Tag: ಆಲಿಯಾ ಸಿದ್ದಿಕಿ

  • ಮತ್ತೆ ಪತಿ ಜೊತೆ ಒಂದಾಗುವ ಸೂಚನೆ ನೀಡಿದ ಆಲಿಯಾ ಸಿದ್ದಿಕಿ

    ಮತ್ತೆ ಪತಿ ಜೊತೆ ಒಂದಾಗುವ ಸೂಚನೆ ನೀಡಿದ ಆಲಿಯಾ ಸಿದ್ದಿಕಿ

    ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ (Nawazuddin Siddiqui) ಮತ್ತು ಆಲಿಯಾ ಸಿದ್ದಿಕಿ (Aaliya Siddiqui) ಸಂಸಾರದ ರಂಪಾಟ ಕಳೆದ ವರ್ಷ ಭಾರೀ ಸುದ್ದಿಯಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಲೈವ್‌ಗೆ ಬಂದು ಪತಿ ಬಗ್ಗೆ ಆಲಿಯಾ ದೂರಿನ ಪಟ್ಟಿಯನ್ನೇ ಇಟ್ಟಿದ್ದರು. ಪತಿ ನವಾಜುದ್ದೀನ್ ಸಿದ್ದಿಕಿ ಜೊತೆ ಆಲಿಯಾ ಒಂದಾಗುವ ಸುಳಿವು ನೀಡಿದ್ದಾರೆ.

    ಇದೀಗ ಆಲಿಯಾ ಸಿದ್ದಿಕಿ ಮದುವೆಯಾಗಿ 14 ವರ್ಷ ಪೂರೈಸಿದ್ದು, ಇದೀಗ ಪತಿಗೆ ವಿಶೇಷವಾಗಿ ಶುಭಕೋರಿದ್ದಾರೆ. 14 ವರ್ಷಗಳ ದಾಂಪತ್ಯದ ಸಂಭ್ರಮ ಎಂದು ಅಡಿಬರಹ ನೀಡಿ, ಪತಿ ಮತ್ತು ಮಕ್ಕಳ ಜೊತೆಗಿನ ಫ್ಯಾಮಿಲಿ ಫೋಟೋ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ನನಗೂ ನಟಿಸೋಕೆ ಅವಕಾಶ ಕೊಡಿ: ಆಶಿಷ್ ವಿದ್ಯಾರ್ಥಿ ಅಳಲು

    ಇಬ್ಬರ ದಾಂಪತ್ಯ ಸರಿಯಿಲ್ಲ (Wedding) ಎಂಬುದು ಕಳೆದ ವರ್ಷ ಬೆಳಕಿಗೆ ಬಂದಿತ್ತು. ಪತಿ ಜೊತೆಗಿನ ಮನಸ್ತಾಪದ ಬಳಿಕ ಮಕ್ಕಳ ಜೊತೆ ಆಲಿಯಾ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಇದೀಗ ಆ್ಯನಿವರ್ಸರಿ ಕುರಿತು ಪೋಸ್ಟ್ ಶೇರ್ ಮಾಡುತ್ತಿದ್ದಂತೆ, ಇಬ್ಬರೂ ಒಂದಾಗುವ ಸೂಚನೆ ಕೊಟ್ಟಿದ್ದಾರೆ ಎಂದು ಅಭಿಮಾನಿಗಳು ಖುಷಿಪಡುತ್ತಿದ್ದಾರೆ.

    ಕಳೆದ ವರ್ಷ ಡಿವೋರ್ಸ್‌ಗಾಗಿ ಕೋರ್ಟ್ ಮೆಟ್ಟಿಲೇರಿದ್ದರು ನವಾಜುದ್ದೀನ್- ಆಲಿಯಾ ಜೋಡಿ. ಆದರೆ ಈಗ ಮಕ್ಕಳಿಗಾಗಿ ಒಂದಾಗುವ ಸುಳಿವು ನೀಡಿದ್ದಾರೆ. ಈ ಸುದ್ದಿ ನಿಜನಾ? ಇಬ್ಬರ ಕಡೆಯಿಂದ ಅಧಿಕೃತ ಮಾಹಿತಿ ಸಿಗುವವರೆಗೂ ಕಾಯಬೇಕಿದೆ.

  • ಬಿಗ್ ಬಾಸ್ ಮೇಲೆ ಪಕ್ಷಪಾತ ಆರೋಪ : ಸಲ್ಮಾನ್ ವಿರುದ್ಧ ತಿರುಗಿ ಬಿದ್ದ ಆಲಿಯಾ

    ಬಿಗ್ ಬಾಸ್ ಮೇಲೆ ಪಕ್ಷಪಾತ ಆರೋಪ : ಸಲ್ಮಾನ್ ವಿರುದ್ಧ ತಿರುಗಿ ಬಿದ್ದ ಆಲಿಯಾ

    ಬಿಗ್ ಬಾಸ್ (Big Boss) ಶೋ ಮೇಲೆಯೇ ಪಕ್ಷಪಾತದ ಆರೋಪ ಮಾಡಿದ್ದಾರೆ ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿದ್ದ ಸ್ಪರ್ಧಿ ಆಲಿಯಾ ಸಿದ್ದಿಕಿ (Alia Siddiqui). ಅವರು ನೇರವಾಗಿ ಸಲ್ಮಾನ್ ಖಾನ್ ಮೇಲೆಯೇ ಗೂಬೆ ಕೂರಿಸಿದ್ದು, ನನ್ನೊಳಗಿನ ಹಲವು ಸತ್ಯಗಳು ಆಚೆ ಬರುತ್ತಿದ್ದವು. ಅದು ಸಲ್ಮಾನ್ ಖಾನ್ ಗೆ ಇಷ್ಟವಿರಲಿಲ್ಲ. ಹಾಗಾಗಿ ಎರಡನೇ ವಾರಕ್ಕೆ ನನ್ನನ್ನು ಮನೆಯಿಂದ ಆಚೆ ಹಾಕಿದರು ಎಂದು ನೇರವಾಗಿಯೇ ಆರೋಪ ಮಾಡಿದ್ದಾರೆ.

    ಆಲಿಯಾ ಸಿದ್ದಿಕಿ ಬಾಲಿವುಡ್ ಖ್ಯಾತ ನಟ ನವಾಜುದ್ದೀನ್ ಸಿದ್ದಿಕಿ (Nawazuddin Siddiqui) ಅವರ ಮಾಜಿ ಪತ್ನಿ. ನವಾಜುದ್ದೀನ್ ಅವರು ಸಲ್ಮಾನ್ ಖಾನ್ (Salman Khan)ಗೆ ತೀರಾ ಆಪ್ತರು. ಬಿಗ್ ಬಾಸ್ ಮನೆಯಲ್ಲಿ ಪತಿ ನವಾಜುದ್ದೀನ್ ಬಗ್ಗೆ ಹಲವಾರು ವಿಚಾರಗಳನ್ನು ಮಾತನಾಡುವುದಕ್ಕೆ ಶುರು ಮಾಡಿದ್ದರು. ತಮ್ಮ ಪತಿ ಎಂಥವರು ಎನ್ನುವ ವಿಚಾರವನ್ನು ಹೇಳಿಕೊಳ್ಳಲು ಹೊರಟಿದ್ದರು. ಅದನ್ನು ತಡೆಯುವುದಕ್ಕಾಗಿಯೇ ತಮ್ಮನ್ನು ಮನೆಯಿಂದ ಆಚೆ ಹಾಕಲಾಗಿದೆ ಎಂದು ಆಲಿಯಾ ಮಾತನಾಡಿದ್ದಾರೆ. ಇದನ್ನೂ ಓದಿ:ಮಲಯಾಳಂ ಖ್ಯಾತ ನಟ ಮೋಹನ್ ಲಾಲ್ ಜೊತೆ ಕನ್ನಡಿಗ ಡ್ಯಾನಿಶ್ ನಟನೆ

    ನವಾಜುದ್ದೀನ್ ಜೊತೆಗಿನ ಬಾಂಧವ್ಯವನ್ನು ಮುರಿದುಕೊಂಡು ಆಲಿಯಾ ದೂರವಿದ್ದಾರೆ. ಈಗಾಗಲೇ ಪತಿಯ ಬಗ್ಗೆ ಸಾಕಷ್ಟು ಆರೋಪಗಳನ್ನು ಮಾಡಿದ್ದಾರೆ. ಕೋರ್ಟ್ ಮೆಟ್ಟಿಲು ಕೂಡ ಏರಿದ್ದಾರೆ. ಅವೆಲ್ಲವನ್ನೂ ಆಲಿಯಾ ದೊಡ್ಮನೆಯಲ್ಲಿ ಹೇಳಿಕೊಳ್ಳುತ್ತಿದ್ದರು. ಮೊದಲ ದಿನವೇ ಒಂದಷ್ಟು ಸಂಗತಿಗಳನ್ನು ಬಹಿರಂಗ ಪಡಿಸಿದ್ದರು. ಇನ್ನೂ ಹಲವು ವಿಷಯಗಳನ್ನು ಹಂಚಿಕೊಳ್ಳುವುದಾಗಿಯೂ ಅವರು ತಿಳಿಸಿದ್ದರು.

    ನವಾಜುದ್ದೀನ್ ವಿಷಯಗಳು ಆಚೆ ಬರುತ್ತವೆ ಎನ್ನುವ ಕಾರಣದಿಂದಾಗಿಯೇ ಸಲ್ಮಾನ್ ಖಾನ್ ಮಧ್ಯ ಪ್ರವೇಶ ಮಾಡಿ ತಮ್ಮನ್ನು ಮನೆಯಿಂದ ಹೊರ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಂತ ನಾನು ಸುಮ್ಮನೆ ಇರಲಾರೆ. ಆಚೆ ಬಂದರೂ, ನನ್ನ ಜೀವನದಲ್ಲಿ ನಡೆದ ಸಂಗತಿಗಳನ್ನು ತಿಳಿಸುತ್ತಲೇ ಇರುತ್ತೇನೆ ಅಂದಿದ್ದಾರೆ ಆಲಿಯಾ. ಇಂತಹ ಪಕ್ಷಪಾತಗಳು ಶೋಗಳಲ್ಲಿ ಇರಬಾರದು ಎಂದು ಅವರು ಸಲಹೆಯನ್ನೂ ನೀಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಾಜಿ ಪತ್ನಿ, ಸಹೋದರನ ವಿರುದ್ಧ 100 ಕೋಟಿ ಮಾನನಷ್ಟ ಮೊಕದ್ದಮೆ ದಾಖಲಿಸಿದ ನವಾಜುದ್ದೀನ್ ಸಿದ್ದಿಕಿ

    ಮಾಜಿ ಪತ್ನಿ, ಸಹೋದರನ ವಿರುದ್ಧ 100 ಕೋಟಿ ಮಾನನಷ್ಟ ಮೊಕದ್ದಮೆ ದಾಖಲಿಸಿದ ನವಾಜುದ್ದೀನ್ ಸಿದ್ದಿಕಿ

    ಬಾಲಿವುಡ್ (Bollywood)  ನಟ ನವಾಜುದ್ದೀನ್ ಸಿದ್ದಿಕಿ (Nawazuddin Siddiqui) ಅವರು ಇತ್ತೀಚಿಗೆ ನೆಗೆಟಿವ್ ವಿಚಾರಗಳಿಂದಲೇ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಅವರ ಮಾಜಿ ಪತ್ನಿ ಆಲಿಯಾ ಸಿದ್ಧಿಕಿ (Aaliya Siddiqui) ಮತ್ತು ಸಹೋದರ ಶಾಮಸ್ ನವಾಬ್ ಸಿದ್ದಿಕಿ ಅವರ ವಿರುದ್ಧ ಹಲವು ಆರೋಪಗಳನ್ನ ಮಾಡಿದ್ದಾರೆ. ಕೊನೆಗೆ ನವಾಜುದ್ದೀನ್ ಈ ಬಗ್ಗೆ ಬಹಿರಂಗ ಪತ್ರಿಕಾ ಹೇಳಿಕೆಯನ್ನು ಕೂಡ ರಿಲೀಸ್ ಮಾಡಿದ್ದಾರೆ. ಮಾಜಿ ಪತ್ನಿ ಆಲಿಯಾ ಮತ್ತು ಸಹೋದರ (Brother) ಶಾಮಸ್ ನವಾಬ್ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಇದನ್ನೂ ಓದಿ: ದುಬಾರಿ ಸೀರೆಯುಟ್ಟು `ಶಾಕುಂತಲಂ’ ಪ್ರಚಾರದಲ್ಲಿ ಭಾಗಿಯಾದ ಸಮಂತಾ

    ದಿನದಿಂದ ದಿನಕ್ಕೆ ನವಾಜುದ್ದೀನ್ ಮನೆಗೆ ರಂಪಾಟ ಹಲವು ತಿರುವುಗಳನ್ನ ಪಡೆಯುತ್ತಿದೆ. ಇದೀಗ ಮಾಜಿ ಪತ್ನಿ ಆಲಿಯಾ ಮತ್ತು ಸೋದರ ಶಮಸ್ ವಿರುದ್ಧ 100 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆಯನ್ನು ನಟ ನವಾಜುದ್ದೀನ್ ಸಿದ್ದಿಕಿ ಹೂಡಿದ್ದು, ಮಾರ್ಚ್ 30ರಂದು ಬಾಂಬೆ ಹೈಕೋರ್ಟ್‌ನಲ್ಲಿ ಈ ಕೇಸ್‌ನ ವಿಚಾರಣೆ ನಡೆಯಲಿದೆ. ತನ್ನ ಸಹೋದರ ನವಾಜುದ್ದೀನ್ ಸಿದ್ದಿಕಿ ಅವರಿಗೆ 2018ರಿಂದಲೂ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ತನ್ನ ಸಹೋದರನಿಗೆ ನವಾಜುದ್ದೀನ್ ಕ್ರೆಡಿಟ್ ಕಾರ್ಡ್ಸ್, ಎಟಿಎಂ ಕಾರ್ಡ್ಸ್, ಬ್ಯಾಂಕ್ ಪಾಸ್‌ವರ್ಡ್ಸ್ ನೀಡಿದ್ದರು. ಇದನ್ನೆಲ್ಲಾ ಆತ ದುರ್ಬಳಕೆ ಮಾಡಿಕೊಂಡಿದ್ದಾನೆ ಎಂದು ನವಾಜುದ್ದೀನ್ ಆರೋಪಿಸಿದ್ದಾರೆ.

    ನನ್ನ ಪತ್ನಿ ಆಲಿಯಾ ನನ್ನ ವಿರುದ್ಧ ನಿಲ್ಲುವಂತೆ ಶಮಸ್‌ ಎತ್ತಿ ಕಟ್ಟಿದ್ದಾನೆ ಎಂದಿದ್ದಾರೆ. ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಆಲಿಯಾಗೆ ಪ್ರತಿ ತಿಂಗಳು 10 ಲಕ್ಷ ರೂ. ನೀಡಲಾಗುತ್ತಿತ್ತು ಹಾಗೂ ಪ್ರೊಡಕ್ಷನ್ ಹೌಸ್ ಆರಂಭಿಸಲು 2.50 ಕೋಟಿ ರೂ. ನೀಡಲಾಗಿತ್ತು. ಆದರೆ ಈ ಹಣವನ್ನೆಲ್ಲ ಅವರು ತಮ್ಮ ಸ್ವಂತಕ್ಕೆ ಬಳಸಿದ್ದಾರೆ ಎಂದು ನಟ ಆರೋಪಿಸಿದ್ದಾರೆ.

    ಇದಲ್ಲದೆ, 2020ರಲ್ಲಿ ಮ್ಯಾನೇಜರ್ ಹುದ್ದೆಯಿಂದ ಶಮಾಸ್‌ರನ್ನು ತೆಗೆದ ನಂತರ ನವಾಜುದ್ದೀನ್ ಅವರು ಆದಾಯ ತೆರಿಗೆ, ಜಿಎಸ್‌ಟಿ ಮತ್ತು ಇತರ ಸರ್ಕಾರಿ ಇಲಾಖೆಗಳಿಂದ 37 ಕೋಟಿ ರೂಪಾಯಿ ತೆರಿಗೆ ಪಾವತಿಸದ ಕಾರಣಕ್ಕಾಗಿ ಕಾನೂನು ನೋಟಿಸ್‌ಗಳನ್ನು ಸ್ವೀಕರಿಸಿದ್ದಾರೆ ಎಂದು ನವಾಜುದ್ದೀನ್ ಅವರು ಅರ್ಜಿಯಲ್ಲಿ ಹೇಳಿದ್ದು, 100 ಕೋಟಿ ರೂಪಾಯಿ ಪರಿಹಾರ ನೀಡಲು ಆದೇಶಿಸುವಂತೆ ನವಾಜುದ್ದೀನ್ ಸಿದ್ದಿಕಿ ಕೋರಿದ್ದಾರೆ.