Tag: ಆರ್ ಎಸ್ ಎಸ್

  • ಮೊದಲ ಬಾರಿಗೆ ಪ್ರಧಾನಿ ಆಗುವ ಆಸೆಯನ್ನು ಹೊರ ಹಾಕಿದ ರಾಹುಲ್ ಗಾಂಧಿ

    ಮೊದಲ ಬಾರಿಗೆ ಪ್ರಧಾನಿ ಆಗುವ ಆಸೆಯನ್ನು ಹೊರ ಹಾಕಿದ ರಾಹುಲ್ ಗಾಂಧಿ

    ಬೆಂಗಳೂರು: ಮೊದಲ ಬಾರಿಗೆ ಪ್ರಧಾನಿಯಾಗುವ ಆಸೆಯನ್ನ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೊರ ಹಾಕಿದ್ದಾರೆ. ಸಂವೃದ್ಧ ಭಾರತ ಪ್ರತಿಷ್ಠಾನದಿಂದ ಖಾಸಗಿ ಹೊಟೇಲ್ ನಲ್ಲಿ ನಡೆದ ಸಂವಾದದಲ್ಲಿ ರಾಹುಲ್ ಪ್ರಧಾನಿಯಾಗೋ ಬಯಕೆ ಬಿಚ್ಚಿಟ್ಟರು.

    2019 ರಲ್ಲಿ ನೀವು ಪ್ರಧಾನಿ ಆಗ್ತೀರಾ ಅಂತ ಗಣ್ಯರೊಬ್ಬರ ಪ್ರಶ್ನೆಗೆ ಉತ್ತರಿಸಿ ರಾಹುಲ್ ಗಾಂಧಿ, ವಿಪಕ್ಷಗಳೆಲ್ಲ ಮೋದಿ ವಿರುದ್ಧ ಒಂದಾಗಿವೆ. 2019 ರಲ್ಲಿ ಮೋದಿ ಅವರು ಪ್ರಧಾನಿ ಆಗೊಲ್ಲ ಎಂದು ನಗರದ ಖಾಸಗಿ ಹೊಟೇಲ್ ನಲ್ಲಿ ನಡೆದ ಸಂವಾದದಲ್ಲಿ ಹೇಳಿದ್ದಾರೆ.

    ಮೋದಿಗೆ ಪ್ರಬಲ ಸ್ಪರ್ಧೆ ನೀಡೋದು ಕಾಂಗ್ರೆಸ್ ಮಾತ್ರ. 2019 ಲೋಕಸಭಾ ಚುನಾವಣೆಯಲ್ಲಿ ವಿಪಕ್ಷಗಳು ಒಂದಾಗಲಿದ್ದು, ಸಂಖ್ಯಾ ಆಧಾರದಲ್ಲಿ ಅತಿ ಹೆಚ್ಚು ಸ್ಥಾನ ಪಡೆದ ಪಕ್ಷಕ್ಕೆ ಪ್ರಧಾನಿ ಸ್ಥಾನ ಸಿಗುತ್ತದೆ. ಸಂಖ್ಯಾಬಲದ ಮೇಲೆ ನಾನು ಪ್ರಧಾನಿ ಆಗಬಹುದು. ಬಿಜೆಪಿ ಹಾಗೂ ಆರ್‍ಎಸ್‍ಎಸ್ ಮುಕ್ತ ರಾಷ್ಟ್ರವನ್ನಾಗಿ ಮಾಡುತ್ತೇವೆ ಅಂತ ಹೇಳಿದರು.

    ಯುಪಿಯಲ್ಲಿ ಈ ಬಾರಿ ಬಿಜೆಪಿ 70 ಸ್ಥಾನ ಕಳೆದುಕೊಳ್ಳಲಿದೆ. ಒಂದು ವೇಳೆ ಮೈತ್ರಿ ಮಾಡಿಕೊಳ್ಳಲು ಹೋದರೆ ಮೋದಿಯನ್ನ ಪ್ರಧಾನಿಯಾಗಲು ನಿತಿನ್ ಗಡ್ಕರಿ, ರಾಜನಾಥ್ ಸಿಂಗ್ ಬಿಡುವುದಿಲ್ಲ ಎಂದು ಹೊಸ ಬಾಂಬ್ ಸಿಡಿಸಿದರು.

    ಸಂವಾದದ ಬಳಿಕ ಮಾಧ್ಯಮಗಳಿಗೆ ಮಾತನಾಡಿದ ರಾಹುಲ್, ಮೋದಿ ಅವರಿಗೆ 4 ಪ್ರಶ್ನೆಗಳನ್ನ ಕೇಳಿದರು. ಭ್ರಷ್ಟಾಚಾರ ಆರೋಪ ಹೊತ್ತು ಜೈಲಿಗೆ ಹೋಗಿ ಬಂದವರನ್ನ ಮುಖ್ಯಮಂತ್ರಿ ಅಭ್ಯರ್ಥಿ ಅಂತ ಯಾಕೆ ಘೋಷಣೆ ಮಾಡಿದ್ರಿ? ಜನರ 35 ಸಾವಿರ ಕೋಟಿ ಹಣ ಲೂಟಿ ಮಾಡಿದ ಜನಾರ್ದನ ರೆಡ್ಡಿಯ 8 ಜನ ಸಹೋದರರಿಗೆ ಯಾಕೆ ಸೀಟ್ ನೀಡಿದ್ರಿ? ಮೋದಿ ಅಧಿಕಾರಕ್ಕೆ ಬಂದ್ರೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀನಿ ಅಂತ ಹೇಳಿದ್ರಿ. ಯಾಕೆ ಈವರೆಗೂ ಉದ್ಯೋಗ ಸೃಷ್ಟಿ ಮಾಡಿಲ್ಲ. ರಾಫೆಲ್ ಫೈಟರ್ ಜೆಟ್ ಗಳ ಕಂಟ್ರಾಕ್ಟ್ ಎಚ್‍ಎಎಲ್ ಗೆ ಯಾಕೆ ನೀಡಿಲ್ಲ ಎಂದು ಪ್ರಶ್ನಿಸಿದರು.

    ಕಾಂಗ್ರೆಸ್ ಸರ್ಕಾರ ರೈತರ ಸಾಲ ಮನ್ನಾ ಮಾಡಿದೆ. ಕೇಂದ್ರದಲ್ಲಿ ಮೋದಿ ಸರ್ಕಾರ ಯಾಕೆ ಒಂದೂ ರೂಪಾಯಿ ರೈತರ ಸಾಲ ಮನ್ನಾ ಮಾಡಿಲ್ಲ? ಈ ಬಗ್ಗೆ ನರೇಂದ್ರ ಮೋದಿ ಉತ್ತರ ನೀಡಬೇಕು ಅಂತ ಸವಾಲು ಹಾಕಿದರು.

    ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಿರುದ್ದವೂ ವಾಗ್ದಾಳಿ ನಡೆಸಿದ ಅವರು, ಶಾ ಒಬ್ಬ ಕೊಲೆ ಆರೋಪಿ. ಇದನ್ನ ದೇಶದ ಜನ ಮರೆಯಬಾರದು. ಅವರ ಹಿನ್ನೆಲೆ, ರಾಜಕೀಯ ನೋಡಬೇಕು. ಪ್ರಾಮಾಣಿಕತೆ, ಸಭ್ಯತೆ ಬಗ್ಗೆ ಮಾತನಾಡುತ್ತಾರೆ. ಅವರಿಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಟೀಕಿಸಿದರು.

  • ಪಕ್ಷದ ಹಿರಿಯರಿಗೆ ಗೌರವ ಕೊಡುವುದನ್ನು ಕಲಿಯಲಿ: ಮೋದಿಗೆ ಖರ್ಗೆ ಟಾಂಗ್

    ಪಕ್ಷದ ಹಿರಿಯರಿಗೆ ಗೌರವ ಕೊಡುವುದನ್ನು ಕಲಿಯಲಿ: ಮೋದಿಗೆ ಖರ್ಗೆ ಟಾಂಗ್

    ಕಲಬುರಗಿ: ದೇವೇಗೌಡರು ಹಿರಿಯರು ಅನ್ನುವ ಕಾರಣಕ್ಕೆ ಮೋದಿಯವರು ಗೌರವದಿಂದ ಮಾತನಾಡುತ್ತಿರಬಹುದು. ಆದರೆ ಮೊದಲು ಅವರ ಪಕ್ಷದ ಹಿರಿಯರಿಗೆ ಗೌರವ ಕೊಡುವುದನ್ನು ಕಲಿಯಲಿ ಎಂದು ಲೋಕಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಟಾಂಗ್ ಕೊಟ್ಟಿದ್ದಾರೆ.

    ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಅಡ್ವಾಣಿ, ಜೋಷಿಯವರು ಸಭೆ ಸಮಾರಂಭಗಳಲ್ಲಿ ನಮಸ್ಕಾರ ಹೇಳಿದರೂ ಪ್ರತಿ ನಮಸ್ಕಾರ ಹೇಳುವ ಸೌಜನ್ಯ ಮೋದಿಗೆ ಇಲ್ಲ. ಚುನಾವಣೆಗಾಗಿ ಈ ರೀತಿ ಮಾತನಾಡುವ ಗಿಮಿಕ್ ನಡೆಯುವುದಿಲ್ಲ. ಮೊದಲಿಗೆ ಸಂವಿಧಾನದ ಆಶಯದಂತೆ ಸರ್ಕಾರ ನಡೆಯಲು ಸದಾ ಕಣ್ಣು ಕಿವಿಗಳನ್ನು ತೆರೆದಿಡಬೇಕು ಎಂದು ಹೇಳಿದರು.

    ಕಾರ್ಪೆಟ್ ಬಾಂಬಿಂಗ್ ಮಾಡುತ್ತೀನಿ ಎನ್ನುವ ಮೋದಿ ಹೇಳಿಕೆಗೆ ಪ್ರತಿಕ್ರಿಯಿಸಿ ಮೋದಿಯ ಬಾಂಬ್ ನಿಷ್ಕ್ರಿಯ ಮಾಡುವ ಅಸ್ತ್ರಗಳು ನಮ್ಮಲ್ಲಿವೆ. ನಮ್ಮಲ್ಲಿನ ಪ್ರತ್ಯಸ್ತ್ರಗಳ ಮೂಲಕ ಮೋದಿ ಬಾಂಬ್ ನಿಷ್ಕ್ರಿಯ ಮಾಡುವ ಕಲೆ ನಮಗೂ ಗೊತ್ತಿದೆ. ಕಾಂಗ್ರೆಸ್ ನಾಶ ಮಾಡಲು ಎಲ್ಲಾ ಪಕ್ಷಗಳು ಸೇರಿ ಯತ್ನಿಸುತ್ತಿವೆ. ಆದರೆ ಇದನ್ನ ಜನ ತೀರ್ಮಾನಿಸಬೇಕೇ ಹೊರತು ಮೋದಿ ತೀರ್ಮಾನಿಸುವುದಲ್ಲ. ಕಾಂಗ್ರೆಸ್ ಬೀಜದ ಗುಣ ಹೊಂದಿರುವ ಪಕ್ಷ. ನೀವು ಎಷ್ಟೇ ಮಣ್ಣೊಳಗೆ ಹೂತರೂ ಸಸಿಯಾಗಿ ಮೇಲೆಳುವುದೇ ಅದರ ಗುಣ ಎಂದು ಹೇಳಿದರು.

    ಮೋದಿ ಅಶಕ್ತ ಬಿಜೆಪಿಗೆ ಟಾನಿಕ್ ಕೊಡಲು ಬಂದಿಲ್ಲ. ಕಾಂಗ್ರೆಸ್ ನಾಶ ಮಾಡುವ ಮಾತನಾಡಲು ಬಂದಿದ್ದಾರೆ. ಕರ್ನಾಟಕದ ಜನ ಮೋದಿ, ಬಿಜೆಪಿ, ಆರ್‍ಎಸ್‍ಎಸ್ ಗುಲಾಮರಾಗಲು ಇಷ್ಟಪಡುತ್ತಿಲ್ಲ. ಗುಜರಾತ್ ಜನ ಮೋದಿಗೆ ಯಾವ ರೀತಿ ಪೆಟ್ಟು ಕೊಟ್ಟಿದ್ದಾರೆ ಅಂತ ಇನ್ನೂ ಅರಿವಿಗೆ ಬಂದಂತಿಲ್ಲ. ಹೋದಲೆಲ್ಲಾ ನೆಹರೂ ಕಟುಂಬವನ್ನೂ ಕೀಳಾಗಿ ಟೀಕಿಸುತ್ತಿದ್ದಾರೆ. ದೇಶದ ಅಭಿವೃದ್ಧಿಯ ಮಾತು ಬಿಟ್ಟು ಸಣ್ಣ ಸಣ್ಣ ಮಾತನಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

  • ಅಯ್ಯಯ್ಯೋ ಭಯೋತ್ಪಾದಕ ಮುದುಕ ಭಟ್ಟಾ- `ಟ್ರು ಮೀಡಿಯಾ ನೆಟ್ ವರ್ಕ್’ ಪೇಜ್‍ನಲ್ಲಿ ಪ್ರಭಾಕರ್ ಭಟ್ ಗೆ ಅವಮಾನ

    ಅಯ್ಯಯ್ಯೋ ಭಯೋತ್ಪಾದಕ ಮುದುಕ ಭಟ್ಟಾ- `ಟ್ರು ಮೀಡಿಯಾ ನೆಟ್ ವರ್ಕ್’ ಪೇಜ್‍ನಲ್ಲಿ ಪ್ರಭಾಕರ್ ಭಟ್ ಗೆ ಅವಮಾನ

    ಮಂಗಳೂರು: ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ನಿಂದನಾತ್ಮಕ ಪೋಸ್ಟ್ ಹಾಕುವ ಮೂಲಕ ಮಂಗಳೂರಿನಲ್ಲಿ ಮತ್ತೆ ಶಾಂತಿ ಕದಡಲು ಯತ್ನಿಸಲಾಗಿದೆ.

    `ಟ್ರು ಮೀಡಿಯಾ ನೆಟ್ ವರ್ಕ್ ಫೇಸ್ ಬುಕ್’ ಪೇಜ್ ನಲ್ಲಿ ಪ್ರಭಾಕರ್ ಭಟ್ ಅವರ ಫೋಟೋ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ.

    ಫೋಸ್ಟ್ ನಲ್ಲಿ ಏನಿದೆ?: “ಕಲ್ಲಡ್ಕದಲ್ಲಿ ಮುದುಕ ಭಯೋತ್ಪಾದಕ ಹಿಜಿಡಾ ಭಟ್ಟನಿಂದ ಪ್ಯಾಂಟ್ ಹಾಕಿ ಟ್ರೈನಿಂಗ್”, “ಮಂಗನಿಂದ ಮಾನವ ಸಾಬೀತುಪಡಿಸಿದ ಭಟ್ಟ”, “ಅಯ್ಯಯ್ಯೋ ಭಯೋತ್ಪಾದಕ ಮುದುಕ ಭಟ್ಟಾ” ಎಂದು ಭಟ್ ಫೋಟೋ ಹಾಕಿ ನಿಂದನೆ ಮಾಡಲಾಗಿದೆ. ಇದನ್ನೂ ಓದಿ: ಕಲ್ಲಡ್ಕ ಪ್ರಭಾಕರ್ ಭಟ್‍ಗೆ ಇವತ್ತು ಕೊನೆಯ ದಿನ: ಮಂಗಳೂರು ಮುಸ್ಲಿಮ್ಸ್ ಪೇಜ್

    ಭಟ್ ಅವರ ಯೋಗಾಸನ, ದಂಡ ವ್ಯಾಯಾಮದ ಫೋಟೋ ಜತೆ ನಾಯಿ ಫೋಟೋ ಸೇರಿಸಿ ಅವಮಾನ ಮಾಡಲಾಗಿದೆ. ಒಟ್ಟಿನಲ್ಲಿ ಟ್ರು ಮೀಡಿಯಾ ನೆಟ್‍ವರ್ಕ್ ಪೇಜ್ ಅಡ್ಮಿನ್‍ನಿಂದ ಜಿಲ್ಲೆಯಲ್ಲಿ ಮತ್ತೆ ಶಾಂತಿ ಕದಡಲು ಯತ್ನ ನಡೆಯುತ್ತಿದೆ.

    ಭಾನುವಾರ ಕಲ್ಲಡ್ಕದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಆರ್ ಎಸ್‍ಎಸ್‍ನ ನೂತನ ಸಮವಸ್ತ್ರದೊಂದಿಗೆ ಗಣವೇಷಧಾರಿಯಾಗಿ ಕಾಣುತ್ತಿದ್ದರು.

    ಈ ಹಿಂದೆಯೂ ಆರ್ ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್‍ಗೆ ಇಂದು ಕೊನೆಯ ದಿನ” ಎಂದು ಮಂಗಳೂರು ಮುಸ್ಲಿಮ್ ಹೆಸರಿನಲ್ಲಿರುವ ಫೇಸ್‍ಬುಕ್ ಪೇಜ್ ನಲ್ಲಿ ಸ್ಟೇಟಸ್ ಹಾಕಲಾಗಿತ್ತು. 

     

  • ಕೃಷ್ಣ ಮಠದ ಸಂಪ್ರದಾಯ ಉಲ್ಲಂಘನೆ ಮಾಡಿದ್ರಾ ಪೇಜಾವರ ಶ್ರೀ?

    ಕೃಷ್ಣ ಮಠದ ಸಂಪ್ರದಾಯ ಉಲ್ಲಂಘನೆ ಮಾಡಿದ್ರಾ ಪೇಜಾವರ ಶ್ರೀ?

    ಉಡುಪಿ: ಧರ್ಮಸಂಸತ್ ಪ್ರಮುಖ ಅಂಗವಾದ ಹಿಂದೂ ವೈಭವಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ನಗರದ ರಾಯಲ್ ಗಾರ್ಡನ್ ನಲ್ಲಿ ನಡೆಯುವ ಹಿಂದೂ ವೈಭವ ಪ್ರದರ್ಶನವನ್ನು ಪೇಜಾವರ ಶ್ರೀ ಉದ್ಘಾಟಿಸಿದರು.

    ಈ ವೇಳೆ ಕೃಷ್ಣಮಠದ ವ್ಯಾಪ್ತಿ ಅಂದರೆ ರಥಬೀದಿಯಿಂದ ಹೊರವಲಯದಲ್ಲಿ ನಡೆಯುವ ಧರ್ಮ ಸಂಸತ್ತು ಕಾರ್ಯಕ್ರಮದಲ್ಲಿ ಪೇಜಾವರ ಶ್ರೀ ಭಾಗಿಯಾಗುವುದು ಎಷ್ಟು ಸರಿ ಎಂಬ ಚರ್ಚೆ ಸಣ್ಣಮಟ್ಟದಲ್ಲಿ ಶುರುವಾಗಿದೆ. ರಥಬೀದಿಯಿಂದ ಪರ್ಯಾಯ ಪೀಠದಲ್ಲಿರುವ ಸ್ವಾಮೀಜಿ ಹೊರಗೆ ಹೋಗುವಂತಿಲ್ಲ ಎಂಬುದು ಈವರೆಗೆ ನಂಬಿಕೊಂಡು ಬಂದ ಸಂಪ್ರದಾಯ. ಆದರೆ ಈಗ ಪೇಜಾವರ ಶ್ರೀ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರೇ ಎನ್ನುವ ಪ್ರಶ್ನೆ ಸಾಂಪ್ರದಾಯಿಕರ ವಲಯದಲ್ಲಿ ಮೂಡಿದೆ.

    ದ್ವೈತ ಮತದ ಸ್ಥಾಪಕ ಮದ್ವಾಚಾರ್ಯರರ ಸಹೋದರ ವಿಷ್ಣುತೀರ್ಥರ ಗ್ರಂಥದಲ್ಲಿ ಉಲ್ಲೇಖವಾದ ಪ್ರಕಾರ, ಕಾಲು ಯೋಜನಾ ದೂರ ಹೋದಲ್ಲಿ ಅಪಚಾರವಾಗಲ್ಲ ಎಂದಿದೆ. ಗ್ರಂಥದ ಉಲ್ಲೇಖದ ಅನುಸಾರ ಕಾಲು ಯೋಜನ ದೂರ ಹೋಗಲು ಅವಕಾಶ ಇರುವುದರಿಂದ ಇದು ಮಠದ ಸಂಪ್ರದಾಯ ಉಲ್ಲಂಘನೆ ಆಗುವುದಿಲ್ಲ ಎಂದು ಕೆಲವರು ಹೇಳಿದ್ದಾರೆ.

    ಕಾಲು ಯೋಜನಾ ಅಂದರೆ ಸುಮಾರು ನಾಲ್ಕು ಕಿಲೋಮೀಟರ್ ಗಿಂತ ಸ್ವಲ್ಪ ಜಾಸ್ತಿಯಾಗುತ್ತದೆ. ಹಾಗಾಗಿ ಇಂದು ನಡೆದ ಕಾರ್ಯಕ್ರಮ ಅರ್ಧ ಕಿಲೋಮೀಟರಷ್ಟೇ ಇದೆ. ಪರ್ಯಾಯ ಪೀಠದ ಯತಿ ಬೆಳಗ್ಗೆ ಪೂಜೆ ಮುಗಿಸಿ ರಾತ್ರಿ ಪೂಜೆಗೆ ಹಾಜರಾಗಬೇಕೆಂಬ ಷರತ್ತಿಗೆ ಅನುಸರವಾಗಿ ಈ ನಿಬಂಧನೆ ಹುಟ್ಟಿಕೊಂಡದ್ದೇ ಹೊರತು ವ್ಯಾಪ್ತಿ ಬಿಟ್ಟು ಹೋಗಬಾರದು ಎಂಬುದು ಸಂಪ್ರದಾಯವೇನಲ್ಲ ಎಂದು ಕೆಲ ಧಾರ್ಮಿಕ ವಿದ್ವಾಂಸರು ಹೇಳುತ್ತಾರೆ.

    ಹಿಂದೂ ವೈಭವಕ್ಕೆ ಹೆಚ್ಚು ದಿನ ಬೇಡ:
    ಕಾರ್ಯಕ್ರಮ ನಡೆಯುವ ರಾಯಲ್ ಗಾರ್ಡನ್ ಗೆ ಶ್ರೀಕೃಷ್ಣ ಮಠದಿಂದ ಪೇಜಾವರ ಶ್ರೀ ಅವರು ಗಾಲಿ ಕುರ್ಚಿ ಮತ್ತು ಪಾದಯಾತ್ರೆ ಮೂಲಕ ಆಗಮಿಸಿದರು. ಗೋವು ಮತ್ತು ಕರುವಿಗೆ ಪೂಜೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

    ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರವೀಣ್ ಭಾಯ್ ತೊಗಾಡಿಯಾ ಝೆಡ್ ಪ್ಲಸ್ ಸೆಕ್ಯೂರಿಟಿಯಲ್ಲಿ ಮೈದಾನವನ್ನು ಪ್ರವೇಶ ಮಾಡಿದರು. ಆರ್‍ಎಸ್‍ಎಸ್ ಸಹ ಕಾರ್ಯವಾಹಕ ಭಾಗಯ್ಯ ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.

    ಈ ವೇಳೆ ಮಾತನಾಡಿದ ಪೇಜಾವರ ಶ್ರೀ, ಧರ್ಮ ಸಂಸತ್ತು ಕಾರ್ಯಕ್ರಮದ ಮೂಲಕ ಹಿಂದೂ ಧರ್ಮದ ವೈಭವ ಮತ್ತೆ ದೇಶದಲ್ಲಿ ಮರುಕಳಿಸಬೇಕು. ಧರ್ಮ ಸಂಸತ್ತೇ ಇದಕ್ಕೆ ವೇದಿಕೆ. ಹಿಂದೂ ಧರ್ಮ ವೈಭವಕ್ಕೆ ಹೆಚ್ಚು ಕಾಯುವ ಅಗತ್ಯವಿಲ್ಲ ಎಂದರು.

    ಇದನ್ನೂ ಓದಿ: ಏನಿದು ಧರ್ಮ ಸಂಸದ್? ಈ ಬಾರಿ ಏನು ಚರ್ಚೆ ಆಗುತ್ತೆ? ಕರ್ನಾಟಕದ ಮೇಲೆ ಪರಿಣಾಮ ಬೀರುತ್ತಾ?

    ಭಾಗಯ್ಯ ಮಾತನಾಡಿ, ದೇಶದ ಹಿಂದೂಗಳಿಗೆ ಆತಂಕ ಬೇಡ ಹಿಂದೂ ಧರ್ಮದ ವೈಭವ ಮತ್ತೆ ದೇಶದಲ್ಲಿ ಮರುಕಳಿಸುತ್ತದೆ. ಹಿಂದೂಗಳ ಸಾಧನೆ ವಿಶ್ವಕ್ಕೇ ಶ್ರೇಷ್ಠ. ಅದನ್ನು ಸಂತರು ಪ್ರಚಾರಪಡಿಸುತ್ತಾರೆ. ನಮ್ಮ ಋಷಿ ಮತ್ತು ಸಂತರ ಛಾಪು ವಿಶ್ವದ ಮುಂದೆ ಪ್ರದರ್ಶನವಾಗಲಿದೆ ಎಂದರು.

  • ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರ- ಆರ್‍ಎಸ್‍ಎಸ್ ಪ್ರಮುಖರಿಗೆ ಮೋಹನ್ ಭಾಗವತ್ ಸೂಚನೆ

    ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರ- ಆರ್‍ಎಸ್‍ಎಸ್ ಪ್ರಮುಖರಿಗೆ ಮೋಹನ್ ಭಾಗವತ್ ಸೂಚನೆ

    ಹುಬ್ಬಳ್ಳಿ: ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಇದೀಗ ನೇರವಾಗಿ ಆರ್‍ಎಸ್‍ಎಸ್ ರಂಗಕ್ಕಿಳಿದಿದೆ. ಸ್ವತಂತ್ರ ಧರ್ಮದ ಬೇಡಿಕೆಯಿಂದ ಹಿಂದೆ ಸರಿಯುವಂತೆ ಲಿಂಗಾಯತ ಮಠಾಧೀಶರು ಹಾಗೂ ಮುಖಂಡರ ಮನವೊಲಿಸುವಂತೆ ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸಂಘದ ಪ್ರಮುಖರಿಗೆ ಸೂಚನೆ ನೀಡಿದ್ದಾರೆ.

    ಹುಬ್ಬಳ್ಳಿಯಲ್ಲಿ ಶನಿವಾರ ನಡೆದ ಉತ್ತರ ಮತ್ತು ದಕ್ಷಿಣ ಕರ್ನಾಟಕ ಪ್ರಾಂತ ಬೈಠಕ್‍ನಲ್ಲಿ, ಲಿಂಗಾಯತ ಸ್ವತಂತ್ರ ಧರ್ಮದ ಕುರಿತ ವಿದ್ಯಮಾನಗಳ ಬಗ್ಗೆ ಗಂಭೀರ ಚರ್ಚೆ ನಡೆದಿದೆ.

    ವೀರಶೈವರು ಮತ್ತು ಲಿಂಗಾಯತರ ನಡುವೆ ಸಹಮತ ಮೂಡಿಸಬೇಕು. ಅವರು ಒಗ್ಗಟ್ಟಿನಿಂದ ಇರುವ ಹಾಗೆ ನೋಡಿಕೊಳ್ಳಬೇಕು. ಇದು ರಾಜಕೀಯ ಹಾಗೂ ಧಾರ್ಮಿಕವಾಗಿಯೂ ಪ್ರಮುಖವಾದ ಕೆಲಸ. ಹಿಂದುಳಿದವರ ಕಲ್ಯಾಣ ಕಾರ್ಯಕ್ರಮಗಳಿಗೆ ಸಂಘದ ಕಾರ್ಯಕರ್ತರು ಹೆಚ್ಚಿನ ಒತ್ತು ನೀಡಬೇಕು. ಅನ್ಯಾಯವಾದರೆ ತಕ್ಷಣ ಸ್ಪಂದಿಸಬೇಕು ಎಂದು ಮೋಹನ್ ಭಾಗವತ್ ಕರೆ ನೀಡಿದ್ರು ಎಂದು ತಿಳಿದುಬಂದಿದೆ.