Tag: ಆರ್ ಮಾಧವನ್

  • ಅಕ್ಷಯ್ ಕುಮಾರ್ ನಟನೆಯ ಹೊಸ ಚಿತ್ರಕ್ಕೆ ಆರ್.ಮಾಧವನ್, ಅನನ್ಯಾ ಪಾಂಡೆ ಸಾಥ್

    ಅಕ್ಷಯ್ ಕುಮಾರ್ ನಟನೆಯ ಹೊಸ ಚಿತ್ರಕ್ಕೆ ಆರ್.ಮಾಧವನ್, ಅನನ್ಯಾ ಪಾಂಡೆ ಸಾಥ್

    ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar) ಅವರು ಲಾಯರ್ (Lawyer) ಆಗಿ ಬೆಳ್ಳಿಪರದೆಯಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ. ಲಾಯರ್ ಸಿ. ಶಂಕರನ್ ನಾಯರ್ (C. Sankaran Nair) ಬಯೋಪಿಕ್‌ನಲ್ಲಿ ಅಕ್ಷಯ್ ಕುಮಾರ್ ಜೊತೆ ನಟಿಸಲು ಅನನ್ಯಾ ಪಾಂಡೆ (Ananya Panday) ಮತ್ತು ತಮಿಳು ನಟ ಆರ್. ಮಾಧವನ್ (R.Madhavan) ಕೈಜೋಡಿಸಿದ್ದಾರೆ.

    ಸಿನಿಮಾದಿಂದ ಸಿನಿಮಾಗೆ ಭಿನ್ನ ಪಾತ್ರಗಳನ್ನು ಆಯ್ಕೆ ಮಾಡೋ ಅಕ್ಷಯ್ ಕುಮಾರ್ ಈಗ ಕಪ್ಪು ಕೋಟ್ ಧರಿಸಿ ಲಾಯರ್ ಆಗಿ ನ್ಯಾಯದ ಪಾಠ ಮಾಡಲು ರೆಡಿಯಾಗಿದ್ದಾರೆ. ಖ್ಯಾತ ಅಡ್ವೋಕೇಟ್ ಸಿ. ಶಂಕರನ್ ನಾಯರ್ ಜೀವನ ಆಧರಿಸಿದ ಕಥೆಯಲ್ಲಿ ಅಕ್ಷಯ್ ಲೀಡ್ ರೋಲ್‌ನಲ್ಲಿ ನಟಿಸುತ್ತಿದ್ದಾರೆ. ಇದನ್ನೂ ಓದಿ:‘ಶೇರ್ಷಾ’ ಬಳಿಕ ಮತ್ತೊಂದು ಲವ್ ಸ್ಟೋರಿ ಸಿನಿಮಾದಲ್ಲಿ ಸಿದ್ಧಾರ್ಥ್, ಕಿಯಾರಾ?

     

    View this post on Instagram

     

    A post shared by Dharma Productions (@dharmamovies)

    ಅಕ್ಷಯ್ ಕುಮಾರ್ ಜೊತೆ ಅನನ್ಯಾ ಪಾಂಡೆ ಮತ್ತು ತಮಿಳು ನಟ ಆರ್. ಮಾಧವನ್ ಕೂಡ ಕಾಣಿಸಿಕೊಳ್ತಿದ್ದಾರೆ. ಅವರ ಪಾತ್ರಕ್ಕೂ ಪ್ರಾಮುಖ್ಯತೆ ಇದೆ. ಕರಣ್ ಜೋಹರ್ ಈ ಚಿತ್ರವನ್ನು ನಿರ್ಮಾಣ ಮಾಡೋದಾಗಿ ಅನೌನ್ಸ್ ಮಾಡಿದ್ದು, ಮುಂದಿನ ವರ್ಷ ಮಾರ್ಚ್ 14ರಂದು ರಿಲೀಸ್ ಆಗಲಿದೆ ಎಂದು ಘೋಷಿಸಿದ್ದಾರೆ.

    ಇನ್ನೂ ಅಕ್ಷಯ್ ನಟನೆಯ ಸಾಲು ಸಾಲು ಸಿನಿಮಾಗಳು ಚಿತ್ರಮಂದಿರದಲ್ಲಿ ಮಕಾಡೆ ಮಲಗಿವೆ. ಹಾಗಾಗಿ ಒಂದು ಗೆಲುವಿಗಾಗಿ ಎದುರು ನೋಡ್ತಿರುವ ನಟನಿಗೆ ಈ ಚಿತ್ರ ಕೈಹಿಡಿಯುತ್ತಾ? ಕಾದುನೋಡಬೇಕಿದೆ.

  • ಮಾಧವನ್ ಜೊತೆ ಕಾಣಿಸಿಕೊಂಡ ಮೇಘಾ ಶೆಟ್ಟಿ- ತಮಿಳು ಚಿತ್ರ ಮಾಡ್ತಿದ್ದಾರಾ ನಟಿ?

    ಮಾಧವನ್ ಜೊತೆ ಕಾಣಿಸಿಕೊಂಡ ಮೇಘಾ ಶೆಟ್ಟಿ- ತಮಿಳು ಚಿತ್ರ ಮಾಡ್ತಿದ್ದಾರಾ ನಟಿ?

    ಸ್ಯಾಂಡಲ್‌ವುಡ್ ನಟಿ ಮೇಘಾ ಶೆಟ್ಟಿ (Megha Shetty) ಸದ್ಯ ‘ಗ್ರಾಮಾಯಣ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಸೌತ್ ನಟ ಆರ್. ಮಾಧವನ್ (Madhavan) ಜೊತೆ ಮೇಘಾ ಸೆಲ್ಫಿ ಕ್ಲಿಕ್ಕಿಸಿಕೊಂಡಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಈ ಬೆನ್ನಲ್ಲೇ, ನಟಿ ತಮಿಳು ಸಿನಿಮಾ ಮಾಡ್ತಿದ್ದಾರಾ? ಎಂಚ ಚರ್ಚೆ ಶುರುವಾಗಿದೆ.

    ‘ಜೊತೆ ಜೊತೆಯಲಿ’ (Jothe Jotheyali) ಸೀರಿಯಲ್ ಮೂಲಕ ಗಮನ ಸೆಳೆದ ಮೇಘಾ ಶೆಟ್ಟಿ ಇದೀಗ ಮಾಧವನ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ. ಅದ್ಭುತ ನಟನೊಂದಿಗೆ ಚರ್ಚೆ ಮಾಡುತ್ತಾ ಸಮಯ ಕಳೆದೆ. ಒಂದೊಳ್ಳೆಯ ಕಲಿಕೆಯ ಅನುಭವ ಎಂದು ನಟಿ ಬರೆದುಕೊಂಡಿದ್ದಾರೆ. ನಟಿಯ ಪೋಸ್ಟ್ ವೈರಲ್ ಆಗ್ತಿದ್ದಂತೆ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ.

    ಮಾಧವನ್ ಜೊತೆ ನಟಿ ತಮಿಳು ಸಿನಿಮಾ ಮಾಡ್ತಿದ್ದಾರಾ? ರಶ್ಮಿಕಾ ಮಂದಣ್ಣ (Rashmika Mandanna), ಶ್ರೀಲೀಲಾರಂತೆಯೇ ಮೇಘಾ ಶೆಟ್ಟಿ ಕೂಡ ಪರಭಾಷೆಗಳಲ್ಲಿ ಬ್ಯುಸಿಯಾಗ್ತಾರಾ? ಎಂಬ ಅಭಿಮಾನಿಗಳಲ್ಲಿ ಪ್ರಶ್ನೆ ಮೂಡಿದೆ. ನೆಟ್ಟಿಗರ ಚರ್ಚೆಗೂ ಗ್ರಾಸವಾಗಿದೆ. ಇದನ್ನೂ ಓದಿ:ಡಾಲಿ ಧನಂಜಯ ನಟನೆಯ ‌’ಕೋಟಿ’ ಟ್ರೈಲರ್‌ ಔಟ್

    ಅಂದಹಾಗೆ, ‘ಆಪರೇಷನ್ ಲಂಡನ್ ಕಫೆ’ ಸಿನಿಮಾ ಹಲವು ಭಾಷೆಗಳಲ್ಲಿ ಮೂಡಿ ಬಂದಿದೆ. ಪ್ರಜ್ವಲ್ ದೇವರಾಜ್ ಜೊತೆ ಚೀತಾ, ವಿನಯ್ ರಾಜ್‌ಕುಮಾರ್ ಜೊತೆ ಗ್ರಾಮಾಯಣ ಸೇರಿದಂತೆ ಹಲವು ಚಿತ್ರಗಳು ಮೇಘಾ ಶೆಟ್ಟಿ ಕೈಯಲ್ಲಿವೆ.

  • ಬೆಂಗಳೂರು ಏರ್‌ಪೋರ್ಟ್‌ಗೆ ಮಾಧವನ್‌ ಮೆಚ್ಚುಗೆ- ನರೇಂದ್ರ ಮೋದಿ ಪ್ರತಿಕ್ರಿಯೆ

    ಬೆಂಗಳೂರು ಏರ್‌ಪೋರ್ಟ್‌ಗೆ ಮಾಧವನ್‌ ಮೆಚ್ಚುಗೆ- ನರೇಂದ್ರ ಮೋದಿ ಪ್ರತಿಕ್ರಿಯೆ

    ತ್ತೀಚಿಗೆ ಬಹುಭಾಷಾ ನಟ ಮಾಧವನ್ (R Madhavan) ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ (Bengaluru Kempegowda International Airport) ನೂತನ ಟರ್ಮಿನಲ್ 2ಗೆ (Terminal 2) ಭೇಟಿ ನೀಡಿದ್ದರು. ಈ ವೇಳೆ ಅಲ್ಲಿನ ಮೂಲಸೌಕರ್ಯವನ್ನ ನೋಡಿ ಹಾಡಿ ಹೊಗಳಿದ್ದರು. ವಿಮಾನ ನಿಲ್ದಾಣದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ನಟ ಶ್ಲಾಘಿಸಿದ್ದರು. ಮಾಧವನ್ ಪೋಸ್ಟ್‌ಗೆ ನರೇಂದ್ರ ಮೋದಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

    ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರಲ್ಲಿ ಇದ್ದೇನೆ, ಇದು ಅತ್ಯುನ್ನತವಾಗಿದೆ. ಇಲ್ಲಿನ ಮೂಲಸೌಕರ್ಯಗಳು ವಿಶ್ವದ ಅತ್ಯುತ್ತಮಗಳಲ್ಲಿ ಒಂದಾಗಿದೆ. ನನಗೆ ತುಂಬಾ ಹೆಮ್ಮೆ ಆಗಿದೆ. ಈ ವಿಮಾನ ನಿಲ್ದಾಣದ ಒಳಂಗಾಣ ವಿನ್ಯಾಸ ಅದ್ಭುತವಾಗಿದೆ. ಇದನ್ನು ವಿಮಾನ ನಿಲ್ದಾಣ ಎಂದರೆ ಯಾರೂ ನಂಬುವುದಿಲ್ಲ. ಇಲ್ಲಿನ ಸೀಲಿಂಗ್‌ನಲ್ಲಿ ಗಿಡಗಳನ್ನು ತೂಗುಹಾಕಲಾಗಿದೆ. ಇದನ್ನೂ ಓದಿ:ಮತ್ತೊಂದು ಬಿಗ್ ಪ್ರಾಜೆಕ್ಟ್ ಒಪ್ಪಿಕೊಂಡ ಅನುಷ್ಕಾ ಶೆಟ್ಟಿ

     

    View this post on Instagram

     

    A post shared by R. Madhavan (@actormaddy)

    ಅವೆಲ್ಲ ನಿಜವಾದ ಗಿಡಗಳು, ಅವುಗಳಿಗೆ ಪ್ರತಿದಿನ ಸೀಲಿಂಗ್‌ನಿಂದ ನೀರು ಹಾಯಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಮಾಧವನ್ ಅವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಪೋಸ್ಟ್‌ಗೆ ನರೇಂದ್ರ ಮೋದಿ ಅವರು ಪ್ರತಿಕ್ರಿಯಿಸಿದ್ದಾರೆ.

    ಆರ್.ಮಾಧವನ್ ಪೋಸ್ಟ್‌ಗೆ ಪ್ರತಿಕ್ರಿಯಿಸಿ, ‘ಭಾರತದ ಅಭಿವೃದ್ಧಿಗಾಗಿ ಮುಂದಿನ ಜನರೇಷನ್‌ಗೆ ಮೂಲಭೂತ ಸೌಕರ್ಯಗಳು’ ಎಂದು ನರೇಂದ್ರ ಮೋದಿ ಬರೆದುಕೊಂಡಿದ್ದಾರೆ. ಈ ಪೋಸ್ಟ್‌ಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ನಮ್ಮ ಬೆಂಗಳೂರು ಎಂದು ಕಾಮೆಂಟ್‌ ಮಾಡಿ ಖುಷಿ ವ್ಯಕ್ತಪಡಿಸಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ ಅಧ್ಯಕ್ಷರಾಗಿ ಮಾಧವನ್‌ ನಾಮನಿರ್ದೇಶನ

    ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ ಅಧ್ಯಕ್ಷರಾಗಿ ಮಾಧವನ್‌ ನಾಮನಿರ್ದೇಶನ

    ಇತ್ತೀಚೆಗಷ್ಟೇ ʻರಾಕೆಟ್ರಿʼ ಚಲನಚಿತ್ರದ ರಾಷ್ಟ್ರಪ್ರಶಸ್ತಿ ಗೆದ್ದಿರುವ ತಮಿಳುನಟ ಆರ್.ಮಾಧವನ್ (R Madhavan) ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ (FTII) ಅಧ್ಯಕ್ಷರಾಗಿ ಮತ್ತು ಆಡಳಿತ ಮಂಡಳಿಯ ಅಧ್ಯಕ್ಷರಾಗಿ ನಾಮನಿರ್ದೇಶನಗೊಂಡಿದ್ದಾರೆ.

    ಕೇಂದ್ರ ಸಚಿವ ಅನುರಾಗ್ ಠಾಕೂರ್ (Anurag Thakur) ಅವರು ಈ ಮಾಹಿತಿಯನ್ನ ಟ್ವಿಟ್ಟರ್‌ (X) ಖಾತೆಯಲ್ಲಿ ಹಂಚಿಕೊಂಡಿದ್ದು, ಮಾಧವನ್‌ ಅವರಿಗೆ ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ. ಇದಕ್ಕೆ‌ ಟ್ವೀಟ್‌ ಮೂಲಕವೇ ಪ್ರತಿಕ್ರಿಯಿಸಿರುವ ಮಾಧವನ್‌, ತಮ್ಮ ಶುಭ ಹಾರೈಕೆಗಳಿಗಾಗಿ ತುಂಬಾ ಧನ್ಯವಾದಗಳು ಅನುರಾಗ್‌ ಠಾಕೂರ್‌ ಜೀ. ಎಲ್ಲಾ ನಿರೀಕ್ಷೆಗಳನ್ನು ಪೂರೈಸಲು ನಾನು ಕೈಲಾದಷ್ಟು ಸೇವೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 69th National Film Award 2023: ಅತ್ಯುತ್ತಮ ಸಿನಿಮಾ, ರಾಕೆಟ್ರಿ ದಿ ನಂಬಿ ಎಫೆಕ್ಟ್

    ಇತ್ತೀಚೆಗಷ್ಟೇ ಆರ್‌. ಮಾಧವನ್‌ ನಟಿಸಿ, ನಿರ್ದೇಶನ ಮಾಡಿದ್ದ ʻರಾಕೆಟ್ರಿ – ದಿ ನಂಬಿ ಎಫೆಕ್ಟ್ʼ (Rocketry The Nambi Effect) ಚಿತ್ರ ಅತ್ಯುತ್ತಮ ಸಿನಿಮಾ ವಿಭಾಗದಲ್ಲಿ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದುಕೊಂಡಿತ್ತು. ಇದನ್ನೂ ಓದಿ: ‘ರಾಕೆಟ್ರಿ’ ಸಿನಿಮಾದಲ್ಲಿ ಇಸ್ರೊಗೆ ಕಳಂಕ ತರುವಂತಹ ಸುಳ್ಳುಗಳನ್ನು ಹೇಳಲಾಗಿದೆ: ಮಾಜಿ ವಿಜ್ಞಾನಿಗಳ ಆರೋಪ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 69th National Film Award 2023: ಅತ್ಯುತ್ತಮ ಸಿನಿಮಾ, ರಾಕೆಟ್ರಿ ದಿ ನಂಬಿ ಎಫೆಕ್ಟ್

    69th National Film Award 2023: ಅತ್ಯುತ್ತಮ ಸಿನಿಮಾ, ರಾಕೆಟ್ರಿ ದಿ ನಂಬಿ ಎಫೆಕ್ಟ್

    ಕೇಂದ್ರ ಸರಕಾರ ನೀಡುವ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (National Film Award) ಘೋಷಣೆಯಾಗಿದೆ. ರಾಕೆಟ್ರಿ ದಿ ನಂಬಿ ಎಫೆಕ್ಟ್ (Rocketry The Nambi Effect)  ಚಿತ್ರಕ್ಕೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಒಲಿದಿದೆ. ಈ ಚಿತ್ರವನ್ನು ಆರ್. ಮಾಧವನ್ (R. Madhavan) ನಟಿಸಿ, ನಿರ್ದೇಶನ ಮಾಡಿದ್ದಾರೆ. ಇದನ್ನೂ ಓದಿ:Breaking- ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ : ಅತ್ಯುತ್ತಮ ನಟ ಅಲ್ಲು ಅರ್ಜುನ್, ನಟಿ ಆಲಿಯಾ ಭಟ್ ಮತ್ತು ಕೀರ್ತಿ ಸನನ್

    ಅತ್ಯುತ್ತಮ ಪ್ರಾದೇಶಿಕ ಚಿತ್ರಕ್ಕಾಗಿ ಮೀಸಲಿಟ್ಟ ರಾಷ್ಟ್ರೀಯ ಪ್ರಶಸ್ತಿಯು ಈ ಬಾರಿ ರಕ್ಷಿತ್ ಶೆಟ್ಟಿ ನಟನೆಯ, ಕಿರಣ್ ರಾಜ್ ನಿರ್ದೇಶನದ ಚಾರ್ಲಿ 777 ಚಿತ್ರಕ್ಕೆ ದೊರೆತಿದೆ. ನಾನ್ ಫೀಚರ್ ಫಿಲ್ಮ್ ವಿಭಾಗದಲ್ಲಿ ಕನ್ನಡದ ಅನಿರುದ್ಧ ಜತ್ಕರ್ ನಿರ್ದೇಶನದ ಬಾಳೆ ಬಂಗಾರ ಪ್ರಶಸ್ತಿ ಪಡೆದಿದೆ. ಅತ್ಯುತ್ತಮ ಸಿನಿಮಾ ಪ್ರಶಸ್ತಿಯು ಪಾಲಾಗಿದೆ. ಭಾರತದಲ್ಲಿ ತಯಾರಾಗುವ ಅಷ್ಟೂ ಸಿನಿಮಾಗಳೂ ಈ ಸ್ಪರ್ಧೆಗೆ ಸ್ಪರ್ಧಿಸಬಹುದಾಗಿದ್ದು, ಜೊತೆಗೆ ಪ್ರಾದೇಶಿಕ ಸಿನಿಮಾಗಳಿಗೂ ಪ್ರತ್ಯೇಕವಾಗಿ ಪ್ರಶಸ್ತಿಗಳು ಮೀಸಲಿವೆ.

    ಕೋವಿಡ್ ಕಾರಣದಿಂದಾಗಿ 2021ರಲ್ಲಿ ರಿಲೀಸ್ ಆಗಿರುವ ಚಿತ್ರಗಳಿಗೆ ಪ್ರಶಸ್ತಿ ಘೋಷಣೆ ಆಗಿರಲಿಲ್ಲ. ಇದೀಗ ಆ ವರ್ಷ ರಿಲೀಸ್ ಆಗಿರುವ ಚಿತ್ರಗಳಿಗೆ ಮಾತ್ರ ಪ್ರಶಸ್ತಿ ಘೋಷಣೆ ಮಾಡಲಾಗಿದೆ. 2022ನೇ ಸಾಲಿನ ಚಿತ್ರಗಳನ್ನು ಇನ್ನೂ ಆಹ್ವಾನಿಸಿಲ್ಲ. ಕೇಂದ್ರ ಸರಕಾರ ಇದೇ ಮೊದಲ ಬಾರಿಗೆ ತಡವಾಗಿ ಪ್ರಶಸ್ತಿ ಘೋಷಣೆ ಮಾಡುತ್ತಿದೆ.

    ಸಿನಿಮಾ ರಂಗಕ್ಕೆ ನೀಡುವ ದೇಶದ ಪ್ರತಿಷ್ಠಿತ ಪ್ರಶಸ್ತಿ ಇದಾಗಿದ್ದು, ರಾಷ್ಟ್ರಪತಿಗಳೇ ಈ ಪ್ರಶಸ್ತಿಯನ್ನು ಪ್ರದಾನ ಮಾಡುತ್ತಾರೆ. ರಾಷ್ಟ್ರೀಯ ಪ್ರಶಸ್ತಿಗಳ ಚಿತ್ರಗಳಿಗೆ ಬೇಡಿಕೆ ಇದ್ದೇ ಇರುತ್ತದೆ. ಹಾಗಾಗಿ ಸಾಕಷ್ಟು ಚಿತ್ರಗಳು ಸ್ಪರ್ಧಾ ಕಣದಲ್ಲಿ ಇರಲಿವೆ. ಅಲ್ಲದೇ, ಪ್ರಾದೇಶಿಕ ಸಿನಿಮಾಗಳಿಗೆ ನೀಡುವ ಪ್ರಶಸ್ತಿಗಳಿಗೂ ತನ್ನದೇ ಆದ ಘನತೆ ಇದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಈಜು ಸ್ಪರ್ಧೆಯಲ್ಲಿ ರಾಷ್ಟ್ರೀಯ ದಾಖಲೆ ಬರೆದ ಮಾಧವನ್ ಪುತ್ರ

    ಭುವನೇಶ್ವರ: ಬಹುಭಾಷಾ ನಟ ಆರ್. ಮಾಧವನ್ ಅವರ ಪುತ್ರ ವೇದಾಂತ್ ರಾಷ್ಟ್ರ ಮಟ್ಟದ ಈಜು ಸ್ಪರ್ಧೆಯಲ್ಲಿ ಹೊಸ ದಾಖಲೆ ಬರೆದಿದ್ದಾರೆ. ವೇದಾಂತ್ 48ನೇ ಜೂನಿಯರ್ ರಾಷ್ಟ್ರೀಯ ಅಕ್ವಾಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಗೆದ್ದು, ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

    ಭಾನುವಾರ ಭುವನೇಶ್ವರದಲ್ಲಿ ನಡೆದ 1,500 ಮೀ. ಫ್ರೀಸ್ಟೈಲ್ ಈಜು ಸ್ಪರ್ಧೆಯಲ್ಲಿ ವೇದಾಂತ್ ಕೇವಲ 16:01.73 ನಿಮಿಷಗಳಲ್ಲಿ ಗುರಿ ತಲುಪಿ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಈ ಹಿಂದೆ ಈಜುಪಟು ಅದ್ವೈತ್ 2017ರಲ್ಲಿ 16:06.45 ನಿಮಿಷಗಳಲ್ಲಿ ಗುರಿ ತಲುಪಿ ದಾಖಲೆ ಬರೆದಿದ್ದರು. ಇದೀಗ ವೇದಾಂತ್ ಅದ್ವೈತ್ ಅವರ ದಾಖಲೆಯನ್ನು ಮುರಿದಿದ್ದಾರೆ. ಇದನ್ನೂ ಓದಿ: ಕೊನೆಗೂ ಮರಳಿ ಬಂತು ಪುನೀತ್ ರಾಜ್‌ಕುಮಾರ್ ಖಾತೆಗೆ ಬ್ಲೂ ಟಿಕ್

    ಈ ಸಂಭ್ರಮದ ವಿಚಾರವನ್ನು ಮಾಧವನ್ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು ಖುಷಿ ವ್ಯಕ್ತಪಡಿಸಿದ್ದಾರೆ. ಟ್ವಿಟ್ಟರ್‌ನಲ್ಲಿ ಈ ದಾಖಲೆ ಬಗ್ಗೆ ತಿಳಿಸಿರುವ ಮಾಧವನ್, ಎಂದಿಗೂ ಆಗಲ್ಲ ಎಂದು ಯಾವತ್ತೂ ಹೇಳಬೇಡಿ. 1,500 ಮೀಟರ್ ಫ್ರೀಸ್ಟೈಲ್ ರಾಷ್ಟ್ರೀಯ ಜೂನಿಯರ್ ದಾಖಲೆ ಇದೀಗ ಮುರಿದಿದೆ ಎಂದು ಬರೆದಿದ್ದು, ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಸ್ವಾತಂತ್ರ್ಯದ ಅಮೃತ ಮೋತ್ಸವಕ್ಕೆ ‘ಹರ್ ಘರ್ ತಿರಂಗಾ’ ಅಭಿಯಾನ – ದೇಶಾದ್ಯಂತ 20 ಕೋಟಿ ಮನೆಗಳಲ್ಲಿ ಹಾರಲಿದೆ ತ್ರಿವರ್ಣ ಧ್ವಜ

    ವೇದಾಂತ್ ಈ ಹಿಂದೆಯೂ ಹಲವಾರು ಈಜು ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕಗಳನ್ನು ಬಾಚಿಕೊಂಡಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ವೇದಾಂತ್, ಸ್ವತಃ ಹೆಸರು ಮಾಡಲು ಬಯಸುವುದಾಗಿ ತಿಳಿಸಿದ್ದರು. ನನಗೆ ನನ್ನ ತಂದೆಯ ನೆರಳಿನಲ್ಲಿ ಬದುಕಲು ಇಷ್ಟವಿಲ್ಲ. ನಾನಾಗಿಯೇ ಹೆಸರು ಮಾಡಲು ಬಯಸುತ್ತೇನೆ. ನಾನು ಕೇವಲ ಆರ್. ಮಾಧವನ್ ಅವರ ಮಗನಾಗಿರಲು ಬಯಸುವುದಿಲ್ಲ ಎಂದು ತಿಳಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಮಗನ ಒಲಿಂಪಿಕ್ಸ್ ತಯಾರಿಗೆ ದುಬೈಗೆ ಮಾಧವನ್ ಸ್ಥಳಾಂತರ

    ಮುಂಬೈ: ನಟ ಆರ್ ಮಾಧವನ್ ಪುತ್ರ ವೇದಾಂತ್ ಪ್ರಸ್ತುತ ದುಬೈನಲ್ಲಿ 2026ರ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ತಯಾರಿಯನ್ನು ನಡೆಸುತ್ತಿದ್ದು, ಮಗನಿಗೆ ತರಬೇತಿಯಲ್ಲಿ ಸಹಾಯ ಮಾಡಲು ಮಾಧವನ್ ಪತ್ನಿಯೊಂದಿಗೆ ದುಬೈಗೆ ಪ್ರಯಾಣ ಬೆಳೆಸಿದ್ದಾರೆ.

    ವೇದಾಂತ್ ಈಗಾಗಲೇ ರಾಷ್ಟ್ರೀಯ ಈಜು ಚಾಂಪಿಯನ್ ಆಗಿದ್ದು, ಮಾಧವನ್ ಹಾಗೂ ಅವರ ಪತ್ನಿ ವಿಶ್ವ ಮಟ್ಟದ ಕ್ರೀಡಾ ಸ್ಪರ್ಧೆಯಲ್ಲಿ ವೇದಾಂತ್ ಪಾಲ್ಗೊಳ್ಳಲು ಒಳ್ಳೆಯ ತರಬೇತಿ ಕೊಡಿಸುವ ಬಗ್ಗೆ ಯೋಜಿಸಿದ್ದರು. ದುಬೈನಲ್ಲಿ ಮಗನ ತರಬೇತಿಗೆ ಒಳ್ಳೆಯ ಸೌಲಭ್ಯ ಇರುವುದನ್ನು ಖಚಿತಪಡಿಸಿಕೊಂಡಿದ್ದು, ಅವನಿಗೆ ಸಾಥ್ ನೀಡಲು ದಂಪತಿ ದುಬೈ ಪ್ರಯಾಣ ಬೆಳೆಸಿದ್ದಾರೆ. ಇದನ್ನೂ ಓದಿ: ರಿಷಭ್ ಪಂತ್ ಈಗ ಉತ್ತರಾಖಂಡ್ ಬ್ರಾಂಡ್ ಅಂಬಾಸಿಡರ್

    ಕೋವಿಡ್-19 ಪರಿಣಾಮವಾಗಿ ಮುಂಬೈನ ದೊಡ್ಡ ಈಜುಕೊಳಗಳನ್ನು ಮುಚ್ಚಲಾಗಿದೆ. ಹೀಗಾಗಿ ವೇದಾಂತ್‌ಗೆ ದುಬೈನಲ್ಲಿ ತರಬೇತಿಯನ್ನು ನೀಡಲಾಗುತ್ತಿದ್ದು, ನಾನು ಹಾಗೂ ಸರಿತಾ ಅವನಿಗೆ ತರಬೇತಿಯಲ್ಲಿ ಸಹಾಯ ಮಾಡಲು ದುಬೈ ಪ್ರಯಾಣ ಬೆಳೆಸಿದ್ದೇವೆ ಎಂದು ಮಾಧವನ್ ಹೇಳಿದ್ದಾರೆ.

    ಇದರೊಂದಿಗೆ ಜನಪ್ರಿಯ ನಟ ಮಾಧವನ್ ತನ್ನ ಮಗ ಸಿನಿ ರಂಗಕ್ಕೆ ಪಾದಾರ್ಪಣೆ ಮಾಡುವುದಿಲ್ಲ ಎಂಬ ಖಚಿತ ಉತ್ತರ ನೀಡಿದ್ದಾರೆ. ಮಕ್ಕಳು ಏನನ್ನು ಮಾಡಲು ಬಯಸುತ್ತಾರೋ ಪೋಷಕರೂ ಅದನ್ನೇ ಮಾಡಲು ಅವರಿಗೆ ಪ್ರೋತ್ಸಾಹ ನೀಡಬೇಕು. ವೇದಾಂತ್ ಪ್ರಪಂಚದಾದ್ಯಂತ ಚಾಂಪಿಯನ್‌ಶಿಪ್‌ಗಳನ್ನು ಗೆಲ್ಲುತ್ತಿರುವುದು ನಮಗೆ ಬಹಳ ಹೆಮ್ಮೆಯ ವಿಷಯ ಎಂದರು. ಇದನ್ನೂ ಓದಿ: ತಲೆಕೂದಲು ತೆಗೆದ ಫೋಟೋ ಶೇರ್ ಮಾಡಿ ಶಾಕಿಂಗ್ ಸುದ್ದಿ ಕೊಟ್ಟ ಮೋಹಿನಿ ನಟಿ

    ಇದೇ ಸಂದರ್ಭದಲ್ಲಿ ಮಾಧವನ್ ಎಲ್ಲಾ ಸ್ಟಾರ್ ಪೋಷಕರಿಗೂ ಸಲಹೆಯನ್ನು ನೀಡಿದ್ದಾರೆ. ಮಕ್ಕಳನ್ನು ಸ್ವತಂತ್ರವಾಗಿ ಹಾರಾಡಲು ಬಿಡಬೇಕು. ವೇದಾಂತ್ ನಟನೆಯನ್ನು ಆಯ್ಕೆ ಮಾಡದೇ ಇರುವುದರ ಬಗ್ಗೆ ನನಗೆ ಯಾವುದೇ ಬೇಜಾರಿಲ್ಲ. ನನ್ನ ಸ್ವಂತ ವೃತ್ತಿಗಿಂತ ಅವನ ಆಯ್ಕೆಯ ವೃತ್ತಿ ಮುಖ್ಯ ಎಂದು ಹೇಳಿದರು.