Tag: ಆಲ್ಕೋಹಾಲ್

  • ಮದ್ಯವೇ ನಿಜವಾದ ಔಷಧಿ, ಲಿಕ್ಕರ್ ಶಾಪ್ ತೆರೆದರೆ ಆಸ್ಪತ್ರೆಯ ಬೆಡ್ ಖಾಲಿ – ಮಹಿಳೆ ವೀಡಿಯೋ ವೈರಲ್

    ಮದ್ಯವೇ ನಿಜವಾದ ಔಷಧಿ, ಲಿಕ್ಕರ್ ಶಾಪ್ ತೆರೆದರೆ ಆಸ್ಪತ್ರೆಯ ಬೆಡ್ ಖಾಲಿ – ಮಹಿಳೆ ವೀಡಿಯೋ ವೈರಲ್

    ನವದೆಹಲಿ: ಮೆಡಿಸನ್‍ಗಿಂತ ಮದ್ಯ ಸೇವಿಸಬೇಕೆಂದು ಮಾತನಾಡಿರುವ ಮಹಿಳೆಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.

    ವೀಡಿಯೋದಲ್ಲಿ ವಯಸ್ಸಾದ ಡಾಲಿ ಎಂಬಾಕೆ, ಯಾವುದೇ ಲಸಿಕೆ ಆಲ್ಕೋಹಾಲ್‍ಗೆ ಸಮವಾದದ್ದಲ್ಲ. ಆಲ್ಕೋಹಾಲ್‍ಲೇ ನಿಜವಾದ ಔಷಧಿ. 35 ವರ್ಷಗಳಿಂದ ನಾನು ಕುಡಿಯುತ್ತಿದ್ದೇನೆ ಮತ್ತು ನನಗೆ ಯಾವುದೇ ಔಷಧಿಯ ಅಗತ್ಯವಿಲ್ಲ ಎಂದಿದ್ದಾಳೆ.

    ದೆಹಲಿಯಲ್ಲಿ ಮದ್ಯದಂಗಡಿಯನ್ನು ಮತ್ತೆ ತೆರೆಯುವಂತೆ ದೆಹಲಿ ಸರ್ಕಾರಕ್ಕೆ ಮನವಿ ಮಾಡಿದ್ದಾಳೆ. ಅಲ್ಲದೆ ಮದ್ಯದಂಗಡಿಯನ್ನು ತೆರೆದರೆ ಆಸ್ಪತ್ರೆಯ ಬೆಡ್‍ಗಳು ಸಂಪೂರ್ಣವಾಗಿ ಖಾಲಿಯಾಗುತ್ತದೆ. ಸರ್ಕಾರವು ಯಾವುದೇ ಸಮಸ್ಯೆಗಳನ್ನು ಎದುರಿಸಬೇಕಾಗುವುದಿಲ್ಲ ಎಂದು ನುಡಿದಿದ್ದಾಳೆ.

    ಹೌದು, ಮದ್ಯದಂಗಡಿಯನ್ನು ತೆರೆದರೆ ಆಸ್ಪತ್ರೆಗಳಲ್ಲಿರುವ ಬೆಡ್‍ಗಳು ಖಾಲಿಯಾಗುತ್ತದೆ ಮತ್ತು ದೆಹಲಿ ಸರ್ಕಾರವು ಅಷ್ಟೊಂದು ತೊಂದರೆಗಳನ್ನು ಎದುರಿಸಬೇಕಾಗಿರುವುದಿಲ್ಲ. ಆಕ್ಸಿಜನ್ ಸಿಲಿಂಡರ್ ಸಮಸ್ಯೆಗಳು ಹೋಗುತ್ತದೆ. ಒಮ್ಮೆ ಜನರು ಮದ್ಯ ಸೇವಿಸಿದರೆ, ಕೊರೊನಾ ಮಾಯವಾಗುತ್ತದೆ ಎಂದು ಮಹಿಳೆ ವೀಡಿಯೋದಲ್ಲಿ ಹೇಳಿದ್ದಾಳೆ.

    ವೀಡಿಯೋ ಸೆರೆ ಹಿಡಿಯುತ್ತಿದ್ದ ವ್ಯಕ್ತಿ ನೀವು ಲಾಕ್‍ಡೌನ್ ಸಮಯದಲ್ಲಿ ಮದ್ಯ ಸೇವಿಸುತ್ತಿದ್ದೀರಾ ಎಂದು ಪ್ರಶ್ನೆ ಕೇಳಿದಾಗ, ಡಾಲಿ ಹೌದು ಎಂದು ಹೇಳಿದ್ದಾಳೆ. ಅಲ್ಲದೆ ಇದೀಗ ಸ್ಟಾಕ್ ಮಾಡಿದ್ದ ಮದ್ಯ ಕೂಡ ಖಾಲಿಯಾಗಿದ್ದು, ಸರ್ಕಾರಕ್ಕೆ ಮದ್ಯದಂಗಡಿಯನ್ನು ಮರು ತೆರೆಯಲು ಮನವಿ ಮಾಡಿದ್ದಾಳೆ.

  • ಎಣ್ಣೆ ಸಹವಾಸ ಹೆಂಡ್ತಿ ಮಕ್ಕಳು ಉಪವಾಸ, ಸದ್ಯಕ್ಕೆ ಎಣ್ಣೆ ಬೇಡ್ವೇ ಬೇಡ: ಆರ್ ಅಶೋಕ್

    ಎಣ್ಣೆ ಸಹವಾಸ ಹೆಂಡ್ತಿ ಮಕ್ಕಳು ಉಪವಾಸ, ಸದ್ಯಕ್ಕೆ ಎಣ್ಣೆ ಬೇಡ್ವೇ ಬೇಡ: ಆರ್ ಅಶೋಕ್

    ಬೆಂಗಳೂರು: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದೆ. ಈ ಮಧ್ಯೆ ಮದ್ಯದಂಗಡಿ ತೆರೆಯುವಂತೆ ಜನಸಾಮಾನ್ಯರು ಒತ್ತಾಯಿಸುತ್ತಿದ್ದಾರೆ. ಆದರೆ ಇತ್ತ ಎಣ್ಣೆ ಸಹವಾಸ ಬೇಡವೇ ಬೇಡ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

    ವಿಧಾನಸೌಧದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದಾಗ ಮದ್ಯದ ಅಂಗಡಿ ತೆರೆಯಲು ಅನುಮತಿ ಸಿಗುತ್ತಾ ಎಂಬ ಪ್ರಶ್ನೆಗೆ, ಎಣ್ಣೆ ನಮ್ಮದಲ್ಲ, ಊಟ ಮಾತ್ರ ನಮ್ಮದು. ಎಣ್ಣೆ ನಿಮ್ಮದು, ಊಟ ನಮ್ಮದು. ಸದ್ಯಕ್ಕೆ ಎಣ್ಣೆ ಬೇಡವೇ ಬೇಡ. ಎಣ್ಣೆ ಸಹವಾಸ ಹೆಂಡತಿ ಮಕ್ಕಳು ಉಪವಾಸ ಅಷ್ಟೇ ಆಗೋದು. ಈಗ ಏನದರೂ ನಾವು ಎಣ್ಣೆ ಬಿಟ್ಟರೆ ಕೊಟ್ಟಿರೋ ರೇಷನ್ ಎಲ್ಲಾ ಹೋಗಿಬಿಡುತ್ತೆ. ಈ ಹಿನ್ನೆಲೆಯಲ್ಲಿ ಸದ್ಯ ಎಣ್ಣೆ ವಿಚಾರ ಬೇಡವೇ ಬೇಡ ಎಂದು ಉತ್ತರಿಸಿದರು.

    ಬೆಂಗಳೂರಿನಲ್ಲಿ ಮಳೆ ಬಂದು ಕಳೆದ ಎರಡು ದಿನಗಳಿಂದ ಅನಾಹುತಗಳಾಗಿವೆ. ಬೇಗ ಮಳೆ ಪ್ರಾರಂಭ ಆಗಿದೆ. ಸಾಮಾನ್ಯ ಮಳೆಗಿಂತ ಈ ಬಾರಿ ಅಧಿಕ ಮಳೆಯಾಗುತ್ತೆ ಎಂದು ಹಲವಾರು ಸಮೀಕ್ಷೆಗಳು ನಡೆದಿವೆ ಎಂದರು.

    ಮಳೆ ಬಂದು ರಸ್ತೆ ಹಾಳಾಗಿದೆ, ಗೋಡೆ ಕುಸಿದಿರುವ ವಿಚಾರ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಈ ಎಲ್ಲವನ್ನು ಹೇಗೆ ತಡೆಯುವುದು ಎಂಬ ಬಗ್ಗೆ ಇಂದು ಸಂಜೆ ಬಿಬಿಎಂಪಿ ಸಭೆ ಕರೆದಿದ್ದೇವೆ. ನಮಗೆ ಕೊರೊನಾ ನಿಯಂತ್ರಣ ಒಂದು ಕಡೆ ಸವಾಲಾದರೆ ಮತ್ತೊಂದು ಕಡೆ ಮಳೆಯದ್ದು ಮತ್ತೊಂದು ಸವಾಲಾಗಿದೆ ಎಂದರು.

  • ಕುಡಿಯಲು ನೀರು ಕೇಳಿದ್ರೆ ಎಣ್ಣೆ ಕೊಟ್ರು ಮೇಷ್ಟ್ರು- ವಾಂತಿ ಮಾಡಿ ಸುಸ್ತಾದ ಹೈಸ್ಕೂಲ್ ಮಕ್ಕಳು

    ಕುಡಿಯಲು ನೀರು ಕೇಳಿದ್ರೆ ಎಣ್ಣೆ ಕೊಟ್ರು ಮೇಷ್ಟ್ರು- ವಾಂತಿ ಮಾಡಿ ಸುಸ್ತಾದ ಹೈಸ್ಕೂಲ್ ಮಕ್ಕಳು

    ತುಮಕೂರು: ಶಾಲಾ ಮಕ್ಕಳು ಕುಡಿಯಲು ನೀರು ಕೇಳಿದರೆ ಮದ್ಯವನ್ನ ನೀಡಿ, ಅವರಿಗೂ ಮದ್ಯಪಾನ ಮಾಡಿಸಿರುವ ಗಂಭೀರ ಆರೋಪವೊಂದು ಶಾಲಾ ಶಿಕ್ಷಕರ ಮೇಲೆ ಕೇಳಿಬಂದಿದೆ.

    ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಬೊಮ್ಮಲದೇವಿಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮೂವರು ಶಿಕ್ಷಕರ ಮೇಲೆ ಈ ಆರೋಪ ಕೇಳಿ ಬಂದಿದೆ. ಶಾಲೆಯ ವಿದ್ಯಾರ್ಥಿಗಳು ಶುಕ್ರವಾರ ರಾತ್ರಿ ಶೈಕ್ಷಣಿಕ ಪ್ರವಾಸ ಹೋಗಿದ್ದರು. ಇದೇ ವೇಳೆ ಪ್ರವಾಸ ಮುಗಿಸಿಕೊಂಡು ಭಾನುವಾರ ರಾತ್ರಿ ವಾಪಸ್ಸಾಗುವಾಗ ಮಕ್ಕಳು ಮನೋರಂಜನೆಗಾಗಿ ಬಸ್ ನಲ್ಲಿ ಡ್ಯಾನ್ಸ್ ಮಾಡಿದ್ದರು. ಈ ಸಂದರ್ಭದಲ್ಲಿ ದಣಿದಿದ್ದ 9 ಹಾಗೂ 10ನೇ ತರಗತಿಯ ಸುಮಾರು 30ಕ್ಕೂ ಹೆಚ್ಚು ಮಕ್ಕಳು ಶಿಕ್ಷಕರ ಬಳಿ ಕುಡಿಯಲು ನೀರು ಕೇಳಿದ್ದಾರೆ. ಪ್ರವಾಸದುದ್ದಕ್ಕೂ ಮದ್ಯ ಸೇವಿಸಿ, ಮದ್ಯದೊಂದಿಗೆ ಬೆರಸಿದ್ದ ನೀರಿನ ಬಾಟಲಿಯನ್ನು ಬಸ್ ನಲ್ಲಿ ಇಟ್ಟುಕೊಂಡಿದ್ದ ಶಿಕ್ಷಕರು ಅದೇ ಬಾಟಲಿಯನ್ನು ನೀರು ಎಂದು ಮಕ್ಕಳಿಗೆ ಕೊಟ್ಟು ಕುಡಿಸಿದ್ದಾರೆ ಎಂದು ಶಾಲಾ ಮಕ್ಕಳು ಆರೋಪಿಸಿದ್ದಾರೆ.

    ಮುಖ್ಯಶಿಕ್ಷಕ ಸಚ್ಚಿದಾನಂದ್, ಸಹಶಿಕ್ಷಕರಾದ ಶೇಕ್ ಮುಜಾಮಿಲ್ ಹಾಗೂ ರಾಥೋಡ್ ಎನ್ನುವವರ ಮೇಲೆ ಈ ಆರೋಪ ಕೇಳಿಬಂದಿದೆ. ಧರ್ಮಸ್ಥಳ, ಹೊರನಾಡು ಹಾಗೂ ದಕ್ಷಿಣಕನ್ನಡದ ಕೆಲವೆಡೆ ಪ್ರವಾಸ ತೆರಳಿದ್ದು, ಪ್ರವಾಸದಿಂದ ವಾಪಸ್ಸಾಗುವ ಮಾರ್ಗ ಮಧ್ಯೆ ಹಾಸನದ ಬೇಲೂರು ಬಳಿ ಟೀ ಕುಡಿಯಲು ಬಸ್ ನಿಲ್ಲಿಸಿದ್ದ ವೇಳೆ ಮದ್ಯ ತುಂಬಿದ್ದ ನೀರಿನ ಬಾಯಲಿಯನ್ನು ಶಿಕ್ಷಕರು ಮಕ್ಕಳಿಗೆ ಕುಡಿಯಲು ಕೊಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.

    ಇದೇ ವೇಳೆ ಕೆಲ ವಿದ್ಯಾರ್ಥಿಗಳು ಜ್ಞಾನ ತಪ್ಪಿದ್ದು, ನಿದ್ರೆಗೆ ಜಾರಿದ್ದಾರೆ. ಇನ್ನೂ ಕೆಲವರು ವಾಂತಿ ಮಾಡಿಕೊಂಡು ಸುಸ್ತಾಗಿದ್ದಾರೆ. ಮಕ್ಕಳು ಇಷ್ಟೆಲ್ಲಾ ಹೇಳಿದರೂ ನಾವು ಯಾವ ತಪ್ಪು ಮಾಡಿಲ್ಲ. ಬೇಕಿದ್ದರೆ ದೇವರ ಮೇಲೆ ಪ್ರಮಾಣ ಮಾಡುತ್ತೀವಿ ಎಂದು ಶಿಕ್ಷಕ ಶೇಕ್ ಮುಜಾಮಿಲ್ ಪ್ರತಿಕ್ರಿಯೆ ನೀಡಿದ್ದಾರೆ. ವಿಷಯ ತಿಳಿದ ಪೋಷಕರು ಶಾಲೆಯ ಶಿಕ್ಷಕರ ವಿರುದ್ಧ ಪ್ರತಿಭಟನೆ ನಡೆಸಿ ಕೂಡಲೇ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ದಾರೆ.

    +

  • MSIL ಮದ್ಯದಂಗಡಿಗೆ ಬೆಂಕಿ – 16 ಲಕ್ಷ ಮೌಲ್ಯದ ಮದ್ಯ ಬೆಂಕಿಗಾಹುತಿ

    MSIL ಮದ್ಯದಂಗಡಿಗೆ ಬೆಂಕಿ – 16 ಲಕ್ಷ ಮೌಲ್ಯದ ಮದ್ಯ ಬೆಂಕಿಗಾಹುತಿ

    ರಾಯಚೂರು: ಜಿಲ್ಲೆಯ ದೇವದುರ್ಗ ಪಟ್ಟಣದಲ್ಲಿ ಆಕಸ್ಮಿಕ ಬೆಂಕಿಗೆ ತಗುಲಿ ಎಂಎಸ್‍ಐಎಲ್ ಮದ್ಯದಂಗಡಿ ಹೊತ್ತಿ ಉರಿದಿದೆ.

    ದೇವದುರ್ಗ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಬಳಿಯಿರುವ ಮದ್ಯದಂಗಡಿಯಲ್ಲಿ ಬೆಂಕಿ ಹೊತ್ತಿಕೊಂಡಿದ್ದು, 16 ಲಕ್ಷ ರೂ.ಮೌಲ್ಯದ ಮದ್ಯ ಹಾಗೂ ಇತರೆ ವಸ್ತುಗಳು ಭಸ್ಮವಾಗಿವೆ. ಬೆಂಕಿ ಅವಘಡಕ್ಕೆ ವಿದ್ಯುತ್ ಶಾಟ್ ಸರ್ಕ್ಯೂಟ್ ಕಾರಣ ಎನ್ನಲಾಗಿದೆ. ಅಗ್ನಿ ಶಾಮಕದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಮದ್ಯದಂಗಡಿಯಲ್ಲಿದ್ದ ವಿವಿಧ ಬ್ರ್ಯಾಂಡ್ ಗಳ ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯ ಬೆಂಕಿಗಾಹುತಿಯಾಗಿದೆ.

    ಈ ಸಂಬಂಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.