Tag: ಆಲೂ ಚಾಟ್

  • ಫ್ರೀ ಟೈಮ್‌ನಲ್ಲಿ ಬೇಕೆನಿಸುತ್ತೆ ಚಟ್‌ಪಟಾ ಆಲೂ ಚಾಟ್

    ಫ್ರೀ ಟೈಮ್‌ನಲ್ಲಿ ಬೇಕೆನಿಸುತ್ತೆ ಚಟ್‌ಪಟಾ ಆಲೂ ಚಾಟ್

    ಲೂ ಚಾಟ್ ಭಾರತದ ಸ್ಟ್ರೀಟ್ ಫುಡ್‌ಗಳಲ್ಲಿ ಒಂದಾಗಿದ್ದು, ಇದನ್ನು ಆಲೂಗಡ್ಡೆಯಿಂದ ತಯಾರಿಸಲಾಗುತ್ತದೆ. ಸಿಹಿ, ಹುಳಿ, ಖಾರ ಸ್ವಾದದ ಮಿಶ್ರಣ ಇದರಲ್ಲಿರೋದ್ರಿಂದ ಹೆಚ್ಚಿನವರಿಗೆ ಇದು ಇಷ್ಟವಾಗುತ್ತದೆ. ಬಿಡುವಿನ ಸಮಯದಲ್ಲಿ ಅಥವಾ ಸಂಜೆ ಆದರೆ ಏನಾದ್ರೂ ಚಟ್‌ಪಟಾ ತಿಂಡಿಗಳನ್ನು ಸವಿಯಬೇಕು ಎನಿಸಿದ್ರೆ ಆಲೂ ಚಾಟ್ ಟ್ರೈ ಮಾಡಲು ಒಂದು ಬೆಸ್ಟ್ ಆಪ್ಶನ್. ರುಚಿಕರವಾದ ಆಲೂ ಚಾಟ್ ಅನ್ನು ಒಮ್ಮೆ ನೀವೂ ಟ್ರೈ ಮಾಡಿ ಬಿಡುವಿನ ಸಮಯವನ್ನು ಆನಂದಿಸಿ.

    ಬೇಕಾಗುವ ಪದಾರ್ಥಗಳು:
    ಆಲೂಗಡ್ಡೆ – 2
    ಎಣ್ಣೆ – 1 ಟೀಸ್ಪೂನ್
    ತುರಿದ ಬೆಳ್ಳುಳ್ಳಿ – 1 ಟೀಸ್ಪೂನ್
    ಹೆಚ್ಚಿದ ಹಸಿರು ಮೆಣಸಿನಕಾಯಿ – 1
    ಜೀರಿಗೆ ಪುಡಿ – ಅರ್ಧ ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಚಾಟ್ ಮಸಾಲಾ ಪುಡಿ – ಅರ್ಧ ಟೀಸ್ಪೂನ್
    ಕೆಂಪು ಮೆಣಸಿನ ಪುಡಿ – ಕಾಲು ಟೀಸ್ಪೂನ್
    ಹೆಚ್ಚಿದ ಕೊತ್ತಂಬರಿ ಸೊಪ್ಪು – 1 ಟೀಸ್ಪೂನ್
    ಸೇವ್ – 4 ಟೀಸ್ಪೂನ್
    ದಾಳಿಂಬೆ ಬೀಜ – 2 ಟೀಸ್ಪೂನ್
    ನಿಂಬೆ ರಸ – ಅರ್ಧ ಟೀಸ್ಪೂನ್
    ಗ್ರೀನ್ ಚಟ್ನಿ ತಯಾರಿಸಲು:
    ಕೊತ್ತಂಬರಿ ಸೊಪ್ಪು – ಅರ್ಧ ಕಪ್
    ಪುದೀನಾ ಸೊಪ್ಪು – 5
    ಬೆಳ್ಳುಳ್ಳಿ – 1
    ಶುಂಠಿ – ಸಣ್ಣ ತುಂಡು
    ನೀರು – 1 ಟೀಸ್ಪೂನ್
    ಉಪ್ಪು – ಕಾಲು ಟೀಸ್ಪೂನ್ ಇದನ್ನೂ ಓದಿ: ಗರಿಗರಿಯಾದ ಕಾರ್ನ್ ಪಕೋಡಾ ಸವಿಯಲು ತುಂಬಾ ಮಜಾ

    ಮಾಡುವ ವಿಧಾನ:
    * ಮೊದಲಿಗೆ ಆಲೂಗಡ್ಡೆಗಳನ್ನು ಶುಚಿಗೊಳಿಸಿ ಸಿಪ್ಪೆ ಸುಲಿದು ಒಂದೊಂದು ಇಂಚಿನ ತುಂಡುಗಳಾಗಿ ಕತ್ತರಿಸಿ.
    * ಈಗ ಆಲೂಗಡ್ಡೆಗಳನ್ನು ಕುಕ್ಕರ್ ಅಥವಾ ಪಾತ್ರೆಯಲ್ಲಿ ಬೇಯಿಸಿಕೊಳ್ಳಬೇಕು. ನಂತರ ಅದನ್ನು ಆರಲು ಬಿಡಬೇಕು.
    * ಗ್ರೀನ್ ಚಟ್ನಿ ತಯಾರಿಸಲು ಮಿಕ್ಸರ್ ಜಾರ್‌ಗೆ ಕೊತ್ತಂಬರಿ ಸೊಪ್ಪು, ಪುದೀನಾ, ಬೆಳ್ಳುಳ್ಳಿ, ಶುಂಠಿ, ಉಪ್ಪು ಹಾಗೂ ನೀರು ಸೇರಿಸಿ ಪೇಸ್ಟ್ ಆಗಿ ರುಬ್ಬಿಕೊಳ್ಳಿ. (ಇದರಲ್ಲಿ ಆಲೂ ಚಾಟ್ 2 ಟೀಸ್ಪೂನ್ ಬಳಸಿದರೆ ಉಳಿದ ಗ್ರೀನ್ ಚಟ್ನಿಯನ್ನು ಬೇಕೆಂದಾಗ ಬಳಸಲು ಫ್ರಿಜ್‌ನಲ್ಲಿ ಶೇಖರಿಸಿಡಬಹುದು)
    * ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ, ಅದರಲ್ಲಿ ಶುಂಠಿ, ಬೆಳ್ಳುಳ್ಳಿ ಹಾಗೂ ಹಸಿರು ಮೆಣಸಿನಕಾಯಿ ಹಾಕಿ ಫ್ರೈ ಮಾಡಿಕೊಳ್ಳಿ.
    * ಬಳಿಕ ಅದಕ್ಕೆ ಆಲೂಗಡ್ಡೆ ಸೇರಿಸಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಫ್ರೈ ಮಾಡಿ.
    * ಈಗ ಒಂದು ಬೌಲ್‌ನಲ್ಲಿ ಹುರಿದ ಆಲೂಗಡ್ಡೆಯನ್ನು ಹಾಕಿ, ಅದಕ್ಕೆ ಕೆಂಪು ಮೆಣಸಿನಪುಡಿ, ಚಾಟ್ ಮಸಾಲಾ, ಉಪ್ಪು ಹಾಗೂ ಜೀರಿಗೆ ಪುಡಿ ಹಾಕಿ ಮಿಶ್ರಣ ಮಾಡಿ.
    * ಅದಕ್ಕೆ 2 ಟೀಸ್ಪೂನ್ ಗ್ರೀನ್ ಚಟ್ನಿ ಹಾಗೂ ನಿಂಬೆ ರಸ ಹಾಕಿ ಮಿಕ್ಸ್ ಮಾಡಿ.
    * ಈಗ ಸರ್ವಿಂಗ್ ಪ್ಲೇಟ್‌ಗೆ ಆಲೂ ಚಾಟ್ ಹಾಕಿ, ಅದರ ಮೇಲೆ ಸೇವ್‌, ಕೊತ್ತಂಬರಿ ಸೊಪ್ಪು ಹಾಗೂ ದಾಳಿಂಬೆ ಬೀಜದಿಂದ ಅಲಂಕರಿಸಿ. ಹಾಗೂ ತಕ್ಷಣವೇ ಸವಿಯಿರಿ. ಇದನ್ನೂ ಓದಿ: ಟ್ರೈ ಮಾಡಿ ನೋಡಿ ಸ್ಪೈಸೀ ಸಿಹಿಗೆಣಸಿನ ವೆಡ್ಜಸ್

  • ಬಾಯಿ ಚಪ್ಪರಿಸುವ ‘ಆಲೂ ಚಾಟ್’ ಮಾಡಿ ಸವಿಯಿರಿ

    ಬಾಯಿ ಚಪ್ಪರಿಸುವ ‘ಆಲೂ ಚಾಟ್’ ಮಾಡಿ ಸವಿಯಿರಿ

    ಲ್ಲೂಗೆಡ್ಡೆಯಲ್ಲಿ ಹೆಚ್ಚು ಚಾಟ್, ಚಿಪ್ಸ್‌ಗಳು ಬರುತ್ತಿದ್ದು, ಇದನ್ನು ಆಹಾರಪ್ರಿಯರು ಸವಿದು ಖುಷಿಪಡುತ್ತಿದ್ದಾರೆ. ಅದರಂತೆ ಇಂದು ವಿಶೇಷವಾಗಿ ಮತ್ತು ಸರಳವಾಗಿ ‘ಆಲೂ ಚಾಟ್’ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ಹೇಳಿಕೊಡಲಾಗುತ್ತೆ. ಈ ರೆಸಿಪಿ ಸರಳವಾಗಿದ್ದು, ರುಚಿಕರವಾಗಿದೆ.

    ಬೇಕಾಗುವ ಸಾಮಾಗ್ರಿಗಳು:
    * ಬೇಯಿಸಿದ ಆಲೂಗಡ್ಡೆ- 2(ಸಿಪ್ಪೆ ಸುಲಿಯಬೇಕು)
    * ರೆಡ್ ಚಿಲ್ಲಿ ಪೌಡರ್ – 1/2 ಟೀ ಸ್ಪೂನ್
    * ಜೀರಿಗೆ-ಕೊತ್ತಂಬರಿ ಪುಡಿ – 1/2 ಟೀಸ್ಪೂನ್
    * ಚಾಟ್ ಮಸಾಲಾ ಪೌಡರ್ – 1/2 ಟೀಸ್ಪೂನ್
    * ನಿಂಬೆ ರಸ – 1 ಟೀಸ್ಪೂನ್


    * ಸಣ್ಣದಾಗಿ ಕತ್ತರಿಸಿದ ಈರುಳ್ಳಿ – 1/4 ಕಪ್
    * ಹಸಿರು ಕೊತ್ತಂಬರಿ ಚಟ್ನಿ – 1 ಟೀಸ್ಪೂನ್
    * ಸಿಹಿ ಹುಣಸೆಹಣ್ಣಿನ ಚಟ್ನಿ – 1 ಟೀಸ್ಪೂನ್
    * ಮೊಸರು – 4 ಟೇಬಲ್ಸ್ಪೂನ್
    * ಸೆವ್ – 2 ಟೇಬಲ್ಸ್ಪೂನ್
    * ದಾಳಿಂಬೆ – 1 ಕಪ್
    * ಕತ್ತರಿಸಿದ ಕೊತ್ತಂಬರಿ ಸೋಪ್ಪು – 2 ಟೀಸ್ಪೂನ್
    * ರುಚಿಗೆ ಉಪ್ಪು ಮತ್ತು 2 ಟೇಬಲ್ಸ್ಪೂನ್ ಎಣ್ಣೆ ಇದನ್ನೂ ಓದಿ: ಸೋರೆಕಾಯಿಯಲ್ಲಿ ಮಾಡಿ ಸೂಪರ್ ರೆಸಿಪಿ ‘ಸ್ಟಫ್ಡ್ ಲೌಕಿ’

    ಮಾಡುವ ವಿಧಾನ:
    * ಫ್ರೈಯಿಂಗ್ ಪ್ಯಾನ್‍ಗೆ ಎಣ್ಣೆ ಹಾಕಿ ಬಿಸಿ ಮಾಡಿ. ಬೇಯಿಸಿದ ಆಲೂಗಡ್ಡೆ ದಪ್ಪ-ದಪ್ಪದಾಗಿ ಕತ್ತರಿಸಿ ಗೋಲ್ಡನ್ ಬ್ರೌನ್ ಬರುವವರೆಗೂ ಡೀಪ್ ಫ್ರೈ ಮಾಡಿ. ಆಲೂಗಡ್ಡೆ ಗೋಲ್ಡನ್ ಬ್ರೌನ್ ಬಂದ ಮೇಲೆ 4-5 ನಿಮಿಷಗಳು ತಣ್ಣಗಾಗಲು ಬಿಡಬೇಕು.

    * ಆಲೂಗಡ್ಡೆಯನ್ನು ದೊಡ್ಡ ಬಟ್ಟಲಿಗೆ ವರ್ಗಾಯಿಸಿ. ಅದಕ್ಕೆ 1/2 ಟೀಸ್ಪೂನ್ ಕೆಂಪು ಮೆಣಸಿನ ಪುಡಿ, 1/2 ಟೀಸ್ಪೂನ್ ಜೀರಿಗೆ, ಕೊತ್ತಂಬರಿ ಪುಡಿ ಮತ್ತು 1/2 ಟೀಸ್ಪೂನ್ ಚಾಟ್ ಮಸಾಲಾ ಪುಡಿಯನ್ನು ಸೇರಿಸಿ. 1 ಟೀಸ್ಪೂನ್ ನಿಂಬೆ ರಸವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಆಲೂಗಡ್ಡೆ ತುಂಡುಗಳನ್ನು ಮಸಾಲಾದೊಂದಿಗೆ ಚೆನ್ನಾಗಿ ಮಿಕ್ಸ್ ಮಾಡಿ.

    * 1 ಟೀಸ್ಪೂನ್ ಹಸಿರು ಕೊತ್ತಂಬರಿ ಚಟ್ನಿ, 1 ಟೀಸ್ಪೂನ್ ಸಿಹಿ ಹುಣಸೆಹಣ್ಣಿನ ಚಟ್ನಿ ಮತ್ತು 1/4 ಕಪ್ ಸಣ್ಣದಾಗಿ ಕೊಚ್ಚಿದ ಈರುಳ್ಳಿ ಸೇರಿಸಿ ಎಲ್ಲವನ್ನು ಸರಿಯಾಗಿ ಮಿಕ್ಸ್ ಮಾಡಿ. ಇದನ್ನೂ ಓದಿ: ಥಟ್ಟನೆ ಮಾಡಿ ಹೆಸರು ಬೇಳೆ ಚಾಟ್

    * ಈ ಮಿಶ್ರಣವನ್ನು ಒಂದು ಬೌಲ್ ಹಾಕಿಕೊಳ್ಳಿ. ಮೊಸರು ಇಷ್ಟ ಇದ್ದವರು ಆಲೂ ಚಾಟ್ ಮೇಲೆ ಹಾಕಿಕೊಂಡು ಅದರ ಮೇಲೆ ಸೇವ್, ಕೊತ್ತಂಬರಿ ಸೊಪ್ಪು ಮತ್ತು ದಾಳಿಂಬೆ ಹಣ್ಣನ್ನು ಹಾಕಿ ಅಲಂಕರಿಸಿ. ಕೊನೆಗೆ ಆಲೂ ಚಾಟ್ ಬಡಿಸಿ ಆನಂದಿಸಿ.

  • ಸಿಂಪಲ್ ಆಲೂ ಚಾಟ್ ಮಾಡೋ ವಿಧಾನ

    ಸಿಂಪಲ್ ಆಲೂ ಚಾಟ್ ಮಾಡೋ ವಿಧಾನ

    ಹೋಳಿ ಹಬ್ಬದ ಟೈಮಲ್ಲಿ ಓಕುಳಿಯೊಂದಿಗೆ ಆಟವಾಡಿದ ನಂತರ ಹೊಟ್ಟೆ ಚುರುಗುಟ್ಟದೆ ಇರದು. ಹಾಗಂತ ಬಣ್ಣ ಬಳಿದುಕೊಂಡು ಊಟ ಮಾಡೋಕಾಗಲ್ಲ. ಇಂಥ ಹೊತ್ತಲ್ಲಿ ಏನಾದ್ರೂ ಸಿಂಪಲ್ ಚಾಟ್ಸ್ ತಿಂದ್ರೆ ಮನಸ್ಸಿಗೆ ಖುಷಿ. ಹೋಳಿ ಅಲ್ಲದಿದ್ರೂ ಮನೆಯಲ್ಲಿ ಸಂಜೆ ವೇಳೆಗೆ ಸುಲಭವಾಗಿ ಮಾಡಬಹುದಾದ ಆಲೂ ಚಾಟ್ ರೆಸಿಪಿ ಇಲ್ಲಿದೆ.

    ಬೇಕಾಗುವ ಸಾಮಗ್ರಿಗಳು: 
    1. ಆಲೂಗಡ್ಡೆ – 3 ಮಧ್ಯಮ ಗಾತ್ರದ್ದು
    2. ಖಾರದ ಪುಡಿ- 1 ಚಮಚ
    3. ಹುರಿದ ಜೀರಿಗೆ ಪುಡಿ- 1/2 ಚಮಚ
    4. ಆಮ್ಚೂರ್ ಪುಡಿ- 1/4 ಚಮಚ
    5. ಚಾಟ್ ಮಸಾಲಾ- 1/4 ಚಮಚ
    6. ಉಪ್ಪು- ರುಚಿಗೆ ತಕ್ಕಷ್ಟು
    7. ಎಣ್ಣೆ – 1 ಚಮಚ
    8. ನಿಂಬೆಹಣ್ಣು- 1/2 ಹೋಳು
    9. ಕೊತ್ತಂಬರಿ ಸೊಪ್ಪು- 1 ಚಮಚ

    ಮಾಡುವ ವಿಧಾನ:
    * ಕುಕ್ಕರ್‍ನಲ್ಲಿ ನೀರು, ತೊಳೆದ ಅಲೂಗಡ್ಡೆಗಳನ್ನ ಹಾಕಿ 2 ವಿಷಲ್ ಬರುವವರೆಗೆ ಬೇಯಿಸಿ. ಆಲೂಗಡ್ಡೆ ಮೆತ್ತಗಾಗಬಾರದು, ಕಟ್ ಮಾಡುವಷ್ಟು ಗಟ್ಟಿ ಇರಬೇಕು
    * ಬೆಂದ ಆಲೂಗಡ್ಡೆಗಳ ಸಿಪ್ಪೆ ತೆಗೆದು, ಚೌಕಾಕಾರದಲ್ಲಿ ಕಟ್ ಮಾಡಿಕೊಳ್ಳಿ.
    * ಒಂದು ಪ್ಯಾನ್ ಗೆ ಎಣ್ಣೆ ಹಾಕಿ ಬಿಸಿ ಮಾಡಿ, ಕಟ್ ಮಾಡಿದ ಆಲೂಗಡ್ಡೆ ತುಂಡುಗಳನ್ನ ಹಾಕಿ 7-10 ನಿಮಿಷ ಸಣ್ಣ ಉರಿಯಲ್ಲಿ ಫ್ರೈ ಮಾಡಿ ತೆಗೆಯಿರಿ.
    * ಒಂದು ಸಣ್ಣ ಪಾತ್ರೆಯಲ್ಲಿ ಫ್ರೈ ಮಾಡಿದ ಆಲೂಗಡ್ಡೆ ಹಾಕಿ, ಅದರ ಮೇಲೆ ಜೀರಿಗೆ ಪುಡಿ, ಖಾರದ ಪುಡಿ, ಆಮ್ಚೂರ್ ಪುಡಿ, ಚಾಟ್ ಮಸಾಲಾ ಹಾಗೂ ಅಗತ್ಯಕ್ಕೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ.
    * ನಂತರ ಸ್ವಲ್ಪ ನಿಂಬೆ ರಸ ಹಾಗೂ ಕೊತ್ತಂಬರಿ ಸೊಪ್ಪು ಉದುರಿಸಿ ಮತ್ತೊಮ್ಮೆ ಮಿಕ್ಸ್ ಮಾಡಿ, ಬಿಸಿಯಿರುವಾಗಲೇ ಸವಿಯಲು ಕೊಡಿ.