Tag: ಆಲೂ ಚಿಕನ್ ಕಬಾಬ್

  • ಸುಲಭವಾಗಿ ‘ಆಲೂ ಚಿಕನ್ ಕಬಾಬ್’ ಮಾಡುವುದು ಹೇಗೆ? ನೋಡಿ

    ಸುಲಭವಾಗಿ ‘ಆಲೂ ಚಿಕನ್ ಕಬಾಬ್’ ಮಾಡುವುದು ಹೇಗೆ? ನೋಡಿ

    ರುಚಿಕರವಾಗಿರುವ ‘ಆಲೂ ಚಿಕನ್ ಕಬಾಬ್’ ಮಾಡುವುದು ಹೇಗೆ ಎಂಬ ಸುಲಭದ ರೆಸಿಪಿ ಇಲ್ಲಿದೆ. ಚಿಕನ್ ಮಾಡುವುದು ಕಷ್ಟ ಆದರೆ ತಿನ್ನುವುದಕ್ಕೆ ತುಂಬಾ ಇಷ್ಟ. ಅದಕ್ಕೆ ಇಲ್ಲೊಂದು ಸರಳ ರೆಸಿಪಿಯಲ್ಲಿ ‘ಆಲೂ ಚಿಕನ್ ಕಬಾಬ್’ ಮಾಡುವುದು ಹೇಗೆ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು.

    ಬೇಕಾದ ಪದಾರ್ಥಗಳು:
    ಬೇಯಿಸಿದ ಆಲೂಗಡ್ಡೆ – 250 ಗ್ರಾಂ
    ಬೇಯಿಸಿ ಸಣ್ಣದಾಗಿ ಕಟ್‌ ಮಾಡಿದ ಚಿಕನ್‌ – 250 ಗ್ರಾಂ
    ಗರಂ ಮಸಾಲಾ – 1 ಟೀಸ್ಪೂನ್
    ಹುರಿದ ಜೀರಿಗೆ ಪುಡಿ – 1 ಟೀಸ್ಪೂನ್

    ಸೋಯಾ ಸಾಸ್ – 1 ಟೀಸ್ಪೂನ್
    ಕಪ್ಪು ಮೆಣಸು – 1/2 ಟೀಸ್ಪೂನ್
    ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
    ಹಸಿರು ಮೆಣಸಿನಕಾಯಿಗಳು – 3-4
    ಕತ್ತರಿಸಿದ ಕೊತ್ತಂಬರಿ ಸೊಪ್ಪು – 1 ಕಪ್
    ಮೊಟ್ಟೆ – 2
    ಬ್ರೆಡ್ ಕ್ರಂಬ್ಸ್ – 1 ಕಪ್
    ಎಣ್ಣೆ ಹುರಿಯಲು
    ರುಚಿಗೆ ಉಪ್ಪು

    ಮಾಡುವ ವಿಧಾನ:
    * ಮೊದಲು ಮಿಕ್ಸಿಂಗ್ ಬೌಲ್ ಅನ್ನು ತೆಗೆದುಕೊಂಡು, ಬೇಯಿಸಿದ ಆಲೂಗಡ್ಡೆಯನ್ನು ಸೇರಿಸಿ ಮತ್ತು ಸರಿಯಾಗಿ ಮ್ಯಾಶ್ ಮಾಡಿ.
    * ಆಲೂ ಮ್ಯಾಶ್‍ಗೆ ಬೇಯಿಸಿದ ಚಿಕನ್ ಜೊತೆಗೆ ಗರಂ ಮಸಾಲಾ, ಉಪ್ಪು, ಹುರಿದ ಜೀರಾ ಪುಡಿ, ಕಾಲಿ ಮಿರ್ಚ್, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಪುದೀನ ಎಲೆಗಳು, ಸೋಯಾ ಸಾಸ್ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ.


    * 10-15 ನಿಮಿಷಗಳ ಕಾಲ ಫ್ರಿಜ್‍ನಲ್ಲಿಡಿ.
    * ನಂತರ ಫ್ರಿಜ್‍ನಲ್ಲಿದ್ದ ಮಿಶ್ರಣವನ್ನು ವಡೆಯ ರೀತಿ ತಟ್ಟಿ ಅದನ್ನು ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಬೇಕು.
    * ಈಗ ‘ಆಲೂ ಚಿಕನ್ ಕಬಾಬ್’ ಸವಿಯಲು ಸಿದ್ಧವಾಗಿದ್ದು, ಸಾಸ್ ಜೊತೆ ಸವಿಯಿರಿ.