Tag: ಆರ್.ಸಿ.ಬಿ

  • ದೊಡ್ಮನೆ ಸೊಸೆಗೆ ಅವಹೇಳನ: ಸಾರ್ವಜನಿಕರಿಂದಲೂ ಆಕ್ರೋಶ

    ದೊಡ್ಮನೆ ಸೊಸೆಗೆ ಅವಹೇಳನ: ಸಾರ್ವಜನಿಕರಿಂದಲೂ ಆಕ್ರೋಶ

    ಸೋಷಿಯಲ್ ಮೀಡಿಯಾದಲ್ಲಿ ನಟ ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರಿಗೆ ಅವಹೇಳನ ಮಾಡಿರುವ ವಿಷಯಕ್ಕೆ ಸಾರ್ವಜನಿಕರಿಂದಲೂ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಅನೇಕರು ಈ ಕುರಿತಂತೆ ಪ್ರತಿಕ್ರಿಯೆ ನೀಡಿದ್ದಾರೆ. ಅದರಲ್ಲೂ ಮಹಿಳಾ ಬರಹಗಾರರು ಮತ್ತು ಕಲಾವಿದರು ಧ್ವನಿ ಎತ್ತಿದ್ದಾರೆ. ಈ ಕುರಿತಂತೆ ತಮ್ಮದೇ ಆದ ನಿಲುವನ್ನು ವ್ಯಕ್ತ ಪಡಿಸಿದ್ದಾರೆ.

    ಅಶ್ವಿನಿ ಪುನೀತ್ ರಾಜ್‌ಕುಮಾರ್ (Ashwini Puneeth Rajkumar) ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದವರ ವಿರುದ್ಧ ಈಗಾಗಲೇ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಿಸಲಾಗಿದೆ. ಆರ್‌ಸಿಬಿ (RCB) ಸೋಲಿಗೆ ಅಶ್ವಿನಿ ಅವರೇ ಕಾರಣ ಎಂದು ನಿಂದಿಸಿದ ಅನಾಮಿಕ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

    ಕಳೆದ ಮಾರ್ಚ್ ತಿಂಗಳು 19ನೇ ತಾರೀಕಿನಂದು ಬೆಂಗಳೂರಿನ ಆರ್‌ಸಿಬಿ ಅನ್‌ಬಾಕ್ಸ್ ಇವೆಂಟ್‌ನಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರನ್ನು ಆಹ್ವಾನಿಸಿದ್ದರು. ಅದರಂತೆ ಅಶ್ವಿನಿ ಅವರು ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದಾದ ನಂತರ ಐಪಿಎಲ್ ಪ್ರಾರಂಭವಾಗಿ ಆರ್‌ಸಿಬಿ ತಂಡ ಕೆಲ ಪಂದ್ಯಗಳಲ್ಲಿ ಸೋತಿದೆ. ದರ್ಶನ್ ಅಭಿಮಾನಿ ಎಂದು ಹೇಳಿಕೊಂಡಿರುವ ‘ಗಜಪಡೆ’ ಹೆಸರಿನ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ, ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಆರ್‌ಸಿಬಿ ಕಾರ್ಯಕ್ರಮಕ್ಕೆ ಬಂದಿದ್ದಕ್ಕೆ ತಂಡ ಸೋತಿದೆ ಎಂದು ನಿಂದಿಸಲಾಗಿದೆ. ಅಭಿಮಾನಿಗಳಿಂದ ವಿರೋಧ ವ್ಯಕ್ತವಾಗುತ್ತಿದ್ದಂತೆ `ಸುದೀಪ್ ಅಭಿಮಾನಿ’ ಎಂದು ಖಾತೆಯ ಹೆಸರು ಬದಲಿಸಿದ್ದಾರೆ. ಇದರ ವಿರುದ್ಧ ಅಪ್ಪು ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಕಾನೂನು ಸಮರ ಸಾರಿದ್ದಾರೆ.

    ಅಶ್ವಿನಿ ಪುನೀತ್ ರಾಜ್ ಕುಮಾರ್ ಬಗ್ಗೆ ಬರೆದ ಕೀಳು ಮಟ್ಟದ ಪೋಸ್ಟ್‌ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಅದರಲ್ಲೂ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಕಮಿಷನರ್ ಭೇಟಿ ಮಾಡಿ ಎಫ್‌ಐಆರ್ ದಾಖಲಿಸಿದ್ದಾರೆ.

     

    ಸಾಕಷ್ಟು ಬಾರಿ ಈ ಫ್ಯಾನ್ಸ್ ವಾರ್ ಕನ್ನಡದಲ್ಲಿ ನಡೆದಿದೆ. ಅದಕ್ಕೆ ಫುಲ್ ಸ್ಟಾಪ್ ಹಾಕುವಂತೆ ಸ್ವತಃ ದರ್ಶನ್ ಅವರೇ ಈ ಹಿಂದೆ ವಿಡಿಯೋ ಮೂಲಕ ಮನವಿ ಮಾಡಿದ್ದರು. ತಮ್ಮ ಅಭಿಮಾನಿಗಳು ಯಾವುದೇ ಕಾರಣಕ್ಕೂ ಬೇರೆಯ ನಟರ ಅಥವಾ ಅಭಿಮಾನಿಗಳನ್ನು ನಿಂದಿಸಬಾರದು ಎಂದು ಮನವಿ ಮಾಡಿದ್ದರು. ಆದರೂ, ಪದೇ ಪದೇ ಇಂತಹ ಘಟನೆಗಳು ನಡೆಯುತ್ತಲೇ ಇವೆ.

  • ‘ಮರ್ಯಾದೆ ಪ್ರಶ್ನೆ ಗುರು’ ಕಪ್ ಗೆಲ್ಲಿ ಅಂತಿದೆ ಸ್ಯಾಂಡಲ್ ವುಡ್ ಸೆಲೆಬ್ರಿಟೀಸ್

    ‘ಮರ್ಯಾದೆ ಪ್ರಶ್ನೆ ಗುರು’ ಕಪ್ ಗೆಲ್ಲಿ ಅಂತಿದೆ ಸ್ಯಾಂಡಲ್ ವುಡ್ ಸೆಲೆಬ್ರಿಟೀಸ್

    ಆರ್ಸಿಬಿ (RCB) ಅಭಿಮಾನಿಗಳ ‘ಈ ಸಲ ಕಪ್ ನಮ್ದೇ’ ಎನ್ನುವ ಘೋಷಣೆಗೆ ಪರಿಪೂರ್ಣ ಅರ್ಥಸಿಕ್ಕಂಗಾಗಿದೆ.  ಆರ್ಸಿಬಿ ವನಿತೆಯರು ತಂಡ WPL ಟ್ರೋಫಿ ಎತ್ತಿ ಹಿಡಿದು, ಬೆಂಗಳೂರಿಗರ ಬಹು ವರ್ಷಗಳ ಕನಸ್ಸನ್ನು ನನಸು ಮಾಡಿದ್ದಾರೆ. WPL ಮುಗಿಯುತ್ತಿದ್ದಂತೆ ಈಗ ಐಪಿಎಲ್ ಜ್ವರ ಏರುತ್ತಿದೆ. ಹೆಣ್ಮಕ್ಳು ಸ್ಟ್ರಾಂಗ್ ಗುರು ಅಂತಾ ನಮ್ಮ ಆರ್ ಸಿಬಿ ಮಹಿಳೆಯರು ತೋರಿಸಿಕೊಟ್ಟಿದ್ದಾರೆ. ಈಗ ಕಿಂಗ್ ಕೊಹ್ಲಿ ಬಳಗ ಕಪ್ ಹೊಡೆಯುತ್ತಿಕ್ಕೆ ನಮ್ಮ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ಚಿಯರ್ಸ್ ಹೇಳಿದ್ದಾರೆ.

    ಆರ್ ಸಿಬಿ ತಂಡ ಪ್ರೋತ್ಸಾಹ ಫ್ಲಸ್ ಉತ್ಸಹ ಹೆಚ್ಚಿಸುವ ಹಾಡೊಂದು ಬಿಡುಗಡೆಯಾಗಿದೆ. ಸಕ್ಕತ್ ಸ್ಟುಡಿಯೋನ ಸ್ಪೆಷಲ್ ಕೊಡುಗೆಯಾಗಿರುವ ಆರ್ ಸಿಬಿ ಕಪ್ ಗೆಲ್ಬೇಕು ಮರ್ಯಾದೆ ಪ್ರಶ್ನೆ ಎಂಬ ಹಾಡಿಗೆ ಕೀರ್ತಿ ನಾರಾಯಣ್ ಪದ ಪೊಣಿಸಿದ್ದು, ಐಶ್ವರ್ಯ ರಂಗರಾಜನ್ ಕಂಠ ಕುಣಿಸಿದ್ದಾರೆ. ಯುವ ತಾರೆಗಳಾದ ಶೈನ್ ಶೆಟ್ಟಿ, ಸಾನ್ಯಾ ಅಯ್ಯರ್, ಕಿಶನ್ ಬೆಳಗಲಿ, ದಿವ್ಯಾ ಉರುಡುಗ ಮತ್ತು ರಘು ಗೌಡ ಮತ್ತು ಅನೇಕರು ಕಲ್ಯಾಣ್ ಟ್ಯೂನ್ ಗೆ ಬೊಂಬಾಟ್ ಆಗಿ ಹೆಜ್ಜೆ ಹಾಕಿದ್ದಾರೆ.

    ಆರ್ ಸಿಬಿ ಪುರುಷ ತಂಡಕ್ಕೆ ಹೊಸ ಹುರುಪು ತುಂಬಲಿರುವ ಈ ಸಿಂಗಿಂಗ್ ಎಲ್ಲೆಡೆ ಸೆನ್ಸೇಷನ್ ಸೃಷ್ಟಿಸುತ್ತಿದೆ. ಈ ಹಾಡಿಗೆ ಹೆಜ್ಜೆ ಹಾಕಿರುವ ಶೈನ್ ಶೆಟ್ಟಿ ಮಾತನಾಡಿ, “ಕ್ರಿಕೆಟ್ ಕೇವಲ ಒಂದು ಆಟವಲ್ಲ; ಇದು ಲಕ್ಷಾಂತರ ಅಭಿಮಾನಿಗಳನ್ನು ಒಗ್ಗೂಡಿಸುವ ಭಾವನೆಯಾಗಿದೆ. ನಮ್ಮ ಮಹಿಳಾ ತಂಡದ ಅದ್ಭುತ ಪ್ರದರ್ಶನಕ್ಕೆ ಸಾಕ್ಷಿಯಾದ ನಂತರ, ಪುರುಷರ ತಂಡಕ್ಕೆ ನಮ್ಮ ಹೃತ್ಪೂರ್ವಕ ಬೆಂಬಲವನ್ನು ನೀಡುವ ಸಮಯ ಬಂದಿದೆ. ಈ ಹಾಡಿನ ಮೂಲಕ, ನಾವು ಅವರ ಸಾಮರ್ಥ್ಯಗಳ ಮೇಲಿನ ನಮ್ಮ ನಂಬಿಕೆಯನ್ನು ತಿಳಿಸಲು ಬಯಸುತ್ತೇವೆ ಮತ್ತು ಮೈದಾನದಲ್ಲಿ ನಮ್ಮನ್ನು ಹೆಮ್ಮೆಪಡುವಂತೆ ಮಾಡಲು ಅವರನ್ನು ಒತ್ತಾಯಿಸುತ್ತೇವೆ ” ಎಂದಿದ್ದಾರೆ.

    ಸಾನ್ಯಾ ಅಯ್ಯರ್, “ಎಲ್ಲಾ ವರ್ಗದ ಜನರನ್ನು ಪ್ರೇರೇಪಿಸುವ ಮತ್ತು ಒಗ್ಗೂಡಿಸುವ ಶಕ್ತಿ ಕ್ರೀಡೆಗೆ ಇದೆ. ಕಲಾವಿದರಾಗಿ, ನಮ್ಮ ತಂಡಗಳಿಗೆ ಸಕಾರಾತ್ಮಕತೆಯನ್ನು ಹರಡಲು ಮತ್ತು ಹುರಿದುಂಬಿಸಲು ನಮ್ಮ ವೇದಿಕೆಗಳನ್ನು ಬಳಸುವುದು ನಮ್ಮ ಜವಾಬ್ದಾರಿಯಾಗಿದೆ. ಬೆಂಗಳೂರು ಪುರುಷರ ಕ್ರಿಕೆಟ್ ತಂಡವು ಗೆಲ್ಲುವುದು ಎಂಬ ನಿರೀಕ್ಷೆಯಿದೆ ನಮಗೆ ವಿಶ್ವಾಸವಿದೆ “ಎಂದು ಹೇಳಿದರು.

    ಸೋಷಿಯಲ್ ಮೀಡಿಯಾ ಸ್ಟಾರ್  ರಘು ಗೌಡ ತನ್ನ ಉತ್ಸಾಹವನ್ನು ವ್ಯಕ್ತಪಡಿಸಿದರು. “ಕ್ರೀಡೆಗಳು ಸಮುದಾಯಗಳನ್ನು ಹೇಗೆ ಒಗ್ಗೂಡಿಸುತ್ತವೆ ಎಂಬುದನ್ನು ನೋಡುವುದು ನಂಬಲಾಗದ ಸಂಗತಿ. ಈ ಹಾಡು ಸ್ಯಾಂಡಲ್ ವುಡ್ ಮತ್ತು ಕ್ರಿಕೆಟ್ ನಡುವಿನ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ ಮತ್ತು ಇದು ಬೆಂಗಳೂರು ತಂಡದ ಹಿಂದೆ ಇನ್ನೂ ಹೆಚ್ಚಿನ ಉತ್ಸಾಹದಿಂದ ನಿಲ್ಲಲು ಅಭಿಮಾನಿಗಳನ್ನು ಪ್ರೇರೇಪಿಸುತ್ತದೆ ಎಂದು ನಾನು ನಂಬುತ್ತೇನೆ “ಎಂದು ಅವರು ಹೇಳಿದರು.

     

    ನೃತ್ಯಕ್ಕೆ ಹೆಸರುವಾಸಿಯಾದ ಕಿಶನ್ ಬೆಲಗಲಿ “ನೃತ್ಯ ಸಂಯೋಜಕ ಸುಚಿನ್ ನ ಹುಕ್ ಸ್ಟೆಪ್ ನನಗೆ ತುಂಬಾ ಇಷ್ಟವಾಯಿತು.”ಎಂದು ಅವರು ಹೇಳಿದರು, “ಮರ್ಯಾದೆ ಪಶ್ನೆ” ಚಿತ್ರವನ್ನು ನಿರ್ಮಿಸಿರುವ ಸಕ್ಕತ್ ಸ್ಟುಡಿಯೋ (Sakkat Studio) ಈ ಹಾಡನ್ನು ನಿರ್ಮಿಸಿದ್ದು, ಈ ಹಾಡಿಗೂ ಸಿನಿಮಾಗೂ ಸಂಬಂಧವಿಲ್ಲ. ಆದರೆ  ಸಿನಿಮಾ ಶೀರ್ಷಿಕೆ ಇದರಲ್ಲಿ ಬಳಕೆಯಾಗಿದೆ, ಸಿನಿಮಾ ಪ್ರಚಾರಕ್ಕಿಂತ ನಮ್ಮ ಬೆಂಗಳೂರು ತಂಡ ಗೆಲ್ಲಲ್ಲಿ ಎಂಬುದು ಮರ್ಯಾದೆ ಪ್ರಶ್ನೆ ಚಿತ್ರತಂಡ ಆಶಯ. ಸಖತ್ ಕ್ರಿಯೇಟಿವಿಟಿಯಾಗಿ ಪ್ರಚಾರದ ಪಡಸಾಲೆಗೆ ಇಳಿದಿರುವ ಆರ್ ಜೆ ಪ್ರದೀಪ್ ಅವರ ತಂಡಕ್ಕೆ ರಾಯಲ್ ಸೆಲ್ಯೂಟ್.

  • RCB Unbox: ‘ಕೆಜಿಎಫ್’ ಹಾಡು ರಿಮಿಕ್ಸ್  ಮಾಡಿದ ಡಿಜೆ ಅಲೆನ್

    RCB Unbox: ‘ಕೆಜಿಎಫ್’ ಹಾಡು ರಿಮಿಕ್ಸ್ ಮಾಡಿದ ಡಿಜೆ ಅಲೆನ್

    ನಿನ್ನೆ ಬೆಂಗಳೂರಿನಲ್ಲಿ ನಡೆದ ಆರ್.ಸಿ.ಬಿ ಅನ್ಬಾಕ್ಸ್ ಇವೆಂಟ್ ನಲ್ಲಿ ಹಾಲಿವುಡ್ ಹೆಸರಾಂತ ಡಿಜೆ ಅಲೆನ್ ವಾಕರ್ (Alan Walker) ಅದ್ಭುತವಾದ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಅದರಲ್ಲೂ ಕನ್ನಡದ, ಯಶ್ ನಟನೆಯ ಕೆಜಿಎಫ್ ಸಿನಿಮಾದ ಹಾಡೊಂದನ್ನು ರಿಮಿಕ್ಸ್ ಮಾಡಿ ಎಲ್ಲರನ್ನೂ ಕುಣಿಸಿದರು. ಕಾರ್ಯಕ್ರಮಕ್ಕೂ ಮುನ್ನ ಯಾವ ಹಾಡನ್ನು ರಿಮಿಕ್ಸ್ ಮಾಡಲು ಬಯಸುತ್ತೀರಿ ಎಂದು ಅಲೆನ್ ಕೇಳಿದ್ದರು. ಜನರ ಕೋರಿಕೆಯಂತೆ ಕೆಜಿಎಫ್ ಚಿತ್ರದ ಹಾಡೊಂದನ್ನು ಅವರು ಆಯ್ಕೆ ಮಾಡಿಕೊಂಡಿದ್ದರು.

    ನಿರೀಕ್ಷೆಯಂತೆ ಅನ್‌ಬಾಕ್ಸ್‌ (RCB Unbox) ಕಾರ್ಯಕ್ರಮದಲ್ಲಿ ಆರ್‌ಸಿಬಿ ತನ್ನ ಹೆಸರಿನಲ್ಲಿ ಬದಲಾವಣೆ ಮಾಡಿಕೊಂಡಿದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರ್‌ (Royal Challengers Bengalore) ಇನ್ಮುಂದೆ ‘ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು’ (Royal Challengers Bengaluru) ಎಂದು ಬದಲಾಗಿದೆ. ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ಆರ್‌ಸಿಬಿ (RCB) ತಂಡದ ಅನ್‌ಬಾಕ್ಸ್‌ ಕಾರ್ಯಕ್ರಮ ನಡೆಯಿತು. ಈ ವೇಳೆ ಆರ್‌ಸಿಬಿ ಹೆಸರಿನಲ್ಲಿ ‘ಬೆಂಗಳೂರ್‌’ ಪದವನ್ನು ತೆಗೆದು ‘ಬೆಂಗಳೂರು’ ಎಂದು ಬದಲಾಯಿಸಿಕೊಂಡಿದೆ.

    ಹೆಸರು ಬದಲಾಯಿಸಿರುವ ಲೋಗೋ ಹಾಗೂ ನೀಲಿ ಬಣ್ಣ ಹೊಸ ಜೆರ್ಸಿ ತೊಟ್ಟಿರುವ ಆರ್‌ಸಿಬಿ ತಂಡದ ಆಟಗಾರರು ಫೋಟೋವನ್ನು ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. 2024 ರ ಐಪಿಎಲ್‌ಗೆ ಕೊಹ್ಲಿ ಪಡೆ (Virat Kohli) ಹೊಸ ಹೆಸರು ಮತ್ತು ಜೆರ್ಸಿಯೊಂದಿಗೆ ಅಖಾಡಕ್ಕೆ ಇಳಿಯಲಿದ್ದಾರೆ.

    ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಆರ್‌ಸಿಬಿ, ‘ನಾವು ಪ್ರೀತಿಸುವ ನಗರ, ನಾವು ಸ್ವೀಕರಿಸುವ ಪರಂಪರೆ ಮತ್ತು ಇದು ನಮ್ಮ ಹೊಸ ಅಧ್ಯಾಯದ ಸಮಯ. ನಿಮಗೆ ಪ್ರಸ್ತುತಪಡಿಸಲಾಗುತ್ತಿದೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು, ನಿಮ್ಮ ತಂಡ, ನಿಮ್ಮ RCB!’ ಎಂದು ಬರೆದುಕೊಂಡಿದೆ.

     

    ಆರ್‌ಸಿಬಿ ಆಟಗಾರರು ಹೊಸ ಜೆರ್ಸಿ ತೊಟ್ಟಿರುವ ಫೋಟೋವನ್ನು ಹಂಚಿಕೊಂಡು, ‘RCB ಕೆಂಪಾಗಿದೆ. ಈಗ ನೀಲಿ ಬಣ್ಣಕ್ಕೆ ಮುತ್ತಿಕ್ಕಿದೆ. ನಮ್ಮ ಹೊಸ ರಕ್ಷಾಕವಚದೊಂದಿಗೆ ನಾವು ಸಿದ್ಧರಿದ್ದೇವೆ. ನಿಮಗಾಗಿ ಬೋಲ್ಡ್ ಆಗಿ ಆಡಲು’ ಎಂದು ಬರೆದುಕೊಂಡಿದೆ.

  • ‘ಆರ್.ಸಿ.ಬಿ’ಗಾಗಿ ಲಾಂಗ್ ಹಿಡಿದ ನಟ ಶಿವರಾಜ್ ಕುಮಾರ್

    ‘ಆರ್.ಸಿ.ಬಿ’ಗಾಗಿ ಲಾಂಗ್ ಹಿಡಿದ ನಟ ಶಿವರಾಜ್ ಕುಮಾರ್

    ರಾಯಲ್ ಚಾಲೇಂಜರ್ಸ್ ಬೆಂಗಳೂರು ಸಿನಿಮಾ ರಂಗದ ಜೊತೆಗೂಡಿ ಪ್ರೊಮೋಗಳನ್ನು ರಿಲೀಸ್ ಮಾಡುತ್ತಿದೆ. ಅನ್ ಬಾಕ್ಸ್ ಹೆಸರಿನ ಇವೆಂಟ್ ವೊಂದನ್ನು ಆಯೋಜನೆ ಮಾಡಲಾಗಿದ್ದು, ಈ ಇವೆಂಟ್ ನಲ್ಲಿ ಹೆಸರು ಬದಲಾವಣೆ ಆಗಲಿದೆ ಎನ್ನುವುದು ಸದ್ಯಕ್ಕಿರುವ ಮಾಹಿತಿ. ಈ ಇವೆಂಟ್ ಗಾಗಿಯೇ ಈವರೆಗೂ ಮೂರು ಪ್ರೊಮೊಗಳನ್ನು ಬಿಡಲಾಗಿದೆ. ಇಂದು ಶಿವರಾಜ್ ಕುಮಾರ್ (Shivaraj Kumar) ಇರುವ ಪ್ರೊಮೋ ರಿಲೀಸ್ ಆಗಿದ್ದು, ಶಿವಣ್ಣ ಸಖತ್ತಾಗಿ ಲಾಂಗ್ ಎತ್ತಿದ್ದಾರೆ.

    ಈ ಹಿಂದೆ ರಿಲೀಸ್ ಆಗಿರುವ ಪ್ರೊಮೋಗಳು ಕೂಡ ಸಖತ್ ಕ್ರೇಜ್ ಕ್ರಿಯೇಟ್ ಮಾಡುತ್ತಿವೆ. ಹೆಸರು ಬದಲಾವಣೆಗೆ ಸಂಬಂಧಿಸಿದಂತೆ ಈ ಇವೆಂಟ್ ನಡೆಯುತ್ತಿದ್ದು, ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini Puneeth Rajkumar) ಅವರ ಪ್ರೊಮೋ ಮೊನ್ನೆ ರಿಲೀಸ್ ಆಗಿದೆ. ಅದು ಹೆಸರನ್ನು ಬದಲಿಸುವ ಕುರಿತು ಒಂದಷ್ಟು ಮಾಹಿತಿಯನ್ನು ನೀಡುತ್ತದೆ.

    ಈ ಹಿಂದೆ ಆರ್‌ಸಿಬಿ (RCB) ಕೋಣಗಳ ಜೊತೆ ‘ಕಾಂತಾರ’ (Kantara) ಶಿವ ಎಂಟ್ರಿ ಕೊಟ್ಟಿದ್ದ ಪ್ರೊಮೋ ರಿಲೀಸ್ ಆಗಿತ್ತು. ಅದು ಕೂಡ ಆರ್‌ಸಿಬಿ ಹೆಸರು ಬದಲಾವಣೆ ಸಾಧ್ಯತೆ ಬಗ್ಗೆ ಸುಳಿವು ನೀಡಿತ್ತು. ಆರ್‌ಸಿಬಿ ತಂಡದ ಜೊತೆ ಈ ಬಾರಿ ಕಾಂತಾರ ರಿಷಬ್ ಶೆಟ್ಟಿ (Rishab Shetty) ಕೈಜೋಡಿಸಿದ್ದಾರೆ. ಆರ್‌ಸಿಬಿ ಐಪಿಎಲ್ ಕ್ರಿಕೆಟ್ ತಂಡದ ಜೊತೆ ಹೊಂಬಾಳೆ ಸಂಸ್ಥೆ ಕೂಡ ಸಾಥ್ ನೀಡಿದೆ. ಆರ್‌ಸಿಬಿಗೆ ಡಿಜಿಟಲ್ ಪಾರ್ಟ್ನರ್ ಆಗಿ ಹೊಂಬಾಳೆ ಫಿಲ್ಮ್ ಕೈಜೋಡಿಸಿದ್ದಾರೆ.

    ಮಾರ್ಚ್ 22ರಿಂದ 17ನೇ ಐಪಿಎಲ್ ಸೀಸನ್ ಆರಂಭವಾಗಲಿದೆ. ಈ ಬಾರಿ ಆದರೂ ಆರ್‌ಸಿಬಿ ತಂಡ ಕಪ್ ಎತ್ತಿ ಹಿಡಿಯುತ್ತಾ ಎಂದು ಕ್ರಿಕೆಟ್ ಫ್ಯಾನ್ಸ್ ಎದುರು ನೋಡ್ತಿದ್ದಾರೆ. ಮತ್ತೊಂದು ಕಡೆ ಹೊಂಬಾಳೆ ಫಿಲ್ಮ್ಸ್ ಆರ್‌ಸಿಬಿ ಬಗ್ಗೆ ಹೊಸ ಹೊಸ ವಿಚಾರಗಳನ್ನು ಹಂಚಿಕೊಳ್ಳುತ್ತಿದೆ. ಆರ್‌ಸಿಬಿ ಅಭಿಮಾನಿಗಳ ಬಹಳ ದಿನಗಳ ಬೇಡಿಕೆಯನ್ನು ಆರ್‌ಸಿಬಿ ತಂಡದ ಮಾಲೀಕರು ಈ ಬಾರಿ ಈಡೇರಿಸುತ್ತಿದ್ದಾರೆ. ಆ ಬಗ್ಗೆ ರಿಷಬ್ ಸುಳಿವು ಕೊಟ್ಟಿದ್ದಾರೆ.

    ರಿಷಬ್ ಶೆಟ್ಟಿ ಏನು ಹೇಳ್ತಿದ್ದಾರೆ ಅರ್ಥ ಆಯ್ತಾ? ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಒಂದು ವೀಡಿಯೋ ರಿಲೀಸ್ ಆಗಿದೆ. ಇದರಲ್ಲಿ Bangalore ಎಂದು ಕೋಣದ ಮೇಲೆ ಬರೆದ ಕೋಣವನ್ನು ನೋಡಿ, ಭಟ್ರೆ ತಗೊಂಡೋಗಿ ಎಂದು ರಿಷಬ್‌ ಹೇಳುತ್ತಾರೆ. ಇದು ಅರ್ಥ ಆಯ್ತಾ? ಎಂದು ಕೇಳಿದ್ದಾರೆ. 8 ವರ್ಷಗಳ ಹಿಂದೆ ಬೆಂಗಳೂರು ಎನ್ನುವುದನ್ನು ಇಂಗ್ಲೀಷ್‌ನಲ್ಲಿ ಬರೆಯುವಾಗ ಮತ್ತು ಉಚ್ಛರಿಸುವಾಗ ಸಣ್ಣ ಬದಲಾವಣೆ ಮಾಡಲಾಗಿತ್ತು.

     

    Bangalore ಎನ್ನುವುದನ್ನು Bengaluru ಎಂದು ಬದಲಾಯಿಸಿದ್ದರು. ಆರ್‌ಸಿಬಿ ತಂಡದ ಬಗ್ಗೆ ಮಾತನಾಡುವಾಗ ಮಾತ್ರ ಅದು Bangalore ಎಂದೇ ಇತ್ತು. ಅಭಿಮಾನಿಗಳು ಇದನ್ನು ಬದಲಿಸಿ Bengaluru ಎಂದು ಮಾಡಬೇಕು ಎಂದು ಮನವಿ ಮಾಡುತ್ತಿದ್ದರು. ಇದೀಗ ರಿಷಬ್ ಶೆಟ್ಟಿ ಸ್ಪೆಷಲ್ ವಿಡಿಯೋದಲ್ಲಿ ಆ ಬಗ್ಗೆ ಸುಳಿವು ಕೊಟ್ಟಿದ್ದಾರೆ. ಮಾರ್ಚ್ 19ರಂದು ಅನ್‌ಬಾಕ್ಸ್ ಕಾರ್ಯಕ್ರಮ ನಡೆಯಲಿದೆ. ಆ ದಿನ ಅಧಿಕೃತವಾಗಿ ಇದು ಗೊತ್ತಾಗಲಿದೆ.

  • ಕ್ಯಾಪ್ಟನ್ ಮಿಲ್ಲರ್ ಶೂಟಿಂಗ್ ನಡುವೆ ಕ್ರಿಕೆಟ್ ವೀಕ್ಷಿಸಿದ ಧನುಷ್, ಶಿವಣ್ಣ

    ಕ್ಯಾಪ್ಟನ್ ಮಿಲ್ಲರ್ ಶೂಟಿಂಗ್ ನಡುವೆ ಕ್ರಿಕೆಟ್ ವೀಕ್ಷಿಸಿದ ಧನುಷ್, ಶಿವಣ್ಣ

    ದೇ ಮೊದಲ ಬಾರಿಗೆ ಶಿವರಾಜ್ ಕುಮಾರ್ (Shivaraj Kumar) ತಮಿಳು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ರಜನಿಕಾಂತ್ ಜೊತೆ ಜೈಲರ್ ಸಿನಿಮಾದಲ್ಲಿ ನಟಿಸುತ್ತಿದ್ದರೆ, ಧನುಷ್ (Dhanush) ಜೊತೆ ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸತತವಾಗಿ ಕ್ಯಾಪ್ಟನ್ ಮಿಲ್ಲರ್ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಶೂಟಿಂಗ್ ನಡುವೆ ಬಿಡುವು ಮಾಡಿಕೊಂಡು ಧನುಷ್ ಮತ್ತು ಶಿವರಾಜ್ ಕುಮಾರ್ ಐಪಿಎಲ್ ಪಂದ್ಯ ವೀಕ್ಷಿಸಿದ್ದಾರೆ.

    ನಿನ್ನೆ ಬೆಂಗಳೂರಿನ (Bangalore) ಚಿನ್ನಸ್ವಾಮಿ ಕ್ರೀಡಾಂಗಣಯದಲ್ಲಿ ಆಯೋಜನೆಯಾಗಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 24ನೇ ಪಂದ್ಯದಲ್ಲಿ ಬೆಂಗಳೂರಿನ ರಾಯಲ್ ಚಾಲೆಂಜರ್ಸ್ (RCB,)  ಹಾಗೂ ಚೆನ್ನೈನ ಸೂಪರ್ ಕಿಂಗ್ಸ್ (CSK) ತಂಡಗಳು ಮುಖಾಮುಖಿಯಾಗಿದ್ದವು. ರಾಯಲ್ ಚಾಲೆಂಜರ್ಸ್ ಪರವಾಗಿ ಶಿವರಾಜ್ ಕುಮಾರ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಧನುಷ್ ಬೆಂಬಲಿಸಿದರು. ಜೊತೆಗೆ ಒಟ್ಟಿಗೆ ಕೂತು ಪಂದ್ಯ ವೀಕ್ಷಿಸಿದ್ದು ವಿಶೇಷವಾಗಿತ್ತು. ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 8 ರನ್‍ ಗಳ ರೋಚಕ ಗೆಲುವನ್ನು ಕಂಡಿದೆ. ಶಿವರಾಜ್ ಕುಮಾರ್ ಹಾಗೂ ಧನುಷ್ ಒಟ್ಟಿಗೆ ಕೂತು ಪಂದ್ಯ ವೀಕ್ಷಿಸಿದ ಫೋಟೋಗಳು ವೈರಲ್ ಆಗಿವೆ. ಇದನ್ನೂ ಓದಿ:ಸೀರೆಯುಟ್ಟು ಮಿಂಚಿದ ನಿವೇದಿತಾಗೆ ರಾ ರಾ ನಾಗವಲ್ಲಿ ಎಂದ ನೆಟ್ಟಿಗರು

    ರಜನಿಕಾಂತ್ ನಟನೆಯ ಜೈಲರ್ ಸಿನಿಮಾದಲ್ಲಿ ಶಿವರಾಜ್ ಕುಮಾರ್ ವಿಶೇಷ ಪಾತ್ರ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ,  ಪಾತ್ರ ಯಾವುದು, ಹಿನ್ನೆಲೆ ಏನು ಎನ್ನುವ ವಿಚಾರ ಈವರೆಗೂ ಚಿತ್ರತಂಡ ಬಿಟ್ಟು ಕೊಟ್ಟಿಲ್ಲ. ಸ್ವತಃ ಶಿವರಾಜ್ ಕುಮಾರ್ ಕೂಡ ಈತನಕ ಹೇಳಿಕೊಂಡಿಲ್ಲ. ಪಾತ್ರ ಮತ್ತು ಕಥೆಯ ಬಗ್ಗೆ ಗೌಪ್ಯತೆ ಕಾಪಾಡಿಕೊಂಡು ಬರಲಾಗುತ್ತಿದೆ.

    ಆದರೆ, ಆಕಸ್ಮಿಕ ಎನ್ನುವಂತೆ ಧನುಷ್ ಜೊತೆ ಮಾಡುತ್ತಿದ್ದ ಕ್ಯಾಪ್ಟನ್ ಮಿಲ್ಲರ್ (Captain Miller) ಸಿನಿಮಾದ ಕೆಲವು ವಿಷಯಗಳು ಸೋರಿಕೆಯಾಗಿವೆ. ಅಂದರೆ, ಶಿವರಾಜ್ ಕುಮಾರ್ ಅವರಿಗೆ ಕೇಶವಿನ್ಯಾಸ ಮಾಡುತ್ತಿರುವ ರಾಜು ಎನ್ನುವವರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಪಾತ್ರ ಮತ್ತು ಸಿನಿಮಾದ ಕಥೆಯನ್ನೂ ಅವರು ಬಿಟ್ಟುಕೊಟ್ಟಿದ್ದಾರೆ.

    ಕಾಡು ಜನರು ಮತ್ತು ಬ್ರಿಟಿಷ್ ರ ನಡುವಿನ ಹೋರಾಟದ ಕಥೆಯನ್ನು ಕ್ಯಾಪ್ಟನ್ ಮಿಲ್ಲರ್ ನಲ್ಲಿ ಹೇಳುತ್ತಿದ್ದಾರಂತೆ ನಿರ್ದೇಶಕರು. ಈ ಸಿನಿಮಾದಲ್ಲಿ ಕಾಡು ಜನರ ಪಾತ್ರದಲ್ಲಿ ಶಿವಣ್ಣ ಮತ್ತು ಧನುಷ್ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಧನುಷ್ ಅಣ್ಣನ ಪಾತ್ರದಲ್ಲಿ ಶಿವರಾಜ್ ಕುಮಾರ್ ನಟಿಸಿದ್ದಾರಂತೆ.

  • RCB ಬಗ್ಗೆ ಅಚ್ಚರಿಯ ಹೇಳಿಕೆ ಕೊಟ್ಟ ನಿರ್ದೇಶಕ ಸಿಂಪಲ್ ಸುನಿ

    RCB ಬಗ್ಗೆ ಅಚ್ಚರಿಯ ಹೇಳಿಕೆ ಕೊಟ್ಟ ನಿರ್ದೇಶಕ ಸಿಂಪಲ್ ಸುನಿ

    ಮೊದಲಿನಿಂದಲೂ ಆರ್ ಸಿ ಬಿ (RCB) ಟೀಮ್ ಅನ್ನು ಬೆಂಬಲಿಸುತ್ತಾ ಬಂದಿರುವ ಸ್ಯಾಂಡಲ್ ವುಡ್ ನಿರ್ದೇಶಕ ಸಿಂಪಲ್ ಸುನಿ (Simple Suni), ನಿನ್ನೆ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಆರ್ ಸಿ ಬಿ ಸೋತಿರುವುದಕ್ಕೆ (Loss) ಬೇಸರ ವ್ಯಕ್ತ ಪಡಿಸಿದ್ದಾರೆ. ಮುಂದಿನ ಮ್ಯಾಚ್ ಕೂಡ ಸೋಲಿರಿ ಎಂದು ಅಚ್ಚರಿಯ ಹೇಳಿಕೆಯನ್ನು ಕೊಟ್ಟಿದ್ದಾರೆ. ಜೊತೆಗೆ ಆಶಾಭಾವವನ್ನೂ ಅವರು ವ್ಯಕ್ತ ಪಡಿಸಿದ್ದು, 17ನೇ ತಾರೀಖು ಮ್ಯಾಚ್ ನಮ್ಮದೇ ಆಗಬೇಕು ಎಂದಿದ್ದಾರೆ.

    ಈ ಕುರಿತು ಸರಣಿಯ ಟ್ವೀಟ್ ಮಾಡಿರುವ ಸುನಿ, ‘ಧೋನಿ ಮೇಲೆ ರೆಸ್ಪೆಕ್ಟ್ ಇದೆ. ಸಿಎಸ್ ಕೆ ಮೇಲೆ ಜಿದ್ದಿದೆ, ಆರ್ ಸಿ ಬಿ ಮೇಲೆ ಪ್ರಾಣಾನೇ ಇದೆ’ ಎಂದು ಕಾವ್ಯಾತ್ಮಕವಾಗಿ ಸೋಷಿಯಲ್ ಮೀಡಿಯಾದಲ್ಲಿ ಬರೆದಿದ್ದಾರೆ. ಆರ್ ಸಿ ಬಿ ಸತತವಾಗಿ ಎರಡು ಪಂದ್ಯವನ್ನು ಸೋತಿದೆ. ನಿನ್ನೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಆರ್ ಸಿ ಬಿ ಚೆನ್ನಾಗಿಯೇ ಆಡಿತ್ತು. ಹಾಗಾಗಿ ಈ ಪಂದ್ಯವನ್ನು ಗೆಲ್ಲುತ್ತದೆ ಎಂದು ನಂಬಿಕೆಯಿತ್ತು. ಕೊನೆ ಗಳಿಗೆಯಲ್ಲಿ ನಂಬಿಕೆ ಹುಸಿ ಆಯಿತು. ಇದನ್ನೂ ಓದಿ: ಮಗಳ ಮುದ್ದಾದ ಫೋಟೋ ಹಂಚಿಕೊಂಡ ನಟಿ ಮಾನಸ ಜೋಶಿ

    ನಿನ್ನೆಯ ಸೋಲು ಕೂಡ ಅನೇಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಮುಂದಿನ 15ನೇ ತಾರೀಖು ಮತ್ತು 17ನೇ ತಾರೀಖು ಎರಡು ಪಂದ್ಯಗಳಿವೆ. 17ನೇ ತಾರೀಖಿನ ಪಂದ್ಯ ಮಹತ್ವದ್ದು ಆಗಿರುವುದರಿಂದ 15ನೇ ತಾರೀಖು ಮ್ಯಾಚ್ ಸೋತರೂ, 17ಕ್ಕೆ ಸೋಲುವಂತಿಲ್ಲ ಎಂದು ಸಿಂಪಲ್ ಸುನಿ ಟ್ವೀಟ್ ಮಾಡಿದ್ದಾರೆ.

    ಮತ್ತೊಂದು ಟ್ವೀಟ್ ಮಾಡಿರುವ ಸುನಿ, ‘ವೈಡ್ ಬಾಲ್ ಹಾಕೋದು ಬಿಡೋಲ್ಲ. ಬ್ಯಾಟಿಂಗ್ ಚೆನ್ನಾಗಿ ಮಾಡಿದ್ರೆ ಬೌಲಿಂಗ್ ಮಾಡೋಲ್ಲ. ಬೌಲಿಂಗ್ ಮಾಡಿದ್ರೆ ಬ್ಯಾಟಿಂಗ್ ಆಡೋಲ್ಲ. ಕರ್ನಾಟಕ ಪ್ಲೇಯರ್ಸ್ ನ ತಗೋಳಲ್ಲ. ಬ್ಯಾಂಗಳೂರ್ ನ ಬೆಂಗಳೂರು ಮಾಡಲ್ಲ. ಆದರೂ ನಮ್ ಕರ್ಮ ದ್ವೇಷಿಸೋಕೆ ನಮಗ್ ಬರೋಲ್ಲ. ನಿಮ್ಮ ಮೇಲೆ ಅಭಿಮಾನ ಕಮ್ಮಿ ಆಗಿಲ್ಲ. ಸ್ಟೇಟಸ್ ಹಾಕ್ದೆ ಮಲಗೋಲ್ಲ’ ಎಂದು ಬರೆದಿದ್ದಾರೆ.

  • ಐಪಿಎಲ್ ಬಿಡ್ಡಿಂಗ್‍ನಲ್ಲಿ ಮೋರಿಸ್ ದಾಖಲೆ – ಬೆಂಗಳೂರು ಪಾಲಾದ ಮ್ಯಾಕ್ಸ್‌ವೆಲ್

    ಐಪಿಎಲ್ ಬಿಡ್ಡಿಂಗ್‍ನಲ್ಲಿ ಮೋರಿಸ್ ದಾಖಲೆ – ಬೆಂಗಳೂರು ಪಾಲಾದ ಮ್ಯಾಕ್ಸ್‌ವೆಲ್

    ಚೆನ್ನೈ: ಐಪಿಎಲ್‍ನಲ್ಲಿ ದಕ್ಷಿಣ ಆಫ್ರಿಕಾದ ಆಲ್‍ರೌಂಡರ್ ಆಟಗಾರ ಕ್ರೀಸ್ ಮೋರಿಸ್ ಇತಿಹಾಸ ಸೃಷ್ಟಿಸಿದ್ದಾರೆ. ಇಂದು ನಡೆಯುತ್ತಿರುವ ಬಿಡ್‍ನಲ್ಲಿ 16.25 ಕೋಟಿ ರೂ. ನೀಡಿ ರಾಜಸ್ಥಾನ ರಾಯಲ್ಸ್ ತಂಡ ಮೋರಿಸ್ ಅವರನ್ನು ಖರೀದಿಸಿದೆ. ಇತ್ತ 14.25 ಕೋಟಿಗೆ ಬೆಂಗಳೂರು ತಂಡ ಗ್ಲೇನ್ ಮ್ಯಾಕ್ಸ್‌ವೆಲ್ ಅವರನ್ನು ಖರೀದಿಸಿದೆ.

    ಈ ಹಿಂದೆ 2015 ರಲ್ಲಿ ಯುವರಾಜ್ ಸಿಂಗ್ ಅವರನ್ನು ಡೆಲ್ಲಿ ಡೇರ್‌ಡೇವಿಲ್ಸ್‌  ತಂಡ 16 ಕೋಟಿ ರೂ. ನೀಡಿ ಖರೀದಿಸಿತ್ತು. ಈಗ ಮೋರಿಸ್ ಅವರು ಐಪಿಎಲ್ ದುಬಾರಿ ಆಟಗಾರನಾಗಿ ಹೊರ ಹೊಮ್ಮಿದ್ದಾರೆ. ಈ ಬಾರಿಯ ಬಿಡ್‍ನಲ್ಲಿ ಮೋರಿಸ್ ಅವರಿಗೆ 75 ಲಕ್ಷ ರೂ. ಮೂಲ ಬೆಲೆ ನಿಗದಿಯಾಗಿತ್ತು.

    14ನೇ ಆವೃತ್ತಿಯ ಐಪಿಎಲ್ ಹರಾಜು ಇಂದು ಚೆನ್ನೈನಲ್ಲಿ ನಡೆಯುತ್ತಿದ್ದು, ಆಸ್ಟ್ರೇಲಿಯಾದ ಸ್ಟಾರ್ ಆಲ್‍ರೌಂಡರ್ ಮ್ಯಾಕ್ಸ್‌ವೆಲ್ ಖರೀದಿಸಲು ಚೆನೈ ಸೂಪರ್ ಕಿಂಗ್ಸ್, ಕೋಲ್ಕತ್ತ ನೈಟ್ ರೈಡರ್ಸ್ ಮತ್ತು ಆರ್‌ಸಿಬಿ ತಂಡ ತೀವ್ರ ಪೈಪೋಟಿಗೆ ಬಿದ್ದಿತ್ತು. ಅಂತಿಮವಾಗಿ ಆರ್‌ಸಿಬಿ 14.25 ಕೋಟಿ ರೂ. ದುಬಾರಿ ಮೊತ್ತ ನೀಡಿ ಖರೀದಿಸಿದೆ.

    ಮ್ಯಾಕ್ಸ್‌ವೆಲ್ ಕಳೆದ ಬಾರಿ 10.75 ಕೋಟಿ ರೂಪಾಯಿಗೆ ಪಂಜಾಬ್ ತಂಡದ ಪಾಲಾಗಿದ್ದರು. ಆದರೆ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ತೊರದ ಕಾರಣ ಈ ಬಾರಿ ತಂಡದಿಂದ ಅವರನ್ನು ಕೈಬಿಡಲಾಗಿತ್ತು.

    14ನೇ ಆವೃತ್ತಿಯ ಐಪಿಎಲ್ ಹರಾಜಿನಲ್ಲಿ ಹೆಚ್ಚು ಬೇಡಿಕೆಯ ಆಟಗಾರನಾಗಿ ಕಂಡುಬಂದಿದ್ದ ಮ್ಯಾಕ್ಸ್‌ವೆಲ್ ಎಬಿಡಿ ವಿಲಿಯರ್ಸ್ ಜೊತೆ ಆಡುವ ಇಂಗಿತ ವ್ಯಕ್ತಪಡಿಸಿದ್ದರು. ಇದೀಗ ಅವರ ಆಸೆಯಂತೆ ಆರ್‌ಸಿಬಿ ತಂಡ ಖರೀದಿಸಿದೆ.

  • ಉತ್ತಮ ಆಟಗಾರರನ್ನು ಖರೀದಿಸಿ ಬಲಿಷ್ಠ ತಂಡವನ್ನು ಕಟ್ಟುತ್ತೇವೆ – ಕೊಹ್ಲಿ

    ಉತ್ತಮ ಆಟಗಾರರನ್ನು ಖರೀದಿಸಿ ಬಲಿಷ್ಠ ತಂಡವನ್ನು ಕಟ್ಟುತ್ತೇವೆ – ಕೊಹ್ಲಿ

    ನವದೆಹಲಿ: ನಾಳೆ ನಡೆಯಲಿರುವ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಉತ್ತಮ ಆಟಗಾರರನ್ನು ಖರೀದಿಸಿ ಬಲಿಷ್ಠ ತಂಡವನ್ನು ಕಟ್ಟುತ್ತೇವೆ ಎಂದು ಆರ್.ಸಿ.ಬಿ ತಂಡದ ನಾಯಕ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ.

    ನಾಳೆ ಕೋಲ್ಕತ್ತಾದಲ್ಲಿ ಐಪಿಎಲ್ 2020 ರ ಹರಾಜು ಪ್ರಕ್ರಿಯೆ ಆರಂಭವಾಗಲಿದ್ದು, ತಂಡಗಳು ತಮಗೆ ಬೇಕಾದ ಆಟಗಾರರು ಬಿಡ್ ಮಾಡುವುದಕ್ಕೆ ಸಕಲ ಸಿದ್ಧತೆಗಳನ್ನು ನಡೆಸಿವೆ. 971 ಮಂದಿಯ ಪಟ್ಟಿಯನ್ನು 332ಕ್ಕೆ ಇಳಿಕೆ ಮಾಡಿ ಐಪಿಎಲ್ ಆಡಳಿತ ಮಂಡಳಿ ಪಟ್ಟಿಯನ್ನು ತಂಡದ ಫ್ರಾಂಚೈಸಿಗಳಿಗೆ ನೀಡಿದೆ. ಈ ಪಟ್ಟಿಯಲ್ಲಿ ಭಾರತದ 19 ಮಂದಿ ಆಟಗಾರರು ಹಾಗೂ ಫ್ರಾಂಚೈಸಿಗಳು ಮನವಿ ಮಾಡಿದ 24 ಮಂದಿ ಕ್ರಿಕೆಟಿಗರು ಸೇರಿದ್ದಾರೆ.

    ಈಗ ಈ ಹರಾಜು ಪ್ರಕ್ರಿಯೆ ವಿಚಾರವಾಗಿ ವಿಡಿಯೋವೊಂದನ್ನು ಮಾಡಿರುವ ವಿರಾಟ್ ಕೊಹ್ಲಿ, ವಿಡಿಯೋದಲ್ಲಿ ಎಲ್ಲಾ ನನ್ನ ಆರ್‍ಸಿಬಿ ಅಭಿಮಾನಿಗಳಿಗೂ ನಮಸ್ಕಾರ ಮುಂಬರುವ ಐಪಿಎಲ್ ಆವೃತ್ತಿಗಾಗಿ ಹರಾಜು ಪ್ರಕ್ರಿಯೆ ನಡೆಯುತ್ತಿರುವುದು ನಿಮಗೆ ಗೊತ್ತಿದೆ. ನೀವು ನಮ್ಮ ತಂಡದ ಜೊತೆ ಸದಾ ಇರುತ್ತೀರಿ ಎಂಬುದು ನನಗೆ ಗೊತ್ತಿದೆ. ತಂಡದ ಆಡಳಿತ ಮಂಡಳಿ ಮತ್ತು ಕೋಚ್‍ಗಳಾದ ಮೈಕ್ ಹೆಸ್ಸನ್ ಮತ್ತು ಸೈಮನ್ ಕ್ಯಾಟಿಚ್ ಉತ್ತಮ ಕೆಲಸ ಮಾಡುತ್ತಿದ್ದಾರೆ. ಹರಾಜು ಪ್ರಕ್ರಿಯೆ ವಿಚಾರವಾಗಿ ನಾವು ಚರ್ಚೆ ಮಾಡಿದ್ದೇವೆ ಎಂದು ಹೇಳಿದ್ದಾರೆ.

    ಮುಂಬರುವ ಆವೃತ್ತಿಗಾಗಿ ಬೇಕಾಗಿರುವ ಆಟಗಾರರನ್ನು ಹರಾಜಿನಲ್ಲಿ ತೆಗೆದುಕೊಂಡು ಉತ್ತಮ ಮತ್ತು ಬಲಿಷ್ಠ ತಂಡ ಕಟ್ಟುತ್ತೇವೆ. ನಿಮ್ಮ ಪ್ರೀತಿಗೆ ನಾವು ಬೆಲೆ ಕಟ್ಟಲು ಆಗಲ್ಲ. ಇದೇ ರೀತಿ ಮುಂಬರುವ 2020 ರ ಆವೃತ್ತಿಯಲ್ಲೂ ನಮಗೆ ನೀವು ಬೆಂಬಲಿಸಬೇಕು ಎಂದು ಕೊಹ್ಲಿ ವಿಡಿಯೋದಲ್ಲಿ ಹೇಳಿದ್ದಾರೆ. ಕೊಹ್ಲಿ ಅವರ ಈ ವಿಡಿಯೋವನ್ನು ಆರ್.ಸಿ.ಬಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿದೆ.

    ವಿರಾಟ್ ಕೊಹ್ಲಿ 2013 ರಿಂದ ಆರ್.ಸಿ.ಬಿ ತಂಡವನ್ನು ನಾಯಕನಾಗಿ ಮುನ್ನಡೆಸುತ್ತಿದ್ದು, ಇಲ್ಲಿಯವರಿಗೆ ಕಪ್ ಗೆಲ್ಲುವಲ್ಲಿ ವಿಫಲವಾಗಿದ್ದಾರೆ. ಕಳೆದ ಕೆಲ ಆವೃತ್ತಿಗಳಲ್ಲಿ ನಿರಾಶದಾಯಕ ಆಟ ಪ್ರದರ್ಶನ ನೀಡಿರುವ ಬೆಂಗಳೂರು ತಂಡ 2016 ಫೈನಲಿಗೆ ಹೋಗಿ ಹೈದರಾಬಾದ್ ವಿರುದ್ಧ ಸೋತ ನಂತರ ಅಂಕಪಟ್ಟಿಯಲ್ಲಿ 2017 ರಲ್ಲಿ ಕೊನೆಯ ಸ್ಥಾನ, 2018 ರಲ್ಲಿ ಆರನೇ ಸ್ಥಾನ ಮತ್ತು 2019 ರಲ್ಲಿ ಮತ್ತೆ ಕೊನೆಯ ಸ್ಥಾನಕ್ಕೆ ಕುಸಿದಿತ್ತು. ಇದನ್ನು ಓದಿ: ಯುವಿಗೆ 16 ಕೋಟಿ, ಬೆನ್‌ ಸ್ಟೋಕ್ಸ್‌ಗೆ 14.50 ಕೋಟಿ – 2014 ರಿಂದ 2019 ರವರಗಿನ ದುಬಾರಿ ಆಟಗಾರರ ಪಟ್ಟಿ

  • ಸಿಂಪಲ್ ಸುನಿ ಆರ್‌ಸಿಬಿ ಭವಿಷ್ಯ ಹೇಳಿದ್ರು

    ಸಿಂಪಲ್ ಸುನಿ ಆರ್‌ಸಿಬಿ ಭವಿಷ್ಯ ಹೇಳಿದ್ರು

    ಬೆಂಗಳೂರು: ಐಪಿಎಲ್ ಪ್ರಾರಂಭವಾದ ನಂತರದಿಂದ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ರಾರಾಜಿಸುವ  ಪೋಸ್ಟ್  ಅಂದ್ರೆ `ಈ ಬಾರಿ ಕಪ್ ನಮ್ದೇ’. ಕಳೆದ ಆವೃತ್ತಿಗಳಿಗೆ ಹೋಲಿಸಿದರೆ ಈ ಆವೃತ್ತಿಯಲ್ಲಿ ಆರ್.ಸಿ.ಬಿ ತಂಡದ ಅಭಿಮಾನಿಗಳು ಅಗತ್ಯಕ್ಕಿಂತ ಹೆಚ್ಚಿನ ಪ್ರಚಾರವನ್ನೇ ನೀಡಿದ್ರೂ ಸಹ ಆರ್.ಸಿ.ಬಿ ತಂಡವೂ ಇಲ್ಲಿಯವರೆಗೂ ಆಡಿದ ನಾಲ್ಕು ಪಂದ್ಯಗಳಲ್ಲೂ ಸೋಲಿನ ಲಡ್ಡುವನ್ನು ತಿನ್ನುತ್ತಲೇ ಇದೆ. ಅಲ್ಲದೇ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ. ಚೆನ್ನೈ, ಮುಂಬೈ, ಹೈದ್ರಾಬಾದ್, ರಾಜಸ್ಥಾನ ತಂಡಗಳ ವಿರುದ್ಧ ಸೋತಿರುವ ಆರ್ ಸಿ ಬಿ ತಂಡದ ಬಗ್ಗೆ ಅಭಿಮಾನಿಗಳು ಈಗಾಗಲೇ ನಂಬಿಕೆ ವಿಶ್ವಾಸ ಎಲ್ಲವನ್ನು ಕಳೆದುಕೊಂಡಿದ್ದಾರೆ. ಎಷ್ಟೇ ಪಂದ್ಯ ಸೋತರೂ ನಮ್ಮ ಒಲವು ನಮ್ಮ ತಂಡಕ್ಕೆ ಮಾತ್ರ ಎಂಬ ವಿಶ್ವಾಸದಲ್ಲಿರುವ ಆರ್ ಸಿ ಬಿ ತಂಡದ ಅಪ್ಪಟ ಅಭಿಮಾನಿ ಸಿಂಪಲ್ ಸುನಿ ಭವಿಷ್ಯವಾಣಿಯೊಂದನ್ನು ನುಡಿದಿದ್ದಾರೆ.

    ಸುನಿ ಭವಿಷ್ಯವಾಣಿಯ ಪ್ರಕಾರ ಮುಂದಿನ ಪಂದ್ಯದಲ್ಲಿ ಆರ್ ಸಿ ಬಿ ಗೆಲ್ಲೋ ಲಕ್ಷಣಗಳಿವೆಯಂತೆ. ಸರಣಿಯಲ್ಲಿ ಸೋಲಿನ ರುಚಿ ಉಂಡಿರುವ ಆರ್ ಸಿ ಬಿ ಈ ಪಂದ್ಯದಲ್ಲಿ ಗೆಲ್ಲಲೇ ಬೇಕು. ಗೆದ್ದೇ ಗೆಲ್ಲುತ್ತದೆ. ಸೋತವರು ಗೆಲ್ಲಲೇ ಬೇಕಲ್ಲವೇ ಎಂದು ತಂಡದ ಬಗ್ಗೆ ಒಲುಮೆಯ ಮಾತುಗಳನ್ನಾಡಿದ್ದಾರೆ. ಸುನಿ ಅವರ ಮಾತಿಗೆ ರಾಯಲ್ ಚಾಲೆಂಜರ್ಸ್ ಅಭಿಮಾನಿಗಳು ಫುಲ್ ಖುಷಿಯಾಗಿದ್ದು, ಈ ಮಾತು ನಿಜವಾಗ್ಲಿ ಎಂದು ಆಶಯ ವ್ಯಕ್ತಪಡಿಸುತ್ತಿದ್ದಾರೆ. ಸತತ 4 ಪಂದ್ಯ ಸೋತು ನಿರಾಸೆಯಲ್ಲಿರುವ ಆರ್ ಸಿ ಬಿ ಇಂದಿನ ಪಂದ್ಯದಲ್ಲಿ ಫಾರ್ಮ್ ಗೆ ಮರಳಲಿದೆ ಎಂಬ ನಿರೀಕ್ಷೆ ಎಲ್ಲರಲ್ಲಿದೆ. ಇಂದಿನ ನಿರ್ಣಾಯಕ ಪಂದ್ಯದಲ್ಲಿ ಸಿಂಪಲ್ ಸುನಿಯ ಭವಿಷ್ಯವಾಣಿ ನಿಜವಾಗುತ್ತಾ, ಇಲ್ಲ ಮತ್ತೆ ಅಭಿಮಾನಿಗಳು ಇವರು ಬಾಳು ಇಷ್ಟೇ ಅಂತ ಮೂಗು ಮುರಿಯೋ ಹಾಗಾಗುತ್ತಾ ಕಾದು ನೋಡೋಣ.

  • ಐಪಿಎಲ್ 11ರಲ್ಲಿ ರಾಜ್ಯದ ಆಟಗಾರರಿಗೆ ಬಂಪರ್ – ರಾಹುಲ್ 11 ಕೋಟಿ, ಕರುಣ್ ನಾಯರ್ 5.60 ಕೋಟಿ ರೂ.ಗೆ ಸೇಲ್

    ಐಪಿಎಲ್ 11ರಲ್ಲಿ ರಾಜ್ಯದ ಆಟಗಾರರಿಗೆ ಬಂಪರ್ – ರಾಹುಲ್ 11 ಕೋಟಿ, ಕರುಣ್ ನಾಯರ್ 5.60 ಕೋಟಿ ರೂ.ಗೆ ಸೇಲ್

    ಬೆಂಗಳೂರು: ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ 11ನೇ ಆವೃತ್ತಿಯ ಹರಾಜು ಬೆಂಗಳೂರಿನಲ್ಲಿ ಶುರುವಾಗಿದೆ. ಕರ್ನಾಟಕ ಇಬ್ಬರು ಆಟಗಾರರು ಐಪಿಎಲ್ ಹರಾಜಿನಲ್ಲಿ ದಾಖಲೆ ಮೊತ್ತಕ್ಕೆ ಸೇಲ್ ಆಗಿದ್ದಾರೆ.

    ಕರ್ನಾಟಕದ ಕೆಎಲ್ ರಾಹುಲ್ ಹಾಗೂ ಕರುಣ್ ನಾಯರ್ ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ಪಾಲಾಗಿದ್ದಾರೆ. ಕರುಣ್ ನಾಯರ್ ಮೂಲ ಬೆಲೆ 50 ಲಕ್ಷ ಇದ್ದರೂ ಅವರನ್ನು ಕಿಂಗ್ಸ್ ಇಲವೆನ್ ಪಂಜಾಬ್ ತಂಡ 5.60 ಕೋಟಿ ರೂಪಾಯಿಗೆ ಖರೀದಿಸಿದ್ದಾರೆ.

    ಇನ್ನೋರ್ವ ಆಟಗಾರ ಕೆ.ಎಲ್ ರಾಹುಲ್ 11 ಕೋಟಿ ರೂಪಾಯಿಗೆ ಸೇಲ್ ಆಗಿದ್ದಾರೆ. ರಾಹುಲ್ ಕಳೆದ ಸೀಸನ್‍ನಲ್ಲಿ ಆರ್‍ಸಿಬಿ ಪರ ಆಡಿದ್ದರು. ಈ ಬಾರಿ ರಾಹುಲ್ ಖರೀದಿಗೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಪಂಜಾಬ್ ಹಾಗೂ ಹೈದರಾಬಾದ್ ತಂಡಗಳು ರಾಹುಲ್‍ರನ್ನು ಖರೀದಿಸಲು ತೀವ್ರ ಪೈಪೋಟಿ ನಡೆಸಿದ್ದರು. ಕೊನೆಗೆ ರಾಹುಲ್ ಪಂಜಾಬ್ ತಂಡದ ಪಾಲಾದರು.

    ಶಿಖರ್ ಧವನ್ ಹರಾಜಿನಲ್ಲಿ ಸೇಲ್ ಆದ ಮೊದಲ ಆಟಗಾರ ಎನಿಸಿಕೊಂಡರು. ಶಿಖರ್ ಧವನ್‍ಗೆ 2 ಕೋಟಿ ರೂ. ಮೂಲ ಬೆಲೆ ಫಿಕ್ಸ್ ಮಾಡಲಾಗಿತ್ತು. ಆದರೆ ಧವನ್ 5.20 ಕೋಟಿ ರೂ.ಗೆ ಸನ್ ರೈಸರ್ಸ್ ಹೈದರಾಬಾದ್ ತಂಡದ ಪಾಲಾದರು.

    ಇಂದಿನ ಹರಾಜಿನಲ್ಲಿ 36 ಆಟಗಾರರ ಬೇಸ್ ಪ್ರೈಸ್ 2 ಕೋಟಿ ರೂ. ಎಂದು ನಿಗದಿಗೊಳಿಸಲಾಗಿತ್ತು. ಭಾನುವಾರದವರೆಗೆ ನಡಯಲಿರುವ ಹರಾಜಿನಲ್ಲಿ ಒಟ್ಟು 8 ತಂಡಗಳಿಗಾಗಿ 182 ಆಟಗಾರರ ಹರಾಜು ನಡೆಯಲಿದೆ.

    https://twitter.com/IPLCricket/status/957150488742514690

    https://twitter.com/IPLCricket/status/957155147653746689