Tag: ಆಲೂಗಡ್ಡೆ

  • ಮಧುಮೇಹಿಗಳು ಆಲೂಗಡ್ಡೆ ತಿನ್ನುವುದನ್ನು ನಿಲ್ಲಿಸಬೇಕೆ?

    ಮಧುಮೇಹಿಗಳು ಆಲೂಗಡ್ಡೆ ತಿನ್ನುವುದನ್ನು ನಿಲ್ಲಿಸಬೇಕೆ?

    ಭಾರತದಲ್ಲಿ ಹೆಚ್ಚು ಮಂದಿ ಆಲೂಗಡ್ಡೆಯನ್ನು (Potato) ಇಷ್ಟಪಡುತ್ತಾರೆ. ಸಾಂಬಾರ್‌, ಪಲ್ಯ, ಹುರಿಯಲು, ಬಜ್ಜಿ ಹೀಗೆ ಹಲವಾರು ವಿಧಗಳಲ್ಲಿ ಆಲೂಗಡ್ಡೆಯನ್ನು ಆಹಾರವಾಗಿ ಸೇವಿಸುತ್ತಾರೆ.

    ಮಧುಮೇಹ ಅಥವಾ ಸಕ್ಕರೆ ಕಾಯಿಲೆ (Diabetes) ಇರುವವರು ತಾವು ಸೇವಿಸುವ ಆಹಾರದ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ. ಈ ಆಹಾರ ಸೇವಿಸಬೇಕೋ ಅಥವಾ ಬೇಡವೋ ಅಂತಾ ಯೋಚಿಸುತ್ತಾರೆ. ಅಷ್ಟೇ ಅಲ್ಲ, ಮಧುಮೇಹಿಗಳು ಆಲೂಗಡ್ಡೆ ಸೇವಿಸುವ ಬಗ್ಗೆಯೂ ತುಂಬಾ ಗೊಂದಲ ಭಾವನೆ ಹೊಂದಿದ್ದಾರೆ. ಇದನ್ನೂ ಓದಿ: ಎದೆನೋವು ಬಂದ್ರೆ ಗ್ಯಾಸ್ಟ್ರಿಕ್‌ ಅಂತಾ ನಿರ್ಲಕ್ಷಿಸಬೇಡಿ – ಹೃದಯಾಘಾತ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವೈದ್ಯರು ಹೇಳೋದೇನು?

    ಡಯಾಬಿಟಿಸ್‌ ಇರುವವರು ಆಲೂಗಡ್ಡೆ ತಿನ್ನಬಹುದೇ ಅಥವಾ ಬೇಡವೆ? ತಿಂದರೆ ಏನಾಗಬಹುದು? ತಿನ್ನುವುದಾದರೆ ಯಾವ ಪ್ರಮಾಣದಲ್ಲಿ ತಿನ್ನಬೇಕು ಎಂಬೆಲ್ಲ ಪ್ರಶ್ನೆಗಳಿಗೆ ಇತ್ತೀಚೆಗೆ ನಡೆದ ಸಂಶೋಧನೆಯೊಂದು ಉತ್ತರ ನೀಡಿದೆ.

    ಮಧುಮೇಹಿಗಳು ಆಲೂಗಡ್ಡೆಯಿಂದ ಯಾಕೆ ದೂರ ಇರುತ್ತಾರೆ?
    ಮಧುಮೇಹ ಇರುವವರು ತಾವು ಸೇವಿಸುವ ಆಹಾರದಲ್ಲಿನ ಕಾರ್ಬೋಹೈಡ್ರೇಟ್‌ನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ರಕ್ತದಲ್ಲಿನ ಸಕ್ಕರೆ ಮಟ್ಟ ಅಧಿಕವಾಗುತ್ತದೆ. ಕಾರ್ಬೋಹೈಡ್ರೇಟ್‌ ಸಮೃದ್ಧ ಮೂಲವಾಗಿರುವ ಆಲೂಗಡ್ಡೆಯು ಸಕ್ಕರೆಯ ಅಸಮತೋಲನ ಉಂಟುಮಾಡುತ್ತದೆ. ಹೀಗಾಗಿ ಮಧುಮೇಹ ರೋಗಿಗಳು ಯಾವಾಗಲೂ ಅದರಿಂದ ದೂರವಿರುತ್ತಾರೆ. ಇದನ್ನೂ ಓದಿ: ಎಕ್ಕದ ಗಿಡದಿಂದ ಆರೋಗ್ಯಕ್ಕೆ ಸಿಗುತ್ತೆ ಹಲವಾರು ಪ್ರಯೋಜನ

    ಮಧುಮೇಹಕ್ಕೆ ಯಾವ ಪದಾರ್ಥ ಕಾರಣ?
    ಆಲೂಗಡ್ಡೆ ಫ್ರೈಸ್/ಚಿಪ್ಸ್, ಬೇಯಿಸಿದ, ಹುರಿದ ಮತ್ತು ಹಿಸುಕಿ ತಯಾರಿಸಿದ ಆಲೂಗಡ್ಡೆ ಪದಾರ್ಥಗಳ ಸೇವನೆಯು ಮಧುಮೇಹಕ್ಕೆ ಕಾರಣವಾಗುತ್ತೆ ಎಂದು ಅಧ್ಯಯನವು ತಿಳಿಸಿದೆ. ಇಂತಹ ಪದಾರ್ಥಗಳ ಸೇವನೆಯ ವಿಚಾರವಾಗಿ ಮಧುಮೇಹಿಗಳು ಎಚ್ಚರಿಕೆ ವಹಿಸಬೇಕು.

    ಆಲೂಗಡ್ಡೆಯಲ್ಲಿ ಪೊಟ್ಯಾಸಿಯಮ್ ಮತ್ತು ಬಿ ವಿಟಮಿನ್‌ ಸಮೃದ್ಧವಾಗಿವೆ. ಮಧುಮೇಹ ಹೊಂದಿರುವವರು, ಆಲೂಗಡ್ಡೆಯ ಅಂಶವು ರಕ್ತದಲ್ಲಿನ ಗ್ಲೂಕೋಸ್ ಮಟ್ಟದ ಮೇಲೆ ಪರಿಣಾಮ ಬೀರುವ ವಿಚಾರವನ್ನು ಅರಿಯಬೇಕು. ಆಲೂಗಡ್ಡೆಗಳು ಹೆಚ್ಚಿನ ಕಾರ್ಬೋಹೈಡ್ರೇಟ್ ಆಹಾರವಾಗಿದ್ದು, ಅದು ರಕ್ತದಲ್ಲಿನ ಗ್ಲೂಕೋಸ್ ಮಟ್ಟದಲ್ಲಿ ಅಸಮತೋಲ ಉಂಟು ಮಾಡುತ್ತದೆ. ಇದನ್ನೂ ಓದಿ: ಈ ಕ್ರಮ ಅನುಸರಿಸಿದ್ರೆ ʼಆಲ್‌ಝೈಮರ್‌ʼ ರೋಗ ತಡೆಗಟ್ಟಬಹುದು

    ಮಧುಮೇಹಿಗಳು ಆಲೂಗಡ್ಡೆ ಸೇವಿಸುವಂತಿಲ್ಲವೇ?
    ಮಧುಮೇಹಿಗಳು ಸಂಪೂರ್ಣವಾಗಿ ಆಲೂಗಡ್ಡೆ ಸೇವಿಸುವುದನ್ನು ಬಿಡಬೇಕು ಅಂತಾ ಸಂಶೋಧನೆ ಹೇಳುವುದಿಲ್ಲ. ಮಿತ ಪ್ರಮಾಣದಲ್ಲಿ ಆಹಾರದಲ್ಲಿ ಆಲೂಗಡ್ಡೆ ಸೇರಿಸಿ ಸೇವಿಸುವುದು ಒಳಿತು. ತರಕಾರಿ ಜೊತೆ ನಿಗದಿತ ಪ್ರಮಾಣದಲ್ಲಿ ಆಲೂಗಡ್ಡೆಯನ್ನು ಸೇರಿಸಿ ತಿಂದರೆ ತೊಂದರೆಯಿಲ್ಲ ಎಂದು ಹೇಳುತ್ತದೆ ಸಂಶೋಧನೆ.

    Live Tv
    [brid partner=56869869 player=32851 video=960834 autoplay=true]

  • ಕೆಲವೇ ನಿಮಿಷಗಳಲ್ಲಿ ತಯಾರಿಸಬಹುದು ಟೇಸ್ಟಿ ಆಲೂಗಡ್ಡೆ ರವಾ ಫ್ರೈ

    ಕೆಲವೇ ನಿಮಿಷಗಳಲ್ಲಿ ತಯಾರಿಸಬಹುದು ಟೇಸ್ಟಿ ಆಲೂಗಡ್ಡೆ ರವಾ ಫ್ರೈ

    ಟಕ್ಕೆ ರುಚಿಕರವಾದ ಒಂದು ಸೈಡ್ ಡಿಶ್ ಅಥವಾ ಸಂಜೆಯ ಸ್ನ್ಯಾಕ್ಸ್‌ಗೆ ಫಟಾಫಟ್ ಅಂತ ಏನಾದರೂ ಮಾಡಬೇಕು. ಇಂತಹ ಸಮಯದಲ್ಲಿ ನೀವು ಆಲೂಗಡ್ಡೆ ರವಾ ಫ್ರೈ (Potato Rava Fry) ಮಾಡಬಹುದು. ಕೆಲವೇ ನಿಮಿಷಗಳಲ್ಲಿ ಮಾಡಬಹುದಾದ ಆಲೂಗಡ್ಡೆ ರವಾ ಫ್ರೈ ಊಟದ ರುಚಿ ಹೆಚ್ಚಿಸುತ್ತದೆ. ಆಲೂಗಡ್ಡೆ ರವಾ ಫ್ರೈ ಒಮ್ಮೆ ನೀವು ಕೂಡಾ ಮಾಡಿ ನೋಡಿ.

    ಬೇಕಾಗುವ ಪದಾರ್ಥಗಳು:
    ಆಲೂಗಡ್ಡೆ – 2-3
    ಎಣ್ಣೆ – ತವಾ ಫ್ರೈಗೆ ಬೇಕಾಗುವಷ್ಟು
    ಮ್ಯಾರಿನೇಟ್ ಮಾಡಲು:
    ಕೆಂಪು ಮೆಣಸಿನ ಪುಡಿ – 2-3 ಟೀಸ್ಪೂನ್
    ಅರಿಶಿನ – ಅರ್ಧ ಟೀಸ್ಪೂನ್
    ಹಿಂಗ್ – ಕಾಲು ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಲೇಪನಕ್ಕೆ:
    ರವೆ – 1 ಕಪ್
    ಮೆಣಸಿನ ಪುಡಿ – ಅರ್ಧ ಟೀಸ್ಪೂನ್
    ಉಪ್ಪು – ಅರ್ಧ ಟೀಸ್ಪೂನ್ ಇದನ್ನೂ ಓದಿ: ಸ್ಟಫ್ಡ್ ಹಾಗಲಕಾಯಿಯನ್ನು ಒಮ್ಮೆ ಮಾಡಿ ನೋಡಿ – ಮತ್ತೆಂದೂ ಈ ತರಕಾರಿ ಬೇಡ ಎನ್ನಲ್ಲ

    ಮಾಡುವ ವಿಧಾನ:
    * ಮೊದಲಿಗೆ ಆಲೂಗಡ್ಡೆಯ ಸಿಪ್ಪೆ ತೆಗೆದು, ತೆಳುವಾದ ಸ್ಲೈಸ್‌ಗಳಾಗಿ ಕತ್ತರಿಸಿ, ನೀರಿನಲ್ಲಿ ನೆನೆಸಿ.
    * ಮ್ಯಾರಿನೇಶನ್ ತಯಾರಿಸಲು ಒಂದು ಪಾತ್ರೆಯಲ್ಲಿ ಉಪ್ಪು, ಕೆಂಪು ಮೆಣಸಿನ ಪುಡಿ, ಅರಿಶಿನ, ಹಿಂಗ್ ಹಾಕಿ, ಸ್ವಲ್ಪ ನೀರು ಸೇರಿಸಿ, ದಪ್ಪನೆಯ ಪೇಸ್ಟ್ ತಯಾರಿಸಿ.
    * ನೆನೆಸಿಟ್ಟ ಆಲೂಗಡ್ಡೆಯನ್ನು ನೀರಿನಿಂದ ತೆಗೆದು, ಮ್ಯಾರಿನೇಶನ್ ಮಸಾಲೆಗೆ ಹಾಕಿ, ಮಿಶ್ರಣ ಮಾಡಿ. 15 ನಿಮಿಷ ಪಕ್ಕಕ್ಕಿಡಿ.

    * ಈಗ ಒಂದು ತಟ್ಟೆ ತೆಗೆದುಕೊಂಡು, ಅದಕ್ಕೆ ರವೆ, ಕೆಂಪು ಮೆಣಸಿನಪುಡಿ ಹಾಗೂ ಉಪ್ಪು ಹಾಕಿ ಮಿಶ್ರಣ ಮಾಡಿ ಪಕ್ಕಕ್ಕಿಡಿ.
    * ಈಗ ಆಲೂಗಡ್ಡೆ ಸ್ಲೈಸ್‌ಗಳನ್ನು ಒಂದೊಂದಾಗಿಯೇ ರವೆ ಮಿಶ್ರಣದಲ್ಲಿ ಹಾಕಿ, ಸಂಪೂರ್ಣ ಕೋಟ್ ಆಗುವಂತೆ ಲೇಪಿಸಿಕೊಳ್ಳಿ.
    * ತವಾದಲ್ಲಿ ಎಣ್ಣೆ ಬಿಸಿ ಮಾಡಿ, ಆಲೂಗಡ್ಡೆ ಸ್ಲೈಸ್‌ಗಳನ್ನು ಅದರಲ್ಲಿಟ್ಟು, ಫ್ರೈ ಮಾಡಿ.
    * ಆಲೂಗಡ್ಡೆ ತಿಳಿ ಗೋಲ್ಡನ್ ಬ್ರೌನ್ ಬಣ್ಣ ಹಾಗೂ ಗರಿಗರಿಯಾಗುವವರೆಗೆ ಕಡಿಮೆ ಉರಿಯಲ್ಲಿ ಎರಡೂ ಬದಿಯಲ್ಲಿ ಕಾಯಿಸಿ.
    * ಇದೀಗ ಆಲೂಗಡ್ಡೆ ರವಾ ಫ್ರೈ ತಯಾರಾಗಿದ್ದು, ಊಟ ಅಥವಾ ಸ್ನ್ಯಾಕ್ಸ್ ಆಗಿ ಸವಿಯಿರಿ. ಇದನ್ನೂ ಓದಿ: ದೇಸಿ ಮಸಾಲಾ ಸ್ವೀಟ್ ಕಾರ್ನ್ ಮನೆಯಲ್ಲೇ ಮಾಡಿ ನೋಡಿ

    Live Tv
    [brid partner=56869869 player=32851 video=960834 autoplay=true]

  • ರುಚಿಕರವಾದ ಆಲೂಗಡ್ಡೆ ದೋಸೆ ಒಮ್ಮೆ ಮಾಡಿ ನೋಡಿ

    ರುಚಿಕರವಾದ ಆಲೂಗಡ್ಡೆ ದೋಸೆ ಒಮ್ಮೆ ಮಾಡಿ ನೋಡಿ

    ರುಚಿಕರ ಮಾತ್ರವಲ್ಲದೇ ಆರೋಗ್ಯಕರ ಉಪಾಹಾರ ತಯಾರಿಸಲು ಎಲ್ಲರೂ ಇಷ್ಟಪಡುತ್ತಾರೆ. ಆದರೆ ಪ್ರತಿ ದಿನ ಬಗೆಬಗೆಯದ್ದು ಮಾಡುವುದು ಸವಾಲೇ ಸರಿ. ಇಂದು ನಾವು ಆಲೂಗಡ್ಡೆಯ ದೋಸೆ (Potato Dosa) ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ. ರುಚಿಕರವಾದ ಈ ದೋಸೆಯನ್ನು ಸಂಜೆಯ ತಿಂಡಿಯಾಗಿಯೂ ತಯಾರಿಸಬಹುದು. ಮಕ್ಕಳಂತೂ ಇದನ್ನು ಇಷ್ಟಪಟ್ಟು ತಿನ್ನುತ್ತಾರೆ.

    ಬೇಕಾಗುವ ಪದಾರ್ಥಗಳು:
    ಆಲೂಗಡ್ಡೆ – 3
    ಕಾರ್ನ್ ಫ್ಲೋರ್ – 2 ಟೀಸ್ಪೂನ್
    ಕಡಲೇ ಹಿಟ್ಟು – 2 ಟೀಸ್ಪೂನ್
    ಕರಿಮೆಣಸಿನ ಪುಡಿ – ಅರ್ಧ ಟೀಸ್ಪೂನ್
    ಜೀರಿಗೆ – ಅರ್ಧ ಟೀಸ್ಪೂನ್
    ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ – 1
    ಸಣ್ಣಗೆ ಹೆಚ್ಚಿದ ಸ್ಪ್ರಿಂಗ್ ಆನಿಯನ್ – 1 ಟೀಸ್ಪೂನ್
    ಉಪ್ಪು – ಅರ್ಧ ಟೀಸ್ಪೂನ್
    ಎಣ್ಣೆ – ಕಾಯಿಸಲು ಇದನ್ನೂ ಓದಿ: ಮೊಟ್ಟೆಯಿಲ್ಲದೆ ಮಾಡಿ ರುಚಿ ರುಚಿಯಾದ ವೆಜ್ ಬ್ರೆಡ್ ಆಮ್ಲೆಟ್

    ಮಾಡುವ ವಿಧಾನ:
    * ಮೊದಲಿಗೆ, ಆಲೂಗಡ್ಡೆಯ ಸಿಪ್ಪೆ ತೆಗೆದು, ತುರಿದುಕೊಳ್ಳಿ.
    * 5 ನಿಮಿಷಗಳ ಕಾಲ ತುರಿದ ಆಲೂಗಡ್ಡೆಯನ್ನು ನೀರಿನಲ್ಲಿ ನೆನೆಸಿಡಿ.
    * ಈಗ ತುರಿದ ಆಲೂಗಡ್ಡೆಯನ್ನು ಹಿಸುಕಿ ನೀರನ್ನು ಹರಿಸಿ.
    * ಈಗ ಕಾರ್ನ್ ಫ್ಲೋರ್ ಹಾಗೂ ಕಡಲೇ ಹಿಟ್ಟನ್ನು ಸೇರಿಸಿ. ಆಲೂಗಡ್ಡೆಯಲ್ಲಿ ತೇವಾಂಶ ಹೆಚ್ಚಿದ್ದರೆ ಇನ್ನಷ್ಟು ಸೇರಿಸಬಹುದು.

    * ಈಗ ಮಿಶ್ರಣಕ್ಕೆ ಕರಿಮೆಣಸಿನ ಪುಡಿ, ಜೀರಿಗೆ ಹಾಗೂ ಉಪ್ಪು ಸೇರಿಸಿ ಮಿಕ್ಸ್ ಮಾಡಿ.
    * ಈಗ ತವಾವನ್ನು ಬಿಸಿ ಮಾಡಿ, ಅದಕ್ಕೆ ಚಮಚದ ಸಹಾಯದಿಂದ ದೋಸೆ ಆಕಾರದಲ್ಲಿ ಆಲೂಗಡ್ಡೆ ಮಿಶ್ರಣವನ್ನು ತೆಳ್ಳಗೆ ಹರಡಿ.
    * ದೋಸೆಯ ಸುತ್ತಲೂ 1 ಟೀಸ್ಪೂನ್ ಎಣ್ಣೆ ಹಾಕಿ, ಮಧ್ಯಮ ಉರಿಯಲ್ಲಿ ಕಾಯಿಸಿ.
    * ದೋಸೆ ಗೋಲ್ಡನ್ ಬ್ರೌನ್ ಹಾಗೂ ಗರಿಗರಿಯಾಗುವತನಕ ಎರಡೂ ಬದಿಯಲ್ಲಿ ಬೇಯಿಸಿ.
    * ಇದೀಗ ಆಲೂಗಡ್ಡೆ ದೋಸೆ ತಯಾರಾಗಿದ್ದು, ನಿಮ್ಮಿಷ್ಟದ ಚಟ್ನಿಯೊಂದಿಗೆ ಸವಿಯಿರಿ. ಇದನ್ನೂ ಓದಿ: ಬಾದಾಮಿ ಕೇಕ್ ಮಾಡುವ ಸುಲಭ ವಿಧಾನ – ನೀವೊಮ್ಮೆ ಟ್ರೈಮಾಡಿ

    Live Tv
    [brid partner=56869869 player=32851 video=960834 autoplay=true]

  • ರುಚಿಕರವಾದ ಆಲೂಗಡ್ಡೆ ಮಂಚೂರಿಯನ್ ಮಾಡಿ ನೋಡಿದ್ದೀರಾ?

    ರುಚಿಕರವಾದ ಆಲೂಗಡ್ಡೆ ಮಂಚೂರಿಯನ್ ಮಾಡಿ ನೋಡಿದ್ದೀರಾ?

    ದೇಶಾದ್ಯಂತ ಸ್ಟ್ರೀಟ್ ಫುಡ್‌ಗೆ (Street food) ಮಂಚೂರಿಯನ್ (Manchurian) ಫೇಮಸ್. ಅದರಲ್ಲೂ ಗೋಬಿ ಮಂಚೂರಿಯನ್ ಇಷ್ಟ ಪಡದವರೇ ಇಲ್ಲವೇನೋ. ಇದೇ ರುಚಿಯನ್ನು ನಾವು ಬೇಬಿ ಕಾರ್ನ್, ಮಶ್ರೂಮ್‌ನಲ್ಲೂ ಸಾಮಾನ್ಯವಾಗಿ ನೋಡಿದ್ದೇವೆ. ಆದರೆ ಆಲೂಗಡ್ಡೆಯಿಂದ ಮಂಚೂರಿಯನ್ (Potato Manchurian) ಹೆಚ್ಚಿನವರು ಮಾಡಿ ಸವಿದಿರಲಿಕ್ಕಿಲ್ಲ. ಇಂದು ನಾವು ಆಲೂಗಡ್ಡೆಯಿಂದ ರುಚಿಕರವಾದ ಮಂಚೂರಿಯನ್ ಹೇಗೆ ಮಾಡುವುದು ಎಂದು ಹೇಳಿಕೊಡುತ್ತೇವೆ. ನೀವೂ ಮನೆಯಲ್ಲಿ ಟ್ರೈ ಮಾಡಿ ನೋಡಿ.

    ಬೇಕಾಗುವ ಪದಾರ್ಥಗಳು:
    ಬೇಯಿಸಲು:
    ನೀರು- 4 ಕಪ್
    ಉಪ್ಪು – 1 ಟೀಸ್ಪೂನ್
    ಮಧ್ಯಮ ಗಾತ್ರಕ್ಕೆ ಹೆಚ್ಚಿದ ಆಲೂಗಡ್ಡೆ – 2
    ಹುರಿಯಲು:
    ಮೈದಾ – ಅರ್ಧ ಕಪ್
    ಕಾರ್ನ್ ಫ್ಲೋರ್ – ಕಾಲು ಕಪ್
    ಶುಂಠಿ ಬೆಳ್ಳುಳ್ಳಿ ಪೇಸ್ಟ್ – ಅರ್ಧ ಟೀಸ್ಪೂನ್
    ಕಾಶ್ಮೀರಿ ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
    ಉಪ್ಪು – ಅರ್ಧ ಟೀಸ್ಪೂನ್
    ಎಣ್ಣೆ – 2 ಟೀಸ್ಪೂನ್
    ನೀರು – ಅರ್ಧ ಕಪ್
    ಎಣ್ಣೆ – ಡೀಪ್ ಫ್ರೈಗೆ

    ಮಂಚೂರಿಯನ್ ತಯಾರಿಸಲು:
    ಎಣ್ಣೆ – 4 ಟೀಸ್ಪೂನ್
    ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ – 2 ಎಸಳು
    ಸೀಳಿದ ಮೆಣಸಿನಕಾಯಿ – 1
    ಹೆಚ್ಚಿದ ಸ್ಪ್ರಿಂಗ್ ಆನಿಯನ್ – 2 ಟೀಸ್ಪೂನ್
    ಹೆಚ್ಚಿದ ಕ್ಯಾಪ್ಸಿಕಂ – ಅರ್ಧ
    ಹೆಚ್ಚಿದ ಈರುಳ್ಳಿ – ಅರ್ಧ
    ಟೊಮೆಟೊ ಸಾಸ್ – 2 ಟೀಸ್ಪೂನ್
    ವಿನೆಗರ್ – 1 ಟೀಸ್ಪೂನ್
    ಸೋಯಾ ಸಾಸ್ – 1 ಟೀಸ್ಪೂನ್
    ಚಿಲ್ಲಿ ಸಾಸ್ – 1 ಟೀಸ್ಪೂನ್
    ಕರಿಮೆಣಸಿನ ಪುಡಿ – ಕಾಲು ಟೀಸ್ಪೂನ್
    ಉಪ್ಪು – ಕಾಲು ಟೀಸ್ಪೂನ್
    ಸ್ಲರಿ ತಯಾರಿಸಲು:
    ಕಾರ್ನ್ ಫ್ಲೋರ್ – 1 ಟೀಸ್ಪೂನ್
    ನೀರು – ಕಾಲು ಕಪ್

    ಮಾಡುವ ವಿಧಾನ:
    * ಮೊದಲಿಗೆ ಒಂದು ದೊಡ್ಡ ಪಾತ್ರೆಯಲ್ಲಿ 4 ಕಪ್ ನೀರನ್ನು ಹಾಕಿ, ಅದಕ್ಕೆ 1 ಟೀಸ್ಪೂನ್ ಉಪ್ಪು ಹಾಕಿ ಕುದಿಸಿ.
    * ಕುದಿ ಬಂದ ಬಳಿಕ ಅದಕ್ಕೆ ಆಲೂಗಡ್ಡೆ ಹಾಕಿ 8 ನಿಮಿಷ ಬೇಯಿಸಿ.
    * ಈಗ ಆಲೂಗಡ್ಡೆಯನ್ನು ನೀರಿನಿಂದ ತೆಗೆದು ಆರಲು ಬಿಡಿ.
    * ಈಗ ಆಲೂಗಡ್ಡೆ ಫ್ರೈ ಮಾಡಲು ಒಂದು ಬಟ್ಟಲಿನಲ್ಲಿ ಮೈದಾ, ಕಾರ್ನ್ ಫ್ಲೋರ್, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಮೆಣಸಿನ ಪುಡಿ, ಉಪ್ಪು ಹಾಕಿ, ಅರ್ಧ ಕಪ್ ನೀರು ಸೇರಿಸಿ ಗಂಟಿಲ್ಲದಂತೆ ಹಿಟ್ಟು ತಯಾರಿಸಿ.
    * ಈಗ ಬೇಯಿಸಿದ ಆಲೂಗಡ್ಡೆಯನ್ನು ಹಿಟ್ಟಿನಲ್ಲಿ ಅದ್ದಿ, ಬಿಸಿ ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿ.
    * ಆಲೂಗಡ್ಡೆ ಗರಿಗರಿಯಾಗಿ ಗೋಲ್ಡನ್ ಬ್ರೌನ್ ಬಣ್ಣ ಬಂದ ಬಳಿಕ ಎಣ್ಣೆಯಿಂದ ತೆಗೆದು ಪಕ್ಕಕ್ಕೆ ಇರಿಸಿ.
    * ಈಗ ಒಂದು ಕಡಾಯಿ ತೆಗೆದುಕೊಂಡು, ಅದಕ್ಕೆ ಎಣ್ಣೆ, ಬೆಳ್ಳುಳ್ಳಿ, ಮೆಣಸಿನಕಾಯಿ, ಸ್ಪ್ರಿಂಗ್ ಆನಿಯನ್ ಹಾಗೂ ಕ್ಯಾಪ್ಸಿಕಂ ಹಾಕಿ ಫ್ರೈ ಮಾಡಿ.

    * ಕ್ಯಾಪ್ಸಿಕಂ ಹಾಗೂ ಈರುಳ್ಳಿ ಸ್ವಲ್ಪ ಕುಗ್ಗಿದ ಬಳಿಕ ಅದಕ್ಕೆ ಟೊಮೆಟೊ ಸಾಸ್, ವಿನೆಗರ್, ಸೋಯಾ ಸಾಸ್, ಚಿಲ್ಲಿ ಸಾಸ್, ಕರಿಮೆಣಸಿನ ಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಫ್ರೈ ಮಾಡಿ.
    * ಈಗ ಸಣ್ಣದೊಂದು ಬೌಲ್‌ನಲ್ಲಿ 1 ಟೀಸ್ಪೂನ್ ಕಾರ್ನ್ ಫ್ಲೋರ್ ಹಾಕಿ, ಅದಕ್ಕೆ ಕಾಲು ಕಪ್ ನೀರು ಸೇರಿಸಿ ದಪ್ಪನೆಯ ಸ್ಲರಿ ಮಿಶ್ರಣ ತಯಾರಿಸಿ.
    * ಈಗ ಹುರಿಯುತ್ತಿರುವ ಮಿಶ್ರಣಕ್ಕೆ ಸ್ಲರಿ ಸೇರಿಸಿ, ಮಿಕ್ಸ್ ಮಾಡಿ.
    * ಈಗ ಹುರಿದ ಆಲೂಗಡ್ಡೆಯನ್ನು ಅದಕ್ಕೆ ಹಾಕಿ, ನಿಧಾನವಾಗಿ ಮಿಶ್ರಣ ಮಾಡಿ.
    * ಇದೀಗ ರುಚಿಕರವಾದ ಆಲೂಗಡ್ಡೆ ಮಂಚೂರಿಯನ್ ತಯಾರಾಗಿದ್ದು, ಬಿಸಿಬಿಸಿಯಾಗಿ ಸವಿಯಿರಿ.

    Live Tv
    [brid partner=56869869 player=32851 video=960834 autoplay=true]

  • ಎಷ್ಟೊಂದು ರುಚಿಕರ ಆಲೂ ಟಿಕ್ಕಿ ಕಬಾಬ್

    ಎಷ್ಟೊಂದು ರುಚಿಕರ ಆಲೂ ಟಿಕ್ಕಿ ಕಬಾಬ್

    ಬಾಬ್ ಇಷ್ಟ ಪಡದವರು ಯಾರಿದ್ದಾರೆ? ಚಿಕನ್ ಮಾತ್ರವೇ ಕಬಾಬ್ ಪದಕ್ಕೆ ಮೀಸಲಾಗಿಲ್ಲ ಎಂಬುದನ್ನು ಎಲ್ಲರೂ ತಿಳಿದಿರಬೇಕು. ಏಕೆಂದರೆ ತರಕಾರಿಗಳನ್ನು ಬಳಸಿಯೂ ಕಬಾಬ್ ಮಾಡಬಹುದು. ಇದಕ್ಕೆ ಉದಾಹರಣೆಯೇ ಫೇಮಸ್ ಆಲೂ ಟಿಕ್ಕಿ ಕಬಾಬ್. ನಾನ್‌ವೆಜ್ ತಿನ್ನಲು ಸಾಧ್ಯವಾಗದ ದಿನಗಳಲ್ಲಿ ಆಲೂಗಡ್ಡೆಯಿಂದ ಕಬಾಬ್ ಮಾಡಿ. ರುಚಿಕರ ಹಾಗೂ ಸಿಂಪಲ್ ಆಲೂ ಟಿಕ್ಕಿ ಕಬಾಬ್ ರೆಸಿಪಿ ಇಲ್ಲಿದೆ.

    ಬೇಕಾಗುವ ಪದಾರ್ಥಗಳು:
    ಬೇಯಿಸಿದ ಆಲೂಗಡ್ಡೆ – 5
    ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 3 ಟೀಸ್ಪೂನ್
    ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ – 2
    ಕರಿಮೆಣಸಿನ ಪುಡಿ – 1 ಟೀಸ್ಪೂನ್
    ಎಣ್ಣೆ – 4 ಟೀಸ್ಪೂನ್
    ಸಣ್ಣಗೆ ಹೆಚ್ಚಿದ ಶುಂಠಿ – 1 ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು

    ಮಾಡುವ ವಿಧಾನ:
    * ಮೊದಲಿಗೆ ಆಲೂಗಡ್ಡೆಯನ್ನು ಚೆನ್ನಾಗಿ ಬೇಯಿಸಿ, ಗಂಟಿಲ್ಲದಂತೆ ಹಿಚುಕಿಡಿ.
    * ಒಂದು ಬಟ್ಟಲಿಗೆ ಬೇಯಿಸಿ, ಹಿಚುಕಿದ ಆಲೂಗಡ್ಡೆಯನ್ನು ತೆಗೆದುಕೊಂಡು, ಅದಕ್ಕೆ ಶುಂಠಿ, ಹಸಿರು ಮೆಣಸಿನಕಾಯಿ, ಕರಿಮೆಣಸಿನ ಪುಡಿ, ಉಪ್ಪು ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ.
    * ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ.
    * ಈಗ ಆಲೂಗಡ್ಡೆ ಮಿಶ್ರಣವನ್ನು ಮಧ್ಯಮ ಗಾತ್ರದ ಉಂಡೆಗಳನ್ನಾಗಿ ಮಾಡಿ, ಸ್ವಲ್ಪ ತಟ್ಟಿ, ಪ್ಯಾಟೀಗಳನ್ನಾಗಿ ಮಾಡಿ.
    * ಈಗ ಒಂದು ನಾನ್ ಸ್ಟಿಕ್ ಪ್ಯಾನ್ ತೆಗೆದುಕೊಂಡು, ಅದಕ್ಕೆ ಸ್ವಲ್ಪ ಎಣ್ಣೆಯನ್ನು ಹಾಕಿ.
    * ಆಲೂಗಡ್ಡೆ ಪ್ಯಾಟೀಗಳನ್ನು ಬಿಸಿಯಾದ ಎಣ್ಣೆಯಲ್ಲಿ ಹಾಕಿ, ಸಣ್ಣ ಉರಿಯಲ್ಲಿ ಹುರಿಯಲು ಬಿಡಿ.
    * ಪ್ಯಾಟೀಯ ಎರಡೂ ಬದಿಯಲ್ಲಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಫ್ರೈ ಮಾಡಿ.
    * ಇದೀಗ ಆಲೂ ಟಿಕ್ಕಿ ಕಬಾಬ್ ತಯಾರಾಗಿದ್ದು, ನಿಮಗಿಷ್ಟದ ಚಟ್ನಿ ಅಥವಾ ರಾಯಿತಾದೊಂದಿಗೆ ಸವಿಯಿರಿ.

    Live Tv
    [brid partner=56869869 player=32851 video=960834 autoplay=true]

  • ಬಾಯಿ ಚಪ್ಪರಿಸುವ ‘ಆಲೂ ಚಾಟ್’ ಮಾಡಿ ಸವಿಯಿರಿ

    ಬಾಯಿ ಚಪ್ಪರಿಸುವ ‘ಆಲೂ ಚಾಟ್’ ಮಾಡಿ ಸವಿಯಿರಿ

    ಲ್ಲೂಗೆಡ್ಡೆಯಲ್ಲಿ ಹೆಚ್ಚು ಚಾಟ್, ಚಿಪ್ಸ್‌ಗಳು ಬರುತ್ತಿದ್ದು, ಇದನ್ನು ಆಹಾರಪ್ರಿಯರು ಸವಿದು ಖುಷಿಪಡುತ್ತಿದ್ದಾರೆ. ಅದರಂತೆ ಇಂದು ವಿಶೇಷವಾಗಿ ಮತ್ತು ಸರಳವಾಗಿ ‘ಆಲೂ ಚಾಟ್’ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ಹೇಳಿಕೊಡಲಾಗುತ್ತೆ. ಈ ರೆಸಿಪಿ ಸರಳವಾಗಿದ್ದು, ರುಚಿಕರವಾಗಿದೆ.

    ಬೇಕಾಗುವ ಸಾಮಾಗ್ರಿಗಳು:
    * ಬೇಯಿಸಿದ ಆಲೂಗಡ್ಡೆ- 2(ಸಿಪ್ಪೆ ಸುಲಿಯಬೇಕು)
    * ರೆಡ್ ಚಿಲ್ಲಿ ಪೌಡರ್ – 1/2 ಟೀ ಸ್ಪೂನ್
    * ಜೀರಿಗೆ-ಕೊತ್ತಂಬರಿ ಪುಡಿ – 1/2 ಟೀಸ್ಪೂನ್
    * ಚಾಟ್ ಮಸಾಲಾ ಪೌಡರ್ – 1/2 ಟೀಸ್ಪೂನ್
    * ನಿಂಬೆ ರಸ – 1 ಟೀಸ್ಪೂನ್


    * ಸಣ್ಣದಾಗಿ ಕತ್ತರಿಸಿದ ಈರುಳ್ಳಿ – 1/4 ಕಪ್
    * ಹಸಿರು ಕೊತ್ತಂಬರಿ ಚಟ್ನಿ – 1 ಟೀಸ್ಪೂನ್
    * ಸಿಹಿ ಹುಣಸೆಹಣ್ಣಿನ ಚಟ್ನಿ – 1 ಟೀಸ್ಪೂನ್
    * ಮೊಸರು – 4 ಟೇಬಲ್ಸ್ಪೂನ್
    * ಸೆವ್ – 2 ಟೇಬಲ್ಸ್ಪೂನ್
    * ದಾಳಿಂಬೆ – 1 ಕಪ್
    * ಕತ್ತರಿಸಿದ ಕೊತ್ತಂಬರಿ ಸೋಪ್ಪು – 2 ಟೀಸ್ಪೂನ್
    * ರುಚಿಗೆ ಉಪ್ಪು ಮತ್ತು 2 ಟೇಬಲ್ಸ್ಪೂನ್ ಎಣ್ಣೆ ಇದನ್ನೂ ಓದಿ: ಸೋರೆಕಾಯಿಯಲ್ಲಿ ಮಾಡಿ ಸೂಪರ್ ರೆಸಿಪಿ ‘ಸ್ಟಫ್ಡ್ ಲೌಕಿ’

    ಮಾಡುವ ವಿಧಾನ:
    * ಫ್ರೈಯಿಂಗ್ ಪ್ಯಾನ್‍ಗೆ ಎಣ್ಣೆ ಹಾಕಿ ಬಿಸಿ ಮಾಡಿ. ಬೇಯಿಸಿದ ಆಲೂಗಡ್ಡೆ ದಪ್ಪ-ದಪ್ಪದಾಗಿ ಕತ್ತರಿಸಿ ಗೋಲ್ಡನ್ ಬ್ರೌನ್ ಬರುವವರೆಗೂ ಡೀಪ್ ಫ್ರೈ ಮಾಡಿ. ಆಲೂಗಡ್ಡೆ ಗೋಲ್ಡನ್ ಬ್ರೌನ್ ಬಂದ ಮೇಲೆ 4-5 ನಿಮಿಷಗಳು ತಣ್ಣಗಾಗಲು ಬಿಡಬೇಕು.

    * ಆಲೂಗಡ್ಡೆಯನ್ನು ದೊಡ್ಡ ಬಟ್ಟಲಿಗೆ ವರ್ಗಾಯಿಸಿ. ಅದಕ್ಕೆ 1/2 ಟೀಸ್ಪೂನ್ ಕೆಂಪು ಮೆಣಸಿನ ಪುಡಿ, 1/2 ಟೀಸ್ಪೂನ್ ಜೀರಿಗೆ, ಕೊತ್ತಂಬರಿ ಪುಡಿ ಮತ್ತು 1/2 ಟೀಸ್ಪೂನ್ ಚಾಟ್ ಮಸಾಲಾ ಪುಡಿಯನ್ನು ಸೇರಿಸಿ. 1 ಟೀಸ್ಪೂನ್ ನಿಂಬೆ ರಸವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಆಲೂಗಡ್ಡೆ ತುಂಡುಗಳನ್ನು ಮಸಾಲಾದೊಂದಿಗೆ ಚೆನ್ನಾಗಿ ಮಿಕ್ಸ್ ಮಾಡಿ.

    * 1 ಟೀಸ್ಪೂನ್ ಹಸಿರು ಕೊತ್ತಂಬರಿ ಚಟ್ನಿ, 1 ಟೀಸ್ಪೂನ್ ಸಿಹಿ ಹುಣಸೆಹಣ್ಣಿನ ಚಟ್ನಿ ಮತ್ತು 1/4 ಕಪ್ ಸಣ್ಣದಾಗಿ ಕೊಚ್ಚಿದ ಈರುಳ್ಳಿ ಸೇರಿಸಿ ಎಲ್ಲವನ್ನು ಸರಿಯಾಗಿ ಮಿಕ್ಸ್ ಮಾಡಿ. ಇದನ್ನೂ ಓದಿ: ಥಟ್ಟನೆ ಮಾಡಿ ಹೆಸರು ಬೇಳೆ ಚಾಟ್

    * ಈ ಮಿಶ್ರಣವನ್ನು ಒಂದು ಬೌಲ್ ಹಾಕಿಕೊಳ್ಳಿ. ಮೊಸರು ಇಷ್ಟ ಇದ್ದವರು ಆಲೂ ಚಾಟ್ ಮೇಲೆ ಹಾಕಿಕೊಂಡು ಅದರ ಮೇಲೆ ಸೇವ್, ಕೊತ್ತಂಬರಿ ಸೊಪ್ಪು ಮತ್ತು ದಾಳಿಂಬೆ ಹಣ್ಣನ್ನು ಹಾಕಿ ಅಲಂಕರಿಸಿ. ಕೊನೆಗೆ ಆಲೂ ಚಾಟ್ ಬಡಿಸಿ ಆನಂದಿಸಿ.

  • ಆಲೂಗಡ್ಡೆ, ಟೊಮೆಟೊ ಬೆಲೆ ಪರಿಶೀಲಿಸಲು ನಾನು ರಾಜಕೀಯ ಸೇರಿಲ್ಲ – ಪಾಕ್ ಪ್ರಧಾನಿ

    ಆಲೂಗಡ್ಡೆ, ಟೊಮೆಟೊ ಬೆಲೆ ಪರಿಶೀಲಿಸಲು ನಾನು ರಾಜಕೀಯ ಸೇರಿಲ್ಲ – ಪಾಕ್ ಪ್ರಧಾನಿ

    ಇಸ್ಲಾಮಾಬಾದ್: ಆಲೂಗಡ್ಡೆ, ಟೊಮೆಟೊ ಬೆಲೆಗಳನ್ನು ಪರಿಶೀಲಿಸಲು ನಾನು ರಾಜಕೀಯಕ್ಕೆ ಸೇರಲಿಲ್ಲ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಕಿಡಿಕಾರಿದ್ದಾರೆ.

    ಸಂಸತ್ತಿನಲ್ಲಿ ವಿರೋಧ ಪಕ್ಷಗಳು ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸಿದ್ದವು. ಈ ಕುರಿತಂತೆ ಪಂಜಾಬ್ ಪ್ರಾಂತ್ಯದ ಹಫೀಜಾಬಾದ್ ನಗರದಲ್ಲಿ ರಾಜಕೀಯ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಇಮ್ರಾನ್ ಖಾನ್, ಕೆಲವು ಶಾಸಕರು ಹಣದಿಂದ ಆತ್ಮಸಾಕ್ಷಿಯನ್ನು ಖರೀದಿಸಿ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದ್ದಾರೆ. ಈ ಅಂಶಗಳ ವಿರುದ್ಧ ರಾಷ್ಟ್ರ ನಿಲ್ಲುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾಗೆ ಕೊರೊನಾ

    ತಮ್ಮ ಅವಧಿಯಲ್ಲಿ ಪಾಕಿಸ್ತಾನವು ಶ್ರೇಷ್ಠ ದೇಶವಾಗಿದೆ. ತಮ್ಮ ಸರ್ಕಾರ ಘೋಷಿಸುತ್ತಿದ್ದಂತೆಯೇ ಶೀಘ್ರದಲ್ಲೇ ಅದರ ಫಲಿತಾಂಶಗಳು ದೊರೆಯಲಿದೆ. 25 ವರ್ಷಗಳ ಹಿಂದೆ ದೇಶದ ಯುವಕರ ಹಿತದೃಷ್ಟಿಯಿಂದ ನಾನು ರಾಜಕೀಯಕ್ಕೆ ಸೇರಲು ನಿರ್ಧರಿಸಿದೆ. ಜೀವನದಲ್ಲಿ ಒಬ್ಬ ವ್ಯಕ್ತಿ ಕಾಣುವ ಎಲ್ಲ ಕನಸನ್ನು ನಾನು ಹೊಂದಿದ್ದೇನೆ. ಆದರೆ ಅದರಿಂದ ನನಗೆ ಯಾವುದೇ ವೈಯಕ್ತಿಕ ಲಾಭವಿಲ್ಲ ಎಂದು ತಿಳಿಸಿದ್ದಾರೆ.

    tomato

    ಆಲೂಗಡ್ಡೆ ಮತ್ತು ಟೊಮೆಟೊ ಬೆಲೆಗಳನ್ನು ತಿಳಿಯಲು ನಾನು ರಾಜಕೀಯಕ್ಕೆ ಸೇರಲಿಲ್ಲ. ದೇಶದ ಯುವಜನತೆಗಾಗಿ ನಾನು ರಾಜಕೀಯಕ್ಕೆ ಸೇರಿಕೊಂಡೆ. ನಾವು ದೇಶದ ಮಹಾನ್ ವ್ಯಕ್ತಿಯಾಗಬೇಕಾದರೆ, ಸತ್ಯವನ್ನು ಬೆಂಬಲಿಸಬೇಕು. ನಾನು ಕಳೆದ 25 ವರ್ಷಗಳಿಂದ ಇದನ್ನೇ ಹೇಳುತ್ತಿದ್ದೇನೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕ್ಷಿಪಣಿ ಬಗ್ಗೆ ಭಾರತಕ್ಕೆ ಪ್ರತ್ಯುತ್ತರ ನೀಡೋ ಬದಲು ಪಾಕಿಸ್ತಾನ ಸಂಯಮ ಬಯಸುತ್ತೆ: ಇಮ್ರಾನ್ ಖಾನ್

  • ಐಸ್ ಕ್ಯಾಂಡಿ ಇಡ್ಲಿ ಬಳಿಕ ವೈರಲ್ ಆಗ್ತಿದೆ ಇಡ್ಲಿ ವಡಾಪಾವ್

    ಐಸ್ ಕ್ಯಾಂಡಿ ಇಡ್ಲಿ ಬಳಿಕ ವೈರಲ್ ಆಗ್ತಿದೆ ಇಡ್ಲಿ ವಡಾಪಾವ್

    ತ್ತೀಚೆಗಷ್ಟೇ ಐಸ್ ಕ್ಯಾಂಡಿ ಇಡ್ಲಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಇಡ್ಲಿ ವಡಾ ಪಾವ್‍ನ ಫೋಟೋ ವೈರಲ್ ಆಗುತ್ತಿದೆ.

    ಸುರೇಶ್ ರೈ ಧೀಮಾನ್ ಎಂಬವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ಇಡ್ಲಿಯನ್ನು ಪಾವ್‍ನಂತೆ ಉರಿದು, ಅದರ ಮಧ್ಯದಲ್ಲಿ ಆಲೂಗಡ್ಡೆ ಸ್ಟಫಿಂಗ್ ಜೊತೆ ಕೆಂಪು ಮಸಾಲ ಬೆರೆಸಿ ತುಂಬಿರುವುದನ್ನು ಕಾಣಬಹುದಾಗಿದೆ.

    ಇಡ್ಲಿ ದಕ್ಷಿಣ ಭಾರತದಲ್ಲಿ ಹುಟ್ಟಿಕೊಂಡ ಖಾದ್ಯವಾಗಿದ್ದು, ಇದನ್ನು ಸಾಮಾನ್ಯವಾಗಿ ಸಾಂಬಾರ್ ಮತ್ತು ಚಟ್ನಿ ಜೊತೆಗೆ ಜನ ಸವಿಯುತ್ತಾ ಆನಂದಿಸುತ್ತಾರೆ. ಇನ್ನೂ ವಡಾಪಾವ್ ಮಹಾರಾಷ್ಟ್ರದ ಸ್ಥಳೀಯ ಆಹಾರ ಭಕ್ಷ್ಯವಾಗಿದ್ದು, ಈ ಎರಡರ ಮಧ್ಯೆ ಸ್ಪೈಸಿ ಆಲೂಗಡ್ಡೆ ಸ್ಟಫಿಂಗ್ ಅನ್ನು ತುಂಬಿ ಕೆಂಪು ಚಟ್ನಿ ಹಾಗೂ ಪಾನಿಯರಮ್ ಜೊತೆಗೆ ಬಡಿಸಿರುವುದನ್ನು ಫೋಟೋದಲ್ಲಿ ಕಾಣಬಹುದಾಗಿದೆ. ಇದೀಗ ಈ ದಕ್ಷಿಣ ಭಾರತದಲ್ಲಿ ಜನಪ್ರಿಯವಾಗುತ್ತಿದೆ.

    ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಇಡ್ಲಿ ವಡಾಪಾವ್ ನೋಡಿ ಫಿದಾ ಆಗಿದ್ದು, ಹಲವಾರು ರೀತಿ ಕಾಮೆಂಟ್‍ಗಳನ್ನು ಮಾಡುತ್ತಿದ್ದಾರೆ. ಇದನ್ನೂ ಓದಿ: ಟ್ರೆಂಡಿಂಗ್ ಆಯ್ತು ಬೆಂಗಳೂರು ಹೋಟೆಲಿನ ಐಸ್ ಕ್ಯಾಂಡಿ ಇಡ್ಲಿ

    ಇತ್ತೀಚೆಗಷ್ಟೇ ಮಹೀಂದ್ರಾ ಕಂಪನಿ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಐಸ್ ಕ್ಯಾಂಡಿ ಇಡ್ಲಿ ಫೋಟೋವನ್ನು ತಮ್ಮ ಟ್ವಿಟ್ಟರ್‍ನಲ್ಲಿ ಹಂಚಿಕೊಂಡು, ಬೆಂಗಳೂರು ಭಾರತದ ಇನೋವೇಶನ್ ಕ್ಯಾಪಿಟಲ್, ಹಲವು ಅನಿರೀಕ್ಷಿತ ವಲಯಗಳಲ್ಲಿ ಇದರ ಕ್ರಿಯೇಟಿವಿಟಿಯನ್ನು ತಡೆಯಲು ಎಂದಿಗೂ ಸಾಧ್ಯವಿಲ್ಲ. ಐಸ್ ಕಡ್ಡಿಯ ಮೇಲೆ ಇಡ್ಲಿ, ಸಾಂಬಾರ್ ಹಾಗೂ ಚಟ್ನಿಯಲ್ಲಿ ಅದ್ದಿಕೊಂಡು ತಿನ್ನುವುದು. ಯಾರು ಇದರ ಪರವಾಗಿದ್ದೀರಿ, ಯಾರು ಇದರ ವಿರುದ್ಧವಾಗಿದ್ದೀರಿ ಎಂದು ಕ್ಯಾಪ್ಷನ್‍ನಲ್ಲಿ ಬರೆಯುವ ಮೂಲಕ ಪ್ರಶ್ನಿಸಿದ್ದರು.

    ಹೀಗೆ ಪ್ರಶ್ನಿಸುತ್ತಿದ್ದಂತೆ ಹಲವರು ವಿವಿಧ ರೀತಿಯಲ್ಲಿ ಜನರು ತಮ್ಮ ಅಭಿಪ್ರಾಯ ತಿಳಿಸಿದ್ದರು. ಅಲ್ಲದೇ ಈ ಇಡ್ಲಿ ಕುರಿತು ದೇಶಾದ್ಯಂತ ಚರ್ಚೆ ನಡೆದಿತ್ತು ಮತ್ತು ಪರ ವಿರೋಧದ ಕಾಮೆಂಟ್‍ಗಳು ಕೂಡ ಹರಿದು ಬಂದಿತ್ತು. ಇದನ್ನೂ ಓದಿ: ಬಿಸಿಯಾದ ನವಣೆ ಉಪ್ಪಿಟ್ಟು ಮಾಡಿ ಸವಿಯಿರಿ

  • ಆಲೂಗಡ್ಡೆಯಿಂದ ತಯಾರಿಸಿ ರುಚಿಯಾದ ಬೆಳಗ್ಗಿನ ಟಿಫನ್

    ಆಲೂಗಡ್ಡೆಯಿಂದ ತಯಾರಿಸಿ ರುಚಿಯಾದ ಬೆಳಗ್ಗಿನ ಟಿಫನ್

    ದಿನಾ ಬೆಳಗೆದ್ದು ಇವತ್ತು ಏನ್ ತಿಂಡಿ ಮಾಡೋದು ಎಂದು ಯೋಚನೆ ಮಾಡೋರು ಹಲವರು. ಹೀಗಾಗಿ ಇಂದು ನಿಮಗೆ ಸ್ಪೆಷಲ್ ಹಾಗೂ ತುಂಬಾನೆ ರುಚಿಯಾದ ತಿಂಡಿ ಮಾಡುವ ಬಗೆಯನ್ನು ಇಲ್ಲಿ ನೀಡಲಾಗಿದೆ. ಆಲೂಗಡ್ಡೆಯಿಂದ ತುಂಬಾ ಸುಲಭವಾಗಿ ಮಾಡುವ ಹಾಗೂ ಚೀಸ್ ರಹಿತ ಹ್ಯಾಷ್ ಬ್ರೌನ್ ರೆಸಿಪಿಯನ್ನು ಇಲ್ಲಿ ವಿವರಿಸಲಾಗಿದೆ.

    ಬೇಕಾಗುವ ಸಾಮಗ್ರಿಗಳು:
    ತುರಿದುಕೊಂಡ ಆಲೂಗಡ್ಡೆ – 3
    ಕಾಳು ಮೆಣಸಿನ ಪುಡಿ – ಅರ್ಧ ಚಮಚ
    ಮೊಟ್ಟೆ- 2
    ಮೈದಾ ಹಿಟ್ಟು – ಅರ್ಧ ಕಪ್
    ರೆಡ್ ಚಿಲ್ಲಿ ಫ್ಲೇಕ್ಸ್ – ಅರ್ಧ ಚಮಚ
    ಕೊತ್ತಂಬರಿ ಸೊಪ್ಪು- ಸ್ವಲ್ಪ
    ಎಣ್ಣೆ – ಸ್ವಲ್ಪ
    ಉಪ್ಪು- ರುಚಿಗೆ ತಕ್ಕಷ್ಟು

    ಮಾಡುವ ವಿಧಾನ:
    * ಈಗಾಗಲೇ ತುರಿದುಕೊಂಡಿರುವ ಆಲೂಗಡ್ಡೆಯನ್ನು ಮೊದಲು ತಣ್ಣೀರಿನಲ್ಲಿ ತೊಳೆಯಿರಿ.
    * ನಂತರ ಒಂದು ಬಟ್ಟೆಯಲ್ಲಿ ತೊಳೆದ ಆಲೂಗಡ್ಡೆಯ ತುರಿಯನ್ನು ಹಾಕಿ ನೀರನ್ನು ಸರಿಯಾಗಿ ಹಿಂಡಿ ತೆಗೆಯಿರಿ. ಬಳಿಕ ಒಂದು ಪಾತ್ರೆಗೆ ಹಾಕಿ ಮೈದಾ ಹಿಟ್ಟನ್ನು ಹಾಕಿ.
    * ಮೊಟ್ಟೆಯನ್ನು ಒಡೆದು ರುಚಿಗೆ ತಕ್ಕಷ್ಟು ಉಪ್ಪು, ಕಾಳು ಮೆಣಸಿನ ಪುಡಿ, ಚಿಲ್ಲಿ ಫ್ಲೇಕ್ಸ್ ಹಾಗೂ ಕೊತ್ತಂಬರಿ ಸೊಪ್ಪನ್ನು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದನ್ನೂ ಓದಿ: ಗರಿ ಗರಿಯಾದ ಸಬ್ಬಕ್ಕಿ ವಡೆ ಮಾಡಿ

    * ಇತ್ತ ಒಂದು ಬಾಣಲೆಯಲ್ಲಿ 2 ದೊಡ್ಡ ಚಮಚ ಎಣ್ಣೆ ಬಿಸಿ ಮಾಡಿಕೊಂಡು ಅದರ ಮೇಲೆ ಈಗಾಗಲೇ ತಯಾರಿಸಿದ ಹಿಟ್ಟನ್ನು ಹರಡಿ. ನಂತರ ಮುಚ್ಚಳ ಮುಚ್ಚಿ ಎರಡೂ ಕಡೆ ಮಧ್ಯಮ ಉರಿಯಲ್ಲಿ ಚೆನ್ನಾಗಿ ಬೇಯಿಸಿ.
    * ಉಳಿದ ಹಿಟ್ಟಿನಿಂದಲೂ ಹೀಗೆಯೇ ಹ್ಯಾಷ್ ಬ್ರೌನ್ ಮಾಡಿಕೊಳ್ಳಿ. ಇದನ್ನು ಟೊಮೇಟೊ ಕೆಚಪ್ ಜೊತೆ ಸವಿಯಿರಿ.

  • ಆಲೂ ಪರೋಟ ಮಾಡಿ ಸಂಜೆಯ ತಿಂಡಿ ಸವಿಯಿರಿ

    ಆಲೂ ಪರೋಟ ಮಾಡಿ ಸಂಜೆಯ ತಿಂಡಿ ಸವಿಯಿರಿ

    ನಿತ್ಯವೂ ಒಂದೇ ಬಗೆಯ ಆಹಾರವನ್ನು ನಾವು ಸೇವಿಸಲಾರೆವು ಮತ್ತು ಬೇರೆ ಬೇರೆ ರುಚಿಗಳನ್ನು ನಾಲಗೆಗೆ ಬಯಸುತ್ತದೆ. ಮಾಂಸಾಹಾರವೇ ಆಗಿರಲಿ ಸಸ್ಯಾಹಾರವೇ ಆಗಿರಲಿ ನಾವಂತೂ ಬಾಯಲ್ಲಿ ನೀರೂರಿಸುವ ಖಾದ್ಯಗಳ ರುಚಿ ಸವಿಯಲು ಯಾವಾಗಲೂ ತಯಾರಾಗಿರುತ್ತೇವೆ. ಹೀಗಾಗಿ ಇಲ್ಲಿ ಸುಲಭವಾಗಿ ಆಲೂ ಪರೋಟ ಮಾಡುವ ವಿಧಾನವನ್ನು ತಿಳಿಸಲಾಗಿದೆ.

    ಬೇಕಾಗುವ ಸಾಮಗ್ರಿಗಳು:
    * ಆಲೂಗಡ್ಡೆ- 4
    * ಹಸಿಮೆಣಸು – 4 ರಿಂದ 5
    * ಮೆಣಸಿನ ಹುಡಿ – 2 ಟೀ ಸ್ಪೂನ್
    * ಅಮೆಚೂರ್ ಹುಡಿ 2 ರಿಂದ 3 ಟೀ ಸ್ಪೂನ್
    * ಕೊತ್ತಂಬರಿ ಸೊಪ್ಪು
    * ಉಪ್ಪು ರುಚಿಗೆ ತಕ್ಕಷ್ಟು
    * ಎಣ್ಣೆ ಅಥವಾ ತುಪ್ಪ
    * ಗೋಧಿ ಹಿಟ್ಟು- 2ಕಪ್

    ಮಾಡುವ ವಿಧಾನ:
    * ಮೊದಲಿಗೆ ಆಲೂಗಡ್ಡೆಯನ್ನು ಬೇಯಿಸಿ ಸಿಪ್ಪೆ ಸುಲಿದಿಟ್ಟುಕೊಳ್ಳಿ. ನಂತರ ಅದನ್ನು ಚೆನ್ನಾಗಿ ಹಿಸುಕಿ ಹಸನಾಗಿಸಿಕೊಳ್ಳಬೇಕು.

    * ಇದೀಗ ಸಣ್ಣಗೆ ಹೆಚ್ಚಿದ ಹಸಿಮೆಣಸನ್ನು, ಗರಂ ಮಸಾಲಾ ಪೌಡರ್, ಮೆಣಸಿನ ಹುಡಿ, ಅಮೆಚೂರ್ ಹುಡಿ ಮತ್ತು ಉಪ್ಪನ್ನು ಆಲೂ ಪಲ್ಯಕ್ಕೆ ಸೇರಿಸಿ, ಬೇಕಾದಲ್ಲಿ ಕರಿಬೇವು ಮತ್ತು ಸಣ್ಣಗೆ ಹೆಚ್ಚಿನ ಈರುಳ್ಳಿಯನ್ನು ಆಲೂ ಜೊತೆಗೆ ಮಿಶ್ರ ಮಾಡಿಕೊಳ್ಳಿ.

    * ನಂತರ ಮತ್ತೊಂದು ಪಾತ್ರೆಯಲ್ಲಿ, ಗೋಧಿ ಹಿಟ್ಟನ್ನು ತೆಗೆದುಕೊಂಡು ಉಪ್ಪು ಎಣ್ಣೆ ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ. ಸ್ವಲ್ಪ ಸಮಯ ಕಲಸಿದ ಹಿಟ್ಟನ್ನು ಹಾಗೆಯೇ ತೆಗೆದಿಡಿ.

    * ಮೊದಲಿಗೆ ನಾದಿದ ಚಪಾತಿ ಹಿಟ್ಟನ್ನು ಪೂರಿ ಗಾತ್ರಕ್ಕೆ ಲಟ್ಟಿಸಿಕೊಳ್ಳಿ.
    * ನಂತರ ಮಧ್ಯಭಾಗಕ್ಕೆ ಆಲೂ ಪಲ್ಯವನ್ನಿಟ್ಟು ನಾಲ್ಕೂ ಭಾಗ ಮಡಚಿಕೊಳ್ಳಿ. 2. ಸ್ವಲ್ಪ ಗೋಧಿ ಹಿಟ್ಟನ್ನು ತೆಗೆದುಕೊಂಡು ಕಲಸಿದ ಉಂಡೆಯನ್ನು ಲಟ್ಟಿಸಿಕೊಳ್ಳಿ ಆದಷ್ಟು ಮೃದುವಾಗಿ ಲಟ್ಟಿಸಿ. ಬಿರುಸಾಗಿ ಲಟ್ಟಿಸಿದಲ್ಲಿ ಪಲ್ಯ ಹೊರಕ್ಕೆ ಬರಬಹುದು.

    * ಗ್ಯಾಸ್‍ನಲ್ಲಿ ಮೇಲೆ ತವಾ ಇಟ್ಟುಕೊಂಡು ಸ್ವಲ್ಪ ಎಣ್ಣೆ ಹಾಕಿ. ತವಾ ಕಾಯುತ್ತಿದ್ದಂತೆ ನಿಧಾನವಾಗಿ ಲಟ್ಟಿಸಿದ ಪರೋಟಾವನ್ನು ತವಾದಲ್ಲಿರಿಸಿ. ಬೇಕಾದಷ್ಟು ಎಣ್ಣೆಯನ್ನು ಹಾಕಿ ಎರಡೂ ಬದಿ ಚೆನ್ನಾಗಿ ಬೇಯಿಸಿದರೆ ರುಚಿಯಾದ ಪರೋಟ ಸವಿಯಲು ಸಿದ್ಧವಾಗುತ್ತದೆ.