Tag: ಆಲಿಬಾಬಾ

  • ಮತ್ತೆ ಚೀನಾಗೆ ಮರಳಿದ ಜಾಕ್ ಮಾ

    ಮತ್ತೆ ಚೀನಾಗೆ ಮರಳಿದ ಜಾಕ್ ಮಾ

    ಬೀಜಿಂಗ್: ಆಲಿಬಾಬಾ (Alibaba) ಸಂಸ್ಥಾಪಕ ಜಾಕ್ ಮಾ (Jack Ma) ಅವರು ಮತ್ತೆ ಚೀನಾಗೆ ಮರಳಿದ್ದಾರೆ ಎಂದು ಸೌತ್ ಚೀನಾ ಮಾನಿಂಗ್ ಪೋಸ್ಟ್ ಸೋಮವಾರ ವರದಿ ಮಾಡಿದೆ.

    ಚೀನಾದ (China) ಪ್ರಸಿದ್ಧ ಉದ್ಯಮಿಗಳಲ್ಲಿ ಒಬ್ಬರಾದ ಜಾಕ್ ಮಾ ಅವರು 2021 ರಲ್ಲಿ ಚೀನಾದಿಂದ ಕಣ್ಮರೆಯಾಗಿದ್ದರು. ಅಲ್ಲದೇ ನಂತರದ ದಿನಗಳಲ್ಲಿ ಅವರು ಆಸ್ಟ್ರೇಲಿಯಾ, ಜಪಾನ್ ಮತ್ತು ಥೈಲಾಂಡ್ ದೇಶಗಳಲ್ಲಿ ಕಾಣಿಸಿಕೊಂಡಿದ್ದ ಬಗ್ಗೆ ವರದಿ ಪ್ರಕಟವಾಗಿದ್ದವು. ಇದನ್ನೂ ಓದಿ: ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ದುರಂತ – ಏರ್ ಇಂಡಿಯಾ, ನೇಪಾಳ ಏರ್‌ಲೈನ್ಸ್ ಡಿಕ್ಕಿ ಜಸ್ಟ್ ಮಿಸ್

    ಜಾಕ್ ಮಾ ಹಾಂಗ್‌ಝೌನಲ್ಲಿ ತಾವು ನಿರ್ಮಿಸಿದ ಹಣಕಾಸು ತಂತ್ರಜ್ಙಾನ ಶಾಲೆಗೆ ಮರಳಿದ್ದಾರೆ ಎಂದು ಯುಂಗು ಎಜುಕೇಷನ್ (Yungu Education) ಶಾಲೆಯು ತಮ್ಮ ವಿಚಾಟ್ (We Chat) ಖಾತೆಯಲ್ಲಿ ಹೇಳಿದೆ. ಅಲ್ಲದೇ ಅವರೊಂದಿಗಿನ ಫೋಟೋ ಮತ್ತು ವಿಡಿಯೋಗಳನ್ನು ಕೂಡಾ ಹಂಚಿಕೊಂಡಿದೆ.ಈ ವರದಿ ಪ್ರಕಟವಾದ ನಂತರ ಹಾಂಗ್‌ಕಾಂಗ್‌ನಲ್ಲಿ ಆಲಿಬಾಬಾ ಷೇರುಗಳು ಶೆ.4ರಷ್ಟು ಹೆಚ್ಚಿದೆ. ಇದನ್ನೂ ಓದಿ: 2 ವರ್ಷ ಕೋವಿಡ್ ಸ್ಟ್ರಿಕ್ಟ್ ರೂಲ್ಸ್ ಬಳಿಕ ಮೊದಲ ಬಾರಿ ಚೀನಾದ ಹಾಂಕಾಂಗ್‌ನಲ್ಲಿ ಪ್ರತಿಭಟನೆ 

    2021ರ ಅಕ್ಟೋಬರ್ 24 ರಂದು ಶಾಂಘೈನಲ್ಲಿ ಜಾಕ್ ಮಾ ಮಾತನಾಡಿದ್ದರು. ಈ ವೇಳೆ ಇಂದಿನ ಹಣಕಾಸು ವ್ಯವಸ್ಥೆಯು ಕೈಗಾರಿಕಾ ಯುಗದ ಪರಂಪರೆಯಾಗಿದೆ. ಮುಂದಿನ ಪೀಳಿಗೆ ಮತ್ತು ಯುವಜನರಿಗಾಗಿ ನಾವು ಹೊಸದನ್ನು ಸ್ಥಾಪಿಸಬೇಕು. ನಾವು ಪ್ರಸ್ತುತ ವ್ಯವಸ್ಥೆಯನ್ನು ಸುಧಾರಿಸಬೇಕು ಎಂದು ಭಾಷಣ ಮಾಡಿದ್ದು ಚೀನಾ ಸರ್ಕಾರದ ಆಕ್ರೋಶಕ್ಕೆ ಕಾರಣವಾಗಿತ್ತು. ಇದಾದ ಬಳಿಕ ಜಾಕ್ ಮಾ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಇದನ್ನೂ ಓದಿ: ಬ್ರಿಟನ್‍ನ 36 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಇಸ್ರೋ 

    ಜಾಕ್‌ಮಾ ಆಂಟ್ ಹೆಸರಿನಲ್ಲಿ ಕಂಪನಿ ಆರಂಭಿಸಿದ್ದರು. 2020 ನವೆಂಬರ್‌ನಲ್ಲಿ ಈ ಆರಂಭಿಕ ಸಾರ್ವಜನಿಕ ಷೇರು ಬಿಡುಗಡೆ ಮಾಡಿ 37 ಶತಕೋಟಿ ಡಾಲರ್ ಹಣ ಸಂಗ್ರಹಿಸಲು ಮುಂದಾಗಿತ್ತು. ಮೂಲಕ ವಿಶ್ವದಲ್ಲೇ ಅತಿ ಹೆಚ್ಚು ಐಪಿಒ ಸಂಗ್ರಹಿಸಿದ ಕಂಪನಿಯಾಗಿ ಹೊರ ಹೊಮ್ಮುವ ಸಾಧ್ಯತೆ ಇತ್ತು. ಮಾಧ್ಯಮಗಳಲ್ಲಿ ಈ ವಿಚಾರ ಪ್ರಕಟವಾಗುತ್ತಿದ್ದಂತೆ ಹಲವು ಮಂದಿ ಅನುಮಾನ ವ್ಯಕ್ತಪಡಿದ್ದರು. ಇದಾದ ಬಳಿಕ ಚೀನಾ ಸರ್ಕಾರ ಐಪಿಒವನ್ನು ಅಮಾನತಿನಲ್ಲಿಟ್ಟು, ಆಲಿಬಾಬಾ ಕಂಪನಿಯ ಮಾರುಕಟ್ಟೆ ಏಕಸ್ವಾಮ್ಯದ ಬಗ್ಗೆ ತನಿಖೆ ಆರಂಭಿಸಿತ್ತು. ಇದನ್ನೂ ಓದಿ: ನೀರಿನಲ್ಲೂ ಶತ್ರುಸೈನ್ಯ ನಾಶಮಾಡುವ ನ್ಯೂಕ್ಲಿಯರ್ ಡ್ರೋನ್ ಪರೀಕ್ಷೆ ಯಶಸ್ವಿ – ಸಾಮರ್ಥ್ಯ ಎಷ್ಟಿದೆ ಗೊತ್ತಾ?

  • ಕಣ್ಮರೆಯಾಗಿದ್ದ ಶತಕೋಟ್ಯಧಿಪತಿ ಜಾಕ್ ಮಾ ಕೊನೆಗೂ ಪ್ರತ್ಯಕ್ಷ

    ಕಣ್ಮರೆಯಾಗಿದ್ದ ಶತಕೋಟ್ಯಧಿಪತಿ ಜಾಕ್ ಮಾ ಕೊನೆಗೂ ಪ್ರತ್ಯಕ್ಷ

    ಬೀಜಿಂಗ್: ಕೆಲ ತಿಂಗಳಿಂದ ಸಾರ್ವಜನಿಕವಾಗಿ ಕಾಣೆಯಾಗಿದ್ದ ಆಲಿಬಾಬಾ ಸಂಸ್ಥಾಪಕ, ಶತಕೋಟ್ಯಧಿಪತಿ ಜಾಕ್ ಮಾ ಇಂದು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.

    ಬುಧವಾರ ಸುಮಾರು 100 ಶಿಕ್ಷಕರಿಗೆ ಆನ್‍ಲೈನ್ ತರಬೇತಿ ನಡೆಸುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಅಕ್ಟೋಬರ್ ಬಳಿಕ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಗ್ರಾಮೀಣ ಶಿಕ್ಷಕರ ಸಾಧನೆಗಳನ್ನು ಗುರುತಿಸಲು ಮಾಜಿ ಇಂಗ್ಲಿಷ್ ಶಿಕ್ಷಕರಾಗಿರುವ ಜಾಕ್ ಮಾ ಅವರು ಪ್ರತಿ ವರ್ಷ ವಾರ್ಷಿಕ ಸಮ್ಮೇಳನ ನಡೆಸುತ್ತಾರೆ. ಅದೇ ರೀತಿ ಈ ವರ್ಷವೂ ಸಮ್ಮೇಳನ ನಡೆಸಿದ್ದು, ಈ ವೇಳೆ ಶಿಕ್ಷಕರನ್ನುದ್ದೇಶಿಸಿ ಮಾತನಾಡಿದ್ದಾರೆ. ಈ ಮೂಲಕ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.

    ಜಾಕ್ ಮಾ ಅವರ ಆನ್‍ಲೈನ್ ವಿಮಾ ವ್ಯವಹಾರ ಚೀನಾದ ಆ್ಯಂಟಿ ಟ್ರಸ್ಟ್ ರೆಗ್ಯೂಲೇಟರ್ಸ್ ಪರಿಶೀಲನೆಗೆ ಒಳಪಟ್ಟ ಬಳಿಕ ಅವರ ಭವಿಷ್ಯದ ಬಗ್ಗೆ ವದಂತಿಗಳು ಹರಡಿದ್ದವು. ಅಲ್ಲದೆ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳದ್ದರಿಂದ ಹಲವು ಅನುಮಾನಗಳು ಸಹ ಕಾಡ ತೊಡಗಿದ್ದವು. ಇದೀಗ ಅವರು ಕಾಣಿಸಿಕೊಂಡಿದ್ದಾರೆ.

    ಶಿಕ್ಷಕರನ್ನುದ್ದೇಶಿಸಿ ಮಾತನಾಡಿರುವ ಉದ್ಯಮಿ ಜಾಕ್ ಮಾ, ಸಾಮಾನ್ಯವಾಗಿ ಪ್ರತಿ ವರ್ಷ ಸೌತ್ ಹೈನಾನ್‍ನ ಸನ್ಯಾ ಪ್ರದೇಶದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿತ್ತು. ಆದರೆ ಕೊರೊನಾ ವೈರಸ್ ಹಿನ್ನೆಲೆ ಈ ಬಾರಿ ಆನ್‍ಲೈನ್ ಮೂಲಕ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

    ಜಾಕ್ ಮಾ ಅವರು ಕಾಣಿಸಿಕೊಂಡಿರುವ ಕುರಿತು ಸ್ಥಳೀಯ ಬ್ಲಾಗ್‍ನಲ್ಲಿ ಬಿತ್ತರವಾಗಿತ್ತು. ಬಳಿಕ ಅಂತರಾಷ್ಟ್ರೀಯ ಸುದ್ದಿ ಸಂಸ್ಥೆಗಳು ಈ ಕುರಿತು ಖಚಿತಪಡಿಸಿತ್ತು. ಚೀನೀಸ್ ರೆಗ್ಯೂಲೇಟರ್ಸ್ ನವರು ಅಲಿಬಾಬಾ ಸಂಸ್ಥೆಯ ಫಿಂಟೆಕ್ ದೈತ್ಯ ಆಂಟ್ ಫೈನಾನ್ಶಿಯಲ್‍ನ ಐಪಿಒವನ್ನು ಅಮಾನತಿನಲ್ಲಿಟ್ಟು, ಆಲಿಬಾಬಾ ಕಂಪನಿಯ ಮಾರುಕಟ್ಟೆ ಏಕಸ್ವಾಮ್ಯದ ಬಗ್ಗೆ ತನಿಖೆ ಆರಂಭಿಸಿದ್ದರು. ಆ ಬಳಿಕ ಜಾಕ್ ಮಾ ಕಾಣೆಯಾಗಿದ್ದರು ಎನ್ನಲಾಗಿತ್ತು.

    ಕಳೆದ ಅಕ್ಟೋಬರ್‍ನಿಂದ ಆಲಿಬಾಬಾ ಸಂಸ್ಥಾಪಕ, ಶತಕೋಟ್ಯಧಿಪತಿ ಜಾಕ್ ಮಾ ಸಾರ್ವಜನಿಕವಾಗಿ ಕಣ್ಮರೆಯಾಗಿದ್ದರು. 2 ತಿಂಗಳ ಹಿಂದೆ ಜಾಕ್ ಮಾ ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ನೇತೃತ್ವದ ಸರ್ಕಾರದ ನೀತಿಯನ್ನು ಟೀಕಿಸಿದ್ದರು. ಈ ಟೀಕೆಯ ಬಳಿಕ ಜಾಕ್ ಮಾ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಲ್ಲ ಎಂದು ವರದಿಯಾಗಿತ್ತು.

    ತನ್ನ ನೀತಿಯನ್ನು ಸಾರ್ವಜನಿಕವಾಗಿ ಟೀಕಿಸಿದ್ದರೆ ಚೀನಾ ಸರ್ಕಾರ ಸಾರ್ವಜನಿಕರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು ಸಾಮಾನ್ಯ ಪ್ರಕ್ರಿಯೆ. ಅದೇ ರೀತಿ ಚೀನಾ ಜಾಕ್ ಮಾ ವಿರುದ್ಧ ಕ್ರಮ ಕೈಗೊಂಡಿರಬಹುದು ಎಂದು ಹಲವರು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು.

    ಅನುಮಾನ ಎದ್ದಿದ್ದು ಯಾಕೆ?
    ಅಮೆರಿಕ ಬಿಸಿನೆಸ್ ಹೀರೋ ಟ್ಯಾಲೆಂಟ್ ಕಾರ್ಯಕ್ರಮವನ್ನು ಜಾಕ್ ಮಾ ಪ್ರಯೋಜಿಸಿದ್ದರು. ಈ ಶೋ ನ ಅಂತಿಮ ಕಾರ್ಯಕ್ರಮದಲ್ಲಿ ಜಾಕ್ ಮಾ ಭಾಗವಹಿಸಬೇಕಿತ್ತು. ಆದರೆ ಈ ಕಾರ್ಯಕ್ರಮದಲ್ಲಿ ಜಾಕ್ ಮಾ ಕಾಣಿಸಿರಲಿಲ್ಲ. ಅಲ್ಲದೆ ಆಫ್ರಿಕಾದ ಉದ್ಯಮಿಗಳ ಜೊತೆ ಕಾರ್ಯಕ್ರಮ ನಡೆಸಲು ಆಫ್ರಿಕಾ ಬಿಸಿನೆಸ್ ಹೀರೋ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ತೀರ್ಪುಗಾರರಾಗಿ ಜಾಕ್ ಮಾ ನೇಮಕವಾಗಿದ್ದರು. ಆದರೆ ಈ ಕಾರ್ಯಕ್ರಮದ ವೆಬ್‍ಸೈಟ್‍ನಿಂದ ಜಾಕ್ ಮಾ ಫೋಟೋವನ್ನು ತೆಗೆಯಲಾಗಿತ್ತು.

    ಜಾಕ್ ಮಾ ಹೇಳಿದ್ದೇನು?
    ಅಕ್ಟೋಬರ್ 24 ರಂದು ಶಾಂಘೈನಲ್ಲಿ ಜಾಕ್ ಮಾ ಮಾತನಾಡಿದ್ದರು. ಈ ವೇಳೆ ಇಂದಿನ ಹಣಕಾಸು ವ್ಯವಸ್ಥೆಯು ಕೈಗಾರಿಕಾ ಯುಗದ ಪರಂಪರೆಯಾಗಿದೆ. ಮುಂದಿನ ಪೀಳಿಗೆ ಮತ್ತು ಯುವಜನರಿಗಾಗಿ ನಾವು ಹೊಸದನ್ನು ಸ್ಥಾಪಿಸಬೇಕು. ನಾವು ಪ್ರಸ್ತುತ ವ್ಯವಸ್ಥೆಯನ್ನು ಸುಧಾರಿಸಬೇಕು ಎಂದು ಭಾಷಣ ಮಾಡಿದ್ದು ಚೀನಾ ಸರ್ಕಾರದ ಆಕ್ರೋಶಕ್ಕೆ ಕಾರಣವಾಗಿತ್ತು.

    ಜಾಕ್ ಮಾ ಭಾಷಣ ಚೀನಾದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಜನ ಜಾಕ್ ಮಾ ಸುರಕ್ಷತೆಯ ಬಗ್ಗೆ ಆಗಲೇ ಅನುಮಾನ ವ್ಯಕ್ತಪಡಿಸಿ ಪ್ರಶ್ನೆಗಳನ್ನು ಎತ್ತಿದ್ದರು.

    ತನಿಖೆ ಆರಂಭಿಸಿದ್ದು ಯಾಕೆ?
    ಜಾಕ್‍ ಮಾ ಆಂಟ್ ಹೆಸರಿನಲ್ಲಿ ಕಂಪನಿ ಆರಂಭಿಸಿದ್ದರು. ನವೆಂಬರ್ ನಲ್ಲಿ ಈ ಆರಂಭಿಕ ಸಾರ್ವಜನಿಕ ಷೇರು ಬಿಡುಗಡೆ ಮಾಡಿ 37 ಶತಕೋಟಿ ಡಾಲರ್ ಹಣ ಸಂಗ್ರಹಿಸಲು ಮುಂದಾಗಿತ್ತು. ಈ ಮೂಲಕ ವಿಶ್ವದಲ್ಲೇ ಅತಿ ಹೆಚ್ಚು ಐಪಿಒ ಸಂಗ್ರಹಿಸಿದ ಕಂಪನಿಯಾಗಿ ಹೊರ ಹೊಮ್ಮುವ ಸಾಧ್ಯತೆ ಇತ್ತು. ಮಾಧ್ಯಮಗಳಲ್ಲಿ ಈ ವಿಚಾರ ಪ್ರಕಟವಾಗುತ್ತಿದ್ದಂತೆ ಹಲವು ಮಂದಿ ಅನುಮಾನ ವ್ಯಕ್ತಪಡಿಸಿದ್ದರು. ಇದಾದ ಬಳಿಕ ಚೀನಾ ಸರ್ಕಾರ ಐಪಿಒವನ್ನು ಅಮಾನತಿನಲ್ಲಿಟ್ಟು, ಆಲಿಬಾಬಾ ಕಂಪನಿಯ ಮಾರುಕಟ್ಟೆ ಏಕಸ್ವಾಮ್ಯದ ಬಗ್ಗೆ ತನಿಖೆ ಆರಂಭಿಸಿತ್ತು.

    ಚೀನಾ ಸರ್ಕಾರದ ಬಗ್ಗೆ ಬಹಿರಂಗ ಟೀಕೆ, ಐಪಿಒ ಬಿಡುಗಡೆ, ಆಲಿಬಾಬಾ ಕಂಪನಿಯ ಮೇಲೆ ತನಿಖೆ ಈ ಎಲ್ಲ ವಿಚಾರಗಳು ಒಂದಕ್ಕೊಂದು ಹೋಲಿಕೆ ಆಗುತ್ತಿರುವ ಕಾರಣ ಜಾಕ್ ಮಾ ಸುರಕ್ಷತೆಯ ಬಗ್ಗೆ ಜನ ಆಗಲೇ ಪ್ರಶ್ನಿಸಿದ್ದರು.

  • ಆಲಿಬಾಬಾ ಸಂಸ್ಥಾಪಕ, ಶತಕೋಟ್ಯಧಿಪತಿ ಜಾಕ್‌ ಮಾ ಕಣ್ಮರೆ

    ಆಲಿಬಾಬಾ ಸಂಸ್ಥಾಪಕ, ಶತಕೋಟ್ಯಧಿಪತಿ ಜಾಕ್‌ ಮಾ ಕಣ್ಮರೆ

    ಬೀಜಿಂಗ್‌: ಆಲಿಬಾಬಾ ಸಂಸ್ಥಾಪಕ, ಶತಕೋಟ್ಯಧಿಪತಿ ಜಾಕ್‌ ಮಾ  ಕಣ್ಮರೆಯಾಗಿದ್ದಾರೆ  ಎಂಬ ಶಂಕೆ ವ್ಯಕ್ತವಾಗಿದೆ.

    2 ತಿಂಗಳ ಹಿಂದೆ ಜಾಕ್‌ ಮಾ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ನೇತೃತ್ವದ ಸರ್ಕಾರದ ನೀತಿಯನ್ನು ಟೀಕಿಸಿದ್ದರು. ಈ ಟೀಕೆಯ ಬಳಿಕ ಜಾಕ್‌ ಮಾ ಸಾರ್ವಾಜನಿಕವಾಗಿ ಎಲ್ಲೂ ಕಾಣಿಸಿಲ್ಲ ಎಂದು ವರದಿಯಾಗಿದೆ.

    ತನ್ನ ನೀತಿಯನ್ನು ಸಾರ್ವಜನಿಕವಾಗಿ ಟೀಕಿಸಿದ್ದರೆ ಚೀನಾ ಸರ್ಕಾರ ಸಾರ್ವಜನಿಕರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು ಸಾಮಾನ್ಯ ಪ್ರಕ್ರಿಯೆ. ಅದೇ ರೀತಿಯಾಗಿ ಚೀನಾ ಜಾಕ್‌ ಮಾ ವಿರುದ್ಧ ಕ್ರಮ ಕೈಗೊಂಡಿರಬಹುದು ಎಂಬ ಅಭಿಪ್ರಾಯಗಳನ್ನು ಜನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

    ಅನುಮಾನ ಯಾಕೆ?
    ʼಅಮೆರಿಕ ಬಿಸಿನೆಸ್‌ ಹೀರೋʼ ಟ್ಯಾಲೆಂಟ್‌ ಕಾರ್ಯಕ್ರಮವನ್ನು ಜಾಕ್‌ ಮಾ ಪ್ರಯೋಜಿಸಿದ್ದರು. ಈ ಶೋದ ಅಂತಿಮ ಕಾರ್ಯಕ್ರಮದಲ್ಲಿ ಜಾಕ್‌ ಮಾ ಭಾಗವಹಿಸಬೇಕಿತ್ತು. ಆದರೆ ಈ ಕಾರ್ಯಕ್ರಮದಲ್ಲಿ ಜಾಕ್‌ ಮಾ ಕಾಣಿಸಿರಲಿಲ್ಲ.

    ಆಫ್ರಿಕಾದ ಉದ್ಯಮಿಗಳ ಜೊತೆ ಕಾರ್ಯಕ್ರಮ ನಡೆಸಲು ʼಆಫ್ರಿಕಾ ಬಿಸಿನೆಸ್‌ ಹೀರೋʼ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ತೀರ್ಪುಗಾರರಾಗಿ ಜಾಕ್‌ ಮಾ ನೇಮಕವಾಗಿದ್ದರು. ಆದರೆ ಈ ಕಾರ್ಯಕ್ರಮದ ವೆಬ್‌ಸೈಟ್‌ನಿಂದ ಜಾಕ್‌ ಮಾ ಫೋಟೋವನ್ನು ತೆಗೆಯಲಾಗಿತ್ತು.

    ಜಾಕ್‌ ಮಾ ಹೇಳಿದ್ದು ಏನು?
    ಅಕ್ಟೋಬರ್‌ 24 ರಂದು ಶಾಂಘೈನಲ್ಲಿ ಜಾಕ್‌ ಮಾ ಮಾತನಾಡಿದ್ದರು. ಈ ವೇಳೆ ಇಂದಿನ ಹಣಕಾಸು ವ್ಯವಸ್ಥೆಯು ಕೈಗಾರಿಕಾ ಯುಗದ ಪರಂಪರೆಯಾಗಿದೆ. ಮುಂದಿನ ಪೀಳಿಗೆ ಮತ್ತು ಯುವಜನರಿಗಾಗಿ ನಾವು ಹೊಸದನ್ನು ಸ್ಥಾಪಿಸಬೇಕು. ನಾವು ಪ್ರಸ್ತುತ ವ್ಯವಸ್ಥೆಯನ್ನು ಸುಧಾರಿಸಬೇಕು ಎಂದು ಭಾಷಣ ಮಾಡಿದ್ದು ಚೀನಾ ಸರ್ಕಾರದ ಆಕ್ರೋಶಕ್ಕೆ ಕಾರಣವಾಗಿತ್ತು.

    ಜಾಕ್‌ ಮಾ ಭಾಷಣ ಚೀನಾದ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ, ಜನ ಜಾಕ್‌ ಮಾ ಸುರಕ್ಷತೆಯ ಬಗ್ಗೆ ಆಗಲೇ ಅನುಮಾನ ವ್ಯಕ್ತಪಡಿಸಿ ಪ್ರಶ್ನೆಗಳನ್ನು ಎತ್ತಿದ್ದರು.

    ತನಿಖೆ ಆರಂಭಿಸಿದ್ದು ಯಾಕೆ?
    ಜಾಕ್‌ಮಾ ಆಂಟ್‌ ಹೆಸರಿನಲ್ಲಿ ಕಂಪನಿ ಆರಂಭಿಸಿದ್ದರು. ನವೆಂಬರ್‌ನಲ್ಲಿ ಈ ಆರಂಭಿಕ ಸಾರ್ವಜನಿಕ ಷೇರು ಬಿಡುಗಡೆ ಮಾಡಿ 37 ಶತಕೋಟಿ ಡಾಲರ್‌ ಹಣ ಸಂಗ್ರಹಿಸಲು ಮುಂದಾಗಿತ್ತು. ಮೂಲಕ ವಿಶ್ವದಲ್ಲೇ ಅತಿ ಹೆಚ್ಚು ಐಪಿಒ ಸಂಗ್ರಹಿಸಿದ ಕಂಪನಿಯಾಗಿ ಹೊರ ಹೊಮ್ಮುವ ಸಾಧ್ಯತೆ ಇತ್ತು. ಮಾಧ್ಯಮಗಳಲ್ಲಿ ಈ ವಿಚಾರ ಪ್ರಕಟವಾಗುತ್ತಿದ್ದಂತೆ ಹಲವು ಮಂದಿ ಅನುಮಾನ ವ್ಯಕ್ತಪಡಿದ್ದರು. ಇದಾದ ಬಳಿಕ ಚೀನಾ ಸರ್ಕಾರ ಐಪಿಒವನ್ನು ಅಮಾನತಿನಲ್ಲಿಟ್ಟು, ಆಲಿಬಾಬಾ ಕಂಪನಿಯ ಮಾರುಕಟ್ಟೆ ಏಕಸ್ವಾಮ್ಯದ ಬಗ್ಗೆ ತನಿಖೆ ಆರಂಭಿಸಿತ್ತು.

    ಚೀನಾ ಸರ್ಕಾರದ ಬಗ್ಗೆ ಬಹಿರಂಗ ಟೀಕೆ, ಐಪಿಒ ಬಿಡುಗಡೆ, ಆಲಿಬಾಬಾ ಕಂಪನಿಯ ಮೇಲೆ ತನಿಖೆ ಈ ಎಲ್ಲ ವಿಚಾರಗಳು ಒಂದಕ್ಕೊಂದು ಹೋಲಿಕೆ ಆಗುತ್ತಿರುವ ಕಾರಣ ಜಾಕ್‌ ಮಾ ಸುರಕ್ಷತೆಯ ಬಗ್ಗೆ ಜನ ಪ್ರಶ್ನಿಸುತ್ತಿದ್ದಾರೆ.

  • ಕೆಲಸಕ್ಕೆ ‘996’, ಉತ್ತಮ ಜೀವನಕ್ಕೆ ‘669’ ಸೂತ್ರ – ಉದ್ಯೋಗಿಗಳಿಗೆ ಜ್ಯಾಕ್ ಮಾ ಸೆಕ್ಸ್ ಪಾಠ

    ಕೆಲಸಕ್ಕೆ ‘996’, ಉತ್ತಮ ಜೀವನಕ್ಕೆ ‘669’ ಸೂತ್ರ – ಉದ್ಯೋಗಿಗಳಿಗೆ ಜ್ಯಾಕ್ ಮಾ ಸೆಕ್ಸ್ ಪಾಠ

    ಬೀಜಿಂಗ್: ಚೀನಾದ ಶ್ರೀಮಂತ ಉದ್ಯಮಿ, ಆಲಿಬಾಬಾ ಕಂಪನಿಯ ಸ್ಥಾಪಕ ಜ್ಯಾಕ್ ಮಾ ಉದ್ಯೋಗಿಗಳಿಗೆ ಸೆಕ್ಸ್ ಪಾಠ ಮಾಡಿ ಈಗ ಸುದ್ದಿಯಾಗಿದ್ದಾರೆ.

    ಈ ಹಿಂದೆ ಉದ್ಯೋಗಿಗಳಿಗೆ ‘996’ (ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆ, 6 ದಿನ) ಕೆಲಸದ ಅವಧಿಯ ಬಗ್ಗೆ ಪಾಠ ಹೇಳಿದ್ದ ಜ್ಯಾಕ್ ಮಾ ಈಗ ಉತ್ತಮ ಜೀವನಕ್ಕೆ ‘669’ (6 ದಿನ, 6 ಬಾರಿ ಎಷ್ಟು ಹೊತ್ತು ಎಂಬುದನ್ನು ನಿರ್ಧರಿಸಿ ಲೈಂಗಿಕ ಕ್ರಿಯೆ) ಸೂತ್ರವನ್ನು ಅನುಸರಿಸಬೇಕು ಎಂದು ಸಲಹೆ ನೀಡಿದ್ದಾರೆ.

    54 ವರ್ಷದ ಜ್ಯಾಕ್ ಮಾ ಕಂಪನಿಯ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿ, ಕೆಲಸದ ಯಶಸ್ಸಿಗೆ 996 ಸೂತ್ರ ಅಳವಡಿಸಿಕೊಳ್ಳಬೇಕು, ಸಾಂಸಾರಿಕ ಜೀವನದಲ್ಲಿ ಯಶಸ್ಸು ಗಳಿಸಲು 669 ಸೂತ್ರವನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

    ಜ್ಯಾಕ್ ಮಾ ಹೇಳಿಕೆ ಈಗ ಸಾಮಾಜಿಕ ಜಾಲತಾಣದಲ್ಲಿ ಈಗ ಚರ್ಚೆಯಾಗುತ್ತಿದ್ದು, 996 ಸೂತ್ರದ ಪ್ರಕಾರ ಕೆಲಸ ಮಾಡಿ ಸುಸ್ತಾದ ಬಳಿಕ ಮನೆಯಲ್ಲಿ 669 ಸೂತ್ರ ಪಾಲಿಸಲು ಶಕ್ತಿ ಎಲ್ಲಿದೆ ಎಂದು ಪ್ರಶ್ನಿಸಿ ಜನ ಟ್ರೋಲ್ ಮಾಡುತ್ತಿದ್ದಾರೆ.