Tag: ಆರ್ ಜೆ

  • ಆರ್ ಜೆ ಕಪಾಳಕ್ಕೆ ಬಾರಿಸಿದ ನಟ ಅರ್ಜುನ್ ಕಪೂರ್

    ಆರ್ ಜೆ ಕಪಾಳಕ್ಕೆ ಬಾರಿಸಿದ ನಟ ಅರ್ಜುನ್ ಕಪೂರ್

    -ಆರ್ ಜೆ ಪ್ರಶ್ನೆಗೆ ನಿಗಿ ನಿಗಿ ಕೆಂಡವಾದ ನಟ

    ಮುಂಬೈ: ಬಾಲಿವುಡ್ ನಟ ಅರ್ಜುನ್ ಕಪೂರ್ ಆರ್ ಜೆ ಕಪಾಳಕ್ಕೆ ಹೊಡೆದಿರುವ ಹಳೆಯ ವಿಡಿಯೋ ವೈರಲ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.

    ಆರ್ ಜೆ ಕೇಳಿದ ಪ್ರಶ್ನೆಗೆ ಕೋಪಗೊಂಡ ಅರ್ಜುನ್ ಕಪೂರ್ ಕಪಾಳಕ್ಕೆ ಬಾರಿಸುತ್ತಾರೆ. ಏನಿದು ಪ್ರಶ್ನೆ, ಕ್ಯಾಮೆರಾ ಬಂದ್ ಮಾಡಿ ಎಂದು ಕೂಗ್ತಾರೆ. ಹೊರ ಹೋಗುವಾಗ ಕ್ಯಾಮೆರಾ ಸಹ ಬೀಳಿಸಿದ್ದಾರೆ. ಮಾರುಕಟ್ಟೆಯಲ್ಲಿ ನಿಮ್ಮ ಕ್ಯಾರೆಕ್ಟರ್ ಮಾರಾಟ ಆಗ್ತಿಲ್ಲವಾ? ಅದಕ್ಕೆ ಹುಡುಗಿಯರ ಕ್ಯಾರೆಕ್ಟರ್ ಮಾಡ್ತಿದ್ದೀರಾ ಎಂದು ಆರ್ ಜೆ ಪ್ರಶ್ನೆ ಮಾಡಿದ್ದಾರೆ. ಕ್ಯಾಮೆರಾಗಳ ಮುಂದೆ ನಿಂತಿದ್ದರೂ ಅರ್ಜುನ್ ಆರ್‍ಜೆ ಮೇಲೆ ಹಲ್ಲೆ ನಡೆಸಿದ್ದಾರೆ.

    ಪ್ರಶ್ನೆ ಸರಿ ಇಲ್ಲದಿದ್ರೆ ಸಂದರ್ಶನದಿಂದ ಹೊರ ಬರಬಹುದಿತ್ತು. ಹೀಗೆ ಹಲ್ಲೆ ನಡೆಸೋದು ಎಷ್ಟು ಸರಿ ಎಂದು ಕೆಲ ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಮತ್ತೊಂದು ಕಡೆ ಅರ್ಜುನ್ ಕೆಲ ಅಭಿಮಾನಿಗಳು, ನಟನ ವರ್ತನೆಯನ್ನು ಸಮರ್ಥಿಸಿಕೊಂಡಿದ್ದಾರೆ. ಮತ್ತೆ ಕೆಲವರು ಇದು ಸ್ಕ್ರಿಪ್ಟೆಡ್ ಡ್ರಾಮಾ ಅಂತ ಬರೆದು ಇಲ್ಲಿಯೂ ಸಹ ಅರ್ಜುನ್ ನಟನೆ ಸರಿ ಮಾಡಿಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಇನ್‍ಬಾಲಿವುಡ್ ಪೇಜ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡಲಾಗಿದ್ದು, ಎರಡು ಗಂಟೆಯಲ್ಲಿ 10 ಸಾವಿರಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ.

    https://www.instagram.com/p/CEBWu47BoOu/

  • ವಿಶ್ವ ಮಹಿಳಾ ದಿನಾಚರಣೆ- ಆರ್.ಜೆ ಆದ ದೇಶದ ಮೊದಲ ತೃತೀಯ ಲಿಂಗಿ

    ವಿಶ್ವ ಮಹಿಳಾ ದಿನಾಚರಣೆ- ಆರ್.ಜೆ ಆದ ದೇಶದ ಮೊದಲ ತೃತೀಯ ಲಿಂಗಿ

    ಬೆಂಗಳೂರು: ಇಂದು ವಿಶ್ವ ಮಹಿಳಾ ದಿನಾಚರಣೆ. ಅಕ್ಕ, ತಂಗಿ, ತಾಯಿ ಹಾಗೂ ಮಡದಿ ಹೀಗೆ ಎಲ್ಲಾ ರೋಲ್ ಗಳನ್ನು ಪ್ಲೇ ಮಾಡುವ, ಮಲ್ಟಿ ಟಾಸ್ಕರ್ ಮಹಿಳೆ. ಎಲ್ಲಾ ಕ್ಷೇತ್ರದಲ್ಲಿಯೂ ತನ್ನದೆ ಆದ ಛಾಪು ಮೂಡಿಸಿ, ಹೆಣ್ಮಕ್ಕಳೇ ಸ್ಟ್ರಾಂಗ್ ಗುರು ಎಂದು ನಮ್ಮ ನಾರಿಯರು ಪ್ರೂವ್ ಮಾಡಿದ್ದಾರೆ.

    ಸ್ತ್ರೀ ಎಂಬ ಎರಡಕ್ಷರದಲ್ಲಿ ಅದೆನೋ ಅದ್ಭುತ ಶಕ್ತಿಯಿದೆ. ನಮ್ಮೆಲ್ಲರನ್ನು ಹೆತ್ತು, ಹೊತ್ತು ಸಾಕುವ ಕರುಣಾಮಯಿ, ಮಮತಾಮಯಿ ಹೆಣ್ಣು. ನಾರಿಯರ ಬಗ್ಗೆ ಎಷ್ಟು ಬಣ್ಣಿಸಿದ್ರೂ ಪದಗಳೇ ಸಾಲದು. ಮಹಿಳೆ ಎಲ್ಲಾ ಕ್ಷೇತ್ರದಲ್ಲಿಯೂ ತನ್ನ ಛಾಪು ಮೂಡಿಸಿದ್ದು, ಈ ಮೂಲಕ ಆಡು ಮುಟ್ಟದ ಸೊಪ್ಪಿಲ್ಲ, ಮಹಿಳೆ ಮಾಡದ ಸಾಧನೆಯಿಲ್ಲ ಎಂಬ ಹೊಸ ಗಾದೆ ಬರೆದಿದ್ದಾಳೆ.

    ಸಮಾಜದ ಕೊಂಕು ಮಾತುಗಳಿಗೆ ಎದೆಗುಂದದೆ ತೃತೀಯ ಲಿಂಗಿ ಪ್ರಿಯಾಂಕ ರೇಡಿಯೋ ಜಾಕಿಯಾಗಿದ್ದಾರೆ. ಇವರ ಧ್ವನಿಯನ್ನು ರೇಡಿಯೋ ಆಕ್ಟೀವ್ ಸಿಆರ್ 90.4ನಲ್ಲಿ ಪ್ರತಿನಿತ್ಯ ಕೇಳಬಹುದಾಗಿದೆ. ಭಾರತದ ಮೊಟ್ಟಮೊದಲ ತೃತೀಯ ಲಿಂಗ ಆರ್.ಜೆ ಎಂಬ ಖ್ಯಾತಿಗೆ ಪ್ರಿಯಾಂಕ ಪಾತ್ರಳಾಗಿದ್ದಾರೆ. ಇದರ ಜೊತೆಗೆ ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸುತ್ತಿದ್ದಾರೆ.

    ರಾಜ್ಯದ ಏಕೈಕ ಮಹಿಳಾ ಡ್ರೈವರ್ ಎಂಬ ಖ್ಯಾತಿಗೆ ಪ್ರೇಮ ನಡಪಟ್ಟಿ ಪಾತ್ರಳಾಗಿದ್ದಾರೆ. ನಗರದ ಬಿಎಂಟಿಸಿಯಲ್ಲಿ ಸುಮಾರು 10 ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದು, ಪುರುಷರ ನಡುವೆ ತಮ್ಮದೆ ಆದ ಛಾಪು ಮೂಡಿಸಿ, ಅದೆಷ್ಟೋ ಮಹಿಳೆಯರಿಗೆ ಸ್ಪೂರ್ತಿಯಾಗಿದ್ದಾರೆ. ರಾಜಧಾನಿಯ ಎಲ್ಲೆಡೆಯೂ ಇವರ ಅಭಿಮಾನಿಗಳಿದ್ದಾರೆ. ಒಟ್ಟಿನಲ್ಲಿ ಇಂತಹ ಅದೆಷ್ಟೋ ಮಹಿಳೆಯರು ನಮ್ಮ ಮಧ್ಯೆ ಎಲೆ ಮರೆಯ ಕಾಯಿಯಂತೆ ಸೇವೆ ಸಲ್ಲಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಾರಕಾಸ್ತ್ರಗಳಿಂದ ಹಲ್ಲೆಗೈದು ರೆಡ್ ಎಫ್‍ಎಂನ ಫೇಮಸ್ ಆರ್ ಜೆಯ  ಬರ್ಬರ ಹತ್ಯೆ

    ಮಾರಕಾಸ್ತ್ರಗಳಿಂದ ಹಲ್ಲೆಗೈದು ರೆಡ್ ಎಫ್‍ಎಂನ ಫೇಮಸ್ ಆರ್ ಜೆಯ ಬರ್ಬರ ಹತ್ಯೆ

    ತಿರುವನಂತಪುರಂ: ಪ್ರಸಿದ್ಧ ರೇಡಿಯೋ ಜಾಕಿಯೊಬ್ಬರನ್ನು ದುಷ್ಕರ್ಮಿಗಳು ಭೀಕರವಾಗಿ ಕೊಲೆಗೈದ ಆಘಾತಕಾರಿ ಘಟನೆಯೊಂದು ಕೇರಳದಲ್ಲಿ ನಡೆದಿದೆ.

    ಈ ಘಟನೆ ಮಂಗಳವಾರ ನಸುಕಿನ ಜಾವ 2 ಗಂಟೆ ಸುಮಾರಿಗೆ ನಡೆದಿದೆ. ಮೃತ ದುರ್ದೈವಿಯನ್ನು 36 ವರ್ಷದ ರಾಜೇಶ್ ಅಲಿಯಾಸ್ ರಸಿಕನ್ ರಾಜೇಶ್ ಎಂಬುದಾಗಿ ಗುರುತಿಸಲಾಗಿದೆ. ಇವರು ಕೇವಲ ರೇಡಿಯೋ ಜಾಕಿಯಾಗಿರದೇ ಮಿಮಿಕ್ರಿ ಅರ್ಟಿಸ್ಟ್, ಜಾನಪದ ಹಾಡುಗಾರನೂ ಕೂಡ ಆಗಿದ್ದರು.

    ಏನಿದು ಘಟನೆ?: ಪಲ್ಲಕಿಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಡವೂರ್ ಎಂಬಲ್ಲಿ ರಾಜೇಶ್ ಮೆಟರೋ ಸ್ಟುಡಿಯೋ ಅಂತ ಸೌಂಡ್ ರೆಕಾರ್ಡಿಂಗ್ ಸ್ಟುಡಿಯೋವೊಂದನ್ನು ಹೊಂದಿದ್ದರು. ಸೋಮವಾರ ರಾತ್ರಿ ಸ್ಟೇಜ್ ಪ್ರೋಗ್ರಾಂ ಒಂದನ್ನು ಮುಗಿಸಿ, ಉಪಕರಣಗಳೊಂದಿಗೆ ತನ್ನ ಗೆಳೆಯ ಕುಟ್ಟನ್ ಜೊತೆ ರಾಜೇಶ್ ಸ್ಟುಡಿಯೋಗೆ ವಾಪಸ್ಸಾಗುತ್ತಿದ್ದರು. ಈ ವೇಳೆ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಏಕಾಏಕಿ ಇವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಘಟನೆಯನ್ನು ಅರಿತ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲದೇ ಘಟನೆಗೆ ಸಂಬಂಧಿಸಿದಂತೆ ಯಾರು ಗದ್ದಲ ಮಾಡದಂತೆ ಪೊಲೀಸರು ಸ್ಥಳೀಯರಿಗೆ ಸೂಚಿಸಿದ್ದಾರೆ.

    ಪರಿಪ್ಪಲ್ಲಿ ಆಸ್ಪತ್ರೆಯಲ್ಲಿ ದಾಖಲಾದ ರಾಜೇಶ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಗೆಳೆಯ ಕುಟ್ಟನ್ ಅವರಿಗೆ ತಿರುವನಂತಪುರಂ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಆದ್ರೆ ಈ ಘಟನೆಗೆ ಕಾರಣವೇನೆಂದು ತಿಳಿದುಬಂದಿಲ್ಲ ಎಂಬುದಾಗಿ ವರದಿಯಾಗಿದೆ.

    ರಾಜೇಶ್ ಅವರು ದೋಹಾದಲ್ಲಿ ವಾಯ್ಸ್ ಆಫ್ ಕೇರಳ ರೆಡ್ ಎಫ್‍ಎಂ ನಲ್ಲಿ ಸೇರುವ ಮುನ್ನವೇ ರೆಡ್ ಎಫ್‍ಎಂ ನಲ್ಲಿ ಹಲವು ವರ್ಷಗಳ ಕಾಲ ಆರ್ ಜೆ ಆಗಿ ಕಾರ್ಯನಿರ್ವಹಿಸಿದ್ದರು. ವಿದೇಶದಿಂದ ಇತ್ತೀಚೆಗಷ್ಟೇ ಬಂದಿದ್ದ ಅವರು ಮಿಮಿಕ್ರಿ ತಂಡವೊಂದರಲ್ಲಿ ಸೇರಿಕೊಂಡಿದ್ದರು. ಇದೀಗ ರಾಜೇಶ್ ಪತ್ನಿ ಹಾಗೂ ಮಗನನ್ನು ಅಗಲಿದ್ದಾರೆ.