Tag: ಆಲೂಗಡ್ಡೆ

  • ಹೆದ್ದಾರಿಯಲ್ಲಿ ನಿಂತಿದ್ದ ಲಾರಿಯಿಂದ ಆಲೂಗಡ್ಡೆಯನ್ನ ತಿಂದ ಆನೆ- ವಿಡಿಯೋ

    ಹೆದ್ದಾರಿಯಲ್ಲಿ ನಿಂತಿದ್ದ ಲಾರಿಯಿಂದ ಆಲೂಗಡ್ಡೆಯನ್ನ ತಿಂದ ಆನೆ- ವಿಡಿಯೋ

    ಕೋಲ್ಕತ್ತಾ: ಆನೆಯೊಂದು ಹೆದ್ದಾರಿಯಲ್ಲಿ ನಿಂತಿದ್ದ ಲಾರಿಯಲ್ಲಿನ ಆಲೂಗಡ್ಡೆಗಳನ್ನು ತನ್ನ ಸೊಂಡಿಲಿನ ಸಹಾಯದಿಂದ ತಿನ್ನುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಪಶ್ಚಿಮ ಬಂಗಾಳ ರಾಜ್ಯದ ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಗರ್‍ಬೇಟಾ ಅರಣ್ಯ ಪ್ರದೇಶದ ರಾಷ್ಟ್ರೀಯ ಹೆದ್ದಾರಿ 60ರಲ್ಲಿ ಆಲೂಗಡ್ಡೆಗಳನ್ನು ತುಂಬಿರುವ ಲಾರಿಯೊಂದು ನಿಂತಿತ್ತು. ಈ ವೇಳೆ ಲಾರಿ ಬಳಿ ಬಂದ ಕಾಡು ಆನೆ ನೇರವಾಗಿ ತನ್ನ ಸೊಂಡಿಲಿನ ಸಹಾಯದ ಮೂಲಕ ಆಲೂಗಡ್ಡೆಗಳನ್ನು ತಿಂದಿದೆ.

    ಆಲೂಗಡ್ಡೆಗಳನ್ನು ಮುಚ್ಚಿರುವ ಪ್ಲಾಸ್ಟಿಕ್ ಕವರ್ ತೆಗೆದು ಆಲೂಗಡ್ಡೆಗಳನ್ನು ಕೆಳಗೆ ಬೀಳಿಸಿ ಒಂದೊಂದನ್ನಾಗಿ ತಿನ್ನುವ ದೃಶ್ಯಗಳನ್ನು ವಿಡಿಯೋದಲ್ಲಿ ಕಾಣಬಹುದು. ಇನ್ನೂ ಲಾರಿಯಲ್ಲಿದ್ದ ಚಾಲಕ ಹೊರಗೆ ಬಂದಿದ್ದಾನೆ. ಲಾರಿ ಚಾಲಕ ಮತ್ತು ಸ್ಥಳೀಯರು ಆನೆಯನ್ನು ಓಡಿಸಲು ಪಟಾಕಿಯನ್ನು ಸಹ ಸಿಡಿಸಿದ್ದಾರೆ. ಆದರೂ ಆನೆ ಯಾವುದನ್ನು ಲೆಕ್ಕಿಸದೇ ತನ್ನ ಪಾಡಿಗೆ ಅದು ಆಲೂಗಡ್ಡೆಗಳನ್ನು ತಿಂದು ತನ್ನ ಹೊಟ್ಟೆ ತುಂಬಿಸಿಕೊಂಡಿದೆ.

    https://www.youtube.com/watch?v=cq6s7vsMhaQ