Tag: ಆಲೂ ಬೋಂಡಾ

  • ಗರಿಗರಿಯಾದ ಆಲೂ ಬೋಂಡಾ ಮಾಡುವ ವಿಧಾನ

    ಗರಿಗರಿಯಾದ ಆಲೂ ಬೋಂಡಾ ಮಾಡುವ ವಿಧಾನ

    ಸಂಜೆ ವೇಳೆಗೆ ಮಳೆ ಇರುತ್ತದೆ. ಬಿಸಿ ಬಿಸಿ ಟೀ ಜೊತೆಗೆ ನಾಲಿಗೆ ಏನನ್ನಾದರೂ ತಿನ್ನಬೇಕು ಎಂದು ಬಯಸುತ್ತದೆ. ಕೊರೊನಾ ಲಾಕ್‍ಡೌನ್ ಇರುವುದರಿಂದ ಹೋಟೆಲ್‍ಗಳಿಗೆ ಹೋಗಿ ಪಾರ್ಸಲ್ ತರುವುದು ಕಷ್ಟವಾಗಿದೆ. ಹೀಗಾಗಿ ಮನೆಯಲ್ಲಿಯೇ ಬಿಸಿಬಿಸಿ ಬೋಂಡಾ ಮಾಡಿ ತಿನ್ನಲು ಇಲ್ಲಿದೆ ಮಾಡುವ ವಿಧಾನ..

    ಬೇಕಾಗುವ ಸಾಮಗ್ರಿಗಳು:

    * ಕಡಲೆ ಹಿಟ್ಟು- 2 ಕಪ್
    * ಅಕ್ಕಿ ಹಿಟ್ಟು- 3 ಚಮಚ
    * ಅಡುಗೆ ಎಣ್ಣೆ- 1 ಕಪ್
    * ಸಾಸಿವೆ- 1 ಚಮಚ
    * ಹಸಿಮೆಣಸಿನಕಾಯಿ- 7
    * ಕೊತ್ತಂಬರಿ ಸೊಪ್ಪು
    * ಬೇಯಿಸಿದ ಆಲೂಗಡ್ಡೆ-4
    * ಅರಿಶಿಣ ಚಿಟಿಕೆಯಷ್ಟು
    * ನಿಂಬೆ ರಸ- 1/2 ಚಮಚ
    * ಅಗತ್ಯಕ್ಕೆ ತಕ್ಕಷ್ಟು ಇಂಗು
    * ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:
    * ಬೇಯಿಸಿ, ಸಿಪ್ಪೆ ತೆಗೆದುಕೊಂಡ ಆಲೂಗಡ್ಡೆಯನ್ನು ಒಂದು ಪಾತ್ರೆಗೆ ಹಾಕಿ ಚೆನ್ನಾಗಿ ಕಿವುಚಿ, ಪಕ್ಕಕ್ಕೆ ಇಡಬೇಕು.
    * ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ, ಸಾಸಿವೆ, ಇಂಗು, ಹಸಿಮೆಣಸಿನ ಕಾಯಿ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಫ್ರೈ ಮಾಡಬೇಕು. ಇದನ್ನೂ ಓದಿ: ಮೊಟ್ಟೆ, ಆಲೂಗಡ್ಡೆ, ಟೊಮಾಟೋ ಬಳಸಿ ತಯಾರಿಸಿ ಅಫ್ಘಾನಿ ಆಮ್ಲೆಟ್


    * ಆಲೂಗಡ್ಡೆಗೆ ಹುರಿದ ಪದಾರ್ಥಗಳನ್ನು ಸೇರಿಸಿ. ನಂತರ ಅರಿಶಿನ, ನಿಂಬೆ ರಸ, ಕೊತ್ತಂಬರಿ ಸೊಪ್ಪು ಮತ್ತು ರುಚಿಗೆ ಬೇಕಾದಷ್ಟು ಉಪ್ಪನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಬೇಕು.
    * ಆಲೂಗಡ್ಡೆಯ ಮಿಶ್ರಣವನ್ನು ಸಣ್ಣ ಸಣ್ಣ ಉಂಡೆಯನ್ನಾಗಿ ಮಾಡಿ ಇಟ್ಟಿರಬೇಕು.


    * ಒಂದು ಪ್ರತ್ಯೇಕ ಪಾತ್ರೆಯಲ್ಲಿ ಕಡ್ಲೇ ಹಿಟ್ಟು, ಅಕ್ಕಿ ಹಿಟ್ಟು, ಉಪ್ಪು, ಅರಿಶಿಣ, ಖಾರದ ಪುಡಿ, ಟೀ ಚಮಚ ಎಣ್ಣೆಯನ್ನು ಬಿಸಿ ಮಾಡಿ ಹಿಟ್ಟಿನ ಮಿಶ್ರಣಕ್ಕೆ ಸೇರಿಸಿ, ಚೆನ್ನಾಗಿ ತಿರುವಿ, ಸ್ವಲ್ಪ ಸ್ವಲ್ಪ ನೀರನ್ನು ಬೆರೆಸುತ್ತಾ, ಗಂಟುಗಳಾಗದಂತೆ ದಪ್ಪವಾಗಿ ಹಿಟ್ಟನ್ನು ಕಲಸಿಕೊಳ್ಳಬೇಕು.


    * ಆಲೂಗಡ್ಡೆಯ ಉಂಡೆಯನ್ನು ಒಂದೊಂದಾಗಿ, ಕಡ್ಲೇ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ, ಉಂಡೆಯ ಎಲ್ಲಾ ಭಾಗಕ್ಕೂ ಹಿಟ್ಟಿನ ಮಿಶ್ರಣ ಲೇಪಿಸಿರಬೇಕು. ಹಿಟ್ಟು ಲೇಪಿತವಾದ ಉಂಡೆಯನ್ನು ಬಿಸಿಯಾದ ಎಣ್ಣೆಗೆ ಹಾಕಿ ಕರಿಯಿರಿ. ಬೋಂಡಾ ಚೆನ್ನಾಗಿ ಬೆಂದು ಹೊಂಬಣ್ಣಕ್ಕೆ ತಿರುಗುವ ತನಕ ಕರಿಯಬೇಕು. ಈಗ ಬಿಸಿ ಬಿಸಿಯಾದ ಆಲೂ ಬೋಂಡಾ ಸವಿಯಲು ಸಿದ್ಧವಾಗುತ್ತದೆ.