Tag: ಆರ್.ಧ್ರುವನಾರಾಯಣ್

  • ಹುಟ್ಟೂರಿನ ಮಣ್ಣಲ್ಲಿ ಧ್ರುವನಾರಾಯಣ್ ಲೀನ – ರಾಜಕೀಯದ ಅಜಾತಶತ್ರು ಇನ್ನು ನೆನಪು ಮಾತ್ರ

    ಹುಟ್ಟೂರಿನ ಮಣ್ಣಲ್ಲಿ ಧ್ರುವನಾರಾಯಣ್ ಲೀನ – ರಾಜಕೀಯದ ಅಜಾತಶತ್ರು ಇನ್ನು ನೆನಪು ಮಾತ್ರ

    ಚಾಮರಾಜನಗರ: ಜನ ಸೇವಕ, ರಾಜಕಾರಣಿ ಆರ್.ಧ್ರುವನಾರಾಯಣ್ (R.Dhruvanarayan) ಇನ್ನು ನೆನಪು ಮಾತ್ರ. ಮಾರ್ಚ್ 11ರಂದು ಹೃದಯಾಘಾತದಿಂದ ನಿಧನರಾದ ಧ್ರುವನಾರಾಯಣ್ ಅವರ ಅಂತ್ಯಕ್ರಿಯೆ (Funeral) ಸರ್ಕಾರಿ ಗೌರವಗಳೊಂದಿಗೆ ಹುಟ್ಟೂರಾದ ಚಾಮರಾಜನಗರ (Chamarajanagara) ಜಿಲ್ಲೆಯ ಹೆಗ್ಗವಾಡಿಯಲ್ಲಿ (Heggavadi) ನೆರವೇರಿತು. ನೂರಾರು ಗಣ್ಯರು, ಸಹಸ್ರಾರು ಜನರ ಅಶ್ರುತರ್ಪಣದೊಂದಿಗೆ ಧ್ರುವನಾರಾಯಣ್ ಮಣ್ಣಲ್ಲಿ ಲೀನವಾದರು.

    ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಜನಪ್ರತಿನಿಧಿಗಳಿಗೆ ಮಾದರಿಯಾಗಿದ್ದ ಚಾಮರಾಜನಗರ ಮಾಜಿ ಸಂಸದ, ಕೆಪಿಸಿಸಿ (KPCC) ಮಾಜಿ ಅಧ್ಯಕ್ಷ ಆರ್.ಧ್ರುವನಾರಾಯಣ್ ಅವರ ಯುಗಾಂತ್ಯವಾಗಿದೆ. ಶನಿವಾರ ನಿಧನರಾದ ಆರ್.ಧ್ರುವನಾರಾಯಣ ಅವರ ಪಾರ್ಥಿವ ಶರೀರವನ್ನು ಮೈಸೂರಿನಿಂದ (Mysuru) ಚಾಮರಾಜನಗರ ಜಿಲ್ಲೆ ಹೆಗ್ಗವಾಡಿ ಗ್ರಾಮಕ್ಕೆ ಮಧ್ಯರಾತ್ರಿ ತರಲಾಗಿತ್ತು. ತಡರಾತ್ರಿಯಾದರೂ ದಾರಿಯುದ್ದಕ್ಕೂ ಗ್ರಾಮ ಗ್ರಾಮಗಳಲ್ಲಿ ಕಾದು ನಿಂತಿದ್ದ ಸಹಸ್ರಾರು ಸಾರ್ವಜನಿಕರು ಅಗಲಿದ ನಾಯಕನ ಅಂತಿಮ ದರ್ಶನ ಪಡೆದರು. ಇದನ್ನೂ ಓದಿ: ಸ್ವಾಮೀಜಿ ಮಾತು ನಂಬಿ ಶನಿ ದೇವರಿಗೆ ಮಾಂಸದ ಹಾರ ತಂದಿದ್ದ ವ್ಯಕ್ತಿ ಅರೆಸ್ಟ್

    ಧ್ರುವನಾರಾಯಣ್ ಅವರ ಪಾರ್ಥಿವ ಶರೀರವನ್ನು ಹೆಗ್ಗವಾಡಿಯಲ್ಲಿರುವ ತಮ್ಮ ನಿವಾಸದ ಆವರಣದಲ್ಲಿ ತ್ರಿವರ್ಣಧ್ವಜ ಹೊದಿಸಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಕೊನೆಯ ಬಾರಿ ತಮ್ಮ ನೆಚ್ಚಿನ ನಾಯಕನನ್ನು ಕಣ್ತುಂಬಿಕೊಳ್ಳುವ ಸಲುವಾಗಿ ಬೆಳಗಿನ ಜಾವದಿಂದಲೇ ಅಪಾರ ಜನಸಾಗರ ಹರಿದುಬಂದಿತ್ತು. ಮಧ್ಯಾಹ್ನದವರೆಗೂ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಿದ ನಂತರ ಧ್ರುವನಾರಾಯಣ್ ಅವರ ತೋಟದಲ್ಲಿ ತಮ್ಮ ತಂದೆ ತಾಯಿ ಸಮಾಧಿ ಪಕ್ಕದಲ್ಲೇ ಅವರ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. ಮೃತರ ಗೌರವಾರ್ಥ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿದರು. ರಾಷ್ಟ್ರಗೀತೆ ನುಡಿಸಿ ಒಂದು ನಿಮಿಷ ಮೌನಾಚರಣೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ಬಳಿಕ ಧ್ರುವನಾರಾಯಣ್ ಅವರ ತಂದೆ ತಾಯಿ ಸಮಾಧಿ ಪಕ್ಕದಲ್ಲೇ ಹಿಂದೂ ಸಂಪ್ರದಾಯದಂತೆ ಮಣ್ಣು ಮಾಡಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಇದನ್ನೂ ಓದಿ: ಉದ್ಘಾಟನೆ ದಿನವೇ ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತ

    ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯಾಧ್ಯಕ್ಷ ಶಾಮನೂರು ಶಿವಶಂಕರಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ, ಈಶ್ವರ ಖಂಡ್ರೆ, ಮಾಜಿ ಸಚಿವರಾದ ಪರಮೇಶ್ವರ್, ದಿನೇಶ್ ಗುಂಡೂರಾವ್ ಸೇರಿದಂತೆ ಅಸಂಖ್ಯಾತ ಗಣ್ಯರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಅಗಲಿದ ನಾಯಕನಿಗೆ ಅಶ್ರುತರ್ಪಣ ಸಲ್ಲಿಸಿದರು. ಇದನ್ನೂ ಓದಿ: JDS ಕಾರ್ಯಕರ್ತರಿಗೆ ಭರ್ಜರಿ ಬಾಡೂಟ -ನಾನು ರಾಮನಗರದಲ್ಲೇ ಮಣ್ಣಾಗೋದು ಎಂದ HDK

    ಇದೇ ವೇಳೆ ಧ್ರುವನಾರಾಯಣ್ ಪುತ್ರ ದರ್ಶನ್ ಅವರಿಗೆ ನಂಜನಗೂಡು (Nanjangudu) ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡಬೇಕೆಂದು ಅಭಿಮಾನಿಗಳು ರಾಜ್ಯ ಕಾಂಗ್ರೆಸ್ (Congress) ನಾಯಕರ ಮುಂದೆ ಒತ್ತಾಯ ಮಾಡಿದರು.

    ಆಶಾಕಿರಣವಾಗಿ ರಾಜಕೀಯ ಕ್ಷೇತ್ರದಲ್ಲಿ ಮಿಂಚಿ ಮರೆಯಾದ ಧ್ರುವನಾರಾಯಣ್‌ಗೆ ಸಹಸ್ರಾರು ಜನ ಅಶ್ರುತರ್ಪಣಗೈದು ಬೀಳ್ಕೊಟ್ಟರು. ಇದರೊಂದಿಗೆ ರಾಜಕೀಯ ಕ್ಷೇತ್ರದಲ್ಲಿ ಧ್ರುವತಾರೆಯಾಗಿ, ದೀನದಲಿತರ, ನೊಂದವರ ದನಿಯಾಗಿದ್ದ ಧ್ರುವನಾರಾಯಣ್ ಅವರ ಯುಗಾಂತ್ಯವಾದದ್ದು ತುಂಬಲಾರದ ನಷ್ಟವೇ ಸರಿ. ಇದನ್ನೂ ಓದಿ: ಮೋದಿಗೆ ಬೆಲ್ಲದ ಉಡುಗೊರೆ ನೀಡಿ ಮುಖದಲ್ಲಿ ಮಂದಹಾಸ ತರಿಸಿದ ಸಂಸದೆ ಸುಮಲತಾ

  • ಒತ್ತಡದ ರಾಜಕಾರಣಕ್ಕೆ ಧ್ರುವನಾರಾಯಣ್ ಬಲಿಯಾಗಿದ್ದಾರೆ: ಎನ್.ಮಹೇಶ್

    ಒತ್ತಡದ ರಾಜಕಾರಣಕ್ಕೆ ಧ್ರುವನಾರಾಯಣ್ ಬಲಿಯಾಗಿದ್ದಾರೆ: ಎನ್.ಮಹೇಶ್

    ಮೈಸೂರು: ಒತ್ತಡದ ರಾಜಕಾರಣಕ್ಕೆ ಮಾಜಿ ಸಂಸದ ಆರ್.ಧ್ರುವನಾರಾಯಣ್ (R.Dhruvanarayan) ಬಲಿಯಾಗಿದ್ದಾರೆ ಎಂದು ಕೊಳ್ಳೇಗಾಲ (Kollegala) ಶಾಸಕ ಎನ್.ಮಹೇಶ್ (N.Mahesh) ಬೇಸರ ವ್ಯಕ್ತಪಡಿಸಿದರು.

    ಕೆಪಿಸಿಸಿ (KPCC) ರಾಜ್ಯಾಧ್ಯಕ್ಷ ಧ್ರುವನಾರಾಯಣ್ ಅವರ ಅಂತಿಮ ದರ್ಶನ ಪಡೆದು ಬಳಿಕ ಮಾತನಾಡಿದ ಎನ್.ಮಹೇಶ್, ದಲಿತ ಸಮುದಾಯಕ್ಕೆ ಒತ್ತಡ ತಡೆಯುವ ಶಕ್ತಿ ಇಲ್ಲ. ಎರಡು ಬಾರಿ ಎಂಪಿ (MP) ಆಗಿದ್ದವರು. ಶಾಸಕರಾಗಲು ಇಷ್ಟೊಂದು ಒತ್ತಡ ತಗೋಬೇಕಿತ್ತಾ? ಅವರು ಕೇಳಿದ ಕಡೆ ಟಿಕೆಟ್ ಕೊಡಬೇಕಿತ್ತು ಎಂದು ಕಾಂಗ್ರೆಸ್‌ಗೆ ಪರೋಕ್ಷವಾಗಿ ಟಾಂಗ್ (Tong) ಕೊಟ್ಟರು. ಇದನ್ನೂ ಓದಿ: ಅಭಿವೃದ್ಧಿ ಅಂದ್ರೆ ಬೊಜ್ಜು ಕಡಿಮೆ ಮಾಡಿಕೊಳ್ಳಲು ಭಾರತ್ ಜೋಡೋ ಹೆಸರಲ್ಲಿ ವಾಕಿಂಗ್ ಮಾಡಿದಂತಲ್ಲ: ತೇಜಸ್ವಿ

    ಅವರ ಪಕ್ಷದವರು ಆ ಸ್ಥಾನವನ್ನು ಅವರಿಗೆ ಬಿಟ್ಟುಕೊಡಬೇಕಿತ್ತು. ದಲಿತ ಸಮುದಾಯಕ್ಕೆ ಒತ್ತಡ ತಡೆದುಕೊಳ್ಳುವ ಶಕ್ತಿ ಇರಲ್ಲ. ಒಂದು ಎಂಎಲ್‌ಎ (MLA) ಸ್ಥಾನಕ್ಕೆ ಧ್ರುವನಾರಾಯಣ್ ಇಷ್ಟು ಒತ್ತಡ ತಗೊಂಡ್ರಾ ಎಂದು ಎನ್.ಮಹೇಶ್ ಕಾಂಗ್ರೆಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಧ್ರುವನಾರಾಯಣ್ ನೆನೆದು ಕಣ್ಣೀರಿಟ್ಟ ಪ್ರತಾಪ್ ಸಿಂಹ

    ಇದೇ ವೇಳೆ ಮಾಜಿ ಸಚಿವೆ ಗೀತಾ ಮಹದೇವ ಪ್ರಸಾದ್ (Geetha Mahadeva Prasad) ಸೇರಿದಂತೆ ಅನೇಕರು ಆರ್.ಧ್ರುವನಾರಾಯಣ್ ಅವರ ಅಂತಿಮ ದರ್ಶನ ಪಡೆದರು.

    ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಅವರು ಶನಿವಾರ ಹೃದಯಾಘಾತದಿಂದ (Heart Attack) ನಿಧನರಾದರು. ಹೃದಯಾಘಾತವಾದಾಗ ಅವರನ್ನು ಮೈಸೂರಿನ (Mysuru) ಡಿಆರ್‌ಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟರು. ಇದನ್ನೂ ಓದಿ: ಮಹಿಳೆಯರ ಮನ ಗೆಲ್ಲಲು ಹೊರಟ ಬಿಜೆಪಿ – ಕಮಲ್ ಮಿತ್ರ ಹೆಸರಿನಲ್ಲಿ ಹೊಸ ಅಭಿಯಾನ

  • ಧ್ರುವನಾರಾಯಣ್ ನೆನೆದು ಕಣ್ಣೀರಿಟ್ಟ ಪ್ರತಾಪ್ ಸಿಂಹ

    ಧ್ರುವನಾರಾಯಣ್ ನೆನೆದು ಕಣ್ಣೀರಿಟ್ಟ ಪ್ರತಾಪ್ ಸಿಂಹ

    ಮೈಸೂರು: ಸಂಸದ ಪ್ರತಾಪ್ ಸಿಂಹ (Pratap Simha) ಸೇರಿದಂತೆ ಹಲವು ಗಣ್ಯರು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ (R Dhruvanarayana) ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.

    ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಧ್ರುವನಾರಾಯಣ್ ಅವರನ್ನ ನೆನೆದು ಭಾವುಕರಾದರು. ಬಿಕ್ಕಳಿಸಿ ಬಿಕ್ಕಳಿಸಿ ಕಣ್ಣೀರಿಟ್ಟರು. ಇದನ್ನೂ ಓದಿ: ಮಹಿಳೆಯರ ಮನ ಗೆಲ್ಲಲು ಹೊರಟ ಬಿಜೆಪಿ – ಕಮಲ್ ಮಿತ್ರ ಹೆಸರಿನಲ್ಲಿ ಹೊಸ ಅಭಿಯಾನ

    `ಧ್ರುವನಾರಾಯಣ್ ಸಾಹೇಬ್ರ ನಿಧನ ಸುದ್ದಿ ಕೇಳಿ ಮನಸ್ಸಿಗೆ ಆಘಾತವಾಯಿತು. ಪಕ್ಷ, ರಾಜಕಾರಣ ಬೇರೆ ಇರಬಹುದು. ಆದರೆ ಅವರ ವ್ಯಕ್ತಿತ್ವ ಎಲ್ಲರ ಮನಸ್ಸನ್ನು ಗೆಲ್ಲುವಂತಹದ್ದು. ನಾನು ಮೊದಲ ಬಾರಿ ಸಂಸದನಾಗಿ ಆಯ್ಕೆಯಾದಾಗ ಅನುಭವವಿರಲಿಲ್ಲ. ಹೇಗೆ ಸಭೆ ಮಾಡಬೇಕು? ದಿಶಾ (DISHA) ಮೀಟಿಂಗ್, ಫೈಲ್ ಫಾಲೋ ಅಪ್ ಹೇಗೆ ಮಾಡಬೇಕು? ಯೋಜನೆಗಳನ್ನ ಯಾವ ರೀತಿ ತರಬೇಕೆಂದು ನನಗೆ ಮಾರ್ಗದರ್ಶನ ನೀಡಿದ್ದರು ಎಂದು ನೆನಪಿಸಿಕೊಂಡರು. ಇದನ್ನೂ ಓದಿ: Infosys ಅಧ್ಯಕ್ಷ ಸ್ಥಾನಕ್ಕೆ ಮೋಹಿತ್ ಜೋಶಿ ರಾಜೀನಾಮೆ

    dhruva narayan dk shivakumar

    ಇತ್ತೀಚೆಗೆ ಸಿಕ್ಕಾಗ ಪ್ರತಾಪ್ ಒಳ್ಳೆಯ ಕೆಲಸ ಮಾಡ್ತಿದ್ದೀಯಾ ಎಂದು ಬೆನ್ನು ತಟ್ಟಿದ್ದರು. ಚಾಮರಾಜನಗರದಂತಹ ಹಿಂದುಳಿದ ಜಿಲ್ಲೆಯ ಅಭಿವೃದ್ಧಿಗೆ ಧ್ರುವನಾರಾಯಣ್ ಅವರ ಕೊಡುಗೆ ಅಪಾರವಾಗಿದೆ. ಗುಂಡ್ಲುಪೇಟೆ-ಕೇರಳಕ್ಕೆ ಹೋಗುವ ರಸ್ತೆ ಧ್ರುವನಾರಾಯಣ್ ಅವರ ಕೊಡುಗೆ. ಅವರು ಸದಾ ಜನರ ಬಗ್ಗೆಯೇ ಯೋಚಿಸುತ್ತಿದ್ದರು. ಈ ದುರಂತ ಅಂತ್ಯ ತುಂಬಲಾರದ ನಷ್ಟ. ನಾವು ಒಳ್ಳೆಯ ವ್ಯಕ್ತಿಯನ್ನ ಕಳೆದುಕೊಂಡಿದ್ದೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಆ ಭಗವಂತ ನೀಡಲಿ ಎಂದು ಸಂತಾಪ ಸೂಚಿಸಿದರು.

  • ನೈತಿಕತೆ ಇದ್ರೆ ಸಿಎಂ ರಾಜೀನಾಮೆ ಕೊಡಬೇಕು – ಆರ್.ಧ್ರುವನಾರಾಯಣ್

    ನೈತಿಕತೆ ಇದ್ರೆ ಸಿಎಂ ರಾಜೀನಾಮೆ ಕೊಡಬೇಕು – ಆರ್.ಧ್ರುವನಾರಾಯಣ್

    ಮೈಸೂರು: ಬಿಜೆಪಿ ಶಾಸಕರ ಮನೆಯಲ್ಲಿ 8 ಕೋಟಿ ರೂ. ಹಣ ಸಿಕ್ಕಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಅವರಿಗೆ ನೈತಿಕತೆ ಇದ್ದರೆ ರಾಜೀನಾಮೆ ಕೊಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ (R. Dhruvanarayan) ಒತ್ತಾಯಿಸಿದರು.

    ಲೋಕಾಯುಕ್ತ ಮುಚ್ಚಿದ ಕಾಂಗ್ರೆಸ್‌ಗೆ (Congress) ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ ಎಂಬ ಬಿಜೆಪಿ (BJP) ನಾಯಕರ ಹೇಳಿಕೆ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಶಾಸಕನ ಮನೆಯಲ್ಲಿ 8 ಕೋಟಿ ರೂ. ಹಣ ಸಿಕ್ಕಿದೆ. ಇದಕ್ಕಿಂತ ಹೆಚ್ಚಿನ ಪುರಾವೆ ಬೇಕಾಗಿಲ್ಲ. ನೈತಿಕತೆ ಏನಾದರೂ ಇದ್ದರೆ ಕೂಡಲೇ ಸಿಎಂ ರಾಜೀನಾಮೆ ಕೊಡಬೇಕು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಅಸ್ಪತ್ರೆಯಿಂದ ಡಿಸ್ಚಾರ್ಜ್

    ಮುಖ್ಯಮಂತ್ರಿಗಳಿಗೆ ಮಾಹಿತಿ ಕೊರತೆಯಿದೆ. ಅಥವಾ ಅವರು ಸುಳ್ಳು ಹೇಳುತ್ತಿದ್ದಾರೆ. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಲೋಕಾಯುಕ್ತದ ಅಧಿಕಾರ ಮೊಟಕುಗೊಳಿಸಲಿಲ್ಲ ಎಂದು ತಿಳಿಸಿದರು.

    ಬಿಜೆಪಿ ಶಾಸಕನ ರಕ್ಷಣೆಗೆ ಸಿಎಂ ಮುಂದಾಗಿದ್ದಾರೆ. ರಾಜ್ಯದಲ್ಲಿ ಇಂಟಲಿಜೆನ್ಸ್ ಇದೆ. ಆದರೂ ಸಿಎಂ ಈ ಬಗ್ಗೆ ಮಾಹಿತಿ ಇಲ್ಲ ಎನ್ನುತ್ತಿದ್ದಾರೆ ಎಂದು ಕಿಡಿ ಕಾರಿದರು. ಇದನ್ನೂ ಓದಿ: ಹೆಬ್ಬಾಳ್ಕರ್, ಡಿಕೆಶಿ ಎಲ್ಲರೂ ಒಟ್ಟಾಗಿಯೇ ಪಕ್ಷದ ಕೆಲಸ ಮಾಡ್ತಿದ್ವಿ: ರಮೇಶ್ ಜಾರಕಿಹೊಳಿ

  • ಗೃಹ ಸಚಿವರಿಗೆ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕೆ ಆಗಲ್ಲ: ಆರ್.ಧ್ರುವನಾರಾಯಣ್

    ಗೃಹ ಸಚಿವರಿಗೆ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕೆ ಆಗಲ್ಲ: ಆರ್.ಧ್ರುವನಾರಾಯಣ್

    ಮಡಿಕೇರಿ: ರಾಜ್ಯದಲ್ಲಿ ಗೃಹಸಚಿವ ಆರಗ ಜ್ಞಾನೇಂದ್ರ ಅವರಿಂದಲೇ ಕೋಮುದ್ವೇಷ ಹೆಚ್ಚುತ್ತಿದೆ. ಅವರು ಪ್ರತಿ ವಿಷಯಕ್ಕೂ ಕೋಮು ಬಣ್ಣ ಬಳಿಯುತ್ತಿದ್ದಾರೆ. ಅವರಿಗೆ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕೆ ಆಗಲ್ಲ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಆರ್.ಧ್ರುವನಾರಾಯಣ್ ವಾಗ್ದಾಳಿ ನಡೆಸಿದರು.

    ಮಡಿಕೇರಿಯಲ್ಲಿ ಕೆ.ಎಸ್.ಈಶ್ವರಪ್ಪ ವಿರುದ್ಧ ಪ್ರತಿಭಟನೆಯಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರಗ ಅವರು ಈ ಹಿಂದೆ ಬೆಂಗಳೂರಿನಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಉರ್ದು ಬರಲಿಲ್ಲ ಎಂದು ಚಂದ್ರುನನ್ನು ಚುಚ್ಚಿ ಕೊಂದಿದ್ದಾರೆಂದು ಹೇಳಿದ್ದರು. ಆ ಮೂಲಕ ಕೋಮುದ್ವೇಷ ಹರಡಲು ಮುಂದಾಗಿದ್ದರು. ಆ ತಕ್ಷಣವೇ ಅವರು ರಾಜೀನಾಮೆ ಕೊಡಬೇಕಿತ್ತು ಎಂದು ಆಕ್ರೋಶ ಹೊರಹಾಕಿದರು. ಆರಗ ಅವರು ಅರ್ಧಂಬರ್ಧ ಜ್ಞಾನೇಂದ್ರ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಇಬ್ಬರು, ಮೂವರು ಸಚಿವರನ್ನು ಬಿಟ್ಟು ಎಲ್ರೂ 40% ಕಮಿಷನ್ ಪಡೆಯುತ್ತಿದ್ದಾರೆ: ಎಂ.ಬಿ ಪಾಟೀಲ್

    ಹುಬ್ಬಳ್ಳಿಯಲ್ಲಿ ಗಲಭೆ ನಡೆಯುವುದಕ್ಕೆ ಹೊರಗಿನವರು ಕಾರಣ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಆರಗ ಅವರಿಗೆ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕೆ ಆಗಲ್ಲ. ಅವರ ಬುದ್ಧಿಶಕ್ತಿ ಸತ್ತು ಹೋಗಿದೆಯಾ? ಈ ಘಟನೆ ನಡೆಯಬೇಕಾದರೆ ಅವರ ಬುದ್ಧಿಶಕ್ತಿ ಏನು ಮಾಡುತ್ತಿತ್ತು ಎಂದು ಪ್ರಶ್ನಿಸಿದರು.

    ಆರಗ ಅವರಿಗೆ ಅಧಿಕಾರ ಮಾಡುವುದಕ್ಕೆ ಅರ್ಹತೆಯಿಲ್ಲ. ಅಲ್ಲಿ ಗಲಾಟೆಯಾಗುವ ಸಂದರ್ಭದಲ್ಲಿ ಪೊಲೀಸರಿಗೆ ಮಾಹಿತಿ ಇರಲ್ಲಿಲ್ವಾ? ಯಾವುದೇ ಧರ್ಮದವರು ತಪ್ಪು ಮಾಡಿದ್ರು, ಅವರ ಮೇಲೆ ಕ್ರಮ ಜರುಗಿಸಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಹೆಣ್ಣುಮಕ್ಕಳು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು: ಡಾ.ನಾರಾಯಣ ಗೌಡ

  • ಹೆಚ್‍ಡಿಕೆ ಉದ್ದೇಶ ಒಳ್ಳೆಯದಾಗಿಲ್ಲ, ಜನಪರ ಉದ್ದೇಶ ಅವರಿಗಿಲ್ಲ: ಧ್ರುವನಾರಾಯಣ್

    ಹೆಚ್‍ಡಿಕೆ ಉದ್ದೇಶ ಒಳ್ಳೆಯದಾಗಿಲ್ಲ, ಜನಪರ ಉದ್ದೇಶ ಅವರಿಗಿಲ್ಲ: ಧ್ರುವನಾರಾಯಣ್

    ಮೈಸೂರು: ಸಿಎಂ ಕುಮಾರಸ್ವಾಮಿ ಉದ್ದೇಶ ಒಳ್ಳೆಯದಾಗಿಲ್ಲ. ಅವರಿಗೆ ಜನಪರ ಉದ್ದೇಶವಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಕಿಡಿಕಾರಿದರು.

    ಮೇಕೆದಾಟು ಪಾದಯಾತ್ರೆ ವಿಚಾರವಾಗಿ ಹೆಚ್‍ಡಿಕೆ ಕಾಂಗ್ರೆಸ್ ಮಕ್ಮಲ್ ಟೋಪಿ ಹಾಕುತ್ತಿದೆ ಎಂದು ಟೀಕಿಸಿದ್ದರು. ಇದಕ್ಕೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಧ್ರುವನಾರಾಯಣ್ ಅವರು, ಯಾರು ಯಾರಿಗೆ ಮಕ್ಮಲ್ ಟೋಪಿ ಹಾಕಿದ್ದಾರೆ? ಇದು ಕುಮಾರಸ್ವಾಮಿ ಅವರಿಗೆ ಗೊತ್ತಿದೆ. 20-20 ವೇಳೆ 2018ರಲ್ಲಿ ಕುಮಾರಸ್ವಾಮಿ ಅವರು ಮಕ್ಮಲ್ ಟೋಪಿ ಹಾಕಿದ್ದರು ಎಂದು ತಿರುಗೇಟು ಕೊಟ್ಟರು. ಇದನ್ನೂ ಓದಿ: ಸೇವಾ ಭಾರತಿ ಟ್ರಸ್ಟ್​ನಿಂದ ಕಿಮ್ಸ್​​ಗೆ ಆಂಬುಲೆನ್ಸ್ ಹಸ್ತಾಂತರ

    ಜೆಡಿಎಸ್ ಹತಾಶೆಯ ಮನೋಭಾವನೆಯಿಂದ ವರ್ತಿಸುತ್ತಿದೆ. ಜೆಡಿಎಸ್ ನಾಯಕರು ಕಾಂಗ್ರೆಸ್ ಕಡೆ ಬರುತ್ತಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಅವರನ್ನು ಹತಾಶರನ್ನಾಗಿಸಿದೆ. ಸೋಲು ನಿರಾಶೆಯಿಂದ ಕುಮಾರಸ್ವಾಮಿ ಅವರು ಈ ರೀತಿ ಮಾತನಾಡುತ್ತಿದ್ದಾರೆ. ಅವರ ಉದ್ದೇಶ ಒಳ್ಳೆಯದಾಗಿಲ್ಲ. ಜನಪರ ಉದ್ದೇಶ ಅವರಿಗಿಲ್ಲ. ಕೋಮುವಾದಿ ಪಕ್ಷವನ್ನು ದೂರ ಇಡಲು ನಾವು ಅವರಿಗೆ ಅವಕಾಶ ಕೊಟ್ಟಿದ್ದೇವೆ. ಕಾಂಗ್ರೆಸ್ ಪಕ್ಷ ಯಾವತ್ತು ಅನ್ಯಾಯ ಮಾಡಿಲ್ಲ. ಸಮ್ಮಿಶ್ರ ಸರ್ಕಾರದ ನಂತರವೂ ಪ್ರಧಾನಿ ದೇವೇಗೌಡರಿಗೆ ಬೆಂಬಲ ನೀಡಿದ್ದೇವೆ. ಆದರೂ ಜೆಡಿಎಸ್ ಅವಕಾಶವಾದಿ ರಾಜಕಾರಣ ಮಾಡುತ್ತಾರೆ ಎಂದು ವಿರೋಧ ವ್ಯಕ್ತಪಡಿಸಿದರು.

    ಸಂಸದ ಪ್ರತಾಪ್ ಸಿಂಹ ಹೇಳಿಕೆಗೂ ತಿರುಗೇಟು ನೀಡಿದ ಅವರು, ಹನುಮನ್ ಪಾದಯಾತ್ರೆ, ರಾಮನ ಪಾದಯಾತ್ರೆಯಲ್ಲಿ ಅವರು ಬ್ಯುಸಿ ಇದ್ದಾರೆ. ಮತಧರ್ಮದ ಹೆಸರಿನಲ್ಲಿ ಪಾದಯಾತ್ರೆ ಮಾಡುತ್ತಾರೆ. ಈ ಮೂಲಕ ಅವರು ಜನರಿಗೆ ಮಕ್ಮಲ್ ಟೋಪಿ ಹಾಕುತ್ತಾರೆ. ಇದು ಜನರಿಗೆ ಗೊತ್ತಾಗಿದೆ ಎಂದು ವಾಗ್ದಾಳಿ ಮಾಡಿದರು. ಇದನ್ನೂ ಓದಿ:  ಪ್ರವಾಹ ಪರಿಹಾರ ತಕ್ಷಣ ಬಿಡುಗಡೆಗೆ ಸೂಚನೆ: ಕಾರಜೋಳ

    ನಿಯಂತ್ರಣದಲ್ಲಿರುವ ಹಿಂದೂ ದೇವಾಲಯಗಳನ್ನು ಶೀಘ್ರವೇ ಕಾನೂನು ಮುಕ್ತ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರದ ನಡೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಜನರನ್ನು ಬಕ್ರ ಮಾಡಲು ಮುಂದಾಗಿದೆ. ಬಿಜೆಪಿ ಯಾವಾಗಲೂ ಹಿಡನ್ ಅಜೆಂಡ್ ಹೊಂದಿದೆ. ಆರ್‌ಎಸ್‍ಎಸ್ ಯಾವ ರೀತಿ ಹೇಳುತ್ತೆ, ಆ ರೀತಿ ಮಾಡುತ್ತೆ. ಇದು ಹೊಸದೇನಲ್ಲ. ಮುಜರಾಯಿ ಇಲಾಖೆ ಚೆನ್ನಾಗಿ ಕೆಲಸ ಮಾಡುತ್ತಿದೆ. ದೇವಸ್ಥಾನದ ನಿರ್ವಹಣೆ ಚೆನ್ನಾಗಿದೆ ಎಂದರು.

  • ದೇಶದಲ್ಲಿ ಕರ್ನಾಟಕದ ಸರ್ಕಾರ ಅತ್ಯಂತ ಭ್ರಷ್ಟ: ಧ್ರುವನಾರಾಯಣ್

    ದೇಶದಲ್ಲಿ ಕರ್ನಾಟಕದ ಸರ್ಕಾರ ಅತ್ಯಂತ ಭ್ರಷ್ಟ: ಧ್ರುವನಾರಾಯಣ್

    ಶಿವಮೊಗ್ಗ: ಇಡೀ ದೇಶದಲ್ಲಿಯೇ ರಾಜ್ಯ ಬಿಜೆಪಿ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಆರೋಪಿಸಿದ್ದಾರೆ.

    ನಗರದಲ್ಲಿ ಈ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಭ್ರಷ್ಟಾಚಾರ ಆರೋಪವನ್ನು ಕಾಂಗ್ರೆಸ್ ಮಾಡುತ್ತಿಲ್ಲ. ಬದಲಿಗೆ ಬಿಜೆಪಿ ಪಕ್ಷದ ಹಿರಿಯ ನಾಯಕರೇ ಮಾಡುತ್ತಿದ್ದಾರೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ವಿಶ್ವನಾಥ್ ಅವರು ಪ್ರತಿನಿತ್ಯ ಭ್ರಷ್ಟಾಚಾರ ಆರೋಪ ಮಾಡುತ್ತಿದ್ದಾರೆ. ಆದರೆ ಭ್ರಷ್ಟಾಚಾರ ಆರೋಪ ಮಾಡಿದರೂ ಹೈಕಮಾಂಡ್ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಹೈಕಮಾಂಡ್ ಬೆಂಬಲ ಇಲ್ಲದಿದ್ದರೆ ಅವರು ಈ ರೀತಿ ಮಾತನಾಡುತ್ತಿರಲಿಲ್ಲ ಎಂದರು.

    ಸಿದ್ದರಾಮಯ್ಯ ಅವರ ಅಧಿಕಾರ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ ಒಳ್ಳೆಯ ಆಡಳಿತ ಕೊಟ್ಟಿದ್ದೆ. ಯಾವುದೇ ಭ್ರಷ್ಟಾಚಾರ ಆರೋಪ ನಮ್ಮ ಮೇಲೆ ಇಲ್ಲ. ಹೀಗಾಗಿಯೇ ಮುಂದಿನ ಜಿ.ಪಂ. ಹಾಗೂ ತಾ.ಪಂ. ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗಳಿಸುವ ವಿಶ್ವಾಸ ಇದೆ ಎಂದರು.

    ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಸ್ಥಾನದ ವಿಷಯ ಚರ್ಚೆ ಆಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸದ್ಯಕ್ಕೆ ಈ ವಿಷಯ ಅಪ್ರಸ್ತುತ. ಚುನಾವಣೆಗೆ ಇನ್ನು ಒಂದೂವರೆ ವರ್ಷ ಬಾಕಿ ಇದೆ. ಹೀಗಾಗಿ ಈ ವಿಷಯದ ಬಗ್ಗೆ ಯಾರೂ ಚರ್ಚೆ ಮಾಡಬಾರದು. ಜೊತೆಗೆ ಈ ವಿಷಯದ ಬಗ್ಗೆ ಚರ್ಚೆ ಮಾಡಲು ಇದು ಸಮಯವಲ್ಲ ಎಂಬ ಸ್ಪಷ್ಟ ಸೂಚನೆಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜಿವಾಲ ನೀಡಿದ್ದಾರೆ ಎಂದು ಆರ್.ಧ್ರುವನಾರಾಯಣ್ ತಿಳಿಸಿದರು.