Tag: ಆಲ್‍ಖೈದಾ

  • ನಾನು ಇನ್ನೆರಡು ತಿಂಗಳು ಇರೋದಿಲ್ಲ, ನಾನು ಎಲ್ಲದಕ್ಕೂ ರೆಡಿ ಇದ್ದೀನಿ: ಶಂಕಿತ ಉಗ್ರ

    ನಾನು ಇನ್ನೆರಡು ತಿಂಗಳು ಇರೋದಿಲ್ಲ, ನಾನು ಎಲ್ಲದಕ್ಕೂ ರೆಡಿ ಇದ್ದೀನಿ: ಶಂಕಿತ ಉಗ್ರ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಶಂಕಿತ ಉಗ್ರ ಹುಸೇನ್ ಬಂಧನ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಹಲವು ಸ್ಫೋಟಕ ವಿಚಾರವನ್ನು ತನಿಖೆ ಸಂದರ್ಭದಲ್ಲಿ ಬಯಲಾಗುತ್ತಿದೆ.

    ಕಳೆದ ಎರಡು ದಿನದ ಹಿಂದೆ ಶಂಕಿತ ಉಗ್ರ ಹುಸೇನ್‍ನ್ನು ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದರು. ಬೆಂಗಳೂರಲ್ಲಿ ಡೆಲಿವರಿ ಬಾಯ್ ಆಗಿದ್ದ ಹುಸೇನ್‍ನ ಬಂಧನಕ್ಕೆ ಆ ಒಂದು ಮೇಸೆಜ್ ಸಹಕಾರ ನೀಡಿದೆ.

    ಹೌದು.. ಆತ, ನಾನು ಎರಡು ತಿಂಗಳು ಇರುವುದಿಲ್ಲ. ನಾನು ಎಲ್ಲದಕ್ಕೂ ಸಿದ್ಧನಿದ್ದೇನೆ ಎಂದು ಹೇಳುವ ವೀಡಿಯೋವನ್ನು ತನ್ನ ಮೆಸೆಂಜರ್ ಗ್ರೂಪ್‍ವೊಂದರಲ್ಲಿ ಹರಿಬಿಟ್ಟಿದ್ದ. ಈ ವೀಡಿಯೋ ಮತ್ತು ಮೆಸೇಜ್‍ಗಳನ್ನು ಬಳಿಕ ಡಿಲೀಟ್ ಕೂಡ ಮಾಡಿದ್ದ. ಆದರೆ ಈ ಮೇಸೆಜ್ ಬೆನ್ನತ್ತಿದ್ದ ಕೇಂದ್ರ ಗುಪ್ತಚರ ಇಲಾಖೆಯು 15 ದಿನಗಳ ಕಾಲ ಆತನ ಮಾಹಿತಿಯನ್ನು ಕಲೆ ಹಾಕಿತ್ತು. ಇದಾದ ಬಳಿಕ ಖಚಿತ ಮಾಹಿತಿ ಆಧರಿಸಿ ಆರೋಪಿ ಹುಸೇನ್‍ನನ್ನು ಬಂಧಿಸಿದ್ದಾರೆ.

    ಆಲ್ ಖೈದಾ ಉಗ್ರ ಸಂಘಟನೆ ಸೇರಿದಂತೆ ಬೇರೆ ಬೇರೆ ಉಗ್ರ ಸಂಘಟನೆಗಳ ಜೊತೆ ಸಂಪರ್ಕ ಇರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಸಿಸಿಬಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಇದೀಗ ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಸಿಸಿಬಿ ಪೊಲೀಸರಿಗೆ ಹುಸೇನ್ ಮಾಹಿತಿಯನ್ನು ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಆತನ ಮೊಬೈಲ್‍ನಲ್ಲಿ ಏನಾದರೂ ದಾಖಲೆಯಿದೆಯಾ ಎಂದು ನೋಡಿದ್ದಾರೆ. ಆ ಮೊಬೈಲ್‍ನಲ್ಲಿದ್ದ ಗಲಭೆ ವೀಡಿಯೋಗಳನ್ನು ನೋಡಿ ಒಮ್ಮೇಲೆ ಪೊಲೀಸರೇ ಶಾಕ್ ಆಗಿದ್ದಾರೆ.

    ಮೊಬೈಲ್ ತುಂಬೆಲ್ಲಾ ಬರೀ ಗಲಭೆ ದಾಳಿಯ ವಿಡಿಯೋಗಳಿದ್ದವು. ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿದ್ದ ಇದ್ದ ದಾಳಿ ಗಲಭೆಯ ವಿಡಿಯೋಗಳನ್ನು ಸಂಗ್ರಹಿಸಿಟ್ಟಿದ್ದ. ಆರ್ಟಿಕಲ್ 370 ಬಳಿಕ ನಡೆದ ಗಲಭೆಗಳು, ಇತ್ತಿಚೆಗೆ ಆದ ಕಾಶ್ಮೀರಿ ಪಂಡಿತರ ಹತ್ಯೆ ವಿಡಿಯೋಗಳು ಆತನ ಬಳಿ ಇದ್ದವು. ಅಷ್ಟೇ ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಬರದೇ ಇರುವ ಕೆಲವು ಪ್ರಚೋದನಾಕಾರಿ ವೀಡಿಯೋಗಳು ಆತನ ಬಳಿ ಇದ್ದವು. ಇದನ್ನೂ ಓದಿ: ಹಿಂದೂಗಳಿಂದ ನೆಮ್ಮದಿ ಹಾಳಾಗಿದ್ದಕ್ಕೆ ಉಗ್ರ ಸಂಘಟನೆ ಸೇರಲು ಮುಂದಾಗಿದ್ದೆ: ಶಂಕಿತ ಉಗ್ರ

    ಕೇವಲ ವೀಡಿಯೋವೊಂದೇ ಅಲ್ಲದೇ ಕೆಲವೊಂದು ಉರ್ದು ಮತ್ತು ಅರೆಬಿಕ್‍ನಲ್ಲಿ ಬರೆದಿರುವ ಲೇಖನಗಳಿದ್ದವು. ಕೆಲವೊಂದು ಉರ್ದು ಪತ್ರಿಕೆಯ ತುಣುಕುಗಳು ಸಿಕ್ಕಿವೆ. ಇದನ್ನೂ ಓದಿ: ಸತ್ತೇ ಹೋದನೆಂದು ಭಾವಿಸಿದ್ದ ವ್ಯಕ್ತಿ ದಿಢೀರ್ ಪ್ರತ್ಯಕ್ಷ – ಚಿಕ್ಕಮಗಳೂರಿನಲ್ಲೊಂದು ಪ್ರಹಸನ

    Live Tv
    [brid partner=56869869 player=32851 video=960834 autoplay=true]

  • ಆಲ್‌ಖೈದಾ ಉಗ್ರನ ಎಚ್ಚರಿಕೆ ನಡುವೆಯೇ ಪಾಕಿಸ್ತಾನದ ನೋಟು ಪತ್ತೆ

    ಆಲ್‌ಖೈದಾ ಉಗ್ರನ ಎಚ್ಚರಿಕೆ ನಡುವೆಯೇ ಪಾಕಿಸ್ತಾನದ ನೋಟು ಪತ್ತೆ

    ಚಿಕ್ಕೋಡಿ: ಹಿಜಬ್ ವಿವಾದಕ್ಕೆ ಸಂಬಂಧಿಸಿದಂತೆ ಅಲ್‌ಖೈದಾ ಉಗ್ರನ ಎಚ್ಚರಿಕೆ ನಡುವೆಯೇ ಪಾಕಿಸ್ತಾನದ ನೋಟು ಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ.

    ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದಲ್ಲಿ ಪಾಕಿಸ್ತಾನದ ನೋಟು ಪತ್ತೆಯಾಗಿದೆ. ಗ್ರಾಮದ ಬಸ್ ನಿಲ್ದಾಣದ ಹತ್ತಿರ ಪಾಕಿಸ್ತಾನ ದೇಶದ 10 ರೂ. ಮುಖಬೆಲೆಯ ನೋಟು ಪತ್ತೆಯಾಗಿದ್ದು, ಇದರಿಂದ ಗ್ರಾಮದಲ್ಲಿ ಭಯದ ವಾತಾವಾರಣ ನಿರ್ಮಾಣವಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ಆದಾಯದಲ್ಲಿ 58% ಕ್ಕಿಂತ ಹೆಚ್ಚು ಕುಸಿತ

    ಕರೋಶಿ ಗ್ರಾಮದ ಬಸ್ ನಿಲ್ದಾಣದ ಬಳಿ ನೋಟು ಬಿದ್ದಿದ್ದನ್ನು ನೋಡಿದ ಯುವಕ ತಕ್ಷಣವೇ ಇದು ಪಾಕಿಸ್ತಾನದ ನೋಟು ಎಂದು ಖಾತರಿ ಪಡಿಸಿಕೊಂಡು, ಪೊಲೀಸರಿಗೆ ಮಾಹಿತಿ ನೀಡಿ, ಅವರಿಗೆ ಒಪ್ಪಿಸಿದ್ದಾನೆ. ತಕ್ಷಣವೇ ಚಿಕ್ಕೋಡಿ ಪೊಲೀಸರು ಕಾರ್ಯಪ್ರವೃತ್ತರಾಗಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ತನಿಖೆ ಆರಂಭಿಸಿದ್ದಾರೆ.

    ಗ್ರಾಮದಲ್ಲಿ ಸುಪ್ರಸಿದ್ಧ ದರ್ಗಾ ಇರುವ ಕಾರಣ ಇಲ್ಲಿ ಯಾರಾದರೂ ಪಾಕಿಸ್ತಾನಿ ಪ್ರಜೆಗಳು ಬಂದು ಹೋಗಿದ್ದಾರಾ ಅಥವಾ ಕರೋಶಿ ಗ್ರಾಮದವರೇ ಯಾರಾದರೂ ಪಾಕಿಸ್ತಾನಕ್ಕೆ ಹೋಗಿ ಬಂದಿದ್ದಾರಾ ಎಂಬುದನ್ನು ತಿಳಿಯಲು ತನಿಖೆ ಆರಂಭವಾಗಿದ್ದು, ಸಿಸಿಟಿವಿಗಳ ಪರಿಶೀಲನೆ ಕಾರ್ಯ ನಡೆಸುತ್ತಿದ್ದಾರೆ. ಇದನ್ನೂ ಓದಿ: ಚುನಾವಣೆ ಗೆಲ್ಲಲು ಹಿಜಬ್, ಹಲಾಲ್ ಸಾಲದು, ಉತ್ತಮ ಆಡಳಿತವೂ ಬೇಕು: ಬೊಮ್ಮಾಯಿಗೆ ಕಿವಿ ಹಿಂಡಿದ ಹೈಕಮಾಂಡ್

    POLICE JEEP

    ಒಟ್ಟಿನಲ್ಲಿ ಕರೋಶಿ ಗ್ರಾಮದಲ್ಲಿ ಪಾಕಿಸ್ತಾನದ ಕರೆನ್ಸಿ ದೊರೆತಿರುವುದು ಗ್ರಾಮದಲ್ಲಿ ಸಂಚಲನ ಮೂಡಿಸಿದೆ. ಪಾಕಿಸ್ತಾನದ ಭಯೋತ್ಪಾದಕರು ನಮ್ಮ ಗ್ರಾಮದಲ್ಲಿ ನುಸುಳಿಕೊಂಡಿದ್ದಾರಾ ಎನ್ನುವ ಆತಂಕ ಮನೆ ಮಾಡಿದ್ದು, ಪೊಲೀಸರು ಆದಷ್ಟು ಬೇಗ ತನಿಖೆಯನ್ನು ಚುರುಕುಗೊಳಿಸಿ ಸತ್ಯಾಂಶ ಬಯಲಿಗೆ ಎಳೆಯಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

  • ಆಲ್‍ಖೈದಾ ಉಗ್ರನನ್ನು RSS ಮುಖಂಡ ಅಂದ್ರೂ ಆಶ್ಚರ್ಯವಿಲ್ಲ- ಸಿದ್ದು ವಿರುದ್ಧ ಹಿಂದೂ ಜಾಗರಣಾ ವೇದಿಕೆ ಕಿಡಿ

    ಆಲ್‍ಖೈದಾ ಉಗ್ರನನ್ನು RSS ಮುಖಂಡ ಅಂದ್ರೂ ಆಶ್ಚರ್ಯವಿಲ್ಲ- ಸಿದ್ದು ವಿರುದ್ಧ ಹಿಂದೂ ಜಾಗರಣಾ ವೇದಿಕೆ ಕಿಡಿ

    ಉಡುಪಿ: ಆಲ್‍ಖೈದಾ ಉಗ್ರ ವೀಡಿಯೋ ಬಿಡುಗಡೆ ಮಾಡುವ ಮೂಲಕ ಕರ್ನಾಟಕದ ಹಿಜಬ್ ಹೋರಾಟವನ್ನು ಬೆಂಬಲಿಸಿದ್ದಾನೆ. ವೀಡಿಯೋ ಬಿಜೆಪಿ ಮತ್ತು ಸಂಘ ಪರಿವಾರದ ಸೃಷ್ಟಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಕೊಟ್ಟಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಹಿಂದೂ ಜಾಗರಣ ವೇದಿಕೆ ತೀವ್ರ ವಾಗ್ದಾಳಿ ನಡೆಸಿದೆ.

    ಉಡುಪಿ ಜಿಲ್ಲೆಯಲ್ಲಿ ಡಿಸೆಂಬರ್ ಅಂತ್ಯಕ್ಕೆ ಹಿಜಬ್ ಹೋರಾಟ ಆರಂಭವಾಗಿತ್ತು. ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಹೈಕೋರ್ಟ್ ಮೆಟ್ಟಿಲೇರಿ ಹೋರಾಟದಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಬಿಜಾಪುರ ನಂತರ ಬೇರೆ ಬೇರೆ ಆಯಾಮಗಳಲ್ಲಿ ಹಿಂದೂ-ಮುಸಲ್ಮಾನರ ನಡುವೆ ಸಂಘರ್ಷ ಏರ್ಪಟ್ಟಿದೆ. ಈ ನಡುವೆ ಹಿಜಬ್ ಹೋರಾಟವನ್ನು ಮುಂದುವರಿಸಿದರು. ಆಲ್-ಖೈದಾ ಉಗ್ರ ಆಯ್ಮಾನ್ ಅಲ್ ಜವಹಿರಿ ವೀಡಿಯೋ ಬಿಡುಗಡೆ ಮಾಡಿದ್ದಾನೆ. ಇದು ಬಿಜೆಪಿ ಸಂಘಪರಿವಾರ ಸೃಷ್ಟಿಸಿದ ವೀಡಿಯೋ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ಹಿಜಬ್‍ನ್ನು ಸಿದ್ದರಾಮಯ್ಯ ಬಲವಾಗಿ ಬೆಂಬಲಿಸುತ್ತಾ ಬಂದಿದ್ದಾರೆ. ಡಿಕೆಶಿ ಈಗ ನಡೆಯುತ್ತಿರುವ ಬೆಳವಣಿಗೆಯನ್ನು ಎಲ್ಲೂ ಸಮರ್ಥಿಸಿಕೊಂಡು ಹೋಗಿಲ್ಲ. ಡಿ.ಕೆ. ಶಿವಕುಮಾರ್‌ಗೆ ವಾಸ್ತವದ ಅರಿವಿದೆ. ಸಿದ್ದರಾಮಯ್ಯ ಹಿಂದೂ ಸಮಾಜ ಪರವಾಗಿ ಎಂದೂ ನಿಂತಿಲ್ಲ. ಜೀವನಪೂರ್ತಿ ಮುಸಲ್ಮಾನ ತುಷ್ಟೀಕರಣ ಅನುಸರಿಸಿದವರು. ಹಿಂದೂ ಸಮಾಜ ಯಾವುದೇ ನಿರೀಕ್ಷೆಯನ್ನು ಇಟ್ಟುಕೊಂಡಿಲ್ಲ ಎಂದು ಹಿಂದೂ ಜಾಗರಣ ವೇದಿಕೆಯ ವಿಭಾಗ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕುಕ್ಕೆಹಳ್ಳಿ ಕಿಡಿಕಾರಿದರು.

    ಸಿಎಂ ಇಬ್ರಾಹಿಂ ಕೂಡಾ, ವಿಡಿಯೋ ಬಿಡುಗಡೆಯನ್ನು ಪ್ರಶ್ನಿಸಿ ಹೇಳಿಕೆ ನೀಡಿದ್ದಾರೆ. ಇದು ಸುಳ್ಳು ಎಂದಿದ್ದರು. ಸಿಎಂ ಇಬ್ರಾಹಿಂ ಕಾಮಿಡಿ ಪೀಸ್. ನಾವದನ್ನು ಗಂಭೀರವಾಗಿ ಕಾಮಿಡಿಯಾಗಿಯೇ ಪರಿಗಣಿಸಿಲ್ಲ. ಉಗ್ರನ ವೀಡಿಯೋ ಸಂಘ ಪರಿವಾರ ಸೃಷ್ಟಿ ಅಂತಾರೆ. ವೀಡಿಯೋದಲ್ಲಿ ಇರುವ ಆಲ್ ಖೈದ ಮುಖ್ಯಸ್ಥ ಆರ್‌ಎಸ್‍ಎಸ್‍ನ ಸ್ವಯಂಸೇವಕ ಎಂದು ಹೇಳುವ ಸಾಧ್ಯತೆ ಇದೆ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ವಿಗ್ರಹ ಮಾಡೋದು ಹರಾಮ್, ಆದ್ರೇ ಜೀವನೋಪಾಯಕ್ಕೆ ಅದು ಅನಿವಾರ್ಯ: ಉಮರ್ ಷರೀಫ್

    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮನಸ್ಥಿತಿ ಮತ್ತು ಮಾನಸಿಕತೆಗೆ ತಕ್ಕಂತೆ ಮಾತನಾಡುತ್ತಾರೆ. ಮುಸಲ್ಮಾನರ ತುಷ್ಟೀಕರಣವೇ ಅವರಿಗೆ ಮುಖ್ಯ. ಈಶ್ವರಪ್ಪರ ನಾಲಿಗೆ ಮತ್ತು ಮೆದುಳಿಗೆ ಸಂಬಂಧ ಇಲ್ಲ ಅಂತೀರಿ. ನಿಮ್ಮ ಮೆದುಳು ಮತ್ತು ನಾಲಿಗೆಗೆ ಸಂಬಂಧ ಇದೆಯೇ ಎಂದು ಪ್ರಕಾಶ್ ಕುಕ್ಕೆಹಳ್ಳಿ ಪ್ರಶ್ನೆ ಮಾಡಿದರು. ಇದನ್ನೂ ಓದಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರೈತಸಂಘದಿಂದ ಪರ್ಯಾಯ ರಾಜಕಾರಣ: ಕೋಡಿಹಳ್ಳಿ