Tag: ಆರ್.ವಿ.ದೇವರಾಜ್

  • ಚಿಕ್ಕಪೇಟೆಯಲ್ಲಿ ‘ಕೈ’ ಬಂಡಾಯ ಶಮನ – ಗಂಗಾಂಬಿಕೆ ನಾಮಪತ್ರ ವಾಪಸ್‌

    ಚಿಕ್ಕಪೇಟೆಯಲ್ಲಿ ‘ಕೈ’ ಬಂಡಾಯ ಶಮನ – ಗಂಗಾಂಬಿಕೆ ನಾಮಪತ್ರ ವಾಪಸ್‌

    ಬೆಂಗಳೂರು: ಟಿಕೆಟ್‌ ಕೈತಪ್ಪಿದ್ದಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಹೇಳಿ ನಾಮಪತ್ರ ಸಲ್ಲಿಸಿದ್ದ ಗಂಗಾಂಬಿಕೆ (Gangambike Mallikarjun) ಅವರ ಮನವೊಲಿಸುವಲ್ಲಿ ಕೊನೆಗೂ ಕಾಂಗ್ರೆಸ್‌ (Congress) ನಾಯಕರು ಯಶಸ್ವಿಯಾಗಿದ್ದಾರೆ. ಗಂಗಾಂಬಿಕೆ ಅವರು ನಾಮಪತ್ರ ವಾಪಸ್‌ ತೆಗೆದುಕೊಂಡಿದ್ದು, ಚಿಕ್ಕಪೇಟೆಯಿಂದ (Chikkapete) ಆರ್‌.ವಿ.ದೇವರಾಜ್‌ ಕಾಂಗ್ರೆಸ್‌ ಅಧಿಕೃತ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿಯುವಂತಾಗಿದೆ.

    ಮಾಜಿ ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಅವರು ಚಿಕ್ಕಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆದರೆ ಅವರಿಗೆ ಪಕ್ಷ ಟಿಕೆಟ್‌ ನೀಡಲಿಲ್ಲ. ಬದಲಿಗೆ ಆರ್‌.ವಿ.ದೇವರಾಜ್‌ ಅವರಿಗೆ ಟಿಕೆಟ್‌ ನೀಡಿತ್ತು. ಇದರಿಂದ ಅಸಮಾಧಾನಗೊಂಡಿದ್ದ ಗಂಗಾಂಬಿಕೆ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿ ನಾಮಪತ್ರ ಸಲ್ಲಿಸಿದ್ದರು. ಇದರಿಂದ ಚಿಕ್ಕಪೇಟೆಯಲ್ಲಿ ಮತ ವಿಭಜನೆಯಾಗುವ ಭೀತಿ ಕೈ ನಾಯಕರಲ್ಲಿತ್ತು. ಹೀಗಾಗಿ ಗಂಗಾಂಬಿಕೆ ಮನವೊಲಿಸಲು ನಿರಂತರ ಪ್ರಯತ್ನ ಮಾಡಿದ್ದರು. ಇದನ್ನೂ ಓದಿ: ಟಿಕೆಟ್ ವಂಚಿತ ಶಾಸಕ ರಾಮದಾಸ್‌ರನ್ನು ತಬ್ಬಿ ಬೆನ್ನು ತಟ್ಟಿದ ಅಮಿತ್ ಶಾ

    ಈ ಕುರಿತು ಪ್ರತಿಕ್ರಿಯೆ ನೀಡಿದ ಗಂಗಾಂಬಿಕೆ, ಪಕ್ಷದ ಸೂಚನೆಯಂತೆ ನಾಮಪತ್ರ ವಾಪಾಸ್ ಪಡೆಯುತ್ತೇನೆಂದು ಪ್ರಕಟಿಸಿದ್ದಾರೆ. ನಾನು ನಾಮಪತ್ರ ವಾಪಸ್‌ ಪಡೆಯುತ್ತೇನೆಂದು ತಿಳಿಸಿದ್ದಾರೆ.

    ನಮ್ಮ ಹೈಕಮಾಂಡ್‌ನ ಎಲ್ಲಾ ನಾಯಕರು ದೂರವಾಣಿ ಮೂಲಕ ಮಾತನಾಡಿದ್ದಾರೆ. ನಾವು ಕಾಂಗ್ರೆಸ್ ಪಕ್ಷದಲ್ಲೇ ಇರಬೇಕು. ಹಾಗಾಗಿ ನಾಯಕರ ಮಾತಿಗೆ ಬೆಲೆ ಕೊಟ್ಟು ನಾಮಪತ್ರ ವಾಪಸ್ ಪಡೆಯುತ್ತಿದ್ದೇವೆ. ನಮ್ಮಿಂದ ಯಾವುದೇ ಡಿಮ್ಯಾಂಡ್ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯಿಂದ ಜನರ ಭಾವನೆ ಕೆರಳಿಸುವ ಯತ್ನ: ಸಿದ್ದು ಪರ ಬ್ಯಾಟ್ ಬೀಸಿದ ಸವದಿ

  • ನಲಪಾಡ್ ಪ್ರಕರಣ: ಶಾಸಕ ಆರ್.ವಿ.ದೇವರಾಜ್ ಪುತ್ರ ಯುವರಾಜ್ ವಿಚಾರಣೆ

    ನಲಪಾಡ್ ಪ್ರಕರಣ: ಶಾಸಕ ಆರ್.ವಿ.ದೇವರಾಜ್ ಪುತ್ರ ಯುವರಾಜ್ ವಿಚಾರಣೆ

    ಬೆಂಗಳೂರು: ವಿದ್ವತ್ ಮೇಲೆ ನಲಪಾಡ್ ಮಾರಣಾಂತಿಕ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಾಸಕ ಆರ್.ವಿ ದೇವರಾಜ್ ಪುತ್ರ ಯುವರಾಜ್ ಸಿಸಿಬಿ ಪೋಲಿಸರ ಮುಂದೆ ಹಾಜರಾಗಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೇಳಿಕೆಯನ್ನು ನೀಡಿದ್ದಾರೆ.

    ಮಂಗಳವಾರ ಸಚಿವ ಮಹದೇವಪ್ಪ ಪುತ್ರ ಸುನಿಲ್ ಬೋಸ್ ಸಿಸಿಬಿ ಕಚೇರಿಗೆ ಆಗಮಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆಯನ್ನು ದಾಖಲಿಸಿದ್ರು. ಈ ವೇಳೆ ಸುನಿಲ್ ಬೋಸ್ ಮೂವರು ಪ್ರಭಾವಿ ರಾಜಕಾರಣಿಗಳ ಪುತ್ರರು ಹಲ್ಲೆ ನಡೆದ ದಿನದಂದು ಫರ್ಜಿ ಕೆಫೆಯಲ್ಲಿ ಇದ್ದರೆಂದು ಹೇಳಿಕೆ ನೀಡಿದ್ದರು ಎಂದು ತಿಳಿದು ಬಂದಿದೆ. ಘಟನೆ ವೇಳೆ ಆರ್.ವಿ.ದೇವರಾಜ್ ಪುತ್ರ ಯುವರಾಜ್ ಸಹ ಇದ್ದರು ಎಂಬುದು ಸಿಸಿಬಿ ಪೊಲೀಸರಿಗೆ ತಿಳಿದು ಬಂದಿದೆ. ಇದನ್ನೂ ಓದಿ: ಹ್ಯಾರಿಸ್ ಪುತ್ರ ನಲಪಾಡ್ ಪ್ರಕರಣದಲ್ಲಿ ಸಚಿವ ಮಹದೇವಪ್ಪ ಪುತ್ರ ಸುನಿಲ್ ಬೋಸ್ ವಿಚಾರಣೆ

    ಈ ಸಂಬಂಧ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ ಚಾಮರಾಜಪೇಟೆಯ ಸಿಸಿಬಿ ಕಚೇರಿಗೆ ಯುವರಾಜ್ ದೌಡಾಯಿಸಿ ಫರ್ಜಿ ಕೆಫೆಯಲ್ಲಿ ಗಲಾಟೆ ನಡೆಯುವ ಅರ್ಧ ಗಂಟೆ ಮುಂಚೆ ಊಟ ಮಾಡಲೆಂದು ಸ್ನೇಹಿತರ ಜೊತೆ ತೆರಳಿದ್ದೆ. ಗಲಾಟೆ ಗದ್ದಲ ನಡೆಯುತ್ತಿದ್ದಂತೆ ಅಲ್ಲಿಂದ ಹೊರ ಬಂದೆವು. ನಾನು ಫರ್ಜಿ ಕೆಫೆಗೆ ಹೋಗುವ ಮೊದಲೆ ಗಲಾಟೆ ನಡೆದಿತ್ತು. ನಾನು ಕೆಫೆಗೆ ಹೋದಾಗ ಗಲಾಟೆ ವಿಚಾರ ನನಗೆ ತಿಳಿಸಿದ್ದು ಅಂಬರೀಶ್ ಮಗ ಅಭಿಷೇಕ್. ಒಂದು ವೇಳೆ ಗಲಾಟೆ ವೇಳೆ ತಾನು ಅಲ್ಲೆ ಇದ್ದಿದ್ದರೆ ಗಲಾಟೆ ನಡೆಯಲು ಬಿಡುತ್ತಿರಲಿಲ್ಲಾ ಎಂದು ಯುವರಾಜ್ ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

    ಯುವರಾಜ್ ಸದ್ಯ ಸುದಾಮನಗರ ವಾರ್ಡ್ ನ ಕಾರ್ಪೋರೇಟರ್ ಆಗಿದ್ದಾರೆ. ಹೇಳಿಕೆ ಪಡೆದ ಸಿಸಿಬಿ ಪೊಲೀಸರು ಯುವರಾಜ್‍ರನ್ನು ವಾಪಾಸ್ಸು ಕಳುಹಿಸಿದ್ದಾರೆ.

  • ಬಿಜೆಪಿ ಚಿಕ್ಕಪೇಟೆ ಟಿಕೆಟ್ 2 ಕೋಟಿ ರೂ.ಗೆ ಸೇಲಂತೆ – ವೈರಲ್ ಆಯ್ತು ಮೆಸೇಜ್

    ಬಿಜೆಪಿ ಚಿಕ್ಕಪೇಟೆ ಟಿಕೆಟ್ 2 ಕೋಟಿ ರೂ.ಗೆ ಸೇಲಂತೆ – ವೈರಲ್ ಆಯ್ತು ಮೆಸೇಜ್

    ಬೆಂಗಳೂರು: ಭಾನುವಾರ ನವದೆಹಲಿಯಲ್ಲಿ ಬಿಜೆಪಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ 72 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗುತ್ತಿದ್ದಂತೆ ಟಿಕೆಟ್ ಆಕಾಂಕ್ಷಿಗಳ ಭಿನ್ನಮತ ಸ್ಫೋಟಗೊಂಡಿದೆ.

    ಚಿಕ್ಕಪೇಟೆ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರದಲ್ಲಿ ಆಕಾಂಕ್ಷಿಯಾಗಿದ್ದ ಎನ್.ಆರ್.ರಮೇಶ್ ಬದಲಾಗಿ ಉದಯ್ ಗರುಡಾಚಾರ್ ಟಿಕೆಟ್ ಸಿಕ್ಕಿದೆ. ತ್ತ ಎನ್.ಆರ್.ರಮೇಶ್ ಅವರಿಗೆ ಟಿಕೆಟ್ ಲಭಿಸದ ಹಿನ್ನೆಲೆಯಲ್ಲಿ ಕಾರ್ಯಕರ್ತರೆಲ್ಲಾ ಮಾಜಿ ಡಿಸಿಎಂ ಆರ್.ಅಶೋಕ್ ಮನೆ ಮುಂದೆ ಧರಣಿ ನಡೆದಿದ್ದಾರೆ. ಟಿಕೆಟ್‍ಗಾಗಿ ಭಿನ್ನಮತ ಸ್ಫೋಟಗೊಳ್ಳುತ್ತಿದ್ದಂತೆ ಫೇಸ್‍ಬುಕ್ ಮತ್ತು ವಾಟ್ಸಪ್ ಗಳಲ್ಲಿ ಕೆಲವು ಮೆಸೇಜ್ ಗಳು ಹರಿದಾಡಲು ಆರಂಭವಾಗಿವೆ. ಇದನ್ನೂ ಓದಿ: ಎನ್‍ಆರ್ ರಮೇಶ್‍ಗೆ ಟಿಕೆಟ್ ಸಿಗದ್ದಕ್ಕೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಅಭಿಮಾನಿ!

    ವೈರಲ್ ಮೇಸೆಜ್‍ನಲ್ಲಿ ಏನಿದೆ?
    ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಆರ್.ವಿ.ದೇವರಾಜ್ ಅವರೇ ತಮ್ಮ ಎದುರಾಳಿಯನ್ನು ನಿರ್ಧರಿಸಿಕೊಂಡಿದ್ದು, 2 ಕೋಟಿ ರೂ. ಹಣವನ್ನ ನೀಡಿ ಗೆಲವನ್ನು ಸುಲಭ ಮಾಡಿಕೊಂಡಿದ್ದಾರೆ ಎಂಬ ಬಿಸಿ ಬಿಸಿ ಚರ್ಚೆಗಳು ಸೋಶಿಯಲ್ ಮೀಡಿಯಾದಲ್ಲಿ ಆರಂಭವಾಗಿವೆ. ಟಿಕೆಟ್ ಗಾಗಿ ಕೇಂದ್ರ ಸಚಿವ ಅನಂತಕುಮಾರ್ ಅವರಿಗೆ 2 ಕೋಟಿ ರೂ. ನೀಡಲಾಗಿದೆ ಎಂಬ ಮೆಸೇಜ್‍ಗಳು ಹರಿದಾಡುತ್ತಿವೆ. ಇದನ್ನೂ ಓದಿ: ಮೊದಲ ಪಟ್ಟಿ ಬಿಡುಗಡೆ ಬೆನ್ನಲ್ಲೇ ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ

    ಬಿಜೆಪಿ ವಿರುದ್ಧ ಮೆಸೇಜ್‍ಗಳು ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, 2 ಕೋಟಿಗೆ ಟಿಕೆಟ್ ಸೇಲ್ ಆಗಿದೆ ಎಂಬ ಆರೋಪಗಳೆಲ್ಲಾ ಸುಳ್ಳು. ಎನ್.ಆರ್.ರಮೇಶ್ ಹಾಗೆಲ್ಲಾ ಮಾತನಾಡಲ್ಲ. ಅವರನ್ನು ಕರೆಸಿಕೊಂಡು ನಾನು ಮಾತನಾಡಿ ತಪ್ಪು ಗ್ರಹಿಕೆಯಾಗಿದ್ರೆ ಅದನ್ನ ಸರಿಪಡಿಸುತ್ತೇನೆ. ಟಿಕೆಟ್ ಹಂಚಿಕೆಯಲ್ಲಿ ಯಾವುದೇ ಅಸಮಾಧಾನವಿಲ್ಲ ಅಂತಾ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯ 72 ಮಂದಿ ಅಧಿಕೃತ ಅಭ್ಯರ್ಥಿಗಳ ಪಟ್ಟಿ ರಿಲೀಸ್: ಯಾವ ಕ್ಷೇತ್ರದಲ್ಲಿ ಯಾರು ಸ್ಪರ್ಧೆ?