Tag: ಆರ್ ಎಸ್ ಎಸ್

  • ಆರ್.ಎಸ್.ಎಸ್ ಕಾರ್ಯಕ್ರಮಕ್ಕೆ ಹೋಗಲ್ಲ: ನಿರ್ದೇಶಕ ನಾಗತಿಹಳ್ಳಿ ಸ್ಪಷ್ಟನೆ

    ಆರ್.ಎಸ್.ಎಸ್ ಕಾರ್ಯಕ್ರಮಕ್ಕೆ ಹೋಗಲ್ಲ: ನಿರ್ದೇಶಕ ನಾಗತಿಹಳ್ಳಿ ಸ್ಪಷ್ಟನೆ

    ಪ್ರಗತಿಪರ ಗುಂಪಿನಲ್ಲಿ ಗುರುತಿಸಿಕೊಂಡಿರುವ ಸಿನಿಮಾ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ (Nagatihalli Chandrasekhar) ಆರ್.ಆರ್.ಎಸ್ ಸಂಘಟನೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಿರುವುದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಆರ್.ಎಸ್.ಎಸ್ ಸಂಘಟನೆಯನ್ನು ವಿರೋಧಿಸುತ್ತಾ ಬಂದಿರುವ ಬಳಗದಲ್ಲಿದ್ದ ನಾಗತಿಹಳ್ಳಿ ಚಂದ್ರಶೇಖರ್ ಅದು ಹೇಗೆ ಕಾರ್ಯಕ್ರಮವನ್ನು ಒಪ್ಪಿಕೊಂಡರು ಎನ್ನುವುದು ಕೆಲವರ ಪ್ರಶ್ನೆಯಾಗಿತ್ತು.

    ಬೆಂಗಳೂರಿನ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಶಂಕರಪುರ ಭಾಗ ಜುಲೈ 16ರಂದು ‘ಶ್ರೀ ಗುರು ಪೂಜಾ ಉತ್ಸವ’ವನ್ನು ಆಯೋಜನೆ ಮಾಡಿತ್ತು. ಈ ಕಾರ್ಯಕ್ರಮದ (Programme) ಅಧ್ಯಕ್ಷತೆಯನ್ನು ನಾಗತಿಹಳ್ಳಿ ಚಂದ್ರಶೇಖರ್ ವಹಿಸಿಕೊಳ್ಳಲಿದ್ದಾರೆ ಎಂದೂ, ಅಖಿಲ ಭಾರತ ಗ್ರಾಮ ವಿಕಾಸ ಸಂಯೋಜಕ ಶ್ರೀಗುರುರಾಜ್ ಅಂದಿನ ಸಮಾರಂಭದಲ್ಲಿ ಭಾಗಿಯಾಲಿದ್ದಾರೆ ಎಂದು ಆಮಂತ್ರಣ ಪತ್ರಿಕೆಯನ್ನು ಮುದ್ರಿಸಲಾಗಿತ್ತು. ಈ ಆಹ್ವಾನ ಪತ್ರಿಕೆ ವೈರಲ್ ಆಗಿತ್ತು.

    ನಾಗತಿಹಳ್ಳಿ ಚಂದ್ರಶೇಖರ್ ಇತ್ತೀಚೆಗೆ ಬದಲಾಗಿದ್ದಾರೆ ಎಂದು ಕೆಲವರು ಟೀಕೆ ಮಾಡಿದ್ದರೆ, ಇನ್ನೂ ಕೆಲವರು ಅವರು ಬಿಜೆಪಿ ಮತ್ತು ಆರ್.ಎಸ್.ಎಸ್ ಜೊತೆ ಗುರುತಿಸಿಕೊಂಡು ತುಂಬಾ ದಿನವಾಗಿದೆ ಎಂದು ಹಲವರು ಕಾಮೆಂಟ್ ಮಾಡಿದ್ದರು. ನಾಗ್ತಿ ಮೇಷ್ಟ್ರ ಮೇಲೆ ನೆಗೆಟಿವ್ ಕಾಮೆಂಟ್ ಬಂದಿದ್ದೇ ಹೆಚ್ಚಿತ್ತು. ಹಾಗಾಗಿ ನಾಗತಿಹಳ್ಳಿಯವರು ಇದಕ್ಕೆ ಸ್ಪಷ್ಟನೆಯನ್ನು ನೀಡಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ 30 ಸೆಕೆಂಡ್ ಲಿಪ್ ಲಾಕ್: ಕಣ್ಮುಚ್ಚಿಕೊಂಡ ಪೂಜಾ ಭಟ್

    ಸೋಷಿಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ನಾಗತಿಹಳ್ಳಿ ಚಂದ್ರಶೇಖರ್, ‘ಈ ಸಮಾರಂಭದಲ್ಲಿ ನಾನು ಭಾಗವಹಿಸುತ್ತಿಲ್ಲ (Absent). ಅದನ್ನು ನಾನು ಸ್ಪಷ್ಟಪಡಿಸಿಯೂ ಆಮಂತ್ರಣದಲ್ಲಿ ನನ್ನ ಹೆಸರು ಅಚ್ಚಾಗಿದೆ. ಅದು ‘ಆಕಸ್ಮಿಕ’ ಎಂದು ಅವರು ಕ್ಷಮೆ ಯಾಚಿಸಿದ್ದಾರೆ. ಅಲ್ಲಿಗೆ ವಿಷಯ ಮುಕ್ತಾಯಗೊಂಡಿದೆ. ಆ ದಿನಾಂಕದಂದು ನಾನು ದೂರದ ದೇಶದಲ್ಲಿ ಚಿತ್ರೀಕರಣದಲ್ಲಿರುವುದು ನನ್ನನ್ನು ಬಲ್ಲವರಿಗೆಲ್ಲ ತಿಳಿದಿದೆ. ನನ್ನನ್ನು ಅತ್ಯಂತ ಹತ್ತಿರದಿಂದ ಬಲ್ಲ, ನನ್ನನ್ನು ನಂಬುವ, ನನ್ನನ್ನು ಪ್ರೀತಿಸುವ, ನನ್ನನ್ನು ಬೆಳೆಸಿರುವ, ನನ್ನೊಂದಿಗೆ ಹಳ್ಳಿಯ ಕೆಲಸದಲ್ಲಿ ಕೈಜೋಡಿಸಿರುವ ಅಕ್ಕರೆಯ ಎಲ್ಲ  ಮನಸ್ಸುಗಳಿಗೆ ಹೇಳುವ ಒಂದು ಮಾತು, ನಾನು ಏನಾಗಿದ್ದೀನೋ ಅದೇ ಆಗಿ ಇರುತ್ತೇನೆ. ನಾನು ಏನು ಮಾಡುತ್ತಿದ್ದೀನೋ ಅದು ಸರಿ ಇದೆ. ಅದನ್ನೇ ಮುಂದುವರೆಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

     

    ಮುಂದುವರೆದು, ‘ತಪ್ಪು ತಿಳಿಯಲು, ತಪ್ಪು ಹರಡಲು ತುದಿಗಾಲಲ್ಲಿ ನಿಂತವರನ್ನು, ನಿತ್ಯ ಹೊಸ, ಹುಸಿ ರೋಮಾಂಚನ ಬಯಸುವ ಮಹನೀಯರನ್ನು ಮನ್ನಿಸಿ ಮುಂದೆ ಹೋಗೋಣ. ಇಲ್ಲಿ ನಾವೆಲ್ಲ ಮಾಡಲೇಬೇಕಾದ ಜನಪರ ಕೆಲಸಗಳು ಬಹಳಷ್ಟಿವೆ. ಮಾಡೋಣ. ಇನ್ನು ಮಾತು ಸಾಕು’ ಎಂದು ನಾಗತಿಹಳ್ಳಿ ಚಂದ್ರಶೇಖರ್ ಬರೆದುಕೊಂಡಿದ್ದಾರೆ.
    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಾಷ್ಟ್ರಭಕ್ತ ಮುಸ್ಲಿಮರು ಬಿಜೆಪಿಯಲ್ಲೆ ಇದ್ದಾರೆ: ಕೆ.ಎಸ್ ಈಶ್ವರಪ್ಪ

    ರಾಷ್ಟ್ರಭಕ್ತ ಮುಸ್ಲಿಮರು ಬಿಜೆಪಿಯಲ್ಲೆ ಇದ್ದಾರೆ: ಕೆ.ಎಸ್ ಈಶ್ವರಪ್ಪ

    ಬಾಗಲಕೋಟೆ: ಮುಸ್ಲಿಂ, ಕ್ರಿಶ್ಚಿಯನ್ ವೋಟುಗಳ ಮೇಲೆ ಕಣ್ಣಿಟ್ಟು ಆರ್‍ಎಸ್‍ಎಸ್‍ಗೆ ಬೈದ್ರೆ ತಮಗೆ ವೋಟು ಕೊಡುತ್ತಾರೆ ಅನ್ನೋ ಭ್ರಮೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಇವೆ. ಈಗ ದಲಿತರು, ಹಿಂದುಳಿದವರು ಬಿಜೆಪಿ ಜೊತೆ ಬಂದಾಯಿತು. ರಾಷ್ಟ್ರಭಕ್ತ ಮುಸ್ಲಿಮರು ಬಿಜೆಪಿಯಲ್ಲೆ ಇದ್ದಾರೆ. ಉಳಿದ ಮುಸ್ಲಿಮರು ನಮ್ಮ ಜೊತೆ ಬರುತ್ತಾರೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲು ಮುಸ್ಲಿಂ, ಕ್ರಿಶ್ಚಿಯನ್ ರಾಷ್ಟ್ರಗಳು ಪಾಕಿಸ್ತಾನ ಜೊತೆ ಇದ್ದವು. ಈಗ ಮೋದಿ ಪ್ರಧಾನಿಯಾದ ಬಳಿಕ ಇಡೀ ವಿಶ್ವವೇ ಮೋದಿ ಜೊತೆ ಇದೆ. ಇಂದು ಪಾಕಿಸ್ತಾನ ಒಬ್ಬಂಟಿಯಾಗಿದೆ. ಇವರಿಗೇನು ಕಲ್ಪನೆ ಇಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ದುರ್ಗಾ ದೇವಿ ರೀತಿ ಮಮತಾ ಬ್ಯಾನರ್ಜಿ ವಿಗ್ರಹ ಸ್ಥಾಪನೆ

    ಇದೇ ವೇಳೆ ಡಿಕೆಶಿ, ಸಿದ್ದರಾಮಯ್ಯ, ಹೆಚ್‍ಡಿಕೆಯನ್ನು ತರಾಟೆಗೆ ತೆಗೆದುಕೊಂಡ ಸಚಿವರು, RSS ಬಗ್ಗೆ ನೆಹರು, ಇಂದಿರಾಗಾಂಧಿ ಮಾತಾಡಿದಾಗ ಅವರನ್ನೇ ಬಿಟ್ಟಿಲ್ಲ. ಇನ್ನು ಇವರ್ಯಾರ್ರಿ ನಮ್ಮ ಲೆಕ್ಕಕ್ಕೆ. RSS ದೇಶದ ಯುವಕರಿಗೆ ರಾಷ್ಟ್ರಭಕ್ತಿ ನಿರ್ಮಾಣ ಮಾಡುವ ದೊಡ್ಡ ಶಕ್ತಿ. RSS ಇಲ್ಲಾ ಅಂದಿದ್ರೆ ಈ ದೇಶ ಪಾಕಿಸ್ತಾನ ಆಗಿ ಹೋಗಿರ್ತಿತ್ತು ಎಂದು ಕಿಡಿಕಾರಿದರು. ಇದನ್ನೂ ಓದಿ: ಸುಬ್ರಮಣಿಯನ್ ಸ್ವಾಮಿಗೆ ಕೊಕ್ – ಟ್ವಿಟ್ಟರ್‌ನಿಂದ ಬಿಜೆಪಿ ಹೆಸರು ರಿಮೂವ್

    ಐಎಎಸ್, ಐಪಿಎಸ್ ಮೂಲಕ ಆಡಳಿತ ನಡೆಸುತ್ತೆ. ಇದು ಮೆದುಳಿಗೆ ಪೊರೆ ಬಂದಿರುವವರು ಹೇಳುವ ಮಾತು. ಎಲ್ಲ ಕ್ಷೇತ್ರಗಳಲ್ಲೂ RSS ಇದೆ. ರಾಷ್ಟ್ರಪತಿ, ವಿಶ್ವದ ನಾಯಕ ನರೇಂದ್ರ ಮೋದಿ, ನಾವೆಲ್ರೂ RSS. RSS ಏನೂ ಮಾಡಲ್ಲ. ಅಲ್ಲಿ ತರಬೇತಿ ತಗೊಂಡವರು ಸ್ವಯಂ ಸೇವಕರು ಏನು ಬೇಕಾದ್ರು ಮಾಡ್ತಾರೆ. RSS ಕುಛ್ ಭಿ ನಹೀ ಕರೇಗಾ, ಲೇಕಿನ್ ಸ್ವಯಂ ಸೇವಕ್ ಸಬ್ ಕುಛ್ ಕರೇಗಾ. ಯಾರೆಲ್ಲ ಇಲ್ಲಿ ಸಂಸ್ಕಾರ ತಗೊಳ್ತಾರೋ ಅವರು, ಅವರವರ ಕ್ಷೇತ್ರದಲ್ಲಿ ರಾಷ್ಟ್ರಭಕ್ತಿ ಬೆಳೆಸಿ ದೇಶ ಕಟ್ಟುವ ಕೆಲಸ ಮಾಡ್ತಾರೆ ಎಂದರು.

    RSS ಪರ ಹಾಗೂ ವಿರುದ್ಧ ಬಿಜೆಪಿ ನಾಯಕರ ಹೇಳಿಕೆಗಳಿಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ

  • RSS ಪ್ರಮುಖರ ಮನೆ ಕದ ತಟ್ಟಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ

    RSS ಪ್ರಮುಖರ ಮನೆ ಕದ ತಟ್ಟಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ

    ಚಿಕ್ಕೋಡಿ(ಬೆಳಗಾವಿ): ಶುಕ್ರವಾರ ಸುತ್ತೂರು ಮಠಕ್ಕೆ ಭೇಟಿ ನೀಡಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಇಂದು ಆರ್ ಎಸ್ ಎಸ್ ಪ್ರಮುಖರ ಮನೆ ಕದ ತಟ್ಟಿದ್ದಾರೆ.

    ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿರುವ ಆರ್‍ಎಸ್‍ಎಸ್ ಪ್ರಮುಖ ಅರವಿಂದರಾವ್ ದೇಶಪಾಂಡೆ ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಪ್ರಸಕ್ತ ವಿದ್ಯಮಾನಗಳ ಬಗ್ಗೆ ಅರವಿಂದರಾವ್ ಜೊತೆ ಮಾತುಕತೆ ಮಾತನಾಡುವುದರ ಜೊತೆಗೆ ಬಿಜೆಪಿ ಪಕ್ಷ ಅಧಿಕಾರ ಬರಲು ನನ್ನ ಪಾತ್ರ ತುಂಬಾ ಇದೆ. ಹೀಗಾಗಿ ಕೆಲ ಬಿಜೆಪಿ ನಾಯಕರು ಅವರ ವಿರುದ್ಧ ನಡೆಸುತ್ತಿರುವ ಷಡ್ಯಂತ್ರದ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

    ಶತಾಯ ಗತಾಯ ಸಚಿವ ಸ್ಥಾನ ಪಡೆದುಕೊಳ್ಳುವ ನಿಟ್ಟಿನಲ್ಲಿ ನಿತ್ಯ ಕಾರ್ಯ ತಂತ್ರ ರೂಪಿಸುತ್ತಿರುವ ರಮೇಶ್ ಜಾರಕಿಹೊಳಿ ಇಂದು ಆರ್‍ಎಸ್‍ಎಸ್ ಪ್ರಮುಖರ ಮನೆಗೆ ತೆರಳಿ ಭೇಟಿ ನೀಡಿರುವುದು ಕೂತೂಹಲಕ್ಕೆ ಕಾರಣವಾಗಿದೆ. ಅರವಿಂದ ದೇಶಪಾಂಡೆ ಅವರ ಮನೆಯಲ್ಲಿ ಸುಮಾರು ಅರ್ಧಗಂಟೆಗಳ ಕಾಲ ಚರ್ಚೆ ನಡೆಸಿದ ಶಾಸಕ ರಮೇಶ್ ಜಾರಕಿಹೊಳಿ ಹೊರ ಬಂದ ಬಳಿಕ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೇ ನೀಡದೆ ನೋ ರಿಯಾಕ್ಷನ್ ಎಂದು ಹೇಳಿ ತೆರಳಿದ್ದಾರೆ. ಇದನ್ನೂ ಓದಿ: ಉಡುಪಿಯ ಗದ್ದೆಯಲ್ಲಿ ಹೂತುಹೋದ ಕೃಷಿ ಸಚಿವರ ಕಾರು

    ನಿನ್ನೆ ಸುತ್ತೂರು ಶ್ರೀಗಳ ಆಶೀರ್ವಾದ ಪಡೆದು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, ಸರ್ಕಾರ ಬೀಳಿಸಿ ಸರ್ಕಾರ ರಚಿಸುವ ಶಕ್ತಿ ದೇವರು ಕೊಟ್ಟಿದ್ದಾನೆ. ಇಂತಹ ನಾನು ಸಚಿವನಾಗುವುದಕ್ಕೆ ಲಾಭಿ ಮಾಡುತ್ತೇನಾ?, ನನಗೆ ಇನ್ನೂ ಆ ಸ್ಥಿತಿ ಬಂದಿಲ್ಲ. ಸ್ವಾಮೀಜಿ ಅವರ ಬಳಿ ಬಂದು ಸಚಿವ ಸ್ಥಾನಕ್ಕೆ ಒತ್ತಡ ಹಾಕಿಸುವ ಸ್ಥಿತಿಗೆ ನಾನು ಬಂದಿಲ್ಲ. ನಾನು ಸ್ವಾಮೀಜಿ ಬಳಿ ಬಂದಿದ್ದು ಅವರ ಮಾತೃ ಶ್ರೀ ನಿಧನಕ್ಕೆ ಸಂತಾಪ ಸೂಚಿಸಲು ಎಂದಿದ್ದರು.

    ಇಲ್ಲಿ ಯಾವ ರಾಜಕಾರಣವನ್ನು ಚರ್ಚೆ ಮಾಡಿಲ್ಲ. ಇನ್ನೊಬ್ಬರನ್ನ ಸಚಿವನನ್ನಾಗಿ ಮಾಡುವ ಶಕ್ತಿ ಇರುವ ನಾನು, ಸಚಿವನಾಗೋಕೆ ಲಾಬಿ ಮಾಡುತ್ತೇನಾ?. ಇರುವ ಶಾಸಕ ಸ್ಥಾನವನ್ನೇ ಬಿಡುವ ಚಿಂತನೆ ಮಾಡಿದ್ದವನು ನಾನು. ಇಲ್ಲಿ ಸಚಿವ ಸ್ಥಾನದ ಲಾಬಿ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದರು.

  • RSS ಪಥ ಸಂಚಲನಕ್ಕೆ ಡಿಕೆ ಬ್ರದರ್ಸ್ ಕೂಲ್ ಟಾಂಗ್

    RSS ಪಥ ಸಂಚಲನಕ್ಕೆ ಡಿಕೆ ಬ್ರದರ್ಸ್ ಕೂಲ್ ಟಾಂಗ್

    ಬೆಂಗಳೂರು: ರಾಮನಗರದಲ್ಲಿ ಆರ್.ಎಸ್.ಎಸ್ ಕಾರ್ಯಕರ್ತರ ಪಥ ಸಂಚಲನ ಈಗ ರಾಜಕೀಯ ಗುದ್ದಾಟಕ್ಕೆ ಕಾರಣವಾಗಿದೆ. ಆರ್.ಎಸ್.ಎಸ್. ಪಥ ಸಂಚಲನಕ್ಕೆ ಕನಕಪುರದ ಡಿಕೆ ಬ್ರದರ್ಸ್ ಸೈಲೆಂಟ್ ಆಗಿಯೇ ಬಿಜೆಪಿ ಮತ್ತು ಆರ್.ಎಸ್.ಎಸ್. ಗೆ ತಿರುಗೇಟು ಕೊಟ್ಟು ಸವಾಲ್ ಹಾಕಿದ್ದಾರೆ. ಯಾರೇ ಪಥ ಸಂಚಲನ ಮಾಡಲಿ ನಮ್ಮ ಅಭ್ಯಂತರ ಇಲ್ಲ. ಶಾಂತಿ ಕದಡುವ ಕೆಲಸ ಮಾಡಿದ್ರೆ ಹುಷಾರ್ ಅಂತ ಡಿಕೆ ಬ್ರದರ್ಸ್ ಎಚ್ಚರಿಕೆ ಕೊಟ್ಟಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಸಂಸದ ಡಿಕೆ ಸುರೇಶ್ ಆರ್‍ಎಸ್‍ಎಸ್ ನಾಯಕರಿಗೆ ಎಚ್ಚರಿಕೆ ಕೊಟ್ಟು ಸವಾಲ್ ಹಾಕಿದ್ದಾರೆ. ಆರ್.ಎಸ್.ಎಸ್. ನವರು ಪಥ ಸಂಚಲನ ಮಾಡೋದಕ್ಕೆ ನಮ್ಮ ಅಭ್ಯಂತರ ಇಲ್ಲ. ಆದ್ರೆ ಶಾಂತಿಯುವಾಗಿ ಪಥ ಸಂಚಲನೆ ಮಾಡಬೇಕು. ಶಾಂತಿ ಕದಡುವ ಕೆಲಸ ಮಾಡಿದ್ರೆ ನಾವು ಸುಮ್ಮನೆ ಇರೋದಿಲ್ಲ. ಯಾರೇ ಪಥ ಸಂಚಲನ ಮಾಡಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಂತಿ ಭಂಗ ತರೋ ಕೆಲಸ ಮಾಡಬಾರದು. ಪ್ರಚೋದನಕಾರಿಯಾಗಿ ಮಾತಾಡಿ ಮತವಿಭಜನೆ ಮಾಡೋ ಕೆಲಸ ಮಾಡಬಾರದು. ಹಾಗೇನಾದ್ರು ಮಾಡಿದ್ರೆ ನಾವು ಸಕ್ರಿಯವಾಗಿ ಹೋರಾಟ ಮಾಡ್ತೀವಿ ಅಂತ ಎಚ್ಚರಿಕೆ ಕೊಟ್ಟರು.

    ಇನ್ನು ಕಲ್ಲಡ್ಕ ಪ್ರಭಾಕರ್ ಭಟ್ಟರು ಬಿಜೆಪಿ ನೆಲೆಸಲು ಈ ಪಥ ಸಂಚಲನ ಮಾಡ್ತಿದ್ದಾರಾ ಅನ್ನೋ ಪ್ರಶ್ನೆಗೆ ಉತ್ತರಿಸಿದ ಅವರು, ಕಲ್ಲಡ್ಕ ಪ್ರಭಾಕರ್ ಭಟ್ ಯಾರು ಅಂತಾನೇ ನನಗೆ ಗೊತ್ತಿಲ್ಲ. ತಲೆ ಕೆಟ್ಟವರು ಮೊನ್ನೆ ಯಡಿಯೂರಪ್ಪ ಬಗ್ಗೆ ಏನೋ ಮಾತಾಡಿದ್ರು. ಇನ್ನೊಬ್ಬರ ಬಗ್ಗೆ ಇನ್ನೇನೋ ಹೇಳುತ್ತಾರೆ. ಅವರಿಗೆಲ್ಲ ಯಾರು ಉತ್ತರ ಕೊಡ್ತಾರೆ. ಕಾಲವೇ ಎಲ್ಲದ್ದಕ್ಕೂ ಉತ್ತರ ಕೊಡುತ್ತೆ ಅಂತ ಕಿಡಿಕಾರಿದರು.

    ಇನ್ನು ಮಾಜಿ ಸಚಿವ ಡಿಕೆ ಶಿವಕುಮಾರ್ ಮಾತನಾಡಿ, ಆರ್.ಎಸ್.ಎಸ್ ನವರು ಚೆಡ್ಡಿ ಹಾಕಿಕೊಂಡು ಬೇಕಾದ್ರು ಪಥ ಸಂಚಲನ ಮಾಡಲಿ. ಪ್ಯಾಂಟ್ ಹಾಕಿಕೊಂಡು ಬೇಕಾದ್ರು ಮಾಡಲಿ. ಇಲ್ಲವೆ ಉರುಳು ಸೇವೆ ಬೇಕಾದ್ರು ಮಾಡಲಿ. ನಮ್ಮ ಅಭ್ಯಂತರ ಇಲ್ಲ ಅಂತ ಲೇವಡಿ ಮಾಡಿದರು. ನನ್ನ ತಮ್ಮ ಗೆದ್ದಿರೋದು ಪಾಪ ಬಿಜೆಪಿ ಅವ್ರಿಗೆ ಇಷ್ಟ ಇಲ್ಲ. ಹೇಗಾದ್ರು ಮಾಡಿ ಆತನಿಗೆ ತೊಂದರೆ ಕೊಡಬೇಕು ಅಂತ ಬಿಜೆಪಿ ಅವರು ಆರ್.ಎಸ್‍ಎಸ್. ಮೂಲಕ ಹೀಗೆಲ್ಲ ಮಾಡಿಸುತ್ತಿದ್ದಾರೆ. ಧರ್ಮದ ಹೆಸರಲ್ಲಿ ರಾಜಕೀಯ ಮಾಡ್ತಿದ್ದಾರೆ. ಇದಕ್ಕೆಲ್ಲ ನಾವು ಹೆದರಲ್ಲ. ಇದನ್ನ ಎದರಿಸೋ ಶಕ್ತಿ ನಮಗೆ ಇದೆ ಅಂತ ಕಿಡಿಕಾರಿದರು.

  • ಹಿಂದೂ ರಾಷ್ಟ್ರ ಮಾಡುವುದೇ ಪೌರತ್ವ ಕಾಯ್ದೆಯ ಉದ್ದೇಶ: ಜ್ಞಾನ ಪ್ರಕಾಶ ಸ್ವಾಮೀಜಿ

    ಹಿಂದೂ ರಾಷ್ಟ್ರ ಮಾಡುವುದೇ ಪೌರತ್ವ ಕಾಯ್ದೆಯ ಉದ್ದೇಶ: ಜ್ಞಾನ ಪ್ರಕಾಶ ಸ್ವಾಮೀಜಿ

    ಚಾಮರಾಜನಗರ: ಭಾರತವನ್ನು ಸಂಪೂರ್ಣ ಹಿಂದೂ ರಾಷ್ಟ್ರ ಮಾಡುವುದೇ ಸಿಎಎ, ಎನ್.ಪಿ.ಆರ್ ಹಾಗೂ ಎನ್.ಆರ್.ಸಿ ಉದ್ದೇಶವಾಗಿದೆ. ಈ ಹಿನ್ನಲೆಯಲ್ಲಿ ಕೇಂದ್ರ ಸಚಿವ ರಾಜನಾಥ್ ಸಿಂಗ್ ನನಗೆ ಕರೆ ಮಾಡಿದ್ದರು ಎಂದು ಉರಿಲಿಂಗಿಪೆದ್ದಿಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಹೊಸ ಬಾಂಬ್ ಸಿಡಿಸಿದ್ದಾರೆ.

    ಚಾಮರಾಜನಗರದಲ್ಲಿ ಬಹುಜನ ವಾಲೆಂಟಿಯರ್ ಫೋರ್ಸ್ ಆಯೋಜಿಸಿದ್ದ, ಪೌರತ್ವ ಪರೀಕ್ಷೆ ಏನಿದರ ಮರ್ಮ ಎಂಬ ವಿಚಾರ ಸಂಕೀರಣದಲ್ಲಿ ಮಾತನಾಡಿದ ಅವರು, ಕೆಲ ದಿನಗಳ ಹಿಂದೆ ಕೇಂದ್ರ ಸಚಿವ ರಾಜನಾಥ್ ಸಿಂಗ್ ಕರೆ ಮಾಡಿದ್ದರು. ಮುಸ್ಲಿಮರಿಗೆ ಬೇರೆ ಬೇರೆ ದೇಶಗಳಿವೆ, ಕ್ರೈಸ್ತರಿಗೂ ಹಲವಾರು ದೇಶಗಳಿವೆ ಹಿಂದೂಗಳಿಗೂ ಒಂದು ರಾಷ್ಟ್ರ ಬೇಡವೇ ಎಂದು ಕೇಳಿದ್ದರು. ನೀವು ಯಾಕೆ ನಮ್ಮ ವಿರುದ್ಧ ಹೋರಾಟ ಮಾಡುತ್ತಿದ್ದೀರಾ? ನಮ್ಮ ಜೊತೆ ಕೈಜೋಡಿಸಿ ಎಂದು ರಾಜನಾಥ್ ಸಿಂಗ್ ಹೇಳಿದ್ದರು ಎಂದು ಬಹಿರಂಗ ಪಡಿಸಿದರು.

    ಆಗ ಮೊದಲು ಹಿಂದುಗಳು ಅಂದರೆ ಯಾರು ಪಟ್ಟಿ ಮಾಡಿ ಎಂದೆ. ಆರ್.ಎಸ್.ಎಸ್.ನ ಸಾರ್ವಕರ್ ಹಾಗೂ ಗೋರ್ವಕರ್ ಅವರ ಉದ್ದೇಶ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವುದಾಗಿತ್ತು. ಆರ್.ಎಸ್.ಎಸ್.ಗೆ ನೂರು ವರ್ಷ ತುಂಬುವ ಸಂದರ್ಭದಲ್ಲಿ ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಣೆ ಮಾಡಬೇಕು ಎಂದು ಅವರು ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. ಇನ್ನು ಮೂರು ವರ್ಷ ಕಳೆದರೆ ಆರ್.ಎಸ್.ಎಸ್. ಗೆ ನೂರು ವರ್ಷ ತುಂಬಲಿದೆ. ಈ ಹಿನ್ನೆಲೆಯಲ್ಲಿ ಅವರ ಉದ್ದೇಶವನ್ನು ಬಿಜೆಪಿ ಸಾಕಾರಗೊಳಿಸಲು ಹೊರಟಿದೆ ಎಂದು ಜ್ಞಾನ ಪ್ರಕಾಶ ಸ್ವಾಮೀಜಿ ಆರೋಪಿಸಿದರು.

  • ಹೆಚ್‍ಡಿಕೆ ಸರ್ಕಾರ ಬಿಜೆಪಿ ಸರ್ಕಾರಕ್ಕಿಂತ ಸಾವಿರ ಪಾಲು ಉತ್ತಮ: ಎಂ.ಬಿ ಪಾಟೀಲ್

    ಹೆಚ್‍ಡಿಕೆ ಸರ್ಕಾರ ಬಿಜೆಪಿ ಸರ್ಕಾರಕ್ಕಿಂತ ಸಾವಿರ ಪಾಲು ಉತ್ತಮ: ಎಂ.ಬಿ ಪಾಟೀಲ್

    – ಆರ್‍ಎಸ್‍ಎಸ್ ಗರ್ಭ ಗುಡಿಯೊಳಗೆ ಕೆಲವರಿಗಷ್ಟೇ ಪ್ರವೇಶ
    – ನಾನು ಸಿಎಂ ಆಗಿದ್ರೆ ರಾಜೀನಾಮೆ ನೀಡ್ತಿದ್ದೆ

    ವಿಜಯಪುರ: ಮಾಜಿ ಸಿಎಂ ಕುಮಾರಸ್ವಾಮಿ ಸರ್ಕಾರ ಹಾಲಿ ಬಿಜೆಪಿ ಸರ್ಕಾರಕ್ಕಿಂತ ಸಾವಿರ ಪಾಲು ಉತ್ತಮವಿತ್ತು. ಬಿಜೆಪಿ ಸರ್ಕಾರಕ್ಕೆ ಗೊತ್ತು ಗುರಿ ಇಲ್ಲ ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ್ ವ್ಯಂಗ್ಯವಾಡಿದ್ದಾರೆ.

    ಬಿಜೆಪಿಗೆ ಆರ್‍ಎಸ್‍ಎಸ್ ಮೂಲ. ಆದರೆ ಆರ್‍ಎಸ್‍ಎಸ್ ಗರ್ಭ ಗುಡಿಯೊಳಗೆ ಕೆಲವರಿಗಷ್ಟೇ ಪ್ರವೇಶವಿದೆ. ಸಿಎಂ ಯಡಿಯೂರಪ್ಪ ಸೇರಿದಂತೆ ಉಳಿದ ಮುಖಂಡರಿಗೆ ಆರ್‍ಎಸ್‍ಎಸ್ ಹೊಸ್ತಿಲು ಒಳಗಡೆ ಬಿಡುವುದಿಲ್ಲ ಎಂದು ಟಾಂಗ್ ನೀಡಿದರು. ಆರ್‍ಎಸ್‍ಎಸ್ ನಿರ್ಧಿಷ್ಠ ನಾಯಕರನ್ನು ಹೊರತು ಪಡಿಸಿ ಉಳಿದವರನ್ನು ಕೇವಲ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ದೂರಿದರು.

    ಅನರ್ಹ ಶಾಸಕರ ಕುರಿತು ಉಮೇಶ ಕತ್ತಿ ಹೇಳಿಕೆಗೆ ಪ್ರತಿಕ್ರಿಯಿಸಿ, ನೀವು ಯಾವ ಬೀಜ ಬಿತ್ತುತ್ತೀರ ಆ ಫಸಲು ಬರುತ್ತೆ. ಅನರ್ಹರಿಗೂ ಈಗ ತಪ್ಪಿನ ಅರಿವಾಗಿದೆ. ನಮ್ಮ ಜೊತೆ ಅವರು ಸಂಪರ್ಕದಲ್ಲಿ ಇಲ್ಲ ಎಂದರು.

    ಸಿಎಂ ಯಡ್ಡಿಯೂರಪ್ಪ ತಂತಿ ಮೇಲೆ ನಡೆಯುತ್ತಿದ್ದಾರೋ, ಬೆಂಕಿ ಮೇಲೆ ನಡೆಯುತ್ತಿದ್ದಾರೊ ಎಂಬುದನ್ನು ಅವರನ್ನೇ ಕೇಳಿ. ಲಿಂಗಾಯತ ಸ್ವತಂತ್ರ ಧರ್ಮ ಹೋರಾಟ ನಮ್ಮ ಅಸ್ಮಿತೆ. ಲಿಂಗಾಯತ ಧರ್ಮ ಒಡೆಯುವ ಪ್ರಶ್ನೆಯೇ ಇಲ್ಲ. ಇದನ್ನು 12ನೇ ಶತಮಾನದಲ್ಲಿ ಬಸವಣ್ಣ, ಬಸವಾದಿ ಶರಣರು ಹುಟ್ಟು ಹಾಕಿದ್ದಾರೆ ಎಂದರು.

    ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡಲು ಇವರ ಬಳಿ ಹಣವಿಲ್ಲ. ಇವರು ರೂ. 2-3 ಸಾವಿರ ಕೋಟಿ ರೂ. ಪರಿಹಾರ ನೀಡಿ ಕೈ ತೊಳೆದುಕೊಳ್ಳುತ್ತಾರೆ. ಪ್ರವಾಹ ಸಂತ್ರಸ್ತರ ಶಾಪ ಇವರಿಗೆ ತಟ್ಟಲಿದೆ. ಈಶ್ವರಪ್ಪ, ತೇಜಸ್ವಿ ಸೂರ್ಯ ಅವರನ್ನು ಪ್ರವಾಹ ಸಂದರ್ಭದಲ್ಲಿ ನಡುಗಡ್ಡೆಯಲ್ಲಿ ಒಯ್ದು ಬಿಡಬೇಕು ಎಂದು ಹರಿಹಾಯ್ದರು.

    ಪ್ರಧಾನಿ ಬಳಿ ಹೋಗಿ ಪರಿಹಾರ ಕೇಳಲು ಸಿಎಂಗೆ ಧೈರ್ಯವಿಲ್ಲ. ಸಿಎಂ ಸ್ಥಾನದಲ್ಲಿ ನಾನಿದ್ದರೆ ರಾಜೀನಾಮೆ ಬಿಸಾಕುತ್ತಿದ್ದೆ. ಅಲ್ಲದೆ ಉತ್ತರ ಕರ್ನಾಟಕ ಯಡಿಯೂರಪ್ಪ ಅವರಿಗೆ ಬಲ ನೀಡಿದೆ ಅಂತಾರೆ. ಆದರೆ ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ಇವರು ಸ್ಪಂದಿಸುತ್ತಿಲ್ಲ. ತಾತ್ಕಾಲಿಕ ಶೆಡ್ ನಿರ್ಮಿಸಲು ಸಾಧ್ಯವಾಗದ ಇವರು ಶಾಶ್ವತ ಕೆಲಸ ಮಾಡಲು ಹೇಗೆ ಸಾಧ್ಯ? ಅಧಿಕಾರ ಹೋಗುವ ಹೆದರಿಕೆಯಿಂದ ಸಚಿವ ಸಂಪುಟದಲ್ಲಿರುವವರು ಪ್ರವಾಹ ಸಂತ್ರಸ್ತರ ಪರ ಧ್ವನಿ ಎತ್ತುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

    ಇನ್ನು ಜನರ ಸಮಸ್ಯೆಗಳಿಗೆ ಸ್ಪಂದಿಸಲು ಆಗದಿದ್ದರೆ ಸಿಎಂ, ಸಚಿವ ಸ್ಥಾನದಲ್ಲಿದ್ದು ಪ್ರಯೋಜನವೇನು ಎಂದು ಪ್ರಶ್ನಿಸಿದರು. ಮುಂಬರುವ ಉಪಚುನಾವಣೆಯಲ್ಲಿ 15 ರಲ್ಲಿ 12 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ. 3ರಲ್ಲಿ ಜೆಡಿಎಸ್ ಗೆಲ್ಲಲಿದೆ. ಅಥಣಿ ಮತಕ್ಷೇತ್ರದ ಉಸ್ತುವಾರಿ ನನಗಿದೆ. ಅಥಣಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂದು ರಮೇಶ ಜಾರಕಿಹೊಳಿಗೆ ಟಾಂಗ್ ನೀಡಿದರು.

  • ವಿಡಿಯೋ:  ಆರ್‌ಎಸ್‌ಎಸ್‌ನಂತೆ ದಂಡ ಹಿಡಿದು ಕಾಂಗ್ರೆಸ್ಸಿಗರಿಗೆ ಖಾದರ್ ತರಬೇತಿ

    ವಿಡಿಯೋ: ಆರ್‌ಎಸ್‌ಎಸ್‌ನಂತೆ ದಂಡ ಹಿಡಿದು ಕಾಂಗ್ರೆಸ್ಸಿಗರಿಗೆ ಖಾದರ್ ತರಬೇತಿ

    ಮಂಗಳೂರು: ಆರ್‌ಎಸ್‌ಎಸ್‌ ಮಾದರಿಯಲ್ಲೇ ಕಾಂಗ್ರೆಸ್ಸಿನಿಂದ ಪಥಸಂಚಲನ ತರಬೇತಿ ಮಂಗಳೂರಿನಲ್ಲಿ ನಡೆಯುತ್ತಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಭಾರೀ ಚರ್ಚೆಯಾಗುತ್ತಿದೆ.

    ಹೌದು. ಕಾಂಗ್ರೆಸ್ ಕಾರ್ಯಕರ್ತರು ಪಥಸಂಚಲನ ತರಬೇತಿಯನ್ನು ಪಡೆಯುತ್ತಿದ್ದಾರೆ. ಮಾಜಿ ಸಚಿವ ಯು.ಟಿ ಖಾದರ್ ಅವರು ತಮ್ಮ ಕಾರ್ಯಕರ್ತರಿಗೆ ತರಬೇತಿ ನೀಡುತ್ತಿದ್ದಾರೆ. ಈ ಪಥ ಸಂಚಲನ ತರಬೇತಿಯಲ್ಲಿ ಕಾಂಗ್ರೆಸ್ ಜನಪ್ರತಿನಿಧಿಗಳು, ಕಾರ್ಯಕರ್ತರು ಭಾಗಿಯಾಗಿದ್ದಾರೆ.

    ತರಬೇತಿ ಯಾಕೆ?
    ಅಕ್ಟೋಬರ್ 2, ಗಾಂಧಿ ಜಯಂತಿ ಕಾರ್ಯಕ್ರಮಕ್ಕಾಗಿ ಕಾಂಗ್ರೆಸ್ ಪಾಳಯದಲ್ಲಿ ಸಿದ್ಧತೆ ಭರದಿಂದ ನಡೆಯುತ್ತಿದ್ದು, ದಕ್ಷಿಣ ಕನ್ನಡದಲ್ಲಿಯೂ ಕಾಂಗ್ರೆಸ್ ಸೇವಾದಳದಿಂದ ಪಥಸಂಚಲನವಿದೆ. ಈ ಕಾರ್ಯಕ್ರಮದ ಪೂರ್ವ ಸಿದ್ಧತೆ ನಡೆಯುತ್ತಿದ್ದು, ಕೋಣಾಜೆ ಪಿಎ ಕಾಲೇಜು ಮೈದಾನದಲ್ಲಿ ಕಾರ್ಯಕರ್ತರು ತರಬೇತಿ ಮಾಡುತ್ತಿದ್ದಾರೆ. ವಿಶೇಷವೆಂದರೆ ಆರ್‌ಎಸ್‌ಎಸ್‌ ಸ್ವಯಂಸೇವಕರು ಬಳಸುತ್ತಿರುವ ದಂಡದಂತೆ ಕಾಂಗ್ರೆಸ್ ಸೇವಾದಳದ ಸ್ವಯಂಸೇವಕರು ದಂಡವನ್ನು ಹಿಡಿದು ಪಥಸಂಚಲನ ನಡೆಸುತ್ತಿದ್ದಾರೆ.

  • ವಿಹೆಚ್‍ಪಿ, ಭಜರಂಗ ದಳವನ್ನ ಧಾರ್ಮಿಕ ಉಗ್ರಗಾಮಿ ಸಂಘಟನೆಗಳೆಂದ ಅಮೆರಿಕ ಗುಪ್ತಚರ ವಿಭಾಗ

    ವಿಹೆಚ್‍ಪಿ, ಭಜರಂಗ ದಳವನ್ನ ಧಾರ್ಮಿಕ ಉಗ್ರಗಾಮಿ ಸಂಘಟನೆಗಳೆಂದ ಅಮೆರಿಕ ಗುಪ್ತಚರ ವಿಭಾಗ

    ನವದೆಹಲಿ: ಅಮೆರಿಕ ಸರ್ಕಾರದ ಗುಪ್ತಚರ ವಿಭಾಗ ಸಿಐಎ ವಿಶ್ವ ಹಿಂದೂ ಪರಿಷತ್(ವಿಹೆಚ್‍ಪಿ) ಮತ್ತು ಭಜರಂಗ ದಳವನ್ನು ಧಾರ್ಮಿಕ ಉಗ್ರಗಾಮಿ ಸಂಘಟನೆಗಳು ಎಂದು ಹೇಳಿದೆ.

    ಗುಪ್ತಚರ ವಿಭಾಗ ತನ್ನ ಇತ್ತೀಚಿನ ವಲ್ರ್ಡ್ ಫ್ಯಾಕ್ಟ್ ಬುಕ್ ಸಂಚಿಕೆಯಲ್ಲಿ ವಿಹೆಚ್‍ಪಿ ಮತ್ತು ಭಜರಂಗ ದಳವನ್ನು ಧಾರ್ಮಿಕ ಉಗ್ರಗಾಮಿ ಸಂಘಟನೆ ಪಟ್ಟಿಗೆ ಸೇರಿಸಿದೆ. ಆರ್‍ಎಸ್ ಎಸ್ ನನ್ನು ರಾಷ್ಟ್ರೀಯತೆ ಸಂಸ್ಥೆ ಎಂದು, ಹುರಿಯತ್ ಕಾನ್ಪರೆನ್ಸ್ ಅನ್ನು ಪ್ರತ್ಯೇಕತಾವಾದಿ ಗುಂಪೆಂದು, ಜಮಾತ್ ಉಲೇಮಾ-ಇ ಹಿಂದ್ ಅನ್ನು ಧಾರ್ಮಿಕ ಸಂಸ್ಥೆ ಎಂದು ಹೇಳಿದೆ.

    ಈ ಗುಂಪಿನ ಅಡಿಯಲ್ಲಿ ಇರುವವರು ಯಾರು ಜನಪ್ರತಿನಿಧಿಗಳಾಗಿ ಸ್ಪರ್ಧೆ ಮಾಡುವುದಿಲ್ಲ ಆದರೆ ಈ ಸಂಘಟನೆಗಳು ಸಕ್ರೀಯವಾಗಿ ರಾಜಕಾರಣದಲ್ಲಿ ತೊಡಗಿಸಿಕೊಂಡಿವೆ ಎಂದು ಹೇಳಿದೆ.

    ಕೇಂದ್ರ ಗುಪ್ತಚರ ವಿಭಾಗ ತನ್ನ ವಾರ್ಷಿಕ ವಲ್ರ್ಡ್ ಫ್ಯಾಕ್ಟ್ ಬುಕ್ ನಲ್ಲಿ ಅಮೆರಿಕ ಸರ್ಕಾರಕ್ಕೆ ದೇಶಗಳ ಕುರಿತು, ಸಮಸ್ಯೆಗಳ ಬಗ್ಗೆ ಮಾಹಿತಿಯನ್ನು ಕೊಡುತ್ತದೆ. ದೇಶಗಳಿಗೆ ಸಂಬಂಧ ಪಟ್ಟ ಇತಿಹಾಸ, ಜನರು, ಸರ್ಕಾರ, ಆರ್ಥಿಕ ಪರಿಸ್ಥಿತಿ, ಭೂಗೋಳ, ಸಾರಿಗೆ, ಸಂವಹನ ಹಾಗೂ ಹಲವು ವಿಚಾರಗಳ ಬಗ್ಗೆ ಮಾಹಿತಿಯನ್ನು ನೀಡುತ್ತದೆ. 1962 ರಿಂದ ಪ್ರಕಟವಾಗುತ್ತಿರುವ ಈ ಬುಕ್ 1975 ರಲ್ಲಿ ಸಾರ್ವಜನಿಕವಾಗಿ ಸಿಗುವಂತೆ ಮಾಡಿದೆ. ಒಟ್ಟು 267 ದೇಶಗಳ ಮಾಹಿತಿಯನ್ನು ಕೊಟ್ಟಿರುತ್ತದೆ.

    ಸಿಐಎ ಪ್ರಕಟಣೆ ಫೇಕ್ ಸುದ್ದಿಯಾಗಿದ್ದು ಇದರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಬಿಜೆಪಿ ಸಂವಾದ ಸೆಲ್ ನ ಮಾಜಿ ರಾಷ್ಟ್ರೀಯ ಸಂಚಾಲಕ ಖೇಮ್ಚಂದ್ ಶರ್ಮಾ ಎಂದು ಹೇಳಿದ್ದಾರೆ.

  • ಬಿಜೆಪಿಯ ಟೆಂಪಲ್ ರನ್ ಟೀಕೆಗೆ ಖಡಕ್ ಪ್ರತಿಕ್ರಿಯೆ ಕೊಟ್ಟ ರಾಹುಲ್ ಗಾಂಧಿ!

    ಬಿಜೆಪಿಯ ಟೆಂಪಲ್ ರನ್ ಟೀಕೆಗೆ ಖಡಕ್ ಪ್ರತಿಕ್ರಿಯೆ ಕೊಟ್ಟ ರಾಹುಲ್ ಗಾಂಧಿ!

    ಬೆಂಗಳೂರು: ಈ ಚುನಾವಣೆ ನನ್ನ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ನಡುವಿನ ಚುನಾವಣೆಯಲ್ಲ. ರಾಜ್ಯದ ಜನರ ಸ್ಫೂರ್ತಿಯ ಚುನಾವಣೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

    ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಕಡೆಯ ದಿನವಾದ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಮ್ಮ ನಂಬಿಕೆಗಳ ಮೇಲೆ ನಾವು ಜೀವನ ಮಾಡುತ್ತಿದ್ದೇವೆ. ಕಳೆದ 15 ವರ್ಷದಿಂದ ನಾನು ಹಲವು ದೇವಸ್ಥಾನಗಳಿಗೆ ಭೇಟಿ ಕೊಟ್ಟಿದ್ದೇನೆ. ಮಂದಿರ, ಮಸೀದಿ, ಚರ್ಚ್ ಗಳಿಗೆ ಭೇಟಿ ನೀಡಿದ್ದೇನೆ. ನಮಗೆ ಎಲ್ಲ ಸಮುದಾಯಗಳೂ ಮುಖ್ಯ. ಅವರು ಬೇಡ, ಇವರು ಬೇಡ ಅನ್ನುವ ಪಕ್ಷ ನಮ್ಮದಲ್ಲ. ಆದರೆ ಹೀಗೆ ಭೇಟಿ ಕೊಟ್ಟಾಗ ಬಿಜೆಪಿಯವರಿಗೆ ಅದನ್ನ ಸಹಿಸಿಕೊಳ್ಳಲು ಆಗುವುದಿಲ್ಲ. ಚುನಾವಣೆ ಸಂದರ್ಭದಲ್ಲಿ ಮಠ ಮಾನ್ಯಗಳು ನೆನಪಾಗುತ್ತದೆ ಎಂದು ಟೀಕಿಸುತ್ತಾರೆ. ಹಿಂದಿನ ಅನೇಕ ಚುನಾವಣೆಗಳಲ್ಲಿ ಇದೇ ರೀತಿಯ ಟೀಕೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ರಾಜ್ಯದ ಜನರ ಮೇಲೆ ನಂಬಿಕೆಯಿಟ್ಟಿದ್ದೇವೆ. ಯುವಜನತೆಗೆ ಉದ್ಯೋಗ ಸೃಷ್ಠಿ ನಮ್ಮ ಗುರಿ. ಐಟಿ ಸಿಟಿ, ಗಾರ್ಡನ್ ಸಿಟಿ ಹೆಸರು ನಾವು ಉಳಿಸುತ್ತೇವೆ. ಮಹದಾಯಿ ನದಿ ನೀರು ಹಂಚಿಕೆ ಕುರಿತು ಕಾಂಗ್ರೆಸ್ ನಿಲುವೇನು ಎಂಬುದನ್ನು ಶೀಘ್ರದಲ್ಲಿಯೇ ಸ್ಪಷ್ಟಪಡಿಸುತ್ತೇವೆ ಎಂದು ಹೇಳಿದರು.

    ಮಾತನಾಡಿದ ಅವರು ಈ ಚುನಾವಣೆ ನನ್ನ ಭವಿಷ್ಯಕ್ಕಾಗಿ ಅಲ್ಲ. ಮುಂದೆ ಪ್ರಧಾನಿ ಆಗಲು ಸಹಕಾರಿಯೂ ಅಲ್ಲ. ಬೆಂಗಳೂರು ರಾಷ್ಟ್ರದ ಹೆಮ್ಮೆ. ದೇಶಕ್ಕೆ ಕರ್ನಾಟಕದ ಕೊಡುಗೆ ಅಪಾರ. ಈ ಚುನಾವಣೆಯಿಂದ ಕರ್ನಾಟಕ ಇನ್ನೂ ಹೆಚ್ಚಿನ ಅಭಿವೃದ್ಧಿಯ ಕಡೆಗೆ ನಡೆಯಬೇಕಿದೆ ಎಂದು ಹೇಳಿದರು.

    ಕಳೆದ ಹಲವು ದಿನಗಳಿಂದ ರಾಜ್ಯದಲ್ಲಿ ಓಡಾಡಿದ್ದೇನೆ. ನಾವು ಯಾರ ವಿರುದ್ಧವೂ ಟೀಕೆ ಮಾಡಿಲ್ಲ. ಸಂವಿಧಾನದ ಆಶಯಗಳನ್ನಿಟ್ಟುಕೊಂಡು ಚುನಾವಣೆಗೆ ಹೊರಟಿದ್ದೇವೆ. ರಾಜ್ಯದ ಜನರನ್ನ ಗಮನದಲ್ಲಿಟ್ಟುಕೊಂಡು ಪ್ರಣಾಳಿಕೆ ರಚಿಸಿದ್ದೇವೆ. ಜನರ ಆಶಯಗಳಿಗೆ ಅನುಗುಣವಾಗಿ ಪ್ರಣಾಳಿಕೆ ತಯಾರಾಗಿದೆ. ವೀರಪ್ಪ ಮೊಯ್ಲಿ ಉತ್ತಮ ಪ್ರಣಾಳಿಕೆ ರಚಿಸಿದ್ದಾರೆ. ಕರ್ನಾಟಕದ ಜನರ ಧ್ವನಿಯಾಗಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದೇವೆ. ಕೊಟ್ಟ ಭರವಸೆ ಈಡೇರಿಸುವ ಗುರಿ ನಮ್ಮದು. ರಾಜ್ಯದ ಜನ ಚುನಾವಣೆಯಲ್ಲಿ ನಮ್ಮ ಪರ ನಿಲ್ಲಲಿದ್ದಾರೆ, ಆ ಭರವಸೆ ನಮಗಿದೆ ಎಂದು ಆತ್ಮ ವಿಶ್ವಾಸ ವ್ಯಕ್ತಪಡಿಸಿದರು.

    ಕಾಂಗ್ರೆಸ್ ಗೆ ಬಹುಮತ ಬರುತ್ತದೆ. ಅತಂತ್ರ ವಿಧಾನಸಭೆಗೆ ಆಸ್ಪದವೇ ಇಲ್ಲ. ಈ ಚುನಾವಣೆ ಕನ್ನಡದ ಅಸ್ಮಿತೆ ಮೇಲೆ ನಡೆಯುತ್ತಿದೆ. ಕರ್ನಾಟಕದ ಜನ ಕಾಂಗ್ರೆಸ್ಸನ್ನು ಆರಿಸುತ್ತಾರೆ. ಬಸವ ತತ್ವವೇ ನಮ್ಮ ತತ್ವ. ಅದೇ ನಮಗೆ ಸ್ಪೂರ್ತಿ. ಆರ್‍ಎಸ್‍ಎಸ್ ಕರ್ನಾಟಕವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಅವಕಾಶ ಕೊಡಬಾರದು. ಜಾಗ್ರತೆಯಿಂದ ಇರಿ ಎಂದು ಎಚ್ಚರಿಕೆ ನೀಡಿದರು.

    ಭಾಷೆ, ಸಂಸ್ಕ್ರತಿ ಮತ್ತು ಬಸವ ತತ್ವದ ಮೇಲೆ ಸವಾರಿ ಮಾಡಲು ಆರ್‍ಎಸ್‍ಎಸ್ ಹೊರಟಿದೆ. ಆರ್‍ಎಸ್‍ಎಸ್ ಸಿದ್ಧಾಂತ ಮತ್ತು ಕರ್ನಾಟಕದ ಅಸ್ಮಿತೆಯ ಮಧ್ಯೆ ನಡೆಯುವ ಹೋರಾಟ ಈ ಚುನಾವಣೆ. ಕರ್ನಾಟಕದ ಅಸ್ಮಿತೆಯನ್ನ ಉಳಿಸಲು ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದರು.

    ಈ ಬಾರಿ ಬಿಜೆಪಿಯವರು ನನ್ನ ಹಾಗೂ ನಮ್ಮ ನಾಯಕರುಗಳ ಮೇಲೆ ವೈಯುಕ್ತಿಕವಾಗಿ ವಾಗ್ದಾಳಿ ಮಾಡುವ ಮಟ್ಟಕ್ಕೆ ಇಳಿದಿದ್ದಾರೆ. ಆದರೆ ಮಹಿಳೆ, ಯುವತಿಯರ ಮೇಲಿನ ಅತ್ಯಾಚಾರ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿಲ್ಲ. ಇದು ದೇಶದಲ್ಲೇ ಚರ್ಚೆಯಾಗಬೇಕಾದ ವಿಚಾರ. ದೇಶದ ಜನರ ಹಕ್ಕು, ರಕ್ಷಣೆಯ ವಿಚಾರ. ಕಚ್ಛಾ ತೈಲ ಬ್ಯಾರಲ್ ಬೆಲೆ 140 ಡಾಲರ್ ನಿಂದ 70 ಡಾಲರ್ ಗೆ ಇಳಿದಿದೆ. ಆದರೂ ಪೆಟ್ರೋಲ್ ಬೆಲೆ ಕಡಿಮೆ ಮಾಡಿಲ್ಲ ಇದರಿಂದ ದೇಶದ ಜನರಿಗೆ ಮತ್ತಷ್ಟು ಹೊರೆಯಾಗಿದೆ ಎಂದು ಕಿಡಿಕಾರಿದರು.

    ರೆಡ್ಡಿ ಬ್ರದರ್ಸ್ ರಾಜ್ಯವನ್ನೇ ಲೂಟಿ ಹೊಡೆದಿದ್ದಾರೆ. 35 ಸಾವಿರ ಕೋಟಿ ರಾಜ್ಯದ ಬೊಕ್ಕಸಕ್ಕೆ ನಷ್ಟ ಮಾಡಿದ್ದಾರೆ. ಇದರ ಬಗ್ಗೆ ಯಾಕೆ ಯಾರು ಮಾತನಾಡುವುದಿಲ್ಲ ಎಂದು ಪ್ರಶ್ನೆ ಮಾಡಿದರು.

    ದಲಿತರಿಗೆ ದೇಶದಲ್ಲಿ ರಕ್ಷಣೆಯಿಲ್ಲದಂತಾಗಿದೆ. ಉತ್ತರ ಪ್ರದೇಶದಲ್ಲಿ ದಲಿತರ ಮೇಲಿನ ಹಲ್ಲೆ ನಿಂತಿಲ್ಲ. ತಡೆಯುವಲ್ಲಿ ಪ್ರಧಾನಿ ವಿಫಲರಾಗಿದ್ದಾರೆ. ರೋಹಿತ್ ವೇಮುಲ ಸಾವು ಏನಾಯ್ತು?. ಉನ್ನಾವ್, ಕತುವಾ ಅತ್ಯಾಚಾರದಲ್ಲಿ ಹೇಗೆ ನಡೆದುಕೊಂಡರು ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

    ನಮ್ಮ ನಂಬಿಕೆಗಳ ಮೇಲೆ ನಾವು ಜೀವನ ಮಾಡುತ್ತಿದ್ದೇವೆ. ಕಳೆದ 15 ವರ್ಷದಿಂದ ನಾನು ಹಲವು ದೇವಸ್ಥಾನಗಳಿಗೆ ಭೇಟಿ ಕೊಟ್ಟಿದ್ದೇನೆ. ಮಂದಿರ, ಮಸೀದಿ, ಚರ್ಚ್ ಗಳಿಗೆ ಭೇಟಿ ನೀಡಿದ್ದೇನೆ. ನಮಗೆ ಎಲ್ಲ ಸಮುದಾಯಗಳೂ ಮುಖ್ಯ. ಅವರು ಬೇಡ, ಇವರು ಬೇಡ ಅನ್ನುವ ಪಕ್ಷ ನಮ್ಮದಲ್ಲ. ಆದರೆ ಹೀಗೆ ಭೇಟಿ ಕೊಟ್ಟಾಗ ಬಿಜೆಪಿಯವರಿಗೆ ಅದನ್ನ ಸಹಿಸಿಕೊಳ್ಳಲು ಆಗುವುದಿಲ್ಲ. ಚುನಾವಣೆ ಸಂದರ್ಭದಲ್ಲಿ ಮಠ ಮಾನ್ಯಗಳು ನೆನಪಾಗುತ್ತದೆ ಎಂದು ಟೀಕಿಸುತ್ತಾರೆ. ಹಿಂದಿನ ಅನೇಕ ಚುನಾವಣೆಗಳಲ್ಲಿ ಇದೇ ರೀತಿಯ ಟೀಕೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.