Tag: ಆರ್.ಬಿ.ತಿಮ್ಮಾಪುರ

  • ಹೈಕಮಾಂಡ್ ಒಪ್ಪಿದ್ರೆ ನಾನೂ ಸಿಎಂ ಆಗ್ತೀನಿ – ಸಚಿವ ಆರ್.ಬಿ ತಿಮ್ಮಾಪುರ

    ಹೈಕಮಾಂಡ್ ಒಪ್ಪಿದ್ರೆ ನಾನೂ ಸಿಎಂ ಆಗ್ತೀನಿ – ಸಚಿವ ಆರ್.ಬಿ ತಿಮ್ಮಾಪುರ

    – ಡಿಕೆ ನಾಯಕತ್ವ ವಿರುದ್ಧ ಸಿದ್ದು ಬಣ ರಣಕಹಳೆ

    ಬೆಂಗಳೂರು: ಕಾಂಗ್ರೆಸ್ (Congress) ಒಳಜಗಳಕ್ಕೆ ಮದ್ದರೆಯಲು ಸುರ್ಜೇವಾಲ ಕೊಟ್ಟ ವಾರ್ನಿಂಗ್ ಕೆಲಸ ಮಾಡಿಲ್ಲ… ಬದಲಾಗಿ, ಪಟ್ಟದ ಕದನ ಹೊಸ ಸ್ವರೂಪ ಪಡೆದಿದೆ. ಹಳೆಯ ಅಸ್ತ್ರವೊಂದಕ್ಕೆ ಸಿಎಂ ಬಣ ಸಾಣೆ ಹಿಡಿದಿದೆ. ಅಧ್ಯಕ್ಷ ಸ್ಥಾನ ಬದಲಾವಣೆಗೆ ಕೂಗೆಬ್ಬಿಸಿ ಹೊಸ ಆಟಕ್ಕೆ ನಾಂದಿ ಹಾಡಿದೆ. ಸಿಎಂ ಆಪ್ತ ಸಚಿವ ಸತೀಶ್ ಜಾರಕಿಹೊಳಿ ಬಹಿರಂಗವಾಗಿಯೇ, ಡಿಕೆಶಿ (DK Shivakumar) ನಾಯಕತ್ವದ ವಿರುದ್ಧ ರಣಕಹಳೆ ಮೊಳಗಿಸಿದ್ದಾರೆ.

    ಸಂಘಟನೆ ವಿಚಾರದಲ್ಲಿ 2023ರಲ್ಲಿ ಇದ್ದ ಸ್ಪೀಡ್ ಕಡಿಮೆ ಆಗಿದೆ.. ಕೆಪಿಸಿಸಿಗೆ ಪೂರ್ಣ ಪ್ರಮಾಣದ.. ವರ್ಚಸ್ಸು ಇರುವ ಹೊಸ ಅಧ್ಯಕ್ಷರು ಬೇಕಿದೆ ಎಂಬ ಹಕ್ಕೋತ್ತಾಯ ಮಾಡಿದ್ದಾರೆ. ಕಾಂಗ್ರೆಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಶಾಸಕರ ಅಭಿಪ್ರಾಯ ಸಂಗ್ರಹಿಸಿ ಎಂಬ ದಾಳ ಉರುಳಿಸಿದ್ದಾರೆ. ಇದನ್ನೂ ಓದಿ: 12 ಗಂಟೆಯಲ್ಲಿ 1,057 ಪುರುಷರೊಂದಿಗೆ ಸೆಕ್ಸ್‌ – ವಿಶ್ವದಾಖಲೆ ಬರೆದ ನೀಲಿ ತಾರೆ

    ಪವರ್ ಗೇಮ್ ಶುರು ಮಾಡಿದ್ದ ಡಿಕೆ ಶಿವಕುಮಾರ್‌ಗೆ ಸತೀಶ್ ಜಾರಕಿಹೊಳಿ ಚೆಕ್‌ಮೆಟ್ ಇಡಲು ಯತ್ನಿಸಿದ್ದಾರೆ. ಆದ್ರೆ ಅಷ್ಟು ಸುಲಭವಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಬಲಾಬಲ ಪ್ರದರ್ಶನ ನಡೆಸಲು ಹೈಕಮಾಂಡ್ ಒಪ್ಪುತ್ತಾ ಅನ್ನೋದೇ ಇಲ್ಲಿನ ಪ್ರಶ್ನೆಯಾಗಿದೆ. ಈ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಸಿಎಂ ಜಾರಿಕೊಂಡಿದ್ದಾರೆ. ಇದ್ರ ಮಧ್ಯೆ, ಪಕ್ಷದ ಮೊದಲು ಸರ್ಕಾರ ನಂತರ ಎಂದಿದ್ದ ಸುರ್ಜೆವಾಲಾಗೆ, ನಾವಿದ್ದರೇ ತಾನೆ ಪಕ್ಷ.. ಸಮುದಾಯ ಇದ್ರೆ ತಾನೆ ಪಕ್ಷ ಎನ್ನುವ ಮೂಲಕ ಪರಮೇಶ್ವರ್ ಪರೋಕ್ಷವಾಗಿ ಟಕ್ಕರ್ ನೀಡಿದ್ದಾರೆ.

    ಇನ್ನೂ ಐದು ವರ್ಷವೂ ಸಿದ್ದರಾಮಯ್ಯನವ್ರೇ ಸಿಎಂ ಎಂದು ಸಚಿವ ಮಹದೇವಪ್ಪ ಮತ್ತೊಮ್ಮೆ ಹೇಳಿದ್ದಾರೆ. ನಾನ್ಯಾಕೆ ಭವಿಷ್ಯದಲ್ಲಿ ಸಿಎಂ ಆಗಬಾರದು, ಹೈಕಮಾಂಡ್‌ ಒಪ್ಪಿದ್ರೆ ನಾನೂ ಸಿಎಂ ಆಗ್ತೀನಿ ಎಂದು ಸಚಿವ ಆರ್‌.ಬಿ ತಿಮ್ಮಾಪುರ ಕೇಳಿದ್ದಾರೆ. ಇದನ್ನೂ ಓದಿ: ಗುತ್ತಿಗೆದಾರ ಆತ್ಮಹತ್ಯೆ ಕೇಸ್ – ರಾಜು ಕಪನೂರ್ ಆ್ಯಂಡ್ ಗ್ಯಾಂಗ್‌ಗೆ 3 ದಿನ ಸಿಐಡಿ ಕಸ್ಟಡಿಗೆ

    ಇತ್ತ ಸಿಎಂ ಬದಲಾವಣೆಯ ಸನ್ನಿವೇಶ ಸೃಷ್ಟಿಯಾದ್ರೆ ಪರಮೇಶ್ವರ್ ಸಿಎಂ ಆಗಲಿ ಎಂದಿದ್ದಾರೆ. ಈ ಬೆಳವಣಿಗೆಗಳ ಮಧ್ಯೆ, ಕಳೆದ ರಾತ್ರಿ ಎಐಸಿಸಿ ಅಧ್ಯಕ್ಷರೊಂದಿಗೆ ಡಿಸಿಎಂ ಪ್ರತ್ಯೇಕ ಸಭೆ ಮಾಡಿರೋದು ಕುತೂಹಲ ಕೆರಳಿಸಿದೆ. ಇತ್ತ, ಸಿಎಂ ರಾಜೀನಾಮೆ ಸನ್ನಿಹಿತ ಎಂದು ಬಿಜೆಪಿಯ ವಿಜಯೇಂದ್ರ ಪುನರುಚ್ಚರಿಸಿದ್ದಾರೆ.

  • ನ.20ಕ್ಕೆ ರಾಜ್ಯಾದ್ಯಂತ ಬಾರ್ ಬಂದ್

    ನ.20ಕ್ಕೆ ರಾಜ್ಯಾದ್ಯಂತ ಬಾರ್ ಬಂದ್

    ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ (Department of Excise) ಭ್ರಷ್ಟಾಚಾರ, ಲಂಚ ಸ್ವೀಕಾರ ಮಿತಿ ಮೀರಿದೆ. ಇದನ್ನು ಖಂಡಿಸಿ, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮದ್ಯ ಮಾರಾಟಗಾರರ ಒಕ್ಕೂಟ (Karnataka Wine Merchants’ Association)  ನ.20ರಂದು ಮದ್ಯ ಬಂದ್‌ಗೆ ಕರೆ ಕೊಟ್ಟಿದೆ. ಜೊತೆಗೆ ಮಾಜಿ ಸಚಿವ ಗೋಪಾಲಯ್ಯ, ಮಾಜಿ ಸಚಿವ ನಾಗೇಶ್ ಅಬಕಾರಿ ಸಚಿವರಾಗಿದ್ದಾಗಲೂ ಲಂಚ ಇತ್ತು. ಈಗ ಮಿತಿ ಮೀರಿದೆ ಎಂದು ಮದ್ಯ ಮಾರಾಟಗಾರರ ಒಕ್ಕೂಟ ಆರೋಪಿಸಿದೆ.

    ಅಬಕಾರಿ ಇಲಾಖೆಯಲ್ಲಿ ಕೋಟಿ ಕೋಟಿ ಲಂಚ ಸ್ವೀಕಾರ ಎಂದು ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ರಾಜ್ಯ ಬಿಜೆಪಿ ಮತ್ತು ಕೇಂದ್ರ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಮುಗಿ ಬೀಳುತ್ತಿದ್ದಾರೆ. ಈಗ ಮದ್ಯ ಮಾರಾಟಗಾರರ ಸಂಘ ಭ್ರಷ್ಟಾಚಾರ ಖಂಡಿಸಿ, ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನವೆಂಬರ್ 20ರಂದು ಮದ್ಯ ಮಾರಾಟ ಬಂದ್ ಮಾಡಲು ನಿರ್ಧರಿಸಿದ್ದಾರೆ. ಇದನ್ನೂ ಓದಿ: 39 ಸಾವಿರ ಕೋಟಿ ಅನುದಾನದಲ್ಲಿ ಕರ್ನಾಟಕದಲ್ಲಿ ರೈಲ್ವೆ ಕೆಲಸ ಆರಂಭ: ಸೋಮಣ್ಣ

    ಇನ್ನೂ ಈ ಲಂಚ ಸ್ವೀಕಾರ ಎಲ್ಲಾ ಸರ್ಕಾರದಲ್ಲೂ ಇದೆ. ಗೋಪಾಲಯ್ಯ ಅವರು ಸಚಿವರಾಗಿದ್ದಾಗಲೂ ಇತ್ತು. ನಾಗೇಶ್ ಸಚಿವರಾಗಿದ್ದಾಗಲೂ ಇತ್ತು. ಈಗ ಕಾಂಗ್ರೆಸ್ ಸರ್ಕಾರದಲ್ಲಿ ಮಿತಿ ಮೀರಿದೆ. ಹಾಗಾಗಿ ನ್ಯಾಯ ಬೇಕಿದೆ. ಅಬಕಾರಿ ಸಚಿವರನ್ನ ಬದಲಾವಣೆ ಮಾಡಬೇಕು. ಮುಖ್ಯ ಮಂತ್ರಿಗಳ ನೇತೃತ್ವದಲ್ಲಿ ಸಭೆ ಮಾಡಬೇಕು. ಹಣಕಾಸು ಇಲಾಖೆಗೆ ನಮ್ಮ ಇಲಾಖೆಯನ್ನ ಸೇರಿಸಬೇಕು ಎಂದು ಮದ್ಯ ಮಾರಾಟಗಾರರ ಒಕ್ಕೂಟ ಆಗ್ರಹಿಸಿದೆ. ಇದನ್ನೂ ಓದಿ: ಚನ್ನಪಟ್ಟಣ ಫಲಿತಾಂಶಕ್ಕೂ ಮುನ್ನವೇ ಸೋಲೊಪ್ಪಿಕೊಂಡ್ರಾ ಯೋಗೇಶ್ವರ್‌?

    ಇನ್ನೂ ನವೆಂಬರ್ 20ರಂದು ಮದ್ಯ ಬಂದ್‌ಗೆ 10ಕ್ಕೂ ಹೆಚ್ಚು ಮದ್ಯದಂಗಡಿ ವ್ಯಾಪಾರಸ್ಥರು ಬೆಂಬಲ ನೀಡಿದ್ದಾರೆ. ಬೆಳಗ್ಗೆಯಿಂದ ಸಂಜೆವರೆಗೂ ಮದ್ಯ ಸಿಗಲ್ಲ. ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಮಾಡಿ ಕಾನೂನು ತಿದ್ದುಪಡಿ ಮಾಡುವಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಲಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ವಾಯು ಮಾಲಿನ್ಯ; 300ಕ್ಕೂ ಅಧಿಕ ವಿಮಾನಗಳ ಹಾರಾಟ ವ್ಯತ್ಯಯ

    ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ಕರೆದರೆ ಕೆಲ ದಾಖಲೆಗಳನ್ನು ನೀಡುತ್ತೇವೆ. ನವೆಂಬರ್ 20ರ ಒಳಗಡೆ ಸರ್ಕಾರ ನಮ್ಮನ್ನ ಕರೆದು ಮಾತನಾಡಿಸಿ, ಬೇಡಿಕೆ ಈಡೇರಿಸುತ್ತೇವೆ ಅಂತಾ ಭರವಸೆ ನೀಡಿದರೆ ಪ್ರತಿಭಟನೆ ಕೈ ಬಿಡುತ್ತೇವೆ ಎಂದು ಒಕ್ಕೂಟ ತಿಳಿಸಿದೆ. ಇದನ್ನೂ ಓದಿ: ಶಾಸಕರನ್ನು ಖರೀದಿ ಮಾಡೋಕೆ ಅವ್ರೇನು ಕತ್ತೆನಾ? ಕುದುರೆನಾ?: ಸಿಎಂ ವಿರುದ್ಧ ಸಿ.ಟಿ ರವಿ ಕಿಡಿ

  • ‘ಮಂಥ್ಲಿ ಮನಿ’ ಹೆಸರಿನಲ್ಲಿ ಮದ್ಯದಂಗಡಿಗಳಿಂದ ತಿಂಗಳಿಗೆ 15 ಕೋಟಿ ಲಂಚ – ಅಬಕಾರಿ ಇಲಾಖೆ ವಿರುದ್ಧ ಗಂಭೀರ ಆರೋಪ

    ‘ಮಂಥ್ಲಿ ಮನಿ’ ಹೆಸರಿನಲ್ಲಿ ಮದ್ಯದಂಗಡಿಗಳಿಂದ ತಿಂಗಳಿಗೆ 15 ಕೋಟಿ ಲಂಚ – ಅಬಕಾರಿ ಇಲಾಖೆ ವಿರುದ್ಧ ಗಂಭೀರ ಆರೋಪ

    – ರಾಜ್ಯಪಾಲರಿಗೆ ರಾಜ್ಯ ಮದ್ಯ ಮಾರಾಟಗಾರರ ಸಂಘದಿಂದ ಪತ್ರ
    -ಅಬಕಾರಿ ಸಚಿವ ರಾಜೀನಾಮೆಗೆ ಆರ್‌.ಅಶೋಕ್‌ ಒತ್ತಾಯ

    ಬೆಂಗಳೂರು: ವಾಲ್ಮೀಕಿ ನಿಗಮ ಹಾಗೂ ಮುಡಾ ಹಗರಣ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ಅಬಕಾರಿ ಇಲಾಖೆಯು ಮದ್ಯದಂಗಡಿಗಳಿಂದ ‘ಮಂಥ್ಲಿ ಮನಿ’ ಹೆಸರಿನಲ್ಲಿ ಲಂಚ ಪಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ.

    ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ವಿಪಕ್ಷ ನಾಯಕ ಆರ್‌.ಅಶೋಕ್‌, ಅಬಕಾರಿ ಇಲಾಖೆ ಸಚಿವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.

    ಕಾಂಗ್ರೆಸ್ ಸರ್ಕಾರದ ಲಂಚಾವತಾರದ ಮತ್ತೂಂದು ಕರಾಳ ಅಧ್ಯಾಯ ಬಹಿರಂಗಗೊಂಡಿದ್ದು, ರಾಜ್ಯ ಮದ್ಯ ಮಾರಾಟಗಾರರ ಸಂಘ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯಪಾಲರಿಗೆ ಬರೆದಿರುವ ಪತ್ರದಲ್ಲಿ ಅಬಕಾರಿ ಸಚಿವರು ‘ಮಂಥ್ಲಿ ಮನಿ’ ಹೆಸರಿನಲ್ಲಿ ಮದ್ಯದ ಅಂಗಡಿಗಳಿಂದ ಪ್ರತಿ ತಿಂಗಳಿಗೆ 15 ಕೋಟಿ ರೂಪಾಯಿಯಂತೆ ವರ್ಷಕ್ಕೆ 180 ಕೋಟಿ ಲಂಚ ಪಡೆಯುತ್ತಿದ್ದಾರೆ ಎಂದು ಆರೋಪಿಸಿ ಅಬಕಾರಿ ಸಚಿವರನ್ನು ಬದಲಾಯಿಸಲು ಕೋರಿದ್ದಾರೆ.

    ವರ್ಗಾವಣೆ ದಂಧೆ, ಲೈಸೆನ್ಸ್ ಮಂಜೂರಾತಿ, ಮದ್ಯದ ಅಂಗಡಿಗಳಿಂದ ‘ಮಂಥ್ಲಿ ಮನಿ’ ಸೇರಿದಂತೆ ಅಬಕಾರಿ ಸಚಿವರು ವರ್ಷಕ್ಕೆ ಸುಮಾರು 500 ಕೋಟಿ ರೂಪಾಯಿ ಭ್ರಷ್ಟಾಚಾರ ಎಸಗುತ್ತಿದ್ದಾರೆ ಎಂದು ರಾಜ್ಯ ಮದ್ಯ ಮಾರಾಟಗಾರರ ಸಂಘ ಮಾಡಿರುವ ಆರೋಪ ಅತ್ಯಂತ ಗಂಭೀರವಾಗಿದ್ದು, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರನ್ನು ಈ ಕೂಡಲೇ ಸಚಿವ ಸ್ಥಾನದಿಂದ ವಜಾ ಮಾಡಿ ಲೋಕಾಯುಕ್ತ ತನಿಖೆಗೆ ವಹಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಅಗ್ರಹಿಸುತ್ತೇನೆ ಎಂದು ಆರ್‌.ಅಶೋಕ್‌ ಪೋಸ್ಟ್‌ ಹಾಕಿದ್ದಾರೆ.

  • ಬಿಜೆಪಿಯಲ್ಲಿ ಬಿಎಸ್‍ವೈ ವಿರುದ್ಧವೇ ಷಡ್ಯಂತ್ರ: ಆರ್.ಬಿ.ತಿಮ್ಮಾಪುರ

    ಬಿಜೆಪಿಯಲ್ಲಿ ಬಿಎಸ್‍ವೈ ವಿರುದ್ಧವೇ ಷಡ್ಯಂತ್ರ: ಆರ್.ಬಿ.ತಿಮ್ಮಾಪುರ

    -ಮೋದಿ ಹೃದಯದಲ್ಲಿ ಕರ್ನಾಟಕಕ್ಕೆ ಜಾಗವಿಲ್ಲ
    -25 ಸಂಸದರಿಗೆ ಬಾಯಿಯೇ ಇಲ್ಲ

    ಬಾಗಲಕೋಟೆ: ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿಯಲ್ಲಿಯೇ ಷಡ್ಯಂತ್ರ ರಚಿಸಲಾಗಿದೆ. ಸ್ವಪಕ್ಷದ ನಾಯಕರ ಸಂಚಿಗೆ ಸಿಲುಕಿ ಯಡಿಯೂರಪ್ಪ ಅಸಹಾಯಕರಾಗಿದ್ದಾರೆ ಎಂದು ಮಾಜಿ ಸಚಿವ, ಕಾಂಗ್ರೆಸ್ ನಾಯಕ ಆರ್.ಬಿ.ತಿಮ್ಮಾಪುರ ಸ್ಫೋಟಕ ಹೇಳಿಕೆ ನೀಡಿದ್ದಾರೆ.

    ಬಿಜೆಪಿಯಲ್ಲಿ ಲಿಂಗಾಯತ ನಾಯಕನನ್ನು ಮುಗಿಸಲು ಷಡ್ಯಂತ್ರ ರಚಿಸಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಆರ್‍ಎಸ್‍ಎಸ್ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಸಂತೋಷ್ ಸೇರಿ ಬಿಎಸ್‍ವೈ ವಿರುದ್ಧ ಪಿತೂರಿ ನಡೆಸಿದ್ದಾರೆ. ಲಿಂಗಾಯತರು ಯಡಿಯೂರಪ್ಪನವರ ಮುಖ ನೋಡಿ ಮತ ಹಾಕಿದ್ದಾರೆ ಹೊರತು ನಳಿನ್ ಕುಮಾರ್ ಮುಖ ನೋಡಿ ಅಲ್ಲ. ಕಟೀಲ್‍ಗೆ ಈ ಭಾಗದ ಪರಿಚಯವೇ ಇಲ್ಲ. ಯಡಿಯೂರಪ್ಪನವರ ಮೇಲೆ ಮೂವರು ಡಿಸಿಎಂಗಳನ್ನು ತಂದಿದ್ದು, ಇನ್ನೆರೆಡು ತಿಂಗಳಲ್ಲಿ ಈ ಇಬ್ಬರು ಬಿಎಸ್‍ವೈ ಅವರ ರಾಜಕೀಯ ಜೀವನವನ್ನು ಮುಗಿಸಲಿದ್ದಾರೆ. ಮುಂದಿನ ಚುನಾವಣೆಯಲ್ಲಿ ಯಡಿಯೂರಪ್ಪವರಿಗೆ ಟಿಕೆಟ್ ನೀಡಲ್ಲ ಎಂದು ಭವಿಷ್ಯ ನುಡಿದರು. ಇದನ್ನೂ ಓದಿ: ನೆರೆ ಪರಿಹಾರ ಕೊಡದ ಕೇಂದ್ರ ಸರ್ಕಾರ – ಎಲ್ಲಾ ಚೆನ್ನಾಗಿದೆ ಎಂದ ಮೋದಿ ವಿರುದ್ಧ ಕಿಡಿ

    ಐವತ್ತಾರು ಇಂಚಿನ ಎದೆ ಇದೆ ಎಂದು ಪೋಸ್ ಕೊಡುವ ಪ್ರಧಾನಿ ಮೋದಿ ಅವರ ಹೃದಯದಲ್ಲಿ ಕರ್ನಾಟಕಕ್ಕೆ ಜಾಗವಿಲ್ಲ. ರಾಜ್ಯದ ಜನತೆ 25 ಬಿಜೆಪಿ ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದ್ದರಿಂದ ಪ್ರಧಾನಿ ಹೃದಯದಲ್ಲಿ ಸಣ್ಣ ಜಾಗವಿದೆ ಅಂತಾ ತಿಳಿದುಕೊಂಡಿದ್ದಿವಿ. ಆದ್ರೆ ನಮ್ಮ ನಂಬಿಕೆ ಸುಳ್ಳಾಗಿದೆ. ನಮ್ಮ ಸಂಸದರಿಗೆ ಬಾಯಿಯೇ ಇಲ್ಲ. ಒಂದಿಂಚು ಸಹ ಜಾಗ ಇರಲಾರದಂತಹ 56 ಇಂಚು ಎದೆ ಇದ್ದರೆಷ್ಟು, ಬಿಟ್ಟರೆಷ್ಟು. ಕರ್ನಾಟಕ ಜನತೆಗೆ ನೋವು ಮಾತ್ರ ತಪ್ಪಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಯಡಿಯೂರಪ್ಪನವರೇ ನೀವಿಲ್ಲಿಗೆ ಬರಬೇಡಿ – ಸಂತ್ರಸ್ತರ ಆಕ್ರೋಶ

  • ಪಕ್ಷದ ಐವರು ರಾಜೀನಾಮೆ ನೀಡಿದರೆ, ಬಿಜೆಪಿಯ 5 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ: ತಿಮ್ಮಾಪುರ

    ಪಕ್ಷದ ಐವರು ರಾಜೀನಾಮೆ ನೀಡಿದರೆ, ಬಿಜೆಪಿಯ 5 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ: ತಿಮ್ಮಾಪುರ

    ಬಾಗಲಕೋಟೆ: ಕಾಂಗ್ರೆಸ್ಸಿನ ಐವರು ರಾಜೀನಾಮೆ ನೀಡಿದರೆ, ಬಿಜೆಪಿಯ ಐದು ಶಾಸಕರು ನಮ್ಮ ಜೊತೆ ಬರಲು ಸಿದ್ಧರಿದ್ದಾರೆ. ಸ್ವತಃ ನನ್ನ ಜೊತೆ ಇಬ್ಬರು ಶಾಸಕರು ಸಂಪರ್ಕದಲ್ಲಿದ್ದಾರೆ ಎಂದು ಸಕ್ಕರೆ ಸಚಿವ ಆರ್.ಬಿ.ತಿಮ್ಮಾಪುರ ಹೊಸ ಬಾಂಬ್ ಸಿಡಿಸಿದ್ದಾರೆ.

    ಬಾಗಲಕೋಟೆಯಲ್ಲಿ ಶಾಸಕರ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿ, ನಾವು ಸಹ ರಿವರ್ಸ್ ಆಪರೇಶನ್ ಮಾಡುತ್ತೇವೆ. ಈಗಾಗಲೇ ಬಿಜೆಪಿಯ ಐವರು ಶಾಸಕರ ಜೊತೆ ಮಾತುಕತೆ ನಡೆದಿದೆ. ಬಿಜೆಪಿಯ ಐವರು ಬರಲು ಸಿದ್ಧರಿದ್ದಾರೆ. ಐವರು ಶಾಸಕರ ಪೈಕಿ ಸದ್ಯ ನನ್ನ ಜೊತೆಗೆ ಇಬ್ಬರು ಶಾಸಕರು ಸಂಪರ್ಕದಲ್ಲಿದ್ದಾರೆ. ಇನ್ನು ಆದಾಯ ತೆರಿಗೆ(ಐಟಿ), ಜಾರಿ ನಿರ್ದೇಶನಾಲಯ(ಇಡಿ) ಬೆದರಿಕೆಯಿಂದ ಶಾಸಕರು ರಾಜೀನಾಮೆಗೆ ಮುಂದಾಗಿದ್ದು, ಕೇಂದ್ರ ಸರ್ಕಾರ ಐಟಿ, ಇಡಿ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ದೂರಿದರು.

    ದೇಶದೆಲ್ಲೆಡೆ ಇದೇ ರೀತಿ ನಡೆಯುತ್ತಿದ್ದು, ಶಾಸಕರ ರಾಜೀನಾಮೆಯ ಹಿಂದೆ ಬೆದರಿಕೆ ತಂತ್ರವಿದೆ. ಕೆಲವು ಕೈಗಾರಿಕೋದ್ಯಮಿಗಳಿಗೂ ಬೆದರಿಕೆ ಇದೆ. ಶಾಸಕ ರಮೇಶ ಜಾರಕಿಹೊಳಿ ಇನ್ನೂ ರಾಜೀನಾಮೆ ಸಲ್ಲಿಸಿಲ್ಲ. ರಮೇಶ ಜಾರಕಿಹೊಳಿ ನಮ್ಮ ಜೊತೆಗೆ ಇದ್ದಾರೆ. ಸರ್ಕಾರ ಸುಭದ್ರವಾಗಿದೆ. ಒಂದು ವೇಳೆ ನಮ್ಮ ಕೆಲ ಶಾಸಕರು ರಾಜೀನಾಮೆ ನೀಡಿ ಸರ್ಕಾರ ಕೆಡವಲು ಮುಂದಾದಲ್ಲಿ, ಬಿಜೆಪಿಯ ಐದು ಜನ ಶಾಸಕರು ನಮ್ಮ ಕಡೆಗೆ ಬರಲಿದ್ದಾರೆ ಎಂದು ಬಾಂಬ್ ಸಿಡಿಸಿದರು.

    ರಾಜೀನಾಮೆ ನೀಡಿದ ಶಾಸಕರು ಸರ್ಕಾರ ಬೀಳುವುದಕ್ಕೆ ಅವಕಾಶ ಕೊಡುವುದಿಲ್ಲ. ಅಲ್ಲದೇ ನಾವು ರಾಜೀನಾಮೆ ಕೊಟ್ಟು ಸರ್ಕಾರ ಉಳಿಸುತ್ತೇವೆ ಎಂದಿದ್ದಾರೆ. ಬಿಜೆಪಿಯ ಆಪರೇಶನ್‍ಗೆ ನಾವೂ ರಿವರ್ಸ್ ಆಪರೇಶನ್ ಮಾಡುತ್ತೇವೆ. ನಾವೂ ರಾಜಕಾರಣಿಗಳು, ರಾಜಕಾರಣವನ್ನೇ ಮಾಡುತ್ತೇವೆ ಎಂದು ಹೇಳಿ ರಿವರ್ಸ್ ಆಪರೇಶನ್ ಸುಳಿವು ನೀಡಿದರು.

  • ಅಲ್ಲಿನೂ ಆಗೋದಿಲ್ಲ, ಇಲ್ಲಿನೂ ಆಗೋದಿಲ್ಲ, ಬಂದು ಏನ್ಮಾಡ್ತಾರೆ: ಬಿಎಸ್‍ವೈಗೆ ತಿಮ್ಮಾಪುರ ಟಾಂಗ್

    ಅಲ್ಲಿನೂ ಆಗೋದಿಲ್ಲ, ಇಲ್ಲಿನೂ ಆಗೋದಿಲ್ಲ, ಬಂದು ಏನ್ಮಾಡ್ತಾರೆ: ಬಿಎಸ್‍ವೈಗೆ ತಿಮ್ಮಾಪುರ ಟಾಂಗ್

    ಬಾಗಲಕೋಟೆ: ಶಿವಮೊಗ್ಗದಲ್ಲಿ ಆಗಲಾರದ್ದಕ್ಕೆ ಇಲ್ಲಿ ಬರ್ತಾರೆ ಅಂದ್ರೆ ಬಿಎಸ್‍ವೈ ಅವರಿಗೆ ಅಥವಾ ಕಾರ್ಯಕರ್ತರಿಗೆ ಭಯ ಆತಂಕ ಇರಬಹುದೇನೋ ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ ಟಾಂಗ್ ನೀಡಿದ್ದಾರೆ.

    ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಉತ್ತರ ಕರ್ನಾಟಕ ಭಾಗದಿಂದ ಸ್ಪರ್ಧಿಸಲಿದ್ದಾರೆ ಎನ್ನುವ ವಿಚಾರಕ್ಕೆ ಬಾಗಲಕೋಟೆ ರೈಲು ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ತಿಮ್ಮಾಪುರ ಅವರು, ಯಾರೊ ಒಬ್ಬರು ಬಂದು ಸ್ಪರ್ಧಿಸುತ್ತಾರೆ ಅಂದಾಕ್ಷಣ ಇಲ್ಲಿ ಬದಲಾವಣೆ ಆಗೋದಿಲ್ಲ. ಶಾ ಬಂದು ಬಿಡ್ತಾರೆ, ಶಾ ಬಂದು ಬಿಡ್ತಾರೆ ಅಂತಾರಲ್ಲ ಬಂದು ಏನ್ ಮಾಡ್ತಾರೆ ಎಂದು ಪ್ರಶ್ನಿಸಿದ್ರು.

    ಸಿಎಂ ಸಿದ್ದರಾಮಯ್ಯ ಬಾಗಲಕೋಟೆಯಿಂದ ಸ್ಪರ್ಧಿಸಲಿ ಎಂದು ನಾವೆಲ್ಲ ಮನವೊಲಿಸುತ್ತಿದ್ದೇವೆ. ಅವರು ಜಿಲ್ಲೆಯ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಿದರೂ ಅವರನ್ನು ಗೆಲ್ಲಿಸುತ್ತೇವೆ. ಗೆದ್ದೆ ಗೆಲ್ತಾರೆ ಎಂದು ತಿಳಿಸಿದರು.

    ಅಬಕಾರಿ ಇಲಾಖೆಯ ಬಗ್ಗೆ ಮಾತನಾಡಿ ಅವರು, ಕಳ್ಳಬಟ್ಟಿ ಸರಾಯಿಯನ್ನು ಬಂದ್ ಮಾಡಬೆಕಾಗುತ್ತದೆ. ಅದರ ಜೊತೆಗೆ ನಕಲಿ ಮದ್ಯ ಹಾಗೂ ಅದರಲ್ಲೂ ವಿಶೇಷವಾಗಿ ಡ್ರಗ್ ಮಾಫಿಯಾದಿಂದ ಮಕ್ಕಳು ಹಾಳಾಗುತ್ತಿದ್ದಾರೆ. ಆದ್ದರಿಂದ ಅದಕ್ಕೆ ಹೆಚ್ಚು ಒತ್ತು ಕೊಡಲಾಗಿದೆ. ಈಗಾಗಲೇ ಅದನ್ನು ತಡೆಯಲು ನಾವು ಅಧಿಕಾರಿಗಳ ವಿಶೇಷ ವಿಂಗ್ ತಯಾರಿಸಿ ನಿರ್ದೇಶನ ನೀಡಿದ್ದೇವೆ. ಅವರು ಅವರ ಕೆಲಸವನ್ನು ಪ್ರಾರಂಭಿಸುತ್ತಾರೆ. ಅಷ್ಟೆ ಅಲ್ಲದೆ ಯಾವುದೇ ಹೊಸ ಬಾರ್‍ಗಳಿಗೆ, ಲೈಸೆನ್ಸ್ ನೀಡುವ ಬಗ್ಗೆ ಪ್ರಸ್ತಾವನೆ ಇಲ್ಲ ಎಂದು ತಿಳಿಸಿದರು.

    ಕೊನೆಯದಾಗಿ ಸನ್ಮಾನ್ಯ ಮುಖ್ಯ ಮಂತ್ರಿಗಳು ಅವರು ನನ್ನನ್ನು ಮಂತ್ರಿಯನ್ನಾಗಿ ಮಾಡಿದ್ದಾರೆ. ರಾಜ್ಯದ ಜನತೆಯ ಸೇವೆಯನ್ನು ಮಾಡಲು ಅವಕಾಶ ಮಾಡಿಕೊಟ್ಟ ಮುಖ್ಯಮಂತ್ರಿಗಳಿಗೆ ನಾನು ವಿಶೇಷವಾಗಿ ಅಭಿನಂದನೆ ಹೇಳುತ್ತೇನೆ. ಅವರ ಆಶೋತ್ತರಗಳು ಈ ರಾಜ್ಯದ ಜನತೆಗೆ ಯಾವ ಭರವಸೆಯನ್ನು ನೀಡಿದ್ದಾರೆ ಯಾವ ರೀತಿಯ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಾರೋ ಅದರ ಜೊತೆ ಜೊತೆಯಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.