Tag: ಆರ್.ಸಿ ಸ್ಟುಡಿಯೋಸ್

  • ಕಬ್ಜಗಿಂತಲೂ ‘ಕಿಚ್ಚ’ನ ಸಿನಿಮಾ ದೊಡ್ಡಮಟ್ಟದಲ್ಲಿ ಇರುತ್ತದೆ : ನಿರ್ದೇಶಕ ಆರ್.ಚಂದ್ರು

    ಕಬ್ಜಗಿಂತಲೂ ‘ಕಿಚ್ಚ’ನ ಸಿನಿಮಾ ದೊಡ್ಡಮಟ್ಟದಲ್ಲಿ ಇರುತ್ತದೆ : ನಿರ್ದೇಶಕ ಆರ್.ಚಂದ್ರು

    ಕಿಚ್ಚ ಸುದೀಪ್ (Sudeep) ಹುಟ್ಟು ಹಬ್ಬದ ದಿನದಂದು ಅಚ್ಚರಿಯ ಸುದ್ದಿ ಕೊಟ್ಟು ಕಿಚ್ಚನ ಅಭಿಮಾನಿಗಳ ಸಂಭ್ರಮಕ್ಕೆ ಕಾರಣರಾಗಿದ್ದಾರೆ ಖ್ಯಾತ ನಿರ್ದೇಶಕ ಆರ್.ಚಂದ್ರು (R. Chandru). ‘ಕಬ್ಜ 2’ ಸಿನಿಮಾದ ಕೆಲಸದಲ್ಲಿ ತೊಡಗಿಕೊಂಡಿದ್ದ ಚಂದ್ರು, ಏಕಾಏಕಿ ಕಿಚ್ಚನ ಚಿತ್ರಕ್ಕೆ ಕೈ ಹಾಕಿದ್ದಾರೆ. ಜೊತೆಗೆ ಹೆಸರಾಂತ ಕಥೆಗಾರ, ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ (Vijendra Prasad) ಅವರನ್ನು ತಮ್ಮ ತಂಡದೊಂದಿಗೆ ಸೇರಿಸಿಕೊಂಡಿದ್ದಾರೆ. ಹೀಗಾಗಿ ಸಿನಿಮಾ ಬಗ್ಗೆ ಈಗಿನಿಂದಲೇ ನಿರೀಕ್ಷೆ ಹೆಚ್ಚಾಗಿದೆ.

    ಚಂದ್ರು ಅವರಿಗೆ ಸದ್ಯ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಡಿಮ್ಯಾಂಡ್ ಇದೆ. ‘ಕಬ್ಜ’ ಸಿನಿಮಾದ ನಂತರ ಬೇಡಿಕೆಯ ನಿರ್ದೇಶಕರಾಗಿದ್ದಾರೆ. ಇದನ್ನೂ ದಾಟಿಕೊಳ್ಳುವ ಮತ್ತೊಂದು ಪ್ರಾಜೆಕ್ಟ್ ಇದಾಗಿದೆ. ಹಾಗಾಗಿಯೇ ಕಿಚ್ಚ ಮತ್ತು ಚಂದ್ರು ಕಾಂಬಿನೇಷನ್ ಸಿನಿಮಾ ಗ್ಲೋಬಲ್ ಮಟ್ಟದಲ್ಲಿ ಸದ್ದು ಮಾಡಲಿದೆಯಂತೆ. ಕನ್ನಡ ಸಿನಿಮಾವೊಂದನ್ನು ಜಾಗತಿಕ ಮಟ್ಟದಲ್ಲಿ ತೆಗೆದುಕೊಂಡು ಹೋಗುವ ಪ್ಲ್ಯಾನ್ ನಿರ್ದೇಶಕರದ್ದು.

    ತನ್ನ ಜೊತೆಗಿರುವವರನ್ನು ಸದಾ ಬೆಳೆಸುತ್ತಾ ಬಂದಿದ್ದಾರೆ ಚಂದ್ರು, ಹೊಸ ಹೊಸ ನಿರ್ದೇಶಕರಿಗೆ ಅವಕಾಶವನ್ನೂ ನೀಡಿದ್ದಾರೆ. ಈಗ ತಮ್ಮ ಕನಸನ್ನು ಮತ್ತಷ್ಟು ವಿಸ್ತಾರ ಮಾಡಿಕೊಂಡಿದ್ದು, ವರ್ಷಕ್ಕೆ ಮೂರ್ನಾಲ್ಕು ಚಿತ್ರ ಮಾಡುವುದಕ್ಕಾಗಿಯೇ ‘ಆರ್.ಸಿ ಸ್ಟುಡಿಯೋಸ್’  (R.C. Studios)ಬ್ಯಾನರ್ ಅನ್ನು ಶುರು ಮಾಡಿದ್ದಾರೆ. ಈ ಸ್ಟುಡಿಯೋದ ಮೊದಲ ಚಿತ್ರವಾಗಿ ಕಿಚ್ಚನ ಸಿನಿಮಾ ಘೋಷಣೆಯಾಗಿದೆ. ಇದೇ ತಿಂಗಳಲ್ಲೇ ಮತ್ತೆ ಎರಡು ಚಿತ್ರಗಳನ್ನು ಘೋಷಿಸುವುದಾಗಿ ಅವರು ಹೇಳಿದ್ದಾರೆ.

    ಹಾಗಂತ ಕಬ್ಜ 2 ಕೆಲಸವನ್ನು ಅವರು ನಿಲ್ಲಿಸಿಲ್ಲವಂತೆ. ತನ್ನ ಪಾಡಿಗೆ ತಾನು ಸ್ಕ್ರಿಪ್ಟ್ ಸಿದ್ಧವಾಗುತ್ತಿದೆ. ಈ ಸಿನಿಮಾದಲ್ಲಿ ಮೂವರು ಹೆಸರಾಂತ ಸ್ಟಾರ್ ನಟರು ನಟಿಸಬೇಕಿರುವುದರಿಂದ ಮೂವರ ಡೇಟ್ ಒಟ್ಟಿಗೆ ಸಿಕ್ಕ ನಂತರ ಆ ಸಿನಿಮಾವನ್ನು ಕೈಗೆತ್ತಿಕೊಳ್ಳಲಿದ್ದಾರಂತೆ. ಹಾಗಾಗಿ ಕಬ್ಜ 2 ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ಭರವಸೆ ನೀಡುತ್ತಾರೆ ಚಂದ್ರು.

    ಕಬ್ಜ ಸಿನಿಮಾದಲ್ಲಿ ಸುದೀಪ್ ಮಹತ್ವದ ಪಾತ್ರವೊಂದನ್ನು ಮಾಡಿದ್ದರು. ಚಂದ್ರು ಮತ್ತು ಸುದೀಪ್ ಕಾಂಬಿನೇಷನ್ ಸಖತ್ ವರ್ಕ್ ಆಗಿತ್ತು. ಚಂದ್ರು ಕೆಲಸದ ಬಗ್ಗೆ ಆವತ್ತೆ ಸುದೀಪ್ ಮನಸಾರೆ ಹೊಗಳಿದ್ದರು. ಇದೀಗ ಚಂದ್ರು ಮತ್ತು ಸುದೀಪ್ ಅವರು ಮತ್ತೆ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ನಿರೀಕ್ಷೆ ಇಮ್ಮಡಿಯಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗ್ಲೋಬಲ್ ಚಿತ್ರಕ್ಕಾಗಿ ಒಂದಾದ ಸುದೀಪ್, ಆರ್.ಚಂದ್ರು ಮತ್ತು ರಾಜಮೌಳಿ ತಂದೆ

    ಗ್ಲೋಬಲ್ ಚಿತ್ರಕ್ಕಾಗಿ ಒಂದಾದ ಸುದೀಪ್, ಆರ್.ಚಂದ್ರು ಮತ್ತು ರಾಜಮೌಳಿ ತಂದೆ

    ಖ್ಯಾತ ನಿರ್ದೇಶಕ ಆರ್.ಚಂದ್ರು (R. Chandru) ಅಭಿಮಾನಿಗಳಿಗೆ ಅಚ್ಚರಿಯ ಸುದ್ದಿಯೊಂದನ್ನು ನೀಡಿದ್ದಾರೆ. ಸ್ಕ್ರಿಪ್ಟ್ ಗಾಗಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ರಾಜಮೌಳಿ ತಂದೆ ವಿಜಯ್ ಪ್ರಸಾದ್ (Vijayendra Prasad) ಮತ್ತು ಪ್ಯಾನ್ ಇಂಡಿಯಾ ಸ್ಟಾರ್ ಸುದೀಪ್ (Kiccha Sudeep) ಅವರನ್ನು ಒಟ್ಟಾಗಿಸಿ ಸಿನಿಮಾವೊಂದನ್ನು ಮಾಡುತ್ತಿದ್ದಾರೆ. ಈ ಸಿನಿಮಾದ ಮೂಲಕ ಚಂದ್ರ ಮತ್ತೊಂದು ಹಂತವನ್ನು ದಾಟುತ್ತಿದ್ದಾರೆ.

    ಮಗಧೀರ, ಬಾಹುಬಲಿ, ಆರ್ ಆರ್ ಆರ್ ದಂತಹ ಹಿಟ್ ಚಿತ್ರಗಳ ಕಥೆಗಾರ ವಿ .ವಿಜಯೇಂದ್ರ ಪ್ರಸಾದ್, ಪ್ಯಾನ್ ಇಂಡಿಯಾ ಎಂಬ ಪರಿಕಲ್ಪನೆ ಹುಟ್ಟುಹಾಕಿದ ಎಸ್ .ಎಸ್. ರಾಜಮೌಳಿಯ ಎಲ್ಲಾ ಚಿತ್ರಗಳಿಗೆ ಸ್ಕ್ರಿಪ್ಟ್ ರೈಟರ್ ಆದವರು. ಇದೀಗ ವಿಜಯೇಂದ್ರ ಪ್ರಸಾದ್ ಅವರು ಕನ್ನಡದ ಪ್ರತಿಷ್ಠಿತ ಆರ್.ಸಿ ಸ್ಟುಡಿಯೋಸ್ ಸಂಸ್ಥೆಯ ಚೊಚ್ಚಲ ಚಿತ್ರಕ್ಕೆ ಸ್ಕ್ರಿಪ್ಟ್ ಸೂಪರ್ ವೈಸ್ ಮಾಡಿದ್ದು, ಈ ಚಿತ್ರದಲ್ಲಿ ಪ್ಯಾನ್ ಇಂಡಿಯಾ ಸ್ಟಾರ್ ಕಿಚ್ಚ ಸುದೀಪ್ ಅವರು ನಟಿಸುತ್ತಿದ್ದಾರೆ. ಆರ್.ಚಂದ್ರು ಅವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.

    ಈ ಮೂವರು ದಿಗ್ಗಜರು ಒಂದಾಗಿ ಮಾಡುತ್ತಿರುವ ಈ ಚಿತ್ರಕ್ಕೆ ಇಡೀ ಭಾರತವೇ ಕಾತುರದಿಂದ ಎದುರು ನೋಡುತ್ತಿದ್ದು, ಈ ವರ್ಷದ ಮೆಗಾ ಹಿಟ್ ಚಿತ್ರವಾಗಲಿದೆ.  ಆರ್ .ಸಿ  ಸ್ಟುಡಿಯೋಸ್ (RC Studios) ಕರ್ನಾಟಕದ ಪ್ರತಿಷ್ಠಿತ ಸಂಸ್ಥೆಯಾಗಿದ್ದು, 5 ದೊಡ್ಡ ದೊಡ್ಡ ಚಿತ್ರಗಳಿಗೆ ಈ ವರ್ಷ ಚಾಲನೆ ದೊರೆಯಲಿದೆ. ಆರ್.ಚಂದ್ರು ಅವರು ಏನೇ ಮಾಡಿದರು ವಿಶೇಷವಾಗಿರಲಿದ್ದು ಈ ಚಿತ್ರವೂ ಕೂಡ ಹಲವು ವಿಶೇಷತೆಗಳಿಂದ ಕೂಡಿರಲಿದೆ. ಆ ವಿಶೇಷತೆಗಳಿಗೆ ಚಿತ್ರರಂಗ ಕಾಯುತ್ತಿದೆ.

    ಆರ್.ಸಿ ಸ್ಟುಡಿಯೋಸ್ ಈ ಚಿತ್ರದ ಶೀರ್ಷಿಕೆ ಬಿಡುಗಡೆಗೊಳಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಕಿಚ್ಚನ ಹುಟ್ಟುಹಬ್ಬವಾದ ಸೆಪ್ಟೆಂಬರ್ 2 ರಂದು ಅಧಿಕೃತವಾಗಿ ಘೋಷಣೆಯಾಗಲಿದೆ. ವಿಜಯೇಂದ್ರ ಪ್ರಸಾದ್ ಸ್ಕ್ರಿಪ್ಟ್ ಸೂಪರ್ ವೈಸಿಂಗ್, ಕಿಚ್ಚ ಸುದೀಪ್ ಅವರ ನಟನೆ ಮತ್ತು ಆರ್.ಚಂದ್ರು ಅವರ ನಿರ್ದೇಶನಕ್ಕೆ ಇಡೀ ಚಿತ್ರರಂಗವೇ ಕಾಯುತ್ತಿದ್ದು, ಭಾರತೀಯ ಚಿತ್ರರಂಗದ ಮೋಸ್ಟ್ ಎಕ್ಸಪೆಕ್ಟೆಡ್ ಚಿತ್ರವಾಗಿದೆ.

    ವಿಜಯೇಂದ್ರ ಪ್ರಸಾದ್ ಅವರು 25ಕ್ಕೂ ಹೆಚ್ಚು ಚಿತ್ರಗಳಿಗೆ ಕಥೆ ಬರೆದಿದ್ದು, ಎಲ್ಲಾ ಚಿತ್ರಗಳು ಕೂಡ ಕಮರ್ಷಿಯಲ್ ಸಕ್ಸಸ್ ಕಂಡಿವೆ. ಆಂಧ್ರದ ಪ್ರತಿಷ್ಠಿತ ನಂದಿ ಮತ್ತು ಫಿಲಂ ಫೇರ್ ಪ್ರಶಸ್ತಿಗೂ ಭಾಜನರಾಗಿದ್ದಾರೆ.  ಆರ್ .ಸಿ ಸ್ಟುಡಿಯೋಸ್ ಸಂಸ್ಥೆಯು ಬಹುಕೋಟಿ ವೆಚ್ಚದಲ್ಲಿ ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದು, ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಮುರಿದು ಗ್ಲೋಬಲ್ ಮೂವಿ ಕಾನ್ಸೆಪ್ಟ್ ನೊಂದಿಗೆ ಇಂಡಿಯನ್ ಹ್ಯೂಜ್ ಬಜೆಟ್ ಚಿತ್ರವಾಗಲಿದೆ.

    ಈ ಮೂಲಕ ಆರ್ ಸಿ ಸ್ಟುಡಿಯೋಸ್ ಸಂಸ್ಥೆ ಕೂಡ ಗ್ಲೋಬಲ್ ಸಂಸ್ಥೆಯಾಗಿ ಯುವ, ಪ್ರತಿಭಾವಂತ ಮತ್ತು ಉದಯೋನ್ಮುಖ ಅವಕಾಶ ಕಲ್ಪಿಸಲಾಗುತ್ತಿದೆ. ಈ ಮೂವರು ದಿಗ್ಗಜರ ಸಮಾಗಮವು ಮುಂದಿನ ಚಿತ್ರರಂಗದ ಬೆಳವಣಿಗೆಗೆ ಸಹಕಾರಿಯಾಗಲಿದೆ.  ಕಿಚ್ಚನ ಹುಟ್ಟುಹಬ್ಬಕ್ಕೆ ಆರ್ ಸಿ ಸ್ಟುಡಿಯೋಸ್ ಸಿನಿಮಾ ನಿರ್ಮಾಣ ಮಾಡುತ್ತಿರುವುದು ಪಕ್ಕಾ ಆಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]