Tag: ಆಲಿಯಾ ಅಸಾದಿ

  • ನಮ್ಮ ದೇಶ ಎತ್ತ ಸಾಗುತ್ತಿದೆ? ಇಲ್ಲಿ ಯಾವ ಅಪರಾಧ ನಡೆದಿದೆ – ಹಿಜಬ್‌ ಹೋರಾಟಗಾರ್ತಿ ಆಲಿಯಾ ಪ್ರಶ್ನೆ

    ನಮ್ಮ ದೇಶ ಎತ್ತ ಸಾಗುತ್ತಿದೆ? ಇಲ್ಲಿ ಯಾವ ಅಪರಾಧ ನಡೆದಿದೆ – ಹಿಜಬ್‌ ಹೋರಾಟಗಾರ್ತಿ ಆಲಿಯಾ ಪ್ರಶ್ನೆ

    ಉಡುಪಿ: ನಮ್ಮ ದೇಶ ಎತ್ತ ಸಾಗುತ್ತಿದೆ ಎಂದು ಉಡುಪಿಯ ಹಿಜಬ್‌ ಹೋರಾಟಗಾರ್ತಿ ಆಲಿಯಾ ಅಸಾದಿ ಪ್ರಶ್ನೆ ಮಾಡಿದ್ದಾರೆ.

    ಶುಕ್ರವಾರ ಬೆಳಗ್ಗೆ ಕಾಲೇಜಿಗೆ ಹಿಜಬ್‌ ತೆಗೆದು ಹಾಲ್‌ ಟಿಕೆಟ್‌ ಪಡೆದು ಪರೀಕ್ಷಾ ಕೇಂದ್ರದಲ್ಲಿ ಹೈಡ್ರಾಮಾ ಮಾಡಿದ ಬಳಿಕ ರಾತ್ರಿ ಟ್ವೀಟ್‌ ಮಾಡಿ ಉಡುಪಿ ಶಾಸಕ ರಘುಪತಿ ಭಟ್‌ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಮುಸ್ಲಿಮ್‌ ಬಾಹುಳ್ಯ ಜಾಗದಲ್ಲಿ ಅಣ್ಣಮ್ಮ ದೇವಿ ಮೆರವಣಿಗೆ – ದಾರಿ ಬದಲಾವಣೆ ಮಾಡುವಂತೆ ಮನವಿ

    ಟ್ವೀಟ್‌ನಲ್ಲಿ ಏನಿದೆ?
    ಪರೀಕ್ಷಾ ಕೇಂದ್ರದಲ್ಲಿ ನನಗೆ ಮತ್ತು ರೇಶಂಗೆ ಪರೀಕ್ಷೆ ಬರೆಯಲು ಸಿಬ್ಬಂದಿ ನಿರಾಕರಿಸಿದ್ದಾರೆ. ನಾವು ಮತ್ತೆ ಮತ್ತೆ ನಿರಾಸೆಗೆ ಒಳಗಾಗುತ್ತಿದ್ದಾರೆ. ಕ್ರಿಮಿನಲ್ ಕೇಸು, ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವುದಾಗಿ ಶಾಸಕ ರಘುಪತಿ ಭಟ್ ಬೆದರಿಕೆ ಹಾಕಿದ್ದಾರೆ. ಕ್ರಿಮಿನಲ್ ಕೇಸು ಹಾಕಲು ಇಲ್ಲಿ ಯಾವ ಅಪರಾಧ ನಡೆದಿದೆ? ನಮ್ಮ ದೇಶ ಎತ್ತ ಸಾಗುತ್ತಿದೆ?

    ಪಬ್ಲಿಕ್‌ ಟಿವಿಗೆ ಪ್ರತಿಕ್ರಿಯಿಸಿದ್ದ ರಘುಪತಿ ಭಟ್‌ ಇದೇ ರೀತಿ ಡ್ರಾಮಾ ಮುಂದುವರಿದರೆ ಕ್ರಿಮಿನಲ್ ಕೇಸ್, ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುತ್ತೇವೆ. ಈ ಕುರಿತು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಜೊತೆ ನಾನು ಈಗಾಗಲೇ ಮಾತನಾಡಿದ್ದೇನೆ. ಮುಂದೆ ನಾಟಕ ಮಾಡಿದರೆ ನ್ಯಾಯಾಂಗ ನಿಂದನೆ. ಕೇಸು ದಾಖಲಿಸುತ್ತೇವೆ. ಪರೀಕ್ಷಾ ಕೇಂದ್ರದಲ್ಲಿ ಹುಡುಗಾಟಿಕೆ ಮಾಡುವಂತಿಲ್ಲ. ಈ ಮಕ್ಕಳನ್ನು ನಾವು ಇನ್ನು ಮುಂದೆ ಲಘುವಾಗಿ ಪರಿಗಣಿಸುವುದಿಲ್ಲ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಕ್ರಿಮಿನಲ್ ಕೇಸು ಹಾಕಿ ಎಂದು ಆಗ್ರಹ ಮಾಡಿದ್ದೇನೆ ಎಂದು ತಿಳಿಸಿದ್ದರು.  ಇದನ್ನೂ ಓದಿ: ಹುಬ್ಬಳ್ಳಿ ಗಲಭೆಗೆ ಮುಂಬೈ ನಂಟು!


    ಆಲಿಯಾ ರೇಶಂ ಹಿಜಬ್ ತೆಗೆದು ಹಾಲ್ ಟಿಕೆಟ್ ತೆಗೆದುಕೊಂಡಿದ್ದರು. ಹಾಲ್ ಟಿಕೆಟ್ ಪಡೆಯಲು ಗುರುವಾರ ಸಂಜೆಯವರೆಗೆ ಅವಕಾಶ ಕೊಡಲಾಗಿತ್ತು. ಕಾಲೇಜಿನಿಂದ ಫೋನ್ ಮಾಡಿ ಅವರಿಗೆ ಹಾಲ್ ಟಿಕೆಟ್ ಬಗ್ಗೆ ಹೇಳಲಾಗಿತ್ತು. ಪೋಷಕರಿಗೂ ಕೂಡ ಹಾಲ್ ಟಿಕೆಟ್ ಪಡೆಯುವ ಬಗ್ಗೆ ಮನವರಿಕೆ ಮಾಡಲಾಗಿತ್ತು. ಶುಕ್ರವಾರ ಬೆಳಗ್ಗೆ 9.30ರ ನಂತರ ಹಾಲ್ ಟಿಕೆಟ್‍ಗೆ ಕಾಲೇಜಿಗೆ ಬಂದಿದ್ದಾರೆ. ಹಿಜಬ್ ತೆಗೆದು ಪರೀಕ್ಷೆ ಬರೆಯುವುದಾಗಿ ಒಪ್ಪಿದ್ದಾರೆ. ಹಾಲ್ ಟಿಕೆಟ್ ತೆಗೆದುಕೊಳ್ಳುವಾಗಲೂ ವಿದ್ಯಾರ್ಥಿಗಳು ಹಿಜಬನ್ನು ತೆಗೆದು ಇಟ್ಟಿದ್ದಾರೆ. ಪರೀಕ್ಷಾ ಕೇಂದ್ರದಲ್ಲಿ ಇಬ್ಬರು ವಿದ್ಯಾರ್ಥಿಗಳು ಡ್ರಾಮಾ ಮಾಡಿದ್ದಾರೆ ಎಂದು ಶಾಸಕರು ಕಿಡಿಕಾರಿದ್ದರು.