Tag: ಆಲ್ಕೋಹಾಲ್

  • ಎಣ್ಣೆ ಬೇಡ ಎಂದಿದ್ದಕ್ಕೆ ಸ್ನೇಹಿತನೇ ಮನೆಯ ಟೆರೇಸ್‌ನಿಂದ ತಳ್ಳಿದ!

    ಎಣ್ಣೆ ಬೇಡ ಎಂದಿದ್ದಕ್ಕೆ ಸ್ನೇಹಿತನೇ ಮನೆಯ ಟೆರೇಸ್‌ನಿಂದ ತಳ್ಳಿದ!

    – ಕೆಳಕ್ಕೆ ಬಿದ್ದ ನಂತ್ರ ಮನಬಂದಂತೆ ಗೆಳೆಯರಿಂದ ಥಳಿತ

    ಲಕ್ನೋ: ಮದ್ಯ (Alcohol) ಸೇವಿಸಲು ನಿರಾಕರಿಸಿದನೆಂದು ಆತನ ಸ್ನೇಹಿತನೇ ಮನೆಯ ಟೆರೇಸ್‌ನಿಂದ ಕೆಳಕ್ಕೆ ತಳ್ಳಿದ ಘಟನೆ ಉತ್ತರಪ್ರದೇಶದಲ್ಲಿ (Uttarpradesh) ನಡೆದಿದೆ.

    ಗಾಯಾಳುವನ್ನು ರಂಜೀತ್‌ ಸಿಂಗ್‌ ಎಂದು ಗುರುತಿಸಲಾಗಿದೆ. ಈತನನ್ನು ಲಕ್ನೋದ ರುಪ್ಪುರ್ ಖಾದ್ರಾದಲ್ಲಿರುವ ಅವರ ಮನೆಯ ಟೆರೇಸ್‌ನಿಂದ ಓರ್ವ ಕೆಳಕ್ಕೆ ತಳ್ಳಿದ್ದಾನೆ. ಅಲ್ಲದೇ ಕೆಳಗೆ ಬಿದ್ದ ಬಳಿಕ ಇತರ ಮೂವರು ಸೇರಿ ರಂಜೀತ್‌ಗೆ ಮನಬಂದಂತೆ ಥಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ; ಗೋವಾದಲ್ಲಿ ಕನ್ನಡ ನಿರ್ಮಾಪಕರ ಗಲಾಟೆ

    ಘಟನೆಯ ಸಂಪೂರ್ಣ ದೃಶ್ಯ ಮನೆಯ ಸುತ್ತಮುತ್ತ ಇರುವ ಕಟ್ಟಡದಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವೀಡಿಯೋದಲ್ಲಿ ಯುವಕನೊಬ್ಬ ರಂಜೀತ್ ಸಿಂಗ್‌ನನ್ನು ಟೆರೇಸ್‌ನಿಂದ ತಳ್ಳುತ್ತಿರುವುದನ್ನು ತೋರಿಸುತ್ತದೆ. ಇನ್ನು ಇತರ ಮೂವರು ರಸ್ತೆಯಲ್ಲಿ ನಿಂತಿರುವುದನ್ನು ಕಾಣಬಹುದು. ಹಲ್ಲೆ ಅಲ್ಲಿಗೆ ನಿಲ್ಲುವುದಿಲ್ಲ. ರಂಜೀತ್‌ ಕೆಳಕ್ಕೆ ಬಿದ್ದ ಬಳಿಕ ಆತನ ಮೇಲೆ ಹಿಗ್ಗಾಮುಗ್ಗ ಥಳಿಸುವುದನ್ನು ಕೂಡ ಕಾಣಬಹುದಾಗಿದೆ.

    ಘಟನೆ ನಡೆದ ಕೂಡಲೇ ರಂಜೀತ್ ಸಿಂಗ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಇದೀಗ ಡಿಸ್ಚಾರ್ಜ್ ಮಾಡಲಾಗಿದೆ. ಪ್ರಕರಣ ಸಂಬಂಧ ನಾಲ್ವರ ಪೈಕಿ ಮೂವರನ್ನು ಬಂಧಿಸಲಾಗಿದೆ. ಪರಾರಿಯಾಗಿರುವ ನಾಲ್ಕನೇ ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

  • ಕಂಠಪೂರ್ತಿ ಕುಡಿದು ನಡುರಸ್ತೆಯಲ್ಲೇ ಗಾಢ ನಿದ್ದೆಗೆ ಜಾರಿದ!

    ಕಂಠಪೂರ್ತಿ ಕುಡಿದು ನಡುರಸ್ತೆಯಲ್ಲೇ ಗಾಢ ನಿದ್ದೆಗೆ ಜಾರಿದ!

    ಚಿಕ್ಕಮಗಳೂರು: ಎಣ್ಣೆ ಏಟಲ್ಲಿ ಕೆಲವೊಮ್ಮೆ ವ್ಯಕ್ತಿ ತಾನೇನು ಮಾಡುತ್ತಿದ್ದೇನೆ ಎಂಬುದನ್ನೇ ಮರೆತು ಬಿಡುತ್ತಾನೆ. ಈ ಸಂದರ್ಭದಲ್ಲಿ ಆತನಿಗೆ ಯಾವ ಭಯವೂ ಇರುವುದಿಲ್ಲ. ಅಂತೆಯೇ ಇಲ್ಲೊಬ್ಬ ವ್ಯಕ್ತಿ ಕಂಠಪೂರ್ತಿ ಕುಡಿದು ರಸ್ತೆಯ ಮಧ್ಯೆ ಗಾಢವಾಗಿ ನಿದ್ದೆ ಮಾಡಿದ ಪ್ರಸಂಗವೊಂದು ನಡೆದಿದೆ.

    ಈ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಜನ್ನಾಪುರ ಸಮೀಪದ ಹಳಸೆ ಗ್ರಾಮದ ಬಳಿ ನಡೆದಿದೆ. ಕುಡಿತ ಮತ್ತಿನಲ್ಲಿ ವ್ಯಕ್ತಿ ಮಧ್ಯರಾತ್ರಿ ಸಮಯದಲ್ಲಿ ರಸ್ತೆ ಮಧ್ಯೆಯೇ ಗಡದ್ದಾಗಿ ನಿದ್ದೆ ಮಾಡಿದ್ದಾಳೆ. ಈ ವೇಳೆ ಅದೇ ದಾರಿಯಲ್ಲಿ ಬರುತ್ತಿದ್ದ ವಾಹನ ಸಾವರರೊಬ್ಬರು ವ್ಯಕ್ತಿಯನ್ನು ಕಂಡು ಗಾಬರಿಗೊಂಡಿದ್ದಾರೆ.

    ಚಾಲಕರು ಎಷ್ಟೇ ಹಾರ್ನ್ ಮಾಡಿದರೂ ವ್ಯಕ್ತಿ ಎದ್ದೇಳುವ ಲಕ್ಷಣ ಕಾಣುತ್ತಿಲ್ಲ. ಆ ಬಳಿಕ ಕೆಲ ಹೊತ್ತು ಎದ್ದು ಕುಳಿತು ಮತ್ತೆ ಅದೇ ಜಾಗದಲ್ಲಿ ಮಲಗಿದ್ದಾನೆ. ಒಟ್ಟಾರೆಯಾಗಿ ಎಣ್ಣೆ ಮತ್ತಿನಲ್ಲಿ ವ್ಯಕ್ತಿಯ ಚೆಲ್ಲಾಟದಿಂದ ವಾಹನ ಸವಾರರು ಪರದಾಟ ಅನುಭವಿಸಿದ್ದಾರೆ. ಇದನ್ನೂ ಓದಿ: ಅನ್ನ ಭಾಗ್ಯಕ್ಕೆ ಅಕ್ಕಿ ಇಲ್ಲ, ಧರ್ಮದ ಹೆಸರಲ್ಲಿ ಮನೆ ಮನೆಗೆ ಅಕ್ಷತೆ: ಕೇಂದ್ರದ ವಿರುದ್ಧ ಮಹದೇವಪ್ಪ ಕಿಡಿ

  • ಹೊಸ ವರ್ಷಕ್ಕೂ ಮುನ್ನವೇ ಗುಡ್‌ನ್ಯೂಸ್‌ – ಗುಜರಾತ್‌ನ GIFT ಸಿಟಿಯಲ್ಲಿ ಮದ್ಯ ಸೇವನೆಗೆ ಅವಕಾಶ

    ಹೊಸ ವರ್ಷಕ್ಕೂ ಮುನ್ನವೇ ಗುಡ್‌ನ್ಯೂಸ್‌ – ಗುಜರಾತ್‌ನ GIFT ಸಿಟಿಯಲ್ಲಿ ಮದ್ಯ ಸೇವನೆಗೆ ಅವಕಾಶ

    ಗಾಂಧಿನಗರ: ಗುಜರಾತ್‌ನಲ್ಲಿ ಮದ್ಯ ಸೇವನೆ ಮತ್ತು ಮಾರಾಟಕ್ಕೆ ಅಲ್ಲಿನ ಸರ್ಕಾರ ಅವಕಾಶ ಕಲ್ಪಿಸಿದೆ. ಗುಜರಾತ್ ಸರ್ಕಾರವು ಗುಜರಾತ್ ಇಂಟರ್‌ನ್ಯಾಷನಲ್ ಫೈನಾನ್ಸ್ ಟೆಕ್-ಸಿಟಿ (GIFT City) ನಲ್ಲಿ ವೈನ್ ಮತ್ತು ಡೈನ್ (Wine and Dine) ನೀಡುವ ಹೋಟೆಲ್‌, ರೆಸ್ಟೋರೆಂಟ್ಸ್‌ ಹಾಗೂ ಕ್ಲಬ್‌ಗಳಲ್ಲಿ ಮದ್ಯ ಸೇವನೆಗೆ ಅನುಮತಿ ನೀಡಿದೆ.

    ರಾಜಧಾನಿ ಗಾಂಧಿನಗರದ ಸಂಪೂರ್ಣ ಗಿಫ್ಟ್ ಸಿಟಿಯಲ್ಲಿ ಕೆಲಸ ಮಾಡುವ ಎಲ್ಲಾ ಉದ್ಯೋಗಿಗಳು ಹಾಗೂ ಮಾಲೀಕರಿಗೆ ಮದ್ಯ ಸೇವನೆ ಪರವಾನಗಿಯನ್ನು ನೀಡಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಬಹುಮಹಡಿ ಕಟ್ಟಡದ 8ನೇ ಮಹಡಿಯಿಂದ ಬಿದ್ದ ಲಿಫ್ಟ್- ಐವರು ಟೆಕ್ಕಿಗಳು ಐಸಿಯುಗೆ ದಾಖಲು

    ಸಾಂದರ್ಭಿಕ ಚಿತ್ರ

    ಇದಲ್ಲದೇ, ಪ್ರತಿ ಕಂಪನಿಯ ಅಧಿಕೃತ ಸಂದರ್ಶಕರು ಆ ಕಂಪನಿಯ ಕಾಯಂ ಉದ್ಯೋಗಿಗಳ ಉಪಸ್ಥಿತಿಯಲ್ಲಿ ತಾತ್ಕಾಲಿಕ ಪರವಾನಗಿ ಹೊಂದಿರುವ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಕ್ಲಬ್‌ಗಳಲ್ಲಿ ಮದ್ಯ ಸೇವಿಸಲು ಅವಕಾಶ ಕಲ್ಪಿಸಲಾಗಿದೆ.

    ಗಿಫ್ಟ್ ಸಿಟಿಯಲ್ಲಿರುವ ಅಥವಾ ಬರುವ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಅಥವಾ ಕ್ಲಬ್‌ಗಳು ಅಲ್ಲಿ ವೈನ್ ಮತ್ತು ಡೈನ್ ಸೌಲಭ್ಯವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಗಿಫ್ಟ್ ಸಿಟಿಯಲ್ಲಿ ಅಧಿಕೃತವಾಗಿ ಸೇವೆ ಸಲ್ಲಿಸುತ್ತಿರುವ ಉದ್ಯೋಗಿಗಳು ಮತ್ತು ಅಧಿಕೃತವಾಗಿ ಭೇಟಿ ನೀಡುವ ಸಂದರ್ಶಕರು ಹೋಟೆಲ್‌ಗಳು, ಕ್ಲಬ್‌, ರೆಸ್ಟೋರೆಂಟ್‌ಗಳಲ್ಲಿ ಮದ್ಯ ಸೇವಿಸಬಹುದು. ಆದ್ರೆ, ಇಲ್ಲಿ ಮದ್ಯದ ಬಾಟಲಿಗಳನ್ನು ಮಾರಾಟ ಮಾಡುವಂತಿಲ್ಲ ಎಂದು ಸರ್ಕಾರ ಹೇಳಿದೆ.

    ಗಿಫ್ಟ್ ಸಿಟಿಯು ತೆರಿಗೆಗೆ ತಟಸ್ಥ ಹಣಕಾಸು ಕೇಂದ್ರವಾಗಿದ್ದು, ಸಿಂಗಾಪುರದಂತಹ ಕೇಂದ್ರಗಳೊಂದಿಗೆ ಸ್ಪರ್ಧಿಸುವ ಗುರಿ ಹೊಂದಿದೆ. ಏಕೆಂದರೆ ಇದು ಹಣಕಾಸಿನ ಪ್ರೋತ್ಸಾಹ ಮತ್ತು ಸಡಿಲವಾದ ಕಾನೂನು ನಿಯಂತ್ರಣಗಳನ್ನು ಹೊಂದಿದೆ. ಇದನ್ನೂ ಓದಿ: ಲೋಕಸಭೆ ಚುನಾವಣೆ 2024 – ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿಯಲ್ಲಿ ಸಿದ್ದರಾಮಯ್ಯಗೆ ಸ್ಥಾನ 

  • ಕುಡಿತಿದ್ದೆ, ಡ್ರಗ್ಸ್ ತಗೋತಾ ಇರಲಿಲ್ಲ: ನಟಿ ಶ್ರುತಿ ಹಾಸನ್

    ಕುಡಿತಿದ್ದೆ, ಡ್ರಗ್ಸ್ ತಗೋತಾ ಇರಲಿಲ್ಲ: ನಟಿ ಶ್ರುತಿ ಹಾಸನ್

    ಖ್ಯಾತ ನಟ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್  (Shruti Haasan)ತಮ್ಮ ವೈಯಕ್ತಿಕ ಜೀವನದ ಬಗ್ಗೆ ಆಗಾಗ್ಗೆ ಮಾತಾಡ್ತಾ ಇರುತ್ತಾರೆ. ಬಾಯ್ ಫ್ರೆಂಡ್, ಡಿಪ್ರೆಷನ್ ಹೀಗೆ ಅನೇಕ ವಿಚಾರಗಳನ್ನು ಈವರೆಗೂ ಮಾತನಾಡಿದ್ದಾರೆ. ಈ ಬಾರಿ ಕುಡಿತ (Alcohol) ಮತ್ತು ಡ್ರಗ್ಸ್ (Drugs) ಬಗ್ಗೆ ಮಾತನಾಡಿದ್ದಾರೆ. ತಾನು ಕುಡಿತದ ಚಟಕ್ಕೆ ದಾಸಳಾಗಿದ್ದೆ ಎನ್ನುವುದನ್ನು ಹೇಳಿಕೊಂಡಿದ್ದಾರೆ.

    ನಾನು ಸಾಕಷ್ಟು ಕುಡಿತಿದ್ದೆ. ಫ್ರೆಂಡ್ಸ್ ಸಿಕ್ಕಾಗೆಲ್ಲ ಕುಡಿತಿದ್ದೆ. ಕುಡಿತದ ಚಟ ನನ್ನನ್ನು ಆಳುತ್ತಿದೆ ಅಂತ ಅನಿಸಿತು. ಕುಡಿತದ ಬಗ್ಗೆ ಬೇಸರವಾಯಿತು. ಆಗ ಬಿಟ್ಟು ಬಿಟ್ಟು. ನಾನು ಕುಡಿಯೋದನ್ನು ಬಿಟ್ಟು ಎಂಟು ವರ್ಷಗಳೇ ಆಗಿವೆ. ಕುಡಿತಿದ್ದೆ ನಿಜ. ಆದರೆ, ಡ್ರಗ್ಸ್ ತಗೆದುಕೊಳ್ಳುತ್ತಿರಲಿಲ್ಲ. ಇವತ್ತಿನವರೆಗೂ ನಾನು ಒಂದೇ ಒಂದು ಬಾರಿಯೂ ಡ್ರಗ್ಸ್ ತೆಗೆದುಕೊಂಡಿಲ್ಲ ಎಂದಿದ್ದಾರೆ ಶ್ರುತಿ.

    ಯೂಟ್ಯೂಬ್ ವಾಹಿನಿಯೊಂದರ ಜೊತೆ ಮಾತನಾಡಿರುವ ಶ್ರುತಿ, ತಮ್ಮ ಬದುಕಿನ ಬಗ್ಗೆ ಅನೇಕ ವಿಚಾರಗಳನ್ನು ಮಾತನಾಡಿದ್ದಾರೆ. ಅದರಲ್ಲೂ ಕುಡಿತದ ಬಗ್ಗೆ ಯಾವುದೇ ಮುಚ್ಚು ಮರೆ ಇಲ್ಲದೇ ಹೇಳಿಕೊಂಡಿದ್ದರು. ಜೊತೆಗೆ ಇನ್ನಷ್ಟೇ ರಿಲೀಸ್ ಆಗಬೇಕಿರುವ ಸಲಾರ್ ಸಿನಿಮಾದ ಬಗ್ಗೆಯೂ ಶ್ರುತಿ ಮಾತನಾಡಿದ್ದಾರೆ.

     

    ಎಂಟು ವರ್ಷಗಳಿಂದ ಅವರ ಮೇಲೆ ಅವರು ನಿಯಂತ್ರಣ ಹೊಂದಿದ್ದಾರಂತೆ. ಆ ಕಾರಣದಿಂದಾಗಿಯೇ ಮತ್ತಷ್ಟು ಸಾಧನೆ ಮಾಡೋಕೆ ಅವರಿಗೆ ಸಾಧ್ಯವಾಗಿದೆ ಅಂತೆ. ಈಗ ಸಂಪೂರ್ಣವಾಗಿ ಅವರು ಮದ್ಯಮುಕ್ತರಾಗಿದ್ದಾರಂತೆ.

  • ಎಣ್ಣೆ ಹೊಡಿಯೋ ವಿಚಾರಕ್ಕೆ ಗಲಾಟೆ- ಬಾರ್ ಕ್ಯಾಶಿಯರ್ ಹತ್ಯೆ

    ಎಣ್ಣೆ ಹೊಡಿಯೋ ವಿಚಾರಕ್ಕೆ ಗಲಾಟೆ- ಬಾರ್ ಕ್ಯಾಶಿಯರ್ ಹತ್ಯೆ

    ಶಿವಮೊಗ್ಗ: ಮದ್ಯ (Alcohol) ಸೇವಿಸುವ ವಿಷಯಕ್ಕೆ ಬಾರ್ (Bar) ನಲ್ಲಿ ಗಲಾಟೆ ನಡೆದಿದ್ದು, ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

    ಸಚಿನ್ (27) ಕೊಲೆಯಾದ ಯುವಕನಾಗಿದ್ದು, ಈತ ಬಾರ್ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದನು. ಶಿವಮೊಗ್ಗ (Shivamogga) ತಾಲೂಕಿನ ಆಯನೂರಿನ ನವರತ್ನ ಬಾರ್ ನಲ್ಲಿ ಈ ಗಲಾಟೆ ನಡೆದಿದೆ. ನಿರಂಜನ, ಸತೀಶ್ ಹಾಗೂ ಅಶೋಕ್ ನಾಯ್ಕ್ ಕೊಲೆ ಮಾಡಿದ ಆರೋಪಿಗಳು.

    ಈ ಹಿಂದೆ ಹಣ ನೀಡದೇ ಮದ್ಯ ಖರೀದಿಸಿದ್ದ ಆರೋಪಿಗಳು. ಹೀಗಾಗಿ ಬಾರ್ ಬಳಿ ಬಂದಾಗ ಕ್ಯಾಶಿಯರ್ (Bar Cashier)  ಹಣ ಕೇಳಿದ್ದಾರೆ. ಎಲ್ಲಾ ಜನರ ಎದುರು ಹಣ ಕೇಳುತ್ತೀಯಾ ಅಂತಾ ಗಲಾಟೆ ಮಾಡಿದ್ದರು. ಬಳಿಕ ಮೂವರು ಆರೋಪಿಗಳು ಭಾನುವಾರ ರಾತ್ರಿ 10 ಗಂಟೆಗೆ ಬಾರ್ ಗೆ ಕುಡಿಯಲು ಬಂದಿದ್ದರು.

    ರಾತ್ರಿ 11.30 ಆದರೂ ಆರೋಪಿಗಳು ಮದ್ಯ ಸೇವಿಸುತ್ತಲೇ ಇದ್ದರು. ಈ ವೇಳೆ ಸಚಿನ್, 11.30 ಆಯ್ತು ಬಂದ್ ಮಾಡ್ತೇವೆ ಹೊರಡಿ ಎಮದು ಹೇಳಿದ್ದಾರೆ. ಆಗ ನಮ್ದು ಇನ್ನು ಕುಡಿದು ಮುಗಿದಿಲ್ಲ, ನಾವು ಹೋಗಲ್ಲ ಏನ್ ಮಾಡ್ತೀಯಾ ಅಂತಾ ಗಲಾಟೆ ಮಾಡಿದ್ದಾರೆ. ಜಗಳ ತಾರಕಕ್ಕೇರಿ ಸಚಿನ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಕೂಡಲೇ ಗಾಯಾಳುವನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆಂದು ಬೇರೆಡೆ ಶಿಫ್ಟ್ ಮಾಡುವಾಗಲೇ ಸಚಿನ್ ಮೃತಟ್ಟಿದ್ದಾರೆ.

    ಘಟನೆ ಕುರಿತು ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಡ್ರಮ್‌ನಲ್ಲಿ ಕೂಡಿ ಹಾಕಿ 4 ಮಕ್ಕಳ ಕೊಂದ ತಾಯಿ – ಬಳಿಕ ತಾನೂ ನೇಣಿಗೆ ಶರಣು

  • ಆಲ್ಕೋಹಾಲ್ ಎಂದು ತಪ್ಪಾಗಿ ಆಸಿಡ್ ಕುಡಿದ!

    ಆಲ್ಕೋಹಾಲ್ ಎಂದು ತಪ್ಪಾಗಿ ಆಸಿಡ್ ಕುಡಿದ!

    ಅಗರ್ತಲಾ: ತ್ರಿಪುರಾದಲ್ಲಿ ವ್ಯಕ್ತಿಯೊರ್ವ ಆಲ್ಕೋಹಾಲ್ ಎಂದು ತಪ್ಪಾಗಿ ಆಸಿಡ್ ಕುಡಿದು ಸಾವನ್ನಪ್ಪಿದ್ದಾನೆ.

    ಶುಕ್ರವಾರ ತ್ರಿಪುರಾದ ಖೋವೈ ಜಿಲ್ಲೆಯ ಲಂಕಾಪುರ ಎಡಿಸಿ ಗ್ರಾಮದಲ್ಲಿ 55 ವರ್ಷದ ವ್ಯಕ್ತಿಯೊಬ್ಬ ಆಸಿಡ್ ಸೇವಿಸಿ ಮೃತಪಟ್ಟಿದ್ದಾನೆ. ಮೃತ ದುರ್ದೈವಿ ಕಾರ್ತಿಕ್ ಮೋಹನ್ ದೆಬ್ಬರ್ಮ ಮದ್ಯದ ಅಮಲಿನಲ್ಲಿ ಆಸಿಡ್ ತುಂಬಿದ ಬಾಟಲಿಯನ್ನು ಕುಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ದೆಬ್ಬರ್ಮ ದಿನನಿತ್ಯ ಕುಡಿಯುವ ಅಭ್ಯಾಸ ಬೆಳೆಸಿಕೊಂಡಿದ್ದ. ಶುಕ್ರವಾರ ರಾತ್ರಿ ಮದ್ಯದ ಅಮಲಿನಲ್ಲಿದ್ದ ಎಂದು ಪೊಲೀಸರು ಹೇಳಿದ್ದಾರೆ.

    ಮೂಲಗಳ ಪ್ರಕಾರ, ದೆಬ್ಬರ್ಮ ಸ್ಥಳೀಯ ಹಳ್ಳಿಗಾಡಿನ ಮದ್ಯದ ಅಂಗಡಿಯಲ್ಲಿ ಅತಿಯಾಗಿ ಕುಡಿದಿದ್ದು, ಮನೆಗೆ ಹೋಗಿ ಮಲಗಿಕೊಂಡಿದ್ದಾನೆ. ನಂತರ ಮಧ್ಯರಾತ್ರಿ ಎದ್ದು, ಮದ್ಯ ಕುಡಿಯಲು ಹುಡುಕಾಡಿದ್ದಾನೆ. ಆದರೆ ಆತನ ಕೈಗೆ ಮನೆಯಲ್ಲಿದ್ದ ಆಸಿಡ್ ಬಾಟಲಿ ಸಿಕ್ಕಿದೆ. ಅದನ್ನೇ ಮದ್ಯ ಎಂದು ತಿಳಿದ ದೆಬ್ಬರ್ಮ ಆಸಿಡ್ ಕುಡಿದಿದ್ದಾನೆ ಎಂದು ತಿಳಿದುಬಂದಿದೆ. ಇದನ್ನೂ ಓದಿ:  ಸರ್ಕಾರಿ ಶಾಲೆಯ ಕಂಪ್ಯೂಟರ್ ಕದ್ದ ಕಳ್ಳರು

    ALCOHOL

    ಆಸಿಡ್ ಕುಡಿದ ತಕ್ಷಣ ದೆಬ್ಬರ್ಮ ಪ್ರಜ್ಞಾಹೀನನಾಗಿದ್ದಾನೆ. ದೆಬ್ಬರ್ಮ ಕುಟುಂಬ ಸದಸ್ಯರು ಆತ ಪ್ರಜ್ಞಾಹೀನನಾಗಿರುವುದನ್ನು ನೋಡಿ ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು. ಆದರೆ ವೈದ್ಯರು ಆತ ಮೃತಪಟ್ಟಿದ್ದಾನೆ ಎಂದು ತಿಳಿಸಿದರು ಎಂದು ಮೂಲಗಳು ಹೇಳಿದೆ.

  • ವೈನ್ ಮದ್ಯವಲ್ಲ, ಮಾರಾಟ ಹೆಚ್ಚಾದ್ರೆ ರೈತರಿಗೆ ಲಾಭ ಸಿಗಲಿದೆ: ಸಂಜಯ್ ರಾವತ್

    ವೈನ್ ಮದ್ಯವಲ್ಲ, ಮಾರಾಟ ಹೆಚ್ಚಾದ್ರೆ ರೈತರಿಗೆ ಲಾಭ ಸಿಗಲಿದೆ: ಸಂಜಯ್ ರಾವತ್

    ಮುಂಬೈ: ವೈನ್ ಮದ್ಯವಲ್ಲ, ಸೂಪರ್ ಮಾರ್ಕೆಟ್‍ಗಳಲ್ಲಿ ಮಾರಾಟ ಮಾಡುವುದರಿಂದ ರೈತರ ಆದಾಯ ಹೆಚ್ಚಿಸಲಿದೆ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಹೇಳಿದ್ದಾರೆ.

    ವೈನ್ ಮದ್ಯವಲ್ಲ. ವೈನ್ ಮಾರಾಟ ಹೆಚ್ಚಾದರೆ ರೈತರಿಗೆ ಅದರಿಂದ ಲಾಭ ಸಿಗುತ್ತದೆ. ರೈತರ ಆದಾಯವನ್ನು ದ್ವಿಗುಣಗೊಳಿಸಲು ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ:  ಸೂಪರ್ ಮಾರ್ಕೆಟ್‍ನಲ್ಲಿ ವೈನ್‍ಸ್ಟೋರ್ – ಮಹಾರಾಷ್ಟ್ರ ಸರ್ಕಾರದಿಂದ ಅನುಮತಿ

    ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರದ ನಿರ್ಧಾರವನ್ನು ಟೀಕಿಸಿದ್ದಕ್ಕಾಗಿ ಪ್ರತಿಪಕ್ಷ ಬಿಜೆಪಿ ವಿರುದ್ಧ ಸಂಜಯ್ ರಾವತ್ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಕೇವಲ ಎಲ್ಲವನ್ನೂ ವಿರೋಧಿಸುತ್ತದೆ. ಅವರು ರೈತರಿಗಾಗಿ ಏನನ್ನೂ ಮಾಡುವುದಿಲ್ಲ ಎಂದು ಸಂಜಯ್ ರಾವತ್ ಟೀಕಿಸಿದ್ದಾರೆ. ಈ ಹಿಂದೆ ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಶಿವಸೇನೆ ನೇತೃತ್ವದ ಸರ್ಕಾರ ಮಹಾರಾಷ್ಟ್ರವನ್ನು ಮದ್ಯ-ರಾಷ್ಟ್ರ ಮಾಡಲು ಹೊರಟಿದೆ ಎಂದು ಲೇವಡಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಂಜಯ್ ರಾವತ್ ವೈನ್ ಆಲ್ಕೋಹಾಲ್ ಅಲ್ಲ ಎಂದಿದ್ದಾರೆ.

    ಸೂಪರ್ ಮಾರ್ಕೆಟ್‍ನಲ್ಲಿ ವೈನ್‍ಸ್ಟೋರ್- ಮಹಾರಾಷ್ಟ್ರ ಸರ್ಕಾರದಿಂದ ಅನುಮತಿ: ಸುಮಾರು 1,000 ಚದರ ಅಡಿ ಅಥವಾ ಅದಕ್ಕಿಂತ ಹೆಚ್ಚಿನ ವಿಸ್ತೀರ್ಣವನ್ನು ಹೊಂದಿರುವ ಮಹಾರಾಷ್ಟ್ರದ ಅಂಗಡಿಗಳು ಮತ್ತು ಸಂಸ್ಥೆಗಳ ಕಾಯ್ದೆಯಡಿ ನೋಂದಾಯಿಸಲ್ಪಟ್ಟಿರುವ ಸೂಪರ್ ರ್ಮಾರ್ಕೆಟ್‍ಗಳು ಮತ್ತು ಮಳಿಗೆಗಳಲ್ಲಿ “ಶೆಲ್ಫ್-ಇನ್-ಶಾಪ್” ವಿಧಾನವನ್ನು ಅಳವಡಿಸಿಕೊಳ್ಳಬಹುದಾಗಿದೆ. ಇದನ್ನೂ ಓದಿ: ಕೇರಳದ ಬಾಲಿಕಾ ಗೃಹದಿಂದ 6 ಹುಡುಗಿಯರು ನಾಪತ್ತೆ – ಒಬ್ಬಳು ಬೆಂಗ್ಳೂರಿನಲ್ಲಿ ಪತ್ತೆ

    ಸೂಪರ್ ಮಾರ್ಕೆಟ್ ಸಮೀಪದಲ್ಲಿ ದೇವಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳಿದ್ದರೆ ವೈನ್ ಮಾರಾಟ ಮಾಡಲು ಅನುಮತಿ ನೀಡಲಾಗುವುದಿಲ್ಲ ಮತ್ತು ಮದ್ಯ ನಿಷೇಧ ಜಾರಿಯಲ್ಲಿರುವ ಜಿಲ್ಲೆಗಳಲ್ಲಿ ಕೂಡ ವೈನ್ ಮಾರಾಟಕ್ಕೆ ಅನುಮತಿ ನೀಡಲಾಗುವುದಿಲ್ಲ. ಇನ್ನೂ ಸೂಪರ್ ಮಾರ್ಕೆಟ್‍ನಲ್ಲಿ ವೈನ್ ಮಾರಾಟ ಮಾಡಲು ಪರವಾನಗಾಗಿ 5,000 ರೂ. ಶುಲ್ಕವನ್ನು ಪಾವತಿಸಬೇಕಾಗುತ್ತದೆ.

  • ಇಂದು ರಾತ್ರಿ 8 ಗಂಟೆಯಿಂದ್ಲೇ ಸಿಗಲ್ಲ ಮದ್ಯ – ಎಣ್ಣೆ ಪಾರ್ಸೆಲ್‍ಗೂ ನೋ ಪರ್ಮಿಷನ್

    ಇಂದು ರಾತ್ರಿ 8 ಗಂಟೆಯಿಂದ್ಲೇ ಸಿಗಲ್ಲ ಮದ್ಯ – ಎಣ್ಣೆ ಪಾರ್ಸೆಲ್‍ಗೂ ನೋ ಪರ್ಮಿಷನ್

    ಬೆಂಗಳೂರು: ಮದ್ಯಪ್ರಿಯರಿಗೆ ಶಾಕಿಂಗ್ ನ್ಯೂಸ್ ಒಂದು ಹೊರಬಿದ್ದಿದ್ದು, ವಿಕೇಂಡ್ ಮಸ್ತಿಗೆ ಈ ಬಾರಿ ಕರ್ಫ್ಯೂ ಅಡ್ಡಿಯಾಗುತ್ತಿದೆ.

    ಹೌದು. ಇಂದು ರಾತ್ರಿಯಿಂದಲೇ ಮದ್ಯ ಮಾರಾಟ ಬಂದ್ ಆಗಲಿದೆ. ರಾತ್ರಿ 8 ಗಂಟೆಯ ನಂತರ ಮದ್ಯ ಸಿಗಲ್ಲ. ವೀಕೆಂಡ್ ಕರ್ಫ್ಯೂನಲ್ಲಿ ಮದ್ಯ ಪಾರ್ಸೆಲ್‍ಗೂ ಅನುಮತಿ ಇಲ್ಲ. ಕದ್ದು ಮುಚ್ಚಿ ಮಾರಾಟ ಮಾಡುವ ಬಾರ್‌ ಗಳಿಗೆ ಕಡಿವಾಣ ಹಾಕಲು ಅಬಕಾರಿ ಇಲಾಖೆ ಸಜ್ಜಾಗಿದೆ. ಕಣ್ತತಪ್ಪಿಸಿ ಮದ್ಯಮಾರಾಟ ಮಾಡಿ ಸಿಕ್ಕಿಬಿದ್ದರೆ ಬಾರ್ ಲೆಸೆನ್ಸ್ ರದ್ದು ಮಾಡಲಾಗುತ್ತದೆ.

    ಸೋಮವಾರ ಮುಂಜಾನೆವರೆಗೂ ಬಾರ್, ರೆಸ್ಟೋರೆಂಟ್, ಎಂಎಸ್ ಐಎಲ್ ಎಲ್ಲಾವೂ ಬಂದ್ ಆಗಿರುತ್ತವೆ. ಸೋಮವಾರದ ಬಳಿಕ ಬಾರ್ ಪಬ್, ರೆಸ್ಟೋರೆಂಟ್‍ಗಳಲ್ಲಿ ಸಿಟ್ಟಿಂಗ್ ಕೆಪಾಸಿಟಿ ಮೈಂಟೇನ್ ಮಾಡಬೇಕು. ಜೊತೆಗೆ ಬಾರ್, ಪಬ್ ಸಿಬ್ಬಂದಿಗೆ ಕಡ್ಡಾಯವಾಗಿ ಎರಡು ಡೋಸ್ ವ್ಯಾಕ್ಸಿನ್ ಕಡ್ಡಾಯವಾಗಿರುತ್ತದೆ.

    ಇನ್ನು ಬಾರ್, ಪಬ್, ರೆಸ್ಟೋರೆಂಟ್‍ಗೆ ಬರುವ ಗ್ರಾಹಕರಿಗೂ ಕೋವಿಡ್ ರೂಲ್ಸ್ ಪಾಲನೆ ಮಾಡುವಂತೆ ನೋಡಿಕೊಳ್ಳಬೇಕು. ಕೋವಿಡ್ ನಿಯಮ ಉಲ್ಲಂಘನೆ ಮಾಡಿದ್ದು ಕಂಡು ಬಂದ್ರೆ ಲೆಸನ್ಸ್ ರದ್ದು ಮಾಡುವ ಕಟ್ಟು ನಿಟ್ಟಿನ ಎಚ್ಚರಿಕೆ ನೀಡಲಾಗಿದೆ. ಇದನ್ನೂ ಓದಿ: ನನ್ನ ಹೆಸರು Kovid, ಆದ್ರೆ ನಾನು ವೈರಸ್ ಅಲ್ಲ: ಬೆಂಗಳೂರು ಉದ್ಯಮಿ

  • 9 ಗಂಟೆಯಲ್ಲಿ 51 ಪಬ್ ಸುತ್ತಾಡಿದ ವ್ಯಕ್ತಿ – ಹೊಸ ಗಿನ್ನೆಸ್ ರೆಕಾರ್ಡ್

    9 ಗಂಟೆಯಲ್ಲಿ 51 ಪಬ್ ಸುತ್ತಾಡಿದ ವ್ಯಕ್ತಿ – ಹೊಸ ಗಿನ್ನೆಸ್ ರೆಕಾರ್ಡ್

    ಲಂಡನ್: ಬ್ರಿಟಿಷ್ ವ್ಯಕ್ತಿಯೋರ್ವ 9 ಗಂಟೆಯಲ್ಲಿ 51 ಪಬ್ ಸುತ್ತಾಡುವ ಮೂಲಕ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

    ಹೌದು ಸಾಮಾನ್ಯವಾಗಿ ಒಬ್ಬ ವ್ಯಕ್ತಿ ದಿನವೆಲ್ಲ ಪ್ರಯತ್ನಿಸಿದರೂ 7-8 ಪಬ್‍ಗಳಿಗೆ ಹೋಗಿ ಬರಬಹುದು. ಆದರೆ ಕೇಂಬ್ರಿಡ್ಜ್ ಶೈರ್‍ನ ಸೇಂಟ್ ನಿಯೋಟ್ಸ್‌ನ ಮ್ಯಾಟಿ ಎಲ್ಲಿಸ್, 8 ಗಂಟೆ, 52 ನಿಮಿಷ ಮತ್ತು 37 ಸೆಕೆಂಡುಗಳಲ್ಲಿ ಒಟ್ಟು 51 ಪಬ್‍ಗಳಿಗೆ ಭೇಟಿ ನೀಡಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ಗಿನ್ನೆಸ್ ವಿಶ್ವ ದಾಖಲೆಯನ್ನು ಮುರಿಯುವ ಅವಕಾಶವನ್ನು ಪಡೆಯಲು ಪ್ರತಿ ಪಬ್‍ನಲ್ಲಿಯೂ ಕನಿಷ್ಠ 125 ಮಿಲಿ ಕುಡಿದಿರುವುದಾಗಿ ತಿಳಿಸಿದ್ದಾರೆ. ಅದರಲ್ಲಿಯೂ ಮುಖ್ಯವಾಗಿ ಕಿತ್ತಳೆ ರಸ ಮತ್ತು ಡಯಟ್ ಕೋಕ್ ಅನ್ನು ಅವರ ಆರೋಗ್ಯಕ್ಕೆ ಉತ್ತಮ ಎಂದು ನಾಲ್ಕು ಪಿಂಟ್ ಬಿಯರ್ ಜೊತೆಗೆ ಸೇವಿಸಿದ್ದಾರೆ. ಇದನ್ನೂ ಓದಿ: ಸೋನಿಯಾ ಗಾಂಧಿ ನಾಯಕತ್ವದಲ್ಲಿ ಸಂಪೂರ್ಣ ನಂಬಿಕೆ ಇದೆ: ಸಿಧು

     

    View this post on Instagram

     

    A post shared by Matt Ellis (@smilinggrape)

    ಈ ಕುರಿತಂತೆ ಮಾತನಾಡಿದ ಅವರು, ನನ್ನ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಾಗಿ ಕುಡಿಯುವುಲ್ಲ. ಬಹುಶಃ ಹಲವು ವರ್ಷಗಳ ಹಿಂದೆ ನಾನು ಆಲ್ಕೋಹಾಲ್ ಯುಕ್ತಪಾನೀಯಗಳನ್ನು ಸೇವಿಸುತ್ತಿದ್ದೆ. ಆದರೆ ಈಗ ಅಲ್ಲ “ಎಂದು ಹೇಳಿದ್ದಾರೆ. ಅಲ್ಲದೇ 24 ಗಂಟೆಯೊಳಗೆ ಅತೀ ಹೆಚ್ಚು ಪಬ್ ಮತ್ತು ನೈಟ್ ಕ್ಲಬ್‍ಗಳಿಗೆ ಭೇಟಿ ನೀಡಲು ಪ್ರಯತ್ನಿಸಿರುವುದಾಗಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಬಿಜೆಪಿ ಶಾಸಕನ ವಾಹನದ ಮೇಲೆ ಬಾಂಬ್ ಎಸೆಯಲೆತ್ನಿಸಿದ ಐವರ ಬಂಧನ

  • ಜ್ಯೂಸ್ ಎಂದು ಆಲ್ಕೊಹಾಲ್ ಸೇವಿಸಿ 5ರ ಬಾಲಕ ದುರ್ಮರಣ

    ಜ್ಯೂಸ್ ಎಂದು ಆಲ್ಕೊಹಾಲ್ ಸೇವಿಸಿ 5ರ ಬಾಲಕ ದುರ್ಮರಣ

    ಚೆನ್ನೈ: ಹಣ್ಣಿನ ಜೂಸ್ ಎಂದು ತಪ್ಪಾಗಿ ತಿಳಿದು ಆಲ್ಕೊಹಾಲ್ ಸೇವಿಸಿದ್ದ 5 ವರ್ಷದ ಬಾಲಕ ಸಾವನ್ನಪ್ಪಿರುವ ದಾರುಣ ಘಟನೆ ತಮಿಳುನಾಡಿನ ಅಣ್ಣಾನಗರ್‍ನಲ್ಲಿ ನಡೆದಿದೆ.

    ರಾಕೇಶ್(5) ಮೃತಪಟ್ಟ ದುರ್ದೈವಿಯಾಗಿದ್ದಾನೆ. ಆತನ 62 ವರ್ಷದ ತಾತ ಚಿನ್ನಸ್ವಾಮಿ ಅವರಿಗೆ ಕುಡಿತದ ಚಟವಿತ್ತು. ಹೀಗಾಗಿ ಮನೆಯಲ್ಲಿಯೇ ಬ್ರಾಂಡಿ ಬಾಟಲಿಯನ್ನು ತಂದು ಇಟ್ಟುಕೊಂಡಿದ್ದರು. ಇದನ್ನು ನೋಡಿದ ಬಾಲಕ ಜ್ಯೂಸ್ ಎಂದು ಕುಡಿದು ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಹತ್ಯಾಕಾಂಡದ ನಂತರವೂ ಮೌನವಾಗಿರುವವರು ಈಗಾಗಲೇ ಸತ್ತಿದ್ದಾರೆ: ರಾಹುಲ್ ಗಾಂಧಿ

    ತಾತನ ರೂಮಿನಲ್ಲಿ ಬ್ರಾಂಡಿ ಬಾಟಲಿಯನ್ನು ಜ್ಯೂಸ್ ಎಂದು ತಪ್ಪು ತಿಳಿದ ರಾಕೇಶ್ ಕುಡಿದಿದ್ದಾನೆ. ಆತ ಕುಡಿದ ಸಂಗತಿ ಯಾರಿಗೂ ತಿಳಿದಿರಲಿಲ್ಲ. ನಂತರ ರಾಕೇಶ್ ಏಕಾಏಕಿ ಆತನ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ಅದನ್ನು ಕಂಡು ರಾಕೇಶ್ ತಾತ ಚಿನ್ನಸ್ವಾಮಿ ಕೂಡಾ ಅನಾರೋಗ್ಯಕ್ಕೀಡಾದರು. ಇಬ್ಬರನ್ನೂ ಮನೆಯವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮೃತಪಟ್ಟಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸಿದ್ದಾರೆ. ಇದನ್ನೂ ಓದಿ: ನೀವು ಹತ್ಯೆ ಮಾಡಿದ ಜನರಿಗಿಂತ ನಾನು ಮುಖ್ಯ ಅಲ್ಲ: ಪ್ರಿಯಾಂಕಾ ಗಾಂಧಿ