Tag: ಆರ್‌.ಪಿ ಸಿಂಗ್‌

  • ರಾಹುಲ್ ಗಾಂಧಿಯನ್ನು ಕೋರ್ಟ್‌ಗೆಳೆಯುತ್ತೇವೆ; ಸಿಖ್ ಸಮುದಾಯದ ಬಗ್ಗೆ ಹೇಳಿಕೆಗೆ ಎಚ್ಚರಿಕೆ ನೀಡಿ ಕೇಂದ್ರ ಸಚಿವ ಪುರಿ

    ರಾಹುಲ್ ಗಾಂಧಿಯನ್ನು ಕೋರ್ಟ್‌ಗೆಳೆಯುತ್ತೇವೆ; ಸಿಖ್ ಸಮುದಾಯದ ಬಗ್ಗೆ ಹೇಳಿಕೆಗೆ ಎಚ್ಚರಿಕೆ ನೀಡಿ ಕೇಂದ್ರ ಸಚಿವ ಪುರಿ

    ವಾಷಿಂಗ್ಟನ್‌: ಒಂದು ಕಡೆ ಮೀಸಲಾತಿ ಬಗ್ಗೆ ಹೇಳಿಕೆ ಕೊಟ್ಟು ತೀವ್ರ ಟೀಕೆಗೆ ಗುರಿಯಾಗಿರೋ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi), ಸಿಖ್ ಧರ್ಮವನ್ನು ಉಲ್ಲೇಖಿಸಿ, ಭಾರತದಲ್ಲಿ ರಾಜಕೀಯಕ್ಕಿಂತ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆಯೇ ಹೆಚ್ಚು ಹೋರಾಟಗಳು ನಡೆಯುತ್ತವೆ ಅಂದಿರೋದು ವಿವಾದಕ್ಕೆ ಕಾರಣವಾಗಿದೆ.

    ಭಾರತದ ಕೆಲ ವರ್ಗ, ಭಾಷೆ, ಧರ್ಮಗಳಲ್ಲಿ ಆರ್‌ಎಸ್‌ಎಸ್ ಅಭದ್ರತೆಯ ಭಾವನೆ ಮೂಡಿಸಿದೆ. ಉದಾಹರಣೆಗೆ ಸಿಖ್ಖರು (Sikhs) ಟರ್ಬನ್, ಖಡಗ ಧರಿಸೋದಕ್ಕೆ ಹೆದರುವಂತಾಗಿದೆ. ಇದು ಒಬ್ಬ ವ್ಯಕ್ತಿ ಮತ್ತು ಒಂದು ಧರ್ಮಕ್ಕೆ ಸೀಮಿತವಾಗಿಲ್ಲ. ಎಲ್ಲಾ ಧರ್ಮಗಳಲ್ಲೂ ಇಂತಹ ಸ್ಥಿತಿ ಇದೆ ಎಂದು ರಾಹುಲ್ ಗಾಂಧಿ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿದ ಅನುದಾನವನ್ನು ಕೇಂದ್ರ ತಕ್ಷಣವೇ ಬಿಡುಗಡೆಗೊಳಿಸಲಿ : ಎಚ್.ಕೆ ಪಾಟೀಲ್

    ಇದೇ ವೇಳೆ ರಾಹುಲ್‌ ಗಾಂಧಿ ಅವರು, ಇಂದಿರಾ ಗಾಂಧಿಯವರ ಹತ್ಯೆಯ ನಂತರ 1984 ರ ಸಿಖ್ ವಿರೋಧಿ ದಂಗೆಯನ್ನು ಉಲ್ಲೇಖಿಸಿ ಮಾತನಾಡಿದರು. ಸ್ವಾತಂತ್ರ್ಯಾನಂತರದ ಇತಿಹಾಸದಲ್ಲಿ, ಸಿಖ್‌ ಸಮುದಾಯದ ಮೇಲೆ ಹತ್ಯಾಕಾಂಡ ನಡೆದ ಸಂದರ್ಭವಿತ್ತು. ಆಗ 3,000 ಅಮಾಯಕ ಸಿಖ್ಖರನ್ನು ಕೊಲ್ಲಲಾಯಿತು. ಆ ಸಂದರ್ಭದಲ್ಲಿ ನನ್ನ ಕೆಲವು ಸಹೋದರರು ಪೇಟ ಧರಿಸುವುದನ್ನೇ ಬಿಟ್ಟರು ಎಂದು ಹೇಳಿದ್ದರು.

    ರಾಹುಲ್‌ ಗಾಂಧಿ ಅವರು ಅಮೆರಿಕದ ವೇದಿಕೆಯಲ್ಲಿ ನೀಡಿದ ಹೇಳಿಕೆಯನ್ನು ಬಿಜೆಪಿಯಲ್ಲಿರುವ ಸಿಖ್‌ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ. ಕೇಂದ್ರ ಸಚಿವ ಹರ್ದೀಪ್ ಪುರಿ, ಬಿಜೆಪಿ ಹಿರಿಯ ಮುಖಂಡ ಆರ್‌.ಪಿ ಸಿಂಗ್‌ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ದೀಪಿಕಾ – ರಣ್‌ವೀರ್‌ ಸಿಂಗ್ ಮಗಳ ನೋಡಲು ಬಂದ ಮುಕೇಶ್ ಅಂಬಾನಿ

    ರಾಹುಲ್‌ ಗಾಂಧಿ ಅವರು ಅಪಾಯಕಾರಿ ಸಂಗತಿಗಳನ್ನು ಹರಡುತ್ತಿದ್ದಾರೆ. ವಿರೋಧಪಕ್ಷದ ನಾಯಕನ ಹುದ್ದೆಯಲ್ಲಿರುವಾಗ ವಿದೇಶದಲ್ಲಿ ನಿಂತು ಭಾರತ ಸರ್ಕಾರವನ್ನು ಟೀಕಿಸುವುದು ಎಷ್ಟು ಸರಿ? ಅಮೆರಿಕದಲ್ಲಿ ನನ್ನ ಸಮುದಾಯದ ಜನ ಇದ್ದಾರೆ. ಅವರು ಭಾರತದೊಂದಿಗೆ ಹೆಚ್ಚು ಬಲವಾದ ಸಂಪರ್ಕವನ್ನು ಹೊಂದಿಲ್ಲ. ರಾಹುಲ್‌ ಗಾಂದಿ ಅವರಿಗೆ ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಅವರನ್ನು ಕೋರ್ಟ್‌ಗೆ ಎಳೆಯುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಅಲ್ಲಲ್ಲಿ ಪ್ರತಿಭಟನೆಗಳು ಶುರುವಾಗಿವೆ. ಈ ಮಧ್ಯೆ, ಪ್ರಧಾನಿ ಮೋದಿ ಬಗ್ಗೆಯೂ ಪ್ರಸ್ತಾಪಿಸಿರೋ ರಾಹುಲ್ ಗಾಂಧಿ, ಮೋದಿ ಮೇಲೆ ನನಗೆ ಯಾವುದೇ ದ್ವೇಷ ಇಲ್ಲ. ನಮ್ಮಿಬ್ಬರದ್ದೂ ಭಿನ್ನ ವ್ಯಕ್ತಿತ್ವ. ಅವರನ್ನು ಶತ್ರುವಿನ ರೀತಿ ನೋಡಿಲ್ಲ ಎಂದು ರಾಹುಲ್ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಹಿರಿಯ ಅಧಿಕಾರಿ ವಿರುದ್ಧ IAF ಫ್ಲೈಯಿಂಗ್‌ ಸ್ಕ್ವಾಡ್‌ ಮಹಿಳಾಧಿಕಾರಿಯಿಂದ ಅತ್ಯಾಚಾರ ಆರೋಪ – ಕೇಸ್‌ ದಾಖಲು

    ಇನ್ನೂ ಲೋಕಸಭೆ ಚುನಾವಣೆಯ ಪ್ರಕ್ರಿಯೆಯನ್ನು ರಾಹುಲ್ ಗಾಂಧಿ ಟೀಕೆ ಮಾಡಿದ್ದಾರೆ. ಲೋಕಸಭೆ ಚುನಾವಣೆ ಪಾರದರ್ಶಕವಾಗಿ ನಡೆದಿದ್ರೆ ಬಿಜೆಪಿಗೆ 240 ಸೀಟ್ ಕೂಡ ಬರ್ತಿರಲಿಲ್ಲ. ಬಿಜೆಪಿಗೆ ಆರ್ಥಿಕ ಬಲ ಇದೆ. ಚುನಾವಣಾ ಆಯೋಗ ಅವರಿಗೆ ಅನುಕೂಲವಾಗಿ ಕೆಲಸ ಮಾಡಿತು ಎಂದು ಅಮೆರಿಕಲ್ಲಿ ಆರೋಪಿಸಿದ್ದಾರೆ.