ಕೆಲವು ಸಮಯದಿಂದ ಯೋಚಿಸುತ್ತಿದ್ದೆ. ಅದಕ್ಕೊಂದು ಅದ್ಭುತ ವೇದಿಕೆ ಕಲ್ಪಿಸಿದ್ದು ಭೂಷಣ್ ಕುಮಾರ್ ಅವರ ಟಿ-ಸೀರೀಸ್. ನನ್ನ ಬೇರೆ ಹಾಡುಗಳನ್ನು ಮೆಚ್ಚಿದಂತೆ ಈ ಹಾಡನ್ನು ಸಹ ಕೇಳುಗರು ಇಷ್ಟಪಡುತ್ತಾರೆ ಎಂಬ ನಂಬಿಕೆ ನನಗಿದೆ. ಮುಂದಿನ ದಿನಗಳಲ್ಲಿ ಈ ತರಹದ ಇನ್ನಷ್ಟು ಆಲ್ಬಂ ಹಾಡುಗಳನ್ನು ಬಿಡುಗಡೆ ಮಾಡುವ ಯೋಚನೆ ಇದೆ’ ಎಂದು ಹೇಳಿಕೊಂಡಿದ್ದಾರೆ.
Live Tv
[brid partner=56869869 player=32851 video=960834 autoplay=true]
ಕಳೆದ ಒಂದು ವರ್ಷದ ಹಿಂದೆಯಷ್ಟೇ ಅಗಲಿರುವ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಕಾಣಿಸಿಕೊಂಡ ಕೊನೆ ಆಲ್ಬಂ ಇದೀಗ ರಿಲೀಸ್ ಆಗಿದೆ. ಹೊಸತನ ಹಾಗೂ ವಿಶೇಷಗಳಿಂದ ಕೂಡಿರುವ ಈ ಆಲ್ಬಂ ಮೈಲಾರ ಲಿಂಗೇಶ್ವರ ಸ್ವಾಮಿಯ ಭಕ್ತಿ ಪೂರ್ಣ ಗೀತೆಯಾಗಿದ್ದು, ನೋಡಿದವರೆಲ್ಲ ನಿಂತಲ್ಲೇ ಉಘೇ ಉಘೇ ಮೈಲಾರ ಸ್ವಾಮಿ ಎನ್ನುತ್ತಿದ್ದಾರೆ.
ಜನಪದ ಹಿನ್ನೆಲೆ ಹಾಡುಗಳನ್ನು ಮಾಡಬೇಕೆಂಬ ಆತೀವ ಆಸಕ್ತಿ, ಶ್ರದ್ಧೆಯಿಂದ ಗಾಯಕ, ಸಂಗೀತ ನಿರ್ದೇಶಕ ಪ್ರದೀಪ್ ಚಂದ್ರ ಮೈಲಾರ ಆಲ್ಬಂ ಹಾಡು ತಯಾರಿಸಿದ್ದಾರೆ. ಮೈಸೂರು ಭಾಗದಲ್ಲಿ ಮಲೆ ಮಹದೇಶ್ವರ ಸ್ವಾಮಿ ಎಷ್ಟು ಪ್ರಸಿದ್ಧಿಯೋ ಅದೇ ರೀತಿ ಹಾವೇರಿ ಭಾಗದಲ್ಲಿ ಮೈಲಾರ ಲಿಂಗೇಶ್ವರ ಖ್ಯಾತಿ ಪಡೆದಿದೆ. ಹೀಗಾಗಿ ಮೈಲಾರ ಸ್ವಾಮಿಯ ಜಾತ್ರೆ ಸೊಬಗನ್ನು, ಅಲ್ಲಿ ಸಂಪ್ರದಾಯ, ಭವಿಷ್ಯ ನುಡಿಯುವ ಕಾರ್ಣಿಕ, ಅಲ್ಲಿನ ಪವಾಡಗಳನ್ನು ಮುಖ್ಯವಸ್ತುವನ್ನಾಗಿರಿಸಿಕೊಂಡು ಚೆಂದದ ಆಲ್ಬಂ ಸಾಂಗ್ ರೂಪಿಸಿದ್ದಾರೆ. ಇದನ್ನೂ ಓದಿ: ಬೈಕಾಟ್ ಸಾಯಿ ಪಲ್ಲವಿ ಫಿಲ್ಮ್ : ಇಂದು ವಿರಾಟ ಪರ್ವಂ ರಿಲೀಸ್
ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಇಷ್ಟಪಟ್ಟು ನಟಿಸಿರುವ ಮೈಲಾರ ಹಾಡಿಗೆ ಸಂಜಯ್ ಕುಲಕರ್ಣಿ ನಿರ್ದೇಶನ ಮಾಡಿದ್ದು, ವಿಜಯ್ ಪ್ರಕಾಶ್ ಧ್ವನಿ ಕುಣಿಸಿರುವ, ಪ್ರದೀಪ್ ಚಂದ್ರ ಮ್ಯೂಸಿಕ್ ಹಾಗೂ ಸಾಹಿತ್ಯದ ಇಂಪು, ಚಂದ್ರು ಹಾಗೂ ರಾಜಶೇಖರ್ ಛಾಯಾಗ್ರಹಣ ತಂಪು ಹಾಡಿನ ಸೊಬಗನ್ನು ಮತ್ತಷ್ಟು ಶ್ರೀಮಂತಗೊಳಿಸಿದೆ.
ಕಮರ್ಷಿಯಲ್ ಹಾಡುಗಳಿಗಿಂತ ಅದ್ಧೂರಿಯಾಗಿ ಮೂಡಿ ಬಂದಿರುವ ಈ ಆಲ್ಬಂ ಗೀತೆ ಸೃಷ್ಟಿಯ ಹಿಂದೆ ನೂರಾರು ಜನರ ಪರಿಶ್ರಮವಿದೆ. ಸರ್ಕಾರದಿಂದ ಅನುಮತಿ ಪಡೆದು ಇಡೀ ಹಾಡನ್ನು ಮೈಲಾರ ಲಿಂಗೇಶ್ವರ ಜಾತ್ರೆಯಲ್ಲಿಯೇ ಚಿತ್ರೀಕರಣ ಮಾಡಲಾಗಿದೆ. ಅತ್ಯಂತ ವೈಭವದಿಂದ ನಡೆಯುವ ಜಾತ್ರೆಯನ್ನು ಇಡೀ ನಾಡಿಗೆ ಪರಿಚಯಿಸಲು ರೂಪುಗೊಂಡಿರುವ ಮೈಲಾರ ಹಾಡಿನ ಹಿಂದಿನ ಸಾರಥಿ ನಿರ್ಮಾಪಕ ರಾಜಶೇಖರ್ ಮೆತ್ರಿ.
ಸಾಕಷ್ಟು ಲೈವ್ ವಾದ್ಯಗಳಿಂದ, ಲಕ್ಷಾಂತರ ಜನರ ನಡುವೆ ಚಿತ್ರೀಕರಣವಾಗಿರುವ ಹಾಡಿನಲ್ಲಿ ಸಂಚಾರಿ ವಿಜಯ್ ಜೊತೆಗೆ ಪ್ರದೀಪ್ ಚಂದ್ರ ಹಾಗೂ ಯಶಸ್ವಿನಿ ನಟಿಸಿದ್ದಾರೆ. ಇಂತಹ ಅದ್ಬುತ ಆಲ್ಬಂ ಹಾಡು ನಿರ್ಮಾಣ ಮಾಡಲು ಸಾಹಸ ಮಾಡಿದ ನಿರ್ಮಾಪಕ ರಾಜಶೇಖರ್ ಹಾಗೂ ಇಡೀ ತಂಡಕ್ಕೊಂದು ಸಲಾಂ.
ಒಂದಿಲ್ಲೊಂದು ಹೊಸ ಪ್ರಯೋಗಗಳನ್ನು ಮಾಡುತ್ತಲೇ ಇರುವ ನಟ ಸತೀಶ್ ನೀನಾಸಂ ಮೊದಲ ಬಾರಿಗೆ ಆಲ್ಬಂವೊಂದಕ್ಕೆ ದನಿಯಾಗಿದ್ದಾರೆ. ಈಗಾಗಲೇ ಮೂರು ಸಿನಿಮಾಗಳಿಗೆ ಹಾಡಿರುವ ಇವರು, ಇದೇ ಮೊದಲ ಬಾರಿಗೆ ಮಗಳ ಜತೆ ‘ಅಶರೀರವಾಣಿ’ ಆಲ್ಬಂಗಾಗಿ ಹಾಡಿದ್ದಾರೆ. ನಾಳೆ ಈ ಗೀತೆ ಬಿಡುಗಡೆ ಆಗುತ್ತಿದೆ. ಇದನ್ನೂ ಓದಿ : ನಾನು ರಾಧಿಕಾ ಕುಮಾರಸ್ವಾಮಿ’.. ನಿಮ್ಮೊಂದಿಗೆ..
‘ಅಶರೀರವಾಣಿ, ಎಲ್ಲಿಂದ ಏನೋ’ ಎಂದು ಸಾಹಿತ್ಯದಿಂದ ಶುರುವಾಗುವ ಈ ಗೀತೆಯು ಮನುಷ್ಯ ಸಂಬಂಧದ ಹಲವು ಮಜಲುಗಳನ್ನು ತೆರೆದಿಡಲಿದೆ. ಒಂದು ರೀತಿಯಲ್ಲಿ ಸಾಹಿತ್ಯ ತತ್ವಪದ, ಸೋಫಿಗಳ ಶೈಲಿಯಲ್ಲಿದ್ದು, ಅದಕ್ಕೆ ಆಧುನಿಕ ಸಂಗೀತವನ್ನು ಬೆರೆಸಿರುವುದು ಹಾಡಿನ ವಿಶೇಷತೆ. ಮರೆಯಾದ ಮನಸುಗಳ ನೆನಪುಗಳನ್ನೇ ಹೊತ್ತು ತರಲಿರುವ ಈ ಗೀತೆಗೆ ಸಾಹಿತ್ಯವನ್ನು ಬರೆದದ್ದು ಮತ್ತು ಸಂಗೀತ ಸಂಯೋಜನೆ ಮಾಡಿದ್ದು ಸ್ವತಃ ಸತೀಶ್ ಅವರೇ ಎನ್ನುವುದು ಮತ್ತೊಂದು ವಿಶೇಷ. ಇದನ್ನೂ ಓದಿ : ನಾನು ಜ್ಯೂನಿಯರ್ ಪುನೀತ್ ರಾಜ್ ಕುಮಾರ್ ಅಲ್ಲ : ಮಾರಕಾಸ್ತ್ರ ಹೀರೋ ಹೇಳಿಕೆ
ಸತೀಶ್ ಹಾಡಿಗೆ ಮಗಳು ಮನಸ್ವಿತ ದನಿ
ಇತ್ತೀಚೆಗಷ್ಟೇ ಅಭಿಮಾನಿಗಳಿಗೆ ಪುತ್ರಿ ಮನಸ್ವಿತ ಫೋಟೋ ಹಂಚಿಕೊಂಡಿದ್ದ ಸತೀಶ್, ಈ ಬಾರಿ ತಮ್ಮೊಂದಿಗೆ ಮಗಳು ಹಾಡಿದ ಈ ಗೀತೆಯನ್ನು ಉಡುಗೊರೆಯಾಗಿ ಕೊಡುತ್ತಿದ್ದಾರೆ. ಈ ಹಾಡಿನಲ್ಲಿ ಮನಸ್ವಿತರ ದನಿಯನ್ನು ಕೇಳಬಹುದಾಗಿದೆ. ಅಲ್ಲದೇ, ಇದು ವಿಡಿಯೋ ರೂಪದಲ್ಲೂ ಚಿತ್ರೀಕರಣವಾಗಿದ್ದು, ಅದರಲ್ಲಿ ಮನಸ್ವಿತ ಕಾಣಿಸಿಕೊಂಡಿದ್ದಾರೆ. ಡ್ರಮ್ ನುಡಿಸುತ್ತಾ ಅಪ್ಪನ ಹಾಡಿಗೆ ಸಾಥ್ ನೀಡಿದ್ದಾರೆ. ಇದನ್ನೂ ಓದಿ : ವಿವಾದ ಇಲ್ಲದೇ ಸಿನಿಮಾ ರಿಲೀಸ್ ಮಾಡಲ್ಲವಾ ಸಂಜಯ್ ಲೀಲಾ ಬನ್ಸಾಲಿ? : ಗಂಗೂಬಾಯಿ ಮೇಲೆ ಮತ್ತೊಂದು ಕೇಸ್
ಮೂರು ಸಿನಿಮಾಗಳಿಗೆ ಹಾಡಿರುವ ಅಂಜದ ಗಂಡು
ನೀನಾಸಂನಲ್ಲಿ ಇರುವಾಗಲೇ ಹಾಡಿನತ್ತ ಆಸಕ್ತಿ ತೋರಿದವರು ಸತೀಶ್. ಅಲ್ಲಿ ಸಾಕಷ್ಟು ರಂಗಗೀತೆಗಳನ್ನು ಹಾಡುತ್ತಿದ್ದರು. ಹಾಡುವುದು ವೃತ್ತಿಯಲ್ಲವಾದರೂ, ಹವ್ಯಾಸಿಯೇ ಅವರನ್ನು ಮೂರು ಸಿನಿಮಾಗಳಿಗೆ ಹಾಡುವಂತೆ ಮಾಡಿದೆ. ತಮ್ಮದೇ ನಟನೆಯ ‘ಅಂಜದ ಗಂಡು’ ಚಿತ್ರಕ್ಕಾಗಿ ಟೈಟಲ್ ಟ್ರ್ಯಾಕ್, ‘ರಾಕೇಟ್’ ಚಿತ್ರಕ್ಕಾಗಿ ರಂಗಿ ರಂಗಿ ಮತ್ತು ಡಿ.ಎನ್.ಎ ಚಿತ್ರಕ್ಕಾಗಿ ನಾವ್ಯಾರು ಎಲ್ಲಿಂದ.. ಎನ್ನುವ ಗೀತೆಗಳನ್ನು ಹಾಡಿದ್ದರು. ಇದನ್ನೂ ಓದಿ : ನಟ ಚೇತನ್‌ಗೆ 14 ದಿನ ನ್ಯಾಯಾಂಗ ಬಂಧನ
ಎರಡು ಭಾಷೆಗಳಲ್ಲಿ ಅಶರೀರವಾಣಿ
ಅಶರೀರವಾಣಿ ಹೆಸರಿನಲ್ಲಿ ರಿಲೀಸ್ ಆಗಲಿರುವ ಈ ಹಾಡು ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಸಿದ್ಧವಾಗಿದೆ. ಎರಡೂ ಭಾಷೆಯಲ್ಲೂ ಸತೀಶ್ ಅವರೇ ಹಾಡಿದ್ದಾರೆ. ಮೊದಲು ಕನ್ನಡದಲ್ಲಿ ಸಾಂಗ್ ಬಿಡುಗಡೆ ಆಗಲಿದ್ದು, ನಂತರದಲ್ಲಿ ತಮಿಳಿನಲ್ಲೂ ಈ ಗೀತೆ ರಿಲೀಸ್ ಆಗಲಿದೆ. ಇದನ್ನೂ ಓದಿ : ಇಂಗ್ಲಿಷ್ ನಲ್ಲೂ ಬರುತ್ತಂತೆ ಕೆಜಿಎಫ್ 2 : ಹಾಲಿವುಡ್ ನಲ್ಲೂ ರಾಕಿಭಾಯ್ ಹವಾ
ಡಬಲ್ ಖುಷಿಯಲ್ಲಿ ಸತೀಶ್
ಒಂದು ಕಡೆ ಸತೀಶ್ ಅವರ ಆಲ್ಬಂ ರಿಲೀಸ್ ಆಗುತ್ತಿದ್ದರೆ ಮತ್ತೊಂದು ಕಡೆ ಕೈ ತುಂಬಾ ಚಿತ್ರಗಳನ್ನಿಟ್ಟುಕೊಂಡು ಕೂತಿದ್ದಾರೆ. ಗೋಧ್ರಾ ಮತ್ತು ಪೆಟ್ರೊಮ್ಯಾಕ್ಸ್ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ದಸರಾ ಸಿನಿಮಾದ ಬಹುತೇಕ ಶೂಟಿಂಗ್ ಮುಗಿದಿದೆ. ಸದ್ಯ ಮ್ಯಾಟ್ನಿ ಚಿತ್ರದ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಜತೆಗೆ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರಂತೆ. ಅಂದುಕೊಂಡಂತೆ ಆದರೆ, ಈ ವರ್ಷ ಇವರ ಮೂರು ಚಿತ್ರಗಳ ಬಿಡುಗಡೆ ಆಗಬಹುದು.